ಸಂಪತ್ತಿನ ಸಂಗ್ರಹ

March 1, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ಕಾಂಬ ಭೂಮಿ ಕಾಲಗರ್ಭಲ್ಲಿ ತಾತ್ಕಾಲಿಕ ವ್ಯವಸ್ಥೆ.
ಶತಶತಮಾನಗಳ ಹಿಂದೆ ಇದು ಹೀಂಗಿದ್ದಿರ. ಮುಂದೆಯೂ ಹೀಂಗೆ ಇಕ್ಕು ಹೇಳುವ ನಿರೀಕ್ಷೆಯೂ ಬೇಡ.
ಪುರಾಣಂಗಳಲ್ಲಿ ಹೇಳಿದ ಭೂಮಿಯ ರೂಪ ನಾವು ಕಾಂಬಲೆ ಸಾಧ್ಯ ಇಲ್ಲದ್ದು.
ವಿಜ್ಞಾನಿಗೊ ಅಂದಾಜು ಮಾಡಿದ ಪ್ರಕಾರ ಭೂಮಿ ಸೂರ್ಯನ ಒಂದು ಭಾಗ.

ಪ್ರಾರಂಭಲ್ಲಿ ಇದುದೇ ಅತ್ಯಂತ ಉಷ್ಣತೆ ಹೊಂದಿದ ಅನಿಲಂಗಳ ಗೋಲ ಆಗಿತ್ತಡ. ಕ್ರಮೇಣ
ತಣ್ಣಂಗಾಗಿ ಕೆಲವು ವಸ್ತುಗೊ ಬೇರೆ ಬೇರೆ ಆಗಿ ಸಂಗ್ರಹ ಆಗಿ ಬೇರೆ ರೂಪಕ್ಕೆ ಬಂತಡ.
ಎರಡು ಅನಿಲಂಗೊ ಸಂಯುಕ್ತವಾಗಿ ನಮ್ಮ ಜೀವನಾಧಾರ ನೀರು ಉಂಟಾಗಿ ಸತತವಾಗಿ ಮಳೆ ಬಿದ್ದು ಭೂಮಿಲಿ ಹರುದು ತಗ್ಗಾದ ಪ್ರದೇಶಂಗಳಲ್ಲಿ ಸಂಗ್ರಹ ಆಗಿ ಕೆರೆ, ಜಲಾಶಯ ಸಾಗರಂಗಳ
ನಿರ್ಮಾಣ, ಈ ನೀರು ಜೀವಿಗಳ ಸೃಷ್ಟಿಗೆ ಕಾರಣ ಆತು. ಈ ಜಲಗೋಳಲ್ಲಿ ಅಪಾರ ಜೀವರಾಶಿಗೊ ಅನೇಕ ಉಪಯುಕ್ತ ವಸ್ತುಗೊ ಸಂಗ್ರಹ ಆತು.
ಮನುಷ್ಯನ ಆಹಾರವಾದ ಮೀನು ಬೆಲೆಬಾಳುವ ಮುತ್ತುರತ್ನಂಗೊ ಸಾಗರಂಗಳಲ್ಲಿದ್ದು.
ರತ್ನಾಕರ ಹೇಳುವ ಹೆಸರು ಸಮುದ್ರಕ್ಕೆ ಇದ್ದು.

ದೂರ್ವಾಸ ಮುನಿಯ ಶಾಪಂದ ಸ್ವರ್ಗದ ಸಕಲ ಸಂಪತ್ತೂ ಸಾಗರಲ್ಲಿ ಸೇರಿದ್ದು, ದೇವಾಸುರರು ಸೇರಿ ಸಮುದ್ರ ಮಥನ ಮಾಡಿ ಎಡಿಗಾದಷ್ಟು ಸಂಪತ್ತು ಪಡಕ್ಕೊಂಡದು ಪುರಾಣ ಕತೆ ಆದರೂ, ಇಂದುದೇ ಜನ ಆ ಸಮುದ್ರ ಮಥನ ಮುಂದುವರುಸಿ ಬದ್ಕಿಯೊಂಡಿಪ್ಪದು ನಾವು ಕಾಣ್ತು.
ಎಷ್ಟಿದ್ದರೂ ಸಾಲ ಹೇಳಿ ಸಮುದ್ರ ಈಗಳೂ ಕಂಡಕಂಡದರ ನದಿಗಳ ಮೂಲಕ ತರುಸಿಗೊಂಡೇ ಇದ್ದು.
ಸಾವಿರಾರು ಹಡಗುಗಳನ್ನೂ ತನ್ನ ಗರ್ಭಕ್ಕೆ ಸೇರುಸಿಗೊಂಡಿದು.
ಸಮುದ್ರ – ಸಾಗರಂಗಳ ಹಾಂಗೆ ಭೂಮಿಯು ಅನೇಕ ಸುವಸ್ತುಗಳ ಅಲ್ಲಲ್ಲಿ ಸಂಗ್ರಹಿಸಿದ್ದು.

ಚಿನ್ನ ವಜ್ರ ಮೊದಲಾದ ವಸ್ತುಗೊ ಒಂದೇ ದಿಕ್ಕಿಲಿ ರಾಶಿ ರಾಶಿ ಇಲ್ಲದ್ರೆ ನಾವು ಅದರ ತೆಗವಲೆಡಿಗೋ?
ಹುಲ್ಲು ಒಂದೊಂದು ದಿಕ್ಕೆ ಬೆಳದರೆ ನಮ್ಮ ದನಗೊಕ್ಕೆ ತಿಂಬಲೆ ಸಿಕ್ಕುಗೋ?
ಒಂದೊಂದು ಮರ ಒಂದೊಂದು ದಿಕೆ ಬೆಳದರೆ ಕಾಡಿನ ಪ್ರಯೋಜನೆ ಸಿಕ್ಕುಗೋ?
ವಾಯುವಿನ ಕಣಂಗೊ ಒತ್ತೊತ್ತಾಗಿ ಇಲ್ಲದ್ದರೆ ನಾವು ಉಸಿರಾಡ್ಳೆ ಎಡಿಗೊ?
ನೀರ ಹನಿಗೊ ಬೇರೆ ಬೇರೆ ದಿಕ್ಕಿದ್ದರೆ ಕುಡಿವಲೆ ಸಿಕ್ಕುಗೋ?
ಹೊಳೆ ದಂಡೆಲಿ ಹೊಯಿಗೆ ರಾಶಿ ಇಲ್ಲದ್ದರೆ ಹೊಯಿಗೆ ಹೆರ್ಕಿ ಸಿಮೆಂಟು ಕೆಲಸ ಮಾಡುವ ಕಲ್ಪನೆ ಕೂಡಾ ಅಸಾಧ್ಯ.

ಹೀಂಗೇ ಸಂಗ್ರಹ ಪ್ರವೃತ್ತಿ ಪ್ರಕೃತಿ ಕೊಟ್ಟ ಪಾಟ.
ಜೇನು ಹುಳುಗೊ ನೂರಾರು ಕಿಲೋಮೀಟರು ಹಾರಿ ಹೂಗುಗಳಿಂದ ಜೇನು ಸಂಗ್ರಹಿಸಿ ಮಡುಗುವುದರಿಂದಾಗಿಯೇ ನವಗೆ ದಿವ್ಯೌಷಧಿ ಜೇನು ಸಿಕ್ಕುವದು.
ಎರುಗು ಮಳೆಗಾಲಕ್ಕಾಗಿ ಆಹಾರ ಸಂಗ್ರಹ ಮಾಡುವದರ ನಾವು ನೋಡ್ತು. ಅದು ಅವರ ಸಮಾಜಕ್ಕಾಗಿ (ಇರಿಂಟಿ ಎರುಗಿನತ್ತರೆ ಚಳಿಗಾಲ ಸಾಲ ಕೇಳುಲೆ ಬಂದು ಬೈಸಿಗೊಂಡ ಕತೆ ಮಕ್ಕೊ ಓದಿಕ್ಕು)

ಪಂಚ ತಂತ್ರದ ಶಿವಭೂತಿಯ ಕತೆಲಿ ಹುಲಿಯೊಂದರ ಗುಹೆಲಿ ಚಿನ್ನಾಭರಣಂಗಳ ಸಂಗ್ರಹಿಸಿ ಮಡುಗಿದ ಕಲ್ಪನೆ ಅದ್ಭುತ.
ಮನುಷ್ಯ ತನ್ನ ಮುಂದಾಣ ಅಗತ್ಯತೆಗಾಗಿ ತನ್ನ ನಂಬಿದವರ ಉಪಯೋಗಕ್ಕಾಗಿ ತನ್ನ ಸಮಾಜದ ಉಪಯೋಗಕ್ಕಾಗಿ ಆಹಾರ ಬಟ್ಟೆ-ಬರೆ ಹಣ ಸಂಗ್ರಹ ಮಾಡುವ ಪ್ರವೃತ್ತಿ ಸಾಮಾನ್ಯ,
ಆದರೆ ಮೇಲುನೋಟಕ್ಕೆ ಏನೂ ಪ್ರಯೋಜನ ಕಾಣದ್ರೂ ಕೇವಲ ಆಸಕ್ತಿಗಾಗಿ ಜ್ಞಾನಾರ್ಜನೆಗಾಗಿ ಹಳೆ ಸ್ಟಾಂಪುಗೊ, ಚಿತ್ರಂಗೊ, ನಾಣ್ಯಂಗಳ ಸಂಗ್ರಹ ಸಾಮಾನ್ಯ.
ಯಾವದೇ ಆಸಕ್ತಿಯ ವಿಶಯಂಗಳ ಸಂಗ್ರಹಿಸಿ ಮಡುಗುವ ಕಾರಣಂದಲೇ ವಸ್ತುಸಂಗ್ರಹಾಲಯಂಗಳ ಕಲ್ಪನೆ.
ಕೆಲವು ಚಾರಿತ್ರಿಕ ವಸ್ತುಗಳ ಸಂಗ್ರಹಿಸಿ ಎಲ್ಲ ಜನಕ್ಕೂ ನೋಡ್ಳೆ ಬೇಕಾಗಿ ವಸ್ತುಸಂಗ್ರಹಾಲಯಂಗೊ ಇದ್ದು. ಕೆಲವು ಸಂದರ್ಭಂಗಳಲ್ಲಿ ಪ್ರಕೃತಿಲಿ ಸಿಕ್ಕುವ ಅಪರೂಪದ ಕಾಯಿ – ಬಿತ್ತು – ಬೇರುಗಳೂ ಆಕರ್ಷಕವಾಗಿ ಸಂಗ್ರಹಯೋಗ್ಯವಾಗಿ ಇರ್ತು.
ಕಾಲಂದ ಕಾಲಕ್ಕೆ ಜೀವನಶೈಲಿ ಬದಲಾದ ಹಾಂಗೆ ಕೆಲವು ನಿತ್ಯೋಪಯುಕ್ತ ಸಾಮಗ್ರಿಗೊ ಬಳಕೆ ಇಲ್ಲದ್ದೆ ಮೂಲೆಗುಂಪಾಗಿ ಮುಂದಾಣ ತಲೆಮಾರುಗೊಕ್ಕೆ ನೋಡ್ಳೆ ಸಿಕ್ಕದ್ದೆ ಅಪ್ಪ ಸಂಭವ ಇದ್ದು.
ಅಂತಹ ಅಪರೂಪದ ವಸ್ತುಗಳೂ ಸಂಗ್ರಯೋಗ್ಯವೇ.
ಸುಣ್ಣದ ಕಾಯಿಗೊ ಉಪ್ಪು – ಉಪ್ಪಿನಕಾಯಿ ಮರಿಗೆಗೊ, ಸಿಕ್ಕಂಗೊ ಇಂದಿನ ಮನೆಗಳಲ್ಲಿ ಅಪರೂಪದ ವಸ್ತುಗಳೇ.

~

ಅಪರೂಪದ ಪುಸ್ತಕಂಗಳ ಸಂಗ್ರಹದ ಜೊತೆಗೆ ನಾವು ಕೇಳಿದ ಅಪರೂಪದ ಸಂಗತಿಗಳ ಹೇಳಿಕೆಗಳ
ಗಾದೆಗಳ ಶ್ಲೋಕಂಗಳ ಸಂಗ್ರಹ ಮಾಡಿ ಮಡಗಿರೆ ನಮ್ಮ ತಿಳಿವಳಿಕೆ ಹೆಚ್ಚುತ್ತು.
ನವಗೆ ಪರಿಚಿತರಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಸ್ಥಳಂಗಳ ಬಗ್ಗೆ ಮಾಹಿತಿ, ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರಿಂದಲೂ ಜ್ಞಾನಾಭಿವೃದ್ಧಿಯ ಒಟ್ಟಿಂಗೆ ನೆಂಪುಶಕ್ತಿ, ಅಭಿವ್ಯಕ್ತಿ ಹೆಚ್ಚಾಗಿ;
ನಮ್ಮಂದ ಸಮಾಜಕ್ಕೆ ಅಪ್ಪ ಸೇವೆ ಮಾಡ್ಳೆ ಸಾಧ್ಯ.

ಸಂಪತ್ತಿನ ಸಂಗ್ರಹ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಮಾಷ್ಟ್ರು ಮಾವನ ಲೇಖನದ ಪ್ರತಿಯೊ೦ದು ವಾಕ್ಯವೂ ತೂಕದ್ದು.
  ಪ್ರಪ೦ಚ ಹೇಳ್ತ ವಿಸ್ಮಯಲ್ಲಿ ಅಡಕವಾಗಿಪ್ಪ ಸ೦ಪತ್ತುಗೊ ಅಪಾರ.
  ಇಲ್ಲಿ ಒ೦ದರಿ ಹುಟ್ಟಿ ಬದುಕ್ಕುವ ಯೋಗ ನವಗೆ ದಕ್ಕಿದ್ದು.ಈ ಜೀವನ ಯಾತ್ರೆಲಿ ನಾವು ಬರೀ ಧನಸ೦ಪತ್ತಿನ ಸ೦ಗ್ರಹವೇ ಪರಮಗುರಿ ಹೇಳ್ತ ಯೋಚನೆಯ ಬಿಟ್ಟು ಜ್ಞಾನಸ೦ಪತ್ತಿನ ಸ೦ಗ್ರಹಿಸುವ ಪ್ರಯತ್ನ ಮಾಡೆಕ್ಕು.ಹೀ೦ಗೆ ಸ೦ಗ್ರಹವಾದ ಸ೦ಪತ್ತಿನ ಸಮಾಜಕ್ಕೆ ಹ೦ಚಿರೆ ಬಡತನವೂ ಬಾರ ! ಸಕಲರ ಸ೦ಪತ್ತೂ ಹೆಚ್ಚುಗು.
  ಒಪ್ಪಣ್ಣನ ಬೈಲು ಈ ದಾರಿಲಿ ಮು೦ದೆ ಸಾಗಲಿ ಹೇಳಿ ಹಾರೈಸುವ°.
  {ಇರಿಂಟಿ ಎರುಗಿನತ್ತರೆ ಚಳಿಗಾಲ ಸಾಲ ಕೇಳುಲೆ ಬಂದು ಬೈಸಿಗೊಂಡ ಕತೆ ಮಕ್ಕೊ ಓದಿಕ್ಕು}ಈ ಕತೆ ನೆ೦ಪಾವುತ್ತಿಲ್ಲೆನ್ನೆ,ಒ೦ದರಿ ಬೈಲಿ೦ಗೆ ಹೇಳುವಿರೋ,ಮಾವಾ.

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಸಂಪತ್ತಿನ ಸಂಗ್ರಹ ಹೇಳ್ತ ತಲೆಬರಹ ನೋಡಿ ಅಪ್ಪಗ, ಪೈಸೆ ಕಟ್ಟಿ ಮಡಗುತ್ತ ಬಗ್ಗೆ ಮಾಷ್ಟ್ರು ಮಾವ ಹೇಳ್ತವು ಹೇಳಿ ಗ್ರೇಶಿದೆ. ಓದಿ ನೋಡಿ ಅಪ್ಪಗ ಜ್ಞಾನಸ೦ಪತ್ತಿನ ಬಗ್ಗೆ ಜ್ಞಾನತುಂಬಿದ ಮಾತುಗೊ. ಮುಳಿಯ ಬಾವ ಹೇಳಿದ ಹಾಂಗೆ ಪ್ರತಿಯೊಂದು ವಾಕ್ಯವೂ ಅರ್ಥ ಗರ್ಭಿತ. ಆಸ್ತಿ ಸಂಗ್ರಹವೇ ಗುರಿಯಾಗಿ ಮಡಗಿದ ಈಗಾಣ ಮಂತ್ರಿಗವಕ್ಕೆ , ಕಂಟ್ರಾಕ್ಟರುಗವಕ್ಕೆ ಇದು ಎಲ್ಲಿ ಅರ್ಥ ಅಕ್ಕು ?
  ನಿಜ, ನಶಿಸಿ ಹೋವ್ತಾ ಇದ್ದ ಅದೆಷ್ಟು ವಸ್ತುಗೊ, ಪ್ರಾಣಿಗೊ, ಪುಸ್ತಕಂಗೊ, ನಮ್ಮ ಕ್ರಮಂಗೊ, ಸಂಸ್ಕೃತಿಗೊ, ನಮ್ಮಲ್ಲಿ ಇದ್ದು. ಸಂಗ್ರಹಣೆಯ ಜತೆಗೆ, ಬಳಕೆಯುದೆ ಆದರೆ ಮಾಂತ್ರ ಮುಂದಾಣ ಕಾಲಕ್ಕೆ ಇದೆಲ್ಲ ಸಿಕ್ಕುಗು. ಮಾಶ್ಟ್ರು ಮಾವನ ಅಪರೂಪದ ಈ ಲೇಖನ ಚಿಂತನೆಗೆ ಯೋಗ್ಯವಾಗಿದ್ದು. ಒಪ್ಪಣ್ಣನ ಲೇಖನಂಗಳ ಮೂಲಕ ಅವರ ವಿಚಾರ ಲಹರಿಗೊ ಬೈಲಿಂಗೆ ಅಂಬಗಂಬಗ ಸಿಕ್ಕುತ್ತಾ ಇರ್ತು. ಇದೀಗ ನೇರವಾಗಿ ಮಾಸ್ಟ್ರ ಮಾತುಗಳ ಕೇಳ್ಲೆ ಮತ್ತೂ ಕೊಶಿ ಆವ್ತಾ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಪ್ರಬುದ್ಧ ಬರಹ. ಕುಶಾಲು ಮಾಡ್ಲೆ ಎಂತೂ ಸಿಕ್ಕಿತ್ತಿಲ್ಲೆನ್ನೆಪಾ!. ಒಪ್ಪಕ್ಕೆ ಬರದ್ದವು ಹೇಳಿ ಹೊಗಳುವೊ.

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಾಷ್ಟ್ರುಮಾವ ಬರದ್ದಲ್ಲಿ ಪ್ರತಿಯೊಂದು ವಾಕ್ಯವೂ ಸಂಗ್ರಹ ಯೋಗ್ಯ.
  ಜೇನು ಹುಳ ಜೇನು ಸಂಗ್ರಹಿಸಿದ ಹಾಂಗೆ ಹೆರಿ ತಲೆಯವರ ಸಂಗ್ರಹಲ್ಲಿ ಯೋಗ್ಯ ಚಿಂತನೆಗಳೂ, ಜ್ಞಾನ ಸಂಪತ್ತುಗಳೂ, ಅನುಭವಂಗಳೂ ಇಕ್ಕು. ಅದು ನಮ್ಮ ಮುಂದಿನ ಪೀಳಿಗೆಗೆ ಸಿಕ್ಕೆಕ್ಕು. ಬಯಲಿಲ್ಲಿ, ಒಪ್ಪಣ್ಣ ಈ ನಿಟ್ಟಿಲ್ಲಿ ಮಾಡ್ತ ಕೆಲಸಕ್ಕೆ ಮಾಷ್ಟ್ರು ಮಾವನ ಚಿಂತನೆಗೊ ಸಹಾಯ ಅಕ್ಕು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

  [Reply]

  VA:F [1.9.22_1171]
  Rating: +1 (from 1 vote)
 5. ಜಯಶ್ರೀ ನೀರಮೂಲೆ
  jayashree.neeramoole

  ಮಾಷ್ಟ್ರು ಮಾವಂಗೆ ನಮಸ್ಕಾರ,

  ಸಂಪತ್ತು ಬರುವುದೇ ದಾನ ಮಾಡಲಿಕ್ಕೆ, ದಾನ ಮಾಡಿದಷ್ಟು ಸಂಪತ್ತು ಹೆಚ್ಚುತ್ತು ಹೇಳುವ ಪಾಠವನ್ನೂ ಎಂಗೊಗೆ ಕಲಿಶುತ್ತ ಇಪ್ಪ ಮಾಷ್ಟ್ರು ಮಾವಂಗೆ ಧನ್ಯವಾದಂಗೋ… ನಿಂಗಳ ಹಾಂಗಿದ್ದ ಮಾಷ್ಟ್ರು ಮಾವ ಸಿಕ್ಕಿದ್ದು ಈ ಸಮಾಜದ ಭಾಗ್ಯ….

  [Reply]

  VN:F [1.9.22_1171]
  Rating: 0 (from 0 votes)
 6. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಒಳ್ಳೆ ಜೀವನ ಪಾಠ ಹೇಳಿಕೊಟ್ಟಿದಿ ಮಾಷ್ಟ್ರುಮಾವ. ಧನ್ಯವಾದಂಗೊ.
  ಬೈಲಿಲಿ ನಿಂಗಳ ವಿಚಾರಧಾರೆ ಹೀಂಗೇ ಬಂದೊಂಡಿರಳಿ.

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°

  ಮಾಷ್ಟ್ರುಮಾವ° ಶುದ್ದಿ ಹೇಳಿದ್ದು, ಮಾಷ್ಟ್ರುಮಾವನ ಮನೆಲಿ, ಮಾಷ್ಟ್ರುಮಾವ° ಕೆಂಪು ಕುರ್ಚಿಲಿ ಕೂದು ಶುದ್ದಿ ಹೇಳುವಾಗ ಎದುರಾಣ ಸೋಫಾಲ್ಲಿ (ಒಪ್ಪಣ್ಣನ ಒಟ್ಟಿಂಗೆ) ಕೂದು ಕೇಳಿದ ಹಾಂಗೆ ಆತು. :-)

  ಮಾಷ್ಟ್ರು ಮಾವ° ಒಂದು ವಿಷಯ ಹೇಳುವಾಗ ಆ ಶುದ್ದಿಯ ಮೂಲಂದ ಸುರು ಮಾಡಿ, ಅದಕ್ಕೆ ಸುಮಾರು ಆಯಾಮಂಗಳ ಕೊಟ್ಟು, ಅದರ ವಿಸ್ತರಿಸಿ, ಅದರ ಬಗ್ಗೆ ತುಂಬಾ ಆಳವಾದ ವಿಚಾರಂಗಳ ಪೋಣಿಸಿ ಕೊಟ್ಟು ನಾವು ವಿಷಯವ ಪೂರ್ಣವಾಗಿ ಮನದಟ್ಟು ಮಾಡಿಗೊಂಬ ಹಾಂಗೆ ವಿವರ್ಸುತ್ತವು. ಒಂದು ವಿಷಯದ ಬಗ್ಗೆ, ಆ ವಿಷಯದ ಬಗ್ಗೆ ಲೋಕಲ್ಲಿಪ್ಪ ಸಮಸ್ತ ಮಾಹಿತಿಗಳ, ಒಂದಾಗಿ ಒಂದು ಕೊಟ್ಟು, ಅದರಲ್ಲಿ ಪ್ರತಿಯೊಂದು ವಾಕ್ಯವನ್ನುದೆ ನಾವು ಮಥನ ಮಾಡಿ ಅದರಿಂದ ನವಗೆ, ನಮ್ಮ ಜೀವನಕ್ಕೆ ಬೇಕಾದ ಎಲ್ಲಾ ಅಮೂಲ್ಯ ರತ್ನಂಗಳ ಹಾಂಗೆ ಇಪ್ಪ ವಿಚಾರಂಗಳ ತೆಕ್ಕೊಂಡು ನಮ್ಮ ‘ಸಂಪತ್ತಿನ ಭಂಡಾರ’ ತುಂಬುಸಿಗೊಂಬ ಹಾಂಗೆ ಇರ್ತು. ಮಾಷ್ಟ್ರುಮಾವ° ಶುದ್ದಿ ಹೇಳುದರ ‘ಶುದ್ದಿಗೋ’ ಹೇಳುದರ ಬದಲು ‘ವಿಚಾರ ಧಾರೆ’ ಅಥವಾ ‘ಜ್ಞಾನ ಭಂಡಾರ ತೆರಕ್ಕೊಂಬದು’ ಹೇಳಲಕ್ಕು.

  ಮಾಷ್ಟ್ರು ಮಾವ° ಸಮುದ್ರವ ‘ರತ್ನಾಕರ’ ಹೇಳಿದವು. ಎನಗೆ ಅಪ್ಪದು ಮಾಷ್ಟ್ರುಮಾವ° ಒಂದು ‘ರತ್ನಾಕರ’ ಆಗಿಪ್ಪ ಸಮುದ್ರ. ಒಪ್ಪಣ್ಣ, ಈ ಸಮುದ್ರವ ಮಥನ ಮಾಡಿ ವಾರ ವಾರ ಒಂದೊಂದೇ ರತ್ನವ (ಅವ ಅಂಬೇರ್ಪಿಲಿ ಎಲ್ಲವನ್ನೂ ತೆಕ್ಕೊಳ್ತಾ° ಇಲ್ಲೆ) ಹೆರ ತೆಗೆತ್ತ°. ಅದರ ಅವನೇ ಮಾಡಿಕ್ಕೊಳ್ತಾ° ಇಲ್ಲೆ. ಅದರ ಹೊಳಪಿನ ನವಗೂ ಕೊಡ್ತ° ಬೈಲಿನ ಶುದ್ದಿಲಿ. ಈಗ ನವಗೂ ಈ ಸಮುದ್ರ ಮಥನ ಮಾಡ್ಳಕ್ಕು ಅಥವಾ ಮಥನ ಮಾಡದ್ದೇ ನವಗೆ ಜ್ಞಾನಸಂಪತ್ತಿನ ಭಂಡಾರ ಸಿಕ್ಕುತ್ತಾ ಇದ್ದು, ಮಾಷ್ಟ್ರು ಮಾವನ ಶುದ್ದಿಯ ರೂಪಲ್ಲಿ!!!

  ಈ ಶುದ್ದಿಲಿ ಮಾಷ್ಟ್ರುಮಾವ° ಸಂಪತ್ತಿನ ಸಂಗ್ರಹ ಮಾಡುದು ಹೇಂಗೆ ಹೇಳಿದ್ದವು. ಈ ಸಂಪತ್ತು ನಾವು ಸಂಗ್ರಹ ಮಾಡುದು ಮಾತ್ರ ಅಲ್ಲ ನಮ್ಮ ಮುಂದಾಣವಕ್ಕೂ ಕೊಡುವ ಹಾಂಗಿರ್ತ ಅನುಭವ ಸಂಪತ್ತುದೆ, ಜ್ಞಾನ ಸಂಪತ್ತುದೆ, ವಸ್ತು ಸಂಪತ್ತುದೆ!!! ಮಾಷ್ಟ್ರು ಮಾವ° ಹೇಳುವ ವಿಚಾರಂಗಳ ತುಂಬುಸಿಗೊಂಬ, ಅರ್ಥೈಸಿಗೊಂಬ, ಅಳವಡಿಸಿಗೊಂಬ ಭಂಡಾರ ನಮ್ಮಲ್ಲಿದ್ದಾರೆ ಆತು!!

  ಮಾಷ್ಟ್ರು ಮಾವ°, ನಿಂಗೋ ಬೇರೆ ಬೇರೆ ದಿಕ್ಕಂದ ಸಂಗ್ರಹ ಮಾಡಿದ ಸಂಪತ್ತಿನ ಅನುಭವಾಮೃತವ ಇಲ್ಲಿ ಹಂಚುತ್ತಾ ಇದ್ದಿ. ಇನ್ನುದೇ ಜೀವನಕ್ಕೆ ಅಗತ್ಯ ಇಪ್ಪ ಅಮೂಲ್ಯ ಮಾಹಿತಿಗೋ ನಿಂಗಳಿಂದ ಬರಲಿ.. ಎಂಗಳ ‘ಸಂಪತ್ತಿನ ಭಂಡಾರ’ ಹೆಚ್ಚಲಿ ಹೇಳಿ ಆಶಿಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಶಾಂತತ್ತೆವಿಜಯತ್ತೆಪಟಿಕಲ್ಲಪ್ಪಚ್ಚಿಗೋಪಾಲಣ್ಣದೀಪಿಕಾಶಾ...ರೀರಾಜಣ್ಣಶ್ಯಾಮಣ್ಣಕೆದೂರು ಡಾಕ್ಟ್ರುಬಾವ°ಸುಭಗಜಯಶ್ರೀ ನೀರಮೂಲೆವಾಣಿ ಚಿಕ್ಕಮ್ಮಒಪ್ಪಕ್ಕಪವನಜಮಾವನೆಗೆಗಾರ°ವಸಂತರಾಜ್ ಹಳೆಮನೆಮಾಲಕ್ಕ°ಡೈಮಂಡು ಭಾವಅನು ಉಡುಪುಮೂಲೆದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ