Oppanna.com

ಪಿತೃಪಕ್ಷ -ಮಹಾಲಯ ಅಮಾವಾಸ್ಯೆ.

ಬರದೋರು :   ಗಣೇಶ ಮಾವ°    on   07/10/2010    7 ಒಪ್ಪಂಗೊ

ಗಣೇಶ ಮಾವ°

ಸಾಮಾನ್ಯವಾಗಿ ನಮ್ಮಲ್ಲಿ ಪಿತೃಗ ತೀರಿ ಹೋದ ದಿನವ ತಿಥಿ (ಶ್ರಾದ್ಧ) ಹೇಳಿ ಮಾಡುತ್ತವು .
ಒಂದು ವೇಳೆ ಶ್ರಾದ್ಧ ಮಾಡ್ಲೆ ಆಗದ್ದೆ ಇದ್ದಲ್ಲಿ ಅಥವಾ ಪ್ರಕೃತಿಯ ವಿಕೋಪಕ್ಕೋ, ಅಪಘಾತಕ್ಕೋ ತುತ್ತಾಗಿ ತೀರಿ ಹೋದವರ ದಿನ ಗೊಂತಾಗದ್ದೇ ಇದ್ದಲ್ಲಿ, ಮಹಾಲಯ ಅಮಾವಾಸ್ಯೆಯ ದಿನ ಅವರ ಹೆಸರಿಲಿ ಮಾಡುವ ದಾನಂಗ ಅವಕ್ಕೆ ನೇರವಾಗಿ ಸೇರುತ್ತು ಹೇಳಿ ಹೇಳ್ತವು ಬಟ್ಟಮಾವ..

ಪಿತೃಗ ತೀರಿಹೋದ ಮಾಸ-ದಿನಲ್ಲಿ ಶ್ರಾದ್ಧ ಮಾಡಿದರೂ ಪಿತೃ ಪಕ್ಷಲ್ಲಿ ಎಂಥಕೆ ನಮ್ಮಲ್ಲಿ ಅಷ್ಟಗೆ ಹೇಳಿ ಮಾಡ್ತವು?ಹೇಳುವ ಪ್ರಶ್ನೆ ಬಪ್ಪದು ಸಹಜ..
ಈ ದಿನಲ್ಲಿ ಪಿತೃದೇವತೆಗಳ ಹೆಸರಿಲಿ ಮಾಡಿದ ದಾನ ಅವಕ್ಕೆ ನೇರವಾಗಿ ತಲುಪಲಿ ಹೇಳಿ ಯಮ ವರ ಕೊಟ್ಟಿದಡ .
ಭಾದ್ಯಸ್ಥರಿರಲಿ ಇಲ್ಲದಿರಲಿ, ಅವರ ಹೆಸರಿಲಿ ಮಹಾಲಯದಂದು ನಾವು ಮಾಡುವ ಅನ್ನದಾನ ಅವರ ಆತ್ಮಕ್ಕೆ ಶಾಂತಿಯ ಕೊಡುತ್ತು ಹೇಳುವ ನಂಬಿಕೆ. ಪಿತೃಕಾರ್ಯ ಬಹಳ ಶ್ರೇಷ್ಠ .

ಪಿತೃ ಪಕ್ಷವು ಚಾಲ್ತಿಗೆ ಬಪ್ಪ ಹಿಂದೆ ಒಂದು ಕಥೆ ಇದ್ದು.
ಮಹಾಭಾರತದ ದುರಂತ ನಾಯಕ ಕರ್ಣ ‘ದಾನ ಶೂರ’ ಹೇಳಿಯೇ ಪ್ರಸಿದ್ಧ .
ಇಹಲೋಕದ ಜೀವನ ಮುಗಿಸಿ ಹೋದ ಅವಂಗೆ ಪರಲೋಕಲ್ಲಿ ಅವ ಮಾಡಿದ ದಾನದ ನೂರು ಪಟ್ಟು ಕೊಟ್ಟವಡ .
ಅವಂಗೆ ಅಲ್ಲಿ ಸಿಕ್ಕಿದ್ದೆಲ್ಲಾ ಬರೀ ಚಿನ್ನ, ಬೆಳ್ಳಿ ಇತ್ಯಾದಿ. ಅಷ್ಟೈಶ್ವರ್ಯ ಅವನ ಮುಂದೆ ಇದ್ದರೂ ತಿಂಬಲೆ ಏವದೂ ಎಡಿಗಾಯಿದಿಲ್ಲೆ! ಎಂಥಕೆ ಹೇಳಿರೆ ಜೀವಿತ ಕಾಲಲ್ಲಿ ಅವ ಇಂತಹ ದಾನಂಗಳನ್ನೇ ಮಾಡಿದ್ದನೇ ಹೊರತು ಅನ್ನದಾನ ಮಾಡಿದ್ದಾ ಇಲ್ಲೆಡ !!

ತಿಂಬಲೆ ಹೊಟ್ಟೆಗಿಲ್ಲದ್ದ ಮೇಲೆ ಐಶ್ವರ್ಯ ಮಡಿಕ್ಕೊಂಡಾದರೂ ಎಂತ ಮಾಡ್ಳಕ್ಕು? ಹಾಂಗಾಗಿ ಕರ್ಣ, ಯಮನ ಪ್ರಾರ್ಥನೆ ಮಾಡಿ, ಹದಿನಾಲ್ಕು ದಿನದ ಕಾಲ ಭೂಮಿಗೆ ಹೋಗಿ ಬಪ್ಪಲೆ ಅನುಮತಿ ಬೇಡಿದ.
ಅನುಮತಿ ಸಿಕ್ಕ ಅವ, ಭೂಮಿಗೆ ಬಂದು,ಒಂದು ಮಾಸಲ್ಲಿ ಏವಾಗ ಎರಡು ಅಮಾವಾಸ್ಯೆ ಬತ್ತೋ ಆ ಹದಿನಾಲ್ಕು ದಿನಂಗಳ ಕಾಲ ವಿಪ್ರ ಭೋಜನ,ಪಾಪದವಕ್ಕೆ ಅಶನ -ನೀರು ದಾನ ಮಾಡಿ ಪುಣ್ಯ ಸಂಪಾದನೆ ಮಾಡಿ ಪರಲೋಕಕ್ಕೆ ಬಂದ .
ಆ ಹದಿನಾಲ್ಕು ದಿನಂಗಳ ಸೇರ್ಸಿ ಮಹಾಲಯವೂ(ಅಮಾವಾಸ್ಯೆ) ಸೇರಿ ‘ಪಿತೃ ಪಕ್ಷ‘ಹೇಳಿ ಆತು..

ಪಿತೃ ಪಕ್ಷಲ್ಲಿ ಪಿತೃಗ ಕಾಲವಾದ ದಿನಕ್ಕೆ ಅನುಗುಣವಾಗಿ ಜಲ/ತಿಲ ತರ್ಪಣ, ತಿಥಿ ಅಥವಾ ಶ್ರಾದ್ಧ ಮಾಡ್ತವು ಅಥವಾ ಅಮಾವಾಸ್ಯೆಯಂದೂ ಮಾಡ್ತವು.
ಇದಕ್ಕೆ ಪಾರ್ವಣ ಶ್ರಾದ್ಧ ಹೇಳಿಯೂ ಹೇಳ್ತವು. ಜನನ-ಮರಣಕ್ಕೆ ಹೇಂಗೆ ಜಾತಿ ಭೇದ ಇಲ್ಲೆಯೋ ಹಾಂಗೆ ಪಿತೃ ಕಾರ್ಯಕ್ಕೂ ಜಾತಿ-ಭೇದ ಇಲ್ಲೆ .
ಹಿಂದೂ ಮತಕ್ಕೆ ಸೇರಿದ ಎಲ್ಲೋರು ಪಿತೃಕಾರ್ಯ ಮಾಡ್ಲೆ ಅರ್ಹನಾದ ಪ್ರತಿಯೊಬ್ಬನೂ ಅವರದ್ದೇ ಆದ ಆಚಾರಂಗಳ ಮೂಲಕ ಪಿತೃಗಕ್ಕೆ ವಂದಿಸುತ್ತವು .
ಮಹಾಲಯದ ಅಷ್ಟಗೆಲಿ ಒಟ್ಟು ೪೮ ಜನಂಗೊಕ್ಕೆ ಪಿಂಡ ಪ್ರದಾನ ಮಾಡ್ಲೆ ಇದ್ದಡ. ಈ ಹದಿನೈದು ದಿನಂಗಳ ಸಮಯಲ್ಲಿ ಬೇರೆ ಯಾವ ಶುಭ ಕಾರ್ಯಂಗಳನ್ನೂ ಮಾಡ್ತ ಪದ್ಧತಿ ಇಲ್ಲೆ .

ಮಹಾಲಯ ಅಮಾವಾಸ್ಯೆಯ ದಿನ ಪಿತೃಗ ಪರಲೋಕಂದ ಇಹಲೋಕಕ್ಕೆ ಬಂದು ತಮ್ಮ ವಂಶಸ್ತರ ಮನಗೆ ಬತ್ತವು ಹೇಳುವ ನಂಬಿಕೆ..
ಪಿತೃಪಕ್ಷಲ್ಲಿ ಪಿತೃಗಕ್ಕೆ ಮಾಡುವ ಶ್ರಾದ್ಧ ‘ಗಯಾ’ಕ್ಷೇತ್ರಲ್ಲಿ ಮಾಡಿದಷ್ಟೇ ಪುಣ್ಯ ಹೇಳಿ ಹೇಳ್ತವು ಶಾಸ್ತ್ರಿ ಮಾವ..
ಎಲ್ಲ ದಾನಕ್ಕೂ ಅನ್ನದಾನ ಬಹಳ ಮುಖ್ಯ. ಜೀವನದ ಮೂಲ ಆಧಾರವೇ ಆಹಾರ. . ಹಸಿದ ಹೊಟ್ಟೆಯ ಮುಂದೆ ವೇದಾಂತ ಹೇಳಿರೆ ಪ್ರಯೋಜನ ಖಂಡಿತಾ ಇಲ್ಲೆ!!
ಪರಮಾತ್ಮನ ತಿಳಿವಲೆ ದೇಹ ಬೇಕು. ಆ ದೇಹವ ಕಾಪಾಡ್ಲೆ ಆಹಾರ ಬೇಕು. ಭಗವಂತ ನವಗೆ ಕೊಟ್ಟ ಆಹಾರವ ಇನ್ನೊಬ್ಬರಿಂಗೂ ಹಂಚಿತಿಂಬ .
ಅನ್ನದಾನದ ಪುಣ್ಯ ಇಹಲೋಕಲ್ಲೂ, ಪರಲೋಕಲ್ಲೂ ಅದರ ಫಲ ಸಿಕ್ಕುತ್ತು ಹೇಳಿ ಒಂದು ಶ್ಲೋಕವ ಬಟ್ಟಮಾವ ಹೇಳಿದವು.

ಆಹಾರಾರ್ಥಂ ಕರ್ಮ ಕುರ್ಯಾದನಿದ್ಯಂ
ಕುರ್ಯಾದಾಹಾರಂ ಪ್ರಾಣಸಂರಕ್ಷಣಾರ್ಥಂ
ಪ್ರಾಣ ರಕ್ಷ್ಯಾಸ್ತತ್ವ ಜಿಜ್ಞಾಸನಾರ್ಥಂ
ತತ್ವಂ ಜಿಜ್ಞಾಸ್ಯಂ ಯೇನ ಭೂಯೋನ ದು:ಖಂ

7 thoughts on “ಪಿತೃಪಕ್ಷ -ಮಹಾಲಯ ಅಮಾವಾಸ್ಯೆ.

  1. ವಾ ವ್ಹಾ ಗಣೇಶ ಮಾವ ಮಹಾಲಯದ ಬಗ್ಯೆ ಭಾರೀ ಒಳ್ಳೆ ಲೇಖನ.ಕರ್ಣನ ಕತೆ ಅ೦ತೂ ಎಷ್ಟೋ ಜನಕ್ಕೆ ಗೊ೦ತಿಲ್ಲದ್ದದು.ಇ೦ದು ಮನಗೆ ಬ೦ದವ೦ ಆರೆ ಇರಲಿ ಅವ೦ಗೆ ಆಸ್ರಿ೦ಗೆ ಕೇಳುವ ಅಭ್ಯಾಸವೇ ನವಗೆ ಇಲ್ಲದ್ದೆ ಆಯಿದು.ಜೆನ ನೋಡಿ ಆಸ್ರಿ೦ಗೆ ಕೇಳುವದು.ಎಡಿಗಾರೆ ಹೆರಾ೦ದಲೇ ಕಳುಸಲೆ ನೋಡುವದು ಸಾಮಾನ್ಯ.ಎನ್ನ ಅಪ್ಪ೦ ಹೇಳುಗು ಮಧ್ಯಾನ್ನ ನಮ್ಮ ವಿರೋಧಿಯೇ ಬ೦ದರೂ ಊಟ ಹಾಕೆಕು ಹೇಳಿ ಹಾ೦ಗೆ ಮನಗೆ ಆರೇ ಬರಳಿ ಕೂರಿ ಆಸ್ರಿ೦ಗೆ ಬೇಕೊ ಹೇಳಿ ಕೇಳೇಕು ಹೇಳಿ.ಎಲ್ಲ್ಲಿಯಾದರು ಇದು ತಪ್ಪಿ ಹೋದರೆ ಅಪ್ಪನ ಉಗ್ರ ನರಸಿ೦ಹ ಮೂರ್ತಿಯ ನೋಡಿದವು ಎ೦ಗೊ೦.ಈಗ ಈ ಲೇಖನ೦ದಾಗಿ ಅನ್ನ ದಾನದ ಮಹತ್ವ ಗೊ೦ತಾತದ.ಒಪ್ಪ್೦ಗಳೊಟ್ಟಿ೦ಗೆ

  2. ಮಹಾಲಯ ಅಮಾವಾಸ್ಯೆ ಬಗ್ಗೆ ವಿವರ ಸಹಿತ ಒಳ್ಳೆ ಲೇಖನ. ಕರ್ಣನ ಕಥೆ ಎನಗೆ ಹೊಸತ್ತೇ. ಗಣೇಶ ಮಾವನ ಬರವಣಿಗೆಲಿ ಒಳ್ಳೆ ಒಳ್ಳೆ ವಿಚಾರಂಗೊ ಇದ್ದೇ ಇರುತ್ತು. ಧನ್ಯವಾದಂಗೊ.

  3. ಪಿತೃ ಪಕ್ಷದ ವಿವರಂಗೊ ಕೊಟ್ಟದು ಸಮಯೋಚಿತವಾಗಿ ಲಾಯಿಕ ಆಯಿದು. ಧನ್ಯವಾದಂಗೊ ಗಣೇಶಂಗೆ

  4. ಮಾವಾ, ಮಾಹಿತಿ ಸರಿಯಾಗಿ ಕೊಟ್ಟಿದಿ,ಧನ್ಯವಾದ.
    ಕರ್ಣನ ಕಥೆ ಕೇಳಿ ಆಶ್ಚರ್ಯ ಆತು,ಸಂದರ್ಭಕ್ಕೆ ಸರಿಯಾಗಿದ್ದು.

  5. ಲೇಖನ ಲಾಯ್ಕ ಬಯಿಂದು ,ತುಂಬಾ ಉಪಯುಕ್ತ ಮಾಹಿತಿಗ ಇದ್ದು .. ದನ್ಯವಾದ .

    ಮಹಾಲಯದ ಅಷ್ಟಗೆಲಿ ಒಟ್ಟು ೪೮ ಜನಂಗೊಕ್ಕೆ ಪಿಂಡ ಪ್ರದಾನ ಮಾಡ್ಲೆ ಇದ್ದಡ.=>ಅವು ಯಾರು ಯಾರು?

      1. ತಾತಾಂಬಾತ್ರಿತಯಂ ಸಪತ್ನ ಜನನೀ ಮಾತಾಮಹಾದಿ ತ್ರಯಂ!
        ಸಸ್ತ್ರೀ ಸ್ತ್ರೀತನಯಾದಿ ತಾತಜನನೀ ಸ್ವಭ್ರಾತರ: ಸಸ್ತ್ರಿಯ:!!
        ತಾತಾಂಬಾತ್ಮ ಭಗಿನ್ಯಪತ್ಯಧವಯುಗ್ಜಾಯಾ ಪಿತಾ ಸದ್ಗುರು:!
        ಶಿಷ್ಯಾಪ್ತಾ:ಪಿತರೋ ಮಹಾಲಯವಿಧೌ ತೀರ್ಥೆ ತಥಾ ತರ್ಪಣೇ!!

        ಅಪ್ಪ -ಅಜ್ಜ -ಅಜ್ಜನ ಅಪ್ಪ
        ಅಬ್ಬೆ-ಅಜ್ಜಿ-ಅಜ್ಜನ ಅಬ್ಬೆ=ಇದಿಷ್ಟು ಮನೆ ಹೊಡೆ

        ಅಬ್ಬೆಯ ಅಪ್ಪ-ಈ ಅಪ್ಪನ ಅಪ್ಪ-ಅವರ ಅಪ್ಪ
        ಅಬ್ಬೆಯ ಅಬ್ಬೆ -ಅಪ್ಪನ ಅಬ್ಬೆ -ಅವರ ಅಬ್ಬೆ =ಇದಿಷ್ಟು ಅಜ್ಜನ ಮನೆ ಹೊಡೆ

        ಇನ್ನು ಎರಡೂ ವಿಭಾಗಲ್ಲಿ ಎರಡನೇ ಮದುವೆ ಆದ ಮಾತೃ ವರ್ಗಕ್ಕೆ(ಅವಶ್ಯ ಇದ್ದರೆ ಮಾತ್ರ)
        ಈ ಕೆಳಾನದ್ದು ಕೂಡಾ ಅಗತ್ಯ ಇದ್ದರೆ ಮಾತ್ರ :-
        ತನ್ನ ಹೆಂಡತಿ ಮಕ್ಕ
        ಅಪ್ಪನ ಅಣ್ಣ ತಮ್ಮಂದ್ರು,ಅವರ ಹೆಂಡತಿ ಮಕ್ಕ
        ಸೋದರಮಾವ,=ಅಣ್ಣ ತಮ್ಮಂದ್ರು ,ಅವರ ಹೆಂಡತಿ ಮಕ್ಕ
        ತನ್ನ ಅಣ್ಣ ತಮ್ಮಂದ್ರು ,ಅವರ ಹೆಂಡತಿ ಮಕ್ಕ
        ಸೋದರತ್ತೆ,=ಮಾವ,ಮಕ್ಕ
        ಅಬ್ಬೆಯ ಅಕ್ಕ ತಂಗೆಕ್ಕೋ,ಅವರ ಮಕ್ಕ
        ತನ್ನ ಅಕ್ಕ -ತಂಗೆ=ಅವರ ಗೆಂಡ ಮಕ್ಕ
        ಹೆಂಡತಿಯ ಅಪ್ಪ,ಅಬ್ಬೆ
        ಹೆಂಡತಿಯ ಅಣ್ಣ ತಮ್ಮಂದ್ರು ,ಅವರ ಹೆಂಡತಿಯೋಕ್ಕ
        ಕುಲಪುರೋಹಿತ,ಪಾಠ ಹೇಳಿದ ಗುರು,ಜೀವನಲ್ಲಿ ಕಷ್ಟ ಸುಖಲ್ಲಿ ಭಾಗಿಯಪ್ಪ ಗೆಳೆಯ, ವಿದ್ಯಾರ್ಥಿ,ತನ್ನ ಹೆಂಡತಿ,
        ಇನ್ನು ನಮ್ಮ ಗೋಚರಕ್ಕೆ ಬಾರದ್ದ ವಿಭಾಗಕ್ಕೆ :-
        ಜ್ಞಾತಾ ಜ್ಞಾತಾದಿ ಸಮಸ್ತ ಪಿತೃಗ,ತನ್ನ ಹೆಸರಿನವ,ಭೃತ್ಯ=ಕೆಲಸದವು,ಅಮಾತ್ಯ=ಮಂತ್ರಿ,ಈಗಾಣ ಕಾಲಲ್ಲಿ ಸಲಹೆಗಾರ,ಹಿತೈಷಿ, ಆಪತ್ಕಾಲಲ್ಲಿ ರಕ್ಷಣೆಗೆ ಬಂದ ಯಾವುದೇ ವ್ಯಕ್ತಿ,ತನ್ನ ಗೋತ್ರದವ
        ಇಷ್ಟು ಜನ ಪಿಂಡ ಭಾಗಿಗ ಹೇಳಿ ಪಲ್ಲತ್ತದ್ಕ ಪರಮೇಶ್ವರ ಭಟ್ರು ಹೇಳಿದವು.ಹೆಚ್ಚಿನ ವಿವರಕ್ಕೆ ಅವು ಬರದ ಬೋಧಾಯನೋಕ್ತ ಶ್ರಾದ್ಧ ಪ್ರಯೋಗ ಮಾರುಕಟ್ಟೆಲಿ ಸಿಕ್ಕುತ್ತು..ಆಸಕ್ತರು ಅದರ ಪ್ರಯೋಜನ ಪಡಕ್ಕೊಳ್ಳಿ..
        ಅದೆಲ್ಲ ಸರಿ.ಈ ಭಾರತೀಯ ಹೇಳಿರೆ ಆರು?ನಿಂಗಳ ಪರಿಚಯ ಬೈಲಿಲಿ ಹೇಳುವಿರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×