Oppanna.com

ಊಟದ ಸಾಲಿಲಿ!!

ಬರದೋರು :   ಶುದ್ದಿಕ್ಕಾರ°    on   06/10/2010    6 ಒಪ್ಪಂಗೊ

ಶುದ್ದಿ ಹೇಳಿದ್ದು:
ಈಶ್ವರಚಂದ್ರ ಬೆತ್ತಸರವು
(ಈಚಣ್ಣ ಬಾವ°)
ಪತ್ರಕರ್ತ°, ಬೆಂಗ್ಳೂರು.

ಬೆತ್ತಸರವು ಬಾವನ ಗುರ್ತ ಇದ್ದೋ?
ನಿಂಗೊಗೆ ಗುರ್ತ ಇಲ್ಲದ್ದರೂ, ಅವಕ್ಕೆ ನಿಂಗಳ ಗುರ್ತ ಇದ್ದು.

ಅವಕ್ಕೆ ನಮ್ಮ ಊರಿಲಿ ಸಾದಾರ್ಣ ಎಲ್ಲ ಗುರ್ತ ಇಕ್ಕೋ ಹೇಳಿಗೊಂಡು!
ಬಡಗಲಾಗಿ ಮಣಿಪಾಲಂದ ಹಿಡುದು ಮೂಡ್ಳಾಗಿ ನೆಟ್ಟಾರು ಒರೆಂಗೆ ಎಲ್ಲ ಅರಡಿಗು!

ಪತ್ರಿಕೋದ್ಯಮ ಕಲ್ತು, ಅದರ್ಲೇ ಬೆಳಕ್ಕೊಂಡು ಇಪ್ಪ ನಮ್ಮ ಬೈಲಿನ ಹೆಮ್ಮೆಯ ಉಶಾರಿಮಾಣಿ.
ಇವು ಕಲ್ತಾದ ಕೂಡ್ಳೇ ಮಣಿಪಾಲಕ್ಕೆ ಹೋಗಿ, ಒಳ್ಳೆ ಕೆಲಸಲ್ಲಿ ಸೇರಿಗೊಂಡವು.
ಅವರ ಜೀವನಾನುಭವಂಗಳ ಅವರ ಬ್ಲೋಗುಪುಟಲ್ಲಿ (ಸಂಕೊಲೆ) ಹೇಳಿಗೊಂಡಿದವು.
ಅಲ್ಲಿಂದ ಮತ್ತೆ  – ಈಗ ಸದ್ಯ – ಬೆಂಗುಳೂರಿಂಗೆ ಹೋಗಿ ದೊಡ್ಡ ಕೆಲಸಲ್ಲಿ ಸೇರಿಗೊಂಡವು.
ನಮ್ಮ ಬೈಲಿನ ಮಾಣಿ ನಮ್ಮ ಬೈಲಿಂಗೂ ಶುದ್ದಿಗಳ ಹೇಳುಲೆ ಸುರು ಮಾಡಿದವು,
ಎಲ್ಲೋರುದೇ ಓದಿ, ಶುದ್ದಿಗೆ ಒಪ್ಪ ಕೊಡಿ!

ಆನು ಮಣಿಪಾಲಕ್ಕೆ ಬಂದ ಲಾಗಯ್ತು ಯಾವುದು ತಪ್ಪಿರೂ, ಊಟ ತಪ್ಪಿದ್ದಿಲೆ.
ಉಡುಪಿ ಊಟ ಹೇಳಿರೆ ಅದಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದ್ದು ಹೇಳ್ತವು.

ಉಂಡಿಕ್ಕಿ ವಾರ ಕಳುದರೂ ಕೈಂದ ಸಾರಿನ, ಪಾಯ್ಸದ ಪರಿಮಳ ಹೋಗ.
ಉಡುಪಿ ಹತ್ತರೆ ಆಫೀಸು, ಮನೆ ಇಪ್ಪವಕ್ಕೆ ಊಟಕ್ಕೆ ಹೋಪದು ತಪ್ಪುತ್ತಿಲೆ.

ಸಂಬಳ ಸಾಕಾವ್ತಿಲೆ ಭಾವಾ… ಎಂತ ಮಾಡುದು ಉಂಬಲೂ ಇಲ್ಲದ್ದೆ ಸಾಯೆಕ್ಕು ಹೇಳಿ ತಪ್ಪಿಯೂ ಹೇಳುವ ಹಾಂಗಿಲ್ಲೆ!!
ಪ್ರಪಂಚದ ಎಲ್ಲಾ ಹೊಡೆಯಾಣ ಕಾರ್ಯಕ್ರಮಂಗಳೂ ಉಡುಪಿಲೇ ಆವ್ತಾ ಏನೋ?
ಹೇಳಿ ಕೆಲವು ಸರ್ತಿ ಎನಗೆ ಸಂಶಯ ಬಂಯ್ದು ಅಷ್ಟುದೆ ಜಂಬ್ರ ಈ ಹೊಡೆಲಿ.
ಹವ್ಯಕರದ್ದು ರಜ ಕಮ್ಮಿ ಆದರೂ ಶಿವಳ್ಳಿ/ಕೊಂಕಣಿಗಳ ಕಾರ್ಯಕ್ರಮಕ್ಕೆ ಬರ ಇಲ್ಲೆ.
ನೆರೆಕರೆ ದೊಡ್ಡದಿದ್ದು ಇಲ್ಲದ್ರೆ ಎಲ್ಲರನ್ನೂ ಗುರ್ತ ಇದ್ದು ಹೇಳಿ ಆದರೆ, ವರ್ಷದ ಕೆಲವು ತಿಂಗಳು ಮನೇಲಿ ಅಶನ ಮಡುಗೆಕ್ಕು ಹೇಳಿ ಇಲ್ಲೆ!

ಎರಡು ಜೆಂಬ್ರ ಬೇಡ ಒಂದು ಸಿಕ್ಕಿರೂ ಸಾಕು ಶಿವಳ್ಳಿಯವರದ್ದಾದರೆ..
ಮುನ್ನಾಣ ದಿನಂದ ಸುರುವಾಗಿ ಮರುದಿನ ಮಧ್ಯಾಹ್ನ ಕೆಲವುಸರ್ತಿ ಕಸ್ತಲೆವರೆಗೂ ಊಟ ಇಕ್ಕು.
ನಮ್ಮಲ್ಲಿ ಮುನ್ನಾಣ ದಿನ ಮೇಲಾರಕ್ಕೆ ಕೊರವದಿನ ಒಂದು ಮೇಲಾರಲ್ಲಿ/ ಪಾಯಸಲ್ಲಿ ಮುಕ್ತಾಯ ಮಾಡುಗು.
ಆದರೆ ಶಿವಳ್ಳಿಯವ್ವು ಹಾಂಗಲ್ಲಲೇ ಅಲ್ಲ. ಮುನ್ನಾಣದಿನ ಕೆಲವುದಿಕ್ಕೆ ಎರಡು ಬಗೆ ಸೀವು ಮಾಡದ್ರೆ ಅವಕ್ಕೆ ವರಕ್ಕು ಬಾರ!! ಆ ನಮುನೆ ಗೌಜಿ ಮಾಡುಗು!
ನಮ್ಮಲ್ಲಿ ಕೆಲವು ದೊಡ್ಡೋರ ಮದ್ವೆಲಿ ಹೀಂಗೆ ಮಾಡಿರೂ ಅದು ಶಿವಳ್ಳಿಯವರ ಅಬ್ಬರಕ್ಕೆ ಬಾರಲೇ ಬಾರ!
ಆನು ಈ ಹೊಡೆಂಗೆ ಬಂದು ಹತ್ತರತ್ತರೆ ಒಂದು ವರ್ಷ ಆದಿಕ್ಕು. ಹೆಚ್ಚಿಗೆ ಆರನ್ನೂ ಪರಿಚಯ ಇಲ್ಲೆ.. ಅದರೂ 10/15 ಜೆಂಬ್ರದೂಟಕ್ಕೆ ಹೋದಿಪ್ಪೆ!! ಹೇಂಗೆ??

ಎಲ್ಯಾದರೂ ಮಧ್ಯಾಹ್ನ ಉಡುಪಿ ಬಸ್ ಸ್ಟ್ಯಾಂಡಿಲಿ ನಿಂದುಗೊಂಡು ಹತ್ತರೆ ಹೋಟ್ಲಿದ್ದಾ ಹೇಳಿ ಹುಡ್ಕೆಕ್ಕು ಹೇಳಿ ಇಲ್ಲೆ..
ಹತ್ತರೆ ಎಲ್ಯಾರು ಜಂಬ್ರ ಇಕ್ಕು ಅದಕ್ಕೇ ಹೋದರೆ ಆತು ಹೇಳಿ ಬೇರೆಹೊಂಡೆಂದ ಬಂದವು ನೆಗೆ ಮಾಡುಗು!
ಮಣಿಪಾಲದ ಮಟ್ಟಿಂಗೆ ಹೋಟ್ಲಿಂಗೆ ಹೋಪದಕ್ಕಿಂತ ಹತ್ತರೆ ಎಲ್ಯಾರು ಜಂಬ್ರ ಇದ್ದಾ ಹೇಳಿ ನೋಡುದೇ ಒಳ್ಳೆದು ಹೇಳಿ ಕೆಲವವು ಜನ ಹೇಳುಗು!
ಎಂತಾರೆ ವಿಪರೀತ ರೇಟು!! ಚಡ್ಡಿ ಕಿಸೆಲಿ ಪೈಸೆ ಇಲ್ಲದ್ರೆ ತೊಳವ ಸೀನು ಖಂಡಿತ!!

ಜಂಬ್ರ ಏಳ್ತು.. ಕಾಗದಕೊಡೆಕ್ಕು ಹೇಳಿ ಆದರೆ ನಮ್ಮಲ್ಲಿ (ಪಾಲಾಗಿ ಬೇರೆ ಬೇರೆ ಕೂದರೂ) . . . .   ಮತ್ತು ಸಹೋದರರು ಹೇಳಿ ಕಾಗದಲ್ಲಿ ಬರದು ಕೊಡುಗು.
ಆದರೆ ಇಲ್ಲಿಯಾಣವ್ವು ಹಾಂಗಲ್ಲ. ಅಣ್ಣ ತಮ್ಮಂದ್ರಿಗೆ ಬಿಡಿ ಕೆಲವು ಜೆನ ಮಗ ಬೆಂಗ್ಳೂರ್ಲಿಪ್ಪದಡ ಹೇಳಿ ಬೇರೆಯೇ ಕಾಗದ ಕೊಡುಗು!!
ಹೀಂಗೆ ಕಾಗದ ಖರ್ಚು ಮಾತ್ರ ಅಲ್ಲ! ಸಮ್ಮಾನ, ಬದ್ದ, ಬಾರ್ಸ ಎಲ್ಲ ನಮ್ಮಲ್ಲಿಯಾಣ ಮದುವೆಯ ಹಾಂಗೆ ಮಾಡಿ, ಮದುವೆಯ ಎರಡು ಮದುವೆಯ ಹಾಂಗೆ ಅದ್ದೂರಿ ಮಾಡುಗು.

ಒಂದು ಶಿವಳ್ಳಿ ಮದುವೆಲಿ ಒಬ್ಬ ಹೇಳಿದ, ಅವರಲ್ಲಿ ಈ ಸೀವು ಎಷ್ಟು ಬಗೆ ಮಾಡ್ತು ಹೇಳುದರ ಮೇಲೆ ಯಾವ ಕಡೆಯವ್ವು ಬಲ ಹೇಳಿ ಲೆಕ್ಕಡ!
ಆ ಜೆಂಬ್ರಕ್ಕೆ ಹೋದವಕ್ಕೆ ಯಾವ ಸೀವನ್ನೂ ಸರಿ ತಿಂಬಲೆ ಎಡಿಗಾಯ್ದಿಲೆ.. ಎಂತಾರೆ 9 ಬಗೆ ಇತ್ತಿದಾ…..!!
ಮಧ್ಯಾಹ್ನಕ್ಕೆ ಉಂಬವಲೆ ಹೋದ ಆನು ಮರುದಿನ ಉದಿಯಪ್ಪಗವರೆಗೆ ಎಂತ ತಿಂದಿದಿಲೆ ಮತ್ತೆ!

ಹೇಳಿದಾಂಗೆ ಇಲ್ಲಿ ಉಡುಪಿ ಮಠಲ್ಲಿ ಬ್ರಾಹ್ಮರಿಂಗೇ ಹೇಳಿ ಊಟದ ಜಾಗೆ ಇದ್ದು “ಚೌಕಿ” ಹೇಳುಗು.
ಶಿವಳ್ಳಿಯವ್ವೇ ಹೆಚ್ಚಿಗೆ ಹೋಕು. ದಿನಾ 2 ಬಗೆ ಸೀವು ಇರ್ತು ಇಲ್ಲಿ. ಆ ಬಗ್ಗೆ ಇನ್ನೊಂದರಿ ಹೇಳುವ.

ಈ ಊಟ, ಜಂಬ್ರದ ವಿಷಯ ಎಂತಕೆ ನೆಂಪಾತು ಹೇಳಿರೆ, ನಾಡ್ದು 21ಕ್ಕೆ ಒಂದೇ ದಿನ ಎನಗೆ ಹೇಳಿಕೆ ಬಂದ 7 ಜೆಂಬ್ರ ಇದ್ದು!!!
ಶಿವಳ್ಳಿ/ಕೊಂಕಣಿಗಳದ್ದು. ಹೇಂಗೆ?? ಅದಕ್ಕಿಂತಲೂ ಹೆಚ್ಚಿಗೆ ಇಲ್ಲಿಯಾಣವಕ್ಕೆ ಅದಲ್ಲಿಯೂ ಶಿವಳ್ಳಿ ಬ್ರಾಹ್ಮರಿಂಗೆ ಊಟ ಏಪಾಋಡು ಮಾಡ್ತಲ್ಲಿ ಭಾರೀ ಶ್ರದ್ಧೆ.
ಆ ವಿಷಯಲ್ಲಿ ಯಾವುದೇ ಲೋಪ ಅಪ್ಪಲಾಗ ಹೇಳಿ ಅಡ! ಊಟ ಸರಿಯಾಯ್ದಿಲೆ ಹೇಳಿರೆ ಜಂಬ್ರ ಮಾಡ್ಸಿದವ ಬುರ್ನಾಸು ಹೇಳ್ತ ಹಾಂಗೆ!!
ನಿಂಗೊಗೆ ಈಗ ಎನ್ನ ಮೇಲೆ ಸಂಶಯ ಬಪ್ಪಲೆ ಸುರುವಾದಿಕ್ಕು.
ಇವನ ಕೆಲಸ ಹೇಳಿರೆ ಜಂಬ್ರದೂಟಕ್ಕೆ ಹೋಪದಾ ಹೇಳಿ! ಹೇಳಿಕೆ ಇದ್ದು, ಹತ್ತರೆ..

ಓ ಇಲ್ಲಿ ನಾಲ್ಕು ಮಾರ್ಪು ಹೇಳಿರೆ ಆರಾರು ಹೋಗದ್ದೆ ಕೂರುಗಾ??? ……
ಹೇಳಿದಾಂಗೆ ಈ ಹೊಂಡೆಂಗೆ (ಬೈಲಿಂದ) ಬತ್ತವು ಪೇಟೆಲಿಪ್ಪವಕ್ಕೆ ಮೊದಲೇ ಹೇಳೆಕ್ಕು ಇಲ್ಲದ್ರೆ ಕಷ್ಟ ಹೇಳಿ ಏನೂ ಇಲ್ಲೆ..
ಉಡುಪಿ ದಾರಿ ಕರೇಲಿ ಜಂಬ್ರ ಎಲ್ಯಾರು ಇಕ್ಕಿದಾ.. ಉಂಡಿಕ್ಕಿಯೇ ಬನ್ನಿ!!

~

ಈಶ್ವರಚಂದ್ರ,
ಬೆತ್ತಸರವು ಮನೆ.
(ಈಶ ಬೆತ್ತಸರವು)
ishabg@gmail.com

6 thoughts on “ಊಟದ ಸಾಲಿಲಿ!!

  1. ನಿಂಗೊ ಹೇಳಿದ ಹಾಂಗೆ ಶಿವಳ್ಳಿ ಬ್ರಾಹ್ಮಣರ ಊಟ ಮಧ್ಯಾಹ್ನಕ್ಕೆ ಉಂಡರೆ ಮತ್ತೆ ಇರುಳು ಊಟ ಬೇಕಾವುತ್ತಿಲ್ಲೆ. ಇದು ಎನ್ನ ಸ್ವಂತ ಅನುಭವ. ಕಾಪು, ಉಡುಪಿ, ಪಡುಬಿದ್ರಿ, ಪುನರೂರು… ಇಲ್ಲೆಲ್ಲ ಆನು ಕೆಲಾವು ಜೆಂಬ್ರಂಗೊಕ್ಕೆ ಪಟ ತೆಗವಲೆ ಹೋಯಿದೆ. ಗಮ್ಮತ್ತು ಮಾಡುದರಲ್ಲಿ ಅವು ಭಾರೀ ಬಲ. (ಬಗೆ ಬಗೆಯ ಕೋಸಂಬರಿ ಮಾಡುದು ಐಟಮ್ ಜಾಸ್ತಿ ಅಪ್ಪಲೆ ಅಡ ಹೇಳಿ ಎನ್ನ ಒಟ್ಟಿಂಗೆ ಪಟ ತೆಗವಲೆ ಬಂದವ° ಹೇಳಿದ°.) ಕೊಂಕಣಿಗೊ ಮತ್ತೂ ಬಲ. ಹೇಂಗೆ ಗೊಂತಿದ್ದೋ? 10.30 – 11 ಗಂಟೆಗೆ ಕಾರ್ಯಕ್ರಮ ಮುಗುದು ಒಂದು ಸಣ್ಣ ಬ್ರೇಕ್ ಸಿಕ್ಕಿರೆ ಅದರಲ್ಲಿ ಕಾಪಿ, ಚಾಯದ ಒಟ್ಟಿಂಗೆ ದೀಗುಜ್ಜೆದೋ, ಗೆಣಂಗಿನದ್ದೋ ಪೋಡಿ, ಮೈಸೂರುಪಾಕ್ ಇತ್ಯಾದಿ ಒಂದು ಸ್ವೀಟ್ ಎಲ್ಲ ಇಕ್ಕು. ಒಟ್ಟಾರೆ ವಿವಾಹ ಭೋಜನವಿದು… ವಿಚಿತ್ರ ಭಕ್ಷ್ಯಗಳಿವು… ಅಹ ಹ್ಹ ಹ ಹ್ಹ ಹಾ……..

    ಶ್ರೀಶಣ್ಣ ಹೇಳಿದ ಹಾಂಗೆ TADA ಕೊಡ್ತವು, ಆದರೆ ಅಂಗಿ ತೆಗದವಕ್ಕೆ ಮಾಂತ್ರ. ಕಳುದ ಒರಿಷ ಕಟೀಲು ಅಸ್ರಣ್ಣರ ಮಗಳ ಮದುವೆ ಭಾರೀ ಗಮ್ಮತ್ತು. ಕಡೇಣ ಹಂತಿಲಿ ಕೂದ ಎಂಗಳ ಹತ್ರೆ ಕೂಡ (ಪಟ ತೆಗವವರ ಸೆಟ್) ಅಂಗಿ ತೆಗೆಸಿದ್ದವು…! ಆದರೆ 20-20 ರೂಪಾಯಿ ಕೆಂಪು ನೋಟ್ ಕೊಟ್ಟದು ನೆಂಪಾಗಿ ನಿಂಗೊ ಹೇಳಿದ ಮಾತು ಸರಿ ಹೇಳಿ ಆತು.

  2. (ನಾಡ್ದು 21ಕ್ಕೆ ಒಂದೇ ದಿನ ಎನಗೆ ಹೇಳಿಕೆ ಬಂದ 7 ಜೆಂಬ್ರ ಇದ್ದು!!!
    ಶಿವಳ್ಳಿ/ಕೊಂಕಣಿಗಳದ್ದು.) 7 ಹೇಳಿರೆ ಕೊಕ್ಕೆಯೋ ಭಾವಾ ?
    ಶಿವಳ್ಳಿ ಬ್ರಾಮ್ಮರು ಹೇಳಿಕೆ,ಜೆಮ್ಬ್ರದ ಊಟ,ವರದಕ್ಷಿಣೆ — ಇಂಥಾ ವಿಷಯಂಗಳಲ್ಲಿ ಭಾರಿ ಕ್ರಮಲ್ಲಿರುತ್ತವು.ಮಡಿ ಯ ವಿಷಯಲ್ಲಿ ಅವರ ಮೀರುಸುಲೆ ಆರಿಂಗು ಎಡಿಯಪ್ಪ !!

  3. ಉಡುಪಿ ಕಡೆಯವರ ಊಟದ ಗೌಜಿಯ ಈಶ ವಿವರಿಸಿದ್ದು ಚೆಂದ ಆಯಿದು. ಆನು ಅವರ ಹಲವಾರು ಮದೆವೆ ಜೆಂಬಾರಂಗೊಕ್ಕೆ ಹೋಯಿದೆ.
    ಸುರೂವಾಣ ಸರ್ತಿ ಎಂಗೊ ಕೆಲಾವು ಜೆನಂಗಳ ಸೆಟ್, ಪ್ರೆಂಡಿನ ತಂಗೆಯ ಮದುವೆ ಹೇಳಿ ಹೋದ್ದು. ಅನುಭವ ಇಲ್ಲೆ. ಉಂಬಲೆ ಕೂದಪ್ಪಗ ಎನ್ನ ಹತ್ರೆ ಕೂದವ ಎಷ್ಟು ಬಗೆ ಇದ್ದು ಲೆಕ್ಕ ಹಾಕಲೆ ಸುರುಮಾಡಿದ. 30-32, ಲೆಕ್ಕ ಮುಂದುವರಿತ್ತಾ ಇದ್ದು. ಬಾಳೆ ತುಂಬಾ ಪಲ್ಯಂಗೊ, ಕೋಸಂಬರಿಗೊ, ಪಾಯಸ, ಚಿತ್ರಾನ್ನ, ಇನ್ನೂ ಎಂತದೆಲ್ಲಾ ಇದ್ದೋ ಅದೆಲ್ಲಾ ಬಂದು ಬಿದ್ದಪ್ಪಗ ಅಶನಕ್ಕೆ ಜಾಗೆ ಇಲ್ಲೆ.
    “ಗೋವಿಂದಾ” ಹೇಳಿ ದೊಡ್ಡಕ್ಕೆ ಹೇಳಿದವು. ಅರೆ ಊಟ ಸುರು ಅಪ್ಪನ್ನ ಮೊದಲೇ ಏಳುಸುತ್ತ ಅಂದಾಜಿಯೋ ಹೇಳಿ ಆತು. ಅವರಲ್ಲಿ ಸುರು ಮಾಡ್ಲೆ ಹಾಂಗೆ ಹೇಳುವದು ಹೇಳಿ ಮತ್ತೆ ಗೊಂತಾತು.
    ಪಲ್ಯ ಪುನಃ ವಿಚಾರ್ಸುವ ಕ್ರಮ ಇಲ್ಲೆ. ಇದ್ದರೆ ಅದು ಸುರುವಿಂಗೆ ಬಳುಸಿದ ಐಟಂ ಅಲ್ಲ. ಬಿಸಿ ಪಲ್ಯ ಹೇಳಿ ಬೇರೆಯೇ ತರಕಾರಿ ಪಲ್ಯಂಗೊ.ಸಾರಿನ ಕಮ್ಮಿಲಿ 3 ಸರ್ತಿ ಕೇಳ್ತವು. ಒಂದು ತಲೇಂಗೆ ಬಳುಸಿ ಎತ್ತಿ ಅಪ್ಪಗ ಅಲ್ಲಿಂದಲೇ ಪುನಃ ವಿಚಾರಣೆ. ಆ ತಲೇಲಿ ಕೂದವಂಗೆ ರುಚಿ ನೋಡ್ಲೆ ಪುರುಸೊತ್ತು ಇಲ್ಲೆ. ಸಾರು ಈ ನಮೂನೆ ತಪ್ಪಗ ಇನ್ನು ಇದರಲಿಯೇ ಹೊಟ್ಟೆ ತುಂಬ್ಸೆಕ್ಕಾಯಿಕ್ಕು ಜಾನ್ಸಿ ಅದರಲ್ಲಿಯೇ ಉಂಡೆಯೊ. ಅದಾದ ನಂತರ ಮತ್ತೂ ಬಪ್ಪಲೆ ಸುರು ಆತದ.
    ಗುಳ್ಳ (ಮಟ್ಟಿ ಹೇಳ್ತ ಜಾಗೆ ಇದಕ್ಕೆ ಪ್ರಸಿದ್ಧಿ) ಹುಳಿ ಅಪ್ಪಲೇ ಬೇಕು. ಇದಕ್ಕೆ ಸಜ್ಜಿಲಿ ಬೆಲ್ಲ ಹಾಕಿ, ಸೀವು ಸೀವು ಮಾಡ್ತವು.ಇದಕ್ಕೆ ತೆಂಗಿನ ಕಾಯಿ ಹಾಕಲೆ ಇಲ್ಲೆ. ಎನ್ನ ಹತ್ರಾಣವ ಬದನೆ ಪಾಯ್ಸ ಬಂತು ಚೆನ್ನಾಗಿದೆ ಹೇಳಿ ಹೊಡವಲೆ ಸುರು ಮಾಡಿದ. ಅದಾದ ನಂತ್ರ ಕೊದ್ದೆಲು. ಕಾಯಿ ಹಾಕಿದ ಕೊದಿಲು. ಇನ್ನು ಉಂಬಲೆ ಎಡಿಯದ್ದ ಪರಿಸ್ಥಿತಿ ಎನ್ನದು. ಹೇಂಗೂ ಮೇಲಾರ ಬತ್ತನ್ನೆ, ಅದರಲ್ಲಿ ರೆಜಾ ಉಂಬೊ ಹೇಳಿ ಲೆಕ್ಕ ಹಾಕಿರೆ, ಉಪ್ಪೀನ ಸಿಂಗಿ. ಅದು ಒಂದೊಂದು ಚಂಚ ಬಾಳೆಗೆ ಬಿದ್ದರೆ ಆತು. ಪಾಯ್ಸ ಸ್ವೀಟ್ ಹೇಳಿ ಒಟ್ಟು 5 ಬಗೆ ಇಪ್ಪ ಹಾಂಗೆ ಮಾಡಿತ್ತಿದ್ದವು. ಇದಕ್ಕೆ ರೆಜಾ ಜಾಗೆ ಹೊಂದುಸಿ ಆತು. ಕಷ್ಟ ಆದರೂ ಇಷ್ಟದ್ದರ ಬಿಡ್ಲೆ ಗೊಂತಿಲ್ಲೆ ಅಲ್ಲದಾ !!!
    ಊಟ ದಕ್ಷಿಣೆ 10 ರೂಪಾಯಿ ಬಂತು. ಮದುವೆಗೆ ಬಂದವರಿಗೆ TADA ಕೊಡ್ತಾರೆ ಹೇಳಿದ ಗೆಳೆಯ. ಹಾಂಗೂ ಹೀಂಗೂ ಮಜ್ಜಿಗೆ ಉಂಬಲೆ ಸುರು ಮಾಡುವಾಗ ಆಚ ತಲೇಲಿ ಕೂದವು ಎದ್ದು ಎಂಗಳ ಹಂತಿಲೇ ಸವಾರಿ ಮಾಡಿದವು. ಇದೆಂತ ಕ್ರಮ, ಎಲ್ಲರೂ ಒಟ್ಟಿಂಗೆ ಏಳೆಕ್ಕು ಹೇಳಿ ಗೊಂತಿಲ್ಲೆಯಾ- ಮನಸ್ಸಿಲ್ಲಿ ಬೈಕ್ಕೊಂಡೆಯೊ. ಅವರ ಒಟ್ಟೀಂಗೆ ಎಂಗಳೂ ಕೈ ತೊಳವಲ್ಲಿಗೆ ಓಡಿದೆಯೊ
    ಶ್ರೀಶಣ್ಣ

  4. ಹ್ಮ್…. ಒಳ್ಳೆ ಲೇಖನ.. ಎನ್ನ ಅಭಿಪ್ರಾಯಲ್ಲಿ ಮದುವೆ ಹಾನ್ಗಿರ್ತ ಜಮ್ಬ್ರನ್ಗೊ ಗಮ್ಮತ್ತಾಗಿ ಮಾಡೆಕಾದ್ದದೆ, ಆದರೆ ಒನ್ದು ಲೆಕ್ಕಮೀರಿ ಆಡಮ್ಬರ ತೋರುಸಲೆ ಹೆರಟರೆ, ಅದು ಅಷ್ಟು ಒಳ್ಳೆದು ಹೇಳಿ ಕಾಣ್ತಿಲ್ಲೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×