ಉಪಕಾರ ಸ್ಮರಣೆ

January 11, 2010 ರ 12:49 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಪಕಾರಕ್ಕೆ ಪ್ರತಿಯಾಗಿ ಪ್ರತ್ಯುಪಕಾರ. ಅದು ಎಡಿಯದ್ರೆ ‘ಉಪಕಾರ ಸ್ಮರಣೆ’.

ಮಾನವನ ಒಂದು ಅಗತ್ಯ ಗುಣ.
ಪ್ರಾಣಿಗಳೂ ತೋರುಸುವ ಸಹಜ ಗುಣ ಅದು.

ನಾಯಿ ಅಶನ ಹಾಕಿದವನ ಜೀವ, ಸೊತ್ತುಗಳ ರಕ್ಷಣೆಗಾಗಿ ಪ್ರಾಣಕೊಡ್ಳೆ ತಯಾರಿರ್ತು.
ಕಾಡಿನ ಸಿಂಹ ಒಂದು ತನ್ನ ಆರೈಕೆ ಮಾಡಿದ ನೆಂಪಿಲ್ಲಿ ಒಬ್ಬನ ಕೊಲ್ಲದ್ದೆ ಬಿಟ್ಟ ಕಥೆ, ಎಲಿ ತನ್ನ ಜೀವ ಒಳಿಶಿದ್ದಕ್ಕಾಗಿ ಸಿಂಹದ ಬಲೆ ತುಂಡುಮಾಡಿ ಬಿಡುಸಿದ ಕಥೆ – ಎಲ್ಲ ಪ್ರಾಣಿಗಳಲ್ಲೂ ಈ ಗುಣ ಇರ್ತು ಹೇಳಿ ತೋರುಸುತ್ತು.

ಒಳ್ಳೆಯ ಮನುಷ್ಯರು ಅವಕ್ಕೆ ಮಾಡಿದ ಉಪಕಾರ ಎಂದೂ ಮರೆತ್ತವಿಲ್ಲೆ ಹೇಳುದರ ಸಂಸ್ಕೃತ ಸುಭಾಷಿತ ಒಂದರಲ್ಲಿ ವಿವರುಸುದು ಹೀಂಗಿದ:

ಪ್ರಥಮ ವಯಸಿ ಪೀತಂ ತೋಯಮಲ್ಪಂ ಸ್ಮರಂತಮ್ |
ಶಿರಸಿ ನಿಹಿತ ಭಾರಃ ನಾರಿಕೇಲಂ ನರಾಣಾಮ್ ||
ಉದಕಮಮೃತ ತುಲ್ಯಂ ದದ್ಯುರಾಜೇವಿನಾಂತಮ್ |
ನಹಿಕೃತಮುಪಕಾರಃ ಸಾಧವೋ ವಿಸ್ಮರಂತಿ ||

(ತೆಂಗಿನ ಮರ – ಸಣ್ಣದಿಪ್ಪಗ ಮನುಷ್ಯ ಎರದ ರಜ ನೀರಿನ ನೆಂಪುಮಾಡಿ, ಜೀವ ಇಪ್ಪನ್ನಾರ – ಅಮೃತಕ್ಕೆ ಸಮಾನ ನೀರಿನ – ತಲೇಲಿ ಹೊತ್ತೋಂಡು ನಿಂದಿರ್ತು.
ಅದೇ ರೀತಿ ಸಾಧುಗೊ – ಒಳ್ಳೆವು, ಅವಕ್ಕೆ ಮಾಡಿದ ಉಪಕಾರವ ಎಂದೂ ಮರೆತ್ತವಿಲ್ಲೆ.
)
ಬೇರೆವರಿಂದ ನಾವು ಉಪಕಾರ ಪಡದ್ದರ ನೆಂಪಿಲ್ಲಿ ಮಡುಗಿ, ಸಮಾಜಕ್ಕೆ ನಮ್ಮಂದ ಎಡಿಗಪ್ಪ ಸೇವೆ ಮಾಡೇಕು ಹೇಳಿ ಇದರ ತಾತ್ಪರ್ಯ.

ಉಪಕಾರ ಸ್ಮರಣೆ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಅಜ್ಜಕಾನ ಭಾವ

    ಮಾಸ್ಟ್ರು ಮಾವಂಗೆ ಅಭಿವಾದನೆಗೊ.. ಒಳ್ಳೆಯ ವಿಚಾರಂದ ಸುರು ಮಾಡಿದ್ದಿ.. ಎಂಗಳ ಸರಿಯಾದ ದಾರಿಲಿ ಮುನ್ನಡೆಸೆಕ್ಕು ಹೇಳಿ ವಿನಂತಿ..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಜಯಗೌರಿ ಅಕ್ಕ°ಗಣೇಶ ಮಾವ°ವೇಣೂರಣ್ಣಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಸರ್ಪಮಲೆ ಮಾವ°ರಾಜಣ್ಣಶರ್ಮಪ್ಪಚ್ಚಿಬಟ್ಟಮಾವ°ಮಾಷ್ಟ್ರುಮಾವ°ಅಕ್ಷರದಣ್ಣಚೆನ್ನೈ ಬಾವ°ಮುಳಿಯ ಭಾವಪ್ರಕಾಶಪ್ಪಚ್ಚಿದೊಡ್ಡಭಾವಬೊಳುಂಬು ಮಾವ°ದೀಪಿಕಾಶಾ...ರೀಹಳೆಮನೆ ಅಣ್ಣಕಾವಿನಮೂಲೆ ಮಾಣಿವೇಣಿಯಕ್ಕ°ನೀರ್ಕಜೆ ಮಹೇಶಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ