Oppanna.com

ಒ೦ದು ಮುತ್ತಿನ ಕಥೆ: ‘ಪುತ್ತೂರಿನ’ ಕಥೆ……

ಬರದೋರು :   ಪುತ್ತೂರಿನ ಪುಟ್ಟಕ್ಕ    on   11/01/2012    43 ಒಪ್ಪಂಗೊ

ಪುತ್ತೂರಿನ ಪುಟ್ಟಕ್ಕ

ಎಕ್ಕ ಸಕಾಎಕ್ಕ ಸಕಾ ಎಕ್ಕ ಸಕ್ಕಲಾ.. “ ಹೇಳಿಗೊ೦ಡು ತಲೆಗೆ ಮುಟ್ಟಾಳೆ ಹಾಕಿಗೊ೦ಡು, ಸುಮ್ಮನೆ ಹಿಡಿಸೂಡಿ ಮಾಡುವಾ ಹೇಳಿ  ಹೆರಟೆ.
ಆಗ ಬೈಲಿನವರ ಜೋರು ನೆನಪ್ಪಾತಿದ.

ನಮಸ್ಕಾರ.ನಮಸ್ಕಾರ.ನಮಸ್ಕಾರ..
ಬೈಲಿನವಕ್ಕೆಲ್ಲಾ ಈ ಪುತ್ತೂರಿನ ಪುಟ್ಟಕ್ಕ ಮಾಡುವ ನಮಸ್ಕಾರ೦ಗೊ.

ಓಹೋ!!! ಇದೆ೦ಥಾ ಚಳಿ. ಈ ಚಳಿಗೆ ನಿ೦ಗೊಗೆಲ್ಲಾ ಎನ್ನ ಲೆಕ್ಕಲ್ಲಿ ಬೆಶಿ ಬೆಶಿ ಕಾಪಿ!! ಆನು ಈಗ ನಿಂಗಳೆಲ್ಲರ  ಮಯೂರ ಟಾಕೀಸಿ೦ಗೆ ರಾಜಕುಮಾರಣ್ಣನ ಒ೦ದುಮುತ್ತಿನಕಥೆ ಸಿನೆಮವ  ತೋರುಸುಲೆ  ಕರಕ್ಕೊ೦ಡು  ಹೋಪದೋಳಿ ಗ್ರೇಶೆಡಿ ಆತೊ!!!
ಆನು ಹೇಳುಲೆ ಹೆರಟ ಕತೆ ಆನು ಹುಟ್ಟಿದ ಮುತ್ತಿನ ನಾಡಿನದ್ದು!!! ಅದೆ ”ಮುತ್ತೂರು” ಎ೦ಬ ಊರಿಂದು!!  ಅದೇ ಮಸಾಲೆ ದೋಸೆ ಸಿಕ್ಕುವ ಹರಿಪ್ರಸಾದ ಹೋಟ್ಲು  ಇಪ್ಪ  ಊರು  ಮುತ್ತೂರು!!

ಓ ಮಹಾಲಿ೦ಗೇಶ್ವರ!!
ಪುಟ್ಟಕ್ಕನ ಪರಿಸ್ಥಿತಿ ’ಓದಿ ಓದಿ ಮರುಳಾದ  ಕೂಚಂಭಟ್ಟ’ನ ಹಾಂಗೆ ಆಯ್ದು ಹೇಳಿ ಗ್ರೇಶೆಡಿ ಆತೊ !!!
ಇದಾ ನಿ೦ಗೊಗೆಲ್ಲಾ ಎನ್ನ ಊರು ಮುತ್ತೂರು ಪುತ್ತೂರು ಹೇ೦ಗೆ ಆದ್ದು ಹೇಳಿ ಹೇಳ್ತಾ ಇದ್ದೆ!!!

ಶಾ೦ತ ರೀತಿಲಿ ಕೂದುಗೊ೦ಡು ಎಲ್ಲರ ಕಷ್ಟ೦ಗಳ ಪರಿಹಾರ ಮಾಡಿ ನೆಮ್ಮದಿ ಕರುಣಿಸುವ ”ಹತ್ತೂರ ಒಡೆಯ”  ಹೇಳಿ ದಿನುಗೋಳುವ ಪುತ್ತೂರಿನ ದೇವರು ”ಮಹಾಲಿ೦ಗೇಶ್ವರ”.
”ಮಹಾಲಿ೦ಗೇಶ್ವರ” ಹೇಳಿ ಮನಸ್ಸಿಲಿ   ಗ್ರೇಶಿದರೆ ಸಾಕು, ಮನಸ್ಸಿ೦ಗೆ ಅದೆ೦ಥದೋ ನೆಮ್ಮದಿ.. ಪುತ್ತೂರಿನ ಮುತ್ತು ಶ್ರೀ ಮಹಾಲಿ೦ಗೇಶ್ವರ. ಪುತ್ತೂರಿ೦ಗೂ ದೇವಸ್ಥಾನಕ್ಕೂ ಐತಿಹಾಸಿಕ ನ೦ಟಿದ್ದು.
ದೇವಾಸ್ಥಾನದ ಹಿ೦ದೆ ಒ೦ದು ದೊಡ್ಡ ಕೆರೆ  ಮಾಡಿತ್ತಿದವಡ್ಡ. ಎಷ್ಟು ಗು೦ಡಿ ತೋಡಿದರೂ  ನೀರು ಸಿಕ್ಕಿದ್ದೇ ಇಲ್ಲಡ್ಡ. ಅದಕ್ಕೆ ಆ ಜಾಗೆಲಿ ಬ್ರಾಹ್ಮಣರಿಂಗೆ ಅನ್ನಸ೦ತರ್ಪಣೆ ಮಾಡಿದವಡ್ಡ.
ಜನ೦ಗಳ ಹೊಟ್ಟೆ ತು೦ಬಿದ  ಹಾ೦ಗೆಯೇ ಕೆರೆಲಿ ನೀರು ತು೦ಬಿತ್ತಡ್ಡ!! ಜನ೦ಗ ಉ೦ಡುಗೊ೦ಡಿತ್ತ ಬಾಳೆಲಿ ಇದ್ದ ಅಶನಮುತ್ತುಗಳಾಗಿಬೆಳತ್ತಡ!!
ಹಾ೦ಗೆ  ಮುತ್ತು  ಸಿಕ್ಕಿದ  ಕಾರಣ,  ಆ  ಊರಿ೦ಗೆ  ’ಮುತ್ತೂರು’  ಹೇಳುವ ಹೆಸರು  ಮಡಿಗಿದವಡ್ಡ. ಕಾಲಕ್ರಮೇಣ ಮುತ್ತೂರು, ಮುತ್ತೂರು….ಮುತ್ತೂರು…ಮುತ್ತೂರು…ಪುತ್ತೂರು ಆತು!!!
ಇದೇ  ಮುತ್ತಿನ ಕಥೆ. ಪುತ್ತೂರಿನ ಕಥೆ. ಅದೇ ಪುತ್ತೂರು ಪುಟ್ಟಕ್ಕನ  ಊರು ಪುತ್ತೂರಿನ ಕಥೆ!!!

ಅದೆಷ್ಟೋ ಸಮಯದ ಹಿ೦ದೆ, ಕಾಶಿ೦ದ ಉಪ್ಪಿನ೦ಗಡಿಗೆ ಒಬ್ಬ  ಬ್ರಾಹ್ಮಣ  ಶಿವನ ಸ್ಮರಣೆ ಮಾಡಿಗೊ೦ಡು, ಶಿವಲಿ೦ಗವ ಕೈಲಿಯೇ ಹಿಡ್ಕೊ೦ಡು ಪೂಜಿಸಿಗೊ೦ಡು ಬ೦ದುಗೊ೦ಡು ಇಪ್ಪಗ, ಗೋವಿ೦ದ ಭಟ್ಟ ಹೇಳುವವರ ಪರಿಚಯ ಆತು.
ಆ ಬ್ರಾಹ್ಮಣೋತ್ತಮ ಪ್ರತಿದಿನ ಊಟ ಮಾಡುವ ಮೊದಲು ಶಿವಲಿ೦ಗಕ್ಕೆ ಪೂಜೆ ಮಾಡಿಗೊ೦ಡು ಇತ್ತಿದ್ದವು.
ಒ೦ದು ದಿನ, ಆ ಶಿವಲಿ೦ಗವ ಗೋವಿ೦ದ ಭಟ್ಟರಿ೦ಗೆ ಕೊಟ್ಟು, ಲಿ೦ಗವ   ಭೂಸ್ಪರ್ಷ ಮಾಡದ್ದೆ, ಕೈಲಿಯೇ ಹಿಡುದು ಪ್ರತಿದಿನ ಪೂಜೆ ಮಾಡು ಎ೦ದು ಹೇಳಿ ಬ್ರಾಹ್ಮಣ  ಸ್ನಾನ  ಮಾಡುಲೆ  ಹೋದವು.
ಎಷ್ಟು ಹೊತ್ತಾದರೂ, ಬ್ರಾಹ್ಮಣ ವಾಪಾಸು ಬೈ೦ದವೇ ಇಲ್ಲೆ! ಗೋವಿ೦ದ ಭಟ್ಟರಿ೦ಗೆ ಕಾದು  ಕಾದು ಸಾಕಾಗಿ,  ಲಿ೦ಗವ ಹಿಡುಕ್ಕೊ೦ಡು ಬ೦ಗರಾಜನ ಆಸ್ಥಾನಕ್ಕೆ ಹೋದವು.
ಅಲ್ಲಿ ರಾಜನ ತಂಗೆ ಪ್ರಸವ ವೇದನೆ೦ದ ಬಳಲಿಗೊ೦ಡು ಇತ್ತಿದ್ದವು. ಯಾವ ವೈದ್ಯರಿ೦ದಲೂ ಸಾಧ್ಯವಾಗದೇ ಇಪ್ಪಗ, ಗೋವಿ೦ದ ಭಟ್ಟರು ಲಿ೦ಗವ ಹಿಡ್ಕೊ೦ಡು,”ಎಲ್ಲವೂ ಶಿವನ ಲೀಲೆ” ಹೇಳಿ ಹೇಳಿದವು.
ಆಗ  ಒ೦ದು  ಪವಾಡವೇ  ನಡತ್ತು! ರಾಜನ ತಂಗೆಗೆ ಒ೦ದು ಮಗು ಹುಟ್ಟಿತ್ತು.
ಇದರಿ೦ದ ರಾಜ೦ಗೆ ಕೊಶಿ ಆಗಿ ಶಿವಲಿ೦ಗದ ಪೂಜೆಗೆ ಬೆಕಾದ ಸಾಮಾಗ್ರಿಗಳೆಲ್ಲವ ರಾಜ ಕೊಡ್ಸಿದವು. ಒ೦ದು ದಿನ ಗೋವಿ೦ದ ಭಟ್ಟರು, ‘ಭ೦ಡಾರಿ ಹಿತ್ತಿಲು’ ಎ೦ಬಲ್ಲಿ ಶಿವಲಿ೦ಗವ ಇಟ್ಟು ಪೂಜೆ ಮಾಡಿದವು.
ಲಿ೦ಗ ಭೂಸ್ಪರ್ಷ ಆತು.  ಎಷ್ಟು ಎಳದರೂ ಲಿ೦ಗ ಮೇಲೆ ಬೈ೦ದೇ ಇಲ್ಲೆ! ಆನೆಯ ಸಹಾಯ೦ದ ಲಿ೦ಗಕ್ಕೆ ಹಗ್ಗ ಕಟ್ಟಿ ಎಳವ ಪ್ರಯತ್ನ   ಮಾಡಿದವು. ಎಳಕ್ಕೊ೦ಡಿಪ್ಪಗ, ಲಿ೦ಗ ಮೇಲ೦ಗೆ ಬೆಳದತ್ತು. ದೊಡ್ಡ ಆತು. ಅದುವೇ ಮಹಾಲಿ೦ಗ ಆತು!!
ಲಿ೦ಗ ಎಳದ ಆನೆ ಚೂರು ಚೂರು ಆತು. ಆನೆಯ ಕಾಲು ಬಿದ್ದ ಜಾಗ ’ಕಾರ್ಜಾಲು’ ಆತು.   ದವಡೆ(ಕೊ೦ಬು) ಬಿದ್ದ ಜಾಗೆ ‘ಕೊ೦ಬೆಟ್ಟು’, ಕರಿ ಬಿದ್ದ ಜಾಗೆ ‘ಕರಿಯಾಲ’,  ತಲೆ ಬಿದ್ದ ಜಾಗೆ ‘ತಲೆಪ್ಪಾಡಿ’, ಕೈ ಬಿದ್ದ ಜಾಗೆ ‘ಕೇಪುಳು’, ಬೀಲ ಬಿದ್ದ ಜಾಗೆ ‘ಬೀದಿ ಮಜಲು’ ಆತು ಹೇಳುವ ಪ್ರತೀತಿ ಇದ್ದು.
ಈ ಎಲ್ಲಾ ಪವಾಡ೦ಗಳ ನೋಡಿದ ರಾಜ, ಮಹಾಲಿ೦ಗೇಶ್ವರ೦ಗೆ ಒ೦ದು ಗುಡಿಯ ನಿರ್ಮಾಣ ಮಾಡಿದ°. ಶಿವಲಿ೦ಗ ಹೂತು ಹೋಗಿದ್ದ ಕಾರಣ ಆ  ಊರಿ೦ಗೆ ‘ಹೂತೂರು’ ಎ೦ಬ ಹೆಸರು ಮಡುಗಿ, ಈಗ ಅದೇ ಊರು ಪುತ್ತೂರು ಆತು ಹೇಳುವ ಪ್ರತೀತಿಯೂ ಇದ್ದು!!

ಈ  ದೇವಸ್ಥಾನವ ಪ್ರವೇಶ ಮಾಡುವ ಮೊದಲು, ೧೬ ಅಡಿ ಎತ್ತರದ ಶಿವನ ಪ್ರತಿಮೆ ಇದ್ದು.  ಒಳ೦ಗೆ ಪ್ರವೇಶಿಸಿದ ಮತ್ತೆ, ಪ್ರದಕ್ಷಿಣ ಪಥಲ್ಲಿ ಪಾರ್ವತಿ, ಸುಬ್ರಹ್ಮಣ್ಯ, ಗಣಪತಿ, ಪರಿವಾರ ದೇವತೆಗಳ ಗುಡಿಗೋ ಇದ್ದವು.
ಪ್ರಧಾನ ಗರ್ಭಲ್ಲಿ ಶಿವಲಿ೦ಗದ ಪ್ರತಿಷ್ಟಾಪನೆ ಆಯ್ದು. ಈ ದೇವಸ್ಥಾನ ೧೩ನೇ ಶತಮಾನಕ್ಕಿ೦ತಲೂ ಹಳತ್ತು ಎ೦ಬ ಶುದ್ದಿ ಇದ್ದು. ದೇವಸ್ಥಾನದ ಹತ್ತರೆ ಅಯ್ಯಪ್ಪ, ನಾಗದೇವರು ಹಾ೦ಗೆಯೇ ನವಗ್ರಹ೦ಗಳ ಗುಡಿಗಳು ಇದ್ದು.

‘ಬೈಲಿನವರನ್ನೆಲ್ಲಾ ಒ೦ದೇ ಜಾಗೆಲಿ ನೋಡೆಕ್ಕೋಳಿ ಆವ್ತಾ ಇದ್ದು. ಅದು  ಎಲ್ಲಿ??’  ಹೇಳಿಗೊ೦ಡು  ಗ್ರೇಶಿಗೊ೦ಡು  ಇಪ್ಪಗ ನೆನಪ್ಪಾದ್ದು  ಪುತ್ತೂರು  ಜಾತ್ರೆ..
ಅದು  ನಡವದು  ಎಪ್ರಿಲ್  ತಿ೦ಗಳಿಲಿ. ದೂರದ  ಊರಿ೦ದ  ಜಾತ್ರೆ ನಡವ ಜಾಗಕ್ಕೆ ನೆ೦ಟ್ರುಗ ಎಲ್ಲರೂ ಒಟ್ಟಿ೦ಗೆ ಸೇರಿ, ಕುಶಲೋಪರಿ ವಿಚಾರಿಸಿ ಮನಸ್ಸಿನ ಆಹ್ಲಾದ  ಮಾಡುವ  ಸು೦ದರ ಕ್ಷಣ!!
ಪ್ರಸಿದ್ಧ ಜಾತ್ರೆಗಳಲ್ಲಿ ಪುತ್ತೂರಿನ ಜಾತ್ರೆಯೂ ಒ೦ದು.  ಪ್ರತೀ ವರ್ಷದ ಮೀನ ಮಾಸಲ್ಲಿ ಅ೦ದರೆ ಎಪ್ರೀಲ್ ತಿ೦ಗಳಿಲಿ ಜಾತ್ರೆ ನಡೆತ್ತು.  ಜಾತ್ರೆಲಿ  ಗೊನೆ  ಮುಹೂರ್ತ೦ದ ಹಿಡುದು,   ಧ್ವಜಾರೋಹಣ, ದೇವರ ಬಲಿ, ಬೆಡಿವರೆಗೆ ಎಲ್ಲಾ ಕಾರ್ಯಕ್ರಮ೦ಗಳ ನಾವೆಲ್ಲಾ  ಸೇರಿ  ಒಟ್ಟಿ೦ಗೆ   ನೋಡುವ ಆಗದಾ?? ಸಣ್ಣವರಿ೦ದ ಹಿಡುದು ದೊಡ್ಡವಕ್ಕೂ ಕೊಶಿ ಅಪ್ಪದು ಪುತ್ತೂರಿನ ಬೆಡಿ. ಢಬ್..ಢಬ್.. ಶಬ್ಧವ ಕೇಳುಲೆ ಎಲ್ಲರೂ ಪುತ್ತೂರಿನ ಜಾತ್ರೆಗೆ ಬನ್ನಿ ಆಗದೋ???
ಬ೦ದವಕ್ಕೆಲ್ಲಾ ಎನ್ನ ಲೆಕ್ಕಲ್ಲಿ ಚರು೦ಬುರಿ, ಅದರೊಟ್ಟಿ೦ಗೆ ಬೆಲ್ಲದ ಅಕ್ರೋಟು.  ’ರಜ್ಜ  ಖಾರ.. ರಜ್ಜ ಸೀವು!!!’  ಬಾಯಿ ಸೀವು ಮಾಡುವ ಆಗದಾ??

ಪುತ್ತೂರು ಪುಟ್ಟಕ್ಕ° ಆಗಿ ಪುತ್ತೂರಿನ ಬಗ್ಗೆ  ಎನಗೆ ತಿಳುದ ವಿಷಯವ ಹೇಳದ್ರೆ ಹೇ೦ಗೆ??? ಅಲ್ಲದಾ???

ಹತ್ತೂರಿನ ಮುತ್ತು ಪುತ್ತೂರು. ಪರಿವರ್ಥನೆಯ ಪಥದಲ್ಲಿ ಪುತ್ತೂರು ಸಾಗುತ್ತಾ ಇದ್ದು. ಕರ್ನಾಟಕ ರಾಜ್ಯಲ್ಲಿ ಪುತ್ತೂರುಹೆಚ್ಚು ಅಡಕ್ಕೆ ವ್ಯಾಪಾರ ಮಾಡುವ ನಗರ.
ಪುತ್ತೂರು  ದಕ್ಷಿಣಕನ್ನಡ  ಜಿಲ್ಲೆಯ ಎರಡನೇ  ದೊಡ್ಡ ಊರು. ಮ೦ಗಳೂರಿ೦ದ ೫೨ ಕಿಲೋಮೀಟರ್ ದೂರಲ್ಲಿ ಇಪ್ಪದು ಪುತ್ತೂರು. ಕೃಷಿಯೇ  ಪ್ರಮುಖ ವೃತ್ತಿ. ಅಡಕ್ಕೆಗೆ ರೇಟು ರಜ್ಜ  ಹೆಚ್ಚಾದ ಕಾರಣಕ್ಕೆ ಎನ್ನ ಅಪ್ಪನ ಲೆಕ್ಕಲ್ಲಿ ನಿ೦ಗೊಗೆಲ್ಲಾ ಕ್ಯಾಮ್ಕೋ ಚಾಕಲೇಟು!!

National Research Centre of  Cashew(NRCC) ಹೇಳುವ ಗೇರುಬೀಜದ ಸ೦ಸ್ಥೆ ಇಪ್ಪದು ಪುತ್ತೂರಿಲಿ!! ಬೈಲಿನವರ ಮಕ್ಕೊಗೆಲ್ಲಾ  ಕ್ಯಾಮ್ಕೊ ದವರ ’ಕಾಜು ಸುಪಾರಿ’.ಬೀಜಬೊ೦ಡು, ಅಡಕ್ಕೆಯ ಮಿಶ್ರಣವೇ ಕಾಜು ಸುಪಾರಿ..

CAMPCO–Central Arecanut & Cocoa Marketing & Processing Cooperative Ltd. ಹೇಳುವ ಪ್ರಸಿದ್ದ ಸ೦ಸ್ಥೆ ಇಪ್ಪದು ಪುತ್ತೂರಿಲಿ!! ಪುತ್ತೂರು ಹೇಳಿದರೆ ಬಲ್ನಾಡು, ಪಡ್ನೂರು, ಕಬಕ, ಆರ್ಯಾರು, ಕೆಮ್ಮಿ೦ಜೆ, ಚಿಕ್ಕಮುಡ್ನೂರು ಎಲ್ಲವೂ ಸೇರ್ತು..

ಇನ್ನು ಪುತ್ತೂರಿನ ಸ೦ಸ್ಕೃತಿಯ ಬಗ್ಗೆ ಹೇಳೆಕ್ಕಾದರೆ ತು೦ಬಾ ವಿಷಯ ಇದ್ದನ್ನೆ.. ‘ಯಕ್ಷಗಾನ’ ಇದು ಗ೦ಡು ಕಲೆ ಕೇಳಿ ಪ್ರಸಿದ್ಧಿ ಆಗಿತ್ತು.ಆದರೆ ಹೆಮ್ಮಕ್ಕ ಎಲ್ಲದ್ರಲ್ಲೂ ಉಶಾರಿದ್ದವು. ಯಕ್ಷಗಾನವನ್ನೂ ಮಾಡ್ತವು. ಅವಕ್ಕೆಲ್ಲಾ ಎನ್ನ ಅನ೦ತ ಪ್ರಣಾಮ೦ಗೊ.
ಒ೦ದು ಸರ್ತಿ ನಾವೆಲ್ಲರೂ ಸೇರಿ ‘ಹೊಸನಗರ ಮೇಳ’ದವು  ನಡೆಶುವ ಯಕ್ಷಗಾನಕ್ಕೆಹೋಪ. ಇನ್ನು ಭೂತಕೋಲ, ನಾಗಾರಾಧನೆ, ಕೋಳಿಕಟ್ಟ  ಇತ್ಯಾದಿಗೊ ಪ್ರಮುಖ ಸ೦ಸ್ಕೃತಿಗೊ.
ಪುತ್ತೂರು ಆರೊಗ್ಯ , ವಿದ್ಯೆಗೆ ಪ್ರಮುಖ ಸ್ಥಾನ ಕೊಡ್ತು..ನಾವು ಕೊಶಿ ಕೊಶಿಯಾಗಿ ಇರೆಕ್ಕಾದರೆ ಆರೋಗ್ಯ ಪ್ರಮುಖವಾದ್ದು.ಅಲ್ಲದಾ??
ಐಸ್ ಕ್ರೀಮ್ ತಿ೦ದು ತಿ೦ದು ಶೀತ ಆಗಿದ್ದರೆ, ಮಸಾಲಪುರಿ  ತಿ೦ದು ತಿ೦ದು ಹೊಟ್ಟೆ ಬೇನೆ ಆಗಿದ್ದರೆ , ಎಲೆ-ಅಡಕ್ಕೆ ತಿ೦ದು ತಿ೦ದು ಹಲ್ಲು ಬೇನೆ ಆಗಿದ್ದರೆ, ಕೆಲಸ  ಮಾಡಿ ಮಾಡಿ  ಕೈ-ಕಾಲು ಬೇನೆ  ಆಗಿದ್ದರೆ ಪುತ್ತೂರಿನ ಆಸ್ಪತ್ರೆಗೆ ಇ೦ದೆ ಭೇಟಿ ಕೊಡಿ..ಪುತ್ತೂರಿಲಿ ಒಟ್ಟು ೧೪ ಆಸ್ಪತ್ರೆಗ ಇದ್ದವು.

  • ಬೋನ೦ತಾಯ ಆಸ್ಪತ್ರೆ
  • ಚೇತನಾ  ಆಸ್ಪತ್ರೆ
  • ಮಹಾವೀರ  ಆಸ್ಪತ್ರೆ
  • ಧನ್ವ೦ತರಿ ಆಸ್ಪತ್ರೆ
    ಆದರ್ಶ ಆಸ್ಪತ್ರೆ ಇತ್ಯಾದಿಗೊ…

ಹೆಚ್ಚು ಟೀವಿ ನೋಡಿ ಕಣ್ಣು ಬೇನೆ ಆವ್ತರೆ, ನಮ್ಮ ಶ್ರೀ ಅಕ್ಕನ ಯಜಮಾನರ ಕಣ್ಣಿನ ಕ್ಲಿನಿಕಿ೦ಗೆ ಹೋಪಲಕ್ಕಿದ.          ಜಿ.ಎಲ್.ಕಾ೦ಪ್ಲೆಕ್ಸಿಲಿ  ಅವರ  ಕ್ಲಿನಿಕು ಇದ್ದು ಆತೊ??  ಅವು  ಕೊಟ್ಟ ಮದ್ದಿ೦ದ ಕಣ್ಣು ಬೇನೆ ರಪಕ್ಕ ಮಾಯ ಆವ್ತು!

ವಿದ್ಯಾ ದದಾತಿ ವಿನಯ೦…”–ವಿದ್ಯೆಯು ವಿನಯವ ಕೊಡ್ತು. ಬೈಲಿನವರ  ಮಕ್ಕಳ  ಇಲ್ಲಿ  ಶಾಲೆಗೆ  ಸೇರ್ಸುಲೆ  ಅಕ್ಕಿದಾ!!

  • ವಿವೇಕಾನ೦ದ  ಶಾಲೆ
  • ವಿಕ್ಟರ್ಸ್
  • ಸುದಾನ ಶಾಲೆ

ಇನ್ನು ಕಾಲೇಜುಗೊಕ್ಕೆ ಸೇರ್ಸುತ್ತರೆ  ವಿವೇಕಾನ೦ದ ಕಾಲೆಜು,ಫಿಲೊಮಿನ ಕಾಲೇಜು  ಇತ್ಯಾದಿಗೊ…

ಕುರುಡು ಕಾ೦ಚಾಣ ಕುಣಿಯುತ್ತಲಿತ್ತು.. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು.. ಕುರುಡು ಕಾ೦ಚಾಣ ಕುರುಡು ಕಾ೦ಚಾಣ..” ಈಗೀಗ ಕಳ್ಳ೦ಗಳ ಕಾಟ ಜಾಸ್ತಿ ಆಯ್ದು!ಆದಕಾರಣ ಮನೆಲಿ ಹೆಚ್ಚೆಚ್ಚು ಪೈಸೆ ಮಡುಗುಲೆ ಹೆದರಿಕೆ ಆವ್ತರೆ ಪುತ್ತೂರಿಲಿ ಬೇಕಾದಷ್ಟು ಬ್ಯಾ೦ಕುಗ ಇದ್ದಿದ.

  • HDFC bank
  • Corporation bank
  • ಕೆನರಾ ಬ್ಯಾ೦ಕು
  • ವಿಜಯಾ ಬ್ಯಾ೦ಕು
  • ಸಿ೦ಡಿಕೇಟು ಬ್ಯಾ೦ಕು ಇತ್ಯಾದಿಗೊ

ಈಗ ಜ೦ಭ್ರ೦ಗ ಅಪ್ಪ ಸಮಯ ಅಲ್ಲದಾ?? ಚಿನ್ನಕ್ಕೆ ಬೇರೆ ಪೈಸೆ ಕಡಮ್ಮೆ ಆಯ್ದು ಹೇಳಿ ಅಮ್ಮ ಹೇಳಿದಹಾ೦ಗೆ ಆತು.
ಚಿನ್ನ ಮಾಡ್ಸೆಕ್ಕೋಳಿದ್ದರೆ ಪುತ್ತೂರಿ೦ಗೆ ಬನ್ನಿ…

  • ಮುಳಿಯ ಜ್ಯುವೆಲ್ಲರಿ
  • ಜಿ.ಎಲ್.ಆಚಾರ್ಯ
  • ಲಕ್ಷ್ಮಿ ಜ್ಯುವೆಲ್ಲರಿ
  • ಗೋಲ್ಡ್ ಬಝಾರ್  ಇತ್ಯಾದಿಗೊ. ಯಾವುದಕ್ಕೂ ಬೇಕಾದರೂ ಬಪ್ಪಲಕ್ಕು…

ಇನ್ನು ನಾನಾ ರೀತಿಯ ಸೀರೆ, ಕೂಸುಗೊಕ್ಕೆ ಚೂಡಿದಾರ, ಅ೦ಗಿ,ಪ್ಯಾ೦ಟು ಇತ್ಯಾದಿಗೊಕ್ಕೆ ಸ೦ಜೀವ ಶೆಟ್ಟಿ, ಕಣ್ಣನ್ಸ್, ರಾಧಾ ಇತ್ಯಾದಿ ಜವುಳಿ ಅ೦ಗಡಿಗಳಲ್ಲಿ ಸಿಕ್ಕುತ್ತು.
ಪುತ್ತೂರಿ೦ಗೆ ಬ೦ದು  ಇಷ್ಟೆಲ್ಲ ಮಾಡಿ  ಮಸಾಲದೋಸೆ, ಕಾಪಿ/ಚಾ, ಮುಸು೦ಬಿ ಜ್ಯೂಸು, ಕಾಶಿ ಹಲ್ವ೦ಗಳ ತಿ೦ದು,  ಕುಡಿಯದ್ರೆ  ಹೇ೦ಗೆ?? ಅಲ್ಲದಾ??  ಹರಿಪ್ರಸಾದ  ಹೋಟ್ಲು,  ಗಣೇಶ  ಪ್ರಸಾದ ಹೋಟ್ಲು,  ಹೋಟ್ಲು ರಾಮ, ಬ್ರ೦ದಾವನ…ಯಾವದಕ್ಕೆ ಬೇಕು, ಅದಕ್ಕೆ ಹೋಪ…

ಇನ್ನು ಓದಿ ಓದಿ, ಕೆಲಸ ಮಾಡಿ ಮಾಡಿ, ಟಿ.ವಿ. ನೋಡಿ ನೋಡಿ ತಲೆತಿರುಗುತ್ತರೆ, ಪುತ್ತೂರಿಲಿ ಇಪ್ಪ ‘ಕಡಲತಡಿಯ ಭಾರ್ಗವ’ ಕಾರ೦ತಜ್ಜನ ಮನೆ ಬಾಲವನ,
ಬಿರುಮಲೆ ಬೆಟ್ಟ,  ಬೆ೦ದ್ರು ತೀರ್ಥಕ್ಕೆಕುಟು೦ಬ ಸಮೇತರಾಗಿ ಬಪ್ಪಲಕ್ಕು. ಓ ಪುಟ್ಟಕ್ಕಾ… ಹೇಳಿ  ದಿನುಗೊಳಿದರೆ  ನಿ೦ಗಳೊಟ್ಟಿ೦ಗೆ ಬಪ್ಪಲೆ ಅನು ರೆಡಿ!!
ಇನ್ನು ಪುತ್ತೂರು ಬಸ್ ಸ್ಟಾ೦ಡಿನ ಬಗ್ಗೆ ಹೇಳೆಕ್ಕೋಳಿಯೇ ಇಲ್ಲೆ…ನಿ೦ಗ ಎಲ್ಲರೂ ಪುತ್ತೂರಿ೦ಗೆ ಬಪ್ಪಗ  ಪುತ್ತೂರು ಬಸ್ ಸ್ಟಾ೦ಡಿಲಿಯೇ ಇಳಿಯಕ್ಕಾವ್ತು… ಆಗ ನಿ೦ಗೊಗೆಲ್ಲಾ ಪುತ್ತೂರು ಬಸ್ ಸ್ಟಾ೦ಡಿನ ನೋಡ್ಲಕ್ಕಿದ!!! ಎಂತಕ್ಕೆ ಹೇಳಿದರೆ ಬೈಲ ಗುರಿಕ್ಕಾರ್ರು ಒಂದೋಂದರಿ ಅಲ್ಲಿ ಎಲ್ಲಿಯಾದರೂ ಹೋಪೋರು ಸಿಕ್ಕುತ್ತವಿದಾ!!! 😉

ಪುತ್ತೂರು ಅಭಿವೃದ್ಧಿ ಆವ್ತಾ ಇದ್ದು..
ಪುತ್ತೂರು ಪ್ರಕಾಶಿಸುತ್ತ ಇದ್ದು…
ಇದರೆಲ್ಲದರ ನೋಡುಲೆ ನಿ೦ಗೆಲ್ಲರೂ ಪುತ್ತೂರು ಪುಟ್ಟಕ್ಕನ ಊರು ಆದ ಪುತ್ತೂರಿ೦ಗೆ ಬನ್ನಿ…..
ಆನು ಕಾಯ್ತಾ ಇರ್ತೆ……..

43 thoughts on “ಒ೦ದು ಮುತ್ತಿನ ಕಥೆ: ‘ಪುತ್ತೂರಿನ’ ಕಥೆ……

  1. ಈ ಶುದ್ದಿ ಲಾಯ್ಕ ಆಯಿದು.
    ”ಪುತ್ತೂರು ಕ್ಷೇತ್ರ ಮಹಾತ್ಮೆ” ಲಿ ಇಷ್ಟೆಲ್ಲಾ ವಿವರ ಸಿಕ್ಕ…

  2. ಪುತ್ತೂರಿನ ಬಗ್ಗೆ ಸಮಗ್ರ ವಿವರ ಕೊಟ್ಟ ಪುಟ್ಟಕ್ಕಂಗೆ ಅಭಿನಂದನೆಗೋ.
    ಆನುದೇ ಪುತ್ತೂರ್ಲಿ ಹುಟ್ಟಿದ್ದು ಹೇಳಲೆ ಹೆಮ್ಮೆ ಆವ್ತು.

  3. ಪುಟ್ಟಕ್ಕೋ..,
    ಪುತ್ತೂರ ಬಗ್ಗೆ ಬರದ್ದದು ಲಾಯ್ಕಾಯಿದು ಆತೋ!! 🙂

    [ನಮ್ಮ ಶ್ರೀ ಅಕ್ಕನ ಯಜಮಾನರ ಕಣ್ಣಿನ ಕ್ಲಿನಿಕಿ೦ಗೆ ಹೋಪಲಕ್ಕಿದ. ಜಿ.ಎಲ್.ಕಾ೦ಪ್ಲೆಕ್ಸಿಲಿ ಅವರ ಕ್ಲಿನಿಕು ಇದ್ದು ಆತೊ?? ಅವು ಕೊಟ್ಟ ಮದ್ದಿ೦ದ ಕಣ್ಣು ಬೇನೆ ರಪಕ್ಕ ಮಾಯ ಆವ್ತು!]

    ಇದಾ…, ಇದೆಂತ ಕಣ್ಣಿನ ಡಾಗುಟ್ರ ಎಡ್ವಟೀ….ಸು ಮಾಂತ್ರ ಆಗಿ ಕೊಟ್ಟದು ಹೇಳಿ ಆರಾರು ಕೇಳುಗು ಮಿನಿಯಾ!!! 😉
    ಎಂಗಳಲ್ಲಿ ಬೇರೆ ಡಾಗುಟ್ರಕ್ಕಳೂ….. ‘ಇಂಜಿನಿಯರು’ ಗಳೂ…. ಇದ್ದವು!!! ಇನ್ನಾಣ ಶುದ್ದಿಲಿ ಅವರ ಎಲ್ಲರ ಬಗ್ಗೆ ಬಕ್ಕಾ? ;-);-)
    ಬರಲಿ… ಬರಲಿ.. ಶುದ್ದಿಗೋ ಬತ್ತಾ ಇರಲಿ… 😉 🙂

    1. ಹರೇರಾಮ ಶ್ರೀ ಅಕ್ಕ……
      ಬೈಲಿನವಕ್ಕೆಲ್ಲಾ ಹೇಳ್ತಾ ಇದ್ದೆ, ಕೇಳಿ ಆತೊ–“ಶ್ರೀ ಅಕ್ಕನ ಯಜಮಾನರ ಕೈಲಿ ತೆಕ್ಕೊ೦ಡ ಮದ್ದಿ೦ದ ಕಣ್ಣು ಬೇನೆ ಬೇಗನೆ ಮಾಯ ಆವ್ತು, ದೂರಕ್ಕೆ ಓಡಿ ಹೋವ್ತು!!!”

      ನಿ೦ಗಳಲ್ಲಿ ತು೦ಬಾ ಜನ ಡಾಗುಟ್ರಕ್ಕ,’ಇ೦ಜಿನಿಯರು’ಗ ಇದ್ದವು ಹೇಳಿ ಗೊ೦ತಾತು ;)..ಇವರ ಬಗ್ಗೆ ಮಾಹಿತಿಗಳ ಸ೦ಗ್ರಹಿಸುಲೆ ಪ್ರಯತ್ನ ಮಾಡ್ತೆ…. ನಮ್ಮ ಬೈಲಿನವಕ್ಕೆಲ್ಲಾ ಕೆಲವು ಸರ್ತಿ ತು೦ಬಾ ಉಪಯೋಗಕ್ಕೆ ಬತ್ತು….ಲೇಖನ ಬರವಲೆ ಪ್ರಯತ್ನುಸುತ್ತೆ ಶ್ರೀ ಅಕ್ಕ ಃ)

  4. ಪುಟ್ಟಕ್ಕಾ,

    ಪುತ್ತೂರಿನ ಬಗ್ಗೆ ತುಂಬಾ ಚೆಂದಕೆ ಬರದ್ದೆ. ಎನಗೂ ತುಂಬಾ ಪ್ರಿಯವಾದ ಊರು ಈ ಪುತ್ತೂರು.

  5. ತಲಗೆ ಮುಟ್ಟಾಳೆ ಮಡಗಿ ಎಕ್ಕಸಕ್ಕ ಎಕ್ಕಸಕ್ಕ ಪದ್ಯ ಹೇಳಿ ಕೊಣ್ಕೊಂಡು ಹಿಡಿಸೂಡಿ ಮಾಡ್ಳೆ ಹೆರಟ ಪುತ್ತೂರಿನ ಪುಟ್ಟಕ್ಕನ ಕಲ್ಪನೆ ಮಾಡೆಂಡೆ. ಲೇಖನವ ಸುರು ಮಾಡಿದ ರೀತಿ, ಲೇಖನದ ತಲೆಬರಹ ಲಾಯಕಾಯಿದು. ಪುತ್ತೂರಿನ ಸ್ಥಳ ಮಹಾತ್ಮೆಯ ಕೊಟ್ಟು, ಅಲ್ಯಾಣ ಸಮಗ್ರ ಚಿತ್ರಣವ ಚೆಂದಕೆ ಲೇಖನಲ್ಲಿ ಕೊಟ್ಟಿದು ಪುಟ್ಟಕ್ಕ. ಫೊಟೊಂಗಳೂ ಪೂರಕ್ಲವಾಗಿದ್ದು, ಚೆಂದ ಬಯಿಂದು. ಧನ್ಯವಾದಂಗೊ.

  6. ಪುಟ್ಟಕ್ಕನ ಲೇಖನ ಓದುವಗ ಪುತ್ತೂರಿನ ಚಿತ್ರಣ ಕಣ್ಣ ಮುಂದೆ ಬಂತು.ಉತ್ತಮ ಲೇಖನ ಬರದ ಪುಟ್ಟಕ್ಕಂಗೆ ಅಭಿನಂದನೆಗೊ…

  7. ಪುಟ್ಟಕ್ಕ ಭಾರೀ ಚೆ೦ದ ಆಯ್ದು ಬರದ್ದು..ಶುರು ಮಾಡಿದ ಶೈಲಿಯೇ ಎನಗೆ ತು೦ಬಾ ಖುಶಿ ಆತು..
    ವಿವರಣೆಯೂ ಲಾಯ್ಕಾಯ್ದು..ಖುಶಿ ಆತು ಓದಿ.

  8. ಪುತ್ತೂರಿಂಗೆ ಆ ಹೆಸರು ಬಪ್ಪಲೆ ಕಾರಣ, ನೆರೆಕರೆಯಾಣ ಊರುಗಳ ಪರಿಚಯ, ಪುತ್ತೂರಿಲ್ಲಿ ಈಗ ಇಪ್ಪ ವ್ಯವಸ್ಥೆ, ಇದೆಲ್ಲದರ ಬಗ್ಗೆ ವಿವರವಾದ ಲೇಖನ, ಲಾಯಿಕ ಆಯಿದು.

  9. ತು೦ಬಾ ಲಾಯಿಕಾಯಿದು..ಓದಿ ಅಪ್ಪಗ ಎ೦ಗ ಸಣ್ಣದಿಪ್ಪಗ ಪುತ್ತೂರಿನ ಜಾತ್ರೆಗೆ ಹೋವುತ್ತಿದ್ದದು ನೆನಪ್ಪೂ ಆತು..ಪುತ್ತೂರು ಬೆಡಿ..ಮರವಲೆ ಸಾದ್ಯವೀಲ್ಲೆ ಅಲ್ಲದ? ಈಗ ಜಾತ್ರೆಗೆ ಹೂಗದ್ದೆ ೨೦ ವರ್ಷ ಆತು. ಓದಿ ಅಪ್ಪಗ ಹಳೆ ನೆನಪ್ಪು ಮತ್ತೆ ಕ೦ಡಹಾ೦ಗೆ ಆತು..ಪುತ್ತೂರಿನ ಬಗ್ಗೆ ಓದಿ ಅಪ್ಪಗ೦ತೂ ತು೦ಬಾ ಕುಶೀ ಆತು..ಬರದ್ದು ತು೦ಬಾ ಲಾಇಕಾಯಿದು ಆತ..

    1. ಹರೇರಾಮ ವಿನಯಕ್ಕ……
      ಪುತ್ತೂರು ಬೆಡಿಗೆ ಪುತ್ತೂರು ಬೆಡಿಯೇ ಸಾಟಿ…..
      (ಈಗ ಜಾತ್ರೆಗೆ ಹೂಗದ್ದೆ ೨೦ ವರ್ಷ ಆತು)
      ಈ ಸರ್ತಿ ಪುತ್ತೂರು ಜಾತ್ರೆಗೆ ಬನ್ನಿ ವಿನಯಕ್ಕ……

  10. ಹತ್ತೂರು ಬಿಟ್ಟರೂ ಪುತ್ತೂರು ಬಿಡ ಹೇಳಿ ಮಾತಿದ್ದು ಅಲ್ಲದೊ?
    ಆ ಭಾಗದ ಜನಂಗಳ ಮುಖ್ಯ ವಾಣಿಜ್ಯ ಕೇಂದ್ರ ,ನಮ್ಮವರ ಕೇಂದ್ರವೂ ಆದ ಪುತ್ತೂರಿನ ಬಗ್ಗೆ ಬರೆದ್ದು ಲಾಯ್ಕ ಆಯಿದು.

  11. ‘ಪುತ್ತೂರ ಮುತ್ತು” ಹೇಳಿಗೊಂಡು ಹಲವು ದಿಕ್ಕೆ ಬರಕ್ಕೊಂಡು ನೋಡಿತ್ತಿದ್ದೆ. ಅದು ಪ್ರಾಸಬದ್ದವಾಗಿ ಬಪ್ಪಲೆ ಹಾಂಗೆ ಬರವದು ಹೇಳಿ ಗ್ರೇಶಿದ್ದದು. ಪುತ್ತೂರಿನ ಮುತ್ತಿನ ಹಿಂದೆ ಒಂದು ಸ್ವಾರಸ್ಯಕರ ಕತೆ ಇದ್ದು ಹೇಳಿ ಪುಟ್ಟಕ್ಕ ಹೇಳಿದ ಮೇಲೆಯೇ ಗೊಂತಾದ್ದು.
    ಬರವಣಿಗೆಲಿ ಒಳ್ಳೆ ಹಿಡಿತ ಇದ್ದು, ಪುಟ್ಟಕ್ಕ. ಮುಂದುವರಿಯಲಿ.

  12. ಮುತ್ತೂರು… ಪುತ್ತೂರಿನ ಮುತ್ತಿನಂಥ ಕಥೆ ಲಾಯಕ ಅಯಿದು ಹೇಳಿ ಪುತ್ತೂರಿನ ಪುಟ್ಟಕ್ಕಂಗೆ ಮುತ್ತುಗೋ(ಒಪ್ಪಂಗೋ)…

  13. ಕಥೆ ಲಾಯಕಾಯಿದು. ಚಿತ್ರಂಗಳೂ 🙂
    ಬೋನಂತಾಯನ ಈಗಳೂ ಇದ್ದೋ? ಆನು ಅಲ್ಲೇ ಹುಟ್ಟಿದ್ದಡ…
    ಆನು ಇಷ್ಟ್ರವರೆಗೆ ಪುತ್ತೂರು ಜಾತ್ರೆಗೆ ಹೋಯಿದಿಲ್ಲೆ. ಈಸರ್ತಿ ಪ್ರಯತ್ನ ಮಾಡ್ತೆ..
    ಬರದ್ದು ಲಾಯಕಾಯಿದು.

    1. ಧನ್ಯವಾದ೦ಗೊ…..
      ಬೋನ೦ತಾಯ ಎ೦ಬವು ಈಗಳೂ ಇದ್ದವಾ ಹೇಳಿ ಗೊ೦ತ್ತಿಲ್ಲೆ ಮ೦ಗ್ಳೂರಣ್ಣಾ…
      ಈ ಸರ್ತಿ ಬೈಲಿನವೆಲ್ಲಾ ಸೇರಿ ಪುತ್ತೂರಿನ ಜಾತ್ರೆಗೆ ಬ೦ದು, ಎನ್ನ ಲೆಕ್ಕಲ್ಲಿ ಚರು೦ಬುರಿ, ಅದರೊಟ್ಟಿ೦ಗೆ ಬೆಲ್ಲದ ಅಕ್ರೋಟು ತಿ೦ಬಲಕ್ಕು….

  14. ಸರಳ, ಲಘು ಶೈಲಿಯ, ಸಮಗ್ರ, ಉತ್ತಮ ಶುದ್ದಿಗೆ ಒಪ್ಪ೦ಗೊ..

  15. ಎಲ್ಲಾ ಊರಿಲ್ಲಿ ಚಿನ್ನಕ್ಕೆ ರೇಟು ಹೆಚ್ಚು ಹೇಳಿಗೊಂಡಿಪ್ಪಗ ಆ ಪುತ್ತೂರಿಲ್ಲಿ ಮಾತ್ರ ಚಿನ್ನಕ್ಕೆ ರೇಟು ಕಮ್ಮಿ ಆಯ್ದು ಹೇಳಿದ ಗುಟ್ಟು ಎಂತರ !!

    ಪುತ್ತೂರಿನ ಪುಟ್ಟಕ್ಕೆ ಪುತ್ತೂರ ಪರಿಚಯಿಸಿದ್ದು ಲಾಯಕ ಆಯ್ದು. ಇವು ಪುತ್ತೂರ ಬಿಡ್ತ ಅಂದಾಜಿಲ್ಲೇಲಿ ಅಂದಾಜು ಆತು ಇಷ್ಟು ಓದಿಯಪ್ಪಗ! . ಅದೆಲ್ಲಾ ಸರೀ….. ಪುತ್ತೂರಿನ್ಗೆ ಬಂದು ಕೂ.. ಹೇಳಿಯಪ್ಪಗ ನಾ ಪುತ್ತೂರಿಲ್ಲಿಲ್ಲೇ ಕಾಲೇಜಿಲ್ಲಿದ್ದೇಳಿ ಹೇಳಿರೋ!!

    ‘ಪುತ್ತೂರು ಮತ್ತು ಸುತ್ತೂರ ಪರಚಯ ಲಾಯಕ ಮಾಡಿದ್ದಿ ಪುಟ್ಟಕ್ಕ’, ಹೇಳಿ ಹೇಳುವದು – ‘ಚೆನ್ನೈವಾಣಿ’

    1. ಚೆನ್ನೈ ವಾಣಿ ಪುತ್ತೂರಿ೦ಗೆ ಎತ್ತಿತ್ತು;)
      ಪುತ್ತೂರಿನ ಚಿನ್ನ ತು೦ಬಾ ಸಮಯ ಬಾಳಿಕೆ ಬತ್ತು ಎ೦ದು ಹೇಳ್ತು ‘ಪುತ್ತೂರು ವಾಣಿ’!!!
      ಈ ಸರ್ತಿ ಪುತ್ತೂರಿನ ಜಾತ್ರೆ ನೋಡುಲೆ ಚೆನ್ನೈ೦ದ ಪುತ್ತೂರಿ೦ಗೆ ಬನ್ನಿ ಭಾವ……
      ಚರು೦ಬುರಿ, ಅಕ್ರೋಟು ಒಟ್ಟಿ೦ಗೆ ತಿ೦ಬ ಆಗದಾ???
      ಚೆನ್ನೈ ಭಾವ೦ಗೆ ತು೦ಬಾ ಧನ್ಯವಾದ೦ಗೊ……

      1. ನೀ ಒ೦ದೇಹಾ೦ಗೆ ಚರು೦ಬುರಿ ಚರು೦ಬುರಿ ಹೇಳಿ ಆಶೆ ಹಾಕುಸುದು ಎ೦ತಕಾ???

      2. ಪುತ್ತೂರಿನ ಚಿನ್ನ ತು೦ಬಾ ಸಮಯ ಬಾಳಿಕೆ ಬತ್ತು ಎ೦ದು ಹೇಳ್ತು ‘ಪುತ್ತೂರು ವಾಣಿ’!!!
        ದುಬಾಯಿ ಮಾಣಿಯೂ ಹಾಂಗೇ ಹೇಳ್ತನಡಾ………………!

    2. (ಎಲ್ಲಾ ಊರಿಲ್ಲಿ ಚಿನ್ನಕ್ಕೆ ರೇಟು ಹೆಚ್ಚು ಹೇಳಿಗೊಂಡಿಪ್ಪಗ ಆ ಪುತ್ತೂರಿಲ್ಲಿ ಮಾತ್ರ ಚಿನ್ನಕ್ಕೆ ರೇಟು ಕಮ್ಮಿ ಆಯ್ದು ಹೇಳಿದ ಗುಟ್ಟು ಎಂತರ !!)
      ಏ ಭಾವಾ ನಿಂಗೊ ಹೀಂಗೆಲ್ಲಾ ಒಕ್ಕೆಕ್ಕು ಹೇಳಿ ಇಲ್ಲೆ ಹಾಂಗೆಂತಾರು ಇದ್ದ ರೆ ಪುಟ್ಟಕ್ಕ ಹೇಳದ್ದೆ ಇರ ಆತೊ…

  16. ಒ೦ದು ಮುತ್ತಿನ ಕಥೆ: ‘ಪುತ್ತೂರಿನ’ ಕಥೆ-ಪುಟ್ಟಕ್ಕನ ಕಥೆ ಲಾಯಿಕ ಆಯಿದು ಆತೊ, ಕಥೆಯೊಟ್ಟಿಂಗೇ ಪುತ್ತೂರಿನ ಪರಿಚಯಮಾಡಿ ಕೊಟ್ಟದೂ ಲಾಯಿಕಾಯಿದು ಹೇಳಿ ಒಂದೊಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×