ನಾವು ಬದಲಾವಣೆ ಅಪ್ಪನಾ?? ಹೇಂಗೆ??

April 21, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಸಂಸ್ಕೃತಿ ಭಾರೀ ಹಳತ್ತು.
ಏಕೆ ಹೇಳಿದರೆ ನಮ್ಮವಕ್ಕೆ ಮಾಡ್ಳೆ ಗೊಂತಿಪ್ಪಷ್ಟು ಚೀಪೆ ತಿಂಡಿಗ / ಖಾರ ತಿಂಡಿಗ ಮಾಡ್ಳೆ ಬೇರೆಯವಕ್ಕೆ ಅರಡಿತ್ತೇ ಇಲ್ಲೆ.
ಇಂದು ನವಗೆ ಹೆರ ಅಂಗಡಿಲಿ, ಹೋಟ್ಳಿಲಿ, ಡಾಬಲ್ಲಿ, ಬೇಕರಿಲಿ ಇತ್ಯಾದಿ ಜಾಗೆಲಿ ಸಿಕ್ಕುವ ತಿಂಡಿಗಳೇ Great.
ಅದು ಬಿಟ್ರೆ ಕೆಸವಿನ ಪತ್ರೊಡೆ, ಬೋಳುಕೊದಿಲು, ಗೆಣಂಗು ಉಪ್ಪುಕರಿ, ಹಾಲುಬಾಯಿ, ಕೊಟ್ಟಿಗೆ, ಮಜ್ಜಿಗೆ ದೋಸೆ, ಗುಳಿಯಪ್ಪ, ನೀರ್ಸೊಳೆ ರೊಟ್ಟಿ, ಹಾಂಗೆ ಅತಿರಸ ಇತ್ಯಾದಿಗಳ ಬಗ್ಗೆ ಇಂದು ಗೊಂತೇ ಇಲ್ಲೆ ಹೇಳಿದರೂ ಆಶ್ಚರ್ಯ ಇಲ್ಲೆ.
ಕಲಿಶುಲೆ, ಕಲಿವಲೆ ಸಮಯವೇ ಇಲ್ಲೆನ್ನೆ!

ಕೆಲವು ವರ್ಶಗಳ ಹಿಂದ ಎಂಗ ಸಣ್ಣ ಮಕ್ಕ ಆಗಿಪ್ಪಗ ಪ್ರೈಮರಿ ಶಾಲಗೆ ನಡಕ್ಕೊಂಡು ಹೋಯಿಕ್ಕೊಂಡು ಇಪ್ಪಗಳೇ ಕೆದೆ / ಹಟ್ಟಿ ಕೆಲಸ ಮಾಡೆಕ್ಕಾಗಿತ್ತು. ದನಂಗಳ ಮೀಶುದು, ಕಂಜಿಗಳ ಸುಧಾರ್ಸೊದು ಮಾತ್ರ ಅಲ್ಲ ರಜ್ಜ ದೊಡ್ಡ ಅಪ್ಪಗ ದನಕರವ ಕೆಲಸ ಮಾಡೆಕ್ಕಾಗಿತ್ತು. ಆದರೆ ಇಂದು ಕೆದೆ ಹೇಳಿದರೆ ಎಂತ ಮಾರಾಯ / ಯ್ತಿ ಹೇಳಿ ಕೇಳುವ ಪರಿಸ್ಥಿತಿಗೆ ನಮ್ಮ ಮಕ್ಕ ಮುಟ್ಟಿದ್ದವಲ್ಲ?
ಆದರೆ ತೀರಾ ಹಳ್ಳಿಗಳಲ್ಲಿ ಇಂದಿಂಗುದೇ ಉದಿ ಅಪ್ಪದು ಕೆದೆಂದಲೇ ಹೇಳಿದರೆ ಅತಿಶಯೋಕ್ತಿ ಆಗ.
ಮನೆಲಿ ನಿತ್ಯ ಮಜ್ಜಿಗೆ ಹಾಲು (ಪರಿಸರಕ್ಕೆ ವಿಶ ತುಂಬುವ ಪ್ಲಾಸ್ಟಿಕ್ ಪ್ಯಾಕೆಟ್ ಹಾಲಲ್ಲ!) ತುಪ್ಪ ಇಲ್ಲದ್ದರೆ ನೆಡೆಯಲೇ ನಡೆಯ.

ಸಮಾಜವ ನೋಡಿದರೆ ಯಾವುದೇ ಕಾಲ ಪುನಃ ಹಳೇ ರೀತಿಲಿಯೇ ಬತ್ತು ಖಂಡಿತಾ. ಆದರೆ ಅದರಷ್ಟಕ್ಕೇ ಆವುತ್ತಿಲ್ಲೆ. ಆರಾದರೂ ಚಿಂತಕರು ಅದಕ್ಕೆ ತಲೆಕೊಟ್ರೆ ಸಮಾಜಲ್ಲಿ ಅಗತ್ಯ ಇಲ್ಲದ್ದ ವಿಶಯಂಗಳ ಹೊಳೆಗೆ ಹಾಕಿ ಬೇಕಾದ ವಿಶಯಂಗಳ ತಪ್ಪಲೆ ಎಡಿಗು. ಈಗ ನಮ್ಮ ಗುರುಗ ಸಮಾಜದ ಸಮಗ್ರ ಬದಲಾವಣೆಯ ಚಿಂತನೆ ಮಾಡ್ತಾ ಇದ್ದವು. ನಾವೆಲ್ಲ ಅವರ ಮಾರ್ಗದರ್ಶನಲ್ಲಿ ಕೆಲಸ ಮಾಡ್ತಾ ಹೋದರೆ ನಾವು ಎಲ್ಲವು ಅಪ್ಪಲೆ ಸಾಧ್ಯ ಅಲ್ಲದ, ಹೇಂಗೆ ಮಾಡುವನಾ???

~
ನಿಂಗಳ,
ಮೋಂತಿಮಾರು ಉಂಬೆಮಾವ°

ನಾವು ಬದಲಾವಣೆ ಅಪ್ಪನಾ?? ಹೇಂಗೆ??, 4.3 out of 10 based on 6 ratings

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಖಂಡಿತಾ ಮಾಡುವ. ಮಾಡಲೇ ಬೇಕು. ನವಗೆ ಇಷ್ಟೊಳ್ಳೆ ಮಾರ್ಗದರ್ಶನ ಸಿಕ್ಕುತ್ತಾ ಇಪ್ಪಗ ಮಾಡದ್ದೆ ಕೂದರೆ ಅಕ್ಕಾ…
  ನಮ್ಮ ಸಂಸ್ಕೃತಿಯ ಬಿಂಬಿಸುವ ಕೆಲಸ ಒಪ್ಪಣ್ಣನ ಬೈಲಿಲಿದೇ ಮೊದಲಿಂದಲೇ ಆವುತ್ತಾ ಇದ್ದು.. ಹೀಂಗೇ ಮುಂದುವರಿಯಲಿ…

  [Reply]

  VA:F [1.9.22_1171]
  Rating: +3 (from 3 votes)
 2. ಕೇಜಿಮಾವ°
  k g baht

  it is not by choice that any community changes it’s ways.we all cannot go to villege ways as people like me have nothing back in the native to sustain upon.please don’t universalise every thing.

  [Reply]

  VA:F [1.9.22_1171]
  Rating: +1 (from 1 vote)
 3. ನೀರ್ಕಜೆ ಮಹೇಶ
  ನಿರ್ಕಜೆ ಅಪ್ಪಚ್ಚಿ

  ನಿಂಗ ಹೇಳಿದ್ದು ಅರ್ಥ ಆಯಿದಿಲ್ಲೇ ಎನಗೆ. ಎನ್ನ ಕೇಳುತ್ತಾರೆ ಊರಿಂಗೆ ವಾಪಸು ಹೋಪದು ಇನ್ನೂ ಕೆಲವು ವರ್ಷಲ್ಲಿ ಅನಿವಾರ್ಯ ಆವುತ್ತು. ಎಲ್ಲರಿಂಗೆ ಅಲ್ಲದ್ರು ಶೇಕಡಾ ೮೦ ಜನಕ್ಕೆ ಅದು ಅನಿವಾರ್ಯ ಆವುತ್ತು. ಆಗ ಕಷ್ಟ ಪದುದಕ್ಕಿಂತ ಇಗಲೇ ತಯಾರಪ್ಪದು ಒಳ್ಳೆಯದಲ್ಲದ?

  ಇನ್ನೂ ನಿಗಗೆ ಊರಿಲಿ ಜಾಗೆ ಇಲ್ಲೆ ಹೇಳಿದಿ. ಅದು ಒಂದು ಸಮಸ್ಯೆ. ಆದರೆ ಜಾಗೆ ಸಿಕ್ಕುತ್ತು ಹೇಳಿ ಆದರೆ ಊರಿಂಗೆ ಹೋಪ ಮನಸಿದ್ದ ನಿಂಗೊಗೆ? ಅದು ಪ್ರಶ್ನೆ. ನಿಂಗ ಈಗ ಪೇಟೇಲಿ ಇಪ್ಪ ಆಸ್ತಿಯ ಮಾರಿ ಅಥವಾ ಬ್ಯಾಂಕ್ ಸೇವಿಂಗ್ಸ್ ಉಪಯೋಗ್ಸಿ ಜಾಗೆ ಮಾಡುಲೆ ಎಡಿಯದ? ಹಾಂಗೆ ಮಾಡೆಕ್ಕು ಹೇಳಿ ಒತ್ತಾಯ ಮಾಡುದಲ್ಲ ಆನು.. ನಿಂಗ ಹೇಳಿದ್ದು ಎಂತರ ಹೇಳಿ ಅರ್ಥ ಮಾಡುಲೆ ಪ್ರಯತ್ನಿಸುತ್ತಾ ಇದ್ದೆ ಅಷ್ಟೇ.

  ಇನ್ನೂ ಉರಿನ್ಗೆ ಹೊಯೇಕ್ಕಪ್ಪದು ಅನಿವಾರ್ಯ ಆವುತ್ತು ಹೇಳಿ ಆನು ಎಂತಕ್ಕೆ ಹೇಳಿದ್ದು ? ಅದಕ್ಕೆ ಕಾರಣ ಇದ್ದು. ಇದರ ಬಗ್ಗೆ ಬೇರೆ ಲೇಖನ ಬರೆತ್ತೆ ಆನು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ವೆಂಕಟ್ ಕೋಟೂರುಡಾಗುಟ್ರಕ್ಕ°ನೆಗೆಗಾರ°ಜಯಶ್ರೀ ನೀರಮೂಲೆಗೋಪಾಲಣ್ಣಅನು ಉಡುಪುಮೂಲೆಎರುಂಬು ಅಪ್ಪಚ್ಚಿನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಪವನಜಮಾವಬೋಸ ಬಾವಮಾಲಕ್ಕ°ಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿvreddhiಕೊಳಚ್ಚಿಪ್ಪು ಬಾವದೊಡ್ಡಮಾವ°ಕಳಾಯಿ ಗೀತತ್ತೆಕಜೆವಸಂತ°ಶೇಡಿಗುಮ್ಮೆ ಪುಳ್ಳಿಚೂರಿಬೈಲು ದೀಪಕ್ಕಚುಬ್ಬಣ್ಣರಾಜಣ್ಣಅಕ್ಷರದಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ