ಉಂಬೆಮಾವನ ಶುದ್ದಿ ಕೇಳಿರೆ ಹಾಲು ಕುಡುದ ಹಾಂಗಕ್ಕು!

ಉಂಬೆಮಾವನ ಗೊಂತಿದ್ದಲ್ಲದೋ – ಸತ್ಯಮಾವ, ಮೋಂತಿಮಾರುಮಾವ ಹೇಳಿಯೂ ದಿನಿಗೆಳ್ತವು ಅವರ.
ಅವರ ಗೊಂತಿಲ್ಲದ್ದೋರು ಸಿಕ್ಕುದು ಕಷ್ಟ. ಜೆನಂಗೊಕ್ಕೆ ಮಾಂತ್ರ ಅಲ್ಲದ್ದೆ, ನಮ್ಮ ಊರಿನ ಎಷ್ಟೋ ದನಂಗೊಕ್ಕೆ ಅವರ ಗುರ್ತ ಇಕ್ಕು!
ಅಪ್ಪಲೆ ಪೀಯೂಸಿ – ಪೋಲಿಟೆಕ್ನಿಕು ಎಲ್ಲ ಕಲ್ತರೂ, ವಿದ್ಯಾರ್ಥಿ ಪರಿಷತ್ತಿಲಿ ಮುಂದೆಮುಂದೆ ಹೋಗಿ ಸಂಘಟನೆಯ ಬಗ್ಗೆಯೇ ಹೆಚ್ಚು ಒಲವು ಹಚ್ಚಿಸಿಗೊಂಡವು.
ಅಖಂಡ ಭಾರತದ ಬಗ್ಗೆ ಅಚಲ ಅಭಿಮಾನ ಇಪ್ಪ ಈ ಮಾವಂಗೆ, ಸೇವೆಮಾಡ್ಳೆ ನಮ್ಮ ಮಟವೇ ಒಳ್ಳೆ ಜಾಗೆ ಹೇಳಿ ಅನಿಸಿ ಅಂದೇ ಗುರುಪೀಟದ ಸೇವೆಲಿ ಸೇರಿಗೊಂಡವು.

ಅನೇಕ ಸಂಘಟನಾತ್ಮಕ, ಸಾಮಾಜಿಕ ಕೆಲಸಂಗಳ ಮಾಡ್ಳೆ ಮುಂದೆಬಂದವು.
ಊರ ದನುವಿನ ರಕ್ಷಣೆಗೆ ನಮ್ಮ ಮಟ ಯೋಜನೆಗಳ ಮಾಡಿತ್ತಲ್ಲದೋ – ಅದರಲ್ಲಿ ಮುಕ್ಯಪಾತ್ರಲ್ಲಿ ಸೇರಿಗೊಂಡವು.
ಸಣ್ಣ ಇಪ್ಪಗಳೇ ದನುವಿನ ಬಗ್ಗೆ ಒಲವು ಇದ್ದದೂ ಅಲ್ಲಿ ಉಪಯೋಗಕ್ಕೆ ಬಂತು. ಅವರ ಕಾರ್ಯಕ್ಷೇತ್ರಲ್ಲಿಪ್ಪ ಎಲ್ಲಾ ದನುವಿನನ್ನೂ ಮೋಂತಿಮಾರಿನ ಹಳೆಮನೆಯ ಹಟ್ಟಿಲಿ ಇಪ್ಪ ದನಗಳ ಹಾಂಗೇ ಪ್ರೀತಿಲಿ ಕಂಡವು. ಭಾರತ ಸುತ್ತಿದವು. ಕೆಲವು ಗೋ ಹತ್ಯಾ ಕಾರ್ಖಾನೆಗಳ ಪ್ರತ್ಯಕ್ಷ ನೋಡಿಕ್ಕಿ ಬಯಿಂದವು!
ಅದಾ, ಗೋಹತ್ಯೆಯ ಶುದ್ದಿಲಿ ಇವರ ಬಗ್ಗೆ ರಜಾ ಬಯಿಂದಲ್ಲದೋ – ನೆಂಪಿದ್ದೋ?
ರಜ ಓದಿಗೊಂಡವು, ಭಾರತಲ್ಲಿಪ್ಪ ಅಷ್ಟೂ ಗೋತಳಿಗಳ ಬಗೆಗೆ ತಿಳ್ಕೊಂಡವು, ’ಯೇವ ಜಾತಿ ದನುವಿಂದು ಎಂತರ ವಿಶೇಷ’ ಹೇಳಿ ಒರಕ್ಕಿಲಿ ಏಳುಸಿ ಕೇಳಿರೂ ಹೇಳುಗು!

ಅಜ್ಜಕಾನಭಾವಂಗೆ ಅವು ಒಳ್ಳೆತ ಚೆಂಙಾಯಿ, ಮದಲಿಂಗೇ!
ಎಂತಾರು ಕಾರ್ಯಲ್ಲಿ ಎಡಪ್ಪಾಡಿ ಬಾವನಲ್ಲಿಗೆ ಬಂದರೆ, ಒಂದರಿ ಅಜ್ಜಕಾನಬಾವನತ್ರೆ ಕುಶಾಲು ನೆಗೆಮಾಡಿಕ್ಕಿಯೇ ಹೋಪದು.

ಓ ಮೊನ್ನೆ ಒಂದರಿ ಬೈಲಿಂಗೆ ಬಂದೋರು ಸಿಕ್ಕಿದವು.
ಒಪ್ಪಣ್ಣನ ಶುದ್ದಿಗಳ ಬಗ್ಗೆ, ನೆರೆಕರೆಯ ಬೆಗ್ಗೆ ಎಲ್ಲ ಕೇಳಿದವು, ಅಜ್ಜಕಾನಬಾವ ಮೊದಲೇ ಹೇಳಿಮಡಗಿದ್ದನೋ ತೋರಿತ್ತು.
ಮಾವ, ನಿಂಗಳೂ ಶುದ್ದಿ ಹೇಳ್ತಿರೋ? ಹೇಳಲೇ ಬೇಕು! ಕೇಳಿದೆ. ಸಂತೋಷಲ್ಲಿ ಒಪ್ಪಿ, ಅರ್ದ ಗಂಟೆಲಿ ಒಂದು ಶುದ್ದಿ ಹೇಳಿಕೊಟ್ಟವು.
ಮಾಷ್ಟ್ರುಮಾವನ ಮನೆ ಜೆಂಬ್ರದ ಎಡಕ್ಕಿಲಿ ಗುರಿಕ್ಕಾರ್ರು ಅಂಬೆರ್ಪಿಲಿ ಇದ್ದಕಾರಣ, ಬೈಲಿಂಗೆ
ಇವರ ಗುರ್ತಮಾಡ್ಳೆ ತಡವಾತು.

ಹ್ಮ್, ಅದಿರಳಿ.
ನಮ್ಮ ಬೈಲಿಂಗೆ ಬಂದು ಜೀವನದ ಶುದ್ದಿಗಳ ಹೇಳ್ತವು.
ಹೆಚ್ಚಾಗಿ ದನುವಿಂಗೂ, ನಮ್ಮ ಜೀವನಪದ್ಧತಿಗೂ, ಸಂಸ್ಕೃತಿಗೂ ಇಪ್ಪ ಅಂತಃಸಂಬಂಧಂಗಳ ವಿವರುಸುಗು.
ಎಲ್ಲ ಶುದ್ದಿಗಳುದೇ ಊರದನದ ಹಾಲಿನಷ್ಟೇ ಆರೋಗ್ಯಕರ..!
ಎಲ್ಲೊರೂ ಚೆಂದಕೆ ಕೂದಂಡು ಕೇಳುವ, ಕೇಳಿಕ್ಕಿ ಒಪ್ಪಕೊಡುವ°
.
ಆಗದೋ?
~
ಒಪ್ಪಣ್ಣ

ಮೋಂತಿಮಾರುಮಾವನ ಶುದ್ದಿಗೊ ಸದ್ಯಲ್ಲೇ ಈ ಅಂಕಣಲ್ಲಿ ಬತ್ತು.
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *