ಉಂಬೆ ಸೇವಕ ಅಪ್ಪದು ಹೇಂಗೆ?

“ಎಲ್ಲಿಯಾದರೂ ಇರು, ಹೇಂಗೆ ಬೇಕಾರೂ ಇರು, ಯಾವಾಗ್ಲುದೇ ನೀನು ಉಂಬೆ ಸೇವಕನಾಗಿರು” ಆತಾ.

ನಮ್ಮ ಉಂಬೆಗೊಕ್ಕೆ ನಮ್ಮ ಮನಸ್ಸಿನ ಭಾವನೆಗ ಅರ್ಥ ಆವುತ್ತು ಹೇಳಿ ಎನ್ನ ಅಜ್ಜಿ ಹೇಳಿಯೊಂಡಿತ್ತಿದ್ದವು. ಹಾಂಗೆ ನೋಡಿಯಪ್ಪಗ ಇಂದು ನಮ್ಮ ನಮ್ಮಲ್ಲಿ ಭಾವನೆಗಳೇ ಇಲ್ಲೆ ಹೇಳಿದರೂ ಹೆಚ್ಚಾಗ. ಇದು ನಮ್ಮ ಬೈಲಿನವಕ್ಕೇ ಆಗಿಕ್ಕು ಅಥವಾ ಬೈಲಿಂದ ಪೇಟೆಗೆ ಬಂದವಕ್ಕೇ ಆಗಿಕ್ಕು. ಬಹಳ ವ್ಯತ್ಯಾಸ ಎಂತ ಇಲ್ಲೆ. ಆದರೆ ಉಂಬೆ ಇಂದಿಂಗೂ ಕಂಜಿಯ ನೆಕ್ಕಿ ಅಬ್ಬೆಯ ಪ್ರೀತಿ ತೋರ್ಸಿದ ಹಾಂಗೆ ಮನಸ್ಸು ಮಾಡ್ರೆ ನಾವೂ ಮಾಡ್ಲೆ ಎಡಿಗು.

ಅಮ್ಮನ ಪ್ರೀತಿಲಿ

ಇತ್ತೀಚೆಗೆ ಬೆಂಗಳೂರಿಲಿ ಎನ್ನ ಒಬ್ಬ ಹಳೆ ದೋಸ್ತಿ ಸಿಕ್ಕಿತ್ತಿದ್ದ. ಅಂವ ಯಾವುದೋ ದೊಡ್ಡ ಕಂಪೆನಿಲಿ ಕೆಲಸಲ್ಲಿದ್ದ. ಆದ್ರೆ ಅಂವನ ನೋಡ್ರೆ ಹಾಂಗೆ ಗೊಂತಾವುತ್ತೆ ಇಲ್ಲೆ. ಖಾದಿ ಜುಬ್ಬ ಹಾಕಿಗೊಂಡು, ಮನೆಲಿ ಸಾದ್ಯವಾದಷ್ಟು ಊರ ಉತ್ಪನ್ನಗಳನ್ನೇ ಬಳಸುತ್ತ. ಬೆಂಗ್ಳೂರಿನ ಮಠಲ್ಲಿ ಸಿಕ್ಕುವ ಊರ ಉಂಬೆಯ ಹಾಲನ್ನೇ ಉಪಯೋಗಿಸಿ, ಜೀವನ ನಡೆಸ್ತಾ ಇದ್ದ. ಊರಿಂದ ದೂರ ಇದ್ದರೂ, ಯಾಂತ್ರೀಕೃತ ಜಗತ್ತಿಲಿ ಇದ್ದರೂ, ಊರ ಮಾಣಿಯಾಗಿ/ಪುಳ್ಳಿಯಾಗಿ ಹೇಂಗೆ ಇಪ್ಪಲಕ್ಕು ಹೇಳುದರ ಬೇರೆಯವಕ್ಕೆ ಪ್ರತ್ಯಕ್ಷ ಮಾಡಿ ತೋರ್ಸುತ್ತಾ ಇದ್ದ.

ಹಾಂಗಿಪ್ಪಗ ನಾವು ಎಲ್ಲಿ ಇರ್ತೋ ಅಲ್ಲಿಯ ಜೀವನ ಪದ್ಧತಿಗೆ ಹೊಂದಿಗೊಂಡುದೇ, ನಮ್ಮತನವ ಬಿಡದ್ದೆ ಇಪ್ಪಲೆ ಎಡಿಗೂ ಪುಳ್ಳಿ ಹೇಳಿ ಅಜ್ಜಿ ಹೇಳಿಯೊಂಡಿತ್ತಿದ್ದವು. ಬೇಕಾರೆ ನಮ್ಮ ಉಂಬೆಗಳನ್ನೇ ನೋಡುವ. ಅವು ಇಂದು ಕಾಂಕ್ರೀಟ್ ಕಾಡಿಲಿ ( ಹಸಿರು ಕಮ್ಮಿ ಇಪ್ಪ ಪೇಟೆಗಳಲ್ಲಿ ) ಇದ್ದರೂ, ತಿಂಬದೂ ಹುಲ್ಲು ಹಸಿಯನ್ನೇ! ಕುಡಿವದು ಅಕ್ಕಚ್ಚು; ನೀರನ್ನೇ ಅಲ್ಲದಾ? ಅವಕ್ಕೆ ಪಿಜ್ಜಾ, ಬರ್ಗರ್ ಬೇಕಾವುತ್ತಿಲ್ಲೆ. ಆದರೂ ಕಂಜಿಗೂ ನವಗೂ ಹಾಲು ಕೊಡ್ತಿಲ್ಲೆಯಾ? ಸಹಜವಾಗಿಯೇ ಇರ್ತಿಲ್ಲೆಯಾ?.

ಹಾಂಗಾಗಿ ನಾವು ನಮ್ಮ ಉಂಬೆಯನ್ನೇ ( ವಿದೇಶೀ / ಮಿಶ್ರ ತಳಿಗಳ ಅಲ್ಲ ) ಆಧಾರವಾಗಿ ಮಡಿಕ್ಕೊಂಡು, ನಮ್ಮ ಶ್ರೀಗುರುಗಳ ಅಪೇಕ್ಷೆಯಂತೆ ಪುಣ್ಯ ಸಂಸ್ಕೃತಿಯ ಜೀವನ ನಡೆಶುವ. ಇಡೀ ಜಗತ್ತು ಇಂದು ಮತ್ತೆಂದೂ ನಮ್ಮ ಪವಿತ್ರ ಭರತ ಭೂಮಿಯ ಹೊಡೆಂಗೆ ನೋಡ್ತಾ ಇದ್ದು. ಸಂಕೀರ್ಣ, ಯಾಂತ್ರೀಕೃತ ಜಗತ್ತಿಲಿ ಹೈರಾಣಾದ ವಿಶ್ವದ ಜನಂಗ, ಕುಟುಂಬ ಸಂಸ್ಕೃತಿ ಇಂದಿಂಗೂ ಇಪ್ಪ ಪುಣ್ಯ ಭೂಮಿಯಾದ ನಮ್ಮ ದೇಶದ ಹೊಡೆಂಗೆ ಕಣ್ಣರಿಳಿಸಿ ನೋಡಿಗೊಂಡು ಇದ್ದವು.

ಕಂಜಿ ಹಾಲು ಕುಡಿತ್ತದು

ನವಗಿಲ್ಲಿ ಪುಣ್ಯವಶಾತ್ ಸರಿ ದಾರಿ ತೋರ್ಸುವ ಪೂಜ್ಯ ಗುರುಗ ಸಿಕ್ಕಿದ್ದವು. ಆ ಮಹತ್ತರ  ಮಹಾತ್ಮರ ಮಾರ್ಗದರ್ಶನ ಬಳಸಿಗೊಂಡು, ನಮ್ಮ ಉಂಬೆಯ ಒಟ್ಟಿಂಗೇ ಹೋಯಿಕ್ಕೊಂಡು, ಕಾಂಕ್ರೀಟ್ ಭೂಮಿಯ ಸ್ವರ್ಣ ಭೂಮಿಯ ಮಾಡ್ಲೆ ಇಂದೇ ಹೆರಡುವ ಆಗದಾ???

ಉಂಬೆ ಮಾವ

s.monthimaru@gmail.com

9449494227

.

ಮೋಂತಿಮಾರು ಮಾವ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *