ನವರಾತ್ರಿಯ ನವವಿಧ ಪೂಜೆ

October 18, 2012 ರ 7:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮತ್ತೆ ಬಯಿಂದು ಮಹಾನವರಾತ್ರಿ.
ಆಶ್ವಿಜಶುದ್ಧ ಪ್ರತಿಪದೆ ದಿನಂದ ನವಮಿವರೆಗೆ ಒಂಭತ್ತು ದಿನ ದುರ್ಗೆಯ ನವರೂಪಲ್ಲಿ ಪೂಜೆಮಾಡುತ್ತವು.
ನವರಾತ್ರಿಗೆ ನಮ್ಮಲ್ಲಿ ಮಾರ್ಣೆಮಿ ಹೇಳುತ್ತವು. ದೇವಿಯ ಶಕ್ತಿ ರೂಪಕ್ಕೆ ಪೂಜೆ ಮಾಡುವದು ಭಾರೀ ಗೌಜಿ.
ಮಹಾಲಯ ಅಮವಾಸೆಯ ಮರದಿನ ಪಾಡ್ಯದ೦ದು ಸುರುವಾಗಿ ಕ್ರಮಪ್ರಕಾರ

 1. ಯೋಗನಿದ್ರಾ ದುರ್ಗಾ,
 2. ದೇವಮಾತಾದುರ್ಗಾ,
 3. ಮಹಿಷಮರ್ದಿನೀದುರ್ಗಾ,
 4. ಶೈಲಜಾದುರ್ಗಾ,
 5. ದೂಮ್ರದುರ್ಗಾ,
 6. ಚ೦ಡ-ಮು೦ಡದುರ್ಗಾ,
 7. ರಕ್ತಬೀಜದುರ್ಗಾ,
 8. ನಿಶು೦ಭದುರ್ಗಾ,
 9. ಅಕೇರಿಗೆ ನವಮಿದಿನ ಶು೦ಭದುರ್ಗಾ
  – ಹೀ೦ಗೆ ಅರ್ಚಿಸಿ ಪೂಜೆಮಾಡುತ್ತವು.

ನವರಾತ್ರಿ ಸುರುವಾಣ ದಿನ ಶರದ್ರುತು ಸುರುವಾವುತ್ತ ಕಾರಣ ಶರನ್ನವರಾತ್ರಿ ಹೇಳಿ ಲೋಕಪ್ರಸಿದ್ಧ ಒಂಭತ್ತು ದಿನಂಗಳಲ್ಲಿ ದೇವಿಯ ಶಾಂತ ಹಾ೦ಗೂ ಉಗ್ರ ಸ್ವರೂಪವ ಸ೦ಕಲ್ಪಿಸಿ ಪೂಜೆ ಮಾಡುವದಾದರೂ ವಿದ್ಯಾದೇವಿಯ ಉಪಾಸನಗೆ ಪ್ರಾಮುಖ್ಯತೆ ಎಲ್ಲಾ ಸಂಪತ್ತಿಂದಲೂ ವಿದ್ಯಾ ಸಂಪತ್ತು ಮುಖ್ಯವಾದದ್ದು.
ಅದಕ್ಕಾಗಿಯೇ ವಿದ್ಯಾವಿಹೀನಃ ಪಶುಃ ಹೇಳಿದ್ದವು ಪ್ರಾಜ್ಞರು. ಲಕ್ಷ್ಮಿಸಂಪಾದನೆಗೆ ನೂರಾರು ಮೋರೆಯಾದರೆ ಸರಸ್ವತಿಗೆ ನೇರವಾದ ಒಂದೇ ಮೋರೆ.
ಲಕ್ಷ್ಮಿಯ ಯಾವ ಮಾರ್ಗಂದಾದರೂ ಗಳಿಸಿಕೊಂಬಲಕ್ಕು, ಸರಸ್ವತಿ ಸನ್ಮಾರ್ಗಕ್ಕೆ ಒಲಿವ ದೇವಿ. ಸರಸ್ವತಿ ಒಂದರಿ ಒಲುದರೆ ಮತ್ತೆ ಕದಲುವ ಪ್ರಶ್ನೆಯೇ ಇಲ್ಲೆ.
ಸರಸ್ವತಿ ದಾನ ಮಾಡಿದಷ್ಟೂ ವೃದ್ಧಿಯಪ್ಪೋಳು. ಲಕ್ಷ್ಮಿ ಕೊಟ್ಟಷ್ಟೂ ಕರಗುವೋಳು. ಹಾಂಗಾಗಿ ವಿದ್ಯಾಸಂಪತ್ತು ಧನಸಂಪತ್ತಿಂದ ದೊಡ್ಡದು. ಒಬ್ಬ° ಪೈಸೆಲಿ ಎಷ್ಟೇ ದಾರಿದ್ರ್ಯದವ° ಆದರೂ ವಿದ್ಯಾಸಂಪನ್ನನಾದರೆ ಅವಂಗೆ ಗೌರವ ಆದರಂಗ ತಾನಾಗಿ ಬತ್ತು.
ಪ್ರಯತ್ನಶೀಲ ಗುರಿ ಸಾಧಿಸುವ ಗಟ್ಟಿ ಮನಸ್ಸಿನ ವಿದ್ಯಾರ್ಥಿಗೆ ಸರಸ್ವತಿ ಒಲಿಯದ್ದೇ ಇರ.

ಸಾಹಿತ್ಯಸರಸ್ವತಿ ವಿಶಾಲವಾಗಿ ಕೊಂಬೆ ರೆಂಬೆ ಎಲೆ ಹೂ ಹಣ್ಣುಗಳಿಂದ ಅಲಂಕೃತಗೊಂಡು ವಿಚಾರವಿಮರ್ಶೆ ತಿಳುವಳಿಕೆ ಸದ್ಗುಣಗಳೆಲ್ಲ ಸರಸ್ವತೀ ದೇವಿಯ ಕೃಪೆಯಿಂದಲೇ ಬಪ್ಪದು.
ಗತಿ ಇದ್ದರೆ ಸಾಲ, ಮತಿ ಬೇಕು. ಹೊಟ್ಟೆ ತುಂಬಿಸಿಕೊಂದ ಮೇಲೆ ವಿದ್ಯಾಭ್ಯಾಸದತ್ತ ಗಮನ ಹೋಕು.

ಶಕ್ತಿಯ ದೇವಿಗೆ ಹೋಲುಸುತ್ತವು.
ದೇವಿಯ ಅಷ್ಟರೂಂಪಂಗೊ:

 1. ಶ್ರೀದೇವಿ,
 2. ಭೂದೇವಿ,
 3. ಸರಸ್ವತಿ,
 4. ಪ್ರೀತಿ,
 5. ಕೀರ್ತಿ,
 6. ಶಾಂತಿ,
 7. ತುಷ್ಟಿ ಹಾಂಗೂ
 8. ಪುಷ್ಟಿ.
  ನಮ್ಮ ಪಾಪ-ಪುಣ್ಯ ಕರ್ಮಕ್ಕನುಸಾರ ಕೊಂಡು ನಡೆಶುಲೆ ಕೈಯ ಬುಡಲ್ಲಿ ಗೌರಿ ಶಕ್ತಿಯುತವಾಗಿ ನೆಲೆಸಿಯಂಡಿದ್ದು.

~

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ।
ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಮ್॥

ಪ್ರತಿಯೊಬ್ಬರೂ ಉದಿಯಪ್ಪಗ ಎದ್ದಿಕ್ಕಿ ಈ ಸ್ತೋತ್ರ ಪಠಿಸುತ್ತಾ ಅಂಗೈಯ ನೋಡ್ಯೊಂಡು ಪರಸ್ಪರ ತಿಕ್ಕಿಯೊಂಡು ಕೈಯ ಕಣ್ಣಿಗೆ ಒತ್ಯೊಂಡು ನಮ್ಮ ದಿನಚರಿ ಪ್ರಾರಂಭಿಸೆಕ್ಕು.
ಇದು ನಮ್ಮ ಹಿರಿಯೋರ ಸಲಹೆ. ನಮ್ಮ ಉನ್ನತಿ ಅವನತಿಗ ಕೈಯೊಳವೇ ಅಡಗಿದ್ದು ಹೇಳಿ ಸನಾತನ ಸಲಹೆ.

ಕರ್ನಾಟಕಲ್ಲಿ ನವರಾತ್ರಿಯ ನಾಡಹಬ್ಬವಾಗಿ ಆಚರಿಸುತ್ತವು. ದಸರಾ, ನವರಾತ್ರಿ, ಶರನ್ನವರಾತ್ರಿ, ಹೀಂಗೆ ಹೇಳ್ಯೋಂಡು ಗೌಜಿ ಮಾಡ್ತವು.
ಮೈಸೂರು ದಸರಾ ಹೇಳಿರೆ ಜಗತ್ಪ್ರಸಿದ್ಧ. ೯ ದಿನಂಗಳಲ್ಲೂ ದುರ್ಗೆಯ ವಿವಿಧ ರೂಪಲ್ಲಿ ಪೂಜಿಸಿ ಅಷ್ಟಮೀ ದಿನ ದುರ್ಗಾಷ್ಟಮೀ ಹೇಳಿಯೂ ನವಮೀ ದಿನ ಆಯುಧ ಪೂಜೆಗೂ ಪ್ರಾಧಾನ್ಯತೆ.
ವಿಜಯದಶಮೀ ದಿನ ಅಕ್ಷರಾಭ್ಯಾಸಕ್ಕೆ ನಾಂದಿ. ಆ ದಿನ ಎಲ್ಲಾ ಶುಭಕಾರ್ಯಕ್ಕೂ ಒಳ್ಳೆ ಮುಹೂರ್ತ.
ಹಿಂದಿನ ರಾಜಂಗ ತಮ್ಮ ಯುದ್ಧಾಯುಧಗಳ ನವಮೀದಿನ ಪೂಜಿಸಿ ವಿಜಯದಶಮೀ ದಿನ ಯುದ್ಧಕ್ಕೆ ಹೋವುತ್ತಿತ್ತವಡ. ಅದರ ಪ್ರತೀಕವಾಗಿ ಇಂದಿಂಗೂ ಆಯುಧ ಪೂಜೆ ಒಳ್ಕೊಂಡು ಬೈಂದು.
ಗ್ರಂಥಂಗಳ, ತಾಳೆಓಲೆಯ, ಪುಸ್ತಕಂಗಳ ಸತ್ಪಮೀ ದಿನ(ಮೂಲಾ ನಕ್ಷತ್ರಕ್ಕೆ) ಪೂಜೆಗೆ ಮಡಗಿರೆ ಮೂರುರಾತ್ರಿ ಪೂಜೆ ಮಾಡಿ ವಿಜಯದಶಮೀ ದಿನ ವಿಶೇಷ ಪೂಜೆ ಮಾಡಿ ಅದರ ಓದಿಕ್ಕಿ ಮಡುಗುವ ಸಂಪ್ರದಾಯ.

ಬ್ರಹ್ಮನ ರಾಣಿಯಾದ ಈ ವಿದ್ಯಾಶಾರದೆಯ ವಾಹನ ನವಿಲು. ಉಗ್ರರೂಪಲ್ಲಿ ಇದು ಸಿಂಹವಾಹಿನಿ. ಎರಡು ಕೈಲಿ ವೀಣೆಯನ್ನೂ ಇನ್ನೊಂದು ಕೈಲಿ ಓಲೆಯನ್ನೂ ಮತ್ತೊಂದರಲ್ಲಿ ಜಪಮಾಲೆಯ ಹಿಡುದು ಶ್ವೇತಪದ್ಮದಲ್ಲಿ ಸರ್ವಾಲಂಕಾರ ಭೂಷಿತೆಯಾಗಿ ಪವಡಿಸಿದ ಶಾರದೆಯ ನೋಡ್ಲೆ ಎರಡು ಕಣ್ಣು ಸಾಲ.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ।
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ॥

~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ವಿಜಯತ್ತೆ

  ಉದುಪುಮೂಲೆ ಅಪ್ಪಚ್ಹಿಗೆ ಶರ್ಮಭಾವ೦ಗೆ ಮತ್ತ ಚೆನ್ನೈಭಾವ೦ಗೆ ಇದರ ಓದಿದ ಬೈಲಿನವಕ್ಕೆಲ್ಲರಿ೦ಗು ತು೦ಬಾ ತು೦ಬಾ ಧನ್ಯವಾದ೦ಗೊ

  [Reply]

  VN:F [1.9.22_1171]
  Rating: 0 (from 0 votes)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಸಕಾಲಿಕ ಬರಹ..

  [Reply]

  VA:F [1.9.22_1171]
  Rating: 0 (from 0 votes)
 3. shyamaraj.d.k

  ಒಳ್ಳೆದಾಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿರಾಜಣ್ಣಪುತ್ತೂರಿನ ಪುಟ್ಟಕ್ಕಪಟಿಕಲ್ಲಪ್ಪಚ್ಚಿಸಂಪಾದಕ°ಕಜೆವಸಂತ°ವಿಜಯತ್ತೆಹಳೆಮನೆ ಅಣ್ಣಶರ್ಮಪ್ಪಚ್ಚಿಮಾಲಕ್ಕ°ದೊಡ್ಡಭಾವಕೇಜಿಮಾವ°ಶ್ರೀಅಕ್ಕ°ಮುಳಿಯ ಭಾವಚೆನ್ನೈ ಬಾವ°ಸುವರ್ಣಿನೀ ಕೊಣಲೆಪೆರ್ಲದಣ್ಣಗಣೇಶ ಮಾವ°ಪುತ್ತೂರುಬಾವಅನಿತಾ ನರೇಶ್, ಮಂಚಿಡಾಗುಟ್ರಕ್ಕ°ಪವನಜಮಾವವಿದ್ವಾನಣ್ಣಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ