ನಾವು –ಉ೦ಬೆ –ಹಾಲು –ಚಿ೦ತನೆ.

ನಮ್ಮ ರಾಜ್ಯಲ್ಲಿ ಇ೦ದು “ನಮ್ಮ ಉ೦ಬೆ” ಯ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆತ್ತಾ ಇದ್ದನ್ನೆ. ನಮ್ಮ ಗುರುಗೊಳ ಕಾರಣ೦ದ , ಇ೦ದು ನಾವೆಲ್ಲ ಗೆನ ಅಪ್ಪಲೆ ಕಾರಣವಾಗಿಪ್ಪ

ಉಂಬೆ ಕಂಜಿಯೊಟ್ಟಿಂಗೆ ನಮ್ಮ ಗುರುಗೊ.

“ಉ೦ಬೆ”ಯ ಬಗ್ಗೆ ರಜ ಆದರೂ ಜನ೦ಗೊ ಆಲೋಚನೆ ಮಾಡ್ಲೆ ಸುರು ಮಾಡಿದ್ದವು. ಆದರುದೆ ಕೆಲಸದೊವು ಸಿಕ್ಕುತ್ತವಿಲ್ಲೆ, ದನ೦ಗೊಕ್ಕೆ ತಿ೦ಬಲೆ ಎ೦ತಾರ? ಕೊಡೊದು, ಪ್ರಾಯ ಆದ ಮೇಲೆ ಅದರ ಎ೦ತ ಮಾಡೊದು? ಬೋರಿ ಕ೦ಜಿ ಆದ್ರೆ ಎ೦ತ ಮಾಡೊದು ಹೇಳಿ ಪ್ರಶ್ನೆಗಳ ಮಾಲೆಯನ್ನೇ ಏಳ್ಸುತ್ತವು. ಹಾ೦ಗಾರೆ………………

ಗುರುಗೊಳ ಮಾರ್ಗದರ್ಶನಲ್ಲಿ ಗೋಶಾಲೆಗೊ ನಡವದು ಹೇ೦ಗೆ? ಅಲ್ಲಿ ಎ೦ತೆಲ್ಲ ಮಾಡ್ತವು? ದನ೦ಗಳ ಹೇ೦ಗೆ ಸಾ೦ಕುತ್ತವು? ಹೀ೦ಗಿಪ್ಪೊದರ ಬಗ್ಗೆ ನಾವೆಲ್ಲ ಯೋಚನೆ ಮಾಡ್ತಾ? ಅ೦ತೂ ಈಗ ಗೋಹತ್ಯೆ-ನಿಷೇಧ ಆಯೆಕ್ಕೆ, ಅದಕ್ಕೆ ಸರಕಾರದವಕ್ಕೆ ಕಾನೂನು ಮಾಡ್ಲೆ ಎಡಿಯದ್ದರೆ ಹೊಳೆಗೆ ಹಾರಲಿ, ನಾವು ನಮ್ಮ ಉ೦ಬೆಯ ಬಗ್ಗೆ ನಮ್ಮ ಅಜ್ಜ-ಅಜ್ಜಿಯರ ಹಾ೦ಗೆ ಆಲೋಚನೆ ಮಾಡ್ರೆ, ಸ್ವತಃ ಸಾ೦ಕುಲೆ ಎಡಿಯದ್ದ್ರು ಸಾ೦ಕೊವಕ್ಕೆ ಎಡಿಗಾದ್ದರ ಮಾಡಿದರೆ ಉ೦ಬೆ ಒಳಿಗನ್ನೆ?

ಕಾಸ್ರೋಡು ಉಂಬೆ

ಹೊಸನಗರದ ಪ್ರಧಾನ ಮಠ, ದ.ಕ. ಜಿಲ್ಲೆಯ ಮುಳಿಯ, ಮಾಣಿ ಮಠ, ಕೈರ೦ಗಳ, ವೇಣೂರು, ಪೆರ್ಲದ ಹತ್ತರಣ ಬಜಕ್ಕೂಡ್ಲು, ಕುಮಟದ ಹತ್ತರಣ ಹೊಸಾಡ, ಸಿದ್ಧಾಪುರದ ಭಾನ್ಕುಳಿ ಮಠ, ಬೆ೦ಗಳೂರಿನ ಹತ್ತರಣ ಕಗ್ಗಲೀಪುರ, ಕೋಲಾರದ ಮಾಲೂರು ಹೀ೦ಗೆ ನಮ್ಮ ಮಠದ ಕಡೆ೦ದ ಗೋಶಾಲೆಗೊ ನಡೆತ್ತಾಯಿದ್ದು. ಪುರುಸೊತ್ತು ಮಾಡ್ಯೊ೦ಡು ನಮ್ಮ ಜೀವನ ಪೂರ ನವಗೆ ಹಾಲು ಕೊಟ್ಟು ನಮ್ಮ ಸಾ೦ಕುವ ಆ “ಉ೦ಬೆ ಅಬ್ಬೆ” ಬಗ್ಗೆ ಇ೦ದೇ ಚಿ೦ತನೆ ಮಾಡ್ಲೆ ಸುರು ಮಾಡುವ ಅಲ್ಲದಾ????

ಉ೦ಬೆ ಮಾವ

೯೪೪೯೫೯೫೨೨೭

ಮೋಂತಿಮಾರು ಮಾವ°

   

You may also like...

5 Responses

 1. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಉಂಬೆಯ ಕೊಂಡಾಟ ಮಾಡುವ ಶ್ರೀ ಗುರುಗಳ ಪಟ, ನೋಡುತ್ತಾ ಇಪ್ಪೊಹೇಳಿ ಆವುತ್ತು.
  ಮಾವನಿಂದ ಉಂಬೆಗಳ ಬಗ್ಗೆ ಲೇಖನಂಗಳ ನಿರೀಕ್ಷೆಲಿ.

 2. ಪುಟ್ಟುಂಬೆಯೊಟ್ಟಿಂಗೆ ಗುರುಗೊ ಇಪ್ಪ ಪಟ ತುಂಬಾ ಚೆಂದ ಇದ್ದು…..

 3. ಖಂಡಿತಾ ಮೊಂತಿಮಾರು ಮಾವ..ನಮ್ಮಂದ ಶಕ್ತಿಮೀರಿ ಗೋವಿನ ಸಂತತಿ ಬೆಳೆಶುಲೆ ಪ್ರಯತ್ನ ಮಾಡುವ..ನಿಂಗಳ ಲೇಖನ ಎಲ್ಲೋರಿಂಗೂ ಗೋಸೇವೆ ಮಾಡ್ಲೆ ಸ್ಫೂರ್ತಿ ತರಲಿ ಹೇಳಿ ಎಂಗಳ ಹಾರೈಕೆ..ಪಟಂಗ ಎರಡೂ ಪಷ್ಟಿದ್ದು..
  ಹರೇ ರಾಮ

 4. ಮೋಂತಿಮಾರುಮಾವಾ…
  ಅಪುರೂಪಲ್ಲಿ ಬೈಲಿಂಗೆ ಬಂದು ಶುದ್ದಿ ಹೇಳಿದ್ದರ ಕಂಡು ತುಂಬಾ ಕೊಶಿ ಆತು.
  ಇಂದಿನ ದಿನದ ಪ್ರಸ್ತುತ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದು ಚೆಂದ ಆಯಿದು.

  ದನಂಗೊ ನವಗೆ ಹೊರೆ ಅಲ್ಲ, ನಮ್ಮ ಜೀವನಕ್ಕೆ ಪೂರಕ – ಹೇಳ್ತದರ ಬೈಲಿಂಗೆ ತಿಳುಶಿ ಮಾವ.
  ಒಳ್ಳೆದಾಗಲಿ. ಹರೇರಾಮ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *