ಮರೆಯದ್ದ ಮರವಂತೆ

ಎಲ್ಲೋರಿಂಗೂ ನಮಸ್ಕಾರ!!!!!

ಬೈಲಿಂಗೆ ಬಾರದ್ದೆ ರಜ್ಜ ದಿನ ಆತು..
ಹಾಂಗೆ ಹೇಳಿ ಬೈಲಿನ ಮೋರೆ ದಿನಾಗಲೂ ನೋಡಿಗೊಂಡಿತ್ತೆ..
ಲೇಖನವ ಕೂಡಾ ಓದಿಗೊಂಡಿತ್ತೆ.. ಬೈಲಿಲಿ ಒಳ್ಳೆ ಮಳೆ ಬಂತು. ಒಂದು ಸರ್ತಿಯಾಣ ಮದ್ದು ಬಿಟ್ಟಾತು..

ಹಾಂಗೆ ಒಂದರಿ ಗೋಕರ್ಣಕ್ಕೆ ಹೋಗಿ ರುದ್ರ ಹೇಳಿ ಬಪ್ಪ ಹೇಳಿ ಕಂಡತ್ತು..
ಹೋಗಿ ಬಂದಾತು..  ಹೋಪಗ ಒಪ್ಪಣ್ಣ ಹೇಳಿದ “ರೈಲಿಲಿ ಹೋಗಿ ಮಾವ..”
ಆತು – ರೈಲಿಲಿ ಹೆರಟತ್ತು.!
ಸೊರಂಗ ಮಾರ್ಗಲ್ಲಿ ಹೋಪ ಅನುಭವ ಮಾತ್ರ ಭಾರೀ ಕೊಶಿ.
ಅದರ ಹೇಳುಲೆ ಎಡಿಯ. ಅನುಭವಿಸಿಯೇ ತೀರೆಕ್ಕು, ಸಮಯಕ್ಕೆ ಸರಿಯಾಗಿ ಅಲ್ಲಿಗೆ ಮುಟ್ಟಿ ಎಲ್ಲಾ ಸೇವೆಗ ಆತು..
ಬಪ್ಪಗ ರೈಲಿಲಿ ಬರೆಕು ಹೇಳಿ ಕೊದಿ ಆತು. ಆದರೆ ಮೊನ್ನೆ ತೋಕೂರಿಲಿ ಗುಡ್ಡೆ ಜೆರುದ ಕಾರಣ ರೈಲು ಕ್ಯಾನ್ಸಲ್ ಆಯಿದು ಹೇಳಿ ಆಪೀಸಿಲಿ ಹೇಳಿದವು. ಹಾಂಗೆ ಮತ್ತೆ ಬಸ್ಸು ಹತ್ತದ್ದೆ ಪಿರಿ ಇಲ್ಲೆ.
ಬಸ್ಸು ಹತ್ತಿದೆ.ಕುಮಟಂದ ಬಸ್ಸು ಹೆರಟತ್ತು.. ಆನು ಒಬ್ಬನೇ. ಎನ್ನ ಸಂಗಾತಕ್ಕೆ ಅಜ್ಜಕಾನ ಬಾವ ಬತ್ತೆ ಹೇಳಿತ್ತಿದ್ದ. ಅವಂಗೆ ಜೋಬಿಲಿ ಪ್ರೊಮೋಷನ್ ಆದ ಕಾರಣ ಬಪ್ಪಲೆ ಎಡಿಯ ಬಾವ ಹೇಳಿ ಮುನ್ನಾಣ ದಿನ ಪೋನು ಮಾಡಿದ..
ಅವ ಬತ್ತ ಹೇಳಿದ್ದ ಕಾರಣ ಆನು ಒಪ್ಪಕ್ಕನ ಹತ್ರಂದ ಒರೆಂಜಿ ಕೆಮರ ಹಿಡ್ಕೊಂಡಿತ್ತಿದ್ದೆ..

ತೆರೆಯ ತೆರವಲೆ ಮರೆಯದ್ದ ಮರವಂತೆ.

ಸುಮಾರು ನಾಕೈದು ಗಂಟೆ ಪ್ರಯಾಣ ಮಾಡಿಯಪ್ಪಗ ಮರವಂತೆಯ ಒಂದು ಗೂಡು ಅಂಗಡಿಯ ಹತ್ತರೆ ಬಸ್ಸು ಚಾಯ ಕುಡಿವಲೆ ನಿಲ್ಸಿತ್ತು..
ಬಸ್ಸಿಲಿದ್ದವು ಎಲ್ಲೋರು ಅತ್ಲಾಗಿ ಹೋಪಗ ಆನು ಕೆಮರ ಹಿಡ್ಕೊಂಡು ಸಮುದ್ರದ ಕರೆಂಗೆ ಹೋದೆ.
ಎನ್ನ ಪಟ ಆರೂ ತೆಗವಲೆ ಇಲ್ಲೆ.. ಹಾಂಗೆ ಸಮುದ್ರದ ಅಲೆಗಳ ಪಟ ತೆಗವ ಹೇಳಿ ಕಂಡತ್ತು.
ಒಂದೆರಡು ಪಟ ತೆಗದೆ.ಮನಸ್ಸಿನ ಸರೋವರಲ್ಲಿ ಕಲ್ಪನೆಯ ದೋಣಿಲಿ ಹೋಪದು ಎನ್ನ ಅಬ್ಯಾಸ. ಅದೂ ಒಬ್ಬನೇ ಹೀಂಗಿಪ್ಪ ಜಾಗೆಗೆ ಬಂದಪ್ಪಗ ಬೈಲಿಲಿ ಬಂದು ಬರೆಯಕ್ಕಾದರೆ ಏನಾದರೂ ಒಂದು ವಿಷಯ ಬೇಕನ್ನೇ…
ಹ್ಮ್…ವಿಷಯ ಬೇರೆಲೀಗೋ ಹೋವ್ತು…ಇಲ್ಲಿ ಸುಮಾರು ಮೂರು ಮೈಲು ದೂರದಷ್ಟು ಸಮುದ್ರ..
ಮುಜುಂಗರೆಯ ಅಡ್ಕದ ಹಾಂಗೆ ಕಾಣ್ತು. ಹಿಂದೆ ತಿರುಗಿ ನೋಡಿದರೆ ಸೌಪರ್ಣಿಕ ಹೊಳೆ ಕೊಲ್ಲೂರಿಂಗೆ ಹೋವ್ತು…
ಹಾಂಗೆ ಮಾರ್ಗದ ಎರಡೂ ಹೊಡೆಲಿ ಅಗಾಲಕ್ಕೆ ನೀರು. ನಡೂಕೆ ಚೇರಟೆಯ ಹಾಂಗೆ ಮಾರ್ಗ.ದೂರಂದ ನೋಡಿಯಪ್ಪಗ ಹಾಂಗೆ ಕಾಣ್ತು!
ಮೊದಾಲಿಂದಲೂ ಕವಿಗೊ ಸಮುದ್ರವ ಪುರುಷಂಗೆ ಹೋಲಿಕೆ ಮಾಡಿದ್ದವು..
ನದಿಯ ಹೆಣ್ಣು ಹೇಳಿ ಹೇಳ್ತವು.. ಸಮುದ್ರಕ್ಕೆ ರತ್ನಗರ್ಭ ಹೇಳಿ ಇನ್ನೊಂದು ಹೆಸರಿದ್ದಡ.. ಅದಕ್ಕೇ ಆದಿಕ್ಕು ಸಮುದ್ರಲ್ಲಿ ಭರೋನೆ ಶಬ್ದ ಮಾಡಿಗೊಂಡು ಅಲೆಗ ಬಪ್ಪದು.
ಆ ಪುರುಷತ್ವದ ಹಮ್ಮು ಅದರ್ಲಿ ಹಾಂಗೆ ಎದ್ದು ಕಾಣ್ತು.ಒಂದು ಪಾಲು ಭೂಮಿಯ ಕ್ಷಣಾರ್ಧಲ್ಲಿ ನುಂಗುವ ಭೀಬತ್ಸ ಸಮುದ್ರ.
ದಿನಾಗ್ಳೂ ಸೂರ್ಯನ ಕಾಣೆ ಮಾಡಿದರೂ ಸಮುದ್ರ ಶಾಂತವಾಗಿರ್ತು…

ಮಕ್ಕಳ ಮುಟ್ಟಾಟದ ಹಾಂಗೆ ಸಮುದ್ರಲ್ಲಿ ಅಲೆಗಳ ಆಟ. ಅದು ಮುಗಿವಲೆ ಹೇಳಿ ಇಲ್ಲೆ.. .

ಮರವಂತೆಂದ ಕೊಡೆಯಾಲಕ್ಕೆ ಹೋಪ ಹೈವೇ

ಮರವಂತೆಂದ ಕೊಡೆಯಾಲಕ್ಕೆ ಹೋಪ ಹೈವೇ

ಛಲಬಿಡದ ವಿಕ್ರಮನ ಹಾಂಗೆ ಮರಳಿ ಯತ್ನವ ಮಾಡು ಹೇಳುವ ಸಂದೇಶವ ನವಗೆ ತೋರ್ಸುತ್ತು.
ಅಷ್ಟೊಂದು ಜಲರಾಶಿ ಇದ್ದರೂ ಒಂದು ತೊಟ್ಟು ಸೀವು ನೀರಿಲ್ಲದ್ದ ಸಮುದ್ರ. ಸೂರ್ಯ ಮೊಗೆ ಮೊಗದು ಕುಡುದರೂ ಆರದ್ದ ಸಮುದ್ರ.
ಚುಕ್ಕಿ ಚಂದ್ರಂಗೂ ಕೂಡಾ ಪ್ರತಿಬಿಂಬ ಕಾಣ್ತು ಹೇಳಿಯಪ್ಪಗ ಅಲೆಗ ಬಂದಾತು!!!, ಹಾಂಗೆ ಹೇಳಿ ಕಾಂಬದು ಆಕಾಶದ ನೀಲಿ ಬಣ್ಣ.
ಹವಳ ಮುತ್ತುಗ ಎಲ್ಲಾ ಸಮುದ್ರದ ಒಳ ಹುಗ್ಗುಸಿ ಇರ್ತದ!.. ಜಲಚರಂಗಳ ತವರೂರು.

ಹೀಂಗೆ ಅದೇನೇನೋ ಭಾವನೆ, ಕಲ್ಪನೆ ಆ ಮೂರುವರೆ ಕಿಲೋಮೀಟರುಗಳ ಸಮುದ್ರವ ನೋಡಿಯಪ್ಪಗ…! ಎನ್ನ ಹತ್ತರೆ ಟೂರಿನ ಪುಸ್ತಕಲ್ಲಿ ಇಪ್ಪ world map ಒಂದರಿ ತೆಗದು ನೋಡಿದೆ..
ಈ ಅರಬ್ಬೀ ಸಮುದ್ರದ ಮರವಂತೆಯ ಮಾರ್ಕು ಮಾಡಿದೆ. . ಇನ್ನೊಂದು ಹೊಡೆ ಎಲ್ಲಿದ್ದು? ಹೇಳಿ ಹುಡ್ಕಿದೆ.. ಆಫ್ರಿಕ ಖಂಡ ಅಲ್ದಾ?

ಅಷ್ತೊತ್ತಿಂಗೆ ಬಸ್ಸು ಪೀ ಪೀ ಹೇಳಿ ಹಾರ್ನ್ ಮಾಡಿತ್ತು.ಗೋಕರ್ಣಕ್ಕೆ ಹೋಗಿ ಬಂದ ನೆಂಪಿಲಿ ಇದೂ ಒಂದು ಒಳ್ಳೆ ಅನುಭವ ಆತು ಹೇಳಿ ಒಂದು ಕ್ಷಣ ಗುರುಗಳನ್ನೂ ಮಾಬಲೇಶ್ವರನನ್ನೂ ನೆಂಪು ಮಾಡಿಗೊಂಡು ಬಸ್ಸು ಹತ್ತಿದೆ.
ಕೊಡೆಯಾಲಕ್ಕೆ ಬಪ್ಪಗ ಇರುಳಾಣ ಅಕೇರಿ ಬಸ್ಸುದೆ ಹೋಯಿದು.ಇನ್ನೆಂತ ಮಾಡುವದು ಹೇಳಿ ಗ್ರೆಶಿಗೊಂಡಿಪ್ಪಗ ಕಾನಾವು ಡಾಕ್ಟ್ರು ಕಾರಿಲಿ ಎಲ್ಲಿಗೋ ಹೋದವು ಬಂದವು.. ಎನ್ನ ಅಜ್ಜನ ಕಾಲದ ಆಪ್ತರು ಅವು..
ಹಾಂಗೆ ಅದರ್ಲಿ ಶ್ರೀ ಅಕ್ಕನೂ ಇದ್ದ ಕಾರಣ ವುಡ್ಲ್ಯಾಂಡ್ ಕೃಷ್ಣ ಭವನಲ್ಲಿ ಒಂದೊಂದು ಮಸಾಲೆ ದೋಸೆ ಹೊಡವ ಭಾಗ್ಯ ಬಂತು.
ಅಂತೂ ಗೋಕರ್ಣ ಟೂರ್ ಗಮ್ಮತು ಆತು..

ಗಣೇಶ ಮಾವ°

   

You may also like...

4 Responses

 1. ಡಾ.ಸೌಮ್ಯ ಪ್ರಶಾಂತ says:

  ಮರವಂತೆಯ ಭೂಲೋಕದ ಸ್ವರ್ಗ ಹೇಳಿದರೆ ತಪ್ಪಾಗ… ಆ ಜಾಗೆಗೆ ಹೋದರೆ ಅಲ್ಲಿಯೇ ಇಪ್ಪ ಹೇಳಿ ಕಾಣ್ತು… ಅಲ್ಲಿಯಾಣ ಚೆಂದವ ಬಿಟ್ಟು ಬಪ್ಪಲೇ ಮನಸ್ಸಾವುತ್ತಿಲ್ಲೆ… ಮರವಂತೆಯ ಬೈಲಿಲಿ ತೋರ್ಸಿದ್ದಕ್ಕೆ ಧನ್ಯವಾದ…. ಮರವಂತೆ ನೆಂಪಾಗಿ ಖುಷಿ ಆತು…. 🙂

 2. subrahmanya bhat says:

  ಅತ್ಯಂತ ರಮಣೀಯ ಪ್ರದೇಶ ಮರವಂತೆ . ಅಷ್ಟೇ ಅಪಾಯಕಾರಿಯೂ ಅಪ್ಪು . ಎಂಥವವರ ಮನಸ್ಸನ್ನೂ ಒಂದು ಕ್ಷಣ ಸೆಳೆವ ಜಾಗೆ ಅದು .
  ಎನ್ನ ಶಿಷ್ಯರ ಟೂರ್ ಕರಕ್ಕೊಂಡು ಹೋದಿಪ್ಪಗ ಹೇಳಿದ್ದು ಕೇಳದ್ದೆ ಮಕ್ಕೊ ನೀರಿಂಗೆ ಇಳಿವಲೇ ಹೆರಟಿದವು!
  ಅದಕ್ಕಿಂತ ಮೊದಲಾಣ ವರ್ಷ ಬೆಂಗಳೂರಿನ ಒಂದು ಹುಡುಗ ಇಳುದ್ದು ಸೀದಾ ಅಲೆಗಳ ನಡುವೆ ಸಿಕ್ಕಿ ಭಗವಂತನ ಪಾದ ಸೇರಿದ್ದು … !
  ಅದರ ಕಣ್ಣಾರೆ ಕಂಡ ಎನಗೆ ಇನ್ದಿಂಗೂ ಆ ಜಾಗೆಯ ಭೀಕರತೆಯೇ ನೆ೦ಪಾವ್ತು !

 3. ಶ್ರೀದೇವಿ ವಿಶ್ವನಾಥ್ says:

  ಗಣೇಶ ಮಾವ° ಅಪರೂಪಕ್ಕೆ ಬರವದು ಆದರೂ ಭಾರೀ ಚೆಂದ ಬರೆತ್ತವು.. ಮರವಂತೆಯ ಚೆಂದವ ರುದ್ರ ರಮಣೀಯ ಹೇಳುಲಕ್ಕು ಅಲ್ಲದಾ? ಹೆದರಿಕೆಯೂ ಆವುತ್ತು… ಚೆಂದವೂ ಇದ್ದು.. ಸಮುದ್ರ ಮತ್ತೆ ನದಿಯ ನಡುಕೆ ಆ ಮಾರ್ಗಲ್ಲಿ ಹೋಪದೇ ಒಂದು ಚೆಂದ… ಈಗ ಮಾವ° ಪುನಾ ಕರ್ಕೊಂಡು ಹೋದವದಾ… “ಮನಸ್ಸಿನ ಸರೋವರಲ್ಲಿ ಕಲ್ಪನೆಯ ದೋಣಿಲಿ ಹೋಪದು ಎನ್ನ ಅಬ್ಯಾಸ.” ಗಣೇಶ ಮಾವ°…., ಇದು ಅಂದು ಮಾನಸ ಸರೋವರಕ್ಕೆ ಹೋಗಿ ಬಂದ ಮೇಲೆ ಹೆಚ್ಚಾದ್ದಾ? ಶುದ್ದಿ ಲಾಯಕ ಬರದ್ದಿ ಆತಾ? ಏನೇ ಆಗಲಿ ಗಣೇಶ ಮಾವ° ಸಿಕ್ಕಿದ ಲೆಕ್ಕಲ್ಲಿ ಮಸಾಲೆ ದೋಸೆ ತಿಂಬಲಾತು…..;-)

 4. prashanth says:

  anu sannava ippaga hoddu nenapatu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *