ನಾ ನೋಡಿ ನಲಿಯುವ ಕಾರವಾರ..

ಆನುದೇ ಬರೆಯೆಕ್ಕು ಹೇಳಿ ಗ್ರೇಷುವದು..ಆದರೆ ಈ ಕೆಲಸದ ತಾಪತ್ರಯದ ಎಡಕ್ಕಿಲ್ಲಿ ಎಡಿಯೆಡದೊ!

ಮೊನ್ನೆ ಬನಾರಿ ತಂಗೆಯ ಮದುವೆಲಿ ಶ್ರೀಅಕ್ಕ° ಸಿಕ್ಕಿತ್ತಿದ್ದವು..ಬೈಲಿನ ಸುಭಗಣ್ಣ, ಚೆನ್ನಬೆಟ್ಟಣ್ಣನೂ ಸಿಕ್ಕಿದವು. ಸುಮಾರು ಶುದ್ದಿಗೋ ಮಾತಾಡಿತ್ತು ನಾವು…ಈ ಸರ್ತಿ ಬರವೋ° ಹೇಳಿ ಹೆರಟದು.

ಕರ್ನಾಟಕದ ಕಾಶ್ಮೀರ, ಹೀಂಗೂ ಹೆಸರಿದ್ದು ., ಉತ್ತರ ಕನ್ನಡದ ಕಾರವಾರಕ್ಕೆ..ಪ್ರಕೃತಿ ರಮಣೀಯತೆಂದಾಗಿ.
ಆನಿಪ್ಪದು ಕಾರವಾರಲ್ಲಿ ಹೇಳಿಯಪ್ಪಗ ಬನಾರಿ ಅಜ್ಜಿ ಸಿನೆಮಾ ಪದ್ಯ ನೆಂಪು ಮಾಡಿಯೊಂಡವು…ನಾ ನೋಡಿ ನಲಿಯುವ ಕಾರವಾರ..ಹೇಳಿ

ಕಾಳಿ ನದಿಗೆ ಕಟ್ಟಿದ ಸಂಕ

ರವೀಂದ್ರನಾಥ್ ಠಾಗೋರ್ ಅವರ ೨೨ ನೇ ಪ್ರಾಯಲ್ಲಿ ಇಲ್ಲಿಗೆ ಬಂದು ಇತ್ತಿದ್ದವಡ.
ಅವರ ಅಣ್ಣನ ಮನೆಲಿ, ಅವ° ಕಾರವಾರಲ್ಲಿ ಜಡ್ಜ° ಆಗಿತ್ತಿದನಡ. ಇಲ್ಯಾಣ ಸಮುದ್ರದ ಚೆಂದ, ಪ್ರಶಾಂತತೆಗೆ ಮಾರುಹೋಗಿ “ಪ್ರಕ್ರಿತಿರ್ ಪ್ರತಿಶೋಧ” ಬರದ್ದವಡ.

ಇಲ್ಯಾಣ ಸಮುದ್ರತೀರ (ಠಾಗೋರ್ ಬೀಚ್) ಸಮುದ್ರಲ್ಲಿ ಅಲ್ಲಲ್ಲಿ ಇಪ್ಪ ನಡುಗಡ್ಡೆಗೊ, ಕಾಳಿ ನದಿಯ ಅಳಿವೆಬಾಗಿಲು, ಅಲ್ಲೆ ಇಪ್ಪ ದೇವ್ ಭಾಗ್ ರಿಸೋರ್ಟ್, ಮಾಜಾಳಿ ಸಮುದ್ರತೀರ, ಚೆಂದದ ಸಹ್ಯಾದ್ರಿ ಪರ್ವತ ಶ್ರೇಣಿ ಎಲ್ಲವೂ ನೋಡ್ಲೆ ಚೆಂದವೇ.
ಮಾಜಾಳಿಂದ ರಜ ಮುಂದೆ ಹೋದರೆ ಗೋವಾ..ಮಳೆಗಾಲಲ್ಲಂತೂ ಬೆಟ್ಟಲ್ಲಿ ಮೋಡ ಎಲ್ಲಾ ಕಣ್ಣಿಂಗೆ ಹಬ್ಬ.
ಜಿಲ್ಲಾ ಕೇಂದ್ರ ಆದರೂ ಇದು ಸಣ್ಣ ಪೇಟೆ.. ಹೆಚ್ಚು ದೊಡ್ಡ ಇಲ್ಲೆ, ಹೇಳಿಕೊಂಬ ದೊಡ್ಡ ವಿದ್ಯಾ ಸಂಸ್ಥೆಯೋ, ಆಸ್ಪತ್ರೆಯೋ, ವ್ಯಾಪಾರ ವೈವಾಟು ಮಣ್ಣ ಇದ್ದಿದ್ದರೆ ಪೇಟೆ  ಬೆಳೆತ್ತಿತೋ ಎನೋ, ಮುಖ್ಯವಾಗಿ ಮೀನುಗಾರಿಕೆ, ವಾಣಿಜ್ಯ ಬಂದರು, ಬಿಣಗಾದ ಕಾಸ್ಟಿಕ್ ಸೋಡಾ ಫಾಕ್ಟರಿ, ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಕೇಂದ್ರ, ಕದ್ರಾ ಪವರ್ ಹೌಸ್ ಇವುಗಳಿಂದಾಗಿ ರಜ ಜೆನ ಹೆಚ್ಚಾಯಿದು ಕಾರವಾರಲ್ಲಿ.
ಗಣಿ ಭರಾಟೆ ಈಗ ಇಲ್ಲೆ.

ಸುಂದರ ರಮಣೀಯ ಕಾರವಾರ

ಎರಡು ವರ್ಷದ ಹಿಂದೆ ಸುರುವಾದ ಎಂಜಿನಿಯರಿಂಗ್ ಕೋಲೇಜಿನ ಕಟ್ಟೋಣ ಮಾಜಾಳಿಲಿ ಆವುತ್ತಾ ಇದ್ದು.
ಇಲ್ಲಿ ಚಿನ್ನದ ವ್ಯಾಪಾರಿಗೊ (ಚಿನ್ನದ ಆಚಾರಿಗೊ) ಸೋನಾರ್ ಗೊ. ಸೋನಾರ್ ಗಳ ಚಿನ್ನದ ವ್ಯಾಪಾರ – ಮನೆಗಳಲ್ಲೇ, ಮಾಡಿ ಇಲ್ಲಿಂದ ಮಹಾರಾಷ್ಟ್ರಕ್ಕೆಲ್ಲ ಕಳುಸುತ್ತವಡ.
ಸಮುದ್ರ ಮಟ್ಟಂದ ಸಮ ಸಮ ಇಪ್ಪ ಜಾಗೆ. ಸಮುದ್ರಂದ ಘಟ್ಟದ ಬುಡಕ್ಕೊರೆಗೆ ಜಾಗೆಯೇ ಕಡಮ್ಮೆ ಇದ.
ಅಣಶಿ ಘಟ್ಟ, ದೇವಿಮನೆ, ದೊಡ್ಮನೆ, ಯೆಲ್ಲಾಪುರಕ್ಕೆ ಹೋಪಲೆ ಅರೆಬೈಲ್..
ಕೊಡೆಯಾಲದ ಹಾಂಗೆ ಕಟ್ಟೋಣ ಹೊಸ ಹೊಸತ್ತು ಬಯಿಂದಿಲ್ಲೆ, ಇಪ್ಪದರಲ್ಲೆ ತೃಪ್ತಿ ಇಪ್ಪವು ಕಾಣ್ತು.
ಇಲ್ಯಾಣವಕ್ಕೆ ಹೊತ್ತಿಂಗೊಂದು ತುಂಡು ಮೀನೂ, ಕತ್ಲೆಪ್ಪಗ ರಜ ಗೋವಾದ ಫೆನ್ನಿ/ಉರಾಕ್ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿ ಹೇಳಿ ಜೆನಂಗೋ ಆಡಿಕೊಳ್ತವು!
ಹಾಂಗೆ ಹೇಳಿ ಉಪದ್ರ ಇಲ್ಲೆ..ಗುರ್ತದವು ಪರಸ್ಪರ ಭೇಟಿ ಅಪ್ಪಗ ಮಾತು ಸುರುವಪ್ಪದೇ ಮೀನಿಂದ.. ನಿಸ್ತೆ ಕಿತೆ? ಆಜಿ ನಿಸ್ತೆ ಅನಿಕಚ್ ಐಲೆ ನ?(ಮೀನು ಎಂತ? ಇಂದು ಮೀನು ಬಯಿಂದಿಲ್ಲೆನ್ನೆ.. ) ಹೇಳಿ..
ಮೀನುಗಾರಿಕೆ ಬೈತಕೋಲ (ಅರೆಬಿಕ್: ಬೈತ್-ಎ-ಕೋಲ್-ಸುರಕ್ಷಿತ ಜಾಗ) ಬಂದರು ಇದ್ದು.
ಇಲ್ಲಿ ಯೇವಾಗಳು ಮೀನು ಸಿಕ್ಕುಗಡ..ಕಾರವಾರದ ಬಂದರು ನೈಸರ್ಗಿಕ ಬಂದರು.
ಇದು ಒಳ್ಳೆ ಆಯಕಟ್ಟಿನ ಜಾಗೆಲಿ ಇಪ್ಪಕಾರಣ ಕದಂಬ ನೌಕಾನೆಲೆಯೂ ಇಲ್ಲೇ ಅಪ್ಪಲೆ ಕಾರಣ ಆತು. ನೌಕಾನೆಲೆದು ವ್ಯಾಪ್ತಿ ಕಾರವಾರಂದ ಅಂಕೋಲದ ವರೆಗೂ ಇದ್ದು. ಅಮದಳ್ಳಿ ಹತ್ತರೆ ಸಮುದ್ರದ ಕರೆಯ ದೊಡ್ಡ ಗುಡ್ಡೆಯ ಅವು ಹೊಡಿತೆಗದ್ದವು..
ಅಲ್ಲಿ ಸಿಕ್ಕಿದ ಸೈಜು ಕಲ್ಲಿನ ಸಮುದ್ರಲ್ಲಿ ತಡೆ ನಿರ್ಮಾಣ ಮಾಡಿದ್ದವು (ಬ್ರೇಕ್ ವಾಟರ್ ವ್ಯೆವಸ್ತೆ). ಸಮುದ್ರಂದ ಹೊಇಗೆ ತೆಗದು ಹಡಗು ಬಪ್ಪಲೆ ಮಾಡಿದ್ದವು..

ಹಳಗಾ ಹತ್ತರೆ ಕಾಳಿ ನದಿ

ನೇವಲ್ ಡೇ (ದಶಂಬರ-೪ಕ್ಕೆ) ಸಮಯಲ್ಲಿ ಒಂದುವಾರ ಯುದ್ಧಹಡಗುಗಳ ಪ್ರದರ್ಶನಕ್ಕೆ ಮಡಗಿ ಸಾರ್ವಜನಿಕರಿಂಗೆ ನೋಡ್ಲೆ ಬಿಡುತ್ತವು.
ಇಲ್ಲಿ ಮುಖ್ಯವಾಗಿ ಯುದ್ಧ ಹಡಗುಗಳ ನೆಗ್ಗಿಮಡಗುವ (ಸಿಂಕ್ರೋ ಲಿಫ್ಟ್), ರಿಪೇರಿ ಮಾಡುವ ವ್ಯೆವಸ್ತೆ ಇದ್ದು.

ಇಲ್ಲಿ ಆದಿತ್ಯವಾರ ವಾರದ ಸಂತೆ..
ಬಂಕಿಕೊಡ್ಲ, ಹನೆಹಳ್ಳಿ, ಮಾಸ್ಕೇರಿ, ಗಂಗಾವಳಿ, ಗೋಕರ್ಣದ ಬಸಳೆ, ಕೆಸವಿನ ಗೆಡ್ಡೆ, ಹರುವೆ,ಕೆಂಬ್ಡೆ.. ಮಳೆಗಾಲಲ್ಲಿ ಕಡವಾಡದ ದಾರಳೆಕಾಯಿ, ಬೆಂಡೆಕಾಯಿ, ಅಲ್ಲದ್ದೆ ಜೀಗುಜ್ಜೆ..

ಇನ್ನು ಧಾರವಾಡ, ಕಲಘಟಕಿ, ಅಳ್ನಾವರ, ಹಳಿಯಾಳ, ಬೆಳಗಾವಿಯ ತರಕಾರಿ..

ಒಂದು ಲೈನು ಪ್ರತ್ಯೇಕ ಬುಟ್ಟಿಗಳೇ ಇತ್ಯಾದಿ ಹಾಲಕ್ಕಿ ಒಕ್ಕಲಿಗರು, ಕುಣಬಿಯವು ಕೂದೊಂಡಿರ್ತವು..
ಇನ್ನೊಂದು ಮಾರ್ಗಲ್ಲಿ ಇಡಿ ತರಹೇವಾರಿ ಒಣಮೀನು.
ಹಾಂಗೆಯೆ ಮಾರ್ಕೆಟ್ಟಿನ ಕಟ್ಟೋಣದ ಒಳ ಜುಮ್ಮನಕಾಯಿ. ಪುನರ್ಪುಳಿ ಓಡು, ಉಂಡೆಹುಳಿ, ಸೇಡಿಹೊಡಿ ಉಂಡೆ, ಕಾಜ(ಬೆಲ್ಲದ ಪಾಕಲ್ಲಿ ಅದ್ದಿದ ಕಾರದಕಡ್ಡಿ), ಖರ್ಜೂರ, ನಾಟಿಕೋಳಿ ಮೊಟ್ಟೆ ಮಾರುವ ಕಚ್ಚೆ ಹಾಕಿದ ಹೆಂಗಸರು ಇಕ್ಕು, ಅಲ್ಲೇ ಇಪ್ಪ ಸುಂಕೇರಿಕಾರ್ ನ ಕಟ್ಲೇರಿ ಅಂಗಡಿಲಿ ಅಬ್ಬೆ ಅಪ್ಪ ಬಿಟ್ಟು ಎಲ್ಲಾ ಸಿಕ್ಕುಗು..

ಮಾಜಾಳಿಂದ ಕಾಂಬ ದ್ವೀಪ

ಮಹಾಲೆಯ ನಶ್ಯದ ಅಂಗಡಿ..ಶೆಟ್ಟಿಯ ಜೀನಸು (ದಿನಸಿ) ಅಂಗಡಿ.. ರಾಮಮೂರ್ತಿಯವರ ಹೋಟ್ಲು, ಸೈಕಲ್ಲು ಅಂಗಡಿ..ಕಾರವಾರಲ್ಲಿ ಈಗಳೂ ಬಾಡಿಗಗೆ ಸೈಕಲ್ಲು ಸಿಕ್ಕುತ್ತು..
ವ್ಯಾಪಾರಿಗೊ ಮಧ್ಯಾನಪ್ಪಗ ಅಂಗಡಿ ಮುಚ್ಚುಗು, ಮತ್ತೆ ಕತ್ಲೆಗೆ ೦೪ ರ ನಂತ್ರವೇ ತೆಗವದು..

ಬಾಗಿಲು ಹಾಕಲಪ್ಪಗ ಹೊದರೆ “ಫಲೆ ಯೋರೇ” (ನಾಳೆ ಬಾ) ಹೇಳುಗು..
ಇತ್ತೀಚೆಗೆ ಪರಿಸ್ಥಿತಿ ಬದಲಾಯಿದು. ಮಾರ್ವಾಡಿಗಳ ಜವುಳಿ, ಸ್ವೀಟು ಅಂಗಡಿಗೋ ಸಾಮಾನ್ಯ ಕಾಂಗು..ಸಮುದ್ರ ಕರೆಲಿ ಎಲ್ಲ ತಳ್ಳು ಗಾಡಿಗೊ ಅವರದ್ದೇ, ಭೇಲ್ ಪುರಿ, ಪಾನಿ ಪೂರಿ, ಮಸಾಲ ಪೂರಿ, ಪಾವ್ ಭಾಜಿದು.

ಹಾಂ, ಚೌತಿ ಇಲ್ಲಿ ತುಂಬ ಗೌಜಿಲಿ ಆಚರಣೆ ಮಾಡ್ತವು. ಪರಊರಿಲ್ಲಿ – ಹೆಚ್ಚಾಗಿ ಬೊಂಬಾಯಿಲಿಪ್ಪ ಕುಟುಂಬದೋರೆಲ್ಲ ಒಟ್ಟಿಂಗೆ ಸೇರ್ಲೆ ಸುಸಮಯ.
ಕಾರವಾರ ಪೇಟೆಲಿ ಆರೇಳು ಸಾರ್ವಜನಿಕ ಗಣಪತಿ ಉತ್ಸವ ಇರ್ತು, ಒಂದು ವಾರ, ಇದರಲ್ಲಿ ರಿಕ್ಷಾದವರದ್ದು, ವ್ಯಾಪರಸ್ತರದ್ದು, ಕೋಡಿಭಾಗದ್ದು ಎಲ್ಲ.
ವ್ಯಾಪರಸ್ತರ ಗಣಪತಿ ಈ ವರ್ಷಂದ ಶಾಶ್ವತ ದೇವಸ್ಥಾನವೇ ಆಯಿದು..ಸಿಧ್ಧಿವಿನಾಯಕ ದೇವಸ್ಥಾನ, ಸಣ್ಣಕೆ, ತುಂಬಾ ಚೆಂದಕೆ ಕಟ್ಟಿದ್ದವು. ಚೌತಿ ದಿನ ಕತ್ತಲೆ ಆದರೆ ಆರುದೇ ಹೆರ ಬೀಳವು, ಎಲ್ಯಾರು ಚಂದ್ರನ ಕಂಡ್ರೊ°., ಹೆಚ್ಚಾಗಿ ಕಾರವಾರ ತಾಲೂಕಿಲ್ಲಿ ಕೊಂಕಣಿ (ಮರಾಠಿ ಮಿಶ್ರಿತ) ಜೆನರ ಆಡು ಭಾಷೆ..
ಶಾಲೆಗೊಕ್ಕೆ ಕನ್ನಡ ಶಾಲೆ ಹೇಳ್ತವು,,ಮದಲಿಂಗೆ ಮರಾಠಿ ಶಾಲೆಗಳೂ ಇದ್ದತ್ತಡ.

ಇಲ್ಲಿ ಮರಾಠಿ ಪದಂಗಳ ಬಳಕೆ ಹೆಚ್ಚು ಇದ್ದು, ವಾಡ, ಗಡ ಇತ್ಯಾದಿ.  ಕಾರವಾರಲ್ಲಿ ಕೋಮಾರಪಂತ್, ಕೊಂಕಣ್ ಮರಾಠಾ, ಸೋನಾರ್ (ವೆರ್ಣೇಕರ್, ಶೇಟ್, ರೇವಣಕರ್), ಬಂಡಾರಿ, ಪಡ್ತಿ , ಅಲ್ಲದ್ದೆ ಮೀನುಗಾರರು (ಖಾರ್ವಿ, ಪಾಗಿ, ನಮ್ಸೆಕರ್, ಕಾಣಕೋಣಕರ್, ತಳ್ಪನ್ಕರ್), ದೇವಳಿ, ಬಾಂದೇಕರ್, ಹಾಲಕ್ಕಿ ಗೌಡ ಜಾತಿಗೆ ಸೇರಿದವು ಇದ್ದವು.

ಗೌಡ ಸಾರಸ್ವತ, ಬ್ರಾಹ್ಮಣ ಇತರರೂ ಇದ್ದವು. ಸಮುದ್ರದ ಕರೆಲಿಯೇ ಮೀನುಗಾರರ ಕುಟೀರಂಗೊ, ಅಲ್ಲಿಯೇ ಬಲೆ ರಿಪೇರಿ ಇತ್ಯಾದಿ ಮಾಡ್ತಾ ಇರ್ತವು. ಮಿಲಿಟ್ರಿಲಿಯೂ ಸಾಕಷ್ಟು ಜೆನ ಇದ್ದವು. ಇಲ್ಯಾಣ ಚೆಂಡಿಯಾದ ರಾಮ ರಾಘೋಬ ರಾಣೆ ೧೯೪೮ ರಲ್ಲಿ ಪರಮ ವೀರಚಕ್ರ ಕ್ಕೆ ಭಾಜನ ಆಯಿದನಡ. ಕರ್ನಾಟಕಕ್ಕೆ ಸಿಕ್ಕಿದ ಒಂದೇ ಪರಮ ವೀರ ಚಕ್ರ ಅದು.

ಶಿವಾಜಿಯ ಕೋಟೆ ಇದ್ದು. ಸದಾಶಿವಘಡಲ್ಲಿ.ವಿವರ ಹಿನ್ನೆಲೆ ಎಲ್ಲ ಇನ್ನೊಂದಾರಿ ಬರೆತ್ತೆ,

ಸದಾಶಿವಗಢದ ಬಗ್ಗೆ

ಕೂರ್ಮಘಡ ದ್ವೀಪಲ್ಲಿ ವರ್ಷಕ್ಕೊಂದಾರಿ ಸಂಕ್ರಾಂತಿಗೆ ನರಸಿಂಹ ದೇವರ ಜಾತ್ರೆ ನೆಡೆತ್ತು..ಸದಾಶಿವಗಡಂದ ಬೋಟುಗಳಲ್ಲಿ ಜನ ಜಾತ್ರೆ..
ದೇವಳಮಕ್ಕಿ ಹತ್ತರಾಣ ಶಿರ್ವೆ ಗುಡ್ಡೆಯ ಕೊಡಿಲಿಪ್ಪ ಸಿದ್ಧರಾಮೇಶ್ವರ ದೇವರ ಜಾತ್ರೆಯೂ ಇದೇ ಸಮಯಕ್ಕೆ ನೆಡೆತ್ತು.
ವರ್ಷಕ್ಕೊಂದಾರಿ ಮಾಂತ್ರ ಇಲ್ಲಿ ಪೂಜೆ/ಜಾತ್ರೆ ಎಲ್ಲ. ಶಿರ್ವೆ ಗುಡ್ಡೆಂದ ಕೈಗಾ ಟೌನ್ ಶಿಪ್, ಕದ್ರಾ ಜಲಾಶಯ, ಕಾಳೀ ನದಿಯ ಹರಿವು ಎಲ್ಲಾ ಕಾಂಬಲೆ ತುಂಬಾ ಚೆಂದ.

ಆ ಗುಡ್ಡೆ ಮನುಷ್ಯ ಮೊಗಚ್ಚಿ ಮನುಗಿದ ಹಾಂಗೆ ಕಾಂಬದು..ಕಾಲು, ಹೊಟ್ಟೆ, ಮೂಗು, ತಲೆ.

ಚೆಂದದ ಗುಡ್ಡೆಹಳ್ಳಿ..ಅಮದಳ್ಳಿ ಹತ್ತರೆ, ಶಿರ್ವೆ..ದೇವಳಮಕ್ಕಿ, ಮಲ್ಲಾಪುರದ ಹತ್ತರೆ ಚಾರಣಿಗರಿಂಗೆ ಒಳ್ಳೆ ಜಾಗೆ. ಅದಲ್ಲದ್ದೆ ಉಳವಿ-ಶಿವಪುರ, ಅಣಶಿ, ಯಾಣ ಎಲ್ಲವು ಹೋಪಾಂಗೇ ಇದ್ದು.

ಸದಾಶಿವಗಢ

ಕಾರವಾರ ಮತ್ತೆ ಸುತ್ತಮುತ್ತ ನೋಡುವ ಜಾಗೆಗೊ:
 • ವೀರ ಗಣಪತಿ ದೇವಸ್ಥಾನ, ಅಮದಳ್ಳಿ
 • ಬಿಣಗಾ ಬೀಚ್ (ಈಗ ಕದಂಬ ನೌಕಾನೆಲೆಯ ಸ್ವಾಧೀನಲ್ಲಿದ್ದು)
 • ಮಾರುತಿ ದೇವಸ್ಥಾನ, ಕಾರವಾರ
 • ಠಾಗೋರ್ ಬೀಚ್
 • ಯುದ್ಧನೌಕಾ ಮ್ಯೂಸಿಯಮ್ (ಐ.ಯನ್.ಯಸ್.ಚಪಲ್)
 • ಕಾಳೀ ನದಿ ಸೇತುವೆ – ಅಳಿವೆ
 • ದೆವಭಾಗ್ ಬೀಚ್ ,ರಿಸೋರ್ಟ್, ಕೈರಳಿ ಹೌಸ್ ಬೋಟ್
 • ಸದಾಶಿವಘಡ

  ಸದಾಶಿವಗಢ ದುರ್ಗಾ

 • ಮಾಜಾಳಿ ಬೀಚ್
 • ಮಹಾಮಾಯಾ ದೇವಸ್ಥಾನ, ಕದ್ರಾ
 • ಕದ್ರಾ ಜಲಾಶಯ, ಪವರ್ ಹೌಸ್
 • ಕೈಗಾ ಅಣು ವಿದ್ಯುತ್ ಕೇಂದ್ರ.
 • ಅಣಶಿ ರಕ್ಷಿತಾರಣ್ಯ-ಅಣಶಿ ಫಾಲ್ಸ್ (ಮಳೆಗಾಲಲ್ಲಿ ಮಾತ್ರ)
 • ಕೊಡಸಳ್ಳಿ ಜಲಾಶಯ
 • ದೇವಕಾರ್ ಫಾಲ್ಸ್
ನಡುಗಡ್ಡೆಗೊ..
 • ಕೂರ್ಮಗಢ
 • ದೇವಗಡ್ ಲೈಟ್ ಹೌಸ್
 • ಅಂಜುದೀವ್
ಕಾರವಾರ ತಾಲೂಕಿನ ಕೆಲವು ಗ್ರಾಮಂಗೊ/ಜಾಗೆಗೊ ಹೀಂಗಿದ್ದು..

ದೇವಭಾಗದ ಪ್ರವಾಸೀ ಮನೆ

ಕೈಗಾ, ವಿರ್ಜೆ, ಮಲ್ಲಾಪುರ. ಕದ್ರಾ, ಬೋರೆ, ಭೈರೆ, ಬಾಳ್ನಿ, ಗೋಟೆಗಾಳಿ, ಹೋಟೆಗಾಳಿ, ಹಪಕರ್ಣಿ,ಹಣಕೋಣ, ಅಸ್ನೋಟಿ, ಕುಳಗೆ, ಸದಾಶಿವಗಡ, ಚೆಂಡಿಯ, ನಂದನಗದ್ದಾ, ಸುಂಕೇರಿ,ಕೋಡಿಭಾಗ,  ಇರ್ಪಾಗೆ, ಬೋಳ್ವೆ, ಕೇರವಡಿ, ಕಡಿಯೆ, ದೇವಳಮಕ್ಕಿ, ನೈತಿಸಾವರ, ನಗೆ, ಕೋವೆ, ಖಾರ್ಗಾ, ವೈಲವಾಡ, ಸಕಲವಾಡ, ಸಿದ್ದರ, ಕಿನ್ನರ, ಕಡವಾಡ, ಶಿರವಾಡ, ಶೆಜವಾಡ, ಬಾಂಡಿಶಿಟ್ಟಾ, ಹಬ್ಬುವಾಡ, ಉಳಗ, ಹಳಗ, ಗೋವಾದ ಹೊಡೆಂಗೆ ಮುಡಗೇರಿ, ಮಾಜಾಳಿ, ಹೊಸಾಳಿ..ಅಂಕೋಲದ ಹೊಡೆಂಗೆ ಬಿಣಗಾ, ಚೆಂಡಿಯ, ತೊಡೂರು, ಅಮದಳ್ಳಿ, ಮುದ್ಗ ,..

ಕೆರವಡಿಂದ ಉಳಗಕ್ಕೆ ಕಾಳಿ ನದಿಲಿ ಬಾರ್ಜ್ ಸೌಕರ್ಯ ಇದ್ದು. ಸೈಕಲ್ಲು, ಸ್ಕೂಟರು, ಜನ ಜಾನುವಾರುಗೊಕ್ಕೆ..ಈ ಕಾಳಿ ನದಿಲಿಯೂ ಸುಮಾರು ಜನವಸತಿ ಇಪ್ಪ ಜೂಗಂಗೊ (ದ್ವೀಪ) ಇದ್ದು. ರಿಯಲ್ ಟೀವಿಯ ರಿಯಾಲಿಟಿ ಶೋ “ಸರ್ಕಾರ್ ಕಿ ದುನಿಯಾ” ಖಾರ್ಗಾ ಜೂಗ ಲ್ಲಿ ಸೆಟ್ಟೇರಿದ್ದತ್ತು.


ಕಾಳಿ ನದಿಲಿ ಬಾರ್ಜ್

ಹಳಗಲ್ಲಿ ಇಪ್ಪ ಸೈಂಟ್ ಮೇರಿಸ್ ಪಕ್ಷವಾತ ಆಸ್ಪತ್ರೆಗೆ ದೂರದ ಊರಿಂದ ಎಲ್ಲ ಬತ್ತವು. ಅವರ ನಿರ್ಗತಿಕರಿಂಗಿಪ್ಪ ಆಶ್ರಮವೂ ಉಳಗ ಹೇಳುವಲ್ಲಿ ಇದ್ದು. ತೊಡೂರಿಲ್ಲಿ ಹಾಲಕ್ಕಿ ಗೌಡ ಪರಂಪರಾಗತವಾಗಿ ಎಲುಗು ಮುರುದ್ದಕ್ಕೆ ಮದ್ದು ಕೊಡ್ತು. ಎರಡು ಉಂಡಗೊ, ಒಂದರ ಸೇಡಿ ಹೊಡಿಲಿ ಅರದು ಕಿಟ್ಲೆ, ಇನ್ನೊಂದು ಹೊಟ್ಟಗೆ ತೆಕ್ಕೊಂಬಲೆ, ಒಳ್ಳೆ ಕೈಗುಣ..

ಖಾಲಿ ಬೈಲು, ಗುಡ್ಡೆಗೊ ಕೆಲವಿದ್ದು..ಈಗಾಣವು ಗೆದ್ದೆ ಎಲ್ಲ ಬಿಟ್ಟು ಗೋವಾಕ್ಕೆ ಮೋರೆ ಮಾಡಿದ್ದವು. ಫಾಕ್ಟರಿ, ಟೂರಿಸಂಲ್ಲಿಯೋ ಕೆಲಸ ಮಾಡ್ತವು, ಕಾರವಾರಂದ ದಾಂಡೇಲಿಗೆ ಹೋಪ ಮಾರ್ಗದ ಕರೆಲಿ ಇಪ್ಪ ಗೆದ್ದೆಗೊ ಎಲ್ಲಾ ಖಾಲಿ ಖಾಲಿ..ಈಗ ಎರದು ವರ್ಷಂದ ಆರೋ ಬೇರೆಯವು ಬಚ್ಚಂಗಾಯಿ ಬೆಳಶುತ್ತವು..ರಬ್ಬರು ಇಲ್ಲೆಪ್ಪ, ಇನ್ನುವರೇಗೆ ಕೊಚ್ಚಿಯವರ ಕಣ್ಣು ಬಿದ್ದಿದಿಲ್ಲೆಯೊ ಅಲ್ಲ ಅವರ ಕೂಟದವು ಇಲ್ಲೆಯೋ..ಸಾಧಾರಣ ಭಟ್ಕಳ, ಹೊನ್ನಾವರವರೇಗೆ ಎತ್ತಿದ್ದವು ಅವು..
ಮಳೆಗಾಲ ಮುಗುದು ಒಕ್ಟೋಬರ-ನವಂಬರದ ವರೇಗೆ ಜಲಪಾತಂಗೊ ತುಂಬಾಇದ್ದು..ಅಣಶಿ, ಕೈಗಾ, ದೇವಕಾರ ಇತ್ಯಾದಿ.
ಕೊಂಕಣ ರೈಲು ಸುರುವಾದ ಮೇಲೆ ಕಾರವಾರಕ್ಕೆ ರೈಲು ಸಂಪರ್ಕ ಬಂತು. ಈಗ ಬೆಂಗಳೂರಿಂದಲೂ ರೈಲು ಬಿಟ್ಟಿದವು!  ಮದಲಿಂಗೆ ಬೊಂಬಾಯಿಂದ ಸದಾಶಿವಗಡದವರೇಗೆ ಬಸ್ಸುಗೊ ಇತ್ತಡ. ಕಾಳಿಗೆ ಸಂಕ ಅಪ್ಪನ್ನ ಮದಲು ಕಾಳಿ ನದಿಗೆ ಬಾರ್ಜ್ ವ್ಯೆವಸ್ತೆಯೂ ಇತ್ತಡ. ವಿಮಾನ ಹತ್ತೆಕಾರೆ ಗೋವಾದ ಡಾಬೊಲಿಮ್ ಗೆ ಹೋಯೆಕು.
ಕರಾವಳಿಯ ಹವೆ..ಎರಡೇ ಕಾಲ..ಮಳೆಗಾಲ, ಸೆಖೆಗಾಲ
ಕೋಡಿಭಾಗದ ಕಾಳಿ ಸಂಕದ ಕೆಳಂದ ದೇವಭಾಗ್ ಬೀಚ್, ಡಾಲ್ಫಿನ್ ಎಲ್ಲ ನೋಡ್ಲೆ ಬೋಟು ಇರ್ತು, ಒಂದು ಟ್ರಿಪ್ಪಿಂಗೆ ಒಬ್ಬಂಗೆ ೩೫೦ ರೂಪಾಯಿ. ಎರಡು ಘಂಟೆಯ ಟ್ರಿಪ್..ಜಂಗಲ್ ಲೋಡ್ಜ್  & ರಿಸೋರ್ಟ್ ನವು ಏರ್ಪಾಡು ಮಾಡ್ತವು.

ದೇವ್ ಭಾಗ್

ದೇವಗಢಲ್ಲಿ  ಲೈಟ್ ಹೌಸ್ ಇದ್ದು, ಆದರೆ ಅಲ್ಲಿಗೆ ಹೋಪಲೆನೌಕಾನೆಲೆಯವರ ಒಪ್ಪಿಗೆ ಬೇಕಾವುತ್ತು..

ಕಾರವಾರ ಹೇಳಿಯಪ್ಪಗ ಇಲ್ಯಾಣ ಕೋಣಿನಾಲಾದ ಬಗ್ಗೆಯೂ ಬರೆಕಾವುತ್ತು. ಇದು ಸಮುದ್ರಕ್ಕೆ ಸೇರ್ತು.
ಆದರೆ ಸಮುದ್ರದ ಉಬ್ಬರ ಇಪ್ಪಗ ನೀರು ಸರೀ ಹರಿತ್ತಿಲ್ಲೆ – ಇಳಿತಲ್ಲಿ ರಜ ನಿದಾನ..ಈಗ ರಜ ವರ್ಷಂದ ವ್ಯೆವಸ್ತೆ ಸುದಾರಣೆ ಮಾಡಿದ್ದವು..
ಒಟ್ಟಿಲ್ಲಿ ಕಾರವಾರ ಸುಂದರ ಪರಿಸರ ಇಪ್ಪ ಜಾಗೆ. ಆದರೂ ಏಕೋ ಅಷ್ಟು ಪ್ರವಾಸಿಗರಿಂಗೆ ಆಕರ್ಷಣೆ ಇಲ್ಲೆ.
ಗೋವಾಕ್ಕೆ ಹೊಪವಕ್ಕೆ ಹೋಪ ದಾರಿಯಾಗಿಯೇ ಒಳುದ್ದು.
ಕಾರವಾರ ಹೇಳುವ ಈ ಅಮೋಘ ಪರಿಸರದ ಸೌಂದರ್ಯ ಲೋಕಕ್ಕೆ ಗೊಂತಾಗಲಿ.
ನಮ್ಮದೇ ರಾಜ್ಯದ, ನಮ್ಮದೇ ಊರಿನ ಹತ್ತರೆ ಇಪ್ಪ ಇಷ್ಟು ಚೆಂದದ ಈ ಜಾಗೆಯ ಸೌಂದರ್ಯವ ಎಲ್ಲೋರು ಸವಿಯುವ ಹಾಂಗೆ ಆಗಲಿ.
ಸೂ:
ಪಿ.ಬಿ.ಶ್ರೀನಿವಾಸ್ ಹಾಡಿದ “ನಾ ನೋಡಿ ನಲಿಯುವ ಕಾರವಾರ” ಪದ ಇಲ್ಲಿ ಕೇಳುಲಕ್ಕು: ನಾ ನೋಡಿ ನಲಿಯುವ ಕಾರವಾರ

ಉಂಡೆಮನೆ ಕುಮಾರ°

   

You may also like...

24 Responses

 1. ಕುಮಾರಣ್ಣ,

  ಬನಾರಿ ಮದುವೆ ದಿನ ಬೈಲಿನ ಬಂಧುಗಳ ಮಿಲನದ ಹಾಂಗೆ ಆಗಿ ತುಂಬಾ ಲಾಯ್ಕಾತು. ಊಟ ಮಾಡಿದ್ದದರಿಂದ ಹೆಚ್ಚು ಸಂತೋಷಲ್ಲಿ ಹೊಟ್ಟೆ ತುಂಬಿದ್ದು. ದೂರಲ್ಲಿದ್ದ ಮಾಮಾಸಮನ ಹತ್ತರೆಯೂ ಫೋನಿಲಿ ಮಾತಾಡಿದ ಕಾರಣ ಅವನೂ ಅಲ್ಲಿಯೇ ಇದ್ದ ಹಾಂಗೆ ಆತು. ಬೈಲಿನ ಚಾವಡಿಯೋರು ಸಮೋಸಲ್ಲಿ ಒಟ್ಟಿಂಗೆ ಇತ್ತಿದ್ದವನ್ನೇ!!!! 😉

  ಕಾರವಾರ ನವಗೆ ಹತ್ತರೆ ಇಪ್ಪ ಒಂದು ಚೆಂದದ ಜಾಗೆ. ಹೆರಾಣೋರ ಧಾಳಿ ಆಗದ್ದೆ ಇನ್ನುದೇ ಸಹಜತೆಯ ಒಳಿಶಿಗೊಂಡ ಹಾಂಗೆ ಇದ್ದು. ನಿಂಗೊ ಜಾಗೆಯ ವಿವರ ಕೊಟ್ಟದು ತುಂಬಾ ಲಾಯ್ಕಾಯಿದು ಕುಮಾರಣ್ಣ. ಒಂದರಿ ಬರೆಕ್ಕು ನಿಂಗಳ ಹೊಡೆಂಗೆ. ಪದ್ಯವೂ ಲಾಯ್ಕ ಇದ್ದು.

  ತುಂಬಾ ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *