ಒಂದು ಇತಿಹಾಸ – ಎರಡು ಪುಸ್ತಕ

May 21, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1857 ರಲ್ಲಿ ನಡದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ ಬ್ರಿಟಿಷರು “ಸಿಪಾಯಿ ದಂಗೆ” ( Sipoy Mutiny) ಹೇಳಿ ಚರಿತ್ರೆ ಬರದವು. ನಾವೆಲ್ಲ ಓದಿದ್ದು ಅದನ್ನೇ. ಆದರೆ, ಈ ದಂಗೆಯ ಹಿನ್ನೆಲೆ ಅದರ ಮಹತ್ವ , ಆಮೇಲೆ ನಡದ ಸ್ವಾತಂತ್ರ್ಯ ಹೋರಾಟಕ್ಕೆ ಇದು ಹೇಂಗೆ ನಾಂದಿ ಅತು ಹೇಳುದು ಎಲ್ಲೋರು ಅರ್ಥ ಮಾಡಿಗೊಂಡಿದವು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಇದು ಹೇಳಿ ಮನವರಿಕೆಗೆ ಬಯಿಂದು. ಈ ಘಟನೆಯ ಇಪ್ಪತ್ತು ವರ್ಷಕ್ಕೆ ಮದಲು 1837 ರಲ್ಲಿ ನಮ್ಮ ಸುಳ್ಯ ಸೀಮೆಲಿ ಇಂತದ್ದೇ ಒಂದು ‘ದಂಗೆ’ ನಡದಿತ್ತು. ಈ ದಂಗೆಲಿ ನಮ್ಮದೇ ಊರಿನ ಜೆನಂಗ ಮುಖ್ಯ ಭೂಮಿಕೆ ವಹಿಸಿತ್ತಿದ್ದವು ಹೇಳುದು ನಾವೆಲ್ಲ ಹೆಮ್ಮೆ ಪಡೆಕ್ಕಾದ ವಿಷಯವೇ !

ಅ ಕಾಲಲ್ಲಿ ನಮ್ಮ ಸೀಮೆ ನೇತ್ರಾವತಿ ಹೊಳೆಯ ವರೆಗಾಣ ಪ್ರದೇಶ ಕೊಡಗಿನ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. 1834ರಲ್ಲಿ  ಬ್ರಿಟಿಷರು ಕೊಡಗಿನ ಅಕೇರಿಯಾಣ ಅರಸ ಚಿಕ್ಕ ವೀರರಾಜನ ಕುತಂತ್ರಲ್ಲಿ ಪದಚ್ಯುತಿ ಮಾಡಿ ತಮ್ಮ ಆಡಳ್ತೆಯ ಮುದ್ರೆ ಒತುತ್ತವು.ಇದು ಅರಸರ ಕೆಲವು ನಿಷ್ಟಾವಂತ ಜೆನರಿಂಗೆ ಬ್ರಿಟಿಷರ ವಿರುದ್ದದ ಕೋಪಕ್ಕೆ ಕಾರಣ ಆವುತ್ತು. ಇದೇ ಸಮಯಲ್ಲಿ ಅಮರ ಸುಳ್ಯ ಸೀಮೆಲಿ ಅಮಲ್ದಾರ ಆಗಿ ಅಟ್ಲೂರ ರಾಮಪ್ಪಯ್ಯ ಬ್ರಿಟಿಷರ ಅಡಿಲಿ ಇದ್ದುಗೊಂಡು ಗೌಡ ಸಮುದಾಯದವಕ್ಕೆ  ಅನ್ಯಾಯ ಮಾಡಿಗೊಂಡು ಜೆನಂಗಳ ಕೋಪಕ್ಕೆ ಕಾರಣ ಆಗಿತ್ತು. ಕೊಡವರು ಹಲವು ಜೆನ ಕಲ್ಯಾಣಸ್ವಾಮಿಯ ಮುಂದೆ ಮಾಡಿಗೊಂಡು ಅಮರ ಸುಳ್ಯದ ಕೆದಂಬಾಡಿ ರಾಮ ಗೌಡನ ಮನೆಲಿ ಮಗನ ಮದುವೆಯ ನೆಪಲ್ಲಿ ಒಗ್ಗಟ್ಟಾಗಿ ಸೇರಿ ಬ್ರಿಟಿಷರ ವಿರುದ್ದ ಹೋರಾಟಕ್ಕೆ ತಯಾರಾವುತ್ತವು.ಮದಲು ಅಟ್ಲೂರ ರಾಮಪ್ಪಯ್ಯನ  ಕೊಂದು ಮಂಗಳೂರಿಂಗೆ ಮುತ್ತಿಗೆ ಹಾಕಿ ಅಲ್ಲಿಯ ಕಲೆಕ್ಟರನ ಸೋಲ್ಸುತ್ತವು. ಒಟ್ಟು ಹದಿಮೂರು ದಿನ ಕಲ್ಯಾಣಸ್ವಾಮಿಯ ನೇತೃತ್ವಲ್ಲಿ ಆಡಳ್ತೆ ನಡಸುತ್ತವು. ಆದರೆ ಓಡಿ ಹೋದ ಕಲೆಕ್ಟರ ಹೆಚ್ಚಿನ ಸೈನ್ಯದೊಟ್ಟಿಂಗೆ ಬಂದು ಕಲ್ಯಾಣಸ್ವಾಮಿಯ ಸೆರೆ ಹಿಡಿತ್ತು. ಸೆರೆ ಸಿಕ್ಕವರ ವಿಚಾರಣೆಗೆ ಒಳ ಪಡಿಸಿ ಕಲ್ಯಾಣಸ್ವಾಮಿಯ ಸಹಿತ ಮೂರು ಜೆನಕ್ಕೆ ಫಾಶಿ ಶಿಕ್ಷೆ ಕೊಡ್ತವು. ಇವರ ಒಟ್ಟಿಂಗೆ ಸೇರಿದ ಹಲವಕ್ಕೆ ಬೇರೆ ಬೇರೆ ರೀತಿಯ ಶಿಕ್ಷೆ ಕೊಡ್ತವು. ಅಕೇರಿಗೆ ಬ್ರಿಟಿಷರು ಈ ಘಟನೆಯ ಒಂದು ಸಣ್ಣ ದಂಗೆ ಹೇಳಿಯೂ ಅಮರ ಸುಳ್ಯದ ಸೇನೆ ಕಳ್ಳಕಾಕರ ದಂಡು ಹೇಳಿಯೂ , ಕಲ್ಯಾಣಸ್ವಾಮಿ ಈ ದಂಡಿನ ನಾಯಕ ಹೇಳಿಯೂ ಚರಿತ್ರೆ ಬರತ್ತವು.

ಆದರೆ, ಇದೂ ಒಂದು  ಸ್ವಾತಂತ್ಯ್ರ ಸಂಗ್ರಾಮವೇ ಹೇಳುದರಲ್ಲಿ ಏನೂ ತಪ್ಪಿಲ್ಲೇ.

“ಕಲ್ಯಾಣಪ್ಪನ ಕಾಟುಕಾಯಿ”

ಪುಸ್ತಕದ ಮೋರೆಪುಟ

 

ಇದೇ ಚರಿತ್ರೆಯ ಆಧರಿಸಿ (ಸುಳ್ಯ) ಆಲೆಟ್ಟಿಯ ಶ್ರೀ ಎ.ಆರ್. ಶಗ್ರಿತ್ತಾಯ ‘ಕಲ್ಯಾಣಪ್ಪನ ಕಾಟುಕಾಯಿ’ ಹೆಸರಿನ ಯಕ್ಷಗಾನ ಪ್ರಸಂಗ ಬರದ್ದವು. ಇದರ ಬರದ ಕಾಲ ಯಾವುದು ಹೇಳಿ ಸ್ಪಷ್ಟ ಇಲ್ಲೆ. ಆದರೆ, ಕನ್ನಡ ಕಾದಂಬರಿಕಾರ ನಿರಂಜನ ಇದೇ ಕತೆಯ ಆಧರಿಸಿ ‘ಕಲ್ಯಾಣಸ್ವಾಮಿ’ ಕಾದಂಬರಿ ಬರವ ಸಮಯಲ್ಲಿ , ಹಸ್ತಪ್ರತಿಲಿ ಇತ್ತಿದ್ದ ಪ್ರಸಂಗವ ಪ್ರಕಟಿಸುಲೆ ಪ್ರೋತ್ಸಾಹಿಸುತ್ತವು. ಹಾಂಗೆ ಇದು 1956ರಲ್ಲಿ ಪ್ರಕಟ ಆತು.

ಈ ಪ್ರಸಂಗ ರಚನೆಯ ಹಿನ್ನೆಲೆಯ ವಿವರಿಸಿಗೊಂಡು ಶಗ್ರಿತ್ತಾಯ ಹೇಳಿದ ಮಾತುಗೊ ಅವರ ವ್ಯಕ್ತಿತ್ವವ ತೋರ್ಸುತ್ತು.- ” ಈ ಕಥೆಯನ್ನು ನಾನು ಪುರಾತನ ಹರುಕು ಮುರುಕು ಸಾಹಿತಿಗಳು ಬರೆದ ಯಕ್ಷಗಾನ ಪುಸ್ತಕದ ಆಧಾರದಿಂದಲೂ , ವಯೋವ್ರದ್ದರ ಪುರಾಣ ಪರಿಚಯದಿಂದಲೂ, ನನ್ನ ಸ್ವಂತ ತಿಳುವಳಿಕೆಯಿಂದಲೂ ಮೂಲ ಕಥೆಯ ಹುಟ್ಟಡಗಬಾರದೆಂದು ಯಕ್ಷಗಾನ ರೂಪವಾಗಿ ಬರೆದೆನು. ಈ ಕಥೆಗೆ ಬಹಳ ಮಟ್ಟಿಗೆ ಪ್ರೋತ್ಸಾಹ ಹಾಗೂ ಆಶೀರ್ವಾದವನ್ನು ದಯಪಾಲಿಸಿದ ಶ್ರೀಮಾನ್ ರಾಷ್ಟ್ರಕವಿಗಳು ಯಂ. ಗೋವಿಂದ ಪೈಗಳ ಸನ್ನಿಧಿಗೂ, ಹೊಸ ಪ್ರೋತ್ಸಾಹವನ್ನಿತ್ತು ಈ ಕೃತಿಯನ್ನು ಅಚ್ಚು ಹಾಕಿಸಬೇಕೆಂದು ಇದರ ಸಂಬಂಧವಾಗಿ ಬರೆದ ಕಾದಂಬರಿಯ ಮೂಲದಾತರು ಶ್ರೀಮಾನ್ ನಿರಂಜನರ ಚರಣಕ್ಕೂ ಅರ್ಪಿಸಿರುವೇನು.”

ಪೂರ ಪ್ರಸಂಗವ ಎರಡು ಅಂಕಲ್ಲಿ ಬರದ್ದವು. ಶುರುವಾಣದ್ದರಲ್ಲಿ ಅಟ್ಟ್ಲೂರು ರಾಮಪ್ಪಯನ ಆಳರಸನ ಹಾಂಗೆ ಚಿತ್ರಿಸಿ ಕೊಲ್ಲುವ ವರೆಗಾಣ ಕತೆ ಇದ್ದು. ಎರಡನೆ ಅಂಕಲ್ಲಿ  ಕಲ್ಯಾಣಪ್ಪನ ದಂಡು ಮಂಗ್ಳೂರಿಂಗೆ ಮುತ್ತಿಗೆ ಹಾಕಿ ಸಿಕ್ಕಿ ಬಿದ್ದು ಶಿಕ್ಷೆ ಕೊಡುವಲ್ಲಿಗೆ ಕತೆ ಮುಗಿತ್ತು.

( ರಾಗ ಭೈರವಿ – ಝಂಪೆ )

ಲಾಲಿಸಿರಿ ಪೆಳ್ವೆನ | ಟ್ಟ್ಲೂರ ರಾಮಪ್ಪಯನು | ಓಲಗದಿ ರಂಜಿಸುತ ಇರುತಿರ್ದನಾತ ||೧|| ಬಂಧು ಬಾಂಧವ ಮಲ್ಲ | ಸಂದಣಿಯು ಜಯವೆನುತ | ವಂದಿಸುತ್ತಿರುತಿರಲು ಮಂದ ಹರುಷದೊಳು ||೨||……….

ವರ್ಷಾವರ್ತಿ ‘ಪೊಗದಿ’ ಕೊಡ್ಲೆ ಎಡಿಯದ್ದ ಬಡ ಗೌಡುಗಳ ಆಸ್ತಿಯ ಬಲಾತ್ಕಾರಲ್ಲಿ ತನ್ನ ಹೆಸರಿಂಗೆ ಮಾಡಿಗೊಂಡು ದುರಾಚಾರವ ನಡಸುತ್ತು. ಸೀಮೆಯ ಗೌಡ ಜನಾಂಗದವು ಕಲ್ಯಾಣಪ್ಪನ ನೇತೃತ್ವಲ್ಲಿ ಅಮರಸುಳ್ಯದ 20 ಗ್ರಾಮದ ಜೆನಂಗಳ ಒಟ್ಟು ಸೇರ್ಸುತ್ತವು.

( ರಾಗ ಕೇದಾರ – ಅಷ್ಟ )

ಉತ್ತರಪೇಕ್ಷೆಯೊಳಿರಲತ್ತ ಕೊಡಗರು | ಮತ್ತೆ ಯೋಚಿಸುತಲೆಲ್ಲ | ನಿಂತರು ಸುಮ್ಮಾನೆ ನಾಪೊಕ್ಲ ಮೂರ್ನಾಡ | ಮತ್ತಾವು ನಾಡವರು ||೧|| ಗುತ್ತಿಗಾರಮರಪಡ್ನೂರು ಕಡಬ ಮೇಲೆ ಪುತ್ಯ ಮಾವಜಿ ಕಲೆಂಬಿ | ಮತ್ತೈನಕಿದು ಕುಕ್ಕನೂರು ಕೆದಂಬಾಡಿ ಇಪ್ಪತ್ತು ಗ್ರಾಮದ ಜನರು ||೨||ನೆರೆ ಮಂಡೆಕೋಲಜ್ಜವರ ಜಾಲೆಸುರಿಂದ | ನೆರೆದರಂಬ್ರೆಟ್ಟಿ ಮುಖ್ಯ | ವರ ಚೌಟಜೆಯು ಕುಕ್ಕೆಟ್ಟಿಯ ಜನರೆಲ್ಲರು| ಬರಲುಬರಡ್ಕದಿಂದ ||೩||

ಎಲ್ಲೋರು ಸೇರಿ ಕಲ್ಯಾಣಪ್ಪ ತಮ್ಮ ನಾಯಕ ಹೇಳಿಗೊಂಡು ಒಮ್ಮತದ ತೀರ್ಮಾನ ತೆಕ್ಕೊತ್ತವು. ಜೋಯಿಸರ ಮೂಲಕ ಒಳ್ಳೆ ಮುಹೂರ್ತವ ನೋಡಿಗೊಂಡು ಸೈನ್ಯ ಕಟ್ಟುವ ತಯಾರಿ ಮಾಡ್ತವು.

( ರಾಗ ಸೌರಾಷ್ಟ್ರ – ತ್ರಿವುಡೆ )

ಕಾಡ ಬಡಿಕೋಲುಗಳ ಕಡಿಯುತ | ಮಾಡಿಕೊಂಡರು ದೊಣ್ಣೆ ಬಡಿಗೆಯ| ಜೋಡು ಕೋವಿಯ ಕತ್ತಿ ಸಬಳಸ | ಘಾಡತನದಿ ||೧|| ಹೊಂತಕಾರಿಯ ಶೌರ್ಯ ಸಾಹಸ | ವಂತರಿನ್ನೇನೆಂದು ಪೊರಟರು | ಸಂತಸದ ಸುಗ್ಗಿಯಲಿ ಬಂದು ಕೃ | ತಾಂತನಂತೆ ||೨||……….

ಎಲ್ಲೋರು ಸೇರಿ ರಾಮಪ್ಪಯ್ಯನ ಕೊಲ್ಲುತ್ತವು. ಆಮೇಲೆ, ಸೇನೆಯ ಮೂರು ವಿಭಾಗ ಮಾಡಿ ಮಂಗ್ಳೂರಿಂಗೆ ಹೆರಡುವ ತಯಾರಿ ಮಾಡ್ತವು. ಬೆಳ್ಳಾರೆ, ಪುತ್ತೂರು, ಪಾಣೆಮಂಗಳೂರು, ಬಂಟ್ವಾಳ, ಕುಂಬ್ಳೆ , ಮಂಜೇಶ್ವರಲ್ಲಿ ಟ್ರೆಜರಿಯ ಲೂಟಿ ಮಾಡ್ತವು. ಎಲ್ಲ ಸಮುದಾಯ, ಜಾತಿ ವರ್ಗದ ಜೆನಂಗೋ ಇವರ ಸೇರುತ್ತವು. ನಂದಾವರದ ಅರಸು ಲಕ್ಷ್ಮಣ ಬಂಗರಸ ಸೇನೆಯ ಕೂಡಿಗೊಳ್ಳುತ್ತು. ಮಂಗ್ಳೂರಿಂಗೆ ಮುತ್ತಿಗೆ ಹಾಕಿ ಕಲೆಕ್ಟರಂಗೆ “ಉಪ್ಪು ನೀರು” ಕುಡುಸುತ್ತವು. ಅದು ಪರಿವಾರ ಸಮೇತ ಕಲ್ಲಿಕೋಟೆಗೆ ಓಡುತ್ತು. ಕಲ್ಯಾಣಪ್ಪನ ಸೇನೆ ಬಾವುಟಗುಡ್ಡೆಲಿ ವಿಜಯ ಪತಾಕೆ ಹಾರುಸುತ್ತವು (1837 ಎಪ್ರಿಲ್ 5). ಮುಂದೆ 13 ದಿನ ರಾಜ್ಯಭಾರ ಮಾಡ್ತವು.

(ರಾಗ ಕಲ್ಯಾಣಿ – ಏಕ )

ಕಲ್ಯಾಣಪ್ಪನು ರಾಜ | ಮಂತ್ರಿ ಬಂಗರಸನು | ಮಲ್ಲ ಸೇನಾಧಿಪ | ಕೋಶಾಗಳೆನಿಪ ||೧|| ಬಲ್ಲಿದ ಸುಬ್ರಾಯ ।ನಣ್ಣೂಗಳೆಂದಂದು | ಎಲ್ಲರೊಬ್ಬೊಬ್ಬರ | ಮಾಡುತ ವಿವರ ||೨|| ಗೌಡಜ್ಜ ನಮ್ಮಣ | ಸಮ್ಮಗ್ರದಧಿಕಾರ | ಮಾಡಿಕೊಂಡಾಧಿಪ |ತ್ಯದ ಬಹುದೂರ ||೨|| ………..

ಆದರೆ, ಓಡಿ ಹೋದ  ಕಲೆಕ್ಟರ ಕಲ್ಲಿಕೋಟೆಂದ ಹೆಚ್ಚಿನ ಸೈನ್ಯದೊಟ್ಟಿಂಗೆ ಮತ್ತೆ ಬಂದು ಹೋರಾಟ ಮಾಡುತ್ತು. ಬ್ರಿಟಿಷರ ತುಪಾಕಿಯ ಎದುರು ಹೋರಾಟ ಮಾಡುಲೆ ತಕ್ಕ ಹತ್ಯಾರು ಕಲ್ಯಾಣಪ್ಪನ ಸೈನ್ಯಲ್ಲಿ ಇತ್ತಿಲ್ಲೆ. ಸುಲಭಲ್ಲಿ ಬ್ರಿಟಿಷರಿಂಗೆ ಕಲ್ಯಾಣಪ್ಪ,ಬಂಗರಸ ಮುಂತಾದವರ ಸೆರೆ ಹಿಡಿವಲೆ ಸಾಧ್ಯ ಆವುತ್ತು. ಒಳುದ  ಜೆನ ದಿಕ್ಕು ದೆಶೆ ಓಡಿ ತಪ್ಪಿಸಿಗೊಳ್ಳುತ್ತವು.

( ರಾಗ ಮಾರವಿ – ಏಕ )

ಒಡೆಯಿತುಪಾಕಿಯು | ಹೊಡೆಯಿತು ಬಲುರವ | ಸಿಡಿಯಿತು  ಪಕ್ಕಗಳ | ಬಡಿಯಿತು ಗೌಡರ | ಕೆಡಹಿತು ಹಲಬರ | ಮದಹಿತು ಓಡುವರ ||೧|| ಓಡಿತು ದಿಗ್ದೆಶೆ | ಕಾಡಿತು ದುರ್ದೆಶೆ | ತೋಡಿತು ಭಯ ಬವಸೆ | ಮೂಡಿತು ಕುಳಿಯನು ಹೂಡಿತು ಭಯವನು | ಮಾಡಿತು ಗತಿಯನ್ನು ||೨||…….

ಸೆರೆ ಸಿಕ್ಕವರ ವಿಚಾರಣೆಗೆ ಒಳಪಡಿಸಿ ಕಲ್ಯಾಣಪ್ಪ, ಬಂಗರಸ, ಸುಬ್ರಾಯ ಗೌಡ ರ ಬಿಕರ್ನಕಟ್ಟೆಲಿ ಪ್ಹಾಶಿಗೆ ಏರುಸುತ್ತವು. ಒಳುದವಕ್ಕೆ ವಿಧ ವಿಧಲ್ಲಿ ಶಿಕ್ಷೆ ಕೊಡ್ತವು. ಹೀಂಗೆ ಕಲ್ಯಾಣಪ್ಪನ ಕಾಟುಕಾಯಿಯ ಅಡಗುಸುವಲ್ಲಿ ಬ್ರಿಟಿಷರಿಂಗೆ ಜಯ ಸಿಕ್ಕುತ್ತು.

“ಕಲ್ಯಾಣಸ್ವಾಮಿ”

ಪುಸ್ತಕದ ಮೋರೆಪುಟ

 

ನಿರಂಜನ ಸುಳ್ಯಲ್ಲಿ ಹೈಯ್ಯರ್ ಪ್ರೈಮರಿ ಶಾಲೆಗೆ ಹೋಗಿಗೊಂಡಿದ್ದ ಸಮಯಲ್ಲಿ ಕೇಳಿದ ಕಲ್ಯಾಣಪ್ಪನ ಕತೆಯ ಆಧರಿಸಿ ಕಾದಂಬರಿ ಬರವ ಉದ್ದೇಶಂದ ಸಂಶೋಧನೆ ಶುರು ಮಾಡ್ತವು. ಕೊಡಗಿನ ಇತಿಹಾಸಕಾರ ಡಿ. ಏನ್. ಕೃಷ್ಣಯ್ಯನವರ ಲೇಖನ , ಗಣಪತಿ ಐಗಳು ಬರದ ದಕ್ಷಿಣ ಕನ್ನಡ ಇತಿಹಾಸ, ಅಲ್ಲದ್ದೆ  ಶಗ್ರಿತ್ತಾಯರ ಯಕ್ಷಗಾನ ಪುಸ್ತಕಂಗಳ ದೀರ್ಘ ಅಧ್ಯಯನ ಮಾಡುತ್ತವು. ನಿರಂಜನರ ಅಭಿಪ್ರಾಯಲ್ಲಿ – ” ಕಲ್ಯಾಣಪ್ಪ ಪುಂಡನೆಂಬುದಕ್ಕೆ ಯಾವ ಆಧಾರವೂ ಇಲ್ಲ. ಆತ ಜನರನ್ನು ದೋಚಿದನೆಂದು ಯಾರೂ ಹೇಳುವುದಿಲ್ಲ. ಆತ ಯುದ್ಧ ಸಾರಿದುದು ಇಂಗ್ಲಿಷರ ವಿರುದ್ಧ. ಆತನ ಕಣ್ಣಿದ್ದುದು ಅವರ ಸೈನ್ಯದ ಮೇಲೆ , ಖಜಾನೆಯ ಮೇಲೆ. ತಮಗೆ ಕಂಟಕರಾಗಿದ್ದವರನ್ನು ನರಪಿಶಾಚಿಗಳೆಂದು ಚಿತ್ರಿಸಿರುವುದು ಹೊಸ ವಿಷಯವಲ್ಲವಷ್ಟೇ ? ಅಂತಹ ‘ನರಪಿಶಾಚಿ’ ಕೊಡಗಿನ ಕಲ್ಯಾಣಪ್ಪ ! “

ನಿರಂಜನ ಕಂಡುಗೊಂಡ ಪ್ರಕಾರ ಕಲ್ಯಾಣಪ್ಪ ಕೊಡಗಿನ ಸೈನ್ಯಲ್ಲಿ ಒಬ್ಬ ದಳಪತಿ ಆಗಿತ್ತಿದ್ದು. ಅವನೊಟ್ಟಿಂಗೆ ಸೇರಿದವು ಪ್ರಮುಖರೇ ಆಗಿತ್ತಿದ್ದವು. ಅರಸು ವೀರ ರಾಜನ ಬೇಟೆಯ ಗುರು ಹಾರುವ ಹಕ್ಕಿಯ ಕಣ್ಣಿಂಗೆ ನೋಟ ಮಡುಗುವ ಸಾಮರ್ಥ್ಯದ ಚೆಟ್ಟಿ ಕುಡಿಯ ಮತ್ತೆ ಅವನ ತಮ್ಮ, ಕಲ್ಯಾಣಸ್ವಾಮಿಯ ಜತೆಲಿತ್ತಿದ್ದವು. ವೀರ ರಾಜನ ಮಂತ್ರಿ ಆಗಿತ್ತಿದ್ದ ಬೋಪು ದಿವಾನನ ಸಂಬಂಧಿಗಳು ಇವನೊಟ್ಟಿಂಗೆ ಕೂಡಿಗೊಂಡಿದವು. ಪ್ರಖ್ಯಾತ ಸರದಾರ ಹುಲಿ ಕಡಿದ ನಂಜಯ್ಯ , ಬೇರೆ ಬೇರೆ ಊರುಗಳ ಸುಬೇದಾರಂಗೋ, ಅರಸೊತ್ತಿಗೆಯ ಉದ್ಯೋಗಿಗ ಹೀಂಗೆ ಎಷ್ಟೋ ಜೆನ ಕಲ್ಯಾಣಸ್ವಾಮಿಯ ಸೈನ್ಯಲ್ಲಿ ಇತ್ತಿದ್ದವು. ಕಲ್ಯಾಣಸ್ವಾಮಿದು ಕಳ್ಳಕಾಕರ ದಂಡು ಅಲ್ಲ, ಅದೊಂದು ದೊಡ್ಡ ಸೈನ್ಯವೇ ಆಗಿತ್ತಿದ್ದು. ಈ ಎಲ್ಲ ವಿಷಯವ ಕೂಲಂಕುಷವಾಗಿ ಅಭ್ಯಾಸ ಮಾಡಿ ಬರದ ಕಾದಂಬರಿ ” ಕಲ್ಯಾಣಸ್ವಾಮಿ”. ಅ ಕಾಲದ ಜೀವನ ಚಿತ್ರಣ ಇಲ್ಲಿ ಮನೋಹರವಾಗಿ ಬಯಿಂದು. ನಿರಂಜನರ ಈ ಶುರುವಾಣ ಐತಿಹಾಸಿಕ ಕಾದಂಬರಿಯೂ 1956 ರಲ್ಲಿ ಪ್ರಕಟ ಆತು.

“ಕಲ್ಯಾಣಪ್ಪನ ಕಾಟುಕಾಯಿ” ಪ್ರಸಂಗ ಪುಸ್ತಕ ಈಗ ಸಿಕ್ಕುದು ಸಂಶಯ, ಆದರೆ ನಿರಂಜನರ “ಕಲ್ಯಾಣಸ್ವಾಮಿ” ಪುಸ್ತಕ 2005 ರಲ್ಲಿ ಐದನೇ ಮುದ್ರಣ ಆಗಿ, ಇಗಲೂ ಸಿಕ್ಕುತ್ತು.

( ‘ಕಲ್ಯಾಣಪ್ಪನ ಕಾಟುಕಾಯಿ ‘ ಪುಸ್ತಕ ಅಡ್ಕಾರಿನ ಮೂರ್ತಿ ಅಣ್ಣನ ಸಂಗ್ರಹಂದ )

ಒಂದು ಇತಿಹಾಸ - ಎರಡು ಪುಸ್ತಕ , 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. “ಸೆರೆ ಸಿಕ್ಕವರ ವಿಚಾರಣೆಗೆ ಒಳ ಪಡಿಸಿ ಕಲ್ಯಾಣಸ್ವಾಮಿಯ ಸಹಿತ ಮೂರು ಜೆನಕ್ಕೆ ಫಾಶಿ ಶಿಕ್ಷೆ ಕೊಡ್ತವು”–ಈ ಇತಿಹಾಸವ ವಿವರವಾಗಿ ಕಾಸರಗೋಡಿನ ಬೇಕಲ ರಾಮನಾಯಕ ಹೇಳುವವು ಅವು ಬರದ ಪುಸ್ತಕಲ್ಲಿ ವಿವರಿಸಿದ್ದವು. ಆ ಮೂರು ಜನಕ್ಕೆ ಫಾಶಿ ಶಿಕ್ಷೆ ಕೊಟ್ಟ ಜಾಗೆಯೇ ಇಂದ್ರಾಣ ಮಂಗಳೂರಿನ ಬಿಕರ್ನಕಟ್ಟೆ ಅಥವಾ ಭೀಕರ ನ್ಯಾಯ ಕಟ್ಟೆ. ಈ ಇತಿಹಾಸವ ಎನಗೆ ತಿಳಿಸಿದವು ಬಿಕರ್ನಕಟ್ಟೆಲಿ ವಾಸವಾಗಿದ್ದ ದಿ.ವೈ.ಮಹಾಲಿಂಗ ಭಟ್ಟರು.

  [Reply]

  VN:F [1.9.22_1171]
  Rating: +1 (from 1 vote)
 2. ಅಡ್ಕತ್ತಿಮಾರುಮಾವ°

  ಕಲ್ಯಾಣಪ್ಪನ ಕಾಟುಕಾಯಿ ಹೇಳಿದರೆ ದರೋಡೆಖೋರರ ದಂಡು ಹೇಳಿ ಎನ್ನ ಅಜ್ಜಿ ಹೇಳಿಗೊಂಡಿತ್ತವು ಆ ಮೇಲೆ ಅದು ಹಾಂಗಲ್ಲ ಹೇಳಿ ತಿಳುದು ಬಂತು ಅದರ ನೆನಪಿಸಿದ್ದಕ್ಕೆ ಒಂದು ಒಪ್ಪ…ಹಾಂಗೆ ಇನ್ನೊಂದು” ಸುಬ್ರಾಯ ದಂಗೆ”ಹೇಳಿ ಕೂಡಾ ಅದೇ ಕಾಲಲ್ಲಿ ಕೊಡಗಿಂದ ನಮ್ಮ ಊರಿಂಗೆ ಬಂದಿತ್ತಡ ಊರ ಜನಂಗ ಅವರ ಹತ್ತರೆ ಇದ್ದ ಚಿನ್ನ,ಪೈಸ ಇತ್ಯಾದಿ ಬೆಲೆ ಬಾಳುದರ ಸುರಂಗಂಗಳಲ್ಲಿ ಮಣಿನ ಅಡಿಲಿ ಎಲ್ಲಾ ಹುಗ್ಗಿಸಿ ಮಡಿಕ್ಕೊಂಡಿತ್ತವು ಕೆಲವು ಜನ ಹಾಂಗೆ ಸತ್ತು ಹೋದೋರ ಸೊತ್ತು ಇನ್ನೂ ಮಣ್ಣಿನ ಅಡಿಲಿ,ಸುರಂಗಂಗಳಲ್ಲಿ ಇದ್ದು ಹೇಳಿ ಪ್ರತೀತಿ ಇದ್ದು..ಎನ್ನ ಅಜ್ಜನ ಅಜ್ಜ ಹಾಂಗೆ ಮನೆ ಜಾಲಿಲಿ ಒಂದು” ಚಳ್ಲ ಪೆಟ್ಟಿಗೆ”(ಹೇಳಿರೆ ಚಿನ್ನ ಮಡುಗುವ ಪೆಟ್ಟಿಗೆ )ಎಲ್ಲೋ ಹುಗುದು ಮಡಗಿತ್ತವಡ ಅವು ತೀರಿ ಹೋಪ್ಗದ್ದೆ ಆರಿಂಗೂ ತಿಳಿಸದ್ದ ಕಾರಣ ಅದು ಇನ್ನೂ ಅಲ್ಲೆ ಎಲ್ಲೋ ಇಕ್ಕು ಹೇಳಿ ಎಲ್ಲೋರೂ ಹೇಳುತ್ತವು…

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಕಲ್ಯಾಣಪ್ಪನ ದಂಡಿನ ಮೂರು ವಿಭಾಗ ಮಾಡಿ, ಒಂದು ಕುಂಬ್ಳೆ,ಕಾಸರಗೋಡು ಮೂಲಕ ಮಂಗ್ಳೂರಿಂಗೆ ಬತ್ತು. ಈ ತುಕುಡಿಯ ನೇತ್ರತ್ವ ವಹಿಸಿದ್ದು ಸುಬ್ರಾಯ ಗೌಡ. ನಿಂಗೊ ಹೇಳುವ ‘ಸುಬ್ರಾಯ ದಂಗೆ’ ಇದುವೇ ಆದಿಕ್ಕು.

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಈ ಪ್ರದೇಶಕ್ಕೆ ಕಲ್ಯಾಣಪ್ಪ ದಾಳಿ ಮಾಡಿದ ಕಾರಣ ಇಲ್ಲಿಯಾಣವಕ್ಕೆ ಅದು ದರೋಡೆಕೋರ ಹೇಳುವ ಭಾವನೆ ಇಪ್ಪದರಲ್ಲಿ ಆಶ್ಚರ್ಯ ಇಲ್ಲೆ.ಅದಕ್ಕೆ ಸಂಪತ್ತು ಬೇಕನ್ನೆ? ಲೂಟಿಯನ್ನೂ ಅದು ಮಾಡಿದ್ದು-ಅತಿಶಯ ಅಲ್ಲ ಇದು-ಸತ್ಯವೇ.ಮಂಜೇಶ್ವರ ಗೋವಿಂದ ಪೈ ಬರೆದ ಮಂಜೇಶ್ವರ ದೇವಸ್ಥಾನ ಲೇಖನಲ್ಲಿ ಇದರ ಉಲ್ಲೇಖ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ತೆಕ್ಕುಂಜ ಕುಮಾರಣ್ಣನ ಪುಸ್ತಕ ಮರುಳು ಶ್ಲಾಘನೀಯ. ಕೆಲವ್ರಿಂಗೆ ಸುರುವಕ್ಕಿದು ಇನ್ನು. ಸದಭಿರುಚಿ ಇಲ್ಲಿ ಹಂಚಿಕೊಂಡದಕ್ಕೆ ಥ್ಯಾಂಕ್ಸ್ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಮ್ಮ ಚರಿತ್ರೆ ಬಗ್ಗೆ ಒಳ್ಳೆ ಮಾಹಿತಿ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಚರಿತ್ರೆಯ ಪುಟ೦ಗಳಲ್ಲಿ ಅದೆಷ್ಟು ಹೋರಾಟ೦ಗೊ ನೆಡದ್ದು ಹೇಳಿ ಅಭಿಮಾನ ಮೂಡಿತ್ತು.
  ಪುಸ್ತಕ ಪರಿಚಯದ ಒಟ್ಟಿ೦ಗೆ ಇತಿಹಾಸವನ್ನೂ ಬೈಲಿ೦ಗೆ ತ೦ದದಕ್ಕೆ ಧನ್ಯವಾದ, ಕುಮಾರ ಮಾವ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಸುಳ್ಯದ ದಂಗೆ ಬಗೆಲಿ ಒಳ್ಳೆ ಮಾಹಿತಿ ಕೊಟ್ಟ ಕುಮಾರಂಗೆ ಧನ್ಯವಾದ. ನಮ್ಮ ಊರಿನ ಇತಿಹಾಸದ ಪುಟಂಗಳಲ್ಲಿ ಅದೆಷ್ಟು ಕತೆಗೊ, ತ್ಯಾಗಂಗೊ, ಬಲಿದಾನಂಗೊ ಇದ್ದಾಯ್ಕು ಅಲ್ಲದೊ ?

  [Reply]

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  [ಕಲ್ಯಾಣಪ್ಪನ ಸೇನೆ ಬಾವುಟಗುಡ್ಡೆಲಿ ವಿಜಯ ಪತಾಕೆ ಹಾರುಸುತ್ತವು]
  ಬಾವುಟಗುಡ್ಡೆಗೆ ಈ ಹೆಸರು ಬಂದದು ಇದೇ ಕಾರಣಂದ ಆದಿಕ್ಕೋ?
  ಒಂದು ರೀತಿಲಿ ಪಳಶಿರಾಜನ ಹಾಂಗೆಯೇ ಇಪ್ಪ ಕತೆ ಇದು. ನಿಂಗೊ ಕೊಟ್ಟ ವಿವರಂಗೊ ಲಾಯ್ಕಾಯಿದು ಕುಮಾರಣ್ಣಾ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಚೆನ್ನೈ ಬಾವ°ಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿವೆಂಕಟ್ ಕೋಟೂರುವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುವಿಜಯತ್ತೆತೆಕ್ಕುಂಜ ಕುಮಾರ ಮಾವ°ನೆಗೆಗಾರ°ಬಂಡಾಡಿ ಅಜ್ಜಿದೊಡ್ಡಮಾವ°ಅನುಶ್ರೀ ಬಂಡಾಡಿಶ್ಯಾಮಣ್ಣಪುತ್ತೂರುಬಾವಅಕ್ಷರದಣ್ಣಜಯಗೌರಿ ಅಕ್ಕ°ವಿದ್ವಾನಣ್ಣರಾಜಣ್ಣಅಡ್ಕತ್ತಿಮಾರುಮಾವ°ಪೆಂಗಣ್ಣ°ಹಳೆಮನೆ ಅಣ್ಣಶುದ್ದಿಕ್ಕಾರ°ವೇಣಿಯಕ್ಕ°ಪೆರ್ಲದಣ್ಣಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ