ಮಾಷ್ಟ್ರುಮಾವನ ಪಾಟಂಗೊ. . .!

ಮಾಷ್ಟ್ರುಮಾವನೂ ಅಪರಿಚಿತ ಏನೂ ಅಲ್ಲ, ಒಪ್ಪಣ್ಣನ ಬೈಲಿಂಗೆ.
ಆದರೂ ಹೊಸಬ್ಬರಿಂಗೆ, ಹೊಸ ಒಕ್ಕಲುಗೊಕ್ಕೆ ಬೇಕಾಗಿ ಒಂದು ಪರಿಚಯ.
ಮದಲಿಂಗೆ ಯೇವದೋ ಶಾಲೆಲಿ ಮಾಷ್ಟ್ರ° ಆಗಿ ಇದ್ದು, ಮಕ್ಕೊಗೆ ಪಾಟ ಮಾಡಿಗೊಂಡು ಇತ್ತಿದ್ದವು. ಈಗ ರೀಟೆರ್ಡು. ಮನೆಲೆ ಪುರುಸೊತ್ತಿಲಿ ಇದ್ದವು. ತೋಟಕ್ಕೆ ಹೋಪದು, ಅಡಕ್ಕೆ ಹೆರ್ಕುದು ಎಲ್ಲ ಮಕ್ಕಳೇ ಮಾಡ್ತವು.
ಒಳ್ಳೆ ಜ್ಞಾನ ಇದ್ದು. ಅವು ಬರದ ಯೇವದೋ ಪುಸ್ತಕವ ನಮ್ಮ ಗುರುಗೊ ಬಿಡುಗಡೆ ಮಾಡಿದ್ದವಡ.
ಅಂತೂ, ಒಪ್ಪಣ್ಣ ಅವರ ಹತ್ರೆ ಕೇಳಿದ, ನಿಂಗೊ ಒಪ್ಪಣ್ಣನ ಬೈಲಿಂಗುದೇ ಶುದ್ದಿಗಳ ಹೇಳ್ತಿರಾ? ಹೇಳಿಗೊಂಡು. ಸಂತೋಶಲ್ಲಿ ಒಪ್ಪಿಗೊಂಡವು.
ಅವು ಮದಲಿಂಗೆ ಶಾಲೆಲಿ ಮಕ್ಕೊಗೆ ಪಾಟಮಾಡಿದ ನಮುನೆಯೇ ಹೇಳ್ತವೋ ಏನೋ – ಹಾಂಗಾಗಿ ಮಾಷ್ಟ್ರುಮಾವನ ಪಾಟಂಗೊ ಹೇಳುದು ಈ ಪುಸ್ತಕಕ್ಕೆ.

ಓದಿ, ಒಳ್ಳೆದಿದ್ದರೆ ತೆಕ್ಕೊಳಿ, ಅರ್ತ ಆದರೆ ಪ್ರತಿಕ್ರಿಯೆ ಕೊಡಿ. ಆತೋ?
ಏ°?
~
ಒಪ್ಪಣ್ಣ

ಎಂತರನ್ನಾರು ಬರಕ್ಕೊಂಡಿರಿ… – ಮಾಷ್ಟ್ರುಮಾವ


ಮಾಷ್ಟ್ರುಮಾವನ ಎಲ್ಲ ಪಾಟಂಗಳ ಇಲ್ಲಿ  ನೋಡ್ಳಕ್ಕು.!

ಮಾಷ್ಟ್ರುಮಾವ°

   

You may also like...

1 Response

 1. Udayashankar says:

  ಒಪ್ಪಣ್ಣ,
  ಕಳುದ ಐದಾರು ತಿಂಗಳಿಂದ ಬ್ಲಾಗಿನ ತಪ್ಪದ್ದೆ ಓದಿಗೊಂಡಿದ್ದೆ; ೫೦ ಬೇರೆ ಬೇರೆ ವಿಷಯಂಗಳ ಲೇಖನಂಗೊ ಕೊಟ್ಟ ಖುಶಿ, ಸಂತೋಷ, ತೃಪ್ತಿಗಳ ವಿವರುಸಲೆ ಕಷ್ಟ. ಈ ಎಲ್ಲ ಬರಹಂಗಳ ಪುಸ್ತಕ ರೂಪಲ್ಲಿ ಪ್ರಕಟಿಸಿದರೆ ಇನ್ನೂ ಹೆಚ್ಚು ಜೆನ ಓದುಗು.
  ಈಗ ಮಾಡಿದ ವೆಬ್ ಸೈಟಿನ ವಿನ್ಯಾಸ ಲಾಯಿಕಾಯಿದು. ವಿಷಯ ವೈವಿಧ್ಯ ಒಳ್ಳೆದಾಯಿದು. ಅದೇ ರೀತಿ ಜ್ಯೋತಿಷ್ಯ, ಕಂಪ್ಯೂಟರು, ಇಂಟರ್ನೆಟ್ಟುಗಳ ಬಗ್ಗೆಯೂ ಒಪ್ಪಣ್ಣನೇ ಪಾಠ ಬರವಲಕ್ಕು. ಒಪ್ಪಣ್ಣ ಒಳ್ಳೆ ಮಾಷ್ಟ್ರ. ಹವ್ಯಕ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಜೀವನಕ್ರಮ ಎಲ್ಲದರ ಬಗ್ಗೆಯೂ ಒಪ್ಪಣ್ಣ ಬರವ ಶೈಲಿ ಆಸಕ್ತಿ ಹುಟ್ಟುಸುವಂತಾದ್ದು, ಸುಲಭವಾಗಿ ಅರ್ಥ ಅಪ್ಪಂತಾದ್ದು. ನಮ್ಮ ಧಾರ್ಮಿಕ ಆಚಾರಂಗಳ ಬಗ್ಗೆ, ಹವ್ಯಕ ತಿಂಗಳುಗಳ (ಕಾಲಚಕ್ರ) ಬಗ್ಗೆ ಬರದ ಲೇಖನಂಗಳೇ ಇದಕ್ಕೆ ಸಾಕ್ಷಿ.
  ಒಪ್ಪಣ್ಣನ ಎಲ್ಲ ಬರವಣಿಗೆಲಿಯೂ ಬಪ್ಪ ಗುಣಾಜೆ ಮಾಣಿ, ಸೇಡಿಗುಮ್ಮೆ ಬಾವ, ಅಜ್ಜಕಾನ ಬಾವ, ಪೆರ್ಲದಣ್ಣ, ರೂಪತ್ತೆ ಈ ಎಲ್ಲ ವ್ಯಕ್ತಿಗಳೂ ನಾವು ಯಾವಾಗಲೂ ನೋಡುವ ವ್ಯಕ್ತಿಗಳೇ.
  ಒಪ್ಪಣ್ಣಾ, ಕಾಲ್ಪನಿಕ ಜೆನಂಗಳ ಪಟ ಹಾಕಿದ್ದು ಹೇಂಗೆ?
  ಇಷ್ಟರ ವರೆಂಗೆ ಪ್ರತಿಕ್ರಿಯೆ ಬರಕ್ಕೊಂಡಿದ್ದವೇ ಬರಕ್ಕೊಂಡಿದ್ದದು. ಇದು ಮಾಂತ್ರ ಹೊಸ ಜೆನದ ಪ್ರತಿಕ್ರಿಯೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *