ಉಂಬೆ – ಕಾನೂನು

November 5, 2010 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಹಿಂದೆ “ನಮ್ಮ ಉಂಬೆ”ಯ ಬಗ್ಗೆ ಅನೇಕ ವಿಷಯಗಳ ತಿಳಿವ ಪ್ರಯತ್ನ ಮಾಡಿದ್ದು. ಈಗ ಬೆಶಿ ಬೆಶಿ ಇಪ್ಪದು ಹೇಳಿರೆ ; “ಗೋಹತ್ಯೆ ನಿಷೇಧ ಕಾನೂನು” . ಈ ಕುರಿತು ಬಾರೀ ಚರ್ಚೆ ನಡೆತ್ತಾ ಇದ್ದು. ಈಗಾಗಲೇ ಈ ಕಾನೂನಿನ ಬಗ್ಗೆ ಪರ-ವಿರೋಧ ಚರ್ಚೆ ನಡೆತ್ತಾ ಇದ್ದು.

ಜವಾರಿ ಜಾತಿಯ ಬೋರಿ

ನಮ್ಮ ದೇಶದ ಯಾವುದೇ ಕಾನೂನು ” ಸಂವಿಧಾನ”ಲ್ಲಿ ಇಪ್ಪ ಹಾಂಗೇ ಆಯೆಕ್ಕು. ಅದರ ೪೮ ನೇ ಅಧ್ಯಾಯಲ್ಲಿ ಜಾನುವಾರು ಹತ್ಯೆ ಮಾಡುಲೆ ಎಡಿಯ. ಅಲ್ಲದ್ದೇ ಪ್ರತೀ ರಾಜ್ಯಲ್ಲಿಯುದೇ ಈ ಬಗ್ಗೆ ಯೋಚನೆ ಮಾಡೆಕ್ಕು ಹೇಳ್ತು. ಅದರಂತೆ ಜಮ್ಮು ಕಾಶ್ಮೀರ, ಹರಿಯಾಣ, ಮಧ್ಯಪ್ರದೇಶ ಹೀಂಗೆ ೭ ರಾಜ್ಯಂಗಳಲ್ಲಿ ಆ ಕಾನೂನು ಇದ್ದು. ನಮ್ಮಲ್ಲಿಯುದೆ “ಕೊಡಗು” ಪ್ರತ್ಯೇಕ ರಾಜ್ಯ ಆಗಿಪ್ಪಗ ಆ ಕಾನೂನು ಇತ್ತು. ಆದರೆ ಅದು ಮತ್ತೆ ಮೈಸೂರು ರಾಜ್ಯ(ಪ್ರಸ್ತುತ ಕರ್ನಾಟಕ)ಲ್ಲಿ ವಿಲೀನ ಅಪ್ಪಗ ಕಾನೂನು ವಿಲೀನ ಆತು. ಈಗ ಇಡೀ ಜಗತ್ತಿಲಿ “ಗೋಹತ್ಯಾ ನಿಷೇಧ” ಕಾನೂನು ಮಾಡಿದ ಏಕೈಕ ದೇಶ ಹೇಳಿರೆ ದಕ್ಷಿನ ಆಫ್ರಿಕಾದ ಕ್ಯೂಬಾ ಮಾತ್ರ(೧೯೯೨). ಬರ್ಮಾ, ಅಫಘಾನಿಸ್ಥಾನ, ಇರಾನ್ ಲಿಯುದೆ “ಗೋಹತ್ಯಾ ನಿಷೇಧ ಕಾನೂನು” ಉಂಬೆಗಳ ರಕ್ಷಿಸಿಗೊಂಡಿತ್ತು. ಹಿಂದೆ ಕೆಲವು ಭಾಗಗಳಲ್ಲಿ ಅಂತೂ ಗೋಹತ್ಯೆ ಮಾಡುವವರ ಅತ್ಯಂತ ಕೆಳ ಮಟ್ಟಲ್ಲಿ ನೋಡಿಗೊಂಡಿತ್ತಿದ್ದವು.

೧೯೭೯, ೧೯೮೫, ೧೯೯೦, ೧೯೯೪, ೧೯೯೬,೧೯೯೯, ೨೦೦೦ ಇಷ್ಟು ಸರ್ತಿ ಲೋಕಸಭೆಲಿ “ಗೋಹತ್ಯೆ ನಿಷೇಧ” ಆಯೆಕ್ಕು ಹೇಳಿ, ಸದಸ್ಯರು ವೈಯುಕ್ತಿಕವಾಗಿ ಪ್ರಸ್ತಾಪ ಮಾಡಿದ್ದವು. ಆದರೆ ಎಲ್ಲರೂ ಅದಕ್ಕೆ ಬೆಂಬಲ ಕೊಡದ್ದೆ ಅದು ಕಾನೂನು ಆಗಿ ಜಾರಿಗೆ ಬೈಂದಿಲ್ಲೆ. ನಮ್ಮ ದೇಶದ ಸುಪ್ರಿಂ ಕೋರ್ಟಿಲಿ ಅಂತೂ ಬಾರೀ ಸರ್ತಿ ತೀರ್ಪು ಕೊಡುವಾಗ “ನಮ್ಮ ಉಂಬೆ”ಯ ಮಹತ್ವವ ಹೇಳಿದ್ದು. ಜಗತ್ತಿನ ಅತೀ ಬೆಲೆ ಬಾಳುವ ವಜ್ರ ಆದ “ಕೊಹಿನೂರು” ಇಂದಲೂ “ನಮ್ಮ ಉಂಬೆ” ಮೇಲೆ, ಹೇಳಿ ೨೦೦೧ರ ಒಂದು ತೀರ್ಪಿಲಿ ಹೇಳಿದ್ದು. ಎನ್ನ ಲೆಕ್ಕಲ್ಲಿ ನಾವು “ನಮ್ಮ ಉಂಬೆ”ಯ ಮಹತ್ವವ ತಿಳ್ಕೊಂಡು, ಹಾಲು ಮಾಂತ್ರ ಅಲ್ಲದ್ದೇ ಅದರ ಬೇರೆ ಉತ್ಪನ್ನಂಗಳ ಉಪಯೋಗಿಸುಲೆ ಸುರು ಮಾಡೆಕ್ಕು. ಆವಾಗ ದನಂಗಳ ಕಡಿವಲೆ ಕಳುಸುದು ನಿಲ್ತು. ಜನ ಕೊಡದ್ದರೆ ಕಡಿವವು ಎಲ್ಲಿಂದ ತತ್ತವು?, ಅಲ್ಲದಾ?

ಹಾಂಗಾಗಿ ಈ ಸಂಕೀರ್ಣ ಕಾಲಗಟ್ಟಲ್ಲಿ “ನಮ್ಮ ಉಂಬೆ”ಯ ಮಹತ್ವವ ನಾವು ತಿಳ್ಕೊಂಡು ಇನ್ನಷ್ಟು ಜನಕ್ಕೆ ಅದರ ಹೇಳುವ. ಆವಾಗ ತನ್ನಷ್ಟಕ್ಕೆ ಕಾನೂನು ಆದ ಹಾಂಗೆ ಆವುತ್ತು. ನಮ್ಮ ಜೀವನ ಪೂರ್ತಿ ನಮ್ಮ ಸಾಂಕುವ “ಆ ಉಂಬೆ ಅಬ್ಬೆಯ” ನಾವು ನೋಡಿಗೊಂಡ ಹಾಂಗೆ ಆವುತ್ತು ಆತಾ….

ಉ೦ಬೆ ಮಾವ

೯೪೪೯೫೯೫೨೨೭

ಉಂಬೆ - ಕಾನೂನು, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  (ಏಕೈಕ ದೇಶ ಹೇಳಿರೆ ದಕ್ಷಿನ ಆಫ್ರಿಕಾದ ಕ್ಯೂಬಾ ಮಾತ್ರ)
  ಇದು ಯಾವ ಕ್ಯೂಬಾ? ಕ್ಯೂಬಾ ಹೇಳಿರೆ ಅಮೆರಿಕಾದ ಫ್ಲಾರಿಡಾ ರಾಜ್ಯದ ದಕ್ಷಿಣ ಭಾಗಲ್ಲಿ ಸಮುದ್ರದ ಮಧ್ಯೆ ಇಪ್ಪ ದ್ವೀಪ ಅಲ್ಲದ? ದಕ್ಷಿಣ ಆಫ್ರಿಕಾಲ್ಲಿ ಬೇರೆ ಕ್ಯೂಬ ಇದ್ದ? (ಎನಗೆ ಗೊಂತಿಲ್ಲದ್ದ ಕಾರಣ ಕೇಳಿದ್ದು)

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕ್ಕಾನ ಪ್ರಮೋದ
  Pramod m

  ಈ ಉಂಬೆಗಳ ರಕ್ಶಿಸುಲೆ ಅಲ್ಲದ ನಮ್ಮ ಗುರುಗ ಪ್ರಯತ್ನ ಮಾಡುದು……………..

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಮಾವ°

  ವಿವರಣೆ ಲಾಯಿಕ ಆಯಿದು.ಇನೂ ಹೀಂಗೆ ಬರೆತ್ತಾ ಇರಿ.ದೀಪಾವಳಿಯ ಗೋಪೂಜೆಯ ಸಮಯಲ್ಲಿ ಸಾಂದರ್ಭಿಕ ಲೇಖನ ..ಧನ್ಯವಾದಂಗ..

  [Reply]

  VN:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಗೋಪೂಜೆಯ ಸಂದರ್ಭಲ್ಲಿ ಗೋವುಗಳ ಬಗ್ಗೆ ತಿಳುಶಿದ ಈ ಶುದ್ದಿ ಓದಿ ತುಂಬಾ ಕೊಶಿ ಆತು ಮೋಂತಿಮಾರುಮಾವಾ…

  ಇನ್ನಾಣದ್ದು ಬರಳಿ!
  ಹರೇರಾಮ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣಎರುಂಬು ಅಪ್ಪಚ್ಚಿನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿದೊಡ್ಮನೆ ಭಾವಮಾಲಕ್ಕ°ಪುತ್ತೂರುಬಾವಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಡಾಗುಟ್ರಕ್ಕ°ಸಂಪಾದಕ°ಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿದೇವಸ್ಯ ಮಾಣಿಬೊಳುಂಬು ಮಾವ°ಪೆಂಗಣ್ಣ°ಮಂಗ್ಳೂರ ಮಾಣಿಮಾಷ್ಟ್ರುಮಾವ°ಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ