“ಸಾಮ್ರಾಟ”೦ಗೆ ಒಂದು ಅಶ್ರುತರ್ಪಣ

November 24, 2010 ರ 12:30 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಪ್ರಧಾನ ಮಠ “ಶ್ರೀ ರಾಮಚಂದ್ರಾಪುರ ಮಠ”ದ “ಅಮ್ರತಧಾರಾ ಗೋಶಾಲೆ”ಯ “ಸಾಮ್ರಾಟ“ನಾಗಿಯೇ ಇದ್ದ, ನಮ್ಮ ಶ್ರೀಗುರುಗಳ ಅತ್ಯಂತ ಪ್ರೀತಿಯ, ಕಾಂಕ್ರೇಜ್ ತಳಿಯ “ಸಾಮ್ರಾಟ್” ಬೋರಿ ಮೊನ್ನೆ

ಸಾಮ್ರಾಟ ಯೌವ್ವನ ಕಾಲಲ್ಲಿ..

ಸೋಮವಾರ (೧೫-೧೧-೨೦೧೦) ಇಹಲೋಕ ವ್ಯಾಪಾರವ ಮುಗಿಶಿ,ದೇವಲೋಕಕ್ಕೆ ಹೋದ ಹೇಳುವದು ಎಲ್ಲೊರಿಂಗುದೆ ಅತ್ಯಂತ ಬೇಜಾರಿನ ಸಂಗತಿ.

ಶ್ರೀ ಗುರುಗ ಕೆಲವು ವರ್ಷಂಗಳ ಮೊದಲು ಉತ್ತರದ ಗುಜರಾತಿಂಗೆ ಹೋಗಿತ್ತಿದವು. ಆಗ ಅಲ್ಯಾಣ “ಜಗನ್ನಾಥ ಮಂದಿರ” ದ ವ್ಯಾಪ್ತಿಲಿ, ಕಾಂಕ್ರೇಜ್ ತಳಿಯ ಗಾಡಿ ಎಳವ ಬೋರಿಯೊಂದರ ನೋಡಿ ಬಹಳ ಕುಶಿ ಪಟ್ಟವು. ಅವನ ಯಜಮಾನನ ಹತ್ತರೆ ಮಾತಾಡಿ ಅಲ್ಲಿಂದ “ಅಮ್ರತಧಾರಾ” ಗೋಶಾಲೆಗೆ ಬಪ್ಪ ವ್ಯವಸ್ಥೆ ಮಾಡ್ಸಿದವು. ಮಾತ್ರ ಅಲ್ಲ ಅವನ ಗಂಭೀರ, ಧೀರೋದ್ದಾತ, ಸುಂದರ ನಿಲುವಿನ ಕಂಡು ” ಸಾಮ್ರಾಟ್ ” ಹೇಳಿ ನಾಮಕರಣ ಕೂಡಾ ಮಾಡಿದವು. ೨೦೦೭ರ ಏಪ್ರಿಲ್  ೨೧-೨೯ ರಲ್ಲಿ ನಮ್ಮ ಪೂಜ್ಯ ಗುರುಗಳ ದಿಗ್ದರ್ಶನಲ್ಲಿ, ಶ್ರೀರಾಮಚಂದ್ರಾಪುರ ಮಠ ಲ್ಲಿ ಐತಿಹಾಸಿಕ “ವಿಶ್ವ ಗೋ ಸಮ್ಮೇಳನ ” ನಡದ್ದು ಮಾಂತ್ರ ಅಲ್ಲ, ಬೈಲಿನ ಭಾರೀ ಜೆನ ಸ್ವಯಂಸೇವಕರಾಗಿ ಸೇವೆ

ವಿಶ್ವ ಗೋ ಸಮ್ಮೇಳನದ 'ಸಾಮ್ರಾಟ'

ಮಾಡಿದ್ದು ನೆಂಪಿಕ್ಕು. ಆ ಸಂದರ್ಭಲ್ಲಿ ಈ “ಸಾಮ್ರಾಟ” ನಿಜವಾಗಿಯು ಆ ಸಮ್ಮೇಳನದ “ಸಾಮ್ರಾಟ” ನ ಹಾಂಗೆ ಮೆರದಿತ್ತಿದ ಹೇಳ್ರೆ ಹೆಚ್ಚಾಗ. ಅವನ ಗಂಭೀರ ನಿಲುವು ವೇದಿಕೆ/ಸಭೆ ಪೂರ್ತಿ ಅವನ ಹೊಡೆಂಗೇ ನೋಡುವ ಹಾಂಗಿತ್ತು.ಅಲ್ಲಿಗೆ ಬಂದ ಪ್ರತೀ ಗೋಪ್ರೇಮಿಯು “ಸಾಮ್ರಾಟ” ನ ಬುಡಲ್ಲಿ ಕೆಲವು ಕ್ಶಣ  ಆದರೂ ನಿಲ್ಲದ್ದೆ ಹೋಯಿದವಿಲ್ಲೆ.ಸಮ್ಮೇಳನ ಮುಗುದು ಭಾರೀ ಸಮಯ ಆದರೂ, ಇಂದಿಂಗೂ ಅನೇಕ ದಿಕ್ಕೆ “ಸಾಮ್ರಾಟ” ನ ಬಗ್ಗೆ ವಿಚಾರ್ಸುತ್ತವು.

ಅಂತ ಆ ಮಹಾನ್ “ಸಾಮ್ರಾಟ ” ನಮ್ಮೆಲ್ಲರ ಬಿಟ್ಟು, ಆ ಭಗವಂತನ ಸನ್ನಿಧಾನಕ್ಕೆ ಹೋದ್ದದು ನಂಬುಲೇ ಆವುತ್ತಿಲ್ಲೆ. ಬೈಲಿನ ನಾವೆಲ್ಲ “ಉಂಬೆ” ಸೇವಕರು ಅಂತ ಮತ್ತೊಬ್ಬ “ಸಾಮ್ರಾಟ”ನ ತಯಾರು ಮಾಡೊದು ಮಾಂತ್ರ ಅಲ್ಲ, ನಮ್ಮೆಲ್ಲೊರ ಪ್ರೀತಿಯ ಗುರುಗೊಳ ಮನದಾಳದ ಅಪೇಕ್ಶೆಯಂತೆ “ಭಾರತ “ವ ಮತ್ತೊಂದರಿ “ನಮ್ಮ ಉಂಬೆ” ಯ ವಿಷಯಲ್ಲಿ ಜಗತ್ತಿಂಗೇ “ಸಾಮ್ರಾಟ” ನಾಗಿ ಮಾಡೆಕ್ಕು. ಈ ನಿಟ್ಟಿಲಿ ನಾವೆಲ್ಲ ತೊಡಗಿಸಿಗೊಂಬೊದೇ ಆ ಮಹಾನ್ ” ಸಾಮ್ರಾಟ “೦ಗೆ ನಾವು ಕೊಡುವ “ನಿಜವಾದ ಅಶ್ರುತರ್ಪಣ ”

ಉಂಬೆ ಮಾವ

"ಸಾಮ್ರಾಟ"೦ಗೆ ಒಂದು ಅಶ್ರುತರ್ಪಣ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. Ramprashanth

  Very sad news… May SAMRAT RIP!!!!

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಮಾವ,ಗೋಸಮ್ಮೇಳನಲ್ಲಿ ಹತ್ತರಂದ ನೋಡಿ ಆನಂದಾಶ್ಚರ್ಯ ಆದ ದೃಶ್ಯ ಮನಸ್ಸಿಲಿ ಹಸಿರಾಗಿಪ್ಪಗಳೇ ಈ ದುಃಖದ ವಾರ್ತೆ ಓದಿ ಬೇಜಾರಾತು.ನಮ್ಮ ಉ೦ಬೆಗೊ ಎಲ್ಲ ಸಮೃದ್ಧಿಲಿ ಬದುಕ್ಕುವ ಹಾಂಗೆ ಆಗಿ ಸಾಮ್ರಾಟನ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ,ಆ ದಿಕ್ಕಿಲಿ ನಾವೆಲ್ಲಾ ನಮ್ಮ ಯೋಜನೆ,ಪ್ರಯತ್ನ ಮಾಡುವ°.

  [Reply]

  VA:F [1.9.22_1171]
  Rating: +1 (from 1 vote)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಅಪ್ಪು.., ಉಂಬೆಗಳ ಲೋಕದ ಸಾಮ್ರಾಟನೆ ಆಗಿತ್ತಿದ್ದ° ಅಲ್ಲದಾ? ಎಲ್ಲೋರ ಮನಸ್ಸಿಲಿ ಯಾವತ್ತಿಂಗೂ ನಿಂಬ ಹಾಂಗೆ ತನ್ನ ಛಾಪೊತ್ತಿ ಹೋಯಿದ°.
  ಹೀಂಗಿಪ್ಪ ಉಂಬೆ ಸಂತತಿಗ ನಮ್ಮಲ್ಲಿ ಮನೆಮನೆಗಳಲ್ಲಿ ತುಂಬಲಿ.. ಮನೆಗಳ ಬೆಳಗುಸಲಿ..
  ರಘು ಭಾವ° ಹೇಳಿದ ಹಾಂಗೆ ಉಂಬೆಗ ಸಮೃದ್ಧಿಲಿ ಬದುಕುವ ಹಾಂಗೆ ಆಗಿ ಸಾಮ್ರಾಟನ ಆತ್ಮಕ್ಕೆ ಶಾಂತಿ ಸಿಕ್ಕಲಿ..

  [Reply]

  VA:F [1.9.22_1171]
  Rating: 0 (from 0 votes)
 4. ಮಣಿಲ ಮಾದಣ್ಣ
  ಚ.ಮಹಾದೇವ.ಶಾಸ್ತ್ರಿ. ಮಣಿಲಾ.

  ಸಾಮ್ರಾಟ, ನಮ್ಮ ಎಲ್ಲಾ ಅಚ್ಚರಿ ಗೊಳಿಸಿ, ಎಚ್ಹರ ಗೊಳಿಸಿ ಚಿರ ನಿದ್ರೆಗೆ ಹೋದನಾ. >? ಪುತ್ತೂರು ಪೇಟೆ ಮಧ್ಯಲ್ಲಿ ಇಪ್ಪ ಎಂಗಳ ಮನೆಲಿ ಯೆಂಗೊ ಶ್ರೀ ಶ್ರೀ ಗಳ ಅನುಗ್ರಹಂದ ಈ ಸಾಮ್ರಾಟನ ಕುಟುಂಬ ದ ಒಬ್ಬನ ಸಾಕುವ ಸಾಹಸ ಮಾಡಿದ್ದೆಯಾ… ಬನ್ನಿ ನೋಡಿ ಧನ್ಯರಾಗಿ. ಈ ಸೈಟಿಂಗೆ ಪೋಟೊ ಹಾಕುದು ಹೇಂಗೆ.

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಈ ಲೇಖನ ನೋಡಿ ಮಾವ, ಪಟ ಹಾಕುದು ಹೇಂಗೆ ಹೇಳಿ ವಿವ ಇದ್ದು!
  http://oppanna.com/shuddi/oppa-pata-gravatar-tutor

  [Reply]

  VA:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನಿಂಗೊ shuddi@oppanna.com ಗೆ ಪಟ ಕಳ್ಸಿರೆ ಬೈಲಿಲಿ ಹಾಕುವ ವ್ಯವಸ್ಥೆ ಆವುತ್ತು//

  [Reply]

  VN:F [1.9.22_1171]
  Rating: 0 (from 0 votes)
 5. ಮೋಂತಿಮಾರು ಮಾವ°
  ಉಒಬೆ ಮಾವ

  ಮಹಾದೇವಣ್ಣ ನಿಂಗಳಲ್ಲಿಪ್ಪ ಬೋರಿ ನಿಜಕ್ಕೂ ನೋಡುವಹಾಂಗಿದ್ದು. ಅದರ ಸಾಮ್ರಾಟ ನ ಹಾಂಗೆ ಬೆಳೆಶೊದೇ ನಮ್ಮ ಸಾಮ್ರಾಟಂಗೆ ಕೊಡುವ ಅಶ್ರುತರ್ಪಣ

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಮಾವ°

  ಗೋ ಸಮ್ಮೇಳನಲ್ಲಿ ಸಾಮ್ರಾಟ್ ಎದ್ದು ಕಂಡ ಹಾಂಗೆ ನಮ್ಮ ಮಠದ ಗೋಸಂಪತ್ತು ಇಡೀ ವಿಶ್ವಕ್ಕೆ ಸಾಮ್ರಾಟ್ ಆಗಲಿ.ಆ ಮೂಲಕ ಸಾಮ್ರಾಟ್ ನೆನಪು ಅಚ್ಚಳಿಯದೆ ಒಳಿಯುವಂತಾಗಲಿ.ಹರೇ ರಾಮ

  [Reply]

  VN:F [1.9.22_1171]
  Rating: 0 (from 0 votes)
 7. ಮೋಹನಣ್ಣ

  ಓಹ್! ಎ೦ತಾ ಬೇಜಾರದ ಸುದ್ದಿ.ಆನು ಕೋಡಿ ಮೂಲೆ ವೆ೦ಕಟ್ರಮಣಣ್ಣನೂದೆ ರಾಮಚ೦ದ್ರಾಪುರಕ್ಕೆ ಹೋದಷ್ಟು ಸರ್ತಿಯು ಸಾಮ್ರಾಟನ ದರ್ಶನ ಆಗದ್ದೆ ಬಪ್ಪ ಕ್ರಮ ಇತ್ತಿಲ್ಲೆ.ಭಾರೀ ಬೇಜಾರತು ಮೋ೦ತಿಮಾರು ಮಾವ೦.ಎನ್ನ ಹ್ರುದಯ ಪೂರ್ವಕ ಶ್ರದ್ದಾ೦ಜಲಿ ಆ ಮಹಾ ಸಾಮ್ರಾಟ೦ಗೆ ಅರ್ಪಿಸಿದ್ದೆ. ಒಪ್ಪ೦ಗಳೊಟ್ಟಿ೦ಗೆ .

  [Reply]

  VA:F [1.9.22_1171]
  Rating: 0 (from 0 votes)
 8. ಜಯಶ್ರೀ ನೀರಮೂಲೆ
  jayashree.neeramoole

  ಅಂತ ಆ ಮಹಾನ್ “ಸಾಮ್ರಾಟ ” ನಮ್ಮೆಲ್ಲರ ಬಿಟ್ಟು, ಆ ಭಗವಂತನ ಸನ್ನಿಧಾನಕ್ಕೆ ಹೋದ್ದದು ನಂಬುಲೇ ಆವುತ್ತಿಲ್ಲೆ. ಬೈಲಿನ ನಾವೆಲ್ಲ “ಉಂಬೆ” ಸೇವಕರು ಅಂತ ಮತ್ತೊಬ್ಬ “ಸಾಮ್ರಾಟ”ನ ತಯಾರು ಮಾಡೊದು ಮಾಂತ್ರ ಅಲ್ಲ, ನಮ್ಮೆಲ್ಲೊರ ಪ್ರೀತಿಯ ಗುರುಗೊಳ ಮನದಾಳದ ಅಪೇಕ್ಶೆಯಂತೆ “ಭಾರತ “ವ ಮತ್ತೊಂದರಿ “ನಮ್ಮ ಉಂಬೆ” ಯ ವಿಷಯಲ್ಲಿ ಜಗತ್ತಿಂಗೇ “ಸಾಮ್ರಾಟ” ನಾಗಿ ಮಾಡೆಕ್ಕು. ಈ ನಿಟ್ಟಿಲಿ ನಾವೆಲ್ಲ ತೊಡಗಿಸಿಗೊಂಬೊದೇ ಆ ಮಹಾನ್ ” ಸಾಮ್ರಾಟ “೦ಗೆ ನಾವು ಕೊಡುವ “ನಿಜವಾದ ಅಶ್ರುತರ್ಪಣ ”

  ಈ ವಾಕ್ಯ ತುಂಬಾ ಇಷ್ಟ ಆತು ಉಂಬೆ ಮಾವ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾವಿಜಯತ್ತೆಜಯಶ್ರೀ ನೀರಮೂಲೆಪುಟ್ಟಬಾವ°ಡೈಮಂಡು ಭಾವಮುಳಿಯ ಭಾವಹಳೆಮನೆ ಅಣ್ಣಕಳಾಯಿ ಗೀತತ್ತೆಬೋಸ ಬಾವಪೆಂಗಣ್ಣ°ವೆಂಕಟ್ ಕೋಟೂರುಎರುಂಬು ಅಪ್ಪಚ್ಚಿಅಕ್ಷರ°ಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣಶಾಂತತ್ತೆವಸಂತರಾಜ್ ಹಳೆಮನೆದೊಡ್ಡಮಾವ°ಪವನಜಮಾವವೇಣಿಯಕ್ಕ°ಡಾಗುಟ್ರಕ್ಕ°ಪ್ರಕಾಶಪ್ಪಚ್ಚಿಸಂಪಾದಕ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ