ಕಾಲಾಯ ತಸ್ಮೈ ನಮಃ..

August 19, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಂಗಳೂರು ಬಸ್ಸಿಲಿ ಸೀಟು ಬೇಕಾದಷ್ಟು ಇರುತ್ತು.ಈಗ ಬುಕ್ಕಿಂಗಿನ ಯಾವ ರಗಳೆಯೂ ಇಲ್ಲೆ.
ಕಾಸರಗೋಡಿಂದ ಹೆರಡುತ್ತ ಬಸ್ಸು ಎಲ್ಲಿ ಬೇಕಾರೂ ನಿಲ್ಲುಸುತ್ತವು, ಕೈ ಅಡ್ಡ ತೋರುಸಿ ಮೇಲೆ ತೋರುಸಿರೆ ಸಾಕು!
ಸಿ.ಇ.ಟಿ.ಪರೀಕ್ಷೆ ಮಂಗಳೂರಿಲಿ ಆದ ಕಾರಣ ಸೀಮೆಯ ಮಕ್ಕ ಎಲ್ಲಾ ಅಪ್ಪಂದಿರೊಟ್ಟಿಂಗೆ  ಮಂಗ್ಳೂರು ಬಸ್ಸು ಹತ್ತುತ್ತವು. ಇನ್ನು ಕಲ್ತು ಆದ ಜವ್ವನಿಗರೆಲ್ಲಾ ಉದ್ಯೋಗ ಹೇಳಿಗೊಂಡು ಬೆಂಗಳೂರು ಸೇರಿದ್ದವು.
ಒಟ್ಟಿನ್ಗೆ ಪ್ರಾಯದ ಅಬ್ಬೆ ಅಪ್ಪಂದಿರೂ ಕೂಡ. ಇನ್ನು ಬೆಂಗಳೂರು ಬಸ್ಸು ಹತ್ತುವವು ಹೇಳಿ ಇದ್ದರೆ ಭಟ್ಟಕ್ಕ ಮಾತ್ರ.
ಅದೂ ಅನುಪ್ಪತ್ಯ ಏನಾರು ಇದ್ದರೆ. ಇನ್ನು ಮುದುಕ್ಕರ ಕಾಲ ಕಳೆದರೆ ಬೆಂಗ್ಲೂರಿಲಿಪ್ಪವು ಫೋನ್ ಮಾಡಿ ಭಟ್ಟಮಾವಾ, ನಿಂಗಳ ಒಪ್ಪಿಗೆ ಬೇಕು,ಈ ಸರ್ತಿ ಕಾರ್ಯಕ್ರಮ ಇಲ್ಲೇ ಆರನ್ನಾರು ಬಪ್ಪಲೆ ಹೇಳಿ ನಿವ್ರತ್ತಿ ಮಾಡುತ್ತೆಯ ಆಗದಾ ಹೇಳುವ ಕಾಲ.

ಎಂತಗೆ ಹೀಂಗೆ ? ಊರಿಲಿಪ್ಪ ಖಂಡ್ಲಿಗಟ್ಲೆ  ಅಡಕ್ಕೆ ಬೆಳೆವ, ಎಕ್ರೆಗಟ್ಲೆ ತೋಟಂಗಳ ರಬ್ಬರು ಬೆಳೆಸುವ ಕೊಚ್ಚಿ ನಸ್ರಾಣಿಗೊಕ್ಕೆ ಮಾರಿ ಕೈಮುಗುದು  ಪೇಟೆಲಿ ಕೋಣದಷ್ಟು ಸಣ್ಣ  ತುಂಡುಜಾಗೆಲಿ ಮನೆಕಟ್ಟಿ ಅಥವಾ ಮೇಲೆಯೂ ನಮ್ಮದಲ್ಲ, ಕೆಳವೂ ನಮ್ಮದಲ್ಲ ಹೇಳ್ತಾಂಗಿಪ್ಪ ತ್ರಿಶಂಕುಸ್ವರ್ಗಲ್ಲಿ ಯಾವ ಸುಖ ಕಾಂಬಲೆ ಈ ವಲಸೆ ಹೋಗುವಿಕೆ?
ಹಳ್ಳಿಗಳೇ ಖಾಲಿ ಆಗಿ ಪೇಟೆಗೋ ತುಂಬೆಕ್ಕಾದ  ಅನಿವಾರ್ಯತೆ ನಿಜವಾಗಿಯೂ ಇದ್ದೋ?
ಅಲ್ಲ ದೂರದ ಗುಡ್ಡೆ ನೊಂಪಾಗಿ ಕಾಂಬೊದೋ?
ಅಜ್ಜಂದಿರ ಕಾಲಲ್ಲಿ ತರವಾಡಿನ ಮನೆಗಳಲ್ಲಿದ್ದ ಗೌಜಿ, ವೈಭವ ಈಗ ಚರಿತ್ರೆ ಅಪ್ಪಲೆ ಎಂತ ಕಾರಣ? ಪ್ರತಿವರುಷ ನಡೆತ್ತಾ ಇದ್ದ ಶಿವಪೂಜೆ, ತ್ರಿಕಾಲಪೂಜೆ ಎಲ್ಲಾ ಎಂತಗೆ ನಮ್ಮಂದ ದೂರ ಆವುತ್ತಾ ಇದ್ದು?
ಅರಿಗ್ಗೆ ಜಪದ ಶುದ್ದಿ ಬಿಡುವ, ಕೈನೀರಿನ ಮಂತ್ರವೂ ಮರವ ಕಾಲ!!

ಎಲ್ಲದಕ್ಕೂ ಆಳುಗಳನ್ನೇ ನಂಬಿದ್ದದು ಹೆಚ್ಚಾಗಿಯೋ?
ಕೆಲಸದವು ಇಲ್ಲದ್ದೆ ಕೃಷಿ  ನಡೆಯದೋ? ವರುಷ ಹೋದಾಂಗೆ ಅಡಕ್ಕೆಬೆಳೆ ಕಾಡುಕ್ರಷಿ ಆಗಿ ಹೋಕೋ?
ಮದಲು ಕೈಗೊಂದು ಕಾಲಿನ್ಗೊಂದು ಹೇಳಿ ಇದ್ದ ಆಳುಗೋ,ಅವರ ಸಂಬಂಧಿಕರಲ್ಲಿ ಲೇಸ್  ಇಲ್ಲದ್ದ ದಿನ ರಜೆ ಮಾಡಿಗೊಂಡಿತ್ತಿದ್ದವಿಲ್ಲೆ.ಅದೂ ಮನೇಲಿ ಜೆಂಬ್ರ ಇದ್ದರೆ ಚೀಯನೊದ ಆಸೆಲಿಯೋ, ಮುಂಡು ಅಂಗಿ ಅರುವೆಯ ಆಸೆಲಿಯೋ ಅಲ್ಲ ಪ್ರೀತಿಲಿಯೋ  ವಾರಂದ ಮಾಡಲೇ ಜಾಲು ಗುದ್ದುಲೆ, ಸಗಣ ಬಳುಗುಲೇ, ಚೆಪ್ಪರ ಕಟ್ಟುಲೆ, ಅಟ್ಟಲ್ಲಿಪ್ಪ  ಕೊಪ್ಪರಿಗೆ, ಕಟಾರ  ಪಾತ್ರಂಗಳ ಕೆಳ ತೆಗದು ಉಮೇದಿಲಿ ಹುಳಿ ಹಾಕಿ ತೊಳವಲೆ ಬಂದುಗೊಂಡಿದ್ದ ಕಿಟ್ನ, ಮಾಂಕು, ಐತಪ್ಪನ್ಗ ಎಲ್ಲಿ ಹೋದವು?
ಉದ್ಯೋಗಕಾರ್ಡು ಆದ ಮೇಲೆ ಪಂಚಾಯ್ತಿ ಕೆಲಸವೇ ಸುಲಭ ಹೇಳಿ ಕಂಡು ಜಾಲಿನ್ಗೆ ಇಳಿಯದ್ದೆ ಇಪ್ಪೊದೋ? ಪಂಚಾಯ್ತಿ ಕೆಲಸ ಹೇಳಿರೆ ಊರು ಲಗಾಡಿ ತೆಗವಲೆ ಮಾಡಿದ ರಾಜಕೀಯ ಮಸಲತ್ತು ಅಲ್ಲದೋ?
ಅಲ್ಲಿಗೆ ಹೋಪ ಕೆಲಸದವು ದಿನಯಿಡಿ ಲೊಟ್ಟೆ ಪಂಚಾಯ್ತಿ ಹೊಡದಿಕ್ಕಿ ಬಪ್ಪೊದಲ್ಲದೋ? ಊರಿಂಗೆ ನಯಾಪೈಸೆ ಪ್ರಯೋಜನ ಇಲ್ಲದ್ದ ವಹಿವಾಟಲ್ಲದೋ ಈ ಉದ್ಯೋಗಖಾತ್ರಿ ಹೇಳುತ್ತ ಯೋಜನೆಗೋ?
ಅಲ್ಲಿ ಕೆಲಸಂಗೊಕ್ಕೆ ಕೊರತೆ ಇಲ್ಲೆಡ.
ಇಂದು ಇಲ್ಲಿ ಗರ್ಪಿದ ಮಣ್ಣಿನ ಅಲ್ಲಿ ಹಾಕಿತ್ತು.ನಾಳೆ ಅಲ್ಲಿಂದ ತೆಗದು ಇಲ್ಲಿ ಹಾಕಿತ್ತು. ಎಡೆಲಿ ಆರಾರೋ ಕಣೋಜಿಗೋ ಪೈಸೆ ಮಾಡಿಗೊಂದು ನೆಡವೊದಲ್ಲದೋ?
ಅಲ್ಲಿಗೆ ಕೆಲಸಕ್ಕೆ ಹೋಪವಕ್ಕು ಅಷ್ಟೇ ಮೈಬೆಗರದ್ದೆ ಕಿಸೆ ತುಮ್ಬುತ್ತು,ವಾರಲ್ಲಿ ಮೂರು ದಿನ ಹೋದರೆ ಸಾಕು ಒಳುದ ದಿನ ಭೂತ,ಕೋಲ,ಆಯಿನ ಹೇಳಿ ಪೆಟ್ಟಿಗೆಕಟ್ಟುಲಾವುತ್ತು.

ಅಶನದ ಚೆರಿಗೆಯ ಮುಂದೆ ಪುಟ್ಟ..

ಇಷ್ಟೆಲ್ಲಾ ಅವ್ಯವಸ್ಥೆಯ ನೆಡೂಕೆ ಅಲ್ಲೊಂದು, ಇಲ್ಲೊಂದು ಹೇಳ್ತ ಹಾನ್ಗಿಪ್ಪ ನಮ್ಮೋರ ಮನೆಗಳಲ್ಲಿ ತೊಂಡನುದೆ ತೊಂಡಿಯುದೆ ಇದು ವ್ರದ್ಧಾಶ್ರಮ ಹೇಳಿ ಗ್ರಹಿಸಿಗೊಂದು ಇಪ್ಪೊದು.
ಚಿಕನ್ಗುನ್ಯದ ಗೆಂಟುಬೇನೆಗೋ ಬೇರೆ. ಎಲ್ಲಿಯಾದರೂ ಬಾಕಿ ಆದರೆ ಅಬ್ಬೆಅಪ್ಪನ ಒಟ್ಟಿನ್ಗೆ ಕ್ರಷಿ ನೋಡುಲೆ ನಿಂದ ತಪ್ಪಿಂಗೆ ಮದುವೆ ಅಪ್ಪಲೇ ಕೂಸುಗಳೇ ಸಿಕ್ಕದ್ದೇ ಅಪ್ಪುದೆ ಅಪ್ಪುದುಂ, ಬಪ್ಪುದೆ ಬಪ್ಪುದುಂ ಹೇಳಿ ಕುರ್ವೆ ಹಿಡುಕ್ಕೊಂಡು ತೋಟಕ್ಕಿಳಿವ ಒಂಟಿ ಭಾವಂದಿರು ಮಾತ್ರ.
ಜೆಂಬ್ರಲ್ಲಿ ಸಿಕ್ಕಿರೆ , ಪೇಟೆಲಿಪ್ಪವು ಎರಡು ಅಡಕ್ಕೆ ಹೆಚ್ಚಿಗೆ ತಿಮ್ಬಲೇ ಕಲಿಯಿರೋ ಎಂಗ ಅಡಕ್ಕೆ ಬೆಳವೋರೂ ನಿಂಗಳ ಹಾಂಗೆ ಬದುಕ್ಕಿಗೊಂಡಿರುತ್ತೆಯ ಹೇಳಿ ಹೇಳುತ್ತವು ಈ ಭಾವಂದಿರು.
ಪೇಟೆಲಿಪ್ಪ ಎಲ್ಲಾ ಸೌಕರ್ಯಂಗ ಇದ್ದರೂ, ಹಳ್ಳಿಮನೆ ಹಟ್ಟಿ ಕೆಲಸ ಹೇಳಿ ಮೂಗುಮುರಿವ ನಾವು ಹಳ್ಳಿಂದ ದೂರ ಓಡೋದು ಎಂತಗೆ?
ಉದಿಯಪ್ಪಗ ಸೂರ್ಯನ ಕಿರಣ ಬಿದ್ದಪ್ಪಗ ಕರಗುವ ಮೈಂದಿನ ಹಾಂಗೆ ಹವ್ಯಕರ ಜೀವನ ಬದಲುತ್ತಾ ಇಪ್ಪೊದು ಬದಲಾವಣೆ ಜೀವನದ ಧರ್ಮ ಹೇಳುತ್ತ ಕಾರಣಕ್ಕೋ?
ಹಳ್ಳಿಯ ಸಂಸ್ಕಾರಂಗೋ ಮುಂದಂಗೆ ಅಳಿವ ಅನಿವಾರ್ಯತೆ ನಮ್ಮ ಎದುರೇ ಕಾಣುತ್ತಾ ಇಲ್ಲೆಯೋ?

ಈಗಾಣ ಮಕ್ಕೊಗೆ ಚೆರಿಗೆಲಿ ಹೆಜ್ಜೆ ಬೇಯುತ್ತ ಚೆಂದ ಗೊಂತಿದ್ದಾ? ಕಜೆ ಕುಚ್ಚಿಲು ಅಶನದ ರುಚಿ ಗೊಂತಿದ್ದ?
ಕಾಲಾಯ ತಸ್ಮೈ ನಮಃ.
ಈಗ ಹೋವುತ್ತ ಪೋಕು ಕಂಡ್ರೆ ಕಾಲಚಕ್ರ ತಿರುಗುವ ಹಾಂಗೆ ಅನ್ನಿಸುತ್ತು. ಮೇಲೆ ಹೋದ್ದು ಕೆಳ ಬರೆಕ್ಕಾದ್ದದು ಪ್ರಕೃತಿಯ ನಿಯಮ ಅಲ್ಲದೋ?
ಒಂದು ಕಾಲ ಬೇಗ ಬಪ್ಪ ಸಾಧ್ಯತೆ ಇದ್ದು. ಆವಗ ಪೇಟೆಗಳಲ್ಲಿ ನೀರಿಂಗೆ ಯುದ್ಧ ಮಾಡೆಕ್ಕಕ್ಕು. ನೀರಿದ್ದರೂ ಕರೆಂಟಿಲ್ಲದ್ದೆ ಅಸಬಡಿಯೆಕ್ಕಕ್ಕು.
ಚೀನಾಂದ ಬಪ್ಪ ಬೇಯದ್ದ ಅಕ್ಕಿ ತಿಮ್ಬಲೆಡಿಯದ್ದೆ ಬಕ್ಕು. ಆವಾಗ ಹೊಪೋದೆಲ್ಲಿಗೆ?
ಹಳ್ಳಿಲಿ  ನಾವು ಎಂತಾರು ಒಳುಶುಲೇ ಸಾಧ್ಯ ಇದ್ದೋ  ಆ ದಿನ ಬಂದರೆ ಎದುರುಸುಲೆ ?

ಕಾಲಾಯ ತಸ್ಮೈ ನಮಃ.., 5.0 out of 10 based on 5 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

 1. ಮೋಹನಣ್ಣ
  Krishnamohana

  halemane bhavan heliddu noorakke nooru sari krishikana uddara aayekaare krishika belasida vastuvinge krishikane kraya heleku.ennu Manglurina Shankara Bhavan helida vishaya jivana sagusale kasta aagi hoovuttavara bagye aaru heltaville aadare (ennannu serusi)jivanada ella amoda pramodangala huduki petage hoopave jaasti.endu engala ourilli madyhannavarege coolige bandavange 200 rupaayi eddu.ade kelasa(ella alladdaru)navu madire adu oliyada?aa paise yavade tax elladde navagada sampaadane allada?hotte tumbale jabardasti elladda jivana maadle endude esto jenakke krishiliye edigu(jaage eddadara hondiyondu)navu dudivale tayaarille embudu katu satya.yavado officilli avara baigalastu tindondu avu nayi hange dudusuvaaga duditta navage nammade jaageli dudivale manassille.yeke helire elli mayigastu mannavuttu haange ennottinge kalta Narayana bhava Americandalo Banglurindalo bappaga anoddistu sanna aayide heli kanuttu.Krishiyottinge naavu swabhimaana belasiyondidille adonde kaarana.Shankara bhavange baraddala ottu abhipraya.ee vishayakke chaalane kotta Raghu Bhavange Jai.Oppanna ee bagye ondastu chrchage yerpaadu madikottadakke ondastu oppangala maale.

  [Reply]

  VA:F [1.9.22_1171]
  Rating: 0 (from 0 votes)
 2. ಮೋಹನಣ್ಣ
  Krishnamohana

  ennondastu abhipraya bareyadre tappu tiluvalike akko heli punha barettidde.Vishnunandana Bhavan barada vishaya ourilli jaage beku heltavu aaru?Annano tammano bhavandro jageli eddondu enagu ondastu kalusi kodtare beku.365dina kasta bandondippa ee annanaddo tammanaddo bagye alochane maadtavu estu jena.tingina kai mavina kayi happala sendage heli kotre tekkondu hogi ondastu snehitaratre shipaarsu heliyondu avakku kottondu timbalakku ambagella edakkagi kasta bata jivangala nempavuttille.peteli genda hendattige makko sanna eppaga mavano atteyo appano ammano bekaavuttu.ade abbe appa athava atte mavanchuru handalediyadde aadare kuudle hallilippa annano tammano akkano tangeyo nempaagi aadastu bega allinda jaage khali maadusuttavu.Matu khattina aadare kshame erali edu vaastava elloru hingille khanditha aadare hechinavara manastiti eega ade aayidu.avan uurilli eddan allado abbe appana avane nodeku heli.ennu peteli kotigatle aastigo sitego heli eddaru uurillippa 1 Acre thotalli avana paalu bidle avan tayaarille hiriyavarinda banda jaage allado enage paalu sikkiye aayekku heli.Khanditha edakkella apavadango eddu boori pakshada kate helta edde.

  [Reply]

  VA:F [1.9.22_1171]
  Rating: +2 (from 2 votes)
 3. ಡಾಮಹೇಶಣ್ಣ
  ಮಹೇಶ

  ಪೇಟೆಲ್ಲಿ ಮಾಡುವ ಉದ್ಯೋಗಂಗಳಲ್ಲಿ ಹೆಚ್ಚಿನದ್ದು ಇತರರ ಕೈ ಕೆಳ ಮಾಡುವ ಹಾಂಗಿಪ್ಪದೇ ಅಲ್ಲದ?
  ರಜ್ಜ ಒಳ್ಳೆ ಸಾಮರ್ಥ್ಯ ಬಂದರೆ ಮತ್ತೆ ಸ್ವ-ಉದ್ಯಮ ಶುರು ಮಾಡ್ತವು.

  ಕೃಷಿ ಮಾಡುವದು ಹೇಳಿರೆ ಒಂದು ಸ್ವ-ಉದ್ಯಮ. ಅದಕ್ಕುದೆ ಕೆಲವು ವಿಶೇಷ ಸಾಮರ್ಥ್ಯಂಗ ಬೇಕು.
  ಹಾಂಗಾಗಿ ಮಾನಸಿಕ-ವ್ಯಾವಹಾರಿಕ ಕುಶಲತೆಯ ಬೆಳಸಲೆ ಕೆಲವು ಚಟುವಟಿಕೆ-ಅವಕಾಶಂಗಳುದೇ ಬೇಕು.

  ಪಾರಂಪರಿಕವಾಗಿ ಬಂದ ಕೃಷಿ ಜನ್ಮತಃ ಬಂದ ಬ್ರಾಹ್ಮಣ್ಯದ ಹಾಂಗೆ.
  ಆ ಕೃಷಿಲ್ಲಿ `ಕೃಷಿ’ ಮಾಡುವ ಸಾಮರ್ಥ್ಯ ಬಪ್ಪ ಹಾಂಗೆ ಮಾಡ್ಲೆ ಕೆಲವು ಟ್ರೈನಿಂಗು ಇದ್ದರೆ ಒಳ್ಳೆದಲ್ಲದ?

  [Reply]

  ರಾಜನಾರಾಯಣ ಹಾಲುಮಜಲು Reply:

  ennadu ide abhipraya.

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ
  Krishnamohana

  Khanditha.Maheshannana abhipraayakke enna kayyu neggidde.oppangalottinge.

  [Reply]

  VA:F [1.9.22_1171]
  Rating: 0 (from 0 votes)
 5. ಡೈಮಂಡು ಭಾವ

  ರಘು ಬಾವಾ ಒಪ್ಪಕ್ಕೆ ರಜ್ಜ ಲೇಟಾತು.. ಲಾಯ್ಕ ಆಯಿದು ಬರದ್ದು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಗಣೇಶ ಮಾವ°ಪವನಜಮಾವಕಜೆವಸಂತ°ಚೂರಿಬೈಲು ದೀಪಕ್ಕಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಚೆನ್ನೈ ಬಾವ°ಮಂಗ್ಳೂರ ಮಾಣಿಮುಳಿಯ ಭಾವಹಳೆಮನೆ ಅಣ್ಣಪ್ರಕಾಶಪ್ಪಚ್ಚಿಸುಭಗಪುಣಚ ಡಾಕ್ಟ್ರುದೊಡ್ಡಮಾವ°ವೇಣಿಯಕ್ಕ°ಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಜಯಶ್ರೀ ನೀರಮೂಲೆವೆಂಕಟ್ ಕೋಟೂರುಶಾ...ರೀಚೆನ್ನಬೆಟ್ಟಣ್ಣದೀಪಿಕಾವಸಂತರಾಜ್ ಹಳೆಮನೆವಿದ್ವಾನಣ್ಣನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ