Oppanna.com

ಮೋರೆ ತಿರುಗಿಸಿ ನೆಡದ ಮೋರೆಪುಸ್ತಕದ ‘ಕಲ್ಪನ’…

ಬರದೋರು :   ಡೈಮಂಡು ಭಾವ    on   11/05/2012    33 ಒಪ್ಪಂಗೊ

ಡೈಮಂಡು ಭಾವ

ಅಂಬಗ ಆನು ಬೆಂಗಳೂರಿಂಗೆ ಹೊಸಬ°. ಬೈಲ ಕರೇಲಿ ಇಪ್ಪ ಗೆದ್ದೆಲಿ ಪುಳ್ಳರುಗಳೊಟ್ಟಿಂಗೆ ಆಟ ಆಡಿಂಡು,

ಅಮ್ಮನ ಕೈಯಿಂದ ಬೈಗಳು ತಿಂದೊಂಡು,  ಕಾಲೇಜಿಂಗೆ ಹೋಗಿಂಡು, ಪರೀಕ್ಷೆಲಿ ಹೇಂಗಾರು ಪಾಸಾಗಿ, ಇನ್ನು ಮನೆಲಿ ಕೂದರೆ ಆಗ, ಮದುವೆಗಪ್ಪಗ  ಕೂಸು ಸಿಕ್ಕ ಹೇಳಿ;  ಅಪ್ಪ° ಒತ್ತಾಯ ಮಾಡಿ ಬೆಂಗಳೂರಿನ ಬಸ್ಸಿನ ಹತ್ಸಿಬಿಟ್ಟ ನಂತರ ಅಲ್ಲದೋ ಮಹಾಸಾಗರದ ಹಾಂಗಿಪ್ಪ ಈ ಊರಿಂಗೆ ಬಂದು ಬಿದ್ದದು!

ನಿರ್ಚಾಲು, ಬದಿಯಡ್ಕ, ಪುತ್ತೂರು, ಉಪ್ಪಿನಂಗಡಿ, ವಿಟ್ಲ… ಹೀಂಗಿಪ್ಪ ಸಣ್ಣ ಪೇಟೆಯ ಸುತ್ತಿದ್ದು, ಕಂಡದು ಬಿಟ್ರೆ ನಾವು ಬಹು ದೊಡ್ಡ ಪೇಟೆಯ ನೋಡಿದ್ದು ಟಿವಿಲಿ ಮಾತ್ರ ಇದಾ. ಹೇಳಿದಾಂಗೆ ಕೊಡೆಯಾಲವನ್ನು ಒಂದೆರಡು ಸರ್ತಿ ಸುತ್ತಿದ್ದು. ಬೆಂಗ್ಳೂರಿಂಗೆ  ಹೋಲಿಸಿದರೆ ಅದೆಂತಾ ಅಷ್ಟು ದೊಡ್ಡ ಪೇಟೆ ಅಲ್ಲ ಹೇಳಿ ನಮ್ಮ ಅಭಾವನೇ ಹೇಳುಗು.

ಹೀಂಗಿಪ್ಪ ಬೆಂಗ್ಳೂರಿಲ್ಲಿ ಬಂದ ಹೊಸತರಲ್ಲಿ ನವಗೆ ಗೊಂತಿದ್ದದು ಕೆಲವೇ ಕೆಲವು ಜಾಗೆಗೊ. ಗಿರಿನಗರಲ್ಲಿ ನಮ್ಮ ಮಠ, ಮಲ್ಲೇಶ್ವರಲ್ಲಿಪ್ಪ ಹವ್ಯಕ ಮಹಾ ಸಭಾ ಆಫೀಸು, ಹುಳಿಮಾವಿಲ್ಲಿಪ್ಪ ಚಾಮುಂಡಿ ಮನೆ, ಓ ಅಲ್ಲಿ ವೈಟ್‌ ಫೀಲ್ಡಿಲ್ಲಿಪ್ಪ ರಾಘವೇಂದ್ರ ಅಪಾರ್ಟುಮೆಂಟು,  ಕಸ್ತೂರಿ ನಗರ, ರಾಜರಾಜೇಶ್ವರಿ ನಗರಲ್ಲಿಪ್ಪ  ಎರಡು ಮನೆಗಳ ಬಿಟ್ರೆ ನವಗೆ ಬೇರೆಂತು ಅರಡಿಯ. ಸರಿಯಾಗಿ ದಾರಿ ಗೊಂತಿದ್ದದು ಮೆಜೆಸ್ಟಿಕ್ಕಿಂಗೆ ಮಾತ್ರ. ಅಷ್ಟು ಗೊಂತಿದ್ದರೆ ಸಾಕು ಹೇಳಿ ಎನ್ನ ಕೋಂಗಿ ಮಾಡುಗು ಜಾಲ್ಸೂರು ಸುಪುತ್ರ°!  😉 ಇರಲಿ.

ಇರುಳು ಉಳ್ಕೊಂಬಲೇ ಎಂತ ಸಮಸ್ಯೆಯೂ ಇತ್ತಿದಿಲ್ಲೆ.  ನಮ್ಮವರದ್ದೇ ಐದಾರು ಮನೆ ಇದ್ದ ಕಾರಣ! ದಿನಕ್ಕೊಬ್ಬನ ಮನೆಲಿ ಕೂದೊಂಡು ಬಂದ ಹೊಸತ್ತರಲ್ಲಿ ದಿನ ನೂಕಿದ್ದು ನಾವು. ಬೆಂಗ್ಳೂರಿಂಗೆ ಬಂದು ಸುಮ್ಮನೆ ಕೂಪಲೆ ಆವ್ತಾ. ಬಂದ ಉದ್ದೇಶವೇ ಕೆಲಸ ಹುಡ್ಕಲೆ ಆದ ಕಾರಣ, ಹಗಲೆಲ್ಲಾ ಕೆಲಸ ಹುಡ್ಕುವ ತೆರಕ್ಕು ನವಗೆ.  ಕೆಲಸ ಹುಡ್ಕುದು ಹೇಳಿದರೆ, ಹಿಂದಾಣ ಕಾಲಲ್ಲಿ ಮನೆಲಿ ಆಳುಗ ಬಂದು ಬೇಲೆ ಉಂಡ ಅಣ್ಣೇರೆ ಹೇಳಿ ಕೇಳಿದಾಂಗೆಯೋ? ಅಲ್ಲಪ್ಪಾ  ಅಲ್ಲಾ.. ಅದಕ್ಕೆ ರೆಸ್ಯೂಮು (ಸಿ.ವಿ ಹೇಳಿಯೂ ಹೇಳುಗು) ಆಯೆಕ್ಕು, ಅದರ ಕಂಪೆನಿಗೆ ಕಳುಸೆಕ್ಕು. ಕಂಪೆನಿಯವು ಅದರ ನೋಡಿ ನಮ್ಮ ಪರೀಕ್ಷೆಗೆ ದಿನಿಗೇಳೆಕ್ಕು. ಅದರಲ್ಲಿ ಇಂಟ್ರೂ ಪಾಸಾಯೆಕ್ಕು. ಹು ಹು ಕೆಲಸ ಸಿಕ್ಕಲೆ ಕೆಲಸ ಎಷ್ಟಿದ್ದು?

ರೆಸ್ಯೂಮು ಬರವದು ಹೇಂಗೆ? ನವಗೆ ಎಂತ ಗೊಂತಿದ್ದು? ನಮ್ಮ ಬೈಲಿಲ್ಲಿ ಕಲ್ತವು ಕೆಲವು ಜೆನ ಇದ್ದವಿದಾ. ಅವರ ಕಾಲಿಂಗೆ ಅಡ್ಡ ಬಿದ್ದತ್ತು ನಾವು. ಅಂತೂ ರೆಸ್ಯೂಮು ಮಾಡಿ ಅದರ ಪ್ರಿಂಟು ತೆಗೆದು, ಜೆರಾಕ್ಸ್ ಮಾಡ್ಸಿ, ಸ್ಕ್ಯಾನ್ ಮಾಡ್ಸಿ ಆತು. ಎಂತಕೆ? ಬೇರೆ ಬೇರೆ ಕಂಪೆನಿಗೆ ಕಳುಸಲೆ. ಈಗೀಗ ಕಂಪೆನಿಯು ನಮ್ಮ ರೆಸ್ಯೂಮಿನೊಟ್ಟಿಂಗೆ ಕೆಲಸಕ್ಕೆ ಸೇರುವವರ ಸೋಷಿಯಲ್‌ ಇಂಟರಾಕ್ಷ್ಯನ್‌ ಹೇಂಗಿದ್ದು ಹೇಳಿ ನೋಡ್ತವಡಾ. ಮಾಷ್ಟ್ರುಮಾವನ ಸಣ್ಣ ಮಗ ಹೇಳಿದ್ದು. ಅವಂಗೆ ಇದರಲ್ಲೆಲ್ಲಾ ರಜ್ಜ ಅನುಭವ ಜಾಸ್ತಿ ಇದ್ದಿದಾ. ಎಂತರಪ್ಪ ಈ ಸೋಷಿಯಲ್‌ ಇಂಟರಾಕ್ಷನ್‌ ಹೇಳಿದರೆ? ಮೋರೆಪುಸ್ತಕ, ಆರ್ಕುಟ್‌,  ಟ್ವಿಟರ್‌ ಹೇಳಿ ಇಂಟರ‍್ನೆಟ್ಟಿಲ್ಲಿ ಹಲವು ಸಾಮಾಜಿಕ ಬೈಲು ಇದ್ದಿದಾ. ಅದರಲ್ಲಿ ಇವ° ಇದ್ದನೋ? ಅವಂಗೆ ಎಷ್ಟು ಚೆಂಙಾಯಿಗೊ ಇದ್ದವು? ಆ ಬೈಲಿಲ್ಲಿ ಎಂತೆಲ್ಲಾ ಮಾಡ್ತ°? ಹೇಳ್ತದರೆಲ್ಲಾ ನೋಡ್ತವಡಾ ಕಂಪೆನಿಯವು. ಹಾಂಗಾಗಿ ಮೋರೆಪುಸ್ತಕಲ್ಲಿ ಒಂದು ರಿಜಿಸ್ಟ್ರುಮಾಡಿ ಒಂದು ಪುಟಲ್ಲಿ ನಿನ್ನ ಹೆಸರು ಗೀಚು ಹೇಳಿದ° ಮಾಮಾಸಮ.

ಮೋರೆಪುಸ್ತಕಲ್ಲಿ ರಿಜಿಸ್ಟ್ರಿ ಮಾಡುವುದರ ಅವನೇ ಹೇಳಿ ಕೊಟ್ಟ°. ಅದರಲ್ಲಿ ನಮ್ಮ  ಪಟ ಹಾಕಿ, ನಮ್ಮ ಬೈಲಿನ ಅಷ್ಟೂ  ಜೆನಂಗೊಕ್ಕೆ ಚೆಂಙಾಯಿ ಅಪ್ಪಲೆ ಮೆಸೇಜು ಕಳಿಸಿತ್ತು. ಇದರೆಡೆಕ್ಕಿಲ್ಲಿ ನಾವು ಕೆಲಸ ಹುಡ್ಕುವುದರ ನಿಲ್ಸಿಸಿದ್ದಿಲ್ಲೆ. ಹಲವು ಕಂಪೆನಿಗ ದಿನೆಗೇಳಿದವು. ಪರೀಕ್ಷೆ ಬರೆಸಿದವು. ಕೆಲವು ಇಂಟ್ರೂ ಮಾಡಿದವು. ಹಾಂಗೋ ಹೀಂಗೋ ಹೇಂಗೊ?  ಒಟ್ಟಾರೆ ಅಕೇರಿಗೆ ಒಂದು ಕೆಲಸ ಸಿಕ್ಕಿತ್ತದಾ. ಆ ದೇವರ ಕೃಪೆಂದ. ಸೌತಡ್ಕ ಗೆಣವತಿಯ ಕೃಪೆ ಹೇಳಿಯೇ ಮಡಕ್ಕೊಂಬ. ದೊಡ್ಡ ಮಟ್ಟಿನ ಸಂಬಳ ಅಲ್ಲದ್ರೂ ನಮ್ಮ ಖರ್ಚಿ ಹೋಕಿದಾ ಹು ಹು ಹು.  ಮಾಣಿ ಎಂತ ಮಾಡ್ತ° ಹೇಳಿ ಕೇಳುವಾಗ,  ಬೆಂಗ್ಳೂರಿಲ್ಲಿ ಕೆಲಸಲ್ಲಿದ್ದ° ಹೇಳ್ಳೆ ಆತಿದಾ 🙂

ಎನಗೆ ಕೆಲಸ ಕೊಟ್ಟ ಕಂಪೆನಿಯವು ಮೋರೆಪುಸ್ತಕಲ್ಲಿ ಇವ° ಎಂತ ಮಾಡ್ತ° ಹೇಳಿ ನೋಡಿದ್ದವಾ ಇಲ್ಲೆಯಾ ಹೇಳಿ ಎನ ಗೊಂತಿಲ್ಲೆ. ಆದರೆ ಆ ಪುಸ್ತಕ ಎನ್ನ ಎದುರು ಒಂದು ಹೊಸ ಜಗತ್ತನ್ನೆ ತಂದು ನಿಲ್ಲುಸಿತ್ತು. ಆಹಾ ಎಂತೆಲ್ಲಾ ಮಾಹಿತಿಗೊ ಅದರಲ್ಲಿ. ಎಂತೆಂಥಾ ಪಟಂಗೊ, ಒಂದೋ ಎರಡೋ.. ಒಂದರಿ ಅದರ ಒಳ ಹೊಕ್ಕಿತ್ತು ಕಂಡ್ರೆ ಹೆರ ಬಪ್ಪಲೇ ಬಂಙ ಆವುತ್ತು. ಆ ಮಟ್ಟಿಂಗೆ ಮೋರೆಪುಸ್ತಕ ಹೇಳ್ತ ಮಾಯೆ ನಮ್ಮ ಆವರುಸುತ್ತು. ಕೆಲಸಕ್ಕೆ ಹೋಪ ಒಟ್ಟಿಂಗೆ ನಾವು ಮೋರೆಪುಸ್ತಕಲ್ಲಿ ಗುರುಟುದು ಬಿಟ್ಟಿದಿಲ್ಲೆ. ದಿನ ದಿನ ಹೊಸ ಹೊಸ ಚೆಂಙಾಯಿಗೊ ಸಿಕ್ಕಿಯೊಂಡು ಇತ್ತಿದ್ದವು. ದಿನ ಕಳೆದಾಂಗೆ ನಮ್ಮ ಚೆಂಙಾಯಿಗಳ ಪಟ್ಟಿ ಬೆಳಕ್ಕೊಂಡೇ ಹೋತು.

ಅದೊಂದು ದಿನ… ತುಂಬಾ ಜೆನಂಗೊ ಚೆಂಙಾಯಿ ಅಪ್ಪಲೇ ಮೆಸೇಜು ಕಳಿಸಿದ್ದವು. ಕೆಲವು ಜನರ ನವಗೆ ಗೊಂತಿದ್ದು. ಇನ್ನು ಕೆಲವು ಜೆನ ನಮ್ಮ ಚೆಂಙಾಯಿಗಳ ಚೆಙಾಂಯಿಗೊ ಆಗಿತ್ತಿದ್ದವು. ಒಂದು ಕೂಸಿನ ಬಿಟ್ಟು! ಆರಪ್ಪಾ ಇದು ಹೇಳಿ ಅದರ ಪುಟಲ್ಲಿ ಹುಡ್ಕುಕಿದೆ. ಹೆಸರು ’ಕಲ್ಪನ’! ಎನಗಂತು ಅದರ ಗುರ್ತ ಇಲ್ಲೆ. ಹೋಗಲಿ ಎನ್ನ ಚೆಙಾಂಯಿಗಳ ಪಟ್ಟಿಲಿ ಅದರ ಹೆಸರು ಇದ್ದೋ ಹೇಳಿ ನೋಡಿದರೆ ಅಲ್ಲೂ ಇಲ್ಲೆ. ಶ್ಷೆಲಾ..! ಆರಪ್ಪಾ ಇದು? ಎನ್ನ ತಲೆ ಕೊರವಲೆ ಶುರು ಆತು. ಗುರ್ತ ಇಲ್ಲದ್ದವರ ನಮ್ಮೊಟ್ಟಿಂಗೆ ಸೇರ್ಸುದು ಹೇಂಗೆ? ಅದೂ ಕೂಸಿನ?  ಹಾಂಗಾಗಿ ಅದರ ನಮ್ಮ ಪುಟಲ್ಲಿ ಸೇರ್ಸಿದ್ದಿಲ್ಲೆ.

ಎರಡು ದಿನ ಬಿಟ್ಟು ಮೋರೆ ಪುಸ್ತಕ ಬಿಡುಸುತ್ತೆ; ಆ ಕೂಸಿನ ಮೆಸೇಜು ಬಂದು ನಮ್ಮ ಪುಟಲ್ಲಿ ಬಿದ್ದಿದ್ದು..  ಹೇ… ನೀನು ಎಂತಕೆ ಎನ್ನ ನಿನ್ನ ಫ್ರೆಂಡ್‌ಗಳ ಪಟ್ಟಿಗೆ ಸೇರ್ಸಿದ್ದಿಲ್ಲೆ? ನೀನು ಎನ್ನ ಫ್ರೆಂಡ್‌ ಆಯೆಕ್ಕು ಹೇಳಿ ಆನು ಬಯಸುತ್ತೆ.. ಎನ್ನ ನಿರಾಶೆ ಮಾಡೆಡ.. ಇಂತೀ ಕಲ್ಪನ. ಹೇಳಿ ಬರಕ್ಕೊಂಡು ಇತ್ತಿದು!

ಇದು ಯಾವುದಪ್ಪಾ ಹೀಂಗೆ ಗಂಟು ಬಿದ್ದದು ಹೇಳಿ ಗ್ರೇಶಿದೆ. ಅಲ್ಲಾ ನವಗೆ ಗುರ್ತವೇ ಇಲ್ಲೆ. ಇದುವರೆಗೆ ಯಾವ ಜೆಂಬ್ರಲ್ಲೂ ಅದರ ಆನು ನೋಡಿದ್ದಿಲ್ಲೆ. ಅದು ಎಲ್ಲಿ ಎನ್ನ ನೋಡಿದ್ದೋ? ಎಂತಕೆ ಆನು ಅದರ ಫ್ರೆಂಡು ಆಯೆಕ್ಕು ಹೇಳಿ ಗ್ರೇಶಿತ್ತೋ? ಉಮ್ಮಪ್ಪ ನವಗೊಂದು ಅರಡಿಯ. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿದ್ದಿಲ್ಲೆ. ಎಷ್ಟಾದರೂ ಕೂಸಲ್ಲದೋ ಭಾವ. ಅದಾಗಿಯೇ ಮೆಸೇಜು ಕಳುಸುವಾಗ ಮನಸ್ಸು ಕೇಳ್ತಾ?. ಅದು ಚೆಂಙಾಯಿ ಅಪ್ಪಲೆ ಮಾಡಿದ ಮನವಿಗೆ ತಥಾಸ್ತು ಹೇಳಿತ್ತು ನಾವು.

ಅಂದಿನಿಂದ ಎನ್ನ ಜೀವನಲ್ಲಿ ಹೊಸ ಅಧ್ಯಾಯ ಶುರು ಆತು. ಕಲ್ಪನ ದಿನದ ೨೪ ಗಂಟೆಯೂ ಮೋರೆಪುಸ್ತಕಲ್ಲೇ  ಗುರುಟಿಗೊಂಡು ಇರ್ತಿತ್ತಾ ಹೇಳಿ ಕಾಣ್ತು. ಆನು ಪ್ರತಿ ಸರ್ತಿ ಮೋರೆಪುಸ್ತಕ ಬಿಡುಸುವಾಗ ಕೂಸು ಅಲ್ಲಿ ಇರ್ತಿತ್ತು ಭಾವ. ಸುಮಾರು ವರ್ಷಂದ ಪರಿಚಯ ಇಪ್ಪೊರಾಂಗೆ ಪಟ್ಟಾಂಗ ಹೊಡಕ್ಕೊಂಡು ಇತ್ತಿದು. ಅಕೇರಿಗೆ ಒಂದು ದಿನ ಎನ್ನ ಮೊಬೈಲು ನಂಬರೂ ಕೇಳಿತ್ತು. ಕೊಡದ್ದೆ ಆವುತ್ತಾ? ನಂಬ್ರ ಕೊಟ್ಟತ್ತು ನಾವು. ಅಂಬಗಳೇ ಅತ್ಲಾಗಿಂದ ಸಮೋಸ ಭಾವ. ಇದು ’ಕಲ್ಪನ’ ಹೇಳಿ!. ನಾವು ಆ ನಂಬ್ರವ ’ಕಲ್ಪನೆ’ ಹೇಳಿ ಸೇವ್‌ ಮಾಡಿತ್ತು ಭಾವ. ಅಲ್ಲಿವರೆಗೆ ಕೇವಲ ಮೋರೆಪುಸ್ತಕಕ್ಕೆ ಮಾತ್ರ ಮೀಸಲಾಗಿದ್ದ ಎಂಗಳ ಸಂಭಾಷಣೆ ಮೊಬೈಲಿನ ಸಮೋಸದವರೆಗೆ ಹಬ್ಬಿತ್ತು. ಕೆಲ ದಿನ ಕಳುದ ಮೇಗೆ ಮೊಬೈಲಿಲಿ ದಿನಾಗಳು ಮಾತಾಡುವರಗೆ ಎತ್ತಿತ್ತು.

ನವಗೆ ಈ ಕೂಸುಗಳ ಹತ್ತರೆ ಹೇಂಗೆ ಮಾತಾಡುದು ಹೇಳಿ ಗೊಂತಿದ್ದೊ? ಪುಳ್ಳರುಗಳೊಟ್ಟಿಂಗೆ, ಮಾಣಿಯಂಗಳೊಟ್ಟಿಂಗೆ ಲೊಟ್ಟೆ ಪಟ್ಟಾಂಗ ಹೊಡದ್ದು ಬಿಟ್ರೆ, ಕೂಸುಗಳತ್ರೆ ಮಾತಾಡ್ಳೆ ಮದಲಿಂಗೆ ನಾವು ಹಿಂದೆ. ಪರಿಸ್ಥಿತಿ ಹೀಂಗಿಪ್ಪಗ ಸುರುವಿಂಗೆ ಕೂಸಿನತ್ರೆ ಮಾತಾಡುವಾಗ ತಡವರಸಿಕೊಂಡು ಇತ್ತಿದು. (ಅಂಬಗಂಬಗ ಜೊಗುಳಿ ನುಂಗಿಯೊಂಡಿತ್ತನಾಯ್ಕು ಹೇಳಿ ಓ ದಾಸನದಾಸ ನೆಗೆ ಮಾಡುಗು ಗೊಂತಾದರೆ ;)) ಕ್ರಮೇಣ ಅಭ್ಯಾಸ ಆಗಿ ಹೋತು ಭಾವ. ಒಟ್ಟಿಂಗೆ ಎಂಗಳ ಸ್ನೇಹವುದೆ ಗಟ್ಟಿಯಾಗಿಯೊಂಡು ಹೋತು. ಆತ್ಮೀಯ ಸ್ನೇಹಿತರಾದೆಯೊ°. ಒಂದು -ಎರಡು ತಿಂಗಳ ಅವಧಿಲಿ ಎಂಗೊ ಮಾತಾಡದ್ದ ವಿಷಯ ಇದ್ದಿರ. ಅಷ್ಟು ಆತ್ಮೀಯತೆ ಇತ್ತಿದ್ದು ಇಬ್ರಲ್ಲಿಯುದೇ. ನಿಷ್ಕಲ್ಮಶ ಸ್ನೇಹ ಹೇಳಿದರೆ ಹಾಂಗೆ ಅಲ್ಲದೋ. ಅಲ್ಲಿ ಎಲ್ಲವೂ ಮುಕ್ತವಾಗಿ ಚರ್ಚೆ ಆವುತ್ತು. ಆಯೆಕ್ಕುದೆ. ಇಬ್ರ ಮನಸ್ಸಿಲ್ಲಿ ಗುಟ್ಟು ಒಳಿವಲೆ ಶುರುವಾದರೆ, ಸಂಶಯ ಬಪ್ಪಲೆ ಶುರುವಾದರೆ ಆತು, ಸ್ನೇಹ ಹಳಸಿದಾಂಗೆಯೇ.

ಪರಸ್ಪರ ಪರಿಚಯ ಆಗಿ ಮೂರು ತಿಂಗಳು ಆದರೂ ಇಬ್ರು ಮುಖತಾ ಭೇಟಿ ಮಾಡಿತ್ತಿದಿಲ್ಲೆಯಾ°. ಒಂದಿನ ಭೇಟಿ ಅಪ್ಪ ಹೇಳಿ ಮಾತಾಡಿಗೊಂಡೆಯ°. ಭೇಟಿ ಅಪ್ಪಲೆ  ಸೂಕ್ತ ಜಾಗೆ ಆಗೆಡದೊ?  ಬೆಂಗ್ಳೂರಿಲ್ಲಿ ಜಾಗೆಗೆ ಕೊರತೆಯೋ? ಇಲ್ಲನ್ನೆ. ಪಾರ್ಕು, ಸಿನಿಮಾ ಥಿಯೇಟರ್‌, ದೇವಸ್ಥಾನ ಯಾವುದು ಬೇಡ ಹೇಳಿ ಅಕೇರಿಗೆ ಒಂದು ಹೋಟ್ಳಿಲ್ಲಿ ಭೇಟಿ ಅಪ್ಪ ನಿರ್ಧಾರಕ್ಕೆ ಬಂದಾತು.

ಅಂದು ಆನು ಕಲ್ಪನನ ಮೊದಲ ಸರ್ತಿ ಮುಖತಾ ಭೇಟಿ ಅಪ್ಪದು. ಅದುದೇ ಹಾಂಗೆ. ಆದಿನ ಇಬ್ರುದೆ ಕುತೂಹಲದ ಮೂರ್ತಿಗೊ ಆಗಿತ್ತಿದೆಯ° ಎಂಗೊ. ಸಮಯಕ್ಕೆ ಸರಿಯಾಗಿ ಹೋಟ್ಳಿನ ಎದುರು ಎಂಗಳ ಭೇಟಿ. ಇಷ್ಟ್ರವರೆಗೆ ಫೋನಿಲ್ಲಿ ಮಾತಾಡಿದ್ದು, ಮೋರೆಪುಸ್ತಕಲ್ಲಿ ಮಾತಾಡಿದ್ದು. ಆದರೆ ಮುಖತಾ ಮಾತಾಡುದು ಇದೇ ಮೊದಲು. ಆನೇ ಮೊದಲು ಮಾತಾಡಿದೆ. ಆರಂಭದಲ್ಲಿ ದೊಂಡೆ ಪಸೆ ಆರಿತ್ತು ಭಾವ ಮಾತಾಡುವಾಗ. ಹಾಂಗೆ ನೋಡಿದರೆ ಅದೇ ಸಲೀಸಾಗಿ ಮಾತಾಡಿತ್ತು. ಇದರೆಡಕ್ಕಿಲ್ಲಿ ಹೋಟ್ಳಿನ ಮಾಣಿಯತ್ರೆ ಮಸಾಲೆ ದೋಸೆ ತಪ್ಪಲೆ ಹೇಳಿಯೂ ಆತು. ಪರಸ್ಪರ ಪರಿಚಯ ಆದ್ದು,  ಮೋರೆ ಪುಸ್ತಕಲ್ಲಿ ಗುರುಟಿದ್ದು, ಫೋನಿಲ್ಲಿ ಮಾತಾಡಿಗೊಂಡದು, ವೃತ್ತಿಗೆ ಸಂಬಂಧಿಸಿದ ವಿಷಯಂಗೊ, ಶಿಕ್ಷಣ, ಬಾಲ್ಯ, ಮನೆ, ಊರು,  ಅಪ್ಪ,  ಅಮ್ಮ ಹೀಂಗೆ ಎಲ್ಲಾ ವಿಚಾರಂಗಳೂ ಅಲ್ಲಿ ಚರ್ಚೆಗೆ ಬಂತು.

ಆದರೆ ನಡವಲಾದ್ದ ಒಂದು ಪ್ರಸಂಗ ನಡದೇ ಹೋತು ಭಾವ ಅಂದು. 🙁

ಆ ಕ್ಷಣಕ್ಕೆ ಎನಗೆ ಎಂತಾತೋ ಏನೊ ಭಾವ…  ಆನು ನಿನ್ನ ಪ್ರೀತಿಸುತ್ತಾ ಇದ್ದೆ… ನೀನು ಎನ್ನ ಪ್ರೀತಿಸುತ್ತೆಯಾ ಹೇಳಿ ಏಕಾಏಕಿ ಕೇಳಿದೆ.  ಈ ಮಾತಿನ ಕಲ್ಪನ ಎನ್ನಂದ ನಿರೀಕ್ಷಿಸಿದ್ದಿಲ್ಲೆ. ಆ ಕ್ಷಣಕ್ಕೆ ಅದರ ಮೋರೆಲಿ ಆಘಾತವ ಕಂಡೆ. ಎನ್ನ ಮಾತಿಂಗೆ ಹೇಂಗೆ ಪ್ರತಿಕ್ರಿಯಿಸಿಕ್ಕು ಹೇಳಿ ಅದಕ್ಕೆ ಗೊಂತಾಯಿದಿಲ್ಲೆ. ರಜ್ಜ ಸಮಯಕಳುದು ಬೇಜಾರಿಲ್ಲಿ… “ಎಂತ ಹೇಳ್ತಾ ಇದ್ದೆ ನೀನು? ನೀನು ಎನ್ನ ಆತ್ಮೀಯ ಸ್ನೇಹಿತ° ಹೇಳಿ ಆನು ಗ್ರೇಶಿತ್ತಿದೆ. ಆದರೆ ನೀನು…. ಛೆ…ಈ ರೀತಿ ಯೋಚನೆ ಮಾಡ್ತೆ ಹೇಳಿ  ಆನು ಅಂದುಕೊಂಡಿತ್ತಿದಿಲ್ಲೆ. ನಿನ್ನತ್ರೆ ಸ್ನೇಹಕ್ಕೆ ಬೆಲೆಯೇ ಇಲ್ಲೆ…” ಹೇಳಿ ಎನ್ನ ಪ್ರತಿಕ್ರಿಯೆಗೂ ಕಾಯದ್ದೆ ಅಲ್ಲಿಂದ ತುರುತುರನೆ ಎದ್ದು ಹೋತು.

ಆನು ಎಂತ ಹೇಳಿದೆ? ಎಂತಾ ಅವುತ್ತಾ ಇದ್ದು ಹೇಳಿ ಆನು ಯೋಚನೆ ಮಾಡುವಾಗ ಕಲ್ಪನ ಅಷ್ಟು ದೂರಕ್ಕೆ ಎತ್ತಿ ಆಗಿತ್ತು. ಕೂಡ್ಳೆ ಮೊಬೈಲಿಂಗೆ ಫೋನು ಮಾಡಿದೆ. ಫೋನಿನ ಸ್ವುಚ್ಚುಆಫ್‌ ಮಾಡಿತ್ತಿದು. ಮನೆಗೆ ಬಂದು ಮೋರೆಪುಸ್ತಕಲ್ಲಿ ನೋಡಿದೆ. ಎನ್ನ ಚೆಂಙಾಯಿಗಳ ಪಟ್ಟಿಂದ ಅದು ಹೋಗಿತ್ತಿದು. ಹೋಗಲಿ ಅದರ ಪುಟ ಆದರೂ ಇದ್ದಾಳಿ ನೋಡಿದೆ. ಎನ್ನ ಮೇಲಿನ ಕೋಪಕ್ಕೆ ಮೋರೆ ಪುಟವನ್ನೇ ಹರಿದು ಹಾಕಿತ್ತಿದು. ಮತ್ತೆ ಮೊಬೈಲಿಂಗೆ ಫೋನು ಮಾಡಿದೆ. ಕಲ್ಪನ ನಂಬ್ರವನ್ನೇ ಬದಲಿಸಿತ್ತಿದು.

ಕೂಸಿನ ನಿಷ್ಕಲ್ಮಶ ಸ್ನೇಹವ, ಆತ್ಮೀಯತೆಯ ಆನು ಪ್ರೀತಿ ಹೇಳಿ ಗ್ರೇಶಿತ್ತಿದೆ. ಎನ್ನದು ತಪ್ಪು. ಒಪ್ಪುತ್ತೆ. ಆದರೆ ಒಳ್ಳೆಯ ಸ್ನೇಹಿತೆಯಾಗಿ ಆನು ಮಾಡಿದ ತಪ್ಪಿನ ತಿದ್ದುಲೆ, ಕ್ಷಮಿಸುಲೆ ಅದಕ್ಕೆ ಅವಕಾಶ ಇತ್ತಿದಿಲ್ಲೆಯಾ. ಆನು ಎನ್ನ ಭಾವನೆಯ ಅದರತ್ರೆ ಮುಕ್ತವಾಗಿ ಹಂಚಿಕೊಂಡಿತ್ತಿದೆ. ಹಾಂಗೆ ಅದಕ್ಕೂ ಎನ್ನತ್ರೆ ಹಂಚಲಾವ್ತಿತು ಒಂದು ರಜ್ಜ ತಾಳ್ಮೆ ತೆಕ್ಕೊಂಡಿದ್ದರೆ. ಆತ್ಮೀಯನಾಗಿಯೊಂಡು ಖಂಡಿತಾ ಅನು ತಪ್ಪಿನ ತಿದ್ದಿಕೊಳ್ತಿತೆ. ಆದರೆ ಈಗ ನೋಡು ಅದಕ್ಕೆ ಅವಕಾಶವೇ ಇಲ್ಲದ್ದಾಂಗೆ ಆಗಿ ಹೋತು.

‘ಎಲ್ಲದಕ್ಕೂ ಒಂದು ಕೊನೆ ಇದ್ದು’ ಹೇಳ್ತ ಹೆರಿಯರ ಮಾತು ಎನ್ನ ಜೀವನಲ್ಲಿ ನಿಜವೇ ಆಗಿ ಹೋತು.

ಎಂಗಳ ಸ್ನೇಹಕ್ಕೆ ಆನೇ ಕೇಡಿ ಆದನೋ ಹೇಳಿ ಈಗ ಅನುಸುತ್ತಾ ಇದ್ದು…

~

ಮೊನ್ನೆ ಕಾನಾವಣ್ಣನ ಉಪ್ನಾನಲ್ಲಿ  ‘ಕೆಪ್ಪಣ್ಣ’ ಹೀಂಗೆ ಹೇಳುವಾಗ ಎನ್ನ ಕಣ್ಣಿಂದ ಜಾರಿದ ಹನಿಯ ಬೈಲ ಭಾವಂದ್ರಿಂಗೆ, ಅಕ್ಕಂದ್ರಿಗೆ ಗೊಂತಾಗದ್ದಾಂಗೆ ಒರೆಸಿದೆ 🙁

ಒಂದೊಪ್ಪ: ಕೆಲವು ಸರ್ತಿ ಅಪ್ರಿಯವಾದ ಸತ್ಯಂಗೊ ಸಂಬಂಧಗಳ ಹಾಳು ಮಾಡುತ್ತು.

ಸೂಚನೆ: ‘ಕಲ್ಪನ’ ಹೇಳ್ತ ಹೆಸರಿನ ಕೂಸು ಅದೇ ಆಗಿರ ಆತೊ.

ಇದರ ಹೀಂಗೆ ಅರ್ಥ ಮಾಡಿಕೊಂಬಲಕ್ಕು

ಮೋರೆಪುಸ್ತಕ: ಫೇಸ್‌ಬುಕ್‌

ಮೋರೆಪುಟ: ಫೇಸ್‌ಬುಕ್‌ ಫ್ರೊಫೈಲ್‌

ಚೆಂಙಾಯಿ: ಫ್ರೆಂಡು

33 thoughts on “ಮೋರೆ ತಿರುಗಿಸಿ ನೆಡದ ಮೋರೆಪುಸ್ತಕದ ‘ಕಲ್ಪನ’…

  1. ಡೈಮ೦ಡು ಭಾವ, ’ಕಲ್ಪನೆ’ಯ ಕತೆ ಲಾಯ್ಕ್ ಆಯಿದು. ಅದಕ್ಕಿ೦ತಲೂ ನಿ೦ಗಳು ಬೆ೦ಗ್ಳೂರಿಗೆ ಬ೦ದಾಗಿಪ್ಪನ ಅನುಭವ ವಿವರಣೆ ರಾಶಿ ಚೊಲೋಗೆ ಸಹಜವಾಗಿ ಬೈ೦ದೋ. ದೊಡ್ ಪ್ಯಾಟೆಗೆ ಹೋದ್ರೆ ಬವುಶ ಇದು ಎಲ್ಲರ ಅನುಭವ ಆಗ್ತು. ಎಲ್ಲರೂ ಹೇಳ್ತ್ದೆ ಇರಗು ಅಥ್ವಾ ಹೇಳಕ್ಕೆ ಬಪ್ಪುದೆ ಇರಗು. ನಿ೦ಗಳು ಸರಳ ಸತ್ಯವನ್ನ ಹೇಳದು, ನಿ೦ಗಳ ಭಾವನಾತ್ಮಕ-openness’ ಮನಸು ಇಪ್ಪುದು ಕೊಶಿ ಕೊಡ್ತು.

    1. ದೊಡ್ಮನೆ ಭಾವಂಗೆ ನಮಸ್ಕಾರ… ತುಂಬಾ ಕೊಶಿ ಆತು ನಿಂಗಳ ಒಪ್ಪವ ಕಂಡು….
      ಧನ್ಯವಾದಂಗೊ

  2. ಕೆಪ್ಪಣ್ಣನ ಸತ್ಯ(?) ಕಥೆ ಓದಿಯಪ್ಪಗ ಬೇಜಾರಾತು.

    ಡೈಮಂಡು ಭಾವ ಇದರ ಬೈಲಿಲಿ ಹಾಕಿದ್ದು ಒಳ್ಳೇದಾತು. ಮುಂದೊಂದು ದಿನ ಈ ಶುದ್ದಿಯ ಆ ಕಲ್ಪನಾ ಓದಿ, ಕೆಪ್ಪಣ್ಣನ ಶುದ್ದ ಮನಸ್ಸಿನ ಅರ್ಥ ಮಾಡಿಗೊಂಡು ಇಲ್ಲಿ ಒಂದು ಒಪ್ಪ ಕೊಟ್ಟು ಪುನಃ ಗೆಳೆತನ ಬೆಳೆತ್ತ ಹಾಂಗೆ ಆದರೆ ಕೆಪ್ಪಣ್ಣಂಗೆ ಎಷ್ಟು ಖುಷಿ ಆಕ್ಕು ಅಲ್ಲದಾ ?

    1. ಅದಾ ಚೆನ್ನಬೆಟ್ಟಣ್ಣ… ಎಷ್ಟೊಳ್ಳೆ ಹಾರೈಕೆ ನಿಂಗಳದ್ದು….
      ಕೊಶಿ ಆತು ಒಪ್ಪ ಕಂಡು.. ಧನ್ಯವಾದಂಗೊ..

  3. ಕತೆ ಭಾರೀ ಲಾಯ್ಕ ಆಯಿದು.

  4. ಏ ಡೈಮಂಡು ಭಾವ,
    ಆನು ಗುಟ್ಟಿಲ್ಲಿ ಹೇಳಿದ ವಿಷಯವ ನಿಂಗ ಬೈಲಿಂಗೆ ಹೇಳಿ ಇಡೀ ಲೋಕಕ್ಕೆ ಗೊಂತಪ್ಪಾಂಗೆ ಮಾಡಿದಿರಿ..
    ಎಲ್ಲ ಎನ್ನ ಹಣೆ ಬರಹ ಭಾವ. 🙁
    ನಿಂಗೊ ಬೈಲಿಲ್ಲಿ ಶುದ್ದಿ ಹೇಳಿದ್ದು ಒಂದು ಲೆಕ್ಕಲ್ಲಿ ಒಳ್ಳೆದೇ ಆತು. ನಮ್ಮ ಮಾಣಿಯಂಗ ಇನ್ನು ಮುಂದೆ ಜಾಗ್ರತೆ ಮಾಡಿಗೊಂಗು..

    1. ಸಾರ ಇಲ್ಲೆ ಕೆಪ್ಪಣ್ಣೋ…
      ಹಳೆ ನೀರು ಹೋದಲ್ಲಿ ಹೊಸ ನೀರು ಬಕ್ಕು.. 😉

      ನಮ್ಮ ಬೈಲಿಲ್ಲಿ ಹುಡ್ಕಿರೆ ಸಮಾನ ದುಃಖಿಗೊ ಸಿಕ್ಕುಗು ಸುಮಾರು… 😉
      ಹೇ°.. ?

      1. ಏ ಕೆಪ್ಪಣ್ಣೋ, ನಿನಗ ಬೇಜಾರತೋ…. ಬೇಜಾರು ಮಾಡೆಡ… ನಮ್ಮವು ಇಂತ ತಪ್ಪು ಮಾಡದ್ದೇ ಇರಳಿ ಹೇಳ್ತ ಉದ್ದೇಶಂದ ಬೈಲಿಲ್ಲಿ ಹೇಳಿದೆ.. ಕ್ಷಮೆ ಇರಲಿ…:(

  5. ತಿಂಗಳು ಮದಲು ಈ ಕತೆ ಬರದು ಸ್ಪರ್ದೆಗೆ ಕಳುಗುತಿದ್ದರೆ ಗೋಪಾಲಣ್ಣಂಗೆ ಪ್ರೈಸು ಸಿಕ್ಕುದು ಸಂಶಯ ಕಾಣುತ್ತು ಎಂತ..?
    {ಸೂಚನೆ: ‘ಕಲ್ಪನ’ ಹೇಳ್ತ ಹೆಸರಿನ ಕೂಸು ಅದೇ ಆಗಿರ ಆತೊ}…ಸರಿ ನಾವು ಬೇಕಾರೆ ‘ಸುಂದರಿ’ ಹೇದು ಮಡಿಕ್ಕೊಂಬ ಏ°
    ಭಾವಯ್ಯ ಕತೆ ಪಷ್ಟಾಯಿದು.!!!

    1. ಸರಿ ನಿಂಗೊ ಹೇಳಿದ್ದದು. ವಿವಿಸ್ಪರ್ಧೆಲಿ ವಿಷಯ -ಸಾಮಾಜಿಕ ಸಾಮರಸ್ಯ ಹೇಳಿ ಕೊಟ್ಟವು! ಭಗ್ನಪ್ರೇಮ,ಒಡೆದ ಗೆಳೆತನ ಬಗ್ಗೆ ಆದರೆ ಡೈಮಂಡು ಭಾವ ಇದರ ಬರೆತ್ತಿತ್ತವು! ಡೈಮಂಡು ಭಾವಂಗೆ ಪ್ರೈಸು ಇನ್ನು ಯಾವಾಗಲಾದರೂ ಬಕ್ಕು. ನಮ್ಮ ಅಭಿಮಾನದ ಬಹುಮಾನ ಈಗಲೇ ಸಿಕ್ಕಿತ್ತು. ಅಭಿನಂದನೆಗೊ.

      1. ಅಯ್ಯೋ ಗೋಪಾಲಣ್ಣ ನಿಂಗಳ ಕತೆಗೆ ಎನ್ನ ಕತೆಯ ಹೋಲುಸಲೆ ಎಡಿಗೋ… ನಿಂಗಳ ಕತೆ ಭಾರಿ ಲಾಯ್ಕಾ ಆಯಿದು… ನವಗೆ ಬಹುಮಾನ ಬೇಡ ನಿಂಗಳ ಹಾಂಗಿಪ್ಪ ಹೆರಿಯರ ಆಶೀರ್ವಾದ ಸಾಕು 🙂

    2. ಮಾವ° ಒಪ್ಪ ಕಂಡು ಕೊಶಿ ಆತು…
      ಸುಂದರಿ ಹೇಳಿ ಮಡಕ್ಕೊಂಬಲೆ ನಮ್ಮದು ಯಾವುದೇ ಅಭ್ಯಂತರ ಇಲ್ಲೆ…;)

  6. ಮಾಣಿಯಂಗ ಕೆಲವು ‘ಎಡವಟ್ಟು’ ಮಾಡಿ ಗೊಳ್ತವು.. ಕೂಸುಗ ಎದ್ದಿಕ್ಕಿ ಹೋವ್ತವು.. ಸ್ನೇಹ, ಪ್ರೀತಿಗೆ ತಿರುಗಿದರೆ ಅಪ್ಪದೇ ಇದು.. ಒಪ್ಪಿರೆ ಆತು ಇಲ್ಲದ್ರೆ.. ಅತ್ಲಾಗಿ ಪ್ರೀತಿಯೂ ಇಲ್ಲೆ, ಇತ್ಲಾಗಿ ಸ್ನೇಹವೂ ಇಲ್ಲೆ..! ಮಾಣಿಗೆ ವರಕ್ಕೂ ಇಲ್ಲೆ.. 🙁

    1. ಏ ಈಚ ಭಾವ..
      ಎಡವಟ್ಟು ಮಾಡಿದ್ದರೆ ತಿದ್ದುಲೆ ’ಅದಕ್ಕೆ’ ಅವಕಾಶ ಇತ್ತಿದನ್ನೆ…
      ~
      ಈಚ ಭಾವಂಗೂ ಹೀಂಗಿಪ್ಪ ಅನುಭವ ಆದಾಂಗಿದ್ದು….ವರಕ್ಕು ಸರಿ ಬತ್ತಿಲ್ಲೆಯೋ ನಿಂಗೊಗೆ? 🙂

    2. ಹೋ ಈಚ ಭಾವ ಭಾರಿ ಅಪರೂಪದ ಜೆನ… ಒಪ್ಪಕ್ಕೆ ಧನ್ಯವಾದಂಗೊ…
      ನಮ್ಮ ಮಾಣಿಯಂಗ ಆರೂ ಎಡವಟ್ಟು ಮಾಡಿಗೊಂಬಲಾಗ.. ಎಲ್ಲರಿಂಗೂ ಲಾಯ್ ವರಕ್ಕು ಬರೆಕ್ಕು ಹೇಳ್ತದೆ ಹಾರೈಕೆ…

  7. ಎಲ್ಲಿಯೋ ಎಡವಟ್ಟಾದ ಸಂಗತಿಯ ಡೈಮಂಡ್ ನಿರೂಪಣೆ ಮಾಡಿದ್ದು ಲಾಯಿಕ ಆಯಿದು.
    ಕೆಪ್ಪಣ್ಣಂಗೆ ನಮ್ಮದೂ ಸಹಾನುಭೂತಿ ಇದ್ದು.

    1. ಅಪ್ಪಚ್ಚೀ ಕೊಶಿ ಆತು…
      ಧನ್ಯವಾದಂಗೊ

  8. ಎಂತದೇ ಆಗಲಿ, ಡೈಮಂಡು ಭಾವನ ಕಾವ್ಯದ ಕಲ್ಪನೆ ಅದ್ಭುತವೇ ಸರಿ. ನಾವೂ ಒಪ್ಪಿತ್ತು ಭಾವಾ

      1. ಏ ಬೋದಾಳ
        ಅಲ್ಲಾ ಆನು ಬೇಜಾರಿಲ್ಲಿಪ್ಪಗ ನಿನಗೆ ಎನ್ನ ಲಾಲಿ ಮಾಡೆಕ್ಕು ಹೇಳಿ ತೋರ್ತನ್ನೆ 🙁

    1. ಶೇಪು ಭಾವ… ಧನ್ಯವಾದ…

      ಅದಾ ಬೋದಾಳಂಗೆ ಕಾವ್ಯನ ನೆಂಪಾದ್ದು…:)

  9. ಛೇ..! ಹೀಂಗಪ್ಪಲಾವ್ತಿತ್ತಿಲ್ಲೆ. ಕಣ್ಣೀರೇ ಬಂತು ಭಾವ. ಬೈಲಿಲಿ ಒಬ್ಬಂಗೆ ಹೀಂಗಾತನ್ನೇಳಿ ಗುರಿಕ್ಕಾರತ್ರೆ ಹೇಳಿ ಮಾತಾಡಿಸಿ ಮುಗುಶುವೋ° ಹೇಳಿರೆ ಆ ಕಲ್ಪನ ಮೊಬೈಲೂ ಆಫ್ ಮಾಡಿದ್ದು, ಮೋರೆಪುಟವನ್ನೂ ಹರುದು ಹಾಕಿತ್ತು ಹೇಳಿದ್ದಿ!., ಅದ್ವೈತಕೇಟಭಾವನತ್ರೆ ಹೇಳಿ ಮಾತಾಡುಸುವೋ° ಹೇಳಿರೆ ಅದು ಕೆಪ್ಪಣ್ಣನ ಏಕಪಕ್ಷೀಯ ಭಾವನೆ ಅಸಿಂಧು ಆಗಿಹೋತು.

    ವಾಸ್ತವಿಕತೆಯ ಧಾಟಿಲಿ ನೈಜವೋ ಎಂಬಂತೆ ಕೆಪ್ಪಣ್ಣ ವೃತ್ತಾಂತ ಡೈಮಂಡು ಭಾವನ ಶೈಲಿಲಿ ಶುದ್ದಿ ಸೊಗಸಾಗಿ ಮೂಡಿ ಬಯಿಂದು ಹೇಳಿತ್ತು -‘ಚೆನ್ನೈವಾಣಿ’

    1. ಚೆನ್ನೈ ಭಾವ
      ಹೀಂಗೆ ಆಗಿ ಹೋತನ್ನೇ… 🙁

    2. ಭಾವ ಸಂತೋಷ ಆತು ನಿಂಗಳ ಒಪ್ಪವ ಕಂಡು…

  10. ಆ ಕೂಸಿಂಗೆ ಕೆಪ್ಪಣ್ಣನ ಮೇಲೆ ನಿಜವಾದ ಸ್ನೇಹ ಇದ್ದಿದ್ದರೆ, ಕೆಪ್ಪಣ್ಣ ಹಾಂಗೆ ಹೇಳಿದ° ಹೇಳಿ ಅವನತ್ರೆ ಜಗಳಕ್ಕೆ ನಿಲ್ಲೆಕಿತ್ತು. ಅವಂಗೆ ಸರೀ ಬಯ್ದು, ಇನ್ನೊಂದ ಹೀಂಗೆ ಹೇಳಿರೆ ಜಾಗ್ರತೆ ಹೇಳೆಕಿತ್ತು. ಎಂತಕೆ ನಿಂದಿದಿಲ್ಲೆ ಜಗಳಕ್ಕೆ?
    ಎಂತಕೆ ಹೇಳಿರೆ, ಅದಕ್ಕೆ ಕೆಪ್ಪಣ್ಣನ ಮೇಲಿದ್ದದು ನಂಬಿಕೆ ಅಲ್ಲ – ಬರೇ ಒಳ್ಳೆ ಅಭಿಪ್ರಾಯ.
    ನಂಬಿಕೆಯೇ ಬೇರೆ – ಒಳ್ಳೇ ಅಭಿಪ್ರಾಯವೇ ಬೇರೆ. 🙂

    ಅಭಿಪ್ರಾಯ ಯಾವಾಗ ಬೇಕಾದರೂ ಬದಲಕ್ಕು – ಒಳ್ಳೆ ಅಭಿಪ್ರಾಯಂದ ಕೆಟ್ಟದಕ್ಕೆ, ಕೆಟ್ಟ ಅಭಿಪ್ರಾಯಂದ ಒಳ್ಳೇದಕ್ಕೆ,
    ಆದರೆ ನಿಜವಾದ ನಂಬಿಕೆ ಬದಲಾವುತ್ತಿಲ್ಲೆ – ಒಬ್ಬ ವ್ಯಕ್ತಿಯ ಸರಿಯಾಗಿ ಅರ್ಥಮಾಡಿಗೊಂಡರೆ ಮಾತ್ರ ನಂಬಿಕೆ ಬೆಳಗಷ್ಟೆ.

    ಆ ವ್ಯಕ್ತಿಯ ಒಳ್ಳೆ ಗುಣಂಗ ಮಾತ್ರ ಗೊಂತಿದ್ದರೆ ಅಥವಾ ಕಣ್ಣಿಂಗೆ ಕಂಡರೆ ನಂಬಿಕೆ ಬೆಳವಲೆ ಸಾಧ್ಯವೇ ಇಲ್ಲೆ.
    ಅಷ್ಟಪ್ಪಗ ಬೆಳವದು – ಒಳ್ಳೆ ಅಭಿಪ್ರಾಯ ಮತ್ತೆ ಇವ° ‘ಒಳ್ಳೆಯವ°’ ಹೇಳುವ ಭಾವನೆ ಮಾತ್ರ.
    ಯಾವಾಗ ನಿಜ ಸಂಗತಿಯ ಸಣ್ಣ glimpse ಸಿಕ್ಕಿರೂ ಆರಾರು ಅವರ ಬಗ್ಗೆ ಲೊಟ್ಟೆ ಹೇಳಿರೂ ಆ ಭ್ರಮೆ ಉದುರಿ ಬೀಳ್ತು, ಸಂಬಂಧವೂ ಮುರಿತ್ತು.

    ಅಷ್ಟಪ್ಪಗ, “ಭ್ರಮೆಲಿ ಬಿದ್ದು ತಪ್ಪು ಮಾಡಿದೆ” ಹೇಳ್ತು ಅವರ ಮನಸ್ಸು – ಭ್ರಮನಿರಸನ ಆಗಿಯಪ್ಪಗ ಅವರಮೇಲೆ ಅವಕ್ಕೇ ಬಪ್ಪ ಕೋಪವ ಇನ್ನೊಬ್ಬರ ಮೇಲೆ ಆರೋಪ ಮಾಡಿ ಎದ್ದಿಕ್ಕಿ ಹೋವುತ್ತವು.

    ***

    ಹೀಂಗಿಪ್ಪ ಒಂದು ಕತೆ ನವಗೂ ಗೊಂತಿದ್ದು. 🙁
    ಒಂದು ರಜ್ಜ ರಜ್ಜ ಬದಲ್ಸಿರೆ ಬಾಕಿ ಎಲ್ಲ ಹೀಂಗೇ..
    ಇಲ್ಲೇ.. ಹತ್ತೆರೆಲೇ ಆದ್ದು. 🙁

    ಕೆಪ್ಪಣ್ಣನ ಕೇಸಿಲ್ಲೂ ಇದೇ ಆದ್ದು ಆದಿಕ್ಕು ಗ್ರೇಶುದು ಆನು.
    ಕೆಪ್ಪಣ್ಣ ಸರಿ ಇತ್ತಿದ್ದಾಂನ್ನೆ?,
    ಅವ° ಎಂತದೂ ಮುಚ್ಚಿ ಮಡಗಿದ್ದಾ°ಇಲ್ಲೆನ್ನೆ?
    ಹಾಂಗಾರೆ, “ಎಂಗಳ ಸ್ನೇಹಕ್ಕೆ ಆನೇ ಕೇಡಿ ಆದನೋ ಹೇಳಿ ಈಗ ಅನುಸುತ್ತಾ ಇದ್ದು…” ಹೇಳಿ ಬೇಜಾರು ಮಾಡೆಕಾದ ಅಗತ್ಯ ಇಲ್ಲೆ.
    ” ಒಂದು -ಎರಡು ತಿಂಗಳ ಅವಧಿಲಿ ಎಂಗೊ ಮಾತಾಡದ್ದ ವಿಷಯ ಇದ್ದಿರ. ಅಷ್ಟು ಆತ್ಮೀಯತೆ ಇತ್ತಿದ್ದು ಇಬ್ರಲ್ಲಿಯುದೇ.” – ಅಪ್ಪಲ್ಲದೋ?
    ಬಿಡಿ ಅಂಬಗ. ಕಲ್ಪನೆ ಏವತ್ತಾರು ಒಂದರಿ ವಾಪಸ್ ಬಕ್ಕು ಹೇಳುವ ಆಶೆಲಿ ಕೆಪ್ಪಣ್ಣ ಮತ್ಟೂ ಚೆಂದಕೆ ಬದ್ಕೆಕ್ಕು. 🙂
    ಅದಕ್ಕೆ “ಮಾಡಿದ್ದು ತಪ್ಪಾತು” ತೋರುವಾಗ, Sorry ಕೇಳುವ ಧೈರ್ಯ ಬಂದರೆ ಅದಾಗಿಯೇ ಬಕ್ಕು 🙂

    ***

    ಒಂದೊಪ್ಪಕ್ಕೆ ಮತ್ತೊಂದೊಪ್ಪ: ಎಂಥಾ ಅಪ್ರಿಯ ಸತ್ಯವೇ ಆದರೂ ನಂಬಿಕೆ ಇದ್ದರೆ ಸಂಬಂಧ ಮುರುದು ಬೀಳ.

    1. ಮಂಗಳೂರು ಮಾಣಿ,
      ನಿಂಗಳ ಮಾತು ಅಕ್ಷರಶಃ ಸತ್ಯ.. ಭಾರಿ ಚೆಂದಕೆ ವಿವರಿಸಿದ್ದಿರಿ…
      ಎನ್ನ ಜೀವನಲ್ಲಿ ಹೀಂಗಾತನ್ನೇ ಹೇಳಿ ನಾವು ಅದನ್ನೆ ಯೋಚಿಸಿಕೊಂಡು ಕೂಬಲೆ ಇಲ್ಲೆ…
      ಖಂಡಿತವಾಗಿಯೂ ಚೆಂದಕ್ಕೆ ಬದ್ಕುತ್ತೆ ಆನು… 🙂
      ಅದಾಗಿಯೇ ಬಂದರೆ ಸಂತೋಷ. ನಾವು ತಪ್ಪಿನ ತಿದ್ದಿಕೊಂಬಲೆ ರಡಿ ಇದ್ದು
      ಮತ್ತೊಂದೊಪ್ಪ ಪಷ್ಟಾಯಿದು.
      ~
      ಆದರೂ.. ನಿಂಗೊ ಭಾರಿ ಫೀಲಿಂಗಿಲ್ಲಿ ಬರದಾಂಗಿದ್ದು.. ನಿಂಗೊಗೂ ಹೀಂಗಿಪ್ಪ ಅನುಭವ ಆದಾಂಗೆ ಇದ್ದನ್ನೆ 🙂

      1. {ಖಂಡಿತವಾಗಿಯೂ ಚೆಂದಕ್ಕೆ ಬದ್ಕುತ್ತೆ ಆನು… } – ಇದು ಇದು ಇದು ಮಾತು ಹೇಳಿರೆ.
        {ನಿಂಗೊಗೂ ಹೀಂಗಿಪ್ಪ ಅನುಭವ ಆದಾಂಗೆ ಇದ್ದನ್ನೆ } – ಅದೇ ಇಲ್ಲೇ ಹತ್ತರೆ, ಹೀಂಗೇ ಎಂತದೋ ಒಂದು..
        ಬಿಡಿ,
        ಮಾಣಿ – ಕೂಸಿನ Psychological Maturity Level ಒಂದೇ ಇಲ್ಲದ್ದರೆ ಹೀಂಗೆಲ್ಲ್ಲಾ ಆವುತ್ತಪ್ಪ 🙁
        ಏವತ್ತಾರು ಸರಿ ಅಕ್ಕು..

        1. ಮಂಗ್ಳೂರು ಮಾಣಿ..
          ತುಂಬಾ ಕೊಶಿ ಆತು.. ನಿಂಗಳ ಒಪ್ಪವ ಕಂಡು ಭಾರಿ ಚೆಂದಕೆ ವಿವರಿಸಿದ್ದಿ.. ನಿಂಗಳ ವಿವರಣೆ ಸತ್ಯ.. ಆನುದೇ ಅದೇ ಮಾತಿನ ಕೆಪ್ಪಣ್ಣಂಗೆ ಹೇಳಿದ್ದೆ…

    1. ಹೋ ದೊಡ್ಡ ಭಾವ ಬಂದಿರೋ… ಸಂತೋಷ ಆತಿದಾ…

  11. ಕೆಪ್ಪಣ್ಣನ ಕಲ್ಪನೆಯ “ಕಲ್ಪನ”ನ ಕಥೆ ಓದುತ್ತವಂಗೆ ಆಸಕ್ತಿ ಹುಟ್ಟುಸುತ್ತದಂತೂ ನಿಜ. ಮೋರೆ ಪುಟಲ್ಲಿ ಕೆಲವೊಂದರಿ ಬೇರೆ ಜೆನರ ಮೋರೆ ತೋರುಸಿ ಮೂರ್ಖ ಮಾಡ್ತದು ಕೇಳಿದ್ದೆ. ಇದು ಬೇರೆ ರೀತಿಯ ಕಥೆ. ಕಥೆಯ ಕೊನೆ ಗ್ರೇಶದ್ದ ಹಾಂಗೆ ಮುಗಿತ್ತದು ಕಥೆಯ ವಿಶೇಷ. ವಜ್ರಾಂಗಿ ಭಾವಯ್ಯ, ಲಾಯಕಾತು ಕಥೆ, ಅಭಿನಂದನೆಗೊ. ಭಾವ ಹೇಳಿದ ಹಾಂಗೆ, ಕೂಸು ಸಿಕ್ಕೆಕಾರೆ ಬೆಂಗ್ಳೂರಿಂಗೆ ಸಣ್ಣ ಕೆಲಸಕ್ಕೆ ಹೋಯೆಕು ಹೇಳ್ತದು, ಬೇಜಾರಿನ ಸಂಗತಿ ಆದರೂ ಸತ್ಯ.

    1. ಬೊಳುಂಬು ಮಾವ° ಚೆಂದದ ಒಪ್ಪ… ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×