ಪೊಸವಣಿಕೆ ಚುಬ್ಬಣ್ಣನ ಹೊಸಹೊಸ ಪಟಂಗೊ..

ಹ್ಮ್, ನಿಂಗೊಗೆ ಪೊಸವಣಿಕೆ ಚುಬ್ಬಣ್ಣನ ಗುರ್ತ ಇದ್ದೋ – ಸಂಶಯ.
ಎಂತ್ಸಕ್ಕೇ ಹೇಳಿತ್ತುಕಂಡ್ರೆ, ಅವರ ಮೂಲ ನಮ್ಮದೇ ಊರಿನ ಪೊಸವಣಿಕೆಲೇ ಆದರೂ ಅವು ಅಲ್ಲಿಲ್ಲೆ ಈಗ.
ಬೆಂಗುಳೂರಿನ ಯೇವದೋ ಹೆಸರುಹೋದ ಕಂಪೆನಿಲಿ ಇಂಜಿನಿರು ಆಗೆಂಡು ಮಲೇಶಿಯ, ಸಿಂಗಾಪುರ, ಕೌಲಾಲಂಪುರ – ಹಾಂಗೆ ಹೀಂಗೆ ತಿರುಗೆಂಡು ಇಪ್ಪದು ಇವರ ಕಾರ್ಯಕ್ಷಮತೆ ತೋರುಸುತ್ತು.
ಯೇವ ಊರಿಂಗೆ ಹೋದರೂ ನಿತ್ಯಸಂದ್ಯಾವಂದನೆ, ಭಸ್ಮಧಾರಣೆ ಬಿಟ್ಟಿದವಿಲ್ಲೆ- ಅದು ಅವರ ಸಂಸ್ಕಾರವ ತೋರುಸುತ್ತು.!!!

ಪಟ ತೆಗವದು ಇವರ ನೆತ್ತರಿಲೇ ಬಯಿಂದು. ಇವರ ಅಪ್ಪ ಮದಲಿಂಗೇ ಚಳಿಯೂರು ಮಡಿಕೇರಿಗೆ ಹೋಗಿ, ಅಲ್ಲಿ ಪಟತೆಗೆತ್ತ ಅಂಗುಡಿ ಮಡಗಿದ್ದವು.
ಅದೇ ನೆತ್ತರು ಇವರ ಮೈಲಿಯುದೇ ಹರಿತ್ತ ಕಾರಣ ಸಣ್ಣ ಇಪ್ಪಗಳೇ ಇವಕ್ಕುದೇ ಪಟತೆಗವದು ಹೆಚು ಕೊಶಿ!

ಪೊಸವಣಿಕೆ ಚುಬ್ಬಣ್ಣ ಆಪೀಸಿಂಗೆ ಹೋಪ ಮೊದಲು ವಿಭೂತಿ ಹಾಕೆಂಡದು..

ಈಗ ಊರೂರಿಂದ ಊರೂರಿಂಗೆ ಹಾರುವಗ ಹೆಗಲಿಲಿ ಕೆಮರ ಇದ್ದೇ ಇಕ್ಕು, ಬಟ್ಯನ ಹೆಗಲಿಲಿ ಮಡು ಇದ್ದ ನಮುನೆಲಿ.
ಒಳ್ಳೊಳ್ಳೆ ಪಟಂಗಳ ತೆಗಗು.

ಕೆಲವು ಒಳ್ಳೆ ಪಟಂಗಳ ಒಪ್ಪಣ್ಣಂಗೆ ತೋರುಸುವಗ – ಬೈಲಿಂಗೆ ತೋರುಸುವನಾ ಚುಬ್ಬಣ್ಣ ಇದರ ಹೇಳಿ ಕೇಳಿದೆ.
ಸಂತೋಷಲ್ಲಿ ಒಪ್ಪಿಗೊಂಡು, ಇನ್ನುದೇ ನಿರಂತರ ಒಳ್ಳೊಳ್ಳೆ ಪಟಂಗಳ ಕೊಡ್ತ ಮಾತು ಹೇಳಿದವು.

ಬೆಂಗುಳೂರಿಲಿ ನಮ್ಮ ಪೆರ್ಲದಣ್ಣನ ಚೆಂಙಾಯಿ ಮಾಂತ್ರ ಆಗೆಂಡು ಇದ್ದಿದ್ದ ಈ ಚುಬ್ಬಣ್ಣ ಇನ್ನು ಬೈಲಿನೋರ ಎಲ್ಲೋರ ಚೆಂಙಾಯಿ ಆವುತ್ತರಲ್ಲಿ ಸಂಶಯ ಇಲ್ಲೆ.
ಮಲೇಶಿಯಂದ ಬಪ್ಪಗ ಚೀಪೆ ಚೋಕುಲೇಟು ತತ್ತೆ’ ಹೇಳಿ ಒಪ್ಪಿಗೊಂಡ ಕಾರಣ ಈಗ ಒಪ್ಪಣ್ಣಂಗೆ ಚುಬ್ಬಣ್ಣನತ್ರೆ ದಿನಾಗುಳೂ ಬೈಲಿಂಗೆ ಯೇವಗ ಬತ್ತೆ ಕೇಳುದೇ ಕೆಲಸ ಆಗಿ ಬಿಟ್ಟಿದು!!

ಬನ್ನಿ, ಚುಬ್ಬಣ್ಣನ ಪಟಂಗಳ, ಅದರ ಒಟ್ಟಿಂಗೆ ಇಪ್ಪ ಶುದ್ದಿಗಳ ನಾವುದೇ ಓದುವ. ಲೋಕ, ಹೆರಾಣ ಊರಿನ ಪರಿಚಯ ನಾವುದೇ ಮಾಡಿಗೊಂಬ°.
ಚುಬ್ಬಣ್ಣನ ಚೆಂದದ ಪಟಂಗೊಕ್ಕೆ ಒಪ್ಪ ಕೊಡುವೊ°.

ಆಗದೋ? ಏ°?

ಒಪ್ಪಣ್ಣ

ಎಲ್ಲೊರಿಂಗೂ ನಮಸ್ಕಾರ ಇದ್ದು!

ಗೋಕರ್ಣಲ್ಲಿ ಚಾತುರ್ಮಾಸ್ಯ, ಬೈಲಿಂಗಿಡೀ ವ್ಯಾಸಮಂತ್ರಾಕ್ಷತೆ ಹಂಚುತ್ತ ಕಾರ್ಯ – ಎಲ್ಲ ಮಾಡುವಗ ಹೊತ್ತು ಹೋದ್ದೇ ಗೊಂತಾಗ!
ಇದರೆಡಕ್ಕಿಲಿ ಹೊಸ ವೆಗ್ತಿಯ ಬೈಲಿಂಗೆ ಪರಿಚಯ ಮಾಡ್ತ ಕಾರ್ಯ – ಅದರ ನಾವೇ ಮಾಡೆಕ್ಕಾದ್ದು!
ಪೊಸವಣಿಕೆ ಚುಬ್ಬಣ್ಣನ ಪಟಂಗೊ – “ಪೊಸವಣಿಕೆ ಪೋಸುಗೊ” ಆಗಿಂಡು ನಮ್ಮ ಬೈಲಿಲಿ ಇನ್ನು ಕಾಂಬಲೆ ಸಿಕ್ಕುತ್ತು.
ಉದಯೋನ್ಮುಖ ಪಟಗಾರನ ನಾವೆಲ್ಲರೂ ಬೆನ್ನು ತಟ್ಟಿ ಮುಂದೆ ತಪ್ಪ.

ನಾವೆಲ್ಲೊರುದೇ ಪ್ರೋತ್ಸಾಹ ಮಾಡುವೊ°.
ಹೇಳಿದಾಂಗೆ – ಇಂದು ಅವರ ಹುಟ್ಟಿದದಿನ.
ನೂರ್ಕಾಲ ಬಾಳುವ ಶುಭಾಶೀರ್ವಾದ ದೇವರು ಅವಕ್ಕೆ ಅನುಗ್ರಹಿಸಲಿ ಹೇಳ್ತದು ಬೈಲಿನ ಎಲ್ಲೋರ ಪರವಾಗಿ ನಾವು ಮಾಡ್ತ ಹಾರಯಿಕೆ.

ಪೊಸವಣಿಕೆ ಚುಬ್ಬಣ್ಣನ
ಓರುಕುಟ್ಟುವ ಪುಟ: (ಸಂಕೊಲೆ)
ಮೋರೆಪುಟ: (ಸಂಕೊಲೆ)

ಹರೇರಾಮ.

ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

7 Responses

 1. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಜನ್ಮ ದಿನದ ಶುಭ ಹಾರೈಕೆಗೊ.
  ಪಟಂಗಳ ನಿರೀಕ್ಷೆಲಿ ಇದ್ದೆಯೊ.

 2. ಗೋಪಾಲ ಮಾವ says:

  ಓ ಅಂಬಗ ಚುಬ್ಬಣ್ಣನ ಹುಟ್ಟು ಹಬ್ಬವ ದೇಶಲ್ಲಿಡಿ ಸಂಬ್ರಮಲ್ಲಿ ಆಚರಿಸುತ್ತ ಹಾಂಗೆ ಆತು. ಹುಟ್ಟು ಹಬ್ಬದ ಶುಭಾಶಯಂಗೊ. ರವಿ ಪೊಸವಣಿಕೆ ನಮ್ಮ ಚುಬ್ಬಣ್ಣಂಗೆ ಎಂತ ಆಯೇಕೊ ? ಬೈಲಿಂಗೆ ಚುಬ್ಬಣ್ಣನ ಪಟಂಗೊ ಬೇಗ ಬರಲಿ.

 3. ಶುದ್ದಿ ಕೇಳಿ ಕೊಶಿ ಆತು ಅಣ್ಣಾ,, 🙂 ಬಯಲಿಲಿ ಪಟಂಗಳ ಬೆಳ್ಳ ಬತ್ತಾ ಇದ್ದು.. ಬರ್ಲಿ ಬರ್ಲಿ.. 🙂 ಇನ್ನೂ ಚೆಂದದ ಪಟಂಗ ಬರಲ್ಲಿ 🙂

 4. gopalakrishna BHAT S.K. says:

  good.Is subbanna related to Posavanike Shama Bhat of Shedigumme?I am waiting for the photos

  • ಚುಬ್ಬಣ್ಣ... says:

   ಅಪ್ಪು… ಮಾವ.. 🙂 ಪೊಸವಣಿಕೆ ಶಾಮ ಭಟ್ ಅವು ದೊಡ್ಡಪ್ಪ ಆಯೆಕು.. ಒ೦ದೆ ಕುಟು೦ಬಾ… ಎನ್ನ ಅಜ್ಜನ ಅಣ್ಣನ ಮಗ ಶಾಮ ದೊಡ್ಡಪ್ಪ… 😛 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *