ಪುಸ್ತಕ ಪರಿಚಯ – 10 ” ಚೆನ್ನಬಸವ ನಾಯಕ”

16 ನೇ ಶತಮಾನದ ಆದಿಭಾಗಂದ 18 ನೇ ಶತಮಾನದ ಉತ್ತರಾರ್ಧದ ಶುರು ಅಪ್ಪಲ್ಲಿವರೆಗೆ ಸಮ್ರದ್ಧಿ, ವೈಭವದ ತಾಣ ಆಗಿ ಮೆರೆದ ಸಂಸ್ಥಾನ ಕೆಳದಿ. ಮಲೆನಾಡು ಮತ್ತೆ ಕರಾವಳಿ ಪ್ರದೇಶವ ಆಳ್ವಿಕೆಗೆ ಒಳಪಡಿಸಿಗೊಂಡು ಭಾರೀ ಸಂಪದ್ಭರಿತ ರಾಜ್ಯ ಹೇಳ್ತ ಹೆಸರು ಪಡದ ಸಾಮ್ರಾಜ್ಯ ಆಗಿತ್ತು. ಈಗಾಣ ಶಿವಮೊಗ್ಗ ಜಿಲ್ಲೆಲಿ ಇಪ್ಪ ಕೆಳದಿ, ಇಕ್ಕೇರಿ, ಈಗ ನಗರ ಹೇಳ್ತ ಹೆಸರಿಲಿಪ್ಪ ಬಿದನೂರು ಕೆಳದಿ ಅರಸರ ರಾಜಧಾನಿ ಆಗಿ ಮೆರೆದಿತ್ತು. ಒಟ್ಟೊಟ್ಟಿಂಗೆ ಇವರ ಸಾಮ್ರಾಜ್ಯದ ಹೆಸರೂ ಇವರ ರಾಜಧಾನಿಯ ಹೆಸರಿಲಿ ಪ್ರಖ್ಯಾತ ಆತು. ಸುಮಾರು 1500 ರ ಸಮಯಲ್ಲಿ ಚೌಡಪ್ಪನಾಯಕಂದ ಶುರುವಾದ ಸಣ್ಣ ಸಂಸ್ಥಾನ, ವಿಜಯನಗರ ಅರಸರ ಸಾಮಂತರಾಗಿ ಆಳಿದವು. ವಿಜಯನಗರದ ಪತನ ಆದ ಮೇಲೆ ಸ್ವತಂತ್ರರಾಗಿ ಆಡಳ್ತೆ ಮುಂದುವರಿಸಿದವು.. ಇದರ ಉಚ್ಚ್ರಾಯ ಸ್ಥಿತಿಲಿ, ಮಲೆನಾಡಿಲಿ ಶಿವಮೊಗ್ಗಂದ ಚಿಕ್ಕಮಗಳೂರು , ಹಾಸನದ ವರೆಗೂ, ಕರಾವಳಿಲಿ ಕಾರವಾರಂದ ಮಂಗಳೂರು, ಕಾಸರಗೋಡು, ನೀಲೇಶ್ವರದ ವರೆಗಾಣ ಪ್ರದೇಶದವರೆಗೂ ವಿಸ್ತಾರವಾಗಿ ಬೆಳದಿತ್ತು.  ಅಡಕ್ಕೆ, ಏಲಕ್ಕಿ, ಶ್ರೀಗಂಧ, ತಂಬಾಕು ಇತ್ಯಾದಿ ಪ್ರಾಕ್ರತಿಕ ವಸ್ತುಗೊ ಅಲ್ಲದ್ದೆ, ರೇಶ್ಮೆ, ಬೆಲ್ಲ, ಹತ್ತಿ ವಸ್ತ್ರ ಇತ್ಯಾದಿ ಉತ್ಪನ್ನಂಗೊ ಇಲ್ಲಿಂದ ರಫ್ತು ಆಗಿಗೊಂಡಿದ್ದತ್ತು.

ಈ ರಾಜವಂಶದವರ ಪೈಕಿ ಶಿವಪ್ಪನಾಯಕ ಒಳ್ಳೇ ಆಡಳ್ತೆಂದಾಗಿ ಹೆಸರು ಮಾಡಿದ್ದು. ರಾಣಿ ಚೆನ್ನಮ್ಮಾಜಿ ದೀರ್ಘ ಕಾಲ ಆಳಿದ್ದಲ್ಲದ್ದೆ, ಶಿವಾಜಿಯ ಮಗ ರಾಜಾರಾಮಂಗೆ ಆಶ್ರಯ ಕೊಟ್ಟು ಶಕ್ತಿಶಾಲಿ ಔರಂಗಜೇಬನ ಎದುರಿಸಿದ ದಿಟ್ಟೆ ಆಗಿತ್ತಿದ್ದು. ರಾಜಕೀಯ, ಸಾಂಸ್ಕ್ರತಿಕ, ಆರ್ಥಿಕ ಇತ್ಯಾದಿ ಕ್ಷೇತ್ರಂಗಳಲ್ಲಿ ಭಾರೀ ಔನ್ನತ್ಯವ ಕಂಡ ಕೆಳದಿ ಸಂಸ್ಥಾನ ಅಕೇರಿಗೆ ಒಳ ಜೆಗಳ, ಪಿತೂರಿ, ದುರಾಶಾಪೀಡಿತರ ಕುತಂತ್ರಂದಾಗಿ ಹೈದರನ ಆಕ್ರಮಣಕ್ಕೆ ತುತ್ತಾಗಿ ಅಂತ್ಯ ಕಾಣುತ್ತು. ಇದೇ ಚರಿತ್ರೆಯ ಆಧರಿಸಿ ಮಾಸ್ತಿ “ಚೆನ್ನಬಸವನಾಯಕ” ಹೇಳ್ತ ಐತಿಹಾಸಿಕ ಕಾದಂಬರಿ ಬರದ್ದವು. “ಚಿಕವೀರರಾಜೇಂದ್ರ” ದ ಹಾಂಗೆ ಇದುದೇ ಒಂದು ಒಳ್ಳೆ ಐತಿಹಾಸಿಕ ಕಾದಂಬರಿ. ಹೆರಿದಾದ ಸಂಸ್ಕ್ರತಿಯ ಹೊತ್ತುಗೊಂಡು ವಿಜ್ರಂಭಿಸಿ ಬಾಳಿ ಬೆಳಗಿದ ಭರತವರ್ಷದ ಎರಡು ರಾಜ್ಯಂಗೊ ತಮ್ಮ ಅವನತಿಗೆ ತಾವೇ ಹೇಂಗೆ ದಾರಿ ಬಿಡುಸಿ ಕೊಟ್ಟವು ಹೇಳುವ ಸೂಕ್ಶ್ಮ ಮಾಸ್ತಿಯ ಎರಡೂ ಕಾದಂಬರಿಲಿ ಕಾಂಬಲೆ ಸಿಕ್ಕುತ್ತು.

ಪುಸ್ತಕದ ಮೋರೆಪುಟ

ವೀರಮ್ಮಾಜಿ ಬಿದನೂರ ಅರಸು ಬಸಪ್ಪ ನಾಯಕನ ರಾಣಿ. ನಲ್ವತ್ತು ವರ್ಷದ ಅರಸು ಮದುವೆ ಅಪ್ಪಗ ರಾಣಿಗೆ ಹದಿನಾರರ ಪ್ರಾಯ. ಬಸಪ್ಪ ಅಸೌಖ್ಯಂದಾಗಿ ಹೆಚ್ಚು ಸಮಯ ಬದುಕಿದ್ದಿಲೆ. ಇವನ ಅಸೌಖ್ಯತೆಯ ಸಮಯಲ್ಲಿ ರಾಣಿಗೆ ನಂಬಯ್ಯನ ಜತೆ ಸಲುಗೆ ಬೆಳೆತ್ತು. ಇದು ಅರಮನೆಯೊಳ ಮಾಂತ್ರ ಅಲ್ಲ, ಹೆರವೂ ಜೆನಂಗೊ ಮಾತಾಡುವಷ್ಟು ಬೆಳೆತ್ತು. ಇವರ ಮಗ ಚೆನ್ನಬಸವ ಇದರ ವಿರೋಧುಸುತ್ತು. ಜಿಗುಪ್ಸೆ ಬಂದು ಅರಮನೆಯ ವ್ಯವಹಾರಂದ ಹೆರವೇ ಹೆಚ್ಚು ಸಮಯ ಕಳೆತ್ತು. ಬಸಪ್ಪನಾಯಕ ಸತ್ತ ಮೇಲೆ ವೀರಮ್ಮಾಜಿ ನಂಬಯ್ಯನ ಕೂಡಿಗೊಂಡು ಕುತಂತ್ರ ಮಾಡಿ ಆಡಲ್ತೆಯ ತನ್ನ ಕೈಲೇ ಮಡಿಕ್ಕೊಳ್ತು. ಚೆನ್ನಬಸವನ ಹತ್ಯೆಯ ಪ್ರಯತ್ನವೂ ನಡೆತ್ತು. ಇದೇ ಸಮಯಲ್ಲಿ ಮೈಸೂರಿನ ಸರ್ವಾಧಿಕಾರಿ ಹೈದರ್ ರಾಜ್ಯವಿಸ್ತರಣೆಯ ಕಾರ್ಯಲ್ಲಿ ಇತ್ತಿದ್ದು. ಚೆನ್ನಬಸವ ಅನಿವಾರ್ಯವಾಗಿ ಹೈದರನ ಸೆರೆಸಿಕ್ಕುತ್ತು. ಬಿದನೂರಿಲಿ ರಾಣಿ ವೀರಮ್ಮಾಜಿ ಮಗಂಗೆ ಪಟ್ಟ ಕಟ್ಟದ್ದೆ ಅನ್ಯಾಯ ಮಾಡಿಗೊಂಡು ಆಡಳ್ತೆ ಮಾಡುತ್ತಾ ಇದ್ದು ಹೇಳ್ತ ನೆವನ ಹಿಡುದು, ಬಿದನೂರಿಂಗೆ ಮುತ್ತಿಗೆ ಹಾಕುತ್ತು. ಚೆನ್ನಬಸವನ ಎದುರು ಮಡಿಕ್ಕೊಂಡು ಸುಲಾಭಲ್ಲಿ ಬಿದನೂರಿನ ವಶಕ್ಕೆ ತೆಕ್ಕೊತ್ತು. ರಾಣಿ ವೀರಮ್ಮಾಜಿಯನ್ನೂ, ನಂಬಯ್ಯನನ್ನೂ ಸೆರೆಮನೆಗೆ ಕಳುಸುತ್ತು. ಕೈಹಿಡಿದ ಹೆಂಡತ್ತಿ ಶಾಂತವ್ವನ ದುರಂತ ಸಾವಿನ ನೋಡಿ ಸಹಿಸುಲೆ ಯೆಡಿಯದ್ದೆ ಚೆನ್ನಬಸವ ಪ್ರಾಣ ಬಿಡುತ್ತು.ಬಸಪ್ಪನಾಯಕ, ವೀರಮ್ಮಾಜಿ, ಚೆನ್ನಬಸವ , ನಂಬಯ್ಯ, ಹೈದೆರ್ ಇವೆಲ್ಲಾ ಇತಿಹಾಸಲ್ಲಿಯೂ ಕಾಂಬ ವ್ಯಕ್ತಿಗೊ. ಅಲ್ಲದ್ದೆ ಶಾಂತವ್ವ, ನೇಮಯ್ಯ ಇತ್ಯಾದಿ ಕಾಲ್ಪನಿಕ ಪಾತ್ರಂಗಳೂ ಇದರಲ್ಲಿ ಬತ್ತು. ಕಾದಂಬರಿಲಿ ತೋರ್ಸಿದ ರಾಣಿ ವೀರಮ್ಮಾಜಿಯ ಚಿತ್ರಣ ಅತಿರೇಕದ್ದು ಹೇಳ್ತ ಭಾವನೆ ಕೆಲವು ಸಮುದಾಯದವಕ್ಕೆ ಕಂಡು ಗೊಂದಲದ ವಾತಾವರಣ ನಿರ್ಮಾಣ ಆಗಿತ್ತಿದ್ದಡ. ಆದರೆ ಒಟ್ಟಾರೆ ಕಾದಂಬರಿ ಓದುವಾಗ, ಒಂದು ದೊಡ್ಡ ಪರಂಪರೆ ಇತ್ತಿದ್ದ ರಾಜವಂಶದ ಅವನತಿ ಹೇಂಗೆ ಅಸಹಾಯಕತೆಲಿ ಆತು ಹೇಳ್ತ ಕಳಕಳಿಯ ಭಾವನೆ ನವಗೆ ಈ ಕಾದಂಬರಿ ಓದುವಾಗ ಮನದಟ್ಟಾವುತ್ತು.

ಇತಿಹಾಸದ ಪುಟಂದ :

1755 ಲ್ಲಿ ಬಿದನೂರಿನ ಅರಸು ತೀರಿದ ಮೇಲೆ ರಾಣಿ ವೀರಮ್ಮಾಜಿ ಕೆಲವರೊಟ್ಟಿಂಗೆ ಸೇರಿ ಪಿತೂರಿ ನಡೆಶಿ ತಾನೇ ಅಧಿಕಾರ ವಹಿಸಿ ಚೆನ್ನಬಸವ ರಾಜ್ಯ ಬಿಟ್ಟು ಹೋಪಲೆ ಒತ್ತಡ ಹೇರುತ್ತು. ನೆಂಬಯ್ಯನ ಜತೆಲಿದ್ದ ಇದರ ಸಂಬಂಧ ಪ್ರಜೆಗೊಕ್ಕೆ ಅಸಮಾಧನಕ್ಕೆ ಕಾರಣ ಆವುತ್ತು. ರಾಣಿ ಚೆನ್ನಬಸವನ ಕೊಲೆಯ ಸಂಚಿಕೆಯನ್ನೂ ಮಾಡುತ್ತು. ಇದರಂದ ಪಾರಾಗಿ ಚೆನ್ನಬಸವ ಹೈದರನ ಹತ್ತರೆ ಸಹಾಯ ಕೇಳುತ್ತು. ಪರಿಸ್ಥಿತಿಯ ಲಾಭ ಪಡದು ಹೈದರ್ ಬಿದನೂರಿನ ತನ್ನ ವಶಕ್ಕೆ ತೆಕ್ಕೊಂಬ ಹಂಚಿಕೆ ಹಾಕುತ್ತು. 1763 ರಲ್ಲಿ ಹೈದರ್ ಮುತ್ತಿಗೆ ಹಾಕುವ ಆಲೋಚನೆ ಮಾಡಿಪ್ಪಗ, ವೀರಮ್ಮಾಜಿ ಸುಲಭಲ್ಲಿ ಬಿಟ್ಟುಕೊಡುತ್ತಿಲ್ಲೆ. ಹೆರಾಣ ಸಹಾಯ ಪಡಕ್ಕೊಂಡು ಅಪ್ರತಿಮ ಹೋರಾಟ ಮಾಡುತ್ತು. ಆದರೂ ಹೈದರನ ಸೈನ್ಯಕ್ಕೆ ಸೋಲೆಕ್ಕಾಗಿ ಬತ್ತು. ರಾಣಿಯನ್ನೂ, ವಂಚನೆ – ದ್ರೋಹ ಮಾಡಿದ ಕಾರಣ ಹೇಳಿ ಚೆನ್ನಬಸವನನ್ನೂ ಸೆರೆಮನೆಗೆ ತಳ್ಳುತ್ತು. ಬಿದನೂರು ಗೆದ್ದ ಮೇಲೆ ಇದರ ಮೈಸೂರು ರಾಜ್ಯಕ್ಕೆ ಸೇರ್ಸದ್ದೆ ಹೈದರ್ ತನ್ನ ಸ್ವಂತದ ಪ್ರದೇಶವಾಗಿ ಪ್ರತ್ಯೇಕ ಮಡಿಕ್ಕೊಳ್ತು, ಮಾಂತ್ರ ಅಲ್ಲ “ಹೈದರ್ ನಗರ” ಹೇಳಿ ನಾಮಕರಣ ಮಾಡುತ್ತು. ಈ ವಿಜಯದ ಮುಖ್ಯ ಅಂಶ ಹೇಳಿರೆ, ಹೈದರಿಂಗೆ ಸಿಕ್ಕಿದ ಅಗಾಧ ಸಂಪತ್ತು. ಬಿದನೂರಿಲಿ ಸಿಕ್ಕಿದ ಸಂಪತ್ತು ಸುಮಾರು ೧೨ ಮಿಲಿಯನ್ ಸ್ಟರ್ಲಿಂಗ್ ಆಗಿತ್ತು ! ಫ್ರೆಂಚ್ ಇತಿಹಾಸಗಾರಂಗೊ ಬರದ ಪ್ರಕಾರ ಅಲ್ಲಿ ಸಿಕ್ಕಿದ ಅಮೂಲ್ಯ ಹರಳು, ಮುತ್ತುಗಳ ಹೈದರ್ ಧಾನ್ಯ ಅಳವ ಕೊಳಗಲ್ಲಿ ಅಳದ್ದದಡ.! ಚಿನ್ನದ ಇಟ್ಟಿಗೆಗೊ, ನಾಣ್ಯಂಗಳ ರಾಶಿ ಕುದುರೆ ಮೇಲೆ ಕೂದ ಮನುಷ್ಯನ ಎತ್ತರಕ್ಕಿಂತಲೂ ದೊಡ್ಡ ರಾಶಿ ಆಗಿತ್ತಿದ್ದಡ.! ಈ ಅಗಾಧ ಸಂಪತ್ತು ಹೈದರನ ಮುಂದಾಣ ದಿಗ್ವಿಜಯಂಗೊಕ್ಕೂ, ಮಹತ್ವಾಕಾಂಕ್ಷಿ ಯೋಜನೆಗೊಕ್ಕೂ ಸಕಾಯ ಆತು.

ಬಿದನೂರು ಕೋಟೆ - 2

ಬಿದನೂರು ಕೋಟೆ - 1

ತೆಕ್ಕುಂಜ ಕುಮಾರ ಮಾವ°

   

You may also like...

5 Responses

 1. ಚೆನ್ನೈ ಭಾವ says:

  [ಇದುದೇ ಒಂದು ಒಳ್ಳೆ ಐತಿಹಾಸಿಕ ಕಾದಂಬರಿ. ಹೆರಿದಾದ ಸಂಸ್ಕ್ರತಿಯ ಹೊತ್ತುಗೊಂಡು ವಿಜ್ರಂಭಿಸಿ ಬಾಳಿ ಬೆಳಗಿದ ಭರತವರ್ಷದ ಎರಡು ರಾಜ್ಯಂಗೊ ತಮ್ಮ ಅವನತಿಗೆ ತಾವೇ ಹೇಂಗೆ ದಾರಿ ಬಿಡುಸಿ ಕೊಟ್ಟವು ಹೇಳುವ ಸೂಕ್ಶ್ಮ ಮಾಸ್ತಿಯ ಎರಡೂ ಕಾದಂಬರಿಲಿ ಕಾಂಬಲೆ ಸಿಕ್ಕುತ್ತು. ] – ಇಷ್ಟಕ್ಕೇ ಖುಶಿ ಅತಿದಾ. ಹೀನ್ಗಿಪ್ಪದು ಸಿನೆಮಾ ರೂಪಲ್ಲಿಯೋ ಯಕ್ಷಗಾನ ರೂಪಲ್ಲಿಯೋ ಬಂದಿತ್ತಿದ್ದರೆ ಎನ್ನಾಂಗಿರ್ತವು ಖಂಡಿತಾ ಪುಳಕಿತರಾಗಿ ನೋಡಿ ಅಸ್ವಾದಿಸುತ್ತಿತ್ತವೋದು (ಹುಮ್ಮ್ , ಇವಂಗೆ ಇದು ಒಂದು ಆಗದ್ದ ಬಾಕಿ ಕೊರೆ ಹೇಳಿಕ್ಕೇಡಿ ಆತಾ).
  (ನಿಂಗಳ) ಈ ಕತೆಯೂ ಲಾಯಕ್ಕ ಇದ್ದು , ಬರದ್ದೂ ಲಾಯಕ್ಕ ಆಯ್ದು ಕುಮಾರಣ್ಣ ಹೇಳಿ ಇತ್ಲಾಗಿಂದ ಒಪ್ಪ.

 2. Harish kevala says:

  Uttama maahithi, dhanyavaadagalu…

 3. SAMMI says:

  ರಾಜ ಕುಟುಂಬದ ಸ್ವಾರ್ಥಗಳು ರಾಜಕಾರಣದಲ್ಲಿ ಇಳಿದಿದ್ದೆ ಅಂದಿನ ರಾಜ್ಯದ ಅವನತಿಗೆ ಕಾರಣವಾಯಿತು. ಅದು ಈಗಲೂ ಮುಂದುವರೆದಿದೆ. ಪುಸ್ತಕ ಪರಿಚಯ ವಿಷಯದ ಒಳನೋಟವನ್ನು ಅರಿತಿದೆ.ಧನ್ಯವಾದಗಳು

 4. Gopalakrishna BHAT S.K. says:

  ಉತ್ತಮ ಪುಸ್ತಕದ ಪರಿಚಯ.

 5. ಬೊಳುಂಬು ಮಾವ says:

  ಮಾಸ್ತಿ ಬರದ ಐತಿಹಾಸಿಕ ಕತೆಯ ಪರಿಚಯಿಸಿದ ಕುಮಾರಣ್ಣಂಗೆ ಧನ್ಯವಾದಂಗೊ. ಕುಟುಂಬದ ಒಳಾಣ ಜಗಳ ಅದರ ಸ್ವಾರ್ಥಂದಾಗಿ ಹೆರಾಣವಕ್ಕೆ ರಾಜ್ಯ ಬಿಟ್ಟುಕೊಟ್ಟ ಹಾಂಗೆ ಆತು. ಇಬ್ಬರ ನ್ಯಾಯ ಮೂರನೆಯವನಿಗೆ ಆಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *