ಒಪ್ಪಣ್ಣನ ಬೈಲಿನ ಪುಸ್ತಕ ಹ೦ಚಿಕೆ – ಪ್ರತಿಕ್ರಿಯೆ

ಆಗೋಸ್ತು ಇಪ್ಪತ್ತೈದನೆ ತಾರೀಕು ಶ್ರೀ ಗುರುಗಳ ಹಸ್ತ೦ದ ಬಿಡುಗಡೆ ಆದ ನಮ್ಮ ಬೈಲಿನ ಪುಸ್ತಕ೦ಗೊ ಹವ್ಯಕರ ಮನೆಗಳ ಸೇರಿ ಮನಸ್ಸುಗಳ ಗೆಲ್ಲುವಲ್ಲಿ ಯಶಸ್ವಿ ಆವುತ್ತಾ ಇದ್ದು ಹೇಳೊದು ನವಗೆಲ್ಲಾ ಸ೦ತೋಷದ ವಿಷಯ. ಮನ್ನೆ ಸೆಪ್ಟೆ೦ಬರು ಹದಿನೈದನೆ ತಾರೀಕು ಲೆಕ್ಕಾಚಾರ ಮಾಡುವಗ ಮುದ್ರಣ ಆದ ಒ೦ದು ಸಾವಿರ ಪುಸ್ತಕ೦ಗಳಲ್ಲಿ ಐನೂರಕ್ಕೂ ಹೆಚ್ಚು ಪುಸ್ತಕ೦ಗೊ ನಮ್ಮ ಸಮಾಜದ ಸಾಹಿತ್ಯಾಸಕ್ತರ ಕೈ ಸೇರಿದ್ದು. ಇಪ್ಪತ್ತು ದಿನಲ್ಲಿ ಈ ಯಶಸ್ಸು ಸಿಕ್ಕೆಕ್ಕಾರೆ ಬೈಲಿನ ಸುಮಾರು ನೆ೦ಟ್ರ ಪರಿಶ್ರಮ ಇದ್ದು.ಅವಕ್ಕೆಲ್ಲಾ ಧನ್ಯವಾದ ಹೇಳುವ°.

ಪುಸ್ತಕ ತೆಕ್ಕೊ೦ಡವರ ಹತ್ರೆ,ಮುಖ್ಯವಾಗಿ ಕ೦ಪ್ಯೂಟರು,ಇ೦ಟರ್ನೆಟ್ಟಿನ ಸೌಲಭ್ಯ,ಪರಿಚಯ ಇಲ್ಲದ್ದ ನೆ೦ಟ್ರ ಹತ್ರೆ ವಿಮರ್ಶೆ,ಪ್ರತಿಕ್ರಿಯೆಗಳ ತಿಳ್ಕೊ೦ಬ ಪ್ರಯತ್ನವನ್ನೂ ಮಾಡ್ತಾ ಇದ್ದು.

ಒ೦ದೆಲಗದ ಹತ್ತು ಶುದ್ದಿಗಳ ಓದಿದ ಒಬ್ಬರ ಪ್ರತಿಕ್ರಿಯೆ ಇಲ್ಲಿದ್ದುಃ

ಈ ಪುಸ್ತಕವ ಮನಸ್ಸಿಲಿಯೇ ಚಪ್ಪರಿಸಿ ಚಪ್ಪರಿಸಿ ಓದುತ್ತಾ ಇದ್ದೆ.ನಮ್ಮ ಶಬ್ದಭ೦ಡಾರ ಎಷ್ಟು ಬೇಗ ಖಾಲಿ ಆವುತ್ತಾ ಇದ್ದಲ್ಲದೋ?ಸುಮಾರು ಶಬ್ದ೦ಗೊ ಮತ್ತೆ  ಸಿಕ್ಕಿತ್ತು ಈ ಪುಸ್ತಕಲ್ಲಿ.ಅತಿ ವೇಗಲ್ಲಿ ಬದಲಾವಣೆ ಆವುತ್ತಾ ಇಪ್ಪ ನಮ್ಮ ಜೀವನಕ್ರಮಲ್ಲಿ ನಮ್ಮತನವ ಒಳುಶುವ ಈ ಪ್ರಯತ್ನ,ಭಾಷೆಯ ಒಳುಶಿ ಬೆಳೆಶುವ ಈ ಪ್ರಯತ್ನವ ಇನ್ನೂ ಹೆಚ್ಚಿಸಿ . ಇ೦ಟರ್ನೆಟ್ಟಿಲಿ ಓದೊದು ಹೇ೦ಗೆ ಹೇಳಿ ಬೇಗ ತಿಳುಕ್ಕೊ೦ಬ ಆಶೆ ಆಯಿದು.

ಸ೦ಸ್ಕಾರ ಪುಸ್ತಕವ ಓದಿದ ಒಬ್ಬರ ಪ್ರತಿಕ್ರಿಯೆ ಇಲ್ಲಿದ್ದುಃ

ನಾವು ಹಿನ್ನೆಲೆ ಅರ್ತುಗೊ೦ಡು ಮಾಡುವ ವಿಧಿವಿಧಾನ೦ಗೊ ಅರ್ಥಪೂರ್ಣವಾಗಿರ್ತು.ಕ್ರಿಯೆಯ ನೆಡೂಕೆ ಬಟ್ಟಮಾವನ ಹತ್ರೆ ಕೇಳಿಗೊ೦ಬಲೆ ಸಾಧ್ಯವಾಗದ್ದ ಕಾರಣ ಈ ಪುಸ್ತಕ ನವಗೆ ಒ೦ದು ಮಾಹಿತಿ ಕೊಡುವ ಕೈಪಿಡಿ ಆತು.ಒಳ್ಳೆ ಪ್ರಯತ್ನ.ಹೀ೦ಗೇ ಮು೦ದರ್ಶಿ.

ಪುಸ್ತಕ೦ಗಳ ಮರುಮುದ್ರಣ ಮಾಡುವ ಕಾಲ ಬೇಗನೇ ಒದಗುಸಲಿ ಹೇಳಿ ಹಾರೈಸಿಗೊ೦ಡು ವಿಮರ್ಶೆ-ಪ್ರತಿಕ್ರಿಯೆ,ಸಲಹೆ ಸೂಚನೆಗೊಕ್ಕೆ ಬನ್ನಿ ಹೇಳಿ ಸ್ವಾಗತ ಹೇಳುವ°.

ಮುಳಿಯ ಭಾವ

   

You may also like...

11 Responses

 1. ಗೋಪಾಲ ಬೊಳುಂಬು says:

  ಓಹ್ ! ಇಪ್ಪತ್ತು ದಿನಲ್ಲಿ ೫೦೦ ಪುಸ್ತಕಂಗೊ ಹಲವು ಜೆನ ನಮ್ಮವರ ಕೈ ಸೇರಿದ್ದು ಕೇಳಿ ಭಾರೀ ಕೊಶಿ ಆತು. ಪುಸ್ತಕಂಗಳ ಬಗ್ಗೆ ಎಲ್ಲೋರದ್ದೂ ಖಂಡಿತಾ ಒಳ್ಳೆ ಅಭಿಪ್ರಾಯವೇ ಇದ್ದು. ಎನ್ನ ಅನುಭವದ ಪ್ರಕಾರ, ಪುಸ್ತಕ ತೆಕ್ಕೊಳಿ ಹೇಳುವಗ ಪ್ರೀತಿಲಿ ತೆಕ್ಕೊಳ್ತವು. ಒಳ್ಳೆ ಬೇಡಿಕೆ ಇದ್ದು ಅದಕ್ಕೆ. ನಮ್ಮ ಬೈಲಿನ ಪುಸ್ತಕಂಗೊ ಮರುಮುದ್ರಣ ಕಾಣಲಿ, ಇನ್ನು ಬಾಕಿ ಇಪ್ಪ ಶುದ್ದಿಗಳೂ ಪುಸ್ದ್ತಕ ರೂಪಲ್ಲಿ ಹೆರ ಬರಲಿ, ಜನ ಮನ ಗೆಲ್ಲಲಿ ಹೇಳುವ ಶುಭ ಹಾರೈಕೆಗೊ.

 2. ಬೆಟ್ಟುಕಜೆ ಮಾಣಿ says:

  ಸಂತೋಷಸದ ವಿಚಾರ..ಆದಷ್ಟು ಬೇಗ ಮರು ಮುದ್ರಣ ಆಗಲಿ ಹೇಳಿ ಎಲ್ಲೋರ ಆಶಯ..

 3. ಸುಭಗ says:

  ಮುಳಿಯಭಾವ.. ಪುಸ್ತಕಂಗಳ ಪ್ರಸಾರ; ಆಮೂಲಕ ಬೈಲಿನ ವಿಸ್ತಾರ ಹೆಚ್ಚಾವ್ತಾ ಇಪ್ಪ ಕೊಶಿಯ ಸಂಗತಿ ಹೇಳಿದ್ದಿ.. ಧನ್ಯವಾದಂಗೊ.
  ಬಿಡುವಿನ ಸಮಯವ ಒಂದುಕ್ಷಣವೂ ವ್ಯರ್ಥಮಾಡದ್ದೆ ಕಾಲೆಡೆಲಿ ಬೈಕು ಸಿಕ್ಕುಸಿ ಊರೂರು ತಿರುಗಿ ಪುಸ್ತಕ ಹಂಚಿಕೆ ಮಾಡಿದ ಬೈಲ ಭಾವಂದ್ರಿಂಗೆ ವಿಶೇಷ ಧನ್ಯವಾದಂಗೊ.
  ನಮ್ಮ ಜಾಲ್ಸೂರು ಸುಳ್ಯ ಗುತ್ತಿಗಾರು ಹೊಡೆಲಿಯೂ ಮಾರಾಟ ಕಾರ್ಯು ಶೀಘ್ರವೇ ಆವ್ತು.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಬಹಳ ಸಂತೋಷ

 5. Madhushree Madavu says:

  ಸಂತೋಷದ ವಿಚಾರ..ಆದಷ್ಟು ಬೇಗ
  ಮರು ಮುದ್ರಣ ಆಗಲಿ ಹೇಳಿ……

 6. ಚೆನ್ನೈ ಭಾವ° says:

  ಸಂತೋಷ ಶುದ್ದಿ. ಪುಸ್ತಕ ಎಲ್ಲೋರಿಂಗೂ ಸದುಪಯೋಗವಾಗಲಿ ಹೇಳಿ ಬಯಸುವೊ.

 7. ಓದಿ ಸ೦ತೊಶಾ ತು ರಸಾಯನ ಉ೦ಡಾ೦ಗೆ ಆತು

  ವಿಜಯತ್ತೆ

 8. Maanyare,

  Oppannana Oppamga matthu Bodhayaniya hadhinaaru samskaragamgo… pusthakaLannu tharisikOLLalu Eshtu haNa kaLuhisabeku (Rs. 130 + Rs. 60+ postal charges!!?). Dayavittu thiLuhisi.

  inthi namaskaragaLu,
  ravi

  • ರಘು ಮುಳಿಯ says:

   ರವಿಯಣ್ಣ,
   ಒಪ್ಪಣ್ಣನ ಬೈಲಿ೦ಗೆ ಆತ್ಮೀಯ ಸ್ವಾಗತ.
   ನಿ೦ಗಳ ಕೈ ಸೇರಿದ ಪುಸ್ತಕ೦ಗಳ ಓದಿ ಹೇ೦ಗಿದ್ದು ಹೇಳಿ ಪ್ರತಿಕ್ರಿಯೆ ಕೊಡಿ.ಬೈಲಿ೦ಗೆ ಬತ್ತಾ ಇರಿ,ಬರೆತ್ತಾ ಇರಿ.

 9. vijayasubrahmana says:

  ಪುಸ್ತಕ ತುಂಬಾ ತುಂಬಾ ತುಂಬಾ ಒಳ್ಳೆದಿದ್ದು. ಕೆಲವಂತೂ (ಉದಾ :ಪೇಟೆ ಮಾಣಿಗೆ ತೊಟ್ಟೆ ಹಾಲು ಆಯೆಕ್ಕಾಡ) ಬಹುಇಷ್ಟಾಗಿ ಎರಡು ಸರ್ತಿ ಓದಿದೆ ಹಾಸ್ಯವಾಗಿದ್ದ ಕಾರಣಂದ. ಹವ್ಯ್ಕಕ ಭಾಷೆ ಒಳಿಶಿ ಬೆಳೆಶುವ ಒಪ್ಪಣ್ಣಂಗೆ ಕೋಟಿ ನಮಸ್ಕಾರ.

 10. ಪದ್ಯಾಣ ಉದಯ ಶ೦ಕರ says:

  ೧೨/೧೩ ಒಪ್ಪ೦ಗಳ ಓದಿದೆ. ಅದ್ಭುತ! ಲಾಯಕ್ಕಿದ್ದು. ಒಪ್ಪಣ್ಣನ ಶೈಲಿ, ವಿಷಯಂಗಳ ಸಿಲೆಕ್ಷನ್, ಎಲ್ಲವೂ ಅದ್ಭುತ.

  ನಮ್ಮೂರ,ನಮ್ಮೋರ ಜೀವನ ಕ್ರಮ, ಸಣ್ಣ ಸಣ್ಣ ಡಿಟೈಲ್ಸ್ ಎಲ್ಲವು ಪಷ್ಟಿದ್ದು ..

  ಬರವಣಿಗೆಯ ಓಘ,ಕಥೆ ಆಗಿ ತೆಕ್ಕೊಂಡೋದ ಕ್ರಮ ಲಾಯಕಾಯಿದು.
  ಶುಭಾಶಯಗಳೂ,

  ಪುಸ್ತಕ ತಂದು ಕೊಟ್ಟ ಮುಳಿಯ ಭಾವಂಗುದೆ ಧನ್ಯವಾದ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *