National Geographic: ಅಂತರ್ಜಾಲಲ್ಲಿ ಜ್ಞಾನದ ಕಣಜ!

ಮೊನ್ನೆ ಹೀಂಗೆ ಬಯಲಿಲಿ ಸುತ್ತಿಗೊಂಡಿಪ್ಪಾಗ ನಮ್ಮ ಪೆಂಗಣ್ಣ ಸಿಕ್ಕಿದ°. ಅವ° ಊರು ಸುತ್ತುತ್ತದು, ಆನು ಅಂತರ್ಜಾಲಲ್ಲಿ ಬಯಲಿಂದ ಬಯಲಿಂಗೆ ಸುತ್ತುತ್ತದು! ಒಳ್ಳೆ ಜತೆ ಇದಾ, ಅದೂ ಇದೂ ಮಾತಾಡುವಾಗ ಆನು ಹೇಳಿದೆ, ಇಟೆಲಿಯತ್ಲಾಗಿ ಹೋತಿಕ್ಕೆಡ ಭಾವಾ, Mount Etna ಹೇಳ್ತ ಜ್ವಾಲಾಮುಖಿ ಹೊಟ್ಟುತ್ತಾ ಇದ್ದಡ, ಬೆಶಿ ಜಾಸ್ತಿ ಇಕ್ಕು, ಕೂದಲು ಕರಂಚುಗು ಹೇಳಿ..  ಅವಂಗೆ ಆಶ್ಚರ್ಯ ಆತು! ಈ ಸಂಗತಿ ನಿನಗೇಂಗೆ ಅಶ್ಟು ಪಕ್ಕ ಗೊಂತಾದಿಕಿದ್ದು ಹೇಳಿ ಕಾಲೆಳದ°. ಏನಿಲ್ಲೆ,  ಭೂಮಿಯ ಆಗುಹೋಗುಗಳ ಬಗ್ಗೆ, ವಿಜ್ಞಾನ-ತಂತ್ರಜ್ಞಾನ, ಛಾಯಾಗ್ರಹಣ ಇತ್ಯಾದಿಗಳ ಬಗ್ಗೆ ಎಲ್ಲ ಬೇಕಾದಷ್ಟು ಮಾಹಿತಿ ಕೊಡ್ತ ಒಂದು ಬೈಲಿದ್ದು ಅಂತರ್ಜಾಲಲ್ಲಿ ಹೇಳಿ ಹೇಳಿದೆ..  ನೀ ಒಂದು ಜೆನವ! ನಮ್ಮ ಬೈಲಿಂಗೆ ಹೇಳುದಲ್ಲದ ಇದರ ಬಗ್ಗೆ ಹೇಳಿ ಪರಂಚಿದ°! ಓ, ಅಪ್ಪನ್ನೇ, ಹೇಳಿ ಕಂಡತ್ತು..

National Geographic Channel ಹೇಳ್ತ ಒಂದು ಟೀವಿ ಚಾನಲಿನ ಹೆಸರು ಕೇಳದ್ದೋರು ಕಮ್ಮಿ ಇಕ್ಕು ಬೌಷ..
ಪ್ರಕೃತಿ-ವನ್ಯಜೀವಿ-ವಿಜ್ಞಾನ-ತಂತ್ರಜ್ಞಾನ-ಛಾಯಾಗ್ರಹಣ-ಸಾಹಸ-ಚಲನಚಿತ್ರ-ಸಂಗೀತ ಹೀಂಗೆ ಲೆಕ್ಕಕ್ಕೆ ಸಿಕ್ಕದ್ದಷ್ಟು ವಿಷಯಂಗಳ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡ್ತ ಈ ಚಾನಲಿನ ಅಂತರ್ಜಾಲದ ಅವತಾರ ಈ ನೇಷನಲ್ ಜಿಯೋಗ್ರಾಫಿಕ್.ಕಾಮ್ ಅಥವಾ www.nationalgeographic.com ಹೇಳುವ ಜ್ಞಾನದ ಕಣಜ. ಕಣಜ ಎಂತಕೆ ಹೇಳಿರೆ, ಇದರಲ್ಲಿಪ್ಪ ವಿಷಯಂಗಳ ಎಲ್ಲ ಹೇಳುಲೆ ಹೆರಟರೆ, ಬರಕ್ಕೊಂಡೇ ಕೂರೆಕ್ಕಷ್ಟೆ.. ಮುಗಿಯ, ಬೋಸ ಬಾವಂಗೆ ತಲೆ ತಿರುಗ್ಗು. ಮತ್ತೆ ಎನ್ನ ತಲೆ ತಿಂಗು.. ಹುಡ್ಕಿದಷ್ಟು ಹೊಸ ವಿಷಯ ಸಿಕ್ಕುಗು, ಹೊಸ ಹೊಸ ಪಟಂಗ ಸಿಕ್ಕುಗು. ಪ್ರಾಣಿಗ, ಪಕ್ಷಿಗ, ಭೂಮಿ, ಸೌರಮಂಡಲ,  ಗ್ರಹಂಗೋ, ಇತಿಹಾಸ, ವಿಜ್ಞಾನ ವಿಸ್ಮಯಂಗೋ, ಸಸ್ಯಂಗೋ, ಆಕಾಶಕಾಯಂಗೋ, ಖಗೋಳಶಾಸ್ತ್ರದ ವಿಷಯಂಗೋ!!  ಎಂತಿಲ್ಲೆ ಎಂತಿದ್ದು ಹೇಳುದು ಕಷ್ಟವೇ!

ಈ ಜಾಲತಾಣಲ್ಲಿ ಸುತ್ತುಲೆ ಕಷ್ಟ ಇಲ್ಲೆ, ಸರಳವಾದ ವಿನ್ಯಾಸ ಇದ್ದು. ಜಾಲತಾಣದ ಮಾಹಿತಿಯ ಪಡಕ್ಕೊಂಬ ಬಗ್ಗೆ ಹಂತಹಂತದ ಮಾಹಿತಿ ಅಗತ್ಯ ಇಲ್ಲೆ ಕಾಣ್ತು..  ಮೇಲಂದ ಮೇಲೆ ಒಂದು ರೌಂಡು ಹೋಪೋ° ಆಗದೋ!

www.nationalgeographic.com ಹೇಳಿ ಟೈಪಿಸಿಯಪ್ಪದ್ದೆ ಸುರುವಿಂಗೆ ಕಾಂಬದು ಮೋಡಿ ಮಾಡುವ ವಿನ್ಯಾಸ. “ವಾಹ್!” ಹೇಳಿ ಅನ್ಸುವ ಪಟಂಗೋ! ಬೂದು ಬಣ್ಣದ ಅಕ್ಷರಂಗಳಲ್ಲಿಪ್ಪ ಜಾಲತಾಣದ  ಬೇರೆ ಬೇರೆ ಪುಟ ಮತ್ತೆ ಅದರ ಒಳಪುಟ, ಅಂಕಣಂಗಳ ನೋಡುಲೆ ಬೇಕಾದ ಸಂಕೋಲೆಗಳ ಪಟ್ಟಿ..

ಮುಖಪುಟ

NGC ಮುಖಪುಟ

(ಸೂಚನೆ: ಯಾವುದೇ ಜಾಹಿರಾತುಗಳ ಹಿಂದೆ ಹೋಗೆಡಿ, ಈ ಜಾಲತಾಣಲ್ಲಿ ಜಾಹಿರಾತುಗೊ ಅಲ್ಲಲ್ಲಿ ಇಕ್ಕು.. ಜಾಗೆ ಬದಲ್ತಾ ಇರ್ತು..)

 • ಸಂಕೋಲೆಪಟ್ಟಿಯ (MENU) ಕೆಳಾಚಿ ಆ ದಿನದ ವಿಶೇಷ ಸಂಗತಿಗಳ ಮುನ್ನೋಟ ಬಂದುಗೊಂಡಿರ್ತು. (ಆಯಾ ವಿಷಯದ ಮೇಲೆ ಕ್ಲಿಕ್ಕಿಸಿರೆ ಅದರ ವಿವರದ ಪುಟ ಬತ್ತು)
 • Menuವಿನ ಕೆಳ ಆಯಾ ಪುಟದ ಒಳಪುಟಂಗಳ ಸಂಕೋಲೆಗೋ ಹಳದಿ, ನೀಲಿ, ಕಪ್ಪು ಹೀಂಗೆ ಬೇರೆ ಬೇರೆ ಬಣ್ಣಲ್ಲಿ ಬತ್ತು, ನಿಂಗಳ ಆಸಕ್ತಿಯ ಪುಟದ ಸಂಕೋಲೆಗೆ ಕ್ಲಿಕ್ಕಿಸಿ ಮುಂದರಿದರಾತು..
 • ಬಲದ ಹೊಡೆಲಿ ಆ ದಿನದ Photo of the day ಹೇಳಿ ಒಂದು ಆ ದಿನದ ಅತ್ತ್ಯುತ್ತಮ ಪಟವ ಹಾಕುತ್ತವು, (ಅಲ್ಲಿ ಕ್ಲಿಕ್ಕಿಸಿರೆ ಪಟವ ದೊಡ್ಡಕ್ಕೆ ನೋಡ್ಲಕ್ಕು, ಅಲ್ಲದ್ದೆ ಹಿಂದಾಣ ದಿನಗಳಲ್ಲಿ ಆಯ್ಕೆಯಾದ ಪಟಂಗಳನ್ನೂ ನೋಡ್ಲಕ್ಕು.)
 • ಮುನ್ನೋಟದ ಕೆಳಾಚಿ ಆ ದಿನದ ವಿಶೇಷ ಸುದ್ದಿಗೊ, ಆ ದಿನ ಟೀವಿಲಿ ಬಪ್ಪ ಕಾರ್ಯಕ್ರಮಂಗಳ ಬಗ್ಗೆಯೂ ಮಾಹಿತಿ ಇರ್ತು. (ಟೀವಿಲಿ ಒಂದು ಕಾರ್ಯಕ್ರಮ ನೋಡ್ಲೆ ಬಿಟ್ಟು ಹೋದರೆ ಇದರ್ಲಿ ಅದರ ನೋಡಲಕ್ಕು..)
 • ಈ ವೆಬ್ ಸೈಟಿಲಿ ಅವರ ಪತ್ರಿಕೆಗೆ (National Geographic Magazine) ಚಂದಾದಾರರಪ್ಪಲೂ ಅವಕಾಶ ಇದ್ದು.  ಮೇಗಾಣ ಹೊಡೆಲಿ ಬಲದ ಮೂಲೆಲಿಪ್ಪ Subscribe ಹೇಳ್ತ ಸಂಕೋಲೆ ಇದ್ದು, ಕ್ರೆಡಿಟ್ ಕಾರ್ಡಿದ್ದರೆ ನಿಂಗಳ ವಿವರ ಕೊಟ್ಟು, ಚಂದಾದರರಪ್ಪಲಕ್ಕು. ನಿಂಗ ಅಂತರ್ಜಾಲಕ್ಕೆ ಹೊಸಬ್ಬರಾದರೆ ಗೊಂತಿಪ್ಪೋರ ಸಹಾಯ ತೆಕ್ಕೊಂಬದು ಒಳ್ಳೆದು.
 • ಹಳದಿ ಬಣ್ಣದ ಸಂಕೋಲೆಪಟ್ಟಿಯ ಬಲದ ಕೊನೇಲಿಪ್ಪ Newsletter ಹೇಳ್ತ ಸಂಕೋಲೆಗೆ ಹೋಗಿ,  ಅಲ್ಲಿ ನಿಂಗಳ ಹೆಸರು, ಮಿಂಚಂಚೆ, ಇತ್ಯಾದಿ ವಿವರಂಗಳ ಹಾಕಿರೆ, ಹೊಸ ಹೊಸ ಶುದ್ದಿಗೋ ನಿಂಗಳ ಮಿಂಚಂಚೆಗೆ ಬತ್ತು..

  NGC ಮುಖಪುಟದ ಮಧ್ಯಭಾಗ

 • ಮಧ್ಯಭಾಗಲ್ಲಿ Editors Picks ಹೇಳಿ ಸಂಪಾದಕರಿಂಗ ಗುರುತಿಸಿದ ವಿಷಯಂಗೊ, ಪಟಂಗಳ ಝಲಕ್ ತೋರ್ಸುತ್ತವು..
 • ಅದರಿಂದಲೇ ಕೆಳ ಈ ಜಾಲತಾಣದ ಮೋರೆಪುಟ, ಟ್ವಿಟ್ಟರಿಲಿ ಆದ ಇತ್ತೀಚೆಗಿನ ಪ್ರತಿಕ್ರಿಯೆ-ಬೆಳವಣಿಗೆಗಳ ವಿಶಯ ಬಂದೊಂಡಿರ್ತು.
 • ಅಲ್ಲೆ ಬಲತ್ತಿಂಗೆ ರಸಪ್ರಶ್ನೆಗೊ ಇಕ್ಕು,, ಉತ್ತರಿಸಿ ನೋಡ್ಲಕ್ಕು..
 • ರಜ ಕೆಳ ಬಂದರೆ ಮಾಸಪತ್ರಿಕೆಲಿ ಬಂದ ವಿಷಯಂಗಳ ಬಗ್ಗೆ ಒಂದೆರಡು ವಾಕ್ಯ ಇರ್ತು.. ಕ್ಲಿಕ್ಕಿಸಿ ಹೆಚ್ಚು ವಿವರ ತಿಳಿವಲಕ್ಕು..
 • ಬ್ಲಾಗಿನ ಇತ್ತೀಚೆಗಿನ ಬರಹಂಗೊಕ್ಕೆ ಸಂಕೋಲೆಗಳೂ ಮೇಲೆ ಹೇಳಿದ ಪತ್ರಿಕೆಯ ವಿಷಯದ ಕೆಳ ಇರ್ತು..

  NGC ಮುಖಪುಟ ಕೊನೇ ಭಾಗ

  NGC ಮುಖಪುಟ ಕೊನೇ ಭಾಗ

 • ಮತ್ತೂ ಕೆಳ ಬಂದರೆ ಜಾಲತಾಣಂದಲೇ ಪುಸ್ತಕ, ಡೀವೀಡಿ, ಸೀಡಿಗಳ ಖರೀದಿ ಮಾಡ್ತ ವ್ಯವಸ್ಥೆಗೆ ಸಂಕೋಲೆ ಕೊಟ್ಟಿದವು..
 • National Geographic ವ್ಯವಸ್ಥೆ ಮಾಡುವ ಚಾರಣಂಗೊ ಇತ್ಯಾದಿ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಬಲೆ ಅವಕಾಶ ಕೇಳಿಗೊಂಬಲಿಪ್ಪ ಸಂಕೋಲೆ ಕೂಡ ಹತ್ತರೆ ಇರ್ತು..
 • ಅದರ ಕೆಳ ಶಾಲೆಗೊಕ್ಕೆ, ಕಲಿಶುತ್ತ ಟೀಚರುಗೊಕ್ಕೆಲ್ಲ ಪ್ರಯೋಜನ ಅಪ್ಪ ವಿಷಯಂಗಳ ಕೊಡ್ತ ಪುಟಕ್ಕೆ ಸಂಕೋಲೆ ಕೊಟ್ಟಿದವು.. ಅದರ ಹತ್ತರೆ ಇತ್ತೀಚೆಗಿನ ಕಾರ್ಯಕ್ರಮಂಗಳ ವಿವರಣೆಯೂ ಬತ್ತು..

ಈ ಜಾಲತಾಣಲ್ಲಿಯೂ ಜಾಹೀರಾತುಗೊ ಸಾಕಷ್ಟು ಸಂಕೆಲಿದ್ದು.  ಅನಗತ್ಯವಾಗಿ ದಾರಿ ತಪ್ಸುತ್ತ ಹೆಚ್ಚಿನ ಸಂಕೋಲೆಗಳೂ ಬಣ್ಣ ಬಣ್ಣದ ಬ್ಯಾನರುಗಳೂ ಇಕ್ಕು, ಕ್ಲಿಕ್ಕಿಸಿರೆ national geographic ಬಯಲಿಂದ ಹೆರ ಹೋಕು, ಕೂಡ್ಲೆ ಅದರ ಬಿಟ್ಟು ಹಿಂದೆ ಬಂದುಬಿಡಿ…

ಎಲ್ಲಾ ಪ್ರಾಯದೋರಿಂಗೂ ಅವರವರ ಆಸಕ್ತಿಯ ವಿಷಯಂಗಳ ಬಗ್ಗೆ ತಿಳ್ಕೊಂಬಲೆ ತುಂಬಾ ಸಹಕಾರಿಯಪ್ಪ ಈ ಜಾಲತಾಣ ವಿದ್ಯಾರ್ಥಿಗೊಕ್ಕುದೆ ತುಂಬಾ ಮಾಹಿತಿ ಕೊಡುಗು, ವಿಶೇಷವಾಗಿ ಜೀವಶಾಸ್ತ್ರಲ್ಲಿ(Biology) ಭೂಗೋಳ (Geography) ಮತ್ತೆ ಖಗೋಳಶಾಸ್ತ್ರಲ್ಲಿ (Astronomy). ಸರಳವಾದ  ವಿನ್ಯಾಸ ಇಪ್ಪ ಕಾರಣ ಇದರ್ಲಿ ಮಾಹಿತಿಯ ಹುಡ್ಕುಲೆ ಕಷ್ಟ ಇಲ್ಲೆ.

ಈ ಜಾಲತಾಣಲ್ಲಿಪ್ಪ ಕೆಲವು ಉಪಯುಕ್ತ ಸಂಕೋಲೆಗಳ ಇಲ್ಲಿ ನೇಲ್ಸುತ್ತಾ ಇದ್ದೆ:

ಇದರ್ಲಿಪ್ಪ ಹೆಚ್ಚಿನ ಪಟಂಗಳ download/save ಮಾಡಿ ಮಡಿಕ್ಕೊಂಬ ಅವಕಾಶ ಕೂಡ ಇದ್ದು.

ಪುರುಸೊತ್ತಿಲಿ ಈ ಜಾಲತಾಣವ ಒಂದರಿ ನೋಡಿಕ್ಕಿ 🙂 , ಕೈಲಿಪ್ಪ ವಾಚು ಬಿಚ್ಚಿ ಎದುರೇ ಮಡಿಕ್ಕೊಳಿ, ಇಲ್ಲದ್ರೆ  ಹೊತ್ತು ಹೋದ್ದೇ ಗೊಂತಾಗ! 😉

ಸಧ್ಯಲ್ಲೇ ಮತ್ತೆ ಕಾಂಬ°, ಹರೇರಾಮ!

ಬಲ್ನಾಡುಮಾಣಿ

ಬಲ್ನಾಡುಮಾಣಿ

   

You may also like...

34 Responses

 1. ಒಳ್ಳೆ ಶುದ್ದಿ ಹೇಳಿದೆ ಬಲ್ನಾಡುಮಾಣಿ!
  ಈ ಬೈಲಿಲಿ ಇಡೀ ವಿಶ್ವದ ಮಾಹಿತಿಗೊ ಸಿಕ್ಕುತ್ತಡ ಅಲ್ಲದೋ? ಬಾರೀ ಕೊಶಿ ಆತು ಅದರ ಕೇಳಿ.

  ಹೇಳಿದಾಂಗೆ, ಇದೇ ಹೆಸರಿನ ಒಂದು ಟೀವಿಚೇನಲು ಇದ್ದಲ್ಲದೋ – ಇವರದ್ದೇಯೋ ಅದು?
  ಮೊನ್ನೆ ತರವಾಡುಮನೆ ಟೀವಿಲಿ ಒಂದು ಕಾರ್ಯಕ್ರಮ ಬಂದುಗೊಂಡಿತ್ತು.
  ಒಂದು ಪುಚ್ಚೆ ಎಲಿ ಹಿಡಿತ್ತದು – ಭಾರೀ ಚೆಂದ ಇತ್ತು.
  ಆದರೆ, ಆ ವಿನುಮಾಣಿ ಕೂಡ್ಳೇ ಚೇನಲು ಬದಲುಸಿ ಕಾರ್ಟೂನು ಹಾಕಿದ – ಒಂದು ಎಲಿ ಪುಚ್ಚೆಯ ಹಿಡಿತ್ತದು! 🙁

  • ಧನ್ಯವಾದಂಗೊ ಒಪ್ಪಣ್ಣೋ,
   ಕಾರ್ಟೂನು ಹೇಳಿದರೆ ಹಾಂಗೆ ಅಲ್ಲದೋ, ಎಲ್ಲವನ್ನೂ ಉಲ್ಟಾವೇ ಹೇಳಿಕೊಡ್ತದು! 😉 ಒಪ್ಪಕುಞಿಯುದೆ ಏವತ್ತೂ ಬರೀ ಕಾರ್ಟೂನೇ ನೋಡ್ತದು, ಹೇಳಿರೆ ಕೇಳ್ತಾ ಇಲ್ಲೆಡ :)!

 2. ವೆಬ್ ಸೈಟು ತುಂಬಾ ಒಪ್ಪ ಇದ್ದು ಬಲ್ನಾಡು ಅಣ್ಣಾ…

 3. ಒಪ್ಪಕುಂಞಿ says:

  ಪಟಂಗ ಚೆಂದ ಇದ್ದು ಆ ಬೈಲಿಲಿ.. ಆನು ನೋಡಿಗೊಂಡೇ ಬಾಕಿ, ಹೋಮ್ ವರ್ಕೆಲ್ಲಾ ಬಾಕಿ ಆಯ್ದೀಗ! ಮಕ್ಕೊಗಿಪ್ಪದೆಲ್ಲಾ ನೋಡಿದೆ, ತುಂಬಾ ಲಾಯ್ಕಿದ್ದು ಬಲ್ನಾಡಣ್ಣೋ,, ಥ್ಯಾಂಕ್ಯು ಆತಾ!

 4. ಸೂರ್ಯ says:

  ಏ ಮಾಣಿ ರಜ್ಜ ಲೇಟಾಗಿ ಬಂದೆ ಆತೋ….
  ಒಳ್ಳೆ ಮಾಹಿತಿ… ಹೀಂಗೆ ಬರಳಿ ವಾರಪ್ರಂತಿ…

  • ಸೂರ್ಯ says:

   ಏ ಮಾಣಿ ರಜ್ಜ ಲೇಟಾಗಿ ಬಂದೆ ಆತೋ….
   ಒಳ್ಳೆ ಮಾಹಿತಿ… ಹೀಂಗೆ ಬರಳಿ ವಾರಪ್ರಂತಿ…ಅಲ್ಲ ವಾರಂಪ್ರತಿ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *