ಎಂತರನ್ನಾರು ಬರಕ್ಕೊಂಡಿರಿ…!

ಸಭೇಲಿ ನವಗೇ ಹೇಳಿ ರಜ ಜಾಗೆ ಬಿಟ್ಟರೆ ಅಲ್ಲಿ ಹೋಗಿ ಕೂಪಲೆಡಿಗು. ತುಂಬುಸಿ ಹೇಳಿ ಒಂದು ಪಾರ್ಮು ಕೊಟ್ರೆ ತುಂಬ್ಸಿ ಕೊಡ್ಲೂ ಎಡಿತ್ತು. ಆದರೆ ಮಾತಾಡಿ ಹೇಳಿ ವೇದಿಕೆ ಕೊಟ್ಟು ಸಮಯ ಕೊಟ್ರೆ ಅಷ್ಟು ಹೊತ್ತು ಮಾತಾಡ್ಳೆ ಹೆಚ್ಚಿನವಕ್ಕೆ ಎಡಿತ್ತಿಲ್ಲೆ.

ಕೆಲವು ಜನಕ್ಕೆ ಸಮಯ ಸಾಕಾವುತ್ತಿಲ್ಲೆ. ಕೆಲವು ಜನ ಮಾತಾಡಿದ್ದರ  ಕೂದವಕ್ಕೆ ಕೇಳ್ಳೂ  ಕಷ್ಟ. ಹಾಂಗೇ ಪೇಪರಿಲಿ ನಿರ್ದಿಷ್ಟ ಜಾಗೆ ಕೊಟ್ಟು ಅಲ್ಲಿಗಪ್ಪಷ್ಟು ಬರೆಯಿ ಹೇಳಿರೆ ಎಷ್ಟು ಜನಕ್ಕೆ ಎಡಿತ್ತು ಹೇಳಿ ಆತ್ಮ ವಿಮರ್ಶೆ ಮಾಡಿಯೊಳಿ.

ಎಂತರ ಬರವದು, ಹೇಂಗೆ ಬರವದು ಹೇಳುವದೇ ಸಮಸ್ಯೆ.

ಬರವಲೆ ತೊಂದರೆ ಎಂತ ನೋಡಿ, ಅಕ್ಷ್ರಾಭ್ಯಾಸ ಎಲ್ಲೊರಿಂಗೂ ಆಗಿರ್ತು.

ಶಬ್ದಂಗಳೂ ಗೊಂತಿಪ್ಪದೇ.

ಬೇಕಾದ ಶಬ್ದಂಗಳ ಜೋಡಿಸಿ, ಅಕ್ಷರ ಸಂಕೇತದ ಮೂಲಕ ಇನ್ನೊಬ್ಬಂಗೆ ಗೊಂತಪ್ಪ ಹಾಂಗೆ ಬರದು ತಿಳಿಸಿ ಜ್ಞಾನ, ಅನುಭವ, ಭಾವನೆಗಳ ಹಂಚಿಗೊಂಬದು ಸಮಾಜ ಜೀವನದ ಒಂದು ಅವಶ್ಯಕತೆ.

ಮನುಷ್ಯ ಅನಾಗರಿಕ ಜೀವನಂದ ಈಗಾಣ ನಾಗರಿಕ ಜೀವನಕ್ಕೆ ಎತ್ತುಲೆ ಬರವಣಿಗೆ ಬಹಳ ಮುಖ್ಹ್ಯ. ಸುಮಾರು ಐದು ಸಾವಿರ ವರ್ಷ ಮೊದಲೇ ಮನುಶ್ಯರಿಂಗೆ ಬರವಲೆ ಗೊಂತಿತ್ತಿಲ್ಲೆ.

ಎಲ್ಲ ಅನುಭವ, ಕಥೆಗೊ, ಉಪದೇಷಂಗೊ ಎಲ್ಲ ಬಾಯಿಮಾತಿಲೇ.

ಅದಕ್ಕಾಗಿಯೇ ಕಾವ್ಯಮಯ ಮಾತುಗೊ ಬಾಯಿಂದ ಬಾಯಿಗೆ ಪಾಠ ಆಗಿಯೇ ಬಂದದು.

ನಮ್ಮ ವೇದೋಪನಿಷತ್ತುಗೊ, ಇತಿಹಾಸ ಪುರಾಣಂಗೊ ಬಾಯಿಪಾಟಲ್ಲೇ ಸಾವಿರಾರು ವರ್ಶ ಇಳುದು ಬಂದದು.

ಚರಿತ್ರೆಲಿ ಕಲ್ತ ಪ್ರಕಾರ ಮದಾಲು ಬರವಣಿಗೆ ಸುರು ಮಾಡಿದ್ದು ಈಜಿಪ್ಟಿನ ನೈಲ್ ನದೀ ಕರೇಲಿತ್ತಿದ್ದ ಜನಂಗೊ.

ಸಣ್ಣ ಸಣ್ಣ ಚಿತ್ರಂಗಳ ಬರದು ಬರವಣಿಗೆ ಸುರು ಮಾಡಿದ್ದಡ.

ಅಲ್ಲಿಪ್ಪ ಹಳೇ ಕಾಲದ ಗೋರಿಗಳ ಗೋಡೆಗಳಲ್ಲಿ ಬರದ್ದಿದ್ದಡ.

ಆ ಊರಿಲಿ ಇಪ್ಪ ಒಂದು ಜಾತಿ ಹುಲ್ಲಿನ ಗುದ್ದಿ ಹಸೆ ತುಂಡಿನ ಹಾಂಗೆ ಮಾಡಿ ಅದರ ಮೇಲೆ ಮಸಿ, ಅಂಟು ಕಲಸಿದ ಶಾಯಿಲಿ ಬರಕ್ಕೊಂಡಿತ್ತಿದ್ದವಡ.

ಒಂದೊಂದು ಶಬ್ದ ಹೇಳಿ ಸಂಕೇತ ಮಾಡಿ ಬರವಣಿಗೆ ಆರಂಭ ಆದ್ದು.

ಈ ಲಿಪಿಲಿ ಅತೀ ಪ್ರಾಚೀನ ಪುಸ್ತಕಂಗಳೂ ಇದ್ದಡ. ಆದರೆ ಬಹಳ ವರ್ಶ ಇದು ಬಳಕೆಲಿ ಇಲ್ಲದ್ದ ಭಾಶೆ ಆಗಿ ಪ್ರಾನ್ಸ್ ನ ನೆಪೋಲಿಯನ್ ನ ಕಾಲಲ್ಲಿ ರೊಸೆಟ್ಟೋ ಹೇಳ್ತಲ್ಲಿ ಕಲ್ಲಿಲಿ ಆ ಲಿಪಿಯೂ, ಗ್ರೀಕ್ ಲಿಪಿಯೂ ಒಟ್ಟಿಂಗಿದ್ದ ಕಾರಣ ಅದರ ಕೀ ಸಿಕ್ಕಿ ಓದುಲೆಡಿಗಾತು.

ಅದರಿಂದ ಪೂರ್ವಕ್ಕೆ ಈಗಾಣ ಇರಾಕಿಲಿತ್ತಿದ್ದ ಪ್ರಾಚೀನ ಜೆನಂಗೊ ಅಡ್ಡನೀಟ ಗೆರೆ ಹಾಕಿ ಅಕ್ಷರ ಸಂಕೇತ ಬರಕ್ಕೊಂಡಿತ್ತಿದ್ದವು.

ಹಸಿ ಮಣ್ಣಿನ ಹಲಗೆಯ ಹಾಂಗೆ ಮಾಡಿ ಹಸಿ ಇಪ್ಪಗ ಚೂಪಾದ ಕಡ್ಡಿಲಿ ಬರದು ಮತ್ತೆ ಬೇಶಿ ಪುಸ್ತಕ ಮಾಡಿಯೊಂಡು ಇತ್ತಿದ್ದ ಜನ ಅವು.

ಮಾಡಿನ ಹಂಚಿಲಿ ಕಂಪೆನಿ ಹೆಸರಿಪ್ಪ ಹಾಂಗೆ ಅದು ಶಾಶ್ವತ ಪುಸ್ತಕಂಗೊ. ನಮ್ಮ ದೇಶಲ್ಲೂ ಕಲ್ಲಿಲಿ ಕೆತ್ತಿದ ಬರಹಂಗೊ ಬೇಕಾದಷ್ಟು ಇದ್ದು.

ತಾಮ್ರದ ತಗಡಿಲೂ ಬರಕ್ಕೊಂಡು ಇತ್ತಿದ್ದವು.

ಮರದ ಚೋಲಿ, ಎಲೆಗಳಲ್ಲಿದೇ ಬರಗು. ಧಾರಾಳ ಉಪಯೋಗ ಆದ್ದು ತಾಳೆ ಒಲಿ. ಅದರ ಪುಸ್ತಕಂಗೊ ಮನೆ ಮನೆಗಳಲ್ಲೂ ಕಾಂಬಲೆ ಸಿಕ್ಕುಗು. ಕಳೆದ ತಲೆಮಾರು ವರೆಗೂ ಜಾತಕ ಬರಕ್ಕೊಂಡುಇದ್ದದು ಅದಲ್ಲೇ.

ಅಕ್ಷರ ಜ್ಞಾನ ಒಂದು ಸಂಪತ್ತು.

ನಿತ್ಯ ಜೀವನಲ್ಲಿ ಹಾಸುಹೊಕ್ಕಾದ ಭಾಗ. ವಿದ್ಯಾಭ್ಯಾಸದ ಮೊದಲ ಭಾಗ ಅಕ್ಷರಾಭ್ಯಾಸ.

ಒಂದಾರಿ ಕಲ್ತದರ ಮರೆಯದ್ದೆ ಇನ್ನೊಂದುದೂರಲ್ಲಿಪ್ಪವಕ್ಕೆ ಪತ್ರ. ಪೋನು ಬಂದು ಎಷ್ಟೋ ಕಮ್ಮಿ ಆದರೂ ಪೋನಿಂಗೆ ಸಿಕ್ಕದ್ದವು ಕಾಗದಲ್ಲೇ ಸಂಪರ್ಕ ಮಾಡೆಕ್ಕಾದವು ಈಗಳೂ ಧಾರಾಳ ಇದ್ದವು.

ಇಂದಿಂಗೂ ೨೫ಪೈಸೆ, ೫೦ ಪೈಸೆ ಗೆ ಕಾರ್ಡು ಬರದು ಸಾವಿರಾರು ಮೈಲು ದೂರಕ್ಕೆ ಸುದ್ದಿ ತಿಳಿಸುವ ವೆವಸ್ತೆ ನಮ್ಮಲ್ಲಿದ್ದು.

ದಿನ ನಿತ್ಯ ನೂರಾರು ಶುದ್ದಿ ಕೇಳ್ತು. ಒಳ್ಳೆ ಕೆಲಸ ಮಾಡಿದವಕ್ಕೆ ಒಂದು ಪ್ರೋತ್ಸಾಹದ ಪತ್ರ ಬರದರೆ ಅವಕ್ಕೆ ಅಪಾರ ಸಂತೋಷ. ನವಗೂ ಸಂತೋಷ.

ಇದರಿಂದ ಸಮಾಜಕ್ಕೆ ಒಳ್ಳೆದು.

ನಮ್ಮದು ಪ್ರಜಾಪ್ರಭುತ್ವ. ನಮ್ಮ ಪ್ರತಿನಿಧಿಗಳೇ ಆಡಳಿತ ನಡೆಶುದು. ನಮ್ಮ ಊರಿನ ಅಗತ್ಯ ಸರಕಾರದ ಕೆಲಸ ಕಾರ್ಯಂಗಳ ಬಗ್ಗೆ ಅಭಿಪ್ರಾಯ ಬರದು ತಿಳಿಸುವ ಹಕ್ಕು ಎಲ್ಲಾ ಪ್ರಜೆಗೊಕ್ಕೂ ಇದ್ದು. ನಮ್ಮ ನಮ್ಮ ಅಭಿಪ್ರಾಯಂಗಳ ಬರದು ಪತ್ರಿಕೆಗೊಕ್ಕೆ, ಮಂತ್ರಿಗೊಕ್ಕೆ, ಅಧಿಕಾರಿಗೊಕ್ಕೆ ಬರದು ತಿಳಿಸಿರೆ ಒಂದು ವೇಳೆ ಕಾರ್ಯ ರೂಪಕ್ಕೆ ಬಪ್ಪಲೂ ಸಾಕು.

ಟೀವಿ, ರೇಡಿಯೋ ಗಳಲ್ಲಿ ಬಪ್ಪ ಕಾರ್ಯಕ್ರಮಂಗಳ ಬಗ್ಗೆ ಆರಾರು ಹೇಳಿದ ಹೇಳಿಕೆಗಳ ಬಗ್ಗೆ ನಮ್ಮ ನಮ್ಮ ಅಭಿಪ್ರಾಯಂಗಳ ಬರದು ತಿಳಿಸಿರೆ ಅವರ ಕಾರ್ಯಕ್ರಮಂಗಳ ಮೇಲೆ ಪ್ರಭಾವ ಬೀರುಲೆಡಿಗು. ಮೂಲೆಲಿ ಹಾಕಿದ ಕತ್ತಿ ಮಣ್ಣು ಬಂದು ಬಡ್ಡಾದಾಂಗೆ ನಮ್ಮ ಅಕ್ಷರ ಜ್ಞಾನ ಬಡ್ಡಪ್ಪದು ಬೇಡ.

ಹಾಂಗೆ ಜೀವನ ಪೂರ್ತಿ ಎಂತಾರು ಒಂದು ಬರಕ್ಕೊಂಡೇ ಇರೇಕು. ಓದಿಯೊಂಡೂ ಬೇಕು.

ವಿಜ್ಞಾನದ ಪ್ರಗತಿಂದಾಗಿ ಇಂದು ಅತೀ ಕಡಮ್ಮೆಲಿ ಓದುವ ಪುಸ್ತಕಂಗೊ ಸಿಕ್ಕುತ್ತು. ಬರವಲೂ ಧಾರಾಳ ಕಾಗದ, ಪೆನ್ನುಗೊ ಎಲ್ಲೆಲ್ಲೂ ಸಿಕ್ಕುತ್ತು. ಅಕ್ಷರ ಬಪ್ಪ ಪ್ರತಿಯೊಬ್ಬನೂ ದಿನಕ್ಕೊಂದು ರಜ ಬರಕ್ಕೊಂಡಿದ್ದರೆ ಅವನಲ್ಲಿ ಯೋಚನಾ ಶಕ್ತಿ, ಅಭಿವ್ಯಕ್ತಿ ಕಲೆ, ನೆನಪು ಶಕ್ತಿ ಹೆಚ್ಚಿಯೋಂಡು ಹೋವುತ್ತು. ಎಂತರ ಬರವಲಕ್ಕು ಹೇಳುವುದು ತುಂಬಾ ಜನರ ಪ್ರಶ್ನೆ. ಎಲ್ಲೋರಿಂಗೆ ಸಾಧ್ಯ ಅಪ್ಪ ಕೆಲವು ಸೂಚನೆಗಳ ಕೊಡ್ಳೇ ಇದರ ಬರದ್ದು.

ಮೊದಲನೆಯದಾಗಿ ನಮ್ಮ ದಿನಚರಿ. ಉದಿಯಪ್ಪಗ ಎದ್ದಲ್ಲಿಂದ ಮನುಗುವ ವರೆಗೆ ನಾವು ಕಂಡ, ಕೇಳಿದ, ಮಾಡಿದ, ಮಾಡ್ಸಿದ ಸಂಗತಿಗಳ ಆರತ್ರೇ ಕೇಳದ್ದೆ ನಮ್ಮಷ್ಟಕ್ಕೇ ಬರವಲೆಡಿಗಾದ ಸಂಗತಿಗೊ. ಇಂದು ಸಸಾರ ಕಂಡ್ರೋ ಮುಂದೊಂದು ದಿನ ನವಗೋ, ಮಕ್ಕಗೋ ಪ್ರಯೋಜನಕ್ಕೆ ಬಾರದ್ದಿರ.

ಇನ್ನೊಂದು ನಾವು ಕಂಡ ಸಂಪರ್ಕಕ್ಕೆ ಬಂದ ಜನಂಗೊ. ಅವರಲ್ಲಿ ನಾವು ಕಂಡ ವಿಶೇಷತೆಗೊ, ಒಳ್ಳೆಯ ಕೆಟ್ಟ ಗುಣಂಗೊ ಪ್ರತಿಯೊಬ್ಬನ ಜೀವನಲ್ಲಿ ನೂರಾರು ಜನರ ಸಂಪರ್ಕ ಮಾಡ್ಳೇ ಬೇಕು. ಅಂಗಡಿ ಬ್ಯಾರಿಂದ ಹಿಡುದು ಟಿ.ಸಿ ವರೆಗೂ ಎಲ್ಲರ ಬಗೆಗೆ ನಮ್ಮದೇ ಆದ ಅನುಭವ ಇರ್ತು. ಕೆಲವು ತೀರಾ ತಪ್ಪು, ಮುಂದೆ ಬದಲಪ್ಪಲೂ ಸಾಕು.

ನಮ್ಮ ಅಭಿಪ್ರಾಯ ಬದಲಾದ ಹಾಂಗೆ ನಾವೂ ಬದಲಾಗಿರ್ತು.

ಮಾಷ್ಟ್ರುಮಾವ°

   

You may also like...

1 Response

  1. ಲಾಯ್ಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *