ಭಾರತೀಯ ಗೋ-ಸಂರಕ್ಷಣೆಲಿ ಒಂದು ಮೈಲಿಗಲ್ಲು ಗೋ ಯಾತ್ರೆ

November 17, 2010 ರ 5:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೂವತ್ತಮೂರು ಕೋಟಿ ದೇವತೆಂಗಳ ಆವಾಸಸ್ಥಾನವಾಗಿ,
ಚಲಿಸುವ ದೇವಸ್ಥಾನ ಹೇಳುವ;
ಪವಿತ್ರವಾದ ಪಂಚ-ಗವ್ಯವ ಜೀವಲೋಕಕ್ಕೆ ಕೊಟ್ಟು,
ಚಲಿಸುವ ತೀರ್ಥಾಲಯ ಹೇಳುವ ;
ರೋಗಂಗಳ ನಿವಾರ್ಸುವ ಔಷಧೀಯ ಗುಣಂಗಳ ಗಣಿಯಾಂಗಿ,
ಚಲಿಸುವ ಔಷಧಾಲಯ ಹೇಳುವ ;
ಮನುಷ್ಯ ಜೀವನದ ಎಲ್ಲ ಕ್ಷೇತ್ರಂಗಳಲ್ಲಿಯುದೇ
ಸರ್ವೋಪಯೋಗಿ ಆದ
ಪವಿತ್ರ ಭಾರತೀಯ “ಉಂಬೆ-ಅಬ್ಬೆ” ಗೆ ಸಾಷ್ಟಾಂಗ ಪ್ರಣಾಮಂಗ

ಹೇಳುವ ಪ್ರತಿಜ್ನೆಯೊಟ್ಟಿಂಗೆ “ನಮ್ಮ ಗುರುಗೊಳ”ಮಾರ್ಗದರ್ಶನಲ್ಲಿ, ಶ್ರೀಮಠದ “ಕಾಮದುಘಾ” ಯೋಜನೆಯ ಅಡಿಲಿ, ೨೦೦೫ ನವಂಬ್ರ ೨ ರಿಂದ ೨೦೦೬ ಜನವರಿ ೮ ವರೆಗೆ ಐತಿಹಾಸಿಕ ” ಭಾರತೀಯ ಗೋಯಾತ್ರೆ” ನಡದಿತ್ತು. ೬೮ ದಿನಂಗೊ ನಡದ ಈ ಯಾತ್ರೆ ನಮ್ಮ ರಾಜ್ಯದ ೨೯ ಜಿಲ್ಲೆಂಗಳ ೧೪೨ ತಾಲ್ಲೂಕು, ಕೇರಳದ ಕಾಸರಗೋಡು ಜಿಲ್ಲೆಲಿಯೂ ಹೀಂಗೆ ೫೩೩೦ ಕಿ.ಮೀ. ಸಂಚಾರ ಮಾಡಿ, ೫೦೦ ಕ್ಕೂ ಹೆಚ್ಚು “ಗೋ-ಜಾಗರಣ” ಕಾರ್ಯಕ್ರಮ ಮಾಡಿತ್ತು. “ಗೋವರ್ಧನ ಗಿರಿಧಾರಿ ಶ್ರೀಕ್ರಷ್ಣ ” ನ ಪ್ರತಿಕೃತಿ ಇದ್ದ ಈ ಯಾತ್ರೆ ಯ “ರಥ” “ಪುರಾಣ ಮತ್ತೆ ಗೋವು- ಭಾರತೀಯತೆ” ಗಳ ಮಹತ್ವವ ತೋರ್ಸಿತ್ತು.

ಎರಡೂ ರಾಜ್ಯಂಗಳ ಬೇರೆ ಬೇರೆ ದೇವಸ್ಥಾನಂಗೊ,ಭಜನಾ ಮಂದಿರಂಗೊ, ಮಠಂಗೊ ಹೀಂಗೆ ಧಾರ್ಮಿಕ ಕೇಂದ್ರಂಗೊ ಅಲ್ಲದ್ದೇ, ಸಾಂಸ್ಕ್ರತಿಕ ಕೇಂದ್ರಂಗೊ, ಮಾರ್ಗದ ಕರೇಲಿ ಕೂಡಾ ಕಾರ್ಯಕ್ರಮಂಗ ನಡದ್ದು ನಮ್ಮ ಜನಂಗಳಲ್ಲಿ “ನಮ್ಮ ಉಂಬೆ” ಬಗ್ಗೆ ಯೋಚನೆ ಸುರು ಆಗಿತ್ತು ಹೇಳೊದಕ್ಕೆ ಸಾಕ್ಶಿ. ಅಲ್ಲದ್ದೆ ಎಲ್ಲ ದಿಕ್ಕುದೇ ಕಾರ್ಯಕ್ರಮಂಗಳಲ್ಲಿ ಸಂತ-ಮಹಂತಂಗೊ, ಧರ್ಮಗುರುಗೊ, ಸಾರ್ವಜನಿಕ ಮುಖಂಡರುಗೊ “ನಮ್ಮ-ಉಂಬೆ” ಯ ಪ್ರಾಮುಖ್ಯವ ಸಮಾಜದ ಕೆಳಣ ವರೆಗೂ ಎತ್ತುಸುವ “ಗೋ-ಸೇವೆ” ಮಾಡಿತ್ತಿದವು. ಇದರಿಂದಾಗಿ “ಉಂಬೆ-ಪ್ರೇಮಿ” ಗೊಳ ಒಂದು ಸಮುದಾಯವೇ ತಯಾರಾಯಿದು ಹೇಳೊದು ಹೆಚ್ಚಾಗ. ೨೦೦೬ ಜನೇವರಿ ೮ ಕ್ಕೆ ಪ್ರಧಾನಮಠ “ಶ್ರೀ ರಾಮಚಂದ್ರಾಪುರ ಮಠ,ಹೊಸನಗರಲ್ಲಿ” ಈ ಯಾತ್ರೆ ಮುಕ್ತಾಯ ಆತು. ದೇಶದ ಎಲ್ಲ ಹೊಡೆಂದಲುದೇ ಸಂತರು, ಗೋ-ಸೇವಕಂಗೊ ಹೀಂಗೆ ೨೫೦೦೦ ಕ್ಕೂ ಹೆಚ್ಚೇ ಜೆನಂಗೊ ಸಮಾರೋಪ ಕಾರ್ಯಕ್ರಮಲ್ಲಿ ಭಾಗವಹಿಸಿದ್ದದೇ ಈ “ಗೋ-ಯಾತ್ರೆಯ” ಯಶಸ್ಸಿನ ಸಂಕೇತ ಹೇಳ್ಲಕ್ಕು. ಅಲ್ಲದ್ದೇ ಇಡೀ ದೇಶವ ಒಂದಾಗಿ ಸೇರ್ಸುವಲ್ಲಿ ಕೂಡಾ ಈ “ಗೋ ಯಾತ್ರೆ” ಕೆಲಸ ಮಾಡಿದ್ದು ಹೇಳುವದು ಹೆಚ್ಚಾಗ.

ಇಡೀ ದೇಶಲ್ಲಿಯೇ ಸುರುವಣ ಐತಿಹಾಸಿಕ “ಗೋ ಬ್ಯಾಂಕ್  ” ಯೋಜನೆಯ , ನಮ್ಮ ಪೂಜ್ಯ ಗುರುಗೊ ಸಮಾರೋಪಲ್ಲಿ “ಉದ್ಘೋಷಣೆ ” ಮಾಡಿದ್ದು “ನಮ್ಮ-ಉಂಬೆ ” ಯ ಸಂರಕ್ಷಣೆ ಲಿ ಒಂದು “ಮೈಲಿಗಲ್ಲು ” ಹೇಳ್ಲೆ ಅಕ್ಕು.


ಉಂಬೆ ಮಾವ

ಚಿತ್ರ ಕೃಪೆ : ಹರೇರಾಮ.ಇನ್

ಭಾರತೀಯ ಗೋ-ಸಂರಕ್ಷಣೆಲಿ ಒಂದು ಮೈಲಿಗಲ್ಲು ಗೋ ಯಾತ್ರೆ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಣ್ಚಿಕಾನ ಭಾವ

  ವಂದೇ ಗೋಮಾತರಂ…. “ಭಾರತೀಯ ಗೋಯಾತ್ರೆ”ಯ ವಿವರಣೆ, ಪಟಂಗ, ಎಲ್ಲಾ http://www.gougram.org
  ಹೇಳುವ ವೆಬ್ ಸೈಟಿಲಿ ಇದ್ದು…

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಅದು “ಭಾರತೀಯ ಗೋಯಾತ್ರೆ” ದು ಅಲ್ಲ ಮಣ್ಣಿಕಾನ ಭಾವ
  ಸರಿ ಮಾಹಿತಿ: http://www.gougram.org ಲಿ ಇಪ್ಪದು ವಿಶ್ವ ಮಂಗಲ ಗೋ-ಗ್ರಾಮ ಯಾತ್ರೆದು.

  [Reply]

  VN:F [1.9.22_1171]
  Rating: 0 (from 0 votes)
 2. ಮೋಹನಣ್ಣ

  ಭಾರತೀಯ ಗೋಯಾತ್ರೆಯ ನೆ೦ಪಾತು ಮೋತಿಮಾರು ಮಾವ೦.ಎ೦ಗಳ ವೆ೦ಕಟ್ರಮಣ ಭಾವ ಅದರ ಕೆಲಸಕ್ಕಗಿ ಎ೦ಗಳ ಹೆರಡುಸಿದ್ದದು ಕೈಲಾದ ಮಟ್ಟಿ೦ಗೆ ಮಾಡಿದ ಗೋ ಸೇವಗೊ ಎಲ್ಲ ನೆ೦ಪಾತು.ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಗೋಪಾಲಣ್ಣಅಜ್ಜಕಾನ ಭಾವವೇಣೂರಣ್ಣಬಂಡಾಡಿ ಅಜ್ಜಿಹಳೆಮನೆ ಅಣ್ಣಒಪ್ಪಕ್ಕಸುಭಗಸುವರ್ಣಿನೀ ಕೊಣಲೆಶುದ್ದಿಕ್ಕಾರ°ಕೆದೂರು ಡಾಕ್ಟ್ರುಬಾವ°ಶ್ಯಾಮಣ್ಣಸರ್ಪಮಲೆ ಮಾವ°ಅನುಶ್ರೀ ಬಂಡಾಡಿಅಕ್ಷರದಣ್ಣಅನಿತಾ ನರೇಶ್, ಮಂಚಿನೀರ್ಕಜೆ ಮಹೇಶದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿವೇಣಿಯಕ್ಕ°ಡಾಗುಟ್ರಕ್ಕ°ಮಾಲಕ್ಕ°ಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ