ಉ೦ಬೆ – ವಿಜ್ಞಾನ

ನಮ್ಮ ಎಲ್ಲ ಉ೦ಬೆಗಳೂ ವೈಜ್ಝಾನಿಕವಾಗಿ ಸುರೂವಣ ಸಾಲಿಲಿಯೇ ಇದ್ದವು. ಪುರಾಣ ಕಾಲ೦ಗಳ ಗ್ರ೦ಥ೦ಗಳ ರಜ್ಜ ನೋಡ್ರೆ ನಮ್ಮ ಉ೦ಬೆಗಳ ಮಹತ್ತು ಗೊ೦ತಾವುತ್ತು. ಎಡೇಲಿ ರಜಾ

ಎಲ್ಲಿ ಕಾಂಬದೋ ಈ ಕೊಶಿಯಾ...

ಇ೦ಗ್ಲಿಷ್ ಮರ್ಲು ಜಾಸ್ತಿ ಆಗಿ ನಮ್ಮ ಉ೦ಬೆಗಳ ವಿಜ್ಝಾನ ಮಹತ್ವವ ನಾವು ಮರತ್ತೆಯಾ ಹೇಳ್ರೆ ತಪ್ಪಾಗ ಹೇಳಿ ಕಾಣ್ತು. ವೈದ್ಯಕೀಯವಾಗಿ  ಇ೦ದು ಎಷ್ಟೇ ಸ೦ಶೋಧನೆಗೊ ನಡದ್ದರೂ, ಚರಕ ಸ೦ಹಿತೆ, ಸುಶ್ರುತ ಸ೦ಹಿತೆ, ಅಷ್ಟಾ೦ಗ ಹೃದಯ ಹೀ೦ಗಿಪ್ಪ ಹಳತ್ತು ಪುಸ್ತಕೊಕ್ಕೆ ಇಪ್ಪ ಬೆಲೆ ಇ೦ದಿ೦ಗೂ ಇದ್ದು.

ಹೊಸ ಮನೆಗೆ ನಾವು ಹೊಕ್ಕೊದರ ಮೊದಲು ಉ೦ಬೆ-ಕ೦ಜಿಯ ಹೊಗ್ಗುಸುತ್ತು. ಇದಕ್ಕೆ ಇ೦ದ್ರಾಣ ಭಾಷೆಲಿ ಹೇಳ್ತರೆ ವೈಜ್ಝಾನಿಕ ಕಾರಣ ಇದ್ದು. ಮನೆ ಕಟ್ಟುವಗ ಉಪಯೋಗ್ಸಿದ್ದ ಸಿಮೆ೦ಟು, ಬಣ್ಣ೦ಗೊ ಹೀ೦ಗಿಪ್ಪ ಸಾಮಾನಿ೦ದ ಒಳಾಣ  ವಾತಾವರಣ ವಿಷಮಯ (ಇ೦ಗಾಲದ ಡೈಆಕ್ಸೈಡ್ ಇತ್ಯಾದಿ) ಆಗಿರ್ತು. ಉ೦ಬೆವುದೆ ಕ೦ಜಿವುದೆ ಹೊಸ ಮನೆಲಿ ಅದರಷ್ಟಕೆ ಸುತ್ತು ಹಾಕೊಗ ಅದರ ಉಸಿರಾಟ೦ದ ಅಲ್ಲಿಯಣ ಗಾಳಿಲಿ ಆಮ್ಲಜನಕ ಹೆಚ್ಚಾವುತ್ತು. ಹಾ೦ಗಾಗಿ ನಾವು ಮನೆಯ ಒಳ ಹೊಕ್ಕೊಗ ಶುದ್ಧ ಗಾಳಿ ನವಗೆ ಸಿಕ್ಕುತ್ತು.

ಅಷ್ಟೇ ಅಲ್ಲ ಇ೦ದು ನಮ್ಮ ಉ೦ಬೆಯ ಸಗಣ  “ಅಣು ವಿಕಿರಣ” ವ ತಡೆತ್ತು ಹೇಳಿ ವಿಜ್ಝಾನಿಗೊ ಸಾಬೀತು ಮಾಡಿದ್ದವು. ಅದಕ್ಕೇ ಬೊಂಬಾಯಿಲಿಪ್ಪ “ಟ್ರಾಂಬೆ ಅಣು ಸಂಶೋಧನಾ ಕೇಂದ್ರ” ದ ಒಳಾಣ ಗೋಡೆಗೆ ಸಗಣವ ಬಳಿಗಿದ್ದವಡ. ನಮ್ಮಲ್ಲಿ ಮಾತ್ರ ಅಲ್ಲ ರಷ್ಯಾಲ್ಲಿಯೂ ಹೀಂಗೆ ಮಾಡಿದ್ದವಡ.

ಕೆಲಾವು ವರ್ಷಂಗೊಳ ಮೊದಲು ಮಧ್ಯಪ್ರದೇಶದ ಭೋಪಾಲಲ್ಲಿ ಒ೦ದು ರಾಸಾಯನಿಕ ಕಾರ್ಖಾನೆ ದುರಂತ ಆಗಿ ಕಂಡಾಬಟ್ಟೆ ಜನಂಗೊಕ್ಕೆ ಉಪದ್ರ ಆದ್ದು ಇಂದಿಂಗುದೆ ಕಾಣ್ತು. ಆವಗ ಉಂಬೆಯ ಸಗಣ ವ, ತುಪ್ಪವ ಬಳಸಿ ನಿತ್ಯ ” ಅಗ್ನಿಹೋತ್ರ ” ಮಾಡಿಗೊಂಡಿದ್ದ  ಒಂದು ಮನೆಗೆ ಮಾತ್ರ ಎಂತದೂ ಆಯಿದಿಲ್ಲೆ ಹೇಳ್ತದು ನಮ್ಮ ಉಂಬೆ ವಿಜ್ಝಾನ ಕ್ಕೆ ಕೊಂಬು ಅಲ್ಲದಾ…………………

ಉಂಬೆ ಮಾವ

ಮೋಂತಿಮಾರು ಮಾವ°

   

You may also like...

11 Responses

 1. ಬಂಡಾಡಿ ಅಜ್ಜಿ says:

  ಅಪ್ಪಪ್ಪಾ ನಮ್ಮ ಉಂಬೆಯ ಬಗ್ಗೆ ಹೇಳಿದಷ್ಟೂ ಮುಗಿಯ… ನೋಡುವಾಗಳೇ ಕೈಮುಗಿವ ಹೇಳಿ ಕಾಣುತ್ತಲ್ಲದೋ..

 2. ಸತ್ಯವಾದ ಮಾತಿನ ಹೇಳೀದ್ದಿ. ನಮ್ಮ ಜನಂಗೊಕ್ಕೆ ಎಲ್ಲವೂ ವೈಜ್ಞಾನಿಕವಾಗಿ ಸಾಬೀತಾದರೆ ಮಾಂತ್ರ ಸತ್ಯ ಹೇಳಿ ಕಾಣ್ತು… ಆದರೆ ಹಿಂದಾಣ ಕಾಲಲ್ಲಿ ಯಾವುದೇ ಯಂತ್ರಂಗೊ ಇತ್ಯಾದಿ ಇಲ್ಲದ್ದಿಪ್ಪಗಳೇ ಇಷ್ಟೊಂದು ಮಹತ್ವದ ವಿಚಾರಂಗಳ ಕಂಡುಹಿಡುದು ನಮ್ಮ ನಿತ್ಯ ಜೀವನಲ್ಲಿ ಅಳವಡಿಸಿಗೊಂಡಿದವ್ವು ನಮ್ಮ ಹಿರಿಯರು. ಅದರ ಬಗ್ಗೆ ಅಸಡ್ಡೆ ಬೇಡ.

 3. ಇಂಗಾಲದ ಡೈ ಆಕ್ಸೈಡ್ ಕಮ್ಮಿ ಆಗಿ , ಈ ಆಮ್ಲಜನಕ ಹೆಚ್ಚಪ್ಪದು ಹೇಂಗೆ?. ಬೇರೆಯವಕ್ಕೆ ಹೇಳೆಕಾರೆ ಪ್ರತಿಯೊಂದೂ ಸಣ್ಣ ಸಣ್ಣ ಅಂಶಂಗಳನ್ನೂ ತಿಳ್ಕೊಂಡಿರೆಕಾವ್ತು. ಹಾಂಗಾಗಿ ಎನಗೆ ವಿವರ ಬೇಕಾತು.ಕೊಡ್ತೀರ?

  • ಹ್ಮ್ಮ್ ಒಳ್ಳೆ ಪ್ರಶ್ನೆಯೇ? ಅದು ಹೇಂಗೆ ಹೆಚ್ಹಪ್ಪದು?

  • ವಂದೇ ಗೋಮಾತರಮ್
   ಉಂಬೆಯ ಬೆನ್ನಿಲಿ ಸುಳಿ ಇದ್ದು.ಅದರ “ಸೂರ್ಯಕೇತು ನಾಡಿ” ಹೇಳ್ತು.ಅದು ಸೂರ್ಯನ ಕಿರಣಂದ “ಎ” ವಿಟಾಮಿನ್ ಅಲ್ಲದ್ದೆ ಬೇರೆ ಉತ್ತಮ ಅಂಶಂಗೊಳ ಹೀರಿಗೊಳ್ತು.ಅದರ ಕೊಂಬುಗೊ “ಆಂಟೆನಾ” ಇದ್ದ ಹಾಂಗೆ.ಅದು ವಾತಾವರಣಲ್ಲಿಪ್ಪ “ಕಾಸ್ಮಿಕ್ ಶಕ್ತಿ”ಯ ಹೀರಿಗೊಳ್ತು.ಹೀಂಗೆ ಈ ಅಂಶಂಗೊ ಎಲ್ಲ ಶರೀರಲ್ಲಿ ಸೇರಿ,ಉಂಬೆಯ ಉಸಿರಾಟ,ಸಗಣ ಮೂತ್ರಂಗಳಲ್ಲಿ ಸೇರಿಗೊಳ್ತು.ಆಗ ಅಲ್ಲಿಪ್ಪ ಇಂಗಾಲದ ಡೈಆಕ್ಸೈಡಿ ನ ಹಾಂಗಿಪ್ಪ ವಿಷಕಾರಕಂಗೊ ಇಲ್ಲದ್ದೆ ಆಗಿ, ಆಮ್ಲಜನಕದ ಹಾಂಗಿಪ್ಪ ಒಳ್ಳೆಯ ಅಂಶಂಗೊ ಹೆಚ್ಚಾವುತ್ತು.
   ಉಂಬೆ ಮಾವ

 4. ಪ್ರಣವ್ ಶರ್ಮ says:

  ಎಂಗಳ ಒಪ್ಪಕ್ಕ ಒಳ್ಳೆ ಒಳ್ಳೆ ಪ್ರಶ್ನೆಗಳ ಕೇಳುತ್ತಿದ, ಆದ ಕಾರಣ ಬರವಗ ರಜ್ಜ ಉಷಾರಿ ಮಾಡುದು ಎಂಥಕ್ಕೂ ಒಳ್ಳೆದೆ.,

  • ಪೆಂಗ° says:

   ಹೊನ್ನಿ ಅಕ್ಕ ಒಪ್ಪಕ್ಕ ಆದ್ದು ಯೇವಾಗ..?
   ಬೈಲಿನ ಒಪ್ಪಕ್ಕ ಬೇರೆಯೆ ಜೆನ ಅಡ, ನೆಗೆಬಾವ ಹೇಳಿಯೋಂಡಿತ್ತಿದ್ದ..!

 5. ಆರು ಹೆಸರು,ಜೆನ ಬದಲಿದರೂ “ಉಂಬೆ ಅಬ್ಬೆ” ಯ ಮರೆಯದ್ದರೆ ಆತು. ಉಂಬೆ ಮಾವ

 6. ಉ೦ಬೆ ಬಗ್ಗೆ ಸರಿಯಾಗಿ ಹೇಳಿದ್ದಿ,ಸದಾಶಿವಣ್ಣ. ಈಗ ಉ೦ಬೆ ಸಾ೦ಕುದೆ ಎ೦ಗಳ ಊರಿಲ್ಲಿ ಕಷ್ಟ ಆವುತ್ತ ಇದ್ದಡ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *