ನಾವು ಎಂತಕೆ ಹಣಗೆ ತಿಲಕವ ಮಡುಗುತ್ತು?

ನಾವು ಧಾರ್ಮಿಕ ಭಾರತೀಯರು ಹಣಗೆ ತಿಲಕವ (ಬೊಟ್ಟು) ಮಡುಗುತ್ತದು ಕ್ರಮ. ಅದರಲ್ಲೂ ವಿವಾಹಿತ ಮಹಿಳೆ ಯಾವಾಗಲೂ ಹಣೆಯ ಮೇಲೆ ಕುಂಕುಮ ಧರಿಸೆಕು ಹೇಳಿ ಪದ್ಧತಿ. ಸಂಪ್ರದಾಯ ಕುಟುಂಬದವು ಶಾಸ್ತ್ರೋಕ್ತ ಕ್ರಮಲ್ಲೇ ಬೊಟ್ಟು ಮಡುಗುತ್ತವು. ಸಾಧು ಸಂತರ ಹಣೆಲಿ ವಾ ದೇವರ ವಿಗ್ರಹಲ್ಲಿ ಪೂಜನೀಯ ಭಾವಲ್ಲಿ ಬೊಟ್ಟು ಮಡುಗುವದು. ಹಲವು ಕಡೆ ಅತಿಥಿಗೊಕ್ಕೆ ಗೌರವಪೂರ್ವಕ ಸ್ವಾಗತಿಸುವ ಸಂಕೇತವಾಗಿ ತಿಲಕ ಮಡುಗುವದಿದ್ದು, ಅಥವಾ ಆರನ್ನಾರು ಬೀಳ್ಕೊಡುವ ಸಂದರ್ಭಲ್ಲಿಯೂ ತಿಲಕವ ಇಟ್ಟು ಪುರಸ್ಕರಿಸುವ ಕ್ರಮವೂ ಇದ್ದು . ಪತಿಯ ಶುಭಕಾರ್ಯಕ್ಕೆ ಕಳುಹಿಸಿ ಕೊಡುವ ಸಂದರ್ಭಲ್ಲಿ ಪತ್ನಿ ತಿಲಕವ ಇಟ್ಟು ಶುಭ ಹಾರೈಸುವ ಕ್ರಮವೂ ಇದ್ದು. ಈ ಪದ್ಧತಿ ವೈದಿಕ ಕಾಲಲ್ಲಿ ಇತ್ತಿಲ್ಲೆಡ. ಪೌರಾಣಿಕ ಕಾಲಲ್ಲಿ ಜನಪ್ರಿಯ ಆದ್ದಡ. ಈ ರೂಢಿ ದಕ್ಷಿಣ ಭಾರತಲ್ಲೇ ಉಗಮ ಆದ್ದು ಹೇಳಿಯೂ ಕೆಲವು ಅಭಿಮತ.

ತಿಲಕ ಧರಿಸುವವನ ಮನಸ್ಸಿಲ್ಲಿ ಮತ್ತು ಇತರರಲ್ಲಿ ಪಾವಿತ್ರ್ಯತೆಯ ಭಾವ ಉಂಟಾವ್ತು. ಇದೊಂದು ಧಾರ್ಮಿಕ ಚಿಹ್ನೆ ಹೇಳಿಯೂ ಹಲವು ಜೆನಂಗೊ ಭಾವುಸುತ್ತವು. ಇದರ ಆಕಾರ ಮತ್ತು ಬಣ್ಣ ಅವರವರ ಜಾತಿ ಧರ್ಮಕ್ಕನುಸಾರವಾಗಿ , ಕುಲದೇವತೆಯ ಗುಣಕ್ಕನುಸಾರವಾಗಿ ವಿವಿಧ ರೀತಿಲಿ ಇರ್ತು. ಪೂರ್ವಲ್ಲಿ ವರ್ಣ ಧರ್ಮಾನುಸಾರವಾಗಿ ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಬೇರೇ ಬೇರೇ ರೀತಿಲಿ ತಿಲಕ ಮಡಿಕೊಳ್ಳುತ್ತವು.   ಬ್ರಾಹ್ಮಣ – ಶುದ್ಧ ಆಚಾರ , ಉತ್ತಮ ವೃತ್ತಿ ಧರ್ಮದ ಸಂಕೇತವಾಗಿ ಬಿಳಿಯ ಚಂದನದ ಗುರುತವ, ಕ್ಷತ್ರಿಯ ತನ್ನ ವಂಶದ ಸಾಹಸ ಗುಣಕ್ಕನುಗುಣವಾಗಿ ಕೆಂಪು ಬಣ್ಣದ ಕುಂಕುಮ , ವೈಶ್ಯ – ವರ್ತಕ (ವ್ಯಾಪಾರಿ) ಧನ ಸಂಪಾದನೆಯೇ ತನ್ನ ವೃತ್ತಿ ಧರ್ಮಕ್ಕನುಗುಣವಾಗಿ ಅಭಿವೃದ್ಧಿ ಸೂಚಕವಾಗಿ ಅರಶಿನ , ಶೂದ್ರ – ಇತರ ಮೂರು ವರ್ಣದವರ ಸೇವಕ ಆದ್ದರಿಂದ ಅವರ ಅನುಸರುವವನಾಗಿ ಕಪ್ಪು ಬಣ್ಣದ ಭಸ್ಮ ಅಥವಾ ಕಸ್ತೂರಿ ತಮ್ಮ ಹಣಗೆ ಮಡಿಕ್ಕೊಂಡಿರ್ತವು. ಹಾಂಗೇ ವೈಷ್ಣವರು ನೆಟ್ಟಗೆ ಬಾಣಾಕಾರದ ಚಂದನದ ನಾಮ  , ಶೈವರು = ತ್ರಿಪುಂಡ್ರ  (ಮೂರು ಅಡ್ಡ ಗೆರೆ) ಭಸ್ಮ , ಶಾಕ್ತರು ಕೆಂಪು ಬೊಟ್ಟು ಅಥವಾ ಕುಂಕುಮವನ್ನೂ ಹಣಗೆ ಧರಿಸುತ್ತವು.

ತಿಲಕ (ಬೊಟ್ಟು) ಎರಡು ಹುಬ್ಬುಗಳ ಮಧ್ಯಲ್ಲಿ ಮಡುಗುತ್ತದು ಕ್ರಮ. ಯೋಗ ಶಾಸ್ತ್ರ ಪ್ರಕಾರ ಈ ಸ್ಥಾನ ‘ಆಜ್ಞಾ ಚಕ್ರ’ ಹೇಳಿ ಹೇಳುತ್ತವಡ. ತಿಲಕ ಮಡುಗುವಾಗ ಮನಸ್ಸಿಲ್ಲಿ ಈ ರೀತಿ ಪ್ರಾರ್ಥನೆ – ‘ಆನು ಪರಮಾತ್ಮನ ಸದಾ ನೆನಪಿಲ್ಲಿ ಮಡಿಕ್ಕೊಳ್ಳುವಂತನಾಯೆಕು, ಈ ಶುದ್ಧ ಭಾವನೆ ಸದಾ ಎನ್ನ ಅಲ್ಲಾ ಚಟುವಟಿಕೆಲಿ ಪ್ರಚೋದಿಸೆಕ್ಕು, ಆನು ಪ್ರಾಮಾಣಿಕನಾಗಿ ಎನ್ನ ಕರ್ತವ್ಯ ಮಾಡುವಂತನಾಯೆಕು’. ನಾವು ತಾತ್ಕಾಲಿಕವಾಗಿ ಈ ಮನೋಧರ್ಮವ ಮರದರೂ ಇನ್ನೊಬ್ಬನ ಹಣೆಲಿ ಇಪ್ಪ ತಿಲಕವು ನಮ್ಮ ಸಂಕಲ್ಪವ ನೆನಪಿಸುತ್ತು ಹೇಳಿ ನಂಬಿಕೆ. ಹೀಂಗೇ ತಿಲಕ ಪರಮಾತ್ಮನ ಕೃಪಾಕಟಾಕ್ಷವ ಸೂಚಿಸುತ್ತದಲ್ಲದೆ, ದುಶ್ಚಟ ನಿರ್ಬಂಧನೆಗಳ ವಿರುದ್ದ ನಿಂದು ‘ಶ್ರೀರಕ್ಷೆ’ಯಾಗಿ ನಮ್ಮ ಕಾಪಾಡುತ್ತು. ಕುಂಕುಮ ಚಂದನ ಅರಶಿನ ಕರಿ ಬೊಟ್ಟು ಎಲ್ಲಾ ಹೋಗಿ ಈಗಾಣ ಕಾಲಲ್ಲಿ ಸ್ಟಿಕ್ಕರ್ ಬಾಯಿಂದನ್ನೇ ಹೇಳಿ ಕೇಳಿರೆ, ಚಿನ್ನ ಹಿತ್ತಾಳೆ ಕೀಜಿ   ಪಾತ್ರ ಹೋಗಿ ಸ್ಟೀಲ್ ಅಲ್ಲುಮಿನಿಯಂ ಪಾತ್ರ ಬೈಂದನ್ನೇ ಹೇಳುವದೇ ಉತ್ತರ.

ಇಡೀ ಶರೀರ ತನ್ನ ಅಂತಃ ಶಕ್ತಿಯ ವಿದ್ಯುತ್ಕಾಂತ ಅಲೆಗಳ ಮೂಲಕ ಹೊರ ಚಿಮ್ಮುಸುತ್ತು. ಅದರಲ್ಲೂ, ಮುಖ್ಯವಾಗಿ , ಹಣೆ ಮತ್ತು ‘ಆಜ್ಞಾ ಚಕ್ರ’ ಸ್ಥಾನಂದ ಹೆಚ್ಚು ಶಕ್ತಿ ವ್ಯಯವಾವ್ತು. ಆದ್ದರಿಂದಲೇ ಚಿಂತೆ ಆತಂಕ ಹೆಚ್ಚಪ್ಪಗ ಶರೀರಲ್ಲಿ ಉಷ್ಣ ಉಲ್ಬಣಿಸಿ ತಲೆ ಬೇನೆ ಬಪ್ಪದಿದ್ದಡ. ಆದರೆ, ತಿಲಕ ಹಣಗೆ ತಂಪು ನೀಡಿ ಇಂಥಹ ವ್ಯಾಧಿಗಳಿಂದ ರಕ್ಷಿಸುತ್ತು ಮತ್ತು ಅಂತಃ ಶಕ್ತಿಯ ವೃಥಾ ಕ್ಷಯ ಅಪ್ಪದರ ತಪ್ಪುಸುತ್ತು ಹೇಳಿ ನಂಬಿಕೆ. ಆದ್ದರಿಂದಲೇ ಅನೇಕ ಬಾರಿ ಇಡೀ ಹಣೆಯ ಭಸ್ಮ ವಾ ಚಂದನಂದ ಲೇಪುಸುತ್ತವು.  ಕೃತಕ ಬೊಟ್ಟುಗೊ ಅಲಂಕಾರಯುಕ್ತ ಹೊರತು ಆರೋಗ್ಯಕರವಲ್ಲ. ಧಾರ್ಮಿಕ ಭಾರತೀಯರ ಈ ಅನುಪಮ ಪದ್ಧತಿಯಿಂದಾಗಿ ಎಲ್ಲಿ ಬೇಕಾರು ಜೆನ ನಮ್ಮ ಸುಲಭಲ್ಲಿ ‘ಭಾರತೀಯ’ ಹೇಳಿ ಗುರ್ತ ಹಿಡಿವಲೂ ಸಹಕಾರಿ ಆವ್ತು.

ಹರೇ ರಾಮ.

(ಸಂಗ್ರಹ)

ಚೆನ್ನೈ ಬಾವ°

   

You may also like...

30 Responses

 1. ಚೆನ್ನೈ ಭಾವ says:

  ಧನ್ಯವಾದ ಅಪ್ಪಚ್ಚಿಗೆ. ನಿಂಗೊ ಇಲ್ಲಿ ಪ್ರತಿ ಸೋಮವಾರ ಒಪ್ಪುಸುವ ರುದ್ರ ಗೀತೆಯೇ ಇದಕ್ಕೇ ಮೂಲ ಕಾರಣ. ೩೬೫ ಪುಟ ಇಪ್ಪ ದೊಡ್ಡ ಪುಸ್ತಕವ ಓದುವಷ್ಟು , ಓದಿ ಅರ್ಥೈಸುವಷ್ಟು, ವ್ಯವಧಾನ ನಮ್ಮಲ್ಲಿ ಪ್ರತಿಯೊಬ್ಬನ ನಿತ್ಯ ವ್ಯವಹಾರಲ್ಲಿ ಅಸಾಧ್ಯ. ಹಾಂಗಾಗಿ ಒಂದು ಶುದ್ಧಿ ಸೂಕ್ಷ್ಮವಾಗಿ ಇಲ್ಲಿ ಪರಿಚಯಿಸುವ ಪ್ರಯತ್ನ.

 2. ಬೊಳುಂಬು ಕೃಷ್ಣಭಾವ° says:

  ನಿತ್ಯಜೀವನಲ್ಲಿ ಉಪಯುಕ್ತವಾದ ವಿಷಯಂಗಳ ವಿವರುಸುತ್ತ ಇಪ್ಪದು ಲಾಯಕಿದ್ದು ಚೆನ್ನೈಭಾವಾ.

 3. ಚೆನ್ನೈ ಭಾವ says:

  ಬೊಳುಂಬು ಕೃಷ್ಣಭಾವಂಗೆ ಧನ್ಯವಾದ

 4. keshava kudla says:

  ಹಣೆಯ ಮೇಲಿಡುವ ಬೊಟ್ಟು, ನಾಮ ಇತ್ಯಾದಿಯ ಬಗ್ಗೆ ಒಳ್ಳೆಯ ಮಾಹಿತಿ. ಆ ನಂತರದ ಅನಿಸಿಕೆ ಹಾಗೂಚರ್ಚೆಗಳೂ ಉಪಯುಕ್ತ. ನಮ್ಮಲ್ಲಿನ ಹಳೆಯದನ್ನೆಲ್ಲ ಸಾರಾಸಗಟಾಗಿ ತಳ್ಳಿಹಾಕುವ ವಿಚಾರವಾದಿಗಳಿಗೂ ಆಧುನಿಕತೆ ಹಾಗೂ ಫ್ಯಾಶನ್ ನೆಪದಲ್ಲಿ ಬೋಳು ಹಣೆಯಲ್ಲಿ ಅಡ್ಡಾಡುವ ಹೆಮ್ಮಕ್ಕಳಿಗೂ ಬುದ್ಧಿ ಯಾವಾಗ ಬರುತ್ತದೋ. ಮಾಹಿತಿಗಾಗಿ ಧನ್ಯವಾದಗಳು.

  • ಚೆನ್ನೈ ಭಾವ says:

   ಆಸಕ್ತಿಯಿಂದ ನಮ್ಮೀ ಲೇಖನವನ್ನು ಓದಿ ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳುವ ನಿಮ್ಮ ಕಾರ್ಯ ಶ್ಲಾಘನೀಯ. ಧನ್ಯವಾದಗಳು. ಬರುತ್ತಾ ಇರಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *