ಬಂತೈ ಬಂತೈ ಬಣ್ಣದ ಮೆಟ್ರೋ..

September 15, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಾಂಗಾರೆ ಹನ್ನೆರಡನೆ ಶತಮಾನಲ್ಲೇ ನಮ್ಮಲ್ಲಿ ರೈಲಿತ್ತೋ?? ಇಲ್ಲದ್ದರೆ ಜಗತ್ಪ್ರಸಿದ್ಧ ಕೂಡಲಸಂಗಮದ  ಅನುಭವಮಂಟಪಲ್ಲಿ ನಿಂದು ಕರ್ಮಯೋಗಿ ಬಸವಣ್ಣ ಇದಿರ “ಹಳಿ”ಯಲು ಬೇಡ ಹೇಳಿದ್ದದು ಸತ್ಯ ಅಲ್ಲದೋ?
ಒಪ್ಪಣ್ಣನ “ಬಲ್ಲೆ ಬೆಳೆಯದ್ದ ಹಾಂಗೆ ಬೋಳಾದ ಬಳ್ಳಾರಿ”ಯಾ ಓದಿದ ಗಣಿಧಣಿಗೋ “ಅದಿರ”ಹಳಿಯಲು ಬೇಡ ಹೇಳಿದ್ದೂ ಅಷ್ಟೇ ಸತ್ಯಡ !

ಅಂದು ಬಸವಣ್ಣ ಬಿಟ್ಟದು ರೈಲು ಅಲ್ಲದ್ದರೂ ಮತ್ತಾಣ ಶತಮಾನಂಗಳಲ್ಲಿ ರೈಲು ಬಿಡುವವು  ಬಾಳಿ ಬದುಕ್ಕಿದವು.
ನವಗೆ ಸ್ವಾತಂತ್ರ್ಯ ಸಿಕ್ಕಿದ ಮೇಲಂತೂ ಜೆನ ರೈಲು ಬಿಡೊದನ್ನೇ ವೃತ್ತಿ ಪ್ರವೃತ್ತಿ  ಆಗಿ ಬೆಳೆಸಿದವು.ನಾವೂ ಅವರ ಮುಂದುವರಿಸಿದೆಯ°.
ಈ ರೈಲು ಬಿಡೋದು ಹೇಳಿರೆ ಎಂತದು? ಹೇಳಿ ಹಳ್ಳಿಲಿಪ್ಪ ಒಪ್ಪತ್ತೆಯ  ಮಕ್ಕೋ ಕೇಳುಗು, ಪೇಟೆಲಿಪ್ಪ ಶುಭತ್ತೆಯ ಮಕ್ಕೋ ಗುಟ್ಟು ಗೊಂತಿಪ್ಪ ಕಾರಣ ನೆಗೆ ಮಾಡುಗು.
ಘಟ್ಟ ಹತ್ತಿದ ಕೆಲವು ಜೆನ ರೈಲು ಹತ್ತಿಸೊದು ಹೇಳುಗು, ಸಿನೆಮಾಕ್ಕೆ ಹತ್ತರಾಣವು (ಶುಕ್ರವಾರ ಉದಿಯಪ್ಪಗ ಟಾಕೀಸಿನ ಬಾಗಿಲಿಲಿ ನಿಂಬವು) ರೀಲು ಬಿಡೋದು ಹೇಳಿಯೂ ಹೇಳುಗು.
ಶಬ್ದ ಬೇರೆ ಆದರೂ ಅರ್ಥ ಒಂದೇ.

ಸುಲಾಭಲ್ಲಿ  ಹೇಳುತ್ತರೆ ಮನ್ನೆ ಬೈಲಿಲಿ ಒಪ್ಪಣ್ಣ ಎನ್ನ ಪರಿಚಯ ಮಾಡಿದ ಅಲ್ಲದೋ? ಅದುವೇ ರೈಲು ಬಿಡೊದು ಹೇಳಿರೆ .
ಹತ್ತು ವರುಷ ಮದಲು ಎಂಗೊ ಹೊಸತ್ತಾಗಿ ಬೆಂಗಳೂರಿನ್ಗೆ ಬಪ್ಪ ಹೊತ್ತಿಂಗೆ ಈ ಮೆಟ್ರೋ ಹೇಳ್ತದು ಹಳತ್ತಾಗಿತ್ತು, ಸುಮಾರು ಲೀಡರುಗೋ ರೈಲು ಬಿಟ್ಟೂ ಬಿಟ್ಟೂ..
ನಾಕು ವರುಷ ಮಾಡಲು ಮನಮೋಹನಜ್ಜ ದಿಲ್ಲಿಂದ ಬಂದು ರೀಲು ಕತ್ತರಿಸಿ ಬೆಡಿ ಹೊಟ್ಟುಸಿದ ಬೆನ್ನಿಂಗೆ ಶುರು ಆದ್ದದು
ಈ ಕ್ಷಣದವರೆಗೂ ನಿಂದಿದಿಲ್ಲೆ,ಆಟಿಯ ಮಳೆಯ ಹಾಂಗೆ.

ಪೇಟೆಯ ಉದ್ದಕ್ಕೂ ಗರ್ಪಿದವೇ ಗರ್ಪಿದವು.
ಅಗಲಕ್ಕೂ ತೋಡಿದವೇ ತೋಡಿದವು.
ಪೇಟೆಯ ಸತ್ಪ್ರಜೆ ಸತ್ತ ಪ್ರಜೆ ಅಪ್ಪೊದು ಮಾಂತ್ರ ಬಾಕಿ ಈಗ.

ಮೆಟ್ರೋ ಹತ್ತಲೆ ಶುಬತ್ತೆ ತಲೆ ಸರಿ ಮಾಡಿಗೊಂಬದೋ?

ಆನು ಸಣ್ಣ ಮಾಣಿ ಆಗಿ ಕೋಣಲ್ಲಿ ತಿರುಗೊಗಳೇ  ಅಪ್ಪ ಬುದ್ಧಿವಾದ ಹೇಳುಗು – ಮಗನೆ ಅಡ್ಡದಾರಿ ಹಿಡಿಯೆದ ಜೀವನಲ್ಲಿ ,ಉದ್ಧಾರ ಆಗೇ ಹೇಳಿ.
ತಲೆ ಬೆಳಿ ಅಪ್ಪ ಮದಲು ಬೋಳಾವುತ್ತಾ ಇದ್ದು ಆದರೆ ಈ ಪ್ರಾಯದ ವರೆಗೂ ಅಪ್ಪ ಹೇಳಿದ್ದು ವೇದವಾಕ್ಯ ಆಗಿತ್ತು ಎನಗೆ.
ಆದರೆ ಸದ್ಯದ ಪರಿಸ್ಥಿತಿಲಿ ಎನಗೆ ಅಡ್ದದಾರಿಯೇ ಗೆತಿ!! ಮನೆಂದ ಆಫೀಸಿಂಗೆ,ಆಫೀಸಿಂದ ಮನಗೆ , ಅಲ್ಲದ್ದರೆ ಹೆರಟವ ಹೆರಟಲ್ಲೇ ಬಾಕಿ !!
ಕಾದವು ಕಾದು ಕೆಂಪಾದಲ್ಲೇ ಬಾಕಿ,ಈ ಟ್ರಾಫಿಕ್ಕು ಜೇಮಿಲಿ.ಎನ್ನ ಮನೆ ಎಷ್ಟು ದೂರ ಹೇಳಿ ಮನ್ನೆ ಒಪ್ಪಣ್ಣ ಕೇಳಿದ°,
ಹೇಳಿದೆ ದೂರವ ಮೈಲಿಲಿ ಅಳವ ಕಾಲ ಹೊಯಿದು ಭಾವ ಹೊತ್ತಿಲಿ ಅಳೆಯೆಕ್ಕೂ ಹೇಳಿ.
ದೂರಲ್ಲಿ ಅಳೆತ್ತರೆ  ಬೆಂಗಳೂರಿನ್ಗೆ ಹತ್ತರೆ   ಎನ್ನ ಮನೆ,ಹೊತ್ತಿಲಿ ಅಳೆತ್ತರೆ ಮೈಸೂರಿಂಗೇ ಹತ್ತರೆ ಇದ!!

ಒಂದೊಂದರಿ  ರಶ್ಶು ಹೆಚ್ಚಾಗಿ ತಲೆಬೆಶಿ ಅಪ್ಪಗ ಭೀಮಸೇನಜ್ಜನ ದಾಸರ ಪದ ನೆಮ್ಪಾವುತ್ತು..
ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ..ಹೇಳಿ

ಪೇಪರಿನ ವಿಶ್ವೆಶ್ವರಮಾವ ಎಡ್ಜಸ್ಟ್ ಮಾಡೆಡಿ ಹೇಳಿ ಬೆಂಗಳೂರಿಲಿಪ್ಪ ಹಂಪುಗಳ ಮೇಲೆ ಬಣ್ಣಬಣ್ಣದ ಕಾಕದ ಅಂಟುಸುಲೇ ವೆವಸ್ತೆ ಮಾಡಿದವು.
ಹಂಪುಗಳ ತೆಗವಲೆ ಬಜೆಟ್ಟು ಮಂಜೂರೂ ಮಾಡಿದವು ಮಂತ್ರಿ ಆಚಾರ್ಯಣ್ಣ ,ಇದೂ ಒಂದು ರೈಲೋ ಹೇಳಿ ಸಣ್ಣ ಸಂಶಯ ಎನಗೆ.
ಎಂತಗೆ ಹೇಳಿದರೆ ಹಂಪುಗೊ ಹಾಂಗೇ ಇದ್ದು ಪೈಸೆ ಮಾಂತ್ರ ಮುಗಾತು ಹೇಳಿ ಶುದ್ದಿ ಬತ್ತಾ ಇದ್ದು. ಮಣ್ಣು ಹಾಕಲಿ ಅಲ್ಲಲ್ಲ ಮಣ್ಣು ತೆಗೆಯಲಿ ಹಂಪಿಂದ,ಈಗ  ಹೊಂಡoಗೊಕ್ಕೆ  ಅಂಟುಸುಲಿಪ್ಪ  ಬಣ್ಣಕಾಕದ ತಯಾರಾವುತ್ತಾ ಇದ್ದದ ಪೇಪರಿನೋರ ಆಫೀಸಿಲಿ.
ಹೊಂಡoಗಳ ಸಂಕೆ ಇಲ್ಲ್ಯಾಣ  ಜೆನಸಂಕೆಂದಲೂ ಹೆಚ್ಚಿಪ್ಪ ಕಾರಣ ಪ್ರಿಂಟಿಂಗ್  ಕೆಲಸ ರಜಾ ಹೆಚ್ಚಡ !!

ಚಂದ್ರಲೋಕಲ್ಲಿ ಲೇಔಟಿನ ಕೆಲಸ ಶುರುಮಾಡಿದ್ದವಡ ನಮ್ಮ ದೇಶದವು.ಅಲ್ಲಿ ಹೋಗಿ ಅಪ್ಪಗ ನವಗೆ ದೊಡ್ಡ ಕಷ್ಟ ಆಗ,ಮಾರ್ಗ ಇಲ್ಲದ್ದರೂ ಗಾಡಿ ಓಡಿಸಿ ಅಭ್ಯಾಸ ಇದ್ದನ್ನೇ..

ಮೆಟ್ರೋ ಉದ್ಘಾಟನೆಗೆ ಪದ ಕಟ್ಟುತ್ತಾ ಇತ್ತಿದ್ದವು ಮಾಪಣ್ಣ.
ಕದ್ದು ಕೇಳಿದ ಆನು ಗೊಂತಿಪ್ಪಷ್ಟು ಗೊಂತಿಲ್ಲದ್ದವಕ್ಕೆ ಗುಟ್ಟಿಲಿ ಹೇಳುತ್ತೆ. ರಟ್ಟು ಮಾಡಿಕ್ಕೆಡಿ. ಮಾಡಿದರೂ, ಗೊಂತುಮಾಡಿದ್ದದು ಆರು ಹೇಳಿಹೇಳಿಕ್ಕೆಡಿ:

ಬೆಂಗಳೂರಿನ ನೆಡುಕೆ  ಬತ್ತಡಾ ಮೆಟ್ರೋ
ಹೇಳಿ ಭಾಷಣಲ್ಲಿದೆ ರೈಲುಗಳ ಬಿಟ್ರೋ
ಕಳುದತ್ತು ವರುಶಂಗೋ ಜೆನ  ತಲೆ ಕೆಟ್ರೋ
ಮಂತ್ರಿಗೋ ಮಾಂತ್ರ ನೆಗೆನೆಗೆಯ ಪೋಸ್ ಕೊಟ್ರೋ


ಹೊಂಡoಗೊ ದಿನ್ನೆಗೋ ತುಂಬಿ ಮಾರ್ಗಲ್ಲಿ

ಹೊಗಿಬಪ್ಪೊದು ಭಾವ ಸಂದಿಗೊಂದಿಲ್ಲಿ
ಮನ್ನೆ ನಿಂದವು ಮುಖ್ಯಮಂತ್ರಿ ಹರುಷಲ್ಲಿ
ಹಳಿ ಇಲ್ಲದಾ ರೈಲು ಎಂಜಿ ರೋಡಿಲ್ಲಿ.


ಖಂಡಿತಾ ಬೇಕು ಬೆಳವಣಿಗೆಗಳ ಯಂತ್ರ

ಟ್ರಾಫಿಕಿಲಿ ಬೊಡುದ ಜೆನ ಹೇಳುತ್ತ ಮಂತ್ರ
ವಿಜ್ನಾನಿಗೋ ಹೊಸೆದವದ ಹೊಸ ತಂತ್ರ
ರಾಜಕಾರಣಿಗಳದ್ದು ಮುಗಿಯ ಷಡ್ಯಂತ್ರ.

ಬೆಂಗಳೂರಿನ ಮೆಟ್ರೋ ಶುರು ಆದ ಮೇಲೆ
ಕುಂಬಳೆ೦ದ ವಿಟ್ಲಕ್ಕೆ ರೈಲಿನ ಲೀಲೆ
ಜೆ೦ಬ್ರಕ್ಕೆ ಹೋಪಲೆ ರಜ ಸುಲಭ  ಅಕ್ಕೋ
ಅಡಕೆ ಕೊಯಿವಲೆ ಬಟ್ಯ ಹೊತ್ತಿಂಗೆ ಬಕ್ಕೋ.

ಬಂತೈ ಬಂತೈ ಬಣ್ಣದ ಮೆಟ್ರೋ.., 5.0 out of 10 based on 6 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಮೆಟ್ರೋ ರೈಲ್ ಬಗ್ಗೆ ಮಂತ್ರಿಗೊ ಸುಮಾರು ರೈಲ್ ಬಿಟ್ಟಿದವು. ಆದರೆ ಮುಳಿಯ ರಘು ರೈಲ್ ಬಿಡದ್ದೆ, ಲಘು ಹಾಸ್ಯಲ್ಲಿ ಬರದ್ದು ಕೊಶೀ ಆತು. ಕವನಂಗೊ ಪೂರಕವಾಗಿ ಲೇಖನಕ್ಕೆ ಶೋಭೆ ಕೊಟ್ಟತ್ತು.
  ಬೆಂಗಳೂರಿಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ. ದೂರವ ಕಿಲೋಮೀಟರ್ ಲ್ಲಿ ಅಳವದರ ಬದಲಿಂಗೆ ಸಮಯಲ್ಲಿ ಅಳೆಕು ಹೇಳುವದು ಸತ್ಯ. ಈ ಮೆಟ್ರೋ ಬಂದ ಮತ್ತಾದರೂ ಸುಧಾರುಸುಗು ಹೇಳು ಜಾನ್ಸುವೊ. ಆದರೆ ಅದಕ್ಕಾಗಿಯೇ 5000 ಕ್ಕಿಂರಲೂ ಹೆಚ್ಚು ಮರಂಗಳ ಕಡುದ್ದವು ಹೇಳುವಾಗ ಸಂಕಟವೂ ಆವುತ್ತು. ಒಂದೊಂದು ಮರವೂ ದೊಡ್ಡ ಆಯೆಕ್ಕಾರೆ ಎಶ್ಟು ವರ್ಷ ಬೇಕು?. ಮರಂಗಳಿಂದ ಸಿಕ್ಕುವ ಆಮ್ಲಜನಕದ ಬದಲಿಂಗೆ, ಮುಂದೆ ಒಂದು ದಿನ ಮೋರೆಗೆ ಸಿಲಿಂಡರ್ ಕಟ್ಟಿಂಡು ತಿರುಗೆಕ್ಕಾದ ಸ್ಥಿತಿ ಬಕ್ಕೋ ಕಾಣುತ್ತು. ಅಭಿವೃದ್ಧಿ ಹೇಳಿಂಡು ನಾವು ಹಿಂದಂಗೆ ಹೋವುತ್ತ ಇದ್ದಾ?

  [Reply]

  VA:F [1.9.22_1171]
  Rating: +1 (from 1 vote)
 2. ನೆಗೆಗಾರ°

  ಮುಳಿಯಬಾವಾ…
  ಪದ ಪಷ್ಟಾಯಿದು.
  ಬಟ್ಯನ ಕತೆ ಹೇಳಿ ಸುಕ ಇಲ್ಲೆ, ಈಗಳೇ ರೈಲು ಬಿಡ್ತು. ಮೆಟ್ರೋ ಬಂದ ಮೇಗೆ ಕೈಗೆ ಹಿಡಿವಲೆ ಸಿಕ್ಕ.

  ಅದಪ್ಪು, ಪಾಪ! ಬೆಂಗುಳೂರಿಲಿ ಅಡಕ್ಕೆ ತೆಗವಲೆ ಎಂತಮಾಡುಗಪ್ಪಾ? :-(

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಬೆ೦ಗ್ಳೂರಿಲ್ಲಿ ಅಡಕ್ಕೆ ತೆಗವಲೆ ಅ೦ಗಡಿಗೆ ಹೋಗಿ ತೆಕ್ಕೊ೦ಬದಾಡ.. 😀

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಪವನಜಮಾವಅಕ್ಷರ°ಚೂರಿಬೈಲು ದೀಪಕ್ಕಚುಬ್ಬಣ್ಣಅನುಶ್ರೀ ಬಂಡಾಡಿಪುಟ್ಟಬಾವ°ದೇವಸ್ಯ ಮಾಣಿಅಡ್ಕತ್ತಿಮಾರುಮಾವ°ನೆಗೆಗಾರ°ಮಾಲಕ್ಕ°ಅಜ್ಜಕಾನ ಭಾವಡಾಗುಟ್ರಕ್ಕ°ದೊಡ್ಡಭಾವಶ್ರೀಅಕ್ಕ°ವೆಂಕಟ್ ಕೋಟೂರುವೇಣೂರಣ್ಣಕಳಾಯಿ ಗೀತತ್ತೆರಾಜಣ್ಣಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ