ಪಾಚ

October 5, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಜಾತಿಯ ಊಟದ ಹಾಂಗೆ ಯಾವದೂ ಆವುತ್ತಿಲ್ಲೆನ್ನೆ ದಾಕ್ಟ್ರೆ ಹೇಳಿ ಸುರು ಮಾಡಿದ° ಪ್ರಕಾಶ° ನಿನ್ನೆ.
ಎಂತಕೆ ಹೇಳಿರೆ,ಅವಂಗೆ ಸುಮ್ಮನೆ ಕೂಪಲೆ ಅರಡಿಯ. ಏನಾರೂ ಮಾಡಿಯೊಂಡಿರೆಕು.
ನಮ್ಮಲ್ಲಿ ಒಂದು ಮಧುಮೇಹದ ಶಿಬಿರ ಮಾಡುವೊ° ಆಗದೊ ಮಾವ ಹೇಳಿ ಕೇಳ್ಲೆ ಬಂದವ°.
ನಮ್ಮ ಜಾತಿಯ ಆಹಾರ ಒಳ್ಳೆದು ಹೇಳಿ ಎಲ್ಲಾ ಜಾತಿಯವೂ ಹೇಳಿಗೊಂಬದು ಇಪ್ಪದೇ.
ಆದರೆ ಹವಿಕರ ಆಹಾರ ಕ್ರಮ ಅಲ್ಲದ್ದೆ ಉಂಬ ಕ್ರಮ ಆನು ನೋಡಿದ್ದದರಲ್ಲಿ ಒಳ್ಳೆದು ಹೇಳುತ್ತದು ಬರೀ ಜಾತಿ ಅಭಿಮಾನಲ್ಲಿ ಅಲ್ಲ. ವೈಜ್ಞಾನಿಕವಾಗಿ ವಿಮರ್ಶೆ ಮಾಡಿದರೂ ನವಗೆ ಗೊಂತಪ್ಪ ವಿಶಯವೇ.
ಈಗಾಣ ಕಾಲದ ನಮ್ಮ ಆಹಾರ ಕ್ರಮ ನಮ್ಮ ಬಾಕಿ ಬದಲಾವಣೆಗಳ ಹಾಂಗೇ ಆಯಿದು. ಎನ್ನ ಪ್ರಾಯದವಕ್ಕೆ ಗೊಂತಿಕ್ಕು, ಒಂದು ಮೂವತ್ತೈದು ನಲ್ವತ್ತು ವರ್ಶದ ಹಿಂದೆ ನಮ್ಮ ಆಹಾರ ಕ್ರಮ ಹೇಂಗಿತ್ತು ಹೇಳಿ.
ನಮ್ಮದು ಅಕ್ಕಿ,ತರಕಾರಿ,ಹಾಲು ಮಜ್ಜಿಗೆ,ತಕ್ಕ ಮಟ್ಟಿಂಗೆ ಹಣ್ಣುಗೊ ಅಲ್ಲದ್ದೆ ರಜ ರಜ ಧಾನ್ಯ ಇಪ್ಪ ಊಟ ತಿಂಡಿ ಅಲ್ಲದೊ?
ಒಂದು ಜೆಂಬ್ರಕ್ಕೆ ಎಂತ ಎಲ್ಲ ಮಾಡುತ್ತವು ಹೇಳಿ ಯೋಚನೆ ಮಾಡಿ.
ಮೂರೋ ನಾಲ್ಕೋ ತಾಳು,ಒಟ್ಟಿಂಗೆ ಅವಿಲು.
ಕೊಡಿ ಬಾಳಗೆ ಬಳುಸಲೆ ಹಸರಿನ ಬೇಳೆ ಕೋಸಂಬ್ರಿ,ಮಸರಿದ್ದರೆ ಚೆಕ್ಕರ್ಪೆ ಕೊಚ್ಚು ಸಳ್ಳಿ/ಬಟಾಟೆ ಗೊಜ್ಜಿ.
ಸಾರಿಂಗೆ ಹಪ್ಪಳ ಬೇಕನ್ನೆ, ಕೊದಿಲು, ಮೇಲಾರ, ಪಾಯಸ, ಮಜ್ಜಿಗೆ ನೀರು(ಮಜ್ಜಿಗೆ ನೀರು ಇಂದುದೇ ಎಂತಕೆ ಬಳುಸುತ್ತದು ಹೇಳಿ ಎನಗರಡಿಯ)
ಮದುವೆಗಳಲ್ಲಿ ಕೂಡಾ ಭಕ್ಶ್ಯ ಎಲ್ಲ ದಿಕ್ಕಿಲ್ಲಿಯೂ ಮಾಡುವ ಕ್ರಮ ಇತ್ತಿಲ್ಲೆನ್ನೆ. ಎಲ್ಲಿಯೋ ತೊಂಬಾ ಪೈಸ ಇಪ್ಪವು ಮಾಡಿಯೊಂಡಿತ್ತವಶ್ಟೆ.
ಅರುವತ್ತರ ದಶಕಲ್ಲಿ ಜೆಂಬ್ರಂಗಳಲ್ಲಿ ಭಕ್ಶ್ಯ ಮಾಡಿರೆ ಅದೊಂದು ಶುದ್ದಿ ಆಗಿಯೊಂಡಿತ್ತು. ಮನಗೆ ಬಂದಿಕ್ಕಿ ಅಪ್ಪನೋ ಅಪ್ಪಚ್ಚಿಯೊ ಹೇಳುಗು ಅದೂ ಒಂದು ದೊಡ್ಡ ಸಂಗತಿಯ ಹಾಂಗೆ,ಅಲ್ಲಿ ಇಂದು ಹೋಳಿಗೆ ಮಾಡಿತ್ತಿದ್ದವು ಹೇಳಿ.
ಆ ಊಟದ ವಿಮರ್ಶೆ ಮಾಡಿರೆ ಗೊಂತಕ್ಕು ನಮ್ಮ ಜಾತಿಯ ಊಟ ಎಂತಕೆ ಒಳ್ಳೆದು ಹೇಳಿ.
ಶರೀರಕ್ಕೆ ಶಕ್ತಿಗೆ ಸಕ್ಕರೆಯ ಅಂಶ,ಸಸಾರಜನಕ,ಕೊಬ್ಬು ಮತ್ತೆ ವಿಟಮಿನ್ ಬೇಕು ಹೇಳಿ ನವಗೆಲ್ಲ ಗೊಂತಿಪ್ಪದೇ.ಹಾಂಗೇ ಹೆಚ್ಚು ಎಣ್ಣೆ,ಸಕ್ಕರೆ ನಮ್ಮ ಶರೀರಕ್ಕೆ ಬೇಡ ಹೇಳ್ತದೂ ಗೊಂತಿಪ್ಪದೇ.
ಅಂಬಗ ನಾಲ್ಕು ಬಗೆ ತಾಳು,ಸಾರು,ಮೆಣಸುಕಾಯಿ ಇದೆಲ್ಲ ಸುಮ್ಮನೆ ಮಾಡುದೊ ಹೇಳಿ ಅಲ್ಲ.
ಅಶ್ಟು ಜೆನ ಬಪ್ಪಗ ಎಲ್ಲೊರೂ ಹೊಟ್ಟೆ ತುಂಬ ಉಣ್ಣೆಕ್ಕಲ್ಲದೊ, ಒಬ್ಬಂಗೆ ಸಾರು ಬೇಡ, ಒಬ್ಬಂಗೆ ಕೊದಿಲು ಆಗ ಹೇಳಿ ಆದರೆ ಅವ° ಉಂಬಲಿಲ್ಯೊ?
ಅದಕ್ಕೆ ಬೇಕಾಗಿ,ಅಲ್ಲದ್ದೆ ಒಂದು ತರಕಾರಿಲಿ ಇಲ್ಲದ್ದ ಸತ್ವ ಇನ್ನೊಂದರಲ್ಲಿಕ್ಕು,ಒಟ್ಟಿಲ್ಲಿ ಎಲ್ಲೊರೂ ಹೊಟ್ಟೇ ತುಂಬಾ ಉಣ್ಣೇಕ್ಕು ಅಲ್ಲದ್ದೆ ಶರೀರಕ್ಕೆ ಬೇಕಾದ ಎಲ್ಲ ಸತ್ವಂಗಳೂ ಸಿಕ್ಕೆಕ್ಕು ಹೇಳ್ತ ಉದ್ದೇಶ.
ಉಂಬಗ ತಡವಾದರೆ ಸಾರಿಲ್ಲಿ ಉಂಡರೆ ಹೊಟ್ಟೆ ಸಮಸ್ಯೆ ಇಪ್ಪವಕ್ಕೆ ತೊಂದರೆ ಹೇಳಿ ಗೊಂತಿಪ್ಪದೇ. ಅದಕ್ಕೆ ಬೇಕಾಗಿ ತಾಳಿಲ್ಲಿ ಊಟ ಸುರು.
ಸುರೂ ಬಳುಸುವಗಳೇ ತುಂಬ ಬಳ್ಸಿರೆ ಬಿಟ್ಟಿಕ್ಕಿ ಏಳ್ತವಲ್ಲದೊ,ಅದಕ್ಕೇ ವಿಚಾರಣೆ,ಪ್ರತಿಯೊಂದು ಬಗೆಯನ್ನೂ ಎರಡ್ಣೆ ಸರ್ತಿ ವಿಚಾರಣೆ ನಮ್ಮ ಜಾತಿಲಿ ಮಾಂತ್ರ ಕಾಂಬ ಕ್ರಮ ಅಲ್ಲದೊ?
ಅದರ ಹಿಂದಂದಲೇ ಅಶನ ವಿಚಾರಣೆ,ಕೊದಿಲು,ಮೇಲಾರ.ಇಶ್ಟಾದ ಮೇಲೆ ಪರಮಾನ್ನ.ಬಾಯಿ ರಜಾ ಹುಳಿ ಖಾರ ಅಪ್ಪಗ ಒಟ್ಟಿಂಗೆ ಸೀವಾಕ್ಕಲ್ಲದೊ!
ಪುನಃ ಮೆಲಾರ ವಿಚಾರಣೆ ಮಾಡಿ ಮಜ್ಜಿಗೆ ಅಶನಲ್ಲಿ ಮುಕ್ತಾಯ.
ಈ ಆಹಾರಲ್ಲಿ ಮನುಶ್ಯಂಗೆ ಬೇಡ ಹೇಳುತ್ತ ಯಾವದೇ ಬಗೆ ಇಲ್ಲೆ. ದಿನ ನಿತ್ಯದ ಅಡಿಗೆಯೇ ಆಗಲಿ,ಉದ್ದು,ಹಸರು ಇತ್ಯಾದಿ ಧಾನ್ಯಲ್ಲಿ ಪ್ರೋಟೀನ್ ,ಒಗ್ಗರಣೆಲಿ ಅಥವಾ ತುಪ್ಪಲ್ಲಿ ಕೊಬ್ಬು,ಆಶನಲ್ಲಿ ಶರ್ಕರ ಪಿಷ್ಟ ಎಲ್ಲವೂ ಇದ್ದು.
ಹೊರುದ ತಿಂಡಿ ದಿನಾಗಲೂ ಇಲ್ಲವೇ ಇಲ್ಲೆ.ಅಲ್ಲದೋ?
ಇಂದು ಮಾಂತ್ರ ನಾವು ಬೇರೆಯವರ ಅನುಕರಣೆ ಮಾಡಿ ಎರಡು ಮೂರು ಬಗೆ ಪಾಯಸ,ಪಲಾವ್(ಸರೀ ಮಾಡಲೆ ಅರಡಿಯದ್ದ ಅಡಿಗೆಯವಾದರೂ!) ಪೋಡಿ, ಮಿಕ್ಸ್ಚರ್, ಎರಡು ಬಗೆ ಭಕ್ಶ್ಯ, ಉದಿಯಪ್ಪಗಾಣ ತಿಂಡಿಗುದೇ ಕೇಸರಿ ಭಾತು ಇತ್ಯಾದಿ ಮಾಡಲೆ ಸುರು ಮಾಡಿದ್ದು.
ಆದರೆ ಇಂದು ನವಗೆ ಇದೆಲ್ಲಾ ಮಾಡಲೆ ಅನುಕೂಲ ಇದ್ದು,ತಿಂಬ ಯೋಗ್ಯತೆ ಇಪ್ಪವು ಮಾಂತ್ರಾ ಭಾರೀ ಕಮ್ಮಿ.
ನಮ್ಮ ಅಪ್ಪ ಅಜ್ಜನ ಕಾಲಲ್ಲಿ ಉದಿಯಪ್ಪಗ ಎದ್ದರೆ ಮಧ್ಯಾಹ್ನ ,ಉಂಡಿಕ್ಕಿ ರಜಾ ಕಣ್ಣು ಅಡ್ಡ ಹಾಕಿಕ್ಕಿ ಪುನಃ ಕಸ್ತಲೆ ವರೇಗೆ ದುಡ್ಕೊಂಡಿಪ್ಪಗ ಇಶ್ಟು ತಿಂದು ಆರೋಗ್ಯ ಮಡಿಕ್ಕೊಂಡಿತ್ತಿದ್ದವು.
ನವಗೆ ಇಂದು ಕೆಲಸ ಮಾಡಲೆ ಮೈ ಬಗ್ಗುತ್ತಿಲ್ಲೆ,ಅರ್ಧ ಮೈಲು ಬೈಲಿಲ್ಲಿ ನೆಡವದರ ಬದಲು ಸ್ಕೂಟರಿಲ್ಲಿ ಬೈಕಿಲ್ಲಿ ಹೋಪದು,ಪೇಟೆಲಿಪ್ಪವಾದರೆ ಆಫೀಸಿಲ್ಲಿ ಕೂದೇ ಕೆಲಸ,
ಹೀಂಗಿಪ್ಪಗ ಅನುಕೂಲ ಇದ್ದು ಹೇಳಿ ಸಿಕ್ಕಿದ್ದು ತಿಂದರೆ ಕಸ್ತಲಪ್ಪಗ “ಡಾಕ್ತ್ರು ಮಾವ°,ರಜ ವಾಯು,ಹೊಟ್ಟೆ ಬೇನೆ” ಹೇಳೆಕ್ಕಾದ ಪರಿಸ್ತಿತಿ.ಮತ್ತೆ ಜೆಂಬ್ರಲ್ಲಿ ಹೋಗಿ ಜೀಗುಜ್ಜೆ ಕೊಂಕಣಿಗಳ ಹಾಂಗೆ ಪೋಡಿ ಮಾಡಿದ್ದರ ತಿಂದರೆ ಎಂತಕ್ಕು?
ಎನ್ನ ಅಜ್ಜ ಹೇಳುಗು”ನಿಂಗೊಗೆ ತಿಂಬಲೂ ಎಡಿಯ ದುಡಿವಲೂ ಎಡಿಯ“ಹೇಳಿ.
ಅದರೊಟ್ಟಿಂಗೆ ಇಂದು ಮದಲಾಣ ಹಾಂಗೆ ಮದ್ದು ಹಾಕದ್ದೆ ಬೆಳೆಶಿದ್ದು ಏನೂ ಸಿಕ್ಕದ್ದದು ಸಮಸ್ಯೆಯ ಇನ್ನೂ ಗಂಭೀರ ಮಾಡುತ್ತಾ ಇದ್ದು ಹೇಳುದೂ ಅಶ್ಟೇ ಸತ್ಯ.
ಹಾಂಗಿಪ್ಪಗ ನಾವಿಂದು ನಮ್ಮ ಅಡಿಗೆಯ ಬಗ್ಗೆ ಯೊಚನೆ ಮಾಡೆದದೊ?
ನಮ್ಮೋರು ಮದುವೆಗಳಲ್ಲಿ ತಪ್ಪ ಸಾಮಾನಿನ ಗುಣಮಟ್ಟ ಸರಿಯಾಗಿ ಗಮನಿಸುದು ಕಾಣ್ತಿಲ್ಲೆ ಅಲ್ಲದ್ದೆ ಮಜ್ಜಿಗೆ ನೀರಿನ ಬಿಟ್ಟು ಮಸರು ಬಳಸಲೆ ಸುರು ಮಾಡಿದ್ದವಿಲ್ಲೆ ಇತ್ಯಾದಿ ಇನ್ನೊಂದು ಸರ್ತಿ.
(ಕೇಜಿಮಾವ°)
Dr.K.G.Bhat,M.B;B.S
Palace Road,
VITTAL.-574243,Karnataka
pH;9448850635,9902695250
kgbhatvittal.blogspot.com
ಪಾಚ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ಶ್ರೀಪ್ರಕಾಶ ಕುಕ್ಕಿಲ
  ಶ್ರೀಪ್ರಕಾಶ ಕುಕ್ಕಿಲ

  ..

  [Reply]

  VA:F [1.9.22_1171]
  Rating: 0 (from 0 votes)
 2. Harish Kevala

  Uttama samayochita lekhana, Danyavadagalu doctre..

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಪ್ರಕಾಶ ಕುಕ್ಕಿಲ
  ಶ್ರೀಪ್ರಕಾಶ ಕುಕ್ಕಿಲ

  ವಿಷಯ ಎಲ್ಲ ಸರಿಯಾದ್ದೇ. ಇದೆಲ್ಲ ಬದಲಾವಣೆಗೊ ಕಾಲದ ಮಹಿಮೆ ಅಲ್ಲದೋ?
  ನಾವು ನಾರ್ತ್ ಇಂಡಿಯನ್ ಊಟಕ್ಕೆ ಹೊಂದಿಗೊಂಡ ಹಾಂಗೆ ನಾರ್ತ್ ಇಂಡಿಯನ್ಸ್ ನಮ್ಮ ಊಟಕ್ಕೆ ಹೊಂದಾಣಿಕೆ ಆಗದ್ದದು ಬೇಜಾರಿನ ವಿಷಯ.ಇರಲಿ ಬಿಡಿ. ನಮ್ಮ ಅನ್ಪತ್ಯದ ಹಿಂದಾಣ ದಿನ ಮೇಲಾರಕ್ಕೆ ಕೊರವ ಗೌಜಿಲಿ ಎಷ್ಟೋ ಸರ್ತಿ ತರಕಾರಿ ತೊಳವದೇ ಮರೆತ್ತವು. ಆದರೂ ಒಂದರಿ ಆದರೂ ಫುಡ್ ಪೋಯಿಸನ್ ಆದ್ದು ಆನು ಕೇಳಿದ್ದಿಲ್ಲೆ. ಇದೆಂತರಂದಾಗಿಯಪ್ಪ!! ಎಂತ ಇದ್ದರೂ ಕೆಜಿ ಮಾವನ ಊಟದ ಬೋಣಿ ಲಾಯಿಕಾಯಿದು. ಸುರುದು ಉಂಡಾಂಗಾತು.

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ
  Krishna Mohana Bhat

  ಒ೦ದಲ್ಲ ಮತ್ತು ಒ೦ದಷ್ಟು ಪುಟ೦ಗಳೇ ಬೇಕಾರು ಇದು ಬರವಲೇ ಬೇಕಾದ ವಿಷಯ ಹೇಳಿ ಎನ್ನ ಅಬಿಪ್ರಾಯ.ಒ೦ದು ರಜ ದಿನ ತೆಕ್ಕೊ೦ಡಾದರು ಒ೦ದು ಲೇಖನ ಬರೆಯಿ.ಬಯಲಿನೋರಿ೦ಗೆಲ್ಲ ಉಪಕಾರ ಆಗಲಿ.ಸಾಕಷ್ಟು ತಯಾರಿ ಯೊಟ್ಟಿ೦ಗೇ ಲೇಖನ ಬರಳಿ.ಪ್ರೀತಿಯೊಟ್ಟಿ೦ಗೆ ಒಪ್ಪ೦ಗಳೂ.

  [Reply]

  VA:F [1.9.22_1171]
  Rating: 0 (from 0 votes)
 5. ಹಳೆಮನೆ ಅಣ್ಣ

  ಕೆ.ಜಿ. ಮಾವನ ಲೇಖನ ಲಾಯ್ಕಾಯಿದು. ಹವೀಕರ ಊಟ ಕ್ರಮಪ್ರಕಾರವಾದ ಊಟ ಹೇಳಿ ಎನಗೆ ಕಾಣುತ್ತು. ಬ್ರಾಹ್ಮಣರಲ್ಲೇ ಬೇರೆ ಪಂಗಡದವು ಮಾಡ್ಸುತ್ತ ಐಟಮ್ ಲೆಕ್ಕ ಹಾಕಿದರೆ, ನೋಡಿದರೆ ನಮ್ಮ ಆರೋಗ್ಯ ಹೇಂಗಪ್ಪ ಕಾಪಾಡುದು ಹೇಳ್ತಷ್ಟು ಆವುತ್ತು. ಹೆರಾಣವರ ಸಂಗತಿ ಬಿಡಿ. ಅವರದ್ದರಲ್ಲಿ ಕ್ರಮವೇ ಇಲ್ಲೆ. ಬಫ಼ೆ ಊಟದ ಬಗ್ಗೆ ಎನ್ನ ತಕರಾರು ಎಂತದೂ ಇಲ್ಲೆ. ಅದು ಕಾಲಕ್ಕೆ ತಕ್ಕ ಕೋಲ ಅಷ್ಟೇ. ಅರ್ಧ, ಮುಕ್ಕಾಲು ಗಂಟೆ ಹಂತಿಲಿ ಕೂದೊಂಡು ಊಟ ಮಾಡುವಷ್ಟು ವ್ಯವಧಾನ ಈಗಾಣ ಆರತ್ರೂ ಇಲ್ಲೆ. ಎನಗೂ. ಕಾರ್ಯಕ್ರಮಕ್ಕೆ ಪಟ ತೆಗವಲೆ ಹೋದರೆ ಹೇಂಗಾರೂ ಊಟ ಸಿಕ್ಕುವಾಗ ಗಂಟೆ 3 ಆವುತ್ತು. ಮತ್ತೆ ಬಫ಼ೆ ಊಟದ ಕಡೇಂಗೆ ಹೋಪದು. ಅಲ್ಲಿ ಏನಾದರೂ ರಜ್ಜ ಇದ್ದದರ ತಿಂಬದು, ವಾಪಸ್ ಬಪ್ಪದು. ಕೆಲಾವು ಸರ್ತಿ ಈ ಸ್ವೀಟ್ ಇತ್ಯಾದಿ ತಿಂಬಲೇ ಇಲ್ಲೆ. ಅಲ್ಲ, ಜೆಂಬ್ರದ ಸೀಸನ್‌ಲ್ಲಿ ಏವಾಗಲೂ ಸ್ವೀಟ್ ತಿಂದರೆ ಹೇಂಗಕ್ಕು? ಈಗ ಸಣ್ಣ ಪ್ರಾಯದವಕ್ಕೇ ಎಂತೆಲ್ಲ ಸೀಕುಗೊ ಬತ್ತಡ.

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ
  Krishna Mohana Bhat

  ಡಾಕ್ಟ್ರು ಎ೦ತ ಹೇಳ್ತವು ಗೊ೦ತಿಲ್ಲೆ ಆದರೆ ಹರೀಶೋ ಈ ಪ್ರಾಯಲ್ಲೇ ತಿನ್ನೆಕಾದ್ದು ನೀನೆಲ್ಲ ಈಗಳೇ ತಿ೦ಬಲೆ ಹೆದರೀರೆ ಎನ್ನ ಹಾ೦ಗಿಪ್ಪವರ ಗೆತಿ ಎ೦ತಪ್ಪ.ತಿ೦ಬ ಪ್ರಾಯಲ್ಲಿ ತಿ೦ಬಲೇ ಬೇಕು ಅದರ ಜೀರ್ಣಿಸುತ್ತ ಹಾ೦ಗಿಪ್ಪ ಕೆಲಸ ಮಾಡೆಕು ಅದೇ ಹಿ೦ದಾಣವರ ಆರೋಗ್ಯದ ಗುಟ್ಟು. ಒ೦ದು ಸಾದ್ಯ ಇದ್ದಷ್ಟು ಒ೦ದೇ ಸಮಯಕ್ಕೆ ತಿನ್ನೆಕು.ಮತ್ತೆ ಜೆ೦ಬಾರದ ಊಟಲ್ಲಿಯೂ ಕೋರ್ಟಿ೦ಗೆ (ಈಗ ಕಮ್ಮಿ ಆಯಿದು) ಹೋಪದರಲ್ಲಿಯೂ ಹವೀಕರ ಬಿಟ್ಟೇ ಬಾಕಿಪ್ಪವು.ಜೇ೦ಬಾರಕ್ಕೆ ಹೋಗಿಪ್ಪಾಗ ಬಫೆಲಿ ಆದರೂ ಹ೦ತೀಲಿ ಆದರೂ ಎಲ್ಲಾ ಬಗೆ ತಿ೦ದು ನೋಡ್ಲೇ ಬೇಕು.ನಮ್ಮ ಆಹಾರ ಪದ್ದತೀಲಿ ಒ೦ದರಲ್ಲಿ ಬತ್ತ ದೋಷವ ಮತ್ತೊ೦ದರಲ್ಲಿ ತೆಗವಲೆಡಿತ್ತು ಹಾ೦ಗಾಗಿ ಊಟ ಸರೀ ಮಾಡೆಕು.ಆನು ಈ ಪ್ರಾಯಲ್ಲಿಯೂ ಊಟಲ್ಲಿ ಯಾವದೇ ಬಗೆ ಬಿಡ್ಲಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಆನು ಮದಲೇ ಹೇಳಿದ್ದೆ ನವಗೆ ಈಗ ತಿಂಬಲೂ ಅರಡಿಯ,ಜೀರ್ಣ ಮಾದಲೂ ಅರಡಿಯ ಹೇಳಿ.ಜೀರ್ಣ ಮಾಡಲೆ ಎಡಿಗಾರೆ ತಿನ್ನದ್ದೆ ಇಪ್ಪ ಅಗತ್ಯ ಇಲ್ಲೆನ್ನೆ.
  ಎನ್ನ ಅಜ್ಜ ಹೇಳುಗು ಜವ್ವನಿಗರ ಬೊಂಡ ಕುಡುದು ಕಾಯಿಯ ಅವಲಕ್ಕಿಯೊಟ್ಟಿಂಗೆ ತಿಂದು ಜೀರ್ಣ ಮಾಡೆಕ್ಕು ಹೇದು.
  ನವಗೆ ಎಡಿಗೋ?

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಪ್ರಕಾಶ ಕುಕ್ಕಿಲ
  ಶ್ರೀಪ್ರಕಾಶ ಕುಕ್ಕಿಲ

  ಏ! ಸತ್ಯ ಹೇಳ್ತೆ. “ಪಾಚ” ಕ್ಕೆ ಬಂದ ಒಪ್ಪಂಗಳ ನೋಡುವಾಗಳೇ ಗೊಂತಾವುತ್ತಿಲ್ಲೆಯೋ ನಮ್ಮೋರು ಎಷ್ಟು ಊಟ ಪ್ರಿಯರು ಹೇಳಿ!. ಆನಂತೂ ಹೇಳಿಕೆ ಬಂದದರ ಒಂದೂ ಬಿಡಲೆ ಇಲ್ಲೆ. ಎಂತ ಕೆಲಸ ಇದ್ದರೂ ನಂತ್ರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಶಾಂತತ್ತೆಮುಳಿಯ ಭಾವಬೊಳುಂಬು ಮಾವ°ಅನುಶ್ರೀ ಬಂಡಾಡಿಗಣೇಶ ಮಾವ°ನೆಗೆಗಾರ°ಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡುಪುಣಚ ಡಾಕ್ಟ್ರುಪ್ರಕಾಶಪ್ಪಚ್ಚಿವೇಣೂರಣ್ಣಕಜೆವಸಂತ°ತೆಕ್ಕುಂಜ ಕುಮಾರ ಮಾವ°ವಿಜಯತ್ತೆಕೆದೂರು ಡಾಕ್ಟ್ರುಬಾವ°ಪುತ್ತೂರುಬಾವಅನಿತಾ ನರೇಶ್, ಮಂಚಿಒಪ್ಪಕ್ಕಜಯಶ್ರೀ ನೀರಮೂಲೆಮಾಷ್ಟ್ರುಮಾವ°ದೇವಸ್ಯ ಮಾಣಿಬಂಡಾಡಿ ಅಜ್ಜಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ