ಒಂಭತ್ತರ ಮಹತ್ವ

June 10, 2010 ರ 7:20 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು..
ದೈವಸಂಖ್ಯೆ, ವೃದ್ಧಿ ಸಂಖ್ಯೆ – ಹಾಂಗೆ ಪುರಾಣ ಸಂಖ್ಯೆ ಹೇಳಿ ಇದಕ್ಕೆ ಹೆಚ್ಚು ಮಹತ್ವ ಕೊಡ್ತವು..
ಈ ಒಂಭತ್ತನೇ ಸಂಖ್ಯೆಯ ಮಹತ್ವ ಎಂತದು ಹೇಳಿ ರಜ್ಜ ನೋಡುವ:

ನಿಂಗ ಯಾವುದಾದರೂ ನಿಂಗೋಗೆ ಕೊಶಿ ಕಂಡ ಸಂಖ್ಯೆಯ ಒಂಭತ್ತರಿಂದ ಗುಣ್ಸಿ..
ಬಂದ ಶೇಷ ಸಂಖ್ಯೆಯ ಏಕ ಸಂಖ್ಯೆಯಾಗಿ ಉಪಯೋಗ ಮಾಡಿ.
ಅದು ಒಂಭತ್ತು ಆಗಿರ್ತು…

(1,2,3,4,5,6,7,8,9) X 9 =ಒಟ್ಟು ಒಂದಾಗಿ ಕೂಡ್ಸಿದರೆ ಉತ್ತರ 9 ಆವ್ತು..
ಬೇಕಾದರೆ ಒಂದರಿ ಒಂಭತ್ತರ ಮಗ್ಗಿಯ ನೋಡಿ..

ನವ ನವೀನ - ಒಂಬತ್ತು

ಉದಾ :

9 x 1 = 09   | 0 + 9= 9
9 x 2 = 18   | 1 + 8 = 9
9 x 3 = 27  | 2 + 7= 9
9 x 4 = 36  | 3 + 6= 9

ಹೀಂಗೆ ಒಂಬತ್ತರ ಮಗ್ಗಿಲಿ ಅದರ ಉತ್ತರವ ಹೇಂಗೆ ಕೂಡ್ಸಿದರೂ ಅದರ ಉತ್ತರ 9 ಆಗಿರ್ತು.

ಮಾಷ್ಟ್ರು ಮಾವನ ಹತ್ತರೆ ಈ ವಿಷಯ ಮಾತಾಡಿಯಪ್ಪಗ ಬೇರೆ ಗ್ರಂಥಂಗಳ ಆಧಾರ ಪ್ರಕಾರ ಒಂಭತ್ತಕ್ಕೆ ಇನ್ನೂ ರಜ ಮಾಹಿತಿ ಸಿಕ್ಕಿತ್ತು.

ಕಲಿಯುಗದ ವರ್ಷಂಗ             = 4,32,000 | 4 + 3 + 2 + 0 + 0 + 0               = 9
ದ್ವಾಪರ ಯುಗದ ವರ್ಷಂಗ      = 8, 64,000| 8 + 6 + 4 + 0 + 0 + 0               = 9
ತ್ರೇತಾಯುಗದ ವರ್ಷಂಗ       =12,96,000 | 1 + 2 + 9 + 6 +0  + 0 + 0       = 9
ಕೃತಯುಗದ ವರ್ಷಂಗ           = 17,28,000| 1 + 7 + 2 + 8 + 0 + 0 + 0      = 9
ನಾಲ್ಕೂಯುಗಂಗಳ ಒಟ್ಟುವರ್ಷ=43,20,000 | 4 + 3 + 2 + 0 + 0 + 0 + 0      = 9

ಮೇಲಾಣ ಲೆಕ್ಖಲ್ಲಿ ಸೊನ್ನೆಯ ತೆಗದರೆ ನವಗೆ ಒಳಿವದು ಒಂಭತ್ತು ಮಾತ್ರ..!

ನೀರ್ಚಾಲು ಶಾಲೇಲಿ ಪಾಠ ಮಾಡುವ, ದೊಡ್ಡಭಾವನುದೆ ಮಹಾಭಾರತಲ್ಲಿ ಬಪ್ಪ ಒಂಭತ್ತರ ಬಗ್ಗೆ ರಜ್ಜ ಮಾಹಿತಿ ಕೊಟ್ಟವು..
ಹೇಳಿದವು.ಇದಾ ಭಾವ – ಎನಗೆ ಇದರ್ಲಿಪ್ಪ ಹದಿನೆಂಟು ಪರ್ವಂಗಳ ಓದಿ ಆತು.. ಅವು ಹೇಳುವದು ಹೇಂಗೆ ಹೇಳಿದರೆ,
ಎಲ್ಲವೂ 18 (1+8 = 9) ಉತ್ತರ ಎಲ್ಲದಕ್ಕೂ ಸಿಕ್ಕುತ್ತು..
ಮಹಾಭಾರತದ ಕುರುಕ್ಷೇತ್ರದ ಯುದ್ಧಂಗಳ ದಿನ 18,
ಆ ಯುದ್ಧಲ್ಲಿಪ್ಪ ಸೈನ್ಯದ ಸಂಖ್ಯೆ 18 ಅಕ್ಷೋಹಿಣಿ ಅಡ.
ನವಗೆಲ್ಲ ಗೊಂತಿಪ್ಪ ಹಾಂಗೆ ಮಹಾಭಾರತಲ್ಲಿ ಬಪ್ಪ ಭಗವದ್ಗೀತೆಯ ಅಧ್ಯಾಯಂಗ 18,
ವ್ಯಾಸ ಮಹರ್ಷಿಗ ಬರದ ಪುರಾಣಗ 18 (ಅಷ್ಟಾದಶ ಪುರಾಣಂಗ)
– ವ್ಯಾಸ ಮಹರ್ಷಿಗೂ ಒಂಭತ್ತನೇ ಸಂಖ್ಯೆಗೆ ಅಷ್ಟು ಬಾಂಧವ್ಯ ಇದ್ದು ಹೇಳಿ ಹೇಳ್ತವು ದೊಡ್ಡ ಭಾವ..

ಅಷ್ತೊತ್ತಿಂಗೆ ನೆಂಪಾತು ಇದಾ!!!!
ಮೊನ್ನೆ ಮಾಷ್ಟ್ರು ಮಾವನ ಮಗನ ಬದ್ಧಕ್ಕೆ ವೇನಿಲಿ ಹೋಪಗ ನಮ್ಮ ಶ್ರೀದೇವಿ ಟೀಚರು ಶಾಲೇಲಿ ಪಾಠ ಮಾಡ್ತ ಹಾಂಗೆ ಹೇಳಿದವು (ಸ್ಲೇಟು,ಬಡಿಗೆ ಮಾತ್ರ ಇತ್ತಿಲ್ಲೆ)  – ‘ಸಂಖ್ಯಾ ಶಾಸ್ತ್ರದ ಬಗ್ಗೆ ನಮ್ಮ ಜೀವನಲ್ಲಿ ಗಂಟೆಂದ ಹಿಡುದು 60 ವರ್ಷದ ವರೆಗೆ ಮುಖ್ಯವಾದ ಸಂದರ್ಭಂಗಳ ನೋಡಿದರೆ 9 ಸಿಕ್ಕುತ್ತು’ ಹೇಳಿ..
ಅದರ ಲೆಕ್ಕ ಹಾಕುಲೆ ಎನ್ನ ಕೈಲಿ, ಕಾಲಿಲಿ ಇಪ್ಪ ಬೆರಳುಗ ಸಾಕಾಯಿದಿಲ್ಲೆ..
ಆದರೂ ಲೆಕ್ಖ ಸಿಕ್ಕಿತ್ತು..

ಗಂಟಗೆ 3,600 ಸೆಕುಂಡುಗ | 3 + 6 + 0 + 0           = 9
ದಿನಕ್ಕೆ 1,440 ನಿಮಿಷಂಗ | 1 + 4 + 4 + 0            = 9
ತಿಂಗಳಿಂಗೆ 720 ಗಂಟೆಗ | 7 + 2 + 0                   = 9
(ಸೌರ) ವರ್ಷಕ್ಕೆ 360 ದಿನಂಗ | 3 + 6 + 0                   = 9
60 ವರ್ಷಕ್ಕೆ  720  ತಿಂಗಳುಗ | 7 + 2 + 0                   = 9 (ಷಷ್ಟ್ಯಬ್ಧ ಮಾಡ್ತರೆ ಅರುವತ್ತಕ್ಕೆ ಮಾಡುದು)
6೦ ವರ್ಷಕ್ಕೆ 21,600 ದಿನಂಗ | 2 +1 + 6 + 0 + 0     = 9
ಹೀಂಗೆ ಲೆಕ್ಖ ಕೊಟ್ಟವು ಶ್ರೀದೇವಿ ಟೀಚರು – ಬೇಕಾದರೆ ಒಂದರಿ ಲೆಕ್ಖ ಹಾಕಿ ನೋಡಿ…..

ಇನ್ನು ಪೆರ್ಲದ ಡಾಕ್ಟ್ರುಮಾವನ ಹತ್ತರೆ ಹೋದೆ.
ಅವು ಎಂತ ಹೇಳಿದವು ಹೇಳಿದರೆ ಮನುಷ್ಯನ ಶರೀರಕ್ಕೆ ಇಪ್ಪ ಇಪ್ಪ ರಂಧ್ರಂಗ ಒಂಭತ್ತು.
ಸೃಷ್ಟಿಯ ಪ್ರಾಣಿಗಳಲ್ಲಿ ಸರ್ಪಕ್ಕೆ ಬಿಟ್ಟು ಮತ್ತೆಲ್ಲಾ ಪ್ರಾಣಿಗೊಕ್ಕೆ ಶರೀರಲ್ಲಿ ನವ ರಂಧ್ರ ಇದ್ದಡ.!

ಮನುಷ್ಯ ಅಬ್ಬೆಯ ಗರ್ಭಲ್ಲಿ ಇಪ್ಪದು 9 ತಿಂಗಳು =270 ದಿನ | 2 + 7 + 0 = 9

ಇನ್ನು ಅಷ್ಟೆಲ್ಲಾ ಕೇಳಿಯಪ್ಪಗ ಒಂದರಿ ಜೋಯಿಶಪ್ಪಚ್ಚಿಯಲ್ಲಿಗೆ ಹೋಪ ಹೇಳಿ ಕಂಡತ್ತು!!
ಅಲ್ಲಿ ಅವು ಸುರು ಮಾಡಿದ್ದೇ ಗ್ರಹರಿಂದ !!
ಮತ್ತೆ ಹೇಳಿದವು ಬುರೂನೆ…

ನಮ್ಮ ಜಾತಕಲ್ಲಿಪ್ಪ ಗ್ರಹರು 9..
ಅದಕ್ಕೆ ಸಂಬಂಧಪಟ್ಟ ಧಾನ್ಯಂಗ 9..
ಲೋಹಂಗ 9,
ರತ್ನಂಗ 9,
ಖಂಡಂಗ 9,
ನಿಧಿಗ 9,
ಗುಣಂಗ 9,
ರಸಂಗ 9,
ಸಂಬಂಧಂಗ 9,
ದ್ವೀಪಂಗ 9,
ನವರಾತ್ರಿಲಿ ಪೂಜೆ 9 ದಿನ,
ನಾಡಿಗ 9,
ಅಡಿಗೆಲಿ 9 ವಿಧ,
ನಟನೆಲಿ 9 ವಿಧ (ನವರಸ)..
– ಹೀಂಗೆ ಹೇಳಿದವು ಅದರ್ಲಿ ಕೆಲವು ಬಿಟ್ಟು ಹೋಯಿದು.
ಎನಗೆ ಅವು ಹಾಂಗೆ ಹೇಳುವಗ ಬರಕ್ಕೊಂಬಲೆ ಎಡಿಗಾಯಿದಿಲ್ಲೆ.. ಪುನಾ ಕೇಳುವಷ್ಟು ಬೆಟ್ರಿ ಇಲ್ಲೆ..! 😉

ಜಾತಕಲ್ಲಿ ಒಂಭತ್ತನೇ ಸಂಖ್ಯೆಯ ಪ್ರೀತಿಸುವವು ಆರನೇ ಸಂಖ್ಯೆಯ ಇಷ್ಟ ಪಡ್ತವಿಲ್ಲೆಡ..
ಮತ್ತೆ ಒಂಭತ್ತನೇ ಸ್ಥಾನ ಪೂರ್ವಪುಣ್ಯ ಸ್ಥಾನ ಅಡ..
ಆರು ಮತ್ತೆ ಒಂಭತ್ತನೇ ಸಂಖ್ಯೆ ವ್ಯತಿರಿಕ್ತ ಸಂಖ್ಯೆ ಅಡ ..

ಒಂದೊಂದು ರಾಶಿಯವಕ್ಕೆ ಒಂದೊಂದು ಶುಭ ಸಂಖ್ಯೆ ಇದ್ದಡ ..
ಮೇಷ =9
ವೃಷಭ=6
ಮಿಥುನ=5
ಕರ್ಕಾಟಕ=2
ಸಿಂಹ =1
ಕನ್ಯಾ =5
ತುಲಾ =6
ವೃಶ್ಚಿಕ =9
ಧನು=3
ಮಕರ= 8
ಕುಂಭ=8
ಮೀನ=3

ಪ್ರಯಾಣ ಮಾಡ್ಲೆ ಒಂಭತ್ತನೇ ತಿಥಿ (ನವಮಿ)ಒಳ್ಳೆದಲ್ಲ  – ಆದರೆ ಪ್ರಯಾಣದ ವಾಹನದ ಸಂಖ್ಯೆ ಒಂಭತ್ತು ಆದರೆ ಒಳ್ಳೆದು ಹೇಳಿ ಹೇಳಿದವು…
ಮನುಷ್ಯರಿಂಗೆ ಪ್ರತೀ ಒಂಭತ್ತು ವರ್ಷಕ್ಕೊಂದರಿ ಅದೃಷ್ಟಲ್ಲಿ ಬದಲಾವಣೆ ಆವ್ತಡ – ವ್ಯಾಪಾರಲ್ಲಿ, ಕೃಷಿಲಿ, ಪ್ರತೀ ಒಂಭತ್ತು ವರ್ಷಕ್ಕೊಂದರಿ ಏರುಪೇರು ಆವ್ತಡ…

ಹೀಂಗೆ ಒಂಭತ್ತು ಹೇಳುವ ಸಂಖ್ಯೆಲಿ ನಾವುತುಂಬಾ ವಿಷಯವ ಕಾಣ್ತು.

ಮತ್ತೊಂದು ವಿಷಯ ಬೈಲಿನವಕ್ಕೆ ಹೇಳುಲೆ ಎನಗೆ ಸಂತೋಷ ಆವ್ತು..
ನಮ್ಮ ಮಾಷ್ಟ್ರುಮಾವನ ಎರಡನೇ ಮಗನ ಮದುವೆ ಮುಹೂರ್ತ 12:24 ಕ್ಕೆ ಅಭಿಜಿನ್ ಲಗ್ನಲ್ಲಿ ಅಡ.
ಅದರ ರಜ್ಜ ಲೆಕ್ಖ ಹಾಕಿ ನೋಡಿ… 1 + 2 + 2 + 4 = 9
ಹೀಂಗೆ ಅವಂಗೂ ಮದುವೆಂದ ಮತ್ತೆ ನವ (9) ಚೈತನ್ಯ ಸದಾ ಇರಲಿ ಹೇಳಿ ಬೈಲಿನವರ ಶುಭ ಹಾರೈಕೆ ಅಲ್ದೋ…????????

ಒಂಭತ್ತರ ಮಹತ್ವ , 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಅಕ್ಷರದಣ್ಣ
  TARANI

  ಗಣೇಶಣ್ಣಾ ಲೇಖನ ತುಂಬಾ ಚೆನ್ನಾಗಿದೆ..

  ಈ 9 ಸಂಖ್ಯೆ ನಮಗೆ ನಮ್ಮ ಜೀವನಕ್ಕೊಂದು ಪಾಠ ಕಲಿಸುತ್ತೆ.

  ಈ ಮಾನವ ಜೀವ ಭೂಮಿಗೆ ಬರುವಾಗ “0″ ಆಗಿರುತ್ತದೆ. ಆದರೆ ಮನುಷ್ಯ ಬೆಳೆದಂತೆಲ್ಲ ಅವನಲ್ಲಿ ಸ್ವರ್ಥ ಪ್ರವೇಶ ಮಾಡುತ್ತದೆ. ನಾನು, ನನ್ನದು, ನನಗಾಗಿ, ನನ್ನಿಂದಾಗಿ, ನನಗೋಸ್ಕರ ಈ ರೀತಿ ಎಲ್ಲವು ನನ್ನ ಸುತ್ತ ಸುತ್ತುತ್ತಿರುತ್ತವೆ. “9″ ಸಂಖ್ಯೆ ನಮಗೆ ಬರೀ ಸಂಖ್ಯೆ ಮಾತ್ರ ಅಲ್ಲ ಇದರಲ್ಲಿ ನಮ್ಮ ಜೀವನಕ್ಕೆ ಬೇಕದ ಪಾಠವೂ ಅಡಕವಾಗಿದೆ.

  ನೋಡಿ ಪ್ರರಂಭದಲ್ಲಿ 9 X 1 = 9 ಎಂದಾಗ ನನ್ನ ಬಳಿ ಇರುವುದೆಲ್ಲವೂ ನನಗೆ ಮಾತ್ರ ಸೇರಿದ್ದು ಅಂತ ಅರ್ಥ.
  2ನೇ ಹಂತಕ್ಕೆ ಮನುಷ್ಯ ಏರಿದಾಗ 9 X 2 =18 ಇಲ್ಲಿ 18 ಸಂಖ್ಯೆಯ ಮೊದಲ ಭಾಗ ಸಮಜಕ್ಕೆ ಎರಡನೇ ಭಾಗ ನನಗೋಸ್ಕರ ಎಂದು ಊಹಿಸಿಕೋಳ್ಳಬೇಕು.
  3ನೇ ಹಂತಕ್ಕೆ ಮನುಷ್ಯ ಏರಿದಾಗ 9 X 3 =27 ಇಲ್ಲಿ ನನ್ನ ಬಳಿ ಇರುವದರಲ್ಲಿ 2 ಭಾಗ ಸಮಜಕ್ಕೆ 7 ಭಾಗ ನನಗೋಸ್ಕರ..
  4ನೇ ಹಂತಕ್ಕೆ ಮನುಷ್ಯ ಏರಿದಾಗ 9 X 4 =36 ಇಲ್ಲಿ ನನ್ನ ಬಳಿ ಇರುವದರಲ್ಲಿ 3 ಭಾಗ ಸಮಜಕ್ಕೆ 6 ಭಾಗ ನನಗೋಸ್ಕರ..
  5ನೇ ಹಂತಕ್ಕೆ ಮನುಷ್ಯ ಏರಿದಾಗ 9 X 5 =45 ಇಲ್ಲಿ ನನ್ನ ಬಳಿ ಇರುವದರಲ್ಲಿ 4 ಭಾಗ ಸಮಜಕ್ಕೆ 5 ಭಾಗ ನನಗೋಸ್ಕರ..
  6ನೇ ಹಂತಕ್ಕೆ ಮನುಷ್ಯ ಏರಿದಾಗ 9 X 6 =54 ಇಲ್ಲಿ ನನ್ನ ಬಳಿ ಇರುವದರಲ್ಲಿ 5 ಭಾಗ ಸಮಜಕ್ಕೆ 4 ಭಾಗ ನನಗೋಸ್ಕರ..
  7ನೇ ಹಂತಕ್ಕೆ ಮನುಷ್ಯ ಏರಿದಾಗ 9 X 7 =63 ಇಲ್ಲಿ ನನ್ನ ಬಳಿ ಇರುವದರಲ್ಲಿ 6 ಭಾಗ ಸಮಜಕ್ಕೆ 3 ಭಾಗ ನನಗೋಸ್ಕರ..
  8ನೇ ಹಂತಕ್ಕೆ ಮನುಷ್ಯ ಏರಿದಾಗ 9 X 8 =72 ಇಲ್ಲಿ ನನ್ನ ಬಳಿ ಇರುವದರಲ್ಲಿ 7 ಭಾಗ ಸಮಜಕ್ಕೆ 2 ಭಾಗ ನನಗೋಸ್ಕರ..
  9ನೇ ಹಂತಕ್ಕೆ ಮನುಷ್ಯ ಏರಿದಾಗ 9 X 9 =81 ಇಲ್ಲಿ ನನ್ನ ಬಳಿ ಇರುವದರಲ್ಲಿ 8 ಭಾಗ ಸಮಜಕ್ಕೆ 1 ಭಾಗ ನನಗೋಸ್ಕರ..
  10ನೇ ಹಂತಕ್ಕೆ ಮನುಷ್ಯ ಏರಿದಾಗ 9 X 10 =90 ಇಲ್ಲಿ ನನಗೋಸ್ಕರ ಏನು ಬೇಡ ಎಲ್ಲವೂ ಸಮಜಕ್ಕಾಗಿ ಎನ್ನುವ ಹಂತ.

  ಈ ಹಂತ ತಲುಪಬೇಕು ಎಂದು ನಮಗೆ “9″ ಸಂಖ್ಯೆ ದಾರಿ ತೋರಿಸುತ್ತದೆ. ಸಮಜವಿದ್ದರೆ ನಾವು. ಸಮಜವಿಲ್ಲದಿದ್ದರೆ ನಾವೆಲ್ಲಿ?? ಸಂಖ್ಯೆ “9″ ಪ್ರತೀ ಹಂತದಲ್ಲಿ ಮನುಷ್ಯನ ಹಂತವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಬಹಳ ಸುಲಭದಲ್ಲಿ ನಮಗೆ ನೀಡಿದೆ.

  ಗುರುಗಳು, ಮಹಪುರುಷರು ತಮಗೋಸ್ಕರ ಎಂದು ಬದುಕಲಿಲ್ಲ… ಪ್ರತೀ ಹಂತದಲ್ಲಿ ಸಮಾಜಕ್ಕೋಸ್ಕರ ಜೀವನವನ್ನು ಮುಡಿಪಾಗಿಟ್ಟರು. ಆ ಕಾರಣದಿಂದಲೇ ನಾವು ಅವರನ್ನು ಸ್ಮರಿಸುವುದು. ಹಾಗಾಗಿ “9″ ಸಂಖ್ಯೆ ಬರೀ ಸಂಖ್ಯೆಯಲ್ಲ, ಬದಲಾಗಿ ಜೀವನಕ್ಕೊಅಂದು ದಿಕ್ಕು ತೋರಿಸಬಲ್ಲ ಮಾರ್ಗದರ್ಶಕವ ಹೌದು.

  ಈ ಮಾರ್ಗದಲ್ಲಿ ನಡೆದು ಕೊನೆಯ ಹಂತ ತಲುಪಲು ಎಲ್ಲರಿಗೆ ಅಗದಿದ್ದರೂ 5-6 ಹಂತಕ್ಕಾದರು ಮುಟ್ಟುವ ಪ್ರಯತ್ನ ಸಮಜದ ಬಗ್ಗೆ ಕಳಕಳಿ ಇರುವವರು ಮಾಡಿದರೆ. ಜೀವನಕ್ಕೊಂದು ಸಾರ್ಥಕತೆ ಬರುತ್ತದೆ.

  ಪರೋಪಕಾರಯ ಫಲಂತಿ ವೃಕ್ಷಾಃ
  ಪರೋಪಕಾರಯ ದುಹಂತಿ ಗಾವಃ
  ಪರೋಪಕಾರಯ ಬಹಂತಿ ನದ್ಯಃ
  ಪರೋಪಕಾರಾರ್ಥಮಿದಂ ಶರೀರಂ ||
  ಮರಗಳು ಕೊಡುವ ಹಣ್ಣು, ದನಗಳು ಕೊಡುವ ಹಾಲು, ನದಿಯಲ್ಲಿ ಹರಿಯುವ ನೀರು ಬೇರೆಯವರ ಉಪಕಾರಕ್ಕಗಿಯೇ ಇರುವಂತೆ ಈ ಶರೀರವು ಪರೋಪಕಾರಕ್ಕಗಿಯೇ ಇರುವಂತಾಗಲಿ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  “ಗುರುಗಳು, ಮಹಾಪುರುಷರು ತಮಗೋಸ್ಕರ ಎಂದು ಬದುಕಲಿಲ್ಲ” ಹೇಳಿ ಹೇಳುವಾಗ ನೆಂಪಾತು ನಮ್ಮ ಈಗಾಣ ಗುರುಗೊ ನಮ್ಮ ಗುರು ಪರಂಪರೆಲಿ 36 ನೆಯವು.. 3 + 6 = 9 ಆತಲ್ಲದೋ ಗಣೇಶಣ್ಣ…

  [Reply]

  VA:F [1.9.22_1171]
  Rating: +3 (from 3 votes)
 2. ಅಜ್ಜಕಾನ ಭಾವ
  ಅಜ್ಜಕಾನ ಭಾವ

  9ರ ಬಗ್ಗೆ ಬರೆದ ಲೇಖನ ಅದ್ಬುತ… ಇನ್ನು ಬೇರೆ ಬೇರೆ ವಿಷಯಂಗಳ ಬಗ್ಗೆ ಬೈಲಿಗೆ ತಿಳಿಸಿ. ಹಾಂಗೆ ಅಖೇರಿಯಾಣ ಭಾಗಲ್ಲಿ ’ನವ ಚೈತನ್ಯ’ದ ಹಾರೈಕೆ ಮಾತ್ರ ಕಂಡು ಮಾಷ್ಟ್ರುಮಾವನ ಸಣ್ಣ ಮಗ ಪುಟ್ಟಭಾವಂಗೆ ಬೇಜಾರಾತೋ ಏನೊ..?

  [Reply]

  VA:F [1.9.22_1171]
  Rating: +3 (from 3 votes)
 3. ಗಣೇಶ ಮಾವ°
  ಗಣೇಶ ಮಾವ

  TARANI,ನಮಸ್ಕಾರ,ಲೇಖನಕ್ಕೆ ನವ ಚೇತನ ತುಂಬಿದ್ದಕ್ಕೆ ಧನ್ಯವಾದಗಳು.

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಮಾವ°
  ಗಣೇಶ ಮಾವ

  ಅಜ್ಜಕಾನ ಭಾವ,ನಮ್ಮ ಗುರುಗೊ ಮಹಾಪುರುಷರು ಸ್ಪಷ್ಟ.. ಹಾಂಗಾದ ಕಾರಣ ೩೬ ನೆ ಪೀಠಾಧಿಪತಿ ಆದದ್ದು ಅಲ್ದಾ?ಲೇಖನಕ್ಕೆ ಪುಷ್ಟಿ ಕೊಟ್ಟದಕ್ಕೆ ಧನ್ಯವಾದ ಭಾವ,

  [Reply]

  VA:F [1.9.22_1171]
  Rating: +1 (from 1 vote)
 5. ಶ್ರೀಅಕ್ಕ°
  ಶ್ರೀದೇವಿ ಟೀಚರು

  ಯಬ್ಬಾ!!! ಗಣೇಶೋ… ಮೊನ್ನೆ ಅಷ್ಟು ಕಂಠ ಶೋಷಣೆ ಮಾಡಿದ್ದದು ಸಾರ್ಥಕ ಆತು ನೋಡು… ನಿನಗೆ ಆದರೂ ಸರೀ ಅರ್ಥ ಆತನ್ನೇ!!!! ಅಜ್ಜಕಾನ ಭಾವನ ಹತ್ತರೆ ಲೆಕ್ಕ ಮಾಡುವ ಮೆಶೀನು ಇತ್ತಾ ಏನಾ.. ಸುಮ್ಮನೆ ನಿನ್ನ ಕೈ ಕಾಲು ಬೆರಳಿಂಗೆ ಬೇನೆ ಮಾಡಿದೆ..!!! ಆಗಲಿ… ಬೇರೆ ಗೊಂತಿಪ್ಪೋರ ಹತ್ತರೆದೆ ಕೇಳಿ (ರಜ್ಜ ವಿಷಯ ಬಿಟ್ಟರೂ) ಚೆಂದಲ್ಲಿ ಬರದ್ದೆಬ್ಬೋ… ಹೀಂಗೆ ಬರೆತ್ತಾ ಇರು ಆತೋ.. ಮಾಷ್ಟ್ರು ಮಾವನ ಮಗಂಗೆ 9 ಸಂಖ್ಯೆ ಶುಭ ತರಲಿ.. ಹೇಳಿ ಅಲ್ಲದಾ ನೀನು ಹೇಳಿದ್ದು…?

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಮಾವ°
  ಗಣೇಶ ಮಾವ

  ಶ್ರೀದೇವಿ ಅಕ್ಕಾ,ಬಿಟ್ಟ ವಿಷಯ ಎಂತದು ಹೇಳಿದರೆ ಒಳ್ಳೇದಿತ್ತು…ಲೇಖನಕ್ಕೆ ಪುಷ್ಟಿ ಕೊಟ್ಟ ಹಾಂಗೆ ಅಕ್ಕು…ಅದರ ಬೈಲಿನವು ನಿರೀಕ್ಷೆ ಮಾಡ್ತಾ ಇದ್ದವಡ….

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  > ಹೀಂಗೆ ಹೇಳಿದವು ಅದರ್ಲಿ ಕೆಲವು ಬಿಟ್ಟು ಹೋಯಿದು.
  ಎನಗೆ ಅವು ಹಾಂಗೆ ಹೇಳುವಗ ಬರಕ್ಕೊಂಬಲೆ ಎಡಿಗಾಯಿದಿಲ್ಲೆ.. ಪುನಾ ಕೇಳುವಷ್ಟು ಬೆಟ್ರಿ ಇಲ್ಲೆ..! <

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಬಿಟ್ಟು ಹೋಯಿದು ಹೇಳಿ ಆನಲ್ಲ ನೀನೆ ಹೇಳಿದ್ದು… ಆನು ಅದರ ನೆಂಪು ಮಾಡಿದ್ದು ಅಷ್ಟೇ!!! ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 7. ಗಣೇಶ ಮಾವ°
  ಗಣೇಶ ಮಾವ

  ಓ..ಸರಿ..ಆನು ಎಲ್ಲಿಯಾದರೂ ಜೋಯಿಶಪ್ಪಚ್ಚಿ ಕಾನಾವಿಂಗೆ ಬಂದಿಪ್ಪಗ ನಿಂಗ ಕೇಳಿದೀರಾ ಹೇಳಿ ಗ್ರೆಶಿದೆ ….

  [Reply]

  VA:F [1.9.22_1171]
  Rating: 0 (from 0 votes)
 8. ಮಂಗ್ಳೂರ ಮಾಣಿ
  ಮಂಗ್ಳೂರ ಮಾಣಿ

  ಲೇಖನ ಲೈಕಿದ್ದು ಗುರುಗಳೇ….


  ನಿಂಗಳ
  ಮಂಗ್ಳೂರ ಮಾಣಿ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಕೊಳಚ್ಚಿಪ್ಪು ಬಾವಅಜ್ಜಕಾನ ಭಾವಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ದೀಪಿಕಾಪುತ್ತೂರಿನ ಪುಟ್ಟಕ್ಕಬೋಸ ಬಾವಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕದೇವಸ್ಯ ಮಾಣಿವೇಣೂರಣ್ಣಮಾಲಕ್ಕ°ಶ್ಯಾಮಣ್ಣಅಕ್ಷರದಣ್ಣಕಳಾಯಿ ಗೀತತ್ತೆಶ್ರೀಅಕ್ಕ°ಮಂಗ್ಳೂರ ಮಾಣಿಪೆಂಗಣ್ಣ°ಸುವರ್ಣಿನೀ ಕೊಣಲೆನೆಗೆಗಾರ°ದೊಡ್ಡಮಾವ°ದೊಡ್ಡಭಾವವೇಣಿಯಕ್ಕ°ಪಟಿಕಲ್ಲಪ್ಪಚ್ಚಿಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ