ಮುಳಿಯ ರಘುಭಾವನ ಹೊಸ ಅರ್ಥಂಗೊ..

August 16, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜೀವನವ ಹೊಸ ರೀತಿಲಿ ಕಾಂಬದು ಎಲ್ಲೊರಿಂದ ಹರಿತ್ತ ಕಾರ್ಯ ಅಲ್ಲ.
ಎಷ್ಟೋ ಜೆನ ನಿನ್ನೇಣ ಹಾಂಗೇ ಇಂದು – ಹೇಳಿಗೊಂಡು ಬದುಕ್ಕುತ್ತದರ ನಾವು ಕಾಣ್ತು.
ಆದರೆ ನಮ್ಮ ರಘುಬಾವ° ಹಾಂಗಲ್ಲ – ಜೀವನಕ್ಕೆ ದಿನದಿನವೂ ಹೊಸ ಅರ್ತ ಕೊಡ್ತ ಸಾಮರ್ಥ್ಯ ಅವಕ್ಕಿದ್ದು.

ರಘುಭಾವ° ಚಳಿಯೂರಿಂಗೆ ಹೋಗಿಪ್ಪಗ ಸೆಕೆಅಂಗಿ ಹಾಕಿಗೊಂಡದು..

ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ?
ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು.
ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ.

ಅವರ ಮೂಲ ನಮ್ಮ ಊರಿನ ಮುಳಿಯವೇ!
ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (
ಶ್ರೀ ಮುಳಿಯ ತಿಮ್ಮಪ್ಪಯ್ಯ) – ಅವರ ತಮ್ಮನ ಪುಳ್ಳಿ!
ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ – ಸುಖ ಸಾಗರವಾಗಿ ನೆಡೆತ್ತಾ ಇದ್ದು.
ದಿನ ಉದಿಯಾದರೆ ಆಪೀಸು – ಹೊತ್ತಪ್ಪಗ ಮನಗೆ.
ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು.
ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ,  ಇಂಪಾದ ಬಾಗೊತಿಗೆಗಳೋ – ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು.
ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ – ಅಷ್ಟುದೇ ಆಟದ ಮರುಳು – ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ!

ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ.
ಆಟ ಹೇಳಿರೆ – ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು.
ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು.
ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ.
ಅವು ಮಾಂತ್ರ ಅಲ್ಲ, ಅವರ ಮಗಂದೇ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು.

ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ.
ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು – ಈಗಾಣ ಬದುಕ್ಕಾಣ -ಅದು ಇದು ಎಲ್ಲ.
ಈ ಶುದ್ದಿಗಳ ಬೈಲಿಂಗೆ ಹೇಳುವಿರೋ – ಕೇಳಿದ ಒಪ್ಪಣ್ಣ. ಸಂತೋಷಲ್ಲಿ “
ಅಕ್ಕು ಒಪ್ಪಣ್ಣ ಭಾವಾ..” ಹೇಳಿದವು.

ಹಾಂಗೆ, ನಮ್ಮ ಬೈಲಿಂಗೆ ಬಂದು ಮುಳಿಯದ ರಘುಭಾವ° ಶುದ್ದಿ ಹೇಳ್ತವಡ.
ನಾವೆಲ್ಲೊರುದೇ ಕೇಳೆಕ್ಕಾದ ನಮ್ಮದೇ ಶುದ್ದಿ.
ಬನ್ನಿ, ಶುದ್ದಿಗಳ ಕೇಳುವೊ. ಶುದ್ದಿಗೊಕ್ಕೆ ಒಪ್ಪ ಕೊಡುವೊ°.
ತಿಳಿ ಹಾಸ್ಯ ಭರಿತ ಸುಂದರ ಬರಹಂಗೊಕ್ಕೆ ಪ್ರೋತ್ಸಾಹ ಕೊಡುವೊ°.

ಆಟದ ಅರ್ತದ ಹಾಂಗಿಪ್ಪ ನಿತ್ಯ ಚಿಂತನೆಗೊಕ್ಕೆ ಸ್ವಾಗತ ಮಾಡುವೊ°.

ಒಪ್ಪಣ್ಣ

ರಘುಭಾವನ ಶುದ್ದಿಗೊ ಸದ್ಯಲ್ಲೇ ಬೈಲಿಲಿ ಬತ್ತು.
ಕಾದೊಂಡಿರಿ. ಆತೋ?

ರಘುಭಾವನ ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=10730087755609136330

ಹರೇರಾಮ

ಗುರಿಕ್ಕಾರ°

ಮುಳಿಯ ರಘುಭಾವನ ಹೊಸ ಅರ್ಥಂಗೊ.., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ

  ಅದಾ! ರಘುರಾಮಣ್ಣನ ಬಣ್ಣದ ವೇಷದ ಪ್ರವೇಶ! :)
  ಸ್ವಾಗತಂ !
  ಒಪ್ಪಣ್ಣನ ರಂಗಸ್ಥಳಲ್ಲಿ ಇವರ ಪಾತ್ರಧಾರಿಕೆ ರೈಸುಗು!!
  ಬನ್ನಿ….. ನೋಡಿ…… ಆನಂದಿಸಿ..

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ರಘುಭಾವ ಶುದ್ದಿ ಹೇಳಿದರೆ ಹೊತ್ತು ಹೊದ್ದೆ ಗೊಂತಾವ್ತಿಲ್ಲೆ. ಸ್ವಾಗತ
  ಆಟದ “ಮರುಳು” ಹೇಳುದಕ್ಕೆ ಎನ್ನ ತೀವ್ರ ವಿರೋಧ ಇದ್ದು ಮಾತ್ರ :-(

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಗಣೇಶ ಮಾವಾ.. ಧನ್ಯವಾದ.ಆನು ಈಗ ಎರಡು ತಿಂಗಳಾತಷ್ಟೇ ಬೈಲಿನ ಕಟ್ಟಪ್ಪುಣಿಲಿ ನಡವದು. ನಿಂಗಳ ಕೃಷಿಯ ಉಮೇದು ನೋಡಿ ಭಾರಿ ಉತ್ಸಾಹ ಬತ್ತಾ ಇದ್ದು.ಹಾಂಗೆ ಆನೂ ಎನ್ನ ಸಣ್ಣ ಜಾಲಿಲಿ ನಾಕು ಬಿತ್ತು ಹಾಕಿದೆ,ಬೆಳೆ ಸಾಮಾನ್ಯ ಅಷ್ಟೇ.ಹಾಂಗೆ ಹೇಳಿ,ಕೃಷಿ ಮುಂದುವರಿಸದ್ದರೆ ಆವುತ್ತೋ?ನೆರೆಕರೆಗೆ ಓಡಿಗೊಂಡು ಬಂದೆ,ಅನುಪ್ಪತ್ಯಕ್ಕೆ ಬೆಂದಿಗೆ ಕೊರವಲೆ ಸೇರದ್ದರೆ ಹೆಂಗೆ?ಶುದ್ದಿ ಹೇಳುವ ಮಟ್ಟಕ್ಕೆ ಹತ್ತುಲೆಡಿಗೋ ಗೊಂತಿಲ್ಲೆ.

  ಮಹೇಶಾ.. ಒಪ್ಪಣ್ಣ ಅಟ್ಟಕ್ಕೆ ಹತ್ತುಸಿದ , ಆನು ಇಳಿವಲೆ ಅರಡಿಯದ್ದೆ ಪರಡುತ್ತಾ ಇದ್ದೆ. ನೀನು ನೋಡಿದರೆ ತಡ್ಪೆ ಮಡುಗಿಸಿ ಕೊಣುಶುವ ಅಂದಾಜಿಲಿ ಇದ್ದೆ !!!

  ಚೆನ್ನಬೆಟ್ಟಣ್ಣ , ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಡದಂತಾ ಕೋಪಅಡ. ಬೇರೆ ಎಲ್ಲದಕ್ಕೂ ಹವ್ಯಾಸ ,ಆಟ ಮಾತ್ರ ಮರುಳು ಹೇಳ್ತದರ ಒಪ್ಪಿಗೊಂಬ,ಅದರ ಅಪ್ಪಿಗೊಂಬ..

  [Reply]

  VA:F [1.9.22_1171]
  Rating: +1 (from 1 vote)
 4. ಅಜ್ಜಕಾನ ಭಾವ

  ತಕ ಧಿಮಿ ತಾಕಿಟಾ….
  ಬರಲಿ.. ಬಣ್ಣದ ವೇಶವು ಅಕ್ಕು ಪುಂಡು ವೇಶವು ಅಕ್ಕು..
  ಬೈಲಿನ ಮರುಳು ಜಾಸ್ತಿ ಅಪ್ಪಾಂಗಾಗಲಿ…..!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಎಂತ ಭಾವಾ..ಆಸುಪತ್ರೆ ಮಣ್ಣು ಕಟ್ಟುವ ಯೋಜನೆ ಇದ್ದೋ ಹೆಂಗೆ??
  ಮರುಳು ಬಿಡುಸುಲೆ ಒಪ್ಪಣ್ಣ ಮಂತ್ರವಾದಿಯ ತಪ್ಪ ಹಾಂಗಾಗದ್ದಿರಲಿ !!

  [Reply]

  ನೆಗೆಗಾರ°

  ನೆಗೆಗಾರ° Reply:

  { ಮಂತ್ರವಾದಿಯ ತಪ್ಪ ಹಾಂಗಾಗದ್ದಿರಲಿ }
  – ಮೊನ್ನೆ ಅಜ್ಜಕಾನಬಾವನತ್ರೆ ಮಾತಾಡಿದ ಮತ್ತೆ ನಮ್ಮ ಅರ್ತ್ಯಡ್ಕಮಾಣಿ ಎರಡುಸರ್ತಿ ಉಡುಪಮೂಲೆಗೆ ಹೋಗಿ ಬಂದ°..!

  [Reply]

  VA:F [1.9.22_1171]
  Rating: +1 (from 1 vote)
 5. ಬಲ್ನಾಡುಮಾಣಿ

  ಯಕ್ಷಗಾನ ಕಾಣದ್ದೆ ಅರ್ಥ ಕೇಳುವ ಅವಕಾಶವೇ ಇಲ್ಲದ್ದೆ ಅಸಕ್ಕ ಆಯ್ದು ಭಾವ!!! :) ಬೈಲಿಂಗೆ ಸ್ವಾಗತ,, ಒಳ್ಳೆ ಲೇಖನಂಗ ಬರಲ್ಲಿ ಹೇಳಿ ಆಶಿಸುತ್ತೆ!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಧನ್ಯವಾದ ಭಾವಾ.ನಿಂಗೊಗೆ ನಿರಾಶೆ ಆಗದ್ದ ಹಾಂಗಪ್ಪಲೆ ಪ್ರಯತ್ನ ಮಾಡುತ್ತೆ..

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ
  Krishnamohana

  attakke hattidavakke elivale gontakku matte elivale hattiddadallane?attada megana ondu kunita nodle elleru kadondippaga elitta matentakappa matte gontiddavaarude gontiddu heluva krama elle arebare gontiddavu maantra powrusha kochigombadu.hengaru Raghu bhavana rangapravesha aayidaane ennu nrutyavu kunitavu suruvaagali.hingella baradare kopa ellene.Shubhashayangalottinge oppa oppango.

  [Reply]

  ಮುಳಿಯ ಭಾವ

  raghumuliya Reply:

  ಭಾವಾ,
  ಕೋಪದ ಕತೆ ಕೇಳೆಡಿ,ಕೋಪ ದಡ್ಡತನಲ್ಲಿ ಶುರು ಆಗಿ ಪಶ್ಚಾತ್ತಾಪಲ್ಲಿ ಮುಗಿವಂತದ್ದು.ಅದಕ್ಕೂ ನವಗು ನೆಂಟು ಇಪ್ಪಲೂ ಇಲ್ಲೆ, ಬೇಪಲೇ ಬೇಡ.ನಿಂಗಳ ಶುಭಾಶಯಂಗೋ ಮಾತ್ರ ಬೇಕೇ ಬೇಕು.
  ಮತ್ತೇ, ಅಟ್ಟಲ್ಲಿ ದಮ್ಮುಕಟ್ಟೋದು ಜಾಸ್ತಿ ಭಾವಾ,ನವಗೆ ನೆಲವೇ ಕ್ಷೇಮ ಅಲ್ಲದೋ??

  [Reply]

  VA:F [1.9.22_1171]
  Rating: 0 (from 0 votes)
 7. ಮೋಹನಣ್ಣ
  Krishnamohana

  attakke hati aadeku heli kalisida mele oppiyu aadamele dammu kattiru koniyale bekallado?suru suru dammu kattida haange toruttu abyasa aagiyappaga adu sahaja aavuttu.vesha katti heratatu atta helutta ranga mantapa yeri aatu ennenta konivade.subhashayangalottinge oppavude.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಡಾಮಹೇಶಣ್ಣಜಯಗೌರಿ ಅಕ್ಕ°ಚುಬ್ಬಣ್ಣಪ್ರಕಾಶಪ್ಪಚ್ಚಿದೊಡ್ಡಭಾವಅಕ್ಷರದಣ್ಣಚೆನ್ನಬೆಟ್ಟಣ್ಣವೆಂಕಟ್ ಕೋಟೂರುನೆಗೆಗಾರ°ಅಕ್ಷರ°ಪುಣಚ ಡಾಕ್ಟ್ರುಶರ್ಮಪ್ಪಚ್ಚಿಮಾಷ್ಟ್ರುಮಾವ°ಶ್ಯಾಮಣ್ಣಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಬಂಡಾಡಿ ಅಜ್ಜಿವೇಣಿಯಕ್ಕ°ತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಪವನಜಮಾವಜಯಶ್ರೀ ನೀರಮೂಲೆಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ