ನಮ್ಮಲ್ಲಿ ಕೂಡ ಹೀಂಗೆ ಎಡಿಗೋ..?

May 24, 2011 ರ 2:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಜೀವನ ಶೈಲಿಯ ಬದಲಾವಣೆಯ ಬಗ್ಗೆ ಚೆನ್ನೈಭಾವನ ಚಿಂತನಾಬರಹ.

ಹೀಂಗೇ ಕೂದು ಇಲ್ಲಿ ಗುರುಟಿಯೊಂಡಿಪ್ಪಗ ಒಂದು ನೆಂಪಾತಿದಾ.

ಸಂದರ್ಭ : ಕೆಲವು ವರುಷ ಮದಲಿಂಗೆ ಕಾಲೇಜು ಓದಿಗೊಂಡಿಪ್ಪ ಸಮಯ. ಹೀಂಗೊಂದರಿ ಎನ್ನ ದೋಸ್ತಿ ಮನೆ ಗುತ್ತಿಗಾರಿಂಗೆ ಹೋಗಿತ್ತೆ.
ಮನೆ ಯೆಜಮಾನ್ರು ದಂಪತಿ , ಅವಕ್ಕೆ 3 ಪ್ರಾಯಪ್ರಬುದ್ಧ ಮಕ್ಕೊ. ಹಿರಿಯೋನಿಂಗೆ ಮದ್ವೆ ಆಯ್ದು. ಒಂದು ಬಾಬೆಯೂ ಇದ್ದ ನೆಂಪು. ಟಿವಿ ಇನ್ನೂ ಬಯಿಂದಿಲ್ಲೆ. ರೇಡಿಯೋ ಟೇಪ್ರಿಕಾರ್ಡರ್ ಇತ್ತಿದ್ದು.

ಸಂಗತಿ: ಹೊತ್ತೊಪಗ 6ವರೆ ಅಪ್ಪಗ ಎಜಮಾನಂದತೊಟ್ಟು ಒಬ್ಬೊಬ್ಬನೇ ಮಿಂದಿಕ್ಕಿ ಬಂದವು . ಸೀದಾ ಒಳ ಹೋಗಿ ಚಾಮಿ ಕೋಣೆಲಿ ಜೆಪ, ನಿತ್ಯ ಪೂಜೆ ಸುರುವಾತು.
ಜೆಪಮಾಡಿ ಮುಗುಶಿದ ಕೂಡ್ಲೇ ವಿಷ್ಣು ಸಹಸ್ರನಾಮ ಸುರುವಾತು, ಕೆಲವು ಸೂಕ್ತಂಗಳೂ ಕೇಳಿಯೊಂಡತ್ತು . ಹೆಮ್ಮಕ್ಕಳೂ ಮೀಯ್ತವು ಮಿಂದಿಕ್ಕಿ ಬಂದವು. ಎಂತ ಹರಟೆಯೂ ಇಲ್ಲೆ. ಶಬ್ಧಂಗಳೂ ಇಲ್ಲೆ.
ನಾವು ಬೋಸ ಪಡಪ್ಪೋಸು ಅಪ್ಪದು ಬೇಡ ಹೇಳಿ ಮಿಂದೊಂಡು ಬಂದು ಒಳ ಹೋಗಿ ಕವಿಳಿಗೆ ಸಕ್ಕಣ ತಟ್ಟೆ ಮಡಿಕ್ಕೊಂಡು ಕೂದೆಪ್ಪಾ.
8 ಗಂಟಗೆಲ್ಲಾ ಪೂಜೆ ಕಳುದು ಬಟ್ಟಲು ಮಡಗಿದವು. ಮತ್ತೆ ಜೆವ್ವನಿಗರ ಎಂಗಳ ಲೊಟ್ಟೆ ಪಟ್ಟಾಂಗ ಇಸ್ಪೀಟು ಆಟ ಆಗಿ ಮನುಗೆಕ್ಕಾರೆ ಗಂಟೆ 12 ಬಿಡಿ.

ಮರುದಿನ ಉದಿಯಪ್ಪಗ 6 ಅಯೆಕ್ಕಾರೆ ಮದಲೇ ಶಂಖಾನಾದ ಕೇಳಿ ಎಚ್ಚರ ಆತು. ಮೆಲ್ಲಂಗೆ ಎದ್ದು ನೋಡುತ್ತೆ ಅವೆಲ್ಲ ಎದ್ದು ಮಿಂದು ರೆಡಿ ಆಯ್ದವು ಜೆಪ ಆಗಿ ನಿತ್ಯ ಪೂಜೆ ಅಪ್ಪಗ ರುದ್ರ ಹೇಳಲೆಡಾ. 7ವರೆ ಅಯೆಕ್ಕಾರೆ ತೀರ್ಥ ಪ್ರಸಾದ ಆಗಿ ದೋಸಗೆ ರೆಡಿ.

ವಿಷಯ: ಎನಗೆ ಇಲ್ಲಿ ಕಂಡದು – ಆ ನಿತ್ಯ ವೃತ್ತಿ ಸಮಯಕ್ಕೆ ಅಷ್ಟೊಂದು ಶ್ರದ್ಧಾ ಭಕ್ತಿಲಿ ಮನೆಯೋರೆಲ್ಲರೂ ಹಾಜರಾದ್ದು ಪಾಲ್ಗೊಂಡದು.
ಈಗ ಕೆಲವು ಜೆನ ಮನಸ್ಸಿನೊಳ ಸಣ್ಣಕೆ ನೆಗೆ ಮಾಡುಗು – ಯೇ ಬೋಸಾ., ಅದು ಅಂದು ಮಾತ್ರ, ಬಂದವ ನೀ ಇತ್ತ ಕಾರಣ ಹೇದು.
ಅಲ್ಲಡ ಆತೋ – ನಿಜಕ್ಕೂ ನಿತ್ಯಕ್ಕೆ ಹೀಂಗೇಡಾ ಅಲ್ಲಿ.

ಈಗ ಎನಕಾಂಬೋದು – ಪ್ರತಿ ಮನೆಗಳಲ್ಲೂ ಇದೇ ಕ್ರಮ ಕಾರ್ಯ ರೂಪಕ್ಕೆ ಬಂದರೆ ಹೇಂಗಿಕ್ಕು .
ಉದಿಯಪ್ಪಗ, ಹೊತ್ತೋಪಗ ಶಂಖ ಊದುವ ಹೊತ್ತಿಂಗೆ, ನಿತ್ಯ ಪೂಜೆ , ನಿತ್ಯ ವಿಧಿ ಹೊತ್ತಿಂಗೆ ಮನೇಲಿ ಇಪ್ಪವು ಎಲ್ಲೋರೂ  ( ಇಲ್ಲದ್ದವರ , ಬಂದು ಮುಟ್ಟೆಕ್ಕಾದವರ ಬಿಡಿ ) ನಮ್ಮಲ್ಲೂ  ರಜಾ ಹೊತ್ತು ಹರಟೆ, ಮಾತು, ಮತ್ತೊಂದು, ಟಿವಿ ಇತ್ಯಾದಿ ನಿಲ್ಲಿಸಿ ಒಟ್ಟಿನ್ಗೆ ಕೂದು ೫ ನಿಮಿಷ ಆದರೂ ಶ್ರದ್ಧಾ ಭಕ್ತಿಲಿ ಆಚರಿಸಿಗೊಂಡು ( ಮನಗೆ ನೆಂಟ್ರು ಬಂದವು ಇದ್ದರೂ, ಆರಾರು ಅಂತೇ ಮಾತಾಡಲೇ ಬಂದವು ಇದ್ದರೂ ಆ ಸಮಯಕ್ಕೆ ಅಷ್ಟು ಹೊತ್ತು ಒಟ್ಟಿನ್ಗೆ ಸೇರಿ ನಿತ್ಯ ವಿಧಿ ಮಾಡಿಯೊಂಡು ಬಂದರೆ ಬಂದವಂಗೂ ವಿಶೇಷ ಕಾಂಗು, ಮನಗೂ ಒಂದು ಕಳೆ, ಮಾಡಿದವಂಗೂ ಮನೆಯವಕ್ಕೂ ಮನಸ್ಸಿನ್ಗೆ ಒಂದು ನೆಮ್ಮದಿ ಸಿಕ್ಕಿಗು . ಮಾಡುತ್ತ ಕೆಲಸ ೫ ನಿಮಿಷ ಆದರೂ ಆಚೀಚೆ ಹರಟೆ ಇಲ್ಲದ್ರೆ ಶಾಂತಿಲಿ ಭಕ್ತಿಲಿ  ಕೂದು ಮಾಡಿರೆ ಅದು ಮನಸ್ಸಿನ್ಗೆ ಖಂಡಿತಾ ಒಂದು ತೃಪ್ತಿ ಕೊಡುಗು. “ಧೀಯೋಯೋನಃ ಪ್ರಚೋದಯಾತ್” ಅರ್ಥವೂ ಅಕ್ಕು, ಅನುಭವಕ್ಕೂ ಬಕ್ಕು.

ಹೆಗ್ಗಳಿಕೆ ಹೇಳ್ತದಲ್ಲ ಆನು– ಮೇಗಾಣ ಸಂಗತಿ ಸ್ಪೂರ್ತಿಯೋ ಏನೋ , ಎನ್ನ ಮನೇಲಿ  ಆನು ಮಿಂದಿಕ್ಕಿ ಬಪ್ಪಗ ಟಿ.ವಿ. ಆಫ್. ಎಲ್ಲೋರೂ ಸೈಲೆಂಟ್ ಇರೆಕ್ಕಾವ್ತು. ಸುಮಾರು ವರ್ಷಂದಲೇ ಹೀಂಗೇ ಎನಗೆ.
ಮತ್ತೆ ಸುರುವಪ್ಪದು 10 ನಿಮಿಷ ಕಳುದು ದೇವರಕೋಣೆ ಬಿಟ್ಟು ಹೆರ ಬಂದ ಮತ್ತೆಯೇ ಎಂತ ಇದ್ದರೂ . ನಿತ್ಯಾಣದ್ದು ಎಷ್ಟು ಗಂಟಗೆ ಎಷ್ಟು ಹೊತ್ತಿಂಗೆ ಹೇಳ್ತದು ಎನ್ನ ಹೊತ್ತು ಎನ್ನ ಸ್ವಾತಂತ್ರ್ಯ. ಎಂತಕೆ ಹೇಳಿರೆ ಆನೂ ಆಫೀಸಿನ್ಗೆ ಕೆಲಸಕ್ಕೆ ಹೋಪವನೇ.
[ನೋಡಿ – ನೆಗೆಗಾರ ಕಣ್ಣು ಮಿಟುಕುಸೋದು – ‘ಅಪ್ಪಪ್ಪು ಎಂಗಳಲ್ಲಿಯೂ ಎಲ್ಲೋರು ಒರಗುವಾಗ ಲೈಟೂ ಆಫ್ ಫಾನೂ ಆಫ್ (ಚಳಿ ಇದ್ದರೆ)’ ]

ನಾವು ದೇವಸ್ಥಾನಕ್ಕೆ ಹೊವ್ತು. ಅಲ್ಲಿ ನವಗೆ ‘ಒಳಗೆ ಪ್ರವೇಶವಿಲ್ಲ’ ಫಲಕ ನೋಡಿರೆ ಕೋಪ ಕೋಪ ಬತ್ತು ಅಪ್ಪೋ?
ಅಂಗಿ ತೆಗೆದು ಒಳಗೆ ಬನ್ನಿ ಹೇಳಿ ಕಂಡರೆ…ಹಾಮ್, ‘ಇಲ್ಲಿಂದಲೇ ಸಾಲದೋ‘.
ಕೆಲವಕ್ಕೆ ಓಕರಿಕೆ ಕೂಡ ಬಪ್ಪಾಂಗೆ ಅಪ್ಪದು ನಾವು ಕಂಡಿದೆಪ್ಪ. ಒಂದು ವೇಳೆ ಒಳ ಹೋಪ ಹೇಳಿ ಕಂಡರೂ ಮತ್ತಾಣ ಬೋರ್ಡು-
ಮೊಬೈಲ್ ನಿಶ್ಯಬ್ಧಗೊಳಿಸಿರಿ‘ . ಅದರ ಓದಿಗೊಂಡೇ ಒಳ ಹೋಕಷ್ಟೇ , ಅಂದರೂ ಆಫ್ /ಸೈಲೆಂಟ್ ಮಾಡಿಕ್ಕ.
ನಮ್ಮ ಕಿಸೆಂದ ಒಳ ರಿಂಗ್ ಆಯೇಕು. ನಮ್ಮತ್ರೂ ಮೊಬೈಲ್ ಇದ್ದು ಹೇಳಿ ಗೊಂತಾಗಲಿ, ನವಗೂ ಮೊಬೈಲಿಲಿ ಕೆಲಸ ಇದ್ದು ಹೇಳಿ ಗೊಂತಾಗೆಡದೋ ಮತ್ತೆ?!!

ಅದಾ, ಇಷ್ಟು ಹೇಳಿಯಪ್ಪಗ ಒಂದು ನೆಂಪಾತೀಗ – ಮನ್ನೆ ಮಾಣಿ ಮಠಲ್ಲಿ ಊಟಕ್ಕೇ ಎಲ್ಲೋರು ಅಂಗಿ ತೆಗದು ಉಂಬಲೆ ಕೂಯ್ದವು.
ಒಬ್ಬ ಮಾತ್ರ ಉದಾಸನ ಮಾಡಿದನಡ.
ಕಾರ್ಯಕರ್ತರು ಬಂದು ಅಂಗಿ ತೆಗದು ಕೂರೆಕು ಭಾವ ಹೇಳಿಯಪ್ಪಗ ಅಂಬಗ ಎನಗೆ ಊಟ ಬೇಡ ಹೇಳಿ ಏಳ್ಳೆ ಹೆರಟನಡ. ಮತ್ತೆ ಹೆಂಗೋ ಅಂಗಿ ತೆಗದೇ ಕೂದನಡ.

ಇದಾ ಇದು ದೂರುತ್ಸು ಹೇದು ತಿಳ್ಕೊಮ್ಬಲಾಗ. ಇದು ಈಗಾಣ ಲೈಫ್ ಸ್ಟೈಲ್ ಹೇಳಿ ಜಾರ್ಲಾಗ.
ನಾವು ಎಷ್ಟು ಹೊತ್ತು (quantiy) ಮಾಡುತ್ತು  ಹೇಳಿ ಅಲ್ಲ, ಎಷ್ಟು ಚೆಂದಕೆ (quality) ಮಾಡ್ಲೆ ಎಡಿಗು ಹೇಳಿ ಚಿಂತುಸುವೋ. ” …. ಸಂಕೀರ್ತ್ಯ ನಾರಾಯಣ ಶಬ್ಧ ಮಾತ್ರಂ ವಿಮುಕ್ತ ದುಃಖಾ ಸುಖಿನೋ ಭವಂತು

ಈಗ ನಿಂಗೊಗೆ ಎಂತ ಕಾಣುತ್ತೋ ಎನಗೊಂತಿಲ್ಲೆ.
ಅದು ಎಂತದೇ ಆದರೂ ನಿಂಗಳ ಸ್ವಾತಂತ್ರ್ಯ. ಅದರ ಧಾರಾಳ ಇಲ್ಲಿ ಬರದು ಹೇಳಿಕ್ಕಿ.

ನಮ್ಮಲ್ಲಿ ಕೂಡ ಹೀಂಗೆ ಎಡಿಗೋ..?, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಣ್ಚಿಕಾನ ಭಾವ

  ನಿಜವಾದ ಮಾತು ಹೇಳಿದಿರಿ ಚೆನ್ನೈ ಭಾವ…. ಹೆಚ್ಚಿನವುದೇ ಇನ್ನೊಬ್ಬಂಗೆ ತೋರ್ಸುಲೆ ಬೇಕಾಗಿ ಕೆಲವು ಆಚರಣೆಂಗೊ ಮಾಡುದು ಅಷ್ಟೆ.

  [Reply]

  VA:F [1.9.22_1171]
  Rating: 0 (from 0 votes)
 2. ಬಲ್ನಾಡುಮಾಣಿ

  ಚೆನ್ನೈ ಭಾವನ ಮಾತು ಖಂಡಿತಾ ನಿಜ.. ಆ ಮನೆಯ ಕ್ರಮ ಓದಿಗೊಂಡು ಹೋದ ಹಾಂಗೆ ಆನು ಸಣ್ಣಾಗಿಪ್ಪಾಗ ನಡಕ್ಕೊಂಡಿದ್ದ ಕ್ರಮ ನೆನಪ್ಪಾತು. ಎನ್ನ ಅಜ್ಜ ಮಧ್ಯಾಹ್ನಕ್ಕಪ್ಪಗ ಪೂಜೆ ಮಾಡುಗು.. ರಜೆ ದಿನ ಆದರೆ ಎಲ್ಲರೂ ಆರತಿಗಪ್ಪಗ ಹಾಜರಾಯೆಕ್ಕು.. ಈಗಳೂ ಎನ್ನ ಅಪ್ಪ ಇದೇ ಕ್ರಮವ ಮುಂದರ್ಸಿಗೊಂಡು ಬಯಿಂದವು.. ಹತ್ತು ನಿಮಿಷ ದೇವರ ಕೋಣೆಲಿ ನಿಂದು ಹೂಗು ಹಾಕಿ ಹೊಡಾಡಿ, ಮತ್ತೆ ತೀರ್ಥ ತೆಕ್ಕೊಂಡು ಹೆರ ಬಂದಪ್ಪದ್ದೇ ಮನಸ್ಸಿಂಗೇ ಎನೋ ನೆಮ್ಮದಿ! ಆದರುದೆ ಹೊತ್ತೋಪಗ ಎಂಗಳಲ್ಲಿಯುದೆ ಮೂರ್ಖರ ಪೆಟ್ಟಿಗೆಲಿ ಬಪ್ಪ ಸಾಲು ಸಾಲು ಮುಕ್ತಾಯ ಆಗದ್ದ ದಾರವಾಹಿಗೊ ಬರ್ತಾ ಇರ್ತು.. ಆದರೆ ನಮ್ಮ ಕೆಲಸ ಬಿಟ್ಟು ಅದರ ಮುಂದೆ ಕೂಪ ಅಭ್ಯಾಸ ಬಯಿಂದಿಲ್ಲೆ.. ಕೂದರೆ ಬೈಗಳು ತಪ್ಪಿದ್ದಲ್ಲ ಹಾಂಗಾಗಿ ಎನ್ನ ತಮ್ಮ ತಂಗೆಯುದೆ ರಜಾ ಜಾಗ್ರತೆಲಿರ್ತವು..
  ದೇವಸ್ಥಾನಕ್ಕೆ ಹೋಪಾಗ ನಮ್ಮ ಮೊಬೈಲು ರಿಂಗಾದ್ದು ನಾವಗೆ ಮಾತ್ರ ಗೊಂತಾದರೆ ಸಾಕು.. ನಿಂಗಳ ಮಾತು ನಿಜ.. ಕೆಲವರಿಂಗೆ ಇನ್ನೊಬ್ರಿಂಗೆ ಗೊಂತಾಗಲ್ಲಿ ಹೇಳ್ತ ಧಿಮಾಕು, ಕೆಲವರಿಂಗೆ ಸೈಲೆಂಟು ಮಾಡ್ಲೆ ಅರಡಿಯದ್ದ ಅಜ್ಞಾನ, ಒಟ್ಟಾರೆ ದೇವಸ್ಥಾನದೊಳಂದ ದೇವರೇ ಪರಾರಿಯಪ್ಪಷ್ಟು ಈ ಕರ್ಣಪಿಶಾಚಿಯ ಉಪದ್ರ ಇರ್ತು.. ಸುಬ್ರಹ್ಮಣ್ಯಲ್ಲಿ ಮೊಬೈಲ್- ಜಾಮರ್ಸ್ ಉಪಯೋಗ್ಸುತ್ತವು.. ಸಿಗ್ನಲಿದ್ದರನ್ನೆ ರಿಂಗಪ್ಪದು ಹೇಳಿ.. ಈಗ ಸುಮಾರು ದಿಕ್ಕೆ ಇದೇ ತಂತ್ರಜ್ಞಾನ ಉಪಯೋಗ ಆವ್ತು..

  [Reply]

  VN:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ಸರಿಯಾದ ಮಾತನ್ನೆ ಹೇಳಿದಿರಿ ಬಾವಾ ..ಈಗಳೂ ಹಳ್ಳಿಲಿ ಹೆಚ್ಹಿನ ಮನೆಗಳಲ್ಲಿ ಈ ಆಚರಣೆ ಇದ್ದು ಆದರೆ ಮೂರ್ಖ ಪೆಟ್ಟಿಗೆ ಪ್ರಭಾವಂದ ಆಚಾರಂಗ ಕಮ್ಮಿ ಆವುತ್ತಾ ಇದ್ದು..

  [Reply]

  VN:F [1.9.22_1171]
  Rating: 0 (from 0 votes)
 4. ಒಪ್ಪಕುಂಞಿ
  ಒಪ್ಪಕುಂಞಿ

  ಚೆನ್ನೈ ಮಾವ! ಲೇಖನ ಚೆಂದ ಆಯ್ದು. ಮೊನ್ನೆ ಒಂದು ಉಪ್ನಾನಲ್ಲಿ ಎನಗೆ ಒಬ್ಬರು ಎಶ್ಟು ಅಶನ ಬಡ್ಸಿದವು ಹೇಳಿರೆ ನಾಕು ದಿನ ಉಂಡರೂ ಮುಗಿಯ. ಎನ್ನ ಬೋಸ ಮಾವ, ಅಜ್ಜಕಾನ ಮಾವನ ಹಾಂಗೆ ಹೇಳಿ ಗ್ರೇಶಿದ್ದವೋ ಏನೋ! ತಿಂಬಲೆಡಿಯದ್ದೆ ಮತ್ತೆ ಬೇಜಾರಲ್ಲಿ ಇಡ್ಕಿದ್ದು. ಅಮ್ಮಂದೆ ನಾಕು ಪರಂಚಿತ್ತು ಬಡ್ಸಿದೋನಿಂಗೆ. :(

  [Reply]

  VN:F [1.9.22_1171]
  Rating: +1 (from 1 vote)
 5. ವಿವೇಕ ಮುಳಿಯ

  ಭಾವ..

  ಈಗ ಜನ ಹೇ೦ಗೆ ಆಯ್ದೊವು ಹೇಳಿರೆ, ಉದಿಯಪ್ಪಗ ಮಿ೦ದು ಬ೦ದು “ಆಸ್ತಾ”ವೋ ಮತ್ತೊ೦ದೋ ಹೇಳಿ ಚಾನೆಲ್ ಎದುರು ಬ೦ದು ಶಬ್ದ ಮಾಡದ್ದೆ ಬ೦ದು ಕೂರ್ತಾ ಇದ್ದೊವು, ಅಲ್ಲೆ ಜಪ ತಪ.
  //ಜೆವ್ವನಿಗರ ಎಂಗಳ ಲೊಟ್ಟೆ ಪಟ್ಟಾಂಗ ಇಸ್ಪೀಟು ಆಟ….- ಇದಕ್ಕೆ ಬೇರೆ ಚಾನೆಲ್ಗೊ ಇದ್ದು :( ಐಪಿಎಲ್ ಬೇರೆ ಇದ್ದು ಬೆಟ್ಟಿ೦ಗಿ೦ಗೆ :(

  ಈಗಾಣ ಧಾರಾವಾಹಿಗಳ ಜನ೦ಗೊ ಶಬ್ದ ಇಲ್ಲದ್ದೆ ನೋಡ್ತೊವು. ನಾವೇನಾರೂ ಎಡಕ್ಕಿಲಿ ಬಾಯ್ಹಾಕಿರೆ, ಬೊಬ್ಬೆ ಕೇಳುಗು… ಅಥವಾ ಕೆಲವು ಸರ್ತಿ ಅದೂ ಇರ್ತಿಲ್ಲೆ.
  “ಗೆಜ್ಜೆ ಪೂಜೆ”, “ಸಾವಿತ್ರಿ”,”ಸೂರ್ಯಕಾ೦ತಿ”,”ಕುಲ ಗೌರವ”,…..”ಬದುಕು….ಜಟಕಾಬ೦ಡಿ”! ಹೀ೦ಗಾಯ್ದು..

  ಲೈಟು ಪೇನು ಆಫ್ ಆದರೂ ಬಡಪೆಟ್ಟಿಗೆ ಆ ಮೂರ್ಖರ ಪೆಟ್ಟಿಗೆ ಅ೦ತೂ ಆಫ್ ಆಗ :( ಆಯೆಕ್ಕಾರೆ ಕೇ.ಇ.ಬಿ.ಯವ್ವು ದಯೆ ಮಾಡೆಕ್ಕಷ್ಟೆ!

  ಏನೆ ಇರಳಿ ನಿ೦ಗಳ ಚಿ೦ತನೆಗೊ ಯಾವಾಗ್ಲೂ ಒಳ್ಳೆದಿರ್ತು. ಈ ಚಿ೦ತನೆ ಕೆಲವರದ್ದಾದರೂ ಕಣ್ಣು ತೆರೆಸಲಿ ಹೇಳಿ ಒಪ್ಪ ಹಾಕುತ್ತೆ. :)

  ಪ್ರೀತಿ ಇರಳಿ,
  ವಿವೇಕ ಮುಳಿಯ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಜಯಶ್ರೀ ನೀರಮೂಲೆಪುತ್ತೂರುಬಾವಅಕ್ಷರ°ವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣದೇವಸ್ಯ ಮಾಣಿಚೂರಿಬೈಲು ದೀಪಕ್ಕದೀಪಿಕಾವೇಣಿಯಕ್ಕ°ಕಾವಿನಮೂಲೆ ಮಾಣಿಹಳೆಮನೆ ಅಣ್ಣಚುಬ್ಬಣ್ಣಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಸುಭಗಮುಳಿಯ ಭಾವಡೈಮಂಡು ಭಾವಶಾ...ರೀಕಜೆವಸಂತ°ಸಂಪಾದಕ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ