ಅಂತರ್ಜಾಲಲ್ಲಿ ಶುದ್ದಿಕೊಡ್ತವರ ಶುದ್ದಿ!

February 8, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರಿಂಗೆಲ್ಲಾ ನಮಸ್ಕಾರ ಇದ್ದು..
ಶುದ್ದಿ ಬರವಾಗ ರಜಾ ತಡವಾತಿದಾ, ಕ್ಷಮೆ ಇರಳಿ!
ಅತ್ಲಾಗಿ ಬಲ್ನಾಡುಮಾಣಿಯ ಶುದ್ದಿಯೇ ಇಲ್ಲೆ ಹೇಳಿ ಬೋಸಭಾವ, ನೆಗೆಭಾವ, ಪೆಂಗಣ್ಣ ಎಲ್ಲಾರು ಗುಸುಗುಸು ಹೇಳಿ ಮಾತಾಡಿಗೊಂಡರೆ,  ಇತ್ಲಾಗಿ ಬೈಲಿಲಿ ವಾರ ವಾರ ಬರೆಕ್ಕಾದ ಹೊಸ ಬೈಲಿನ ಶುದ್ದಿಯ ಬಗ್ಗೆಯೂ ಶುದ್ದಿ ಇಲ್ಲೆನ್ನೆ ಹೇಳಿ ಒಪ್ಪಣ್ಣ, ಶರ್ಮಪ್ಪಚ್ಚಿ, ಶ್ರೀ ಅಕ್ಕ  ಎಲ್ಲೋರು  ಪರಂಚಿದ ಹಾಂಗೆ ಕೇಳಿತ್ತು!
ಎಂತ ಮಾಡುದು, ಪೆಂಗಣ್ಣ ತಲಗೆ ಕೈಮಡುಗಿದ್ದನೋ ಸಂಶಯ, ಮೊನ್ನೆಂನಿತ್ಯ, ಊರು  ಸುತ್ತುತ್ತಾ ಇದ್ದೆ!

ನಮ್ಮ ಬೈಲಿಲಿ ಹೊಸ ಹೊಸ ಶುದ್ದಿಗೊ ಮೇಲಂದ ಮೇಲೆ ಬಪ್ಪಾಗ,  ಹೊಸ ಶುದ್ದಿಗೊ ಬಪ್ಪ ಬೈಲುಗಳ ಬಗ್ಗೆಯೇ ಬರದರೆಂತ ಹೇಳಿ ಕಂಡತ್ತು…
ಈ ಸತ್ತಿ ರಜಾ ಗಡಿಬಿಡಿಲಿ ಶುದ್ದಿ ಬರೆತ್ತಾ ಇದ್ದೆ ಇದಾ, ಹಾಂಗಾಗಿ ಹೊಸಾ ಬೈಲಿನ ಮೂಲೆ ಮೂಲೆ ಗುರ್ತ ಮಾಡ್ಸುಲೆ ಸಮಯಾವಕಾಶ ಇಲ್ಲೆ , ಇರಳಿ, ಈಗ ಕನ್ನಡಲ್ಲಿ ಶುದ್ದಿ ಹೇಳ್ತ ಕೆಲವು ಜಾಲತಾಣಂಗಳ ಹೊಡೆಂಗೆ ಒಂದು ರೌಂಡು ಹೋಪೋ°..

ಹಲವಾರು ದಿನಪತ್ರಿಕೆಲಿ ಬಪ್ಪ ಶುದ್ದಿಗೊ ಒಂದೇ ಜಾಲತಾಣಲ್ಲಿ ಸಿಕ್ಕಿರೆ ಹೇಂಗೆ?
ಸುಮಾನಸ.ಕಾಮ್ ( www.sumanasa.com ) ಹಿಂಗಿಪ್ಪ ಒಂದು ಜಾಲತಾಣ! ಮಾಹಿತಿಯಕ್ತ ಮತ್ತೆ ಸರಳ ವಿನ್ಯಾಸ ಇಪ್ಪ ಜಾಲತಾಣ…

 • ಆಂಗ್ಲಭಾಷೆಲಿ ಅಲ್ಲದ್ದೆ, ಪ್ರಾದೇಶಿಕ ಭಾಷೆಗಳಲ್ಲಿ ಕೂಡ, ಬೇರೆ ಬೇರೆ ದಿನಪತ್ರಿಕೆಗಳಿಂದ ಆಯ್ದ ಶುದ್ದಿಯ ಪ್ರಕಟ ಮಾಡ್ತದು ಈ ಜಾಲತಾಣದ ವೈಶಿಷ್ಠ್ಯ.
 • ಕನ್ನಡ ವಿಭಾಗದ ಸಂಕೋಲೆ ಇಲ್ಲಿದ್ದು:  http://www.sumanasa.com/kannadanews/ .
 • ಕನ್ನಡ ವಿಭಾಗಕ್ಕೆ ಬಂದಪ್ಪದ್ದೆ ಮುಖ್ಯಾಂಶಂಗ ಕಾಣ್ತು.. ಮುಖ್ಯವಾಗಿ ವಾರ್ತಾಭಾರತಿ, ದಟ್ಸ್ ಕನ್ನಡ, ಪ್ರಜಾವಾಣಿ, ಉದಯವಾಣಿ, ವೆಬ್ ದುನಿಯ, ಸಾಹಿಲ್ ಆನ್ ‍ಲೈನ್ ಇತ್ಯಾದಿ ಜಾಲತಾಣಂಗಳ ಮುಖ್ಯವಾರ್ತೆಗೊ ಕಾಣ್ತಾ ಇರ್ತು, ನೀಲಿ ಬಣ್ಣಲ್ಲಿ ವಾರ್ತೆಯ ಒಂದು ಸಾಲಿನ ತೋರ್ಸುತ್ತವು. ನಿಂಗಳ ಆಸಕ್ತಿಯ ಶುದ್ದಿಗೆ ಕ್ಲಿಕ್ಕಿಸಿರೆ, ಆಯಾ ಸುದ್ದಿ  ಏವ ಜಾಲತಾಣಲ್ಲಿದ್ದೋ, ಆ ಶುದ್ದಿ, ಆಯಾ ಜಾಲತಾಣದ ಹೊಸ ಪುಟಲ್ಲಿ (new window/new tab) ಬತ್ತು.ಸುಮಾನಸ ಕನ್ನಡ ವಾರ್ತೆ
 • ಪುನಾ ಸುಮಾನಸ ತಾಣವ ನೋಡೆಕ್ಕಾರೆ, ಶುದ್ದಿಯ ಜಾಲತಾಣವ ಮುಚ್ಚಿ (close), ಕೇಳಾಚಿ ಸಣ್ಣ (minimize) ಆಗಿಪ್ಪ ಸುಮಾನಸದ ಪುಟವ ಕ್ಲಿಕ್ಕಿಸಿರಾತು.  ಮುಖ್ಯಾಂಶಗಳ ಪಟ್ಟಿಯ ಬಲತ್ತಿಂಗೆ ಜಾಹೀರಾತು ಇರ್ತು.
 • ಮುಖ್ಯಾಂಶಗಳ ಪಟ್ಟಿಂದ ರಜಾ ಕೆಳಾ ಬಂದರೆ ವಾರ್ತಾಭಾರತಿ, ದಟ್ಸ್ ಕನ್ನಡ, ಪ್ರಜಾವಾಣಿ, ಉದಯವಾಣಿ, ವೆಬ್ ದುನಿಯ, ಸಾಹಿಲ್ ಆನ್ ‍ಲೈನ್ ಈ ಎಲ್ಲಾ ಜಾಲತಾಣಂಗಳಲ್ಲಿ ಬತ್ತಾ ಇಪ್ಪ ಮುಖ್ಯಾಂಶಗಳ ಪಟ್ಟಿ ಬೇರೆಬೇರೆಯಾಗಿ ತೋರ್ಸುತ್ತವು. ಬೇಕಾದ ವಿಶಯಕ್ಕೆ ಕ್ಲಿಕ್ಕಿಸಿರೆ ಆ ಜಾಲತಾಣಲ್ಲಿಪ್ಪ ಶುದ್ದಿಯ ಪುಟ ಪ್ರತ್ಯಕ್ಷ ಆವ್ತು..

ಈಗ ಈ ಪೇಪರು ಓದೋರು ಕಮ್ಮಿ ಆವ್ತಾ ಇದ್ದವಡ, ಇ-ಪೇಪರು ಓದೋರು ಜಾಸ್ತಿ ಆವ್ತಾ ಇದ್ದವಡ.
ನಾವು ದಿನಾಗ್ಳು ಓದುತ್ತ ಉದಯವಾಣಿಯೋ, ಸುದ್ದಿಬಿಡುಗಡೆಯೋ, ಪ್ರಜಾವಾಣಿಯೋ, ಹೊಸದಿಗಂತವೋ, ಹೆಚ್ಚಿನ ಎಲ್ಲಾ ದಿನಪತ್ರಿಕೆಗೊ ಈಗ ಅಂತರ್ಜಾಲಲ್ಲಿಯುದೆ ಸಿಕ್ಕುತ್ತು ಹೇಳ್ತದು ನಾವಗೆ ಗೊಂತಿಪ್ಪದೇ..
ಕೆಲವರಿಂಗೆ ಅಂತರ್ಜಾಲಲ್ಲಿ ಎಲ್ಲಿ ಸಿಕ್ಕುತ್ತು ಹೇಳಿ ಗೊಂತಿರ, 😉  ಆನು ಹೇಳ್ಲೆ ಹೆರಟದು ಅದನ್ನೇ ಇದಾ!  
ದಿನಪತ್ರಿಕೆಗೊ
ಹೆಚ್ಚಾಗಿ ಅಂತರ್ಜಾಲಲ್ಲಿ ಇ-ಪೇಪರ್ ಹೇಳ್ತ ವ್ಯವಸ್ಥೆಲಿ ಓದ್ಲೆ ಸಿಕ್ಕುತ್ತು..  ನೋಡ್ಲೆ ನಾವು ಓದುತ್ತ ಪ್ರಿಂಟಿನ ಪ್ರತಿಯ ಹಾಂಗೇ ಇರ್ತು, ಆದರೆ ಹಳೇ ಇ-ಪೇಪರಿಲಿ ಕಡ್ಲೆ ಕಟ್ಲಾವುತ್ತಿಲ್ಲೆ, ಅಷ್ಟೇ ವ್ಯತ್ಯಾಸ.. 😉
ಅಲ್ಲದ್ದೆ ಸುಮಾನಸ, ವಾರ್ತಾಭಾರತಿ ಇತ್ಯಾದಿ ಜಾಲತಾಣಂಗಳ ಹಾಂಗೆ ಶುದ್ದಿ ಬತ್ತ ವ್ಯವಸ್ಥೆಯೂ ಇದ್ದು.

ಶುದ್ದಿ ಬಪ್ಪ ತಾಣಂಗಳ ಸಂಕೋಲೆಯ ಇಲ್ಲಿ ನೇಲ್ಸುತ್ತಾ ಇದ್ದೆ..
ಎಲ್ಲಾ ಜಾಲತಾಣಂಗಳುದೆ ಸರಳವಾದ ವಿನ್ಯಾಸಲ್ಲಿದ್ದು, ಬೈಲಿಲಿ ಸುತ್ತುಲೆ ಕಷ್ಟ ಇಲ್ಲೆ ಕಾಣುತ್ತು..  ಎಲ್ಲದರಲ್ಲಿಯೂ ಸಾಕಷ್ಟು ಸಂಕೆಲಿ ಜಾಹಿರಾತುಗೊ ಇಕ್ಕು.. ತಾಣಕ್ಕೆ ಸಂಬಂದ ಇಲ್ಲದ್ದ ಪುಟ ಪ್ರತ್ಯಕ್ಷ ಆದರೆ ಮುಚ್ಚಿ ಬಿಡಿ ಅಷ್ಟೆ..
ವಿವರ ಕೊಡೆಕ್ಕಾತು ಅನ್ಸಿರೆ ಖಂಡಿತಾ ಒಪ್ಪಲ್ಲಿ ತಿಳುಶಿ, ಅಗತ್ಯ ಮಾಹಿತಿ ಕೊಡುವ ಪ್ರಯತ್ನ ಮಾಡ್ತೆ..

ಇ-ಪೇಪರು ಹೊಸಬ್ಬರಿಂಗೆ ರಜಾ ಉಪದ್ರ ಹೇಳಿ ಅನ್ಸಿಬಿಡುಗು..
ಕೆಲವು ಇ ಪೇಪರ್ ಓದುಲೆ Adobe PDF reader ಹೇಳ್ತ ತಂತ್ರಾಂಶ ಬೇಕಾವುತ್ತು..
ನಿಂಗಳತ್ರೆ ಇಲ್ಲದ್ರೆ ಈ ಸಂಕೋಲೆಂದ ಇಳಿಶಿ, ನಿಂಗಳ ಕಂಪ್ಯೂಟರಿಲಿ ಕೂರ್ಸೆಕ್ಕು. ಸಂಕೋಲೆ ಇಲ್ಲಿದ್ದು: ftp://ftp.adobe.com/pub/adobe/reader/win/10.x/10.0.0/en_US/AdbeRdr1000_en_US.exe

ಇ-ಪೇಪರು, ಎಲ್ಲಿದ್ದು!?

 • ಉದಯವಾಣಿ, ಪ್ರಜಾವಾಣಿ, ಹೊಸದಿಗಂತದ ಜಾಲತಾಣಂಗಳಲ್ಲಿ E-paper ಹೇಳ್ತ ಸಂಕೊಲೆ ಇರ್ತು, ಎದುರೆ ಕಾಣ್ತ ಹಾಂಗೆ.
 • ಅದಕ್ಕೆ ಕ್ಲಿಕ್ಕಿಸಿರೆ ಬಪ್ಪ ಪುಟಲ್ಲಿ ಬೇಕಾದ ದಿನದ, ಯಾವ Edition ಬೇಕಾ ಅದರ ನೋಡಲಕ್ಕು, ಮುದ್ರಿತ ಪ್ರತಿಯ ಹಾಂಗೇ ಇರ್ತು.
 • ಓದುದು ಹೇಂಗೆ ಹೇಳುವಂತಾದ್ದು ತಾಣದ ವ್ಯವಸ್ಥೆಯ ಆಧಾರದ ಮೇಲೆ ಇರ್ತು…

ಆದರೆ ಹೆಚ್ಚಿನ ಇ-ಪೇಪರಿನ ವ್ಯವಸ್ಥೆಗೊ ಸರಳವಾಗಿದ್ದು, ಒಂದೆರಡು ಸರ್ತಿ ನೋಡುವದ್ದೆ ಗೊಂತಕ್ಕು. ಗೊಂತಾಗದ್ರೆ ಕೇಳಿಕ್ಕಿ, :) ಬಲ್ನಾಡುಮಾಣಿ ಹೇಳಿಕೊಡುಗು..  ಪ್ರತಿಯೊಂದರ ರೀತಿನೀತಿಯ ಇಲ್ಲಿ ವಿವರ್ಸುದು ಕಷ್ಟ ಮಾತ್ರ ಅಲ್ಲ ಅದು ಗೊಂದಲಕ್ಕೆ ದಾರಿ ಮಾಡುಗು…

ಕೆಲವು ಇ-ಪೇಪರುಗೊ ಸಿಕ್ಕುತ್ತ ಸಂಕೋಲೆಗಳ ನೇಲ್ಸುತ್ತಾ ಇದ್ದೆ..  ಹುಡ್ಕುತ್ತ ಕೆಲಸ ಒಳಿಶುವಾ ಹೇಳಿ:

ಶುದ್ದಿ ಹೇಳುತ್ತ ವೆಬ್ ಸೈಟುಗೊ ಲೆಕ್ಕಕ್ಕೆ ಸಿಕ್ಕದ್ದಷ್ಟಿದ್ದು. ಕನ್ನಡದ ತಾಣಂಗೊ ಕಮ್ಮಿ ಆದರುದೆ, ಸಾಕಷ್ಟು ಸಂಕೆಲಿದ್ದು. ಕೆಲವು ಜಾಲತಾಣಂಗಳ ಕನ್ನಡದ ಗುಣಮಟ್ಟದ ಬಗ್ಗೆ ಎನಗೆ ಅಸಮಾಧಾನವೂ ಇದ್ದು, ಎಂತ ಮಾಡುದು, ಕೆಲವರಿಂಗೆ ನಮ್ಮ ಭಾಷೆಯ ಸರಿಯಾಗಿ ಕಲಿತ್ತಷ್ಟು ಪುರುಸೊತ್ತಿಲ್ಲೆ, ಇನ್ನು ಕೆಲವರಿಂಗೆ ಅರಡಿತ್ತಿಲ್ಲೆ, ಮತ್ತೆ ಕೆಲವರಿಂಗೆ ಆಸಕ್ತಿ ಇಲ್ಲೆ, ಒಟ್ಟಾರೆ ಮೇಲೆ, ಕೆಲವು ದಿಕ್ಕೆ ಕನ್ನಡ ಬಿಟ್ಟು ಕಂಗ್ಲೀಷೇ ಬತ್ತು. :( ನಮ್ಮ ಸಂಸ್ಕೃತಿಯ ಒಳಿಶುಲೆ ನಾವೇ ಆಯೆಕ್ಕಷ್ಟೆ ಅಲ್ಲದಾ?  ಆಸಕ್ತಿ ಇದ್ದರೆ, ಭಾಷೆಯ ಕೊಲ್ಲದ್ದೆ ಬರವದು ಕಷ್ಟ ಅಲ್ಲ ಕಾಣ್ತು..

ಇರಳಿ, ಆಂಗ್ಲ ಭಾಷೆಲಿಪ್ಪ ಜಾಲತಾಣಂಗಳ ಬಗ್ಗೆ ಬಪ್ಪ ವಾರ ಮಾತಾಡುವೋ °.. ಆನು ಹೀಂಗೆ ಉದ್ದಕ್ಕೆ ಹೇಳಿಗೊಂಡು ಹೋದಪ್ಪದ್ದೆ ಆ ಬೋಸಭಾವ ಒರಕ್ಕು ತೂಗುತ್ತ °! ಮತ್ತೆ ಪ್ರಶ್ನೆ ಕೇಳ್ತ °, ಎನಗೆ ಅವನ ಪ್ರಶ್ನೆ ಅರ್ತಮಾಡಿಗೊಳೆಕ್ಕಾರೆ ಪ್ರಾಣಕ್ಕೆ ಬತ್ತು! ಉತ್ತರ್ಸುದು ದೂರದ ಮಾತು! 😉 ನಿಂಗೊಗುದೆ ರಜಾ ಹಾಂಗೇ ಆತೋ ಏನೋ, ರಜಾ ಗಡಿಬಿಡಿಲಿ ಶುದ್ದಿತಾಣಂಗಳ ಪರಿಚಯ ಮಾಡಿದ್ದೆ,,  ಹೆಚ್ಚು ಮಾಹಿತಿ ಬೇಕಾರೆ ಇಲ್ಲೆ ಕೆಳ ಒಪ್ಪಲ್ಲಿ ಹೇಳಿಕ್ಕಿ ಆತೋ? ಏ °? ಹಾಂಗೆ ಏವದಾದರೂ ಒಳ್ಳೆ ಜಾಲತಾಣದ ಪರಿಚಯ ಬಿಟ್ಟು ಹೋಗಿದ್ದರೆ ತಿಳಿಶಿಕೊಡಿ!

ಸಧ್ಯಲ್ಲೇ ಮತ್ತೆ ಕಾಂಬ!

ಹರೇರಾಮ!

~

ಬಲ್ನಾಡುಮಾಣಿ

~~

ಸೂ: ಪಟಂಗ ಅಂತರ್ಜಾಲಭಾವನ ಕೃಪೆಂದ ಸಿಕ್ಕಿದ್ದು.  :)

ಅಂತರ್ಜಾಲಲ್ಲಿ ಶುದ್ದಿಕೊಡ್ತವರ ಶುದ್ದಿ!, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಉ ದಯವಾಣಿ ನಡು ಇರುಳು ೧೨ಃ೩೦ ಅಂದಾಜಿಗೆ ಬತ್ತು. ನಾಳೆಣ ಪತ್ರಿಕೆ ನಡು ಇರುಳೆ ಒದ್ಲಾವ್ತು.
  ವಿ ಕ ಬಪ್ಪಗ ಉದೆಕಾಲ ೬-೭ಘಂಟೆ ಕಳಿತ್ತು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹಾ೦ಗಲ್ಲದೊ°,ಉದಯವಾಣಿ ಮಹಿಷಾಸುರ ಬಪ್ಪದರ ಮದಲೇ ಬತ್ತು,ವಿ.ಕ.ಬಪ್ಪಗ ರಕ್ತಬೀಗಜನ ವಧೆ ಆವುತ್ತು ಹೇಳಿರೆ ಸರೀ ಗೊ೦ತಾವುತ್ತು ಅಲ್ಲದೋ?

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  ಹ ಹ ಹ ಹಾ …..

  [Reply]

  VN:F [1.9.22_1171]
  Rating: 0 (from 0 votes)
 2. ಮೋಹನಣ್ಣ

  ಬೋಸ ಭಾವ೦ಗೂ ತಲೆ ಬೆಶಿಗೂ ಆಗಿ ಬಾರಾನೆ.ಆ ದೊದ್ದ ಮುಳಿ ಹುಲ್ಲ್ಲಿನೆಡಕ್ಕಿಲ್ಲಿ ತಲೆ ಕಾ೦ಬದೇ ಹೆಚ್ಹು ಇನ್ನು ಅದರೆಡಕ್ಕಿಲ್ಲಿ ಬೆಶಿಗೆ ಜಾಗೆಯೇ ಇಲ್ಲೆ.ಅವ೦ ಪೇಪರು ಪುಟ ಹೇ೦ಗಾರು ರಘುಭಾವನತ್ರೊ ಶರ್ಮಪ್ಪಚಿಯತ್ರೊ ಕಲ್ತೊ೦ಗು.ನಿ೦ಗೊ ಕೂಲಾಗಿರಿ.ಒಪ್ಪ೦ಗಳೊಟ್ಟಿ೦ಗೆ.

  [Reply]

  VN:F [1.9.22_1171]
  Rating: 0 (from 0 votes)
 3. Sneha Kanchan

  Dear Sir / Madam,

  This is to inform you that our website thatskannada.oneindia.in
  has been listed on your site (http://oppanna.com/lekhana/news-sites-kannada) in Kannada Portals section
  and it has been changed to kannada.oneindia.in

  So, kindly update the same in your website.

  Looking forward for your positive response.

  Thanks & regards,
  Sneha Kanchan
  SEO Analyst

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಪುತ್ತೂರುಬಾವಅನಿತಾ ನರೇಶ್, ಮಂಚಿರಾಜಣ್ಣಶರ್ಮಪ್ಪಚ್ಚಿದೀಪಿಕಾದೊಡ್ಮನೆ ಭಾವನೆಗೆಗಾರ°ದೊಡ್ಡಭಾವವೇಣೂರಣ್ಣಚೂರಿಬೈಲು ದೀಪಕ್ಕಶುದ್ದಿಕ್ಕಾರ°ಶಾಂತತ್ತೆಕೆದೂರು ಡಾಕ್ಟ್ರುಬಾವ°ಶಾ...ರೀವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುಬಟ್ಟಮಾವ°ಎರುಂಬು ಅಪ್ಪಚ್ಚಿಅನು ಉಡುಪುಮೂಲೆಕೇಜಿಮಾವ°ಪೆರ್ಲದಣ್ಣಜಯಶ್ರೀ ನೀರಮೂಲೆಪವನಜಮಾವಗೋಪಾಲಣ್ಣಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ