ಕಾರ್ಯಸಾಧನೆ

January 15, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಪ್ರಪಂಚಲ್ಲಿ ಮೂರು ನಮುನೆ ಜೆನ ಇರ್ತವಡ.
ದಡ್ಡರು – ಎಂತಾರು ಇಡ್ಡೂರ(ತೊಂದರೆ) ಬಕ್ಕು ಹೇಳಿ ಯಾವ ಕೆಲಸವನ್ನುದೇ ಸುರು ಮಾಡ್ತವಿಲ್ಲೆ.
ಸಾಮಾನ್ಯದವು – ಸುರು ಮಾಡಿ ತೊಂದರೆ ಬಂದರೆ ಅರ್ಧಲ್ಲಿ ಬಿಡ್ತವ್ಡ.
ಗಟ್ಟಿಗರು – ಯಾವ ತೊಂದರೆ ಬಂದರೂ ಹಿಡುದ ಕೆಲಸ ಬಿಡವು.

ಈ ತಾತ್ಪರ್ಯದ ಸುಭಾಷಿತ ಒಂದು ನೋಡಿ:

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ಮೂರ್ಖಾಃ
ಪ್ರಾರಭ್ಯ ವಿಘ್ನ ವಿಹತಾಃ ವಿರಮಂತಿ ಮಧ್ಯಾಃ |
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾಃ
ಪ್ರಾರಬ್ಧಮುತ್ತಮಜನಾಃ ನಪರಿತ್ಯಜಂತಿ ||

ನಾವು ಯಾವದೇ ಕೆಲಸ ಹಿಡುದ ಮೇಲೆ ತೊಂದರೆಗಳ ಎದುರಿಸಿ ಪಾಠ ಕಲ್ತು ಮುಂದೆ ಹೋಗಿ ಸಾಧನೆ ಮಾಡೇಕು.
ಒಂದು ವೇಳೆ ನಮ್ಮಂದಾಗದ್ದರೂ ವಿಘ್ನ ಎದುರುಸಿದ ಪಾಠ ಸಮಾಜಕ್ಕೆ ಸಿಕ್ಕಿ ಅದರ ಪರಿಹಾರ ಹುಡ್ಕಿ ನಮ್ಮ ಸಮಾಜ ಅದರ ಪೂರೈಸಿ ಪ್ರಾರಂಭ ಮಾಡಿದರವ ನೆಂಪು ಮಾಡ್ತು.

ಝಾನ್ಸಿರಾಣಿ ಬ್ರಿಟಿಷರ ಎದುರು ಕತ್ತಿ ಹಿಡುದು ಹೋರಾಡಿ ಸೋತು – ಸತ್ತು ಗೆದ್ದಿದು.
ಬ್ರಿಟಿಷರ ಭಯಂಕರ ಸೈನ್ಯದೆದುರು ನವಗೆಡಿಯ ಹೇಳಿ ಸುರು ಮಾಡದ್ರೆ ಮತ್ತಾಣವು ಮುಂದುವರುಸಲಿತ್ತಿಲ್ಲೆ.
ಅದರ ಸೋಲಿಂಗೆ ಕಾರಣ ಹುಡ್ಕಿದ ಮತ್ತಾಣವು ಬೇರೆ ಬೇರೆ ದಾರಿ ಹುಡ್ಕಿ ದೇಶದ ಸ್ವಾತಂತ್ರ್ಯಕ್ಕೆ ದಾರಿ ಆತು.
ಯಾವ ತೊಂದರೆ ಬಂದರೂ ಸರಿ, ಬಿಡೆಯೊ – ಹೇಳುವ ಧೈರ್ಯ ಕಾರ್ಯ ಸಾಧನೆಗೆ ಅಗತ್ಯ.

~~~

ಕಾರ್ಯಸಾಧನೆ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಜಯಶ್ರೀ ನೀರಮೂಲೆವೇಣೂರಣ್ಣಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಜಯಗೌರಿ ಅಕ್ಕ°ವಿದ್ವಾನಣ್ಣಶ್ರೀಅಕ್ಕ°ಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಅನಿತಾ ನರೇಶ್, ಮಂಚಿರಾಜಣ್ಣಕೇಜಿಮಾವ°ಪ್ರಕಾಶಪ್ಪಚ್ಚಿvreddhiಒಪ್ಪಕ್ಕಕೆದೂರು ಡಾಕ್ಟ್ರುಬಾವ°ಬಟ್ಟಮಾವ°ಡಾಗುಟ್ರಕ್ಕ°ಶಾ...ರೀದೊಡ್ಮನೆ ಭಾವಚೆನ್ನಬೆಟ್ಟಣ್ಣವೆಂಕಟ್ ಕೋಟೂರುಚುಬ್ಬಣ್ಣಪೆಂಗಣ್ಣ°ಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ