ನಮ್ಮ ಸಂಗೀತಲ್ಲಿ ದ್ರಾಕ್ಷಿ…ತೆಂಗಿನಕಾಯಿ….ಬಾಳೆಹಣ್ಣು…

August 7, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಕಂತಿಲಿ ನಮ್ಮ ಕರ್ನಾಟಕ ಸಂಗೀತದ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ ಕೊಟ್ಟಿತ್ತಿದೆ.
ಈ ಕಂತಿಲಿ ಇನ್ನು ಹೆಚ್ಚಿನ ಮಾಹಿತಿ ಕೊಡ್ತೆ.
……ಹೀಂಗೆ ತ್ಯಾಗರಾಜರು,ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳ ಕೊಡುಗೆಯ ಕಾರಣ
ನಮ್ಮ ಕರ್ನಾಟಕ ಸಂಗೀತ ಜಗದ್ವಿಖ್ಯಾತ ಆವ್ತು. ಇವರ ಬಗ್ಗೆ ಹೆಚ್ಚು ಮಾತಾಡುವ°.
ತಮಿಳುನಾಡಿನ ತಿರುವಾರೂರು ಹೇಳ್ತ ಜಾಗಲ್ಲಿ ಮೇ ೪,೧೭೬೭ರಂದು ಕಾಕರ್ಲ (ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಲಿಪ್ಪ ಜಾಗ ಇದು) ರಾಮಬ್ರಾಹ್ಮಣ ಮತ್ತೆ ಸೀತಮ್ಮ ಹೇಳ್ತ ದಂಪತಿಗೆ ಹುಟ್ಟಿದ ಮಹಾನ್ ಪ್ರತಿಭೆ ಇವ°.
ಅಪ್ಪ ರಾಮಬ್ರಾಹ್ಮಣರ ಪ್ರೋತ್ಸಾಹಂದ ಮಗ° ತ್ಯಾಗರಾಜ ದಿನಂಪ್ರತಿ ಶ್ರೀ ರಾಮನ ಪೂಜೆ ಪುನಸ್ಕಾರಲ್ಲಿ ತನ್ನ ತಾನೇ ತೊಡಗಿಶಿಯೊಂಡು ಇರ್ತ°.

ತ್ಯಾಗರಾಜರು

ತನ್ನ ಹದಿಮೂರನೇ ವರ್ಷಲ್ಲಿ ಈ ಬಾಲಪ್ರತಿಭೆ ನಮೋ ನಮೋ ರಾಘವಾಯ ಎಂಬ ಕೃತಿ ರಚನೆ ಮಾಡ್ತ°.
ಚರಿತ್ರೆ ಹೇಳುವ ಪ್ರಕಾರ, ತ್ಯಾಗರಾಜರಿಂಗೆ ಶ್ರೀ ರಾಮನ ದರ್ಶನ ಪದೇ ಪದೇ ಆವ್ತು, ಹಾಂಗೂ ಕೃತಿ ರಚನೆ ಮಾಡಲೆ ಇದು ಪ್ರೇರಣೆ ಕೊಡ್ತು.
ಇದಾದ ಮತ್ತೆ ನಿತ್ಯ ರಾಮನಾಮ ಜಪ ಮಾಡುವ ಅಭ್ಯಾಸ ಶುರು ಮಾಡ್ತವ್ವು ಬಾಲಕ ತ್ಯಾಗರಾಜ°.
ತನ್ನ ೧೮ನೆಯ ವಯಸ್ಸಿಲಿ ತ್ಯಾಗರಾಜ ಪಾರ್ವತಿ ಹೇಳ್ತ ಕೂಸಿನ ಮದುವೆ ಆವ್ತವ್ವು. ದುರದೃಷ್ಟವಶಾತ್ ಪಾರ್ವತಿ ಅದರ ೨೩ನೆಯ ವಯಸ್ಸಿಲಿ ತೀರಿ ಹೋವ್ತವ್ವು.
ಅದಾದ ಮೇಗೆ ತ್ಯಾಗರಾಜರು ಪಾರ್ವತಿಯ ತಂಗೆ ಕಮಲಾಂಬ ಎಂಬ ಕೂಸಿನ ಮದುವೆ ಆವ್ತವ್ವು.
ಸೊಂಟಿ ವೆಂಕಟರಾಮಯ್ಯ ಎಂಬುವರಲ್ಲಿ ತನ್ನ ಸಣ್ಣ ಪ್ರಾಯಲ್ಲೇ ಸಂಗೀತಭ್ಯಾಸ ಶುರು ಮಾಡ್ತವ್ವು ತ್ಯಾಗರಾಜರು.
ಸಂಗೀತದ ಮೂಲಕ ದೈವ ಸಾಕ್ಷಾತ್ಕಾರ, ದೇವರ ಪ್ರೀತಿಗೆ ಪಾತ್ರ ಅಪ್ಪಲೆ ಸಾಧ್ಯ ಹೇಳಿ ನಂಬಿದ ಮಹಾನುಭಾವ.
ತ್ಯಾಗರಾಜರು ತಮ್ಮ ಕೃತಿ ರಚನೆಲಿ ದೇವರ ನಾಮ ಪದೇ ಪದೇ ಬಳಸಿಯೊಂಡು, ದೇವರ ಮಹಿಮೆಯ ಕೊಂಡಾಡುವ ಉದ್ದೇಶಂದ ಕೃತಿ ರಚನೆ ಮಾಡಿದ್ದದಾಗಲೀ, ತನ್ನ ಸಂಗೀತ ಪ್ರೌಢಿಮೆಯ ಮೆರವಲೆ ಅಲ್ಲ.
ಸಂಗೀತದ ವಿಷಯಕ್ಕೆ ಬಂದರೆ ಈ ವಾಗ್ಗೇಯಕಾರಂಗೆ ತಾನು, ಮತ್ತೆ ಶ್ರೀ ರಾಮನ ಅರಿವಿನ ವಿನಃ ಬೇರೇನೂ ಗೊಡವೆಯೇ ಇರ.
ಅತ್ಯದ್ಭುತವಾದ ಕೃತಿ, ಕೀರ್ತನೆಗಳ ರಚನೆ ಮಾಡಿದ ಮಹಾನುಭಾವ ಈತ. ತ್ಯಾಗರಾಜರ ಘನರಾಗ ಪಂಚರತ್ನ ಕೀರ್ತನೆಗಳಂತೂ ತುಂಬಾ ಕರ್ಣಾನಂದಕರ.
“ಜಗದಾನಂದಕಾರಕ – ನಾಟ ರಾಗ”, “ದುಡುಕುಗಲ – ಗೌಳ ರಾಗ”, “ಸಾಧಿಂಚೆನೆ – ಆರಭಿ ರಾಗ”, “ಕನಕನ ರುಚಿರ – ವರಾಳಿ ರಾಗ”,
ಮತ್ತೆ ಜಗತ್ಪ್ರಸಿದ್ಧ “ಎಂದರೋ ಮಹಾನುಭಾವುಲು – ಶ್ರೀ ರಾಗ” ಹೀಂಗೆ ಪ್ರತಿಯೊಂದು ಕೀರ್ತನೆಯೂ ರಸಗವಳ.
ಒಟ್ಟಾರೆಯಾಗಿ ಸಂಗೀತ ವಿಮರ್ಶಕರುಗೊ ತ್ಯಾಗರಾಜರ ರಚನೆಗಳ ದ್ರಾಕ್ಷಿ ಹಣ್ಣಿಂಗೆ ಹೋಲ್ಸುತ್ತವ್ವು. ಅಷ್ಟು ಸರಳ. ತೆಗದು ಬಾಯಿಗೆ ಹಾಕಿ ಚಪ್ಪರಿಸಿರೆ ಆತು.
ತ್ಯಾಗರಾಜರ ಬಗ್ಗೆ ಬರವಲೆ ಒಂದು ಕಂತು ಸಾಲ. ಒಟ್ಟಾರೆಯಾಗಿ ನಮ್ಮ ಕರ್ಣಾಟಕ ಸಂಗೀತದ ಲೋಕಲ್ಲಿ ಒಂದು ಧ್ರುವತಾರೆ ಸಂತ ಶ್ರೀ ತ್ಯಾಗರಾಜರು.
ಅಂತೆಯೇ ಅವರ “ಕರ್ನಾಟಕ ಸಂಗೀತದ ತ್ರಿಮೂರ್ತಿ”ಗಳಲ್ಲಿ ಒಬ್ಬ ಹೇಳಿ ಜಗವೇ ಕೊಂಡಾಡ್ತು.
ತ್ರಿಮೂರ್ತಿಗಳಲ್ಲಿ ಇನ್ನೊಬ್ಬ ಮಹಾನುಭಾವ “ಮುತ್ತುಸ್ವಾಮಿ ದೀಕ್ಷಿತ”ರ ರಚನೆಗೊ ಹೆಚ್ಚು ಸಂಸ್ಕೃತಲ್ಲಿದ್ದವ್ವು. ಅರ್ಥ ಮಾಡಿಕೊಂಬಲೆ, ಹಾಡಲೆ ಕಷ್ಟ.
ಹಾಂಗಾಗಿ ಅವರ ರಚನೆಗಳ ತೆಂಗಿನಕಾಯಿಗೆ ಹೋಲ್ಸುತ್ತವ್ವು. ಹೆರ ಕಠಿಣ ಅನ್ಸಿದರೂ ಒಳ ಮೃದು ಸ್ವಾದದ ಕಾಯಿತುಂಡು ಇಪ್ಪ ಹಾಂಗೆ.
ಹಾಂಗೆಯೇ ಇನ್ನೊಬ್ಬ ತ್ರಿಮೂರ್ತಿಯಾದ ಶ್ರೀ ಶ್ಯಾಮಾಶಾಸ್ತ್ರಿಗಳ ರಚನೆಗಳ ಬಾಳೆಹಣ್ಣಿಂಗೆ ಹೋಲ್ಸುತ್ತವ್ವು. ಅತ್ಲಾಗಿ ದ್ರಾಕ್ಷಿ ಹಣ್ಣಿನಷ್ಟು ಸುಲಭವೂ ಅಲ್ಲ, ಇತ್ಲಾಗಿ ತೆಂಗಿನಕಾಯಿಯಷ್ಟು ಕಠಿಣವೂ ಅಲ್ಲ.
ಚೂರು ಪ್ರಯತ್ನ ಪಟ್ಟು ಹಣ್ಣಿನ ಚೋಲಿಯ ತೆಗದು ತಿನ್ನೆಕು. ಅಷ್ಟೇ.
ಸಂಗೀತದ ಬಗ್ಗೆ ಬರವಲೆ ಕೂದರೆ ತಲೆಲಿ ನೂರಾರು ವಿಷಯಂಗೊ ಬತ್ತು. ಯಾವುದರ ಬರೆಯೆಕು ಯಾವುದರ ಬಿಡೆಕು ಗೊಂತಾವ್ತಿಲ್ಲೆ. ವಿಷಯ ಅರ್ದಂಬರ್ದ ಆಗಿದ್ದರೆ ಓದುಗರಲ್ಲಿ ಕ್ಷಮೆ ಕೇಳ್ತೆ.
ಇನ್ನೊಂದರಿ ಕಾಂಬ°. ತ್ಯಾಗರಾಜರ ಬಗ್ಗೆ ಹೆಚ್ಚು ಮಾತಾಡ್ತೆ…

ಚಿತ್ರಕೃಪೆ ಃ ಅ೦ತರ್ಜಾಲ

ನಮ್ಮ ಸಂಗೀತಲ್ಲಿ ದ್ರಾಕ್ಷಿ...ತೆಂಗಿನಕಾಯಿ....ಬಾಳೆಹಣ್ಣು..., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°

  [ವಿಷಯ ಅರ್ದಂಬರ್ದ ಆಗಿದ್ದರೆ ] – ಆದರೂ ಅಡ್ಡಿ ಇಲ್ಲೇ. ಬರೆತ್ತಾ ಇರಿ. ನಿಂಗೊ ಬರೆತ್ತ ವಿಷಯ ನಿಂಗಳ ಶೈಲಿ ಇನ್ನೊಬ್ಬಂಗೆ ಎಡಿಯಾ. ಎಲ್ಲೋರಿನ್ಗೆ ಇಪ್ಪ ಬೈಲು ಇದು ಹೇಳಿದ್ದವು ಮಾಸ್ಟ್ರು ಮಾವ. ಆಸಕ್ತಿಲಿ ಕೂದು ಬರವಾಗ ಒಂದಲ್ಲ ಒಂದು ವಿಷಯನ್ಗೋ ಸಿಕ್ಕಿಯೇ ಸಿಕ್ಕುತ್ತಿದಾ. [ಯಾವುದರ ಬರೆಯೆಕು ಯಾವುದರ ಬಿಡೆಕು ಗೊಂತಾವ್ತಿಲ್ಲೆ]- ನಿಂಗೊ ಹೇಳಿರೇ ಗೊಂತಕ್ಕಷ್ಟೇ ಹಾಂಗೊಂದು ಆಯ್ದು ಹೇಳಿ.
  [ಹೆರ ಕಠಿಣ ಅನ್ಸಿದರೂ ಒಳ ಮೃದು ಸ್ವಾದದ ಕಾಯಿತುಂಡು ಇಪ್ಪ ಹಾಂಗೆ.] – ಒಪ್ಪ ಆಯ್ದು ಹೇಳಿ ಇತ್ಲಾಗಿಂದ ಒಪ್ಪ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಆಕರ್ಷಕ ತಲೆಬರಹದ ಅಡಿಲಿ, ಸಂಗೀತದ ಬಗೆಲಿ ಮಾಹಿತಿ ಕೊಟ್ಟತ್ತು ಲೇಖನ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನವಗೆ ದ್ರಾಕ್ಷಿಯ ರುಚಿಯೂ ಬೇಕು, ಸೊಲುದು ತಿಂಬಲೆ ಬಾಳೆ ಹಣ್ಣೂ ಬೇಕು. ತೆಂಗಿನ ಕಾಯಿ ಇಲ್ಲದ್ದೆ ಕಾರ್ಯ ಇಲ್ಲೆ.
  ಎನಗೆ ಇಷ್ಟವಾದ ವಿಶಯದ ಬಗ್ಗೆ ಇಷ್ಟವಾದ ಲೇಖನ.
  ಮುಂದಾಣ ಕಂತಿನ ನಿರೀಕ್ಷೆಲಿ ಒಂದೊಪ್ಪ

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಸ೦ಗೀತಪ್ರೇಮಿಗಳ ಆರಾಧ್ಯಮೂರ್ತಿ ತ್ಯಾಗರಾಜ ರ ಪರಿಚಯವೂ ಹಣ್ಣುಗಳ ಒಟ್ಟಿ೦ಗೆ ರಚನೆಗಳ ಹೋಲಿಕೆಯೂ ಆಸಕ್ತಿದಾಯಕವಾಗಿ ಬಯಿ೦ದು.ಗಿರಿಭಾವ೦ಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಗೋಪಾಲಣ್ಣವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಕೇಜಿಮಾವ°ಶರ್ಮಪ್ಪಚ್ಚಿರಾಜಣ್ಣಚುಬ್ಬಣ್ಣನೆಗೆಗಾರ°ಅಕ್ಷರದಣ್ಣದೇವಸ್ಯ ಮಾಣಿಪೆರ್ಲದಣ್ಣವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕಮುಳಿಯ ಭಾವದೊಡ್ಡಭಾವಶಾಂತತ್ತೆಚೆನ್ನೈ ಬಾವ°ಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಪುಟ್ಟಬಾವ°ಬೋಸ ಬಾವಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ