ನೂಪುರ ಭ್ರಮರಿ – ನೃತ್ಯಕ್ಕೊಂದು ದಾರಿ

ನೂಪುರ ಭ್ರಮರಿ ಹೇಳಿ ಒಂದು ಪತ್ರಿಕೆ ಇದ್ದು, ಬೈಲಿನೋರಿಂಗೆ ಗೊಂತಿಕ್ಕು. ಈ ದ್ವೈಮಾಸಿಕ ಪತ್ರಿಕೆ ಮುಖ್ಯವಾಗಿ ಭರತ ನಾಟ್ಯ, ಯಕ್ಷಗಾನ ಮತ್ತಿತರ ಭಾರತೀಯ ನೃತ್ಯ ಕಲೆಗಳ ಬಗ್ಗೆ ಇಪ್ಪಂಥಾದ್ದು. ನಮ್ಮ ಶ್ರಮಂದಾಗಿ website ಮೂಲಕ (www.noopurabhramari.com) ಅಂತರರಾಷ್ಟ್ರೀಯ ಓದುಗರಿಂಗೂ ಮುಟ್ಟುವ ಹಾಂಗಾಯಿದು.

ಸುರೂವಿಂಗೆ xerox ಪ್ರತಿಗಳ ರೂಪಲ್ಲಿ ಸುರುವಾದ ಈ ಪತ್ರಿಕೆ ಕ್ರಮೇಣ ನಿಧಾನಕ್ಕೆ ಬೆಳೆತ್ತಾ ಬೆಳೆತ್ತಾ ಈ 6 ವರ್ಷಂಗಳಲ್ಲಿ ಊಹೆಗೂ ನಿಲುಕದ್ದ ಎತ್ತರಕ್ಕೆ ಏರಿದ್ದು. ಸುರೂವಾಣ ವಾರ್ಷಿಕೋತ್ಸವಲ್ಲಿ ಈ website ‘ಧ್ಯೇಯ’ ಕಂಪೆನಿಂದ ಅನಾವರಣ ಆಗಿತ್ತು. ಪತ್ರಿಕೆ RNI ಲಿ ರಿಜಿಸ್ಟರ್ ಆತು ಎರಡ್ನೇ ವರ್ಷ. ಎರಡು ಸಂಶೋಧನಾ ಪುಸ್ತಕಂಗೊ ಬಿಡುಗಡೆ ಆತು, ನಂತ್ರ ಒಂದು ಪ್ರತಿಷ್ಟಾನ ಸ್ಥಾಪನೆ ಆತು, ಕರ್ನಾಟಕಲ್ಲೇ ಮೊದಲ ಸರ್ತಿ ಕಲಾವಿಮರ್ಷಾ   ಪ್ರಶಸ್ತಿ ಶುರು ಮಾಡಿಯೂ ಆತು. ಅದರ ನಂತ್ರ ಒಂದು ನೃತ್ಯ ಸಂಶೋಧಕರ ಒಕ್ಕೂಟ ಹೇಳಿ ಸುರು ಆತು. ಮೊನ್ನೆ ಕಳುದ ಫೆಬ್ರವರಿಲಿ  ಕರ್ನಾಟಕಲ್ಲೇ ಮೊದಲ ಸರ್ತಿ  ನೃತ್ಯದ ವಿಷಯದಲ್ಲಿ ಒಂದು ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ವಿಚಾರ ಸಂಕಿರಣ ಆಯೋಜನೆ ಆಗಿತ್ತು.

ಶತಾವಧಾನಿ ಗಣೇಶರು, ಡಾ. ಎಚ್. ಎಸ್ ಗೋಪಾಲರಾಯರು, ಡಾ. ಕರುಣಾವಿಜಯೇಂದ್ರ ಇಂಥಾ ಅತಿರಥ ಮಹಾರಥರ ಬಳಗವೇ ನೂಪುರ ಭ್ರಮರಿಗೆ ಹರಿದು ಬಯಿಂದು. ಮಂಟಪ ಉಪಾಧ್ಯಾಯರು,  ಕೊರ್ಗಿ ಉಪಾಧ್ಯಾಯರು, ನಿರುಪಮಾ-ರಾಜೇಂದ್ರ, ಪ್ರಭಾಕರ ಜೋಷಿ,  ಸಿನೆಮಾ ನಟ ಡ್ಯಾನ್ಸರ್ ಶ್ರೀಧರ್… ಹೀಂಗೆ ಗಣ್ಯರೆಲ್ಲಾ ನೂಪುರ ಭ್ರಮರಿಯ ಪ್ರಯತ್ನ, ಕಾರ್ಯಕ್ರಮಗಳ ಲ್ಲಿ ಭಾಗವಹಿಸಿ ಬೆನ್ನು ತಟ್ಟುತ್ತಾ ಇದ್ದವು. ದೇಶ- ವಿದೇಶಂಗಳಿಂದ ಕಲೆಯ ಆಸಕ್ತಿ ಹೊಂದಿದ ಸಂಶೋಧಕರು ಸದಸ್ಯರಾವ್ತಾ ಇದ್ದವು. ಶತಾವಧಾನಿ ಗಣೇಶರೇ ಬಂದು ಮೊದಲ  ವಾರ್ಷಿಕ ಸಭೆಲಿ ಮಾತಾಡಿ ಮಾರ್ಗದರ್ಶನ ಮಾಡಿತ್ತಿದ್ದವು.

ಈಗ ಹೊಸ ವಿಚಾರ ಎಂತರ ಹೇಳಿದರೆ – ನಾಳ್ತು ಆದಿತ್ಯವಾರ ಒಕ್ಕೂಟದ ಸದಸ್ಯರು ಸೇರಿ ಒಂದು ಕಾರ್ಯಕ್ರಮ ಆಯೋಜಿಸಿದ್ದವು. ವಿಕಸನ ಗೋಷ್ಟಿ ಹೇಳಿ. ಇದು ವಾಖ್ಯಾರ್ಥ ಗೋಷ್ಟಿಯ ಸ್ವರೂಪಲ್ಲೇ ಇರ್ತಾಡ. ಹಿಂದಾಣ ಕಾಲಲ್ಲಿ ವಿದ್ವಾಂಸರೆಲ್ಲಾ  ರಾಜರ ಸಭೆಗಳಲ್ಲಿ ತತ್ವಶಾಸ್ತ್ರ, ನೀತಿ, ಇತ್ಯಾದಿ ವಿಶಯಂಗಳಲ್ಲಿ  ಮಾಡಿಗೊಂಡಿತ್ತಿದ್ದವಡ ಇಂತದರ. ಅಂತಹದೊಂದು ಕಾರ್ಯಕ್ರಮ ಸಂಗೀತ- ಡ್ಯಾನ್ಸ್ … ಹೀಂಗೆ ಕಲೆಯ ವಿಷಯಲ್ಲಿಯೂ ಆಯೆಕ್ಕು ಹೇಳುವ ಉದ್ದೇಶಂದ ಮಾಡ್ತಾ ಇದ್ದವು.

ಸುಮ್ಮನೇ ಹೀಂಗೇ ಪುಟ್ಟಕ್ಕನತ್ತರೆ ಮಾತಾಡ್ವಗ ಈ ಎಲ್ಲಾ ವಿಶಯ ಬಂದು ಹೋತು. ನಿಂಗೊಗೆಲ್ಲಾ ಹೇಳಿಕ್ಕುವಾ ಹೇದು ಕಂಡತ್ತು. ಅಷ್ಟೇ….

ಆಚಕರೆ ಮಾಣಿ

   

You may also like...

11 Responses

 1. ಭಾವೋ,
  ಒಳ್ಳೆ ಶುದ್ದಿ 🙂
  ಏವಗ? ಎಲ್ಲಿ? ಹೇಳಿ ಹೇಳದ್ದರೆ ಹೇಂಗೆ?

  • ಆಚಕರೆ ಮಾಣಿ says:

   ಒಪ್ಪಣ್ಣನ ಬೈಲ ಕಾರ್ಯಕ್ರಮದ ಮರದಿನವೇ ಇತ್ತದು, ಬೆಂಗ್ಳೂರಿಲಿ.

 2. ಗೋಪಾಲ ಬೊಳುಂಬು says:

  ಪುಟ್ಟಕ್ಕನ ಗೆಜ್ಜೆ ದನಿಯ ಬಗೆಲಿ ಒಳ್ಳೆ ಶುದ್ದಿ. ಮನ್ನೆ ಬೆಂಗಳೂರಿಂಗೆ ಹೋಪಗ ಪುಟ್ಟಕ್ಕನ ಕಾಂಬಲೆ ಸಿಕ್ಕಿತ್ತು. ಒಂದು ಗಳಿಗೆ ಮಾತಾಡ್ಳು ಆತು. ಅದರ ಸಾಧನೆ ಕಾಂಬಗ ನಿಜವಾಗಿಯೂ ಕೊಶಿ ಆವುತ್ತು. ಅಭಿನಂದನೆಗೊ. ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ. ಗೋಷ್ಟಿಯ ಬಗ್ಗೆ ಬೈಲಿಲ್ಲಿ ಶುದ್ದಿಗೊ ಬರಳಿ.

  ವಿಕಸನ ಗೋಷ್ಟಿ ಇಪ್ಪದು ಒಕ್ಕೂಟದ ಸದಸ್ಯರಿಂಗೆ ಮಾಂತ್ರ ಆಡ. ಹಾಂಗಾಗಿ ಮಂಗ್ಳೂರ ಮಾಣಿಗೆ ಅಲ್ಲಿಗೆ ಹೋಪಲೆ ಎಡಿಯ.

 3. ಬೆಟ್ಟುಕಜೆ ಮಾಣಿ says:

  ಪುಟ್ಟಕ್ಕನ ಸಾಧನೆಗೆ ಶುಭಾಶಯ..

 4. ಆಚಕರೆ ಮಾಣಿ says:

  ಇಲ್ಲಿ ಒಂಚೂರು ವ್ಯತ್ಯಾಸ ಆಯಿದು. ಬರದು ಮಡಗಿದ ಲೇಖನ ಗುರಿಕ್ಕಾರ್ರಿಂಗೆ ತಲುಪ್ಪಿಸುವಗಳೇ ತಡವಾಯಿದು, ಅವು ಅದರ ಕಾಗುಣಿತ ತಪ್ಪಿದ್ದದರ ತಿದ್ದಿ ಬೈಲಿಂಗೆ ತಿಳಿಶುಲಪ್ಪಗ ವಿಕಸನ ಗೋಷ್ಟಿ ಕಳುದ್ದು.

  ಅದು ಇತ್ತದು ಮೊನ್ನೆ ಆಯಿತ್ಯವಾರ. ಒಂದು ಸಣ್ಣ ಹದಿನೈದು ಜೆನ ಸದಸ್ಯರು ಸೇರಿತ್ತಿದ್ದವು…

  ವಾಕ್ಯಾರ್ಥ ಗೋಷ್ಟಿ ಹೇಳಿರೆ – ಒಂದು ವಾಕ್ಯ ಕೊಟ್ಟು ಅದರ ಅರ್ಥ ವಿಶ್ಲೇಷಣೆ, ವಾದ ವಿವಾದ, ಪರ ವಿರೋಧ ಚರ್ಚೆ ಮಾಡಿ ಒಂದು ಸರ್ವ ಸಮ್ಮತವಾದ ವ್ಯಾಖ್ಯಾನವ ತೀರ್ಮಾನ ಮಾಡುದು. ಇಲ್ಲಿ ವಾಕ್ಯ ಹೇಳಿರೆ ಯೇವದಾದರೂ ಉಪನಿಷತ್ತಿಂದಲೋ, ವೇದಂದಲೋ, ತತ್ವ ಶಾಸ್ತ್ರಂದಲೋ ಒಂದು ವಾಕ್ಯವ ತೆಕ್ಕೊಂಡು ಅದರ ವಿಧ ವಿಧ ಅರ್ಥ ಸಾಧ್ಯತೆಗಳ ಚರ್ಚೆ. (ಎನಗೆ ಗೊಂತಿಪ್ಪ ಮಟ್ಟಿಂಗೆ ಈ ವಿವರಣೆ, ಇದಲ್ಲದ್ರೆ ತಿಳುದೋರು ವಿವರ್ಸಿ ಪ್ಲೀಸ್….. )

  ಇಲ್ಲಿ ನಡದ್ದು ವಿಕಸನ ಗೋಷ್ಟಿ ಹೇದು. ರಜಾ ಸಣ್ಣ ಮಟ್ಟಿಂದು. ಶಬ್ದ ವಿಕಸನ ಗೋಷ್ಟಿ ಹೇಳಿಯೂ ಹೇಳ್ತವು. ಒಂದು ಶಬ್ದ ತೆಕ್ಕೊಂಡು ಅದರ ವ್ಯಾಖ್ಯಾನ ವಿವರಣೆ, ಅರ್ಥ ವ್ಯಾಪ್ತಿ, ಪರಿಷ್ಕರಣೆ. (finding definitions)

  ಈ ನಮುನೆ ಚರ್ಚೆಗೋ ಮನರಂಜನೆಗೆ, ವಿಶಯ ವಿಶ್ಲೇಷಣೆಗೆ, ಅಥವಾ ವ್ಯಾಖ್ಯಾನ ನಿರೂಪಣೆಗೆ ಬೇಕಾಗಿ ನೆಡಕ್ಕೊಂಡಿತ್ತಾಡ ಹಿಂದಾಣ ಕಾಲಲ್ಲಿ.

  ಉದಿಯಪ್ಪಾಗ ಹತ್ತು ಗಂಟೆಂದ ಹೊತ್ತೋಪಗ ಐದು ಗಂಟೆ ವರೆಗೂ ತುಂಬಾ ಅರ್ಥ ಪೂರ್ಣವಾಗಿ ರೋಮಾಂಚಕವಾಗಿ, ಈಗ ಹೊಯ್ ಕೈ ಮಾಡಿಗೊಳ್ತವೋ ಹೇಳ್ತಷ್ಟು ಆವೇಶಲ್ಲಿ ಗೋಷ್ಟಿ ನೆಡದತ್ತು.

  ಮಾಣಿ ಕರೇಲಿ ಕೂದೊಂಡು ನೋಡಿದ್ದಷ್ಟೆ, ವೀಢ್ಯ ಕೇಮರ ಹಿಡ್ಕೊಂಡು. ಮಾತಾಡಿದ್ದಾ°ಯಿಲ್ಲೆ…. ಹ್ಹೆ ಹ್ಹೆ ಹ್ಹೆ….

 5. ಚೆನ್ನೈ ಭಾವ° says:

  ಒಳ್ಳೆ ಕಾರ್ಯ. ಒಳ್ಳೆ ಶುದ್ಧಿ. ಸಂಪೂರ್ಣ ಯಶಸ್ಸಾಗಲಿ, ಕೀರ್ತಿಪಡೆಯಲಿ, ಜನಪ್ರಿಯ ಆಗಲಿ ಹೇಳಿ -‘ಚೆನ್ನೈವಾಣಿ’.

  • ಆಚಕರೆ ಮಾಣಿ says:

   ಭಾವಯ್ಯಾ… ಧನ್ಯವಾದಂಗೋ… ಮೊನ್ನೆ ಕೊಟ್ಟ ಪತ್ರಿಕೆಯ ಓದಿದಿರಾ… ? ಸಲಹೆ ಸೂಚನೆಗೊಕ್ಕೆ, ನೃತ್ಯ, ಶಾಸ್ತ್ರ, ಪರಂಪರೆ ಸಂಬಂಧೀ ಲೇಖನಂಗೊಕ್ಕೆ ಸದಾ ಸ್ವಾಗತ. ನಿಂಗಳ ಊರಿಲಿ, ನೆರೆಕರೆಲಿ ಎಂತಾರೂ ಶಾಸ್ತ್ರೀಯ, ಜಾನಪದ, ಇತ್ಯಾದಿ ನೃತ್ಯ ಕಾರ್ಯಕ್ರಮಂಗೊ ನೆಡದರೆ ಅದರ ವಸ್ತುನಿಷ್ಟ ವಿಮರ್ಷೆ ಬರದು ಕಳುಸಿ, ಅದರ ಪ್ರಕಟಣೆ ಮಾಡ್ತವು.

 6. ರಘು ಮುಳಿಯ says:

  ಏ ಭಾವಾ,
  ಬಾಗಿಲಿನ ಒಳ ಬಿಡದ್ದರೂ ಆ ವಿಡಿಯೋ ಒ೦ದಾರಿ ಕೊಟ್ಟಿಕ್ಕಿ.ನೋಡಿ ಕೊಶಿ ಪಡವ°.ಒಳ್ಳೆ ರಸ ಇದ್ದಿಕ್ಕು.

  • ಆಚಕರೆ ಮಾಣಿ says:

   ಭಾವಯ್ಯಂಗೂ ಒಂದು ಪತ್ರಿಕೆ ಕೊಟ್ಟಿದನಾ ಹೇಳಿ ನೆಂಪು. ದಿವಾಕರ ಹೆಗಡೆ ಹೇಳಿ ಎಂಗಳ ಆತ್ಮೀಯರು ಅದರಲ್ಲಿ ಪದ್ಯಂಗಳ ಬರೆತ್ತವು. ಡ್ಯಾನ್ಸ್ ಮಾಡ್ಲೆ ರಾಗ ಹಾಕಿ ಹಾಡ್ಲೆ ಅಪ್ಪಾಂಗಿಪ್ಪ ಪದ್ಯಂಗೋ. ಅವು ಆಕಾಶವಾಣಿ ಉದ್ಯೋಗಿ ಆಗಿರೆಕ್ಕು. ಸರೀ ನೆಂಪಿಲ್ಲೆ. ಭಾರೀ ಲಾಯಿಕ್ಕಲ್ಲಿ ಭರತ ನಾಟ್ಯ ಪದ್ಯಂಗಳ ಬರೆತ್ತವು. ನಿಂಗಳೂ ಬರೆವಿರೋ…??? ಅದರನ್ನೂ ಪ್ರಕಟ ಮಾಡ್ತವು. ಮತ್ತೆ ಚೆನ್ನೈಭಾವನತ್ರೆ ಹೇಳಿದ ಹಾಂಗೆಯೆ ನಿಂಗೊಗೂ ಒಂದು ವಿನಂತಿ. ನೃತ್ಯ ವಿಮರ್ಷೆ, ಲೇಖನಂಗೊಕ್ಕೆ ಸ್ವಾಗತ.

 7. ಆನು ಇತ್ತೀಚೆಗೆ ಈ ನೂಪುರ ಭ್ರಮರಿ ಪತ್ರಿಕೆ ವೆಬ್ ಸೈಟ್ ಲಿ ನೋಡಿದೆ. ಓದಿದೆ. ಖುಷಿ ಆತು. ಅದರ ವೆಬ್ ಸಟ್ ತಯಾರಿಯ ಹಿಂದೆ ನಮ್ಮ ಬೈಲಿನೋರ ಶ್ರಮವೂ ಇದ್ದು ಹೇಳಿ ಗೊಂತಾತು. ಆಶ್ಚರ್ಯ ಹೇದರೆ ಆನು ಆ ಪತ್ರಿಕೆ ಓದಿ ಕೆಲವೇ ದಿನಲ್ಲಿ ಬೈಲಿಲಿ ಈ ಲೇಖನ ಕಂಡತ್ತು…! ಪತ್ರಿಕೆ ಲಾಯ್ಕಿದ್ದು.

  • ಆಚಕರೆ ಮಾಣಿ says:

   ಅನು ಅಕ್ಕಾ… ನಿಂಗಳ ಒಪ್ಪ ಕಂಡು ತುಂಬಾ ಖುಶಿ ಆತು. ನಿಂಗಳ ಸಂಪರ್ಕಕ್ಕೆ ವಿಳಾಸವ ವೆಬ್ ಸೈಟಿಲಿ ಕಮೆಂಟ್ ರೂಪಲ್ಲಿ ಕೊಡಿ. ನಿಂಗೊಗೆ ಹಾರ್ಡ್ ಕಾಪಿ ಕಳುಸುಲಕ್ಕು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *