ಪುಸ್ತಕ 04 – ಆವೆಯ ಮಣ್ಣಿನ ಆಟದ ಬಂಡಿ .

May 3, 2011 ರ 9:58 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನು  ಸಣ್ಣಾಗಿಪ್ಪಗ  ಶಾಲೆಯ  ವಾರ್ಷಿಕೊತ್ಸವಲ್ಲಿ  ಒಂದರಿ   ಮೃಚ್ಚಕಟಿಕ  ನಾಟಕ  ನೋಡಿದ್ದು  ಈಗ  ಅಸ್ಪಷ್ಟವಾಗಿಯಾದರು  ರಜಾ  ನೆಂಪಿಲಿ ಒಳುದ್ದು .  ವಸಂತಸೇನೆ – ಚಾರುದತ್ತ  ಬಿಟ್ಟರೆ ಬಾಕಿ  ಪಾತ್ರಂಗೊ  ಅಥವಾ  ಪೂರ  ಕತೆ   ನೆಂಪಿಲಿ  ಒಳುದ್ದಿಲ್ಲೆ . ಆದರೂ  ನಾಟಕ  ತುಂಬ ಚೆಂದ ಇತ್ತಿದ್ದು ಹೇಳುದು ಸತ್ಯ. ಮೃಚ್ಚಕಟಿಕ  ನಾಟಕವ  ಮೂಲ  ಸಂಸ್ಕೃತಲ್ಲಿ  ಶೂದ್ರಕ ಕವಿ  ಬರದ್ದದಡ  . ಇದರ  ನಮ್ಮ  ನಾಡಿನ  ಮಹಾನ್  ವಿದ್ವಾಂಸ , ತತ್ವಜ್ಞಾನಿ , ಪ್ರಖ್ಯಾತ  ಪ್ರವಚನಕಾರ  ಬನ್ನಂಜೆ  ಗೋವಿಂದಾಚಾರ್ಯ  ಕನ್ನಡಲ್ಲಿ ಅನುವಾದ ಮಾಡಿದ್ದವು. ಇದರ ಓದಿಯಪ್ಪಗ ಎನ್ನ ಹಳೆ ನೆಂಪುಗ ಮತ್ತೆ ಮನಸ್ಸಿಲಿ ಮೂಡಿ ಬಂತು.

“ಮೃಚ್ಚಕಟಿಕ ” ದ  ಶಬ್ಧಾರ್ಥವ  ಗೋವಿಂದಾಚಾರ್ಯ  ಹೀಂಗೆ ವಿವರುಸುತ್ತವು .

‘ಮೃತ್’ ಹೇಳಿರೆ  ಆವೆ  ಮಣ್ಣು  – ಆಟದ  ಸಾಮಾನು  ತಯಾರು  ಮಾಡಲೆ  ಉಪಯೋಗಿಸುತ್ತದು.

ಪುಸ್ತಕದ ಮೋರೆಪುಟ

ಶಕಟಿಕಂ ಹೇಳಿರೆ ಆಟದ  ಬಂಡಿ .

‘ಮೃತ್  + ಶಕಟಿಕ’  ಕುರಿತು  ಬರದ  ಕೃತಿ  ‘ಮೃತ್ + ಶಕಟಿಕಂ ’ = ‘ಮೃಚ್ಚಕಟಿಕ ’ ಇದರ  ಕನ್ನಡ  ಅನುವಾದವೇ     “ಆವೆಯ ಮಣ್ಣಿನ  ಆಟದ  ಬಂಡಿ ”

ಅನುವಾದಿತ  ಪುಸ್ತಕಕ್ಕೆ  ಇದೇ ಹೆಸರು !

ಇದೊಂದು  ಸಾಮಾಜಿಕ  ನಾಟಕ . ವೇಶ್ಯೆ  ವಸಂತಸೇನೆ  ಮತ್ತೆ  ದರಿದ್ರ  ಚಾರುದತ್ತರ  ನಡುವಣ ಪ್ರಾಮಾಣಿಕ  ಪ್ರೇಮ  ಕಥೆ  ಈ  ನಾಟಕದ  ವಸ್ತು . ಒಟ್ಟು  ಹತ್ತು  ಅಂಕ  ಇಪ್ಪ  ನಾಟಕ  1996  ರಲ್ಲಿ  ಮದಲು  ಪ್ರಕಟ  ಆತು. ಮೂಲ  ಕೃತಿಲಿ   ಸಂಸ್ಕೃತ  ಮತ್ತೆ  ಪ್ರಾಕೃತ  ಭಾಷೇಲಿ  ಸಂಭಾಷಣೆ  ಇದ್ದರೆ  ಅನುವಾದ ಮಾಡುವಾಗ  ಲಿಖಿತ ಕನ್ನಡ  ಮತ್ತೆ  ದೇಶೀ ಭಾಷೆಯ  ಉಪಯೋಗಿಸಿದ್ದೆ  ಹೇಳಿ  ಬನ್ನಂಜೆ  ಹೇಳ್ತವು . ಶುರವಾಣ ಆವೃತ್ತಿಲಿ ಮೂಲ ಕೃತಿಲಿಪ್ಪದರ ಯಾವ  ಬದಲಾವಣೆ  ಮಾಡದ್ದೆ ಯಥಾವತ್ ಕನ್ನಡಕ್ಕೆ ರೂಪಾಂತರ ಮಾಡಿದ್ದವು..  ಪದ್ಯಂಗಳ ಮುಕ್ತ ಬಂಧಲ್ಲಿ ಅನುವಾದಿಸಿದ್ದವು. ರಂಗಪ್ರಯೋಗ ಮಾಡುವಾಗ ಇದರ ಪದ್ಯ ರೂಪಲ್ಲಿ ಹಾಡುಲಕ್ಕುಅಥವ ಗದ್ಯ ರೂಪಲ್ಲಿ ಹೇಳುಲಕ್ಕು. ಹಾಂಗಾಗಿ ಮೂಲ ಪದ್ಯಂಗಳ ಯೇವುದೇ ಛಂದಸ್ಸಿನ ಚೌಕಟ್ಟಿನ ಒಳ ಮಡುಗದ್ದೆ “ಗಪದ್ಯ” ದ  ರೂಪಲ್ಲಿ  ಅನುವಾದ ಮಾಡಿದ್ದವು.

2008 ರಲ್ಲಿ  ಎರಡನೇ  ಮುದ್ರಣಲ್ಲಿ  ಕೆಲವು  ಬದಲಾವಣೆ ಮಾಡಿದ್ದೆ ಹೇಳಿ ಲೇಖಕ° ಹೇಳಿದ್ದವು. ಇದರಲ್ಲಿ  ಸೂತ್ರಧಾರ° ಸಂಭಾಷಣೆಯ  ಕನ್ನಡಲ್ಲಿ  ಶುರು  ಮಾಡಿ  ಮತ್ತೆ  ಕುಂದಾಪುರದ  ‘ಕೋಟ  ಕನ್ನಡ’ ಲ್ಲಿ  ಮುಂದುವರುಸುತ್ತ°.  ಒಳುದ ಪಾತ್ರಂಗೊ ಶರ್ಮಿಲಕ , ಮದನಿಕೆ ,ರದನಿಕೆ , ಶಕಾರ  ಇತ್ಯಾದಿ  ಲಿಖಿತ  ಕನ್ನಡ ಅಥವಾ ದೇಶೀ ಕನ್ನಡಲ್ಲಿ  ಸಂಭಾಷಣೆ  ಮಾಡ್ತವು . ನಾಟಕಲ್ಲಿ ಬಪ್ಪ ಗಪದ್ಯದ ಒಂದು ಉದಾಹರಣೆ ಹಿಂಗಿದ್ದು, ಇದು ನಾಟಕದ ಶುರುವಿಂಗೆ ಸೂತ್ರಧಾರ°, ಕವಿಯ ಬಗ್ಗೆ ಹೇಳ್ತದು :

ಆನೆಯಂತೆ ನಡೆವ ಮಾಟ

ಚಕೊರದಂತ ಕಣ್ಣ ನೋಟ

ಮೊರೆಯೋ ಹುಣ್ಣಿಮೆಯ ಚಂದ್ರನೇ ತೇಟ

ಹೊರಬಲ್ಲ ದಿಟ್ಟ ಧೀರ

ದ್ವಿಜರಿಗೆಲ್ಲ ನೇತಾರ

ಖ್ಯಾತಕವಿ ಶೂದ್ರಕನು ಚೆಲುವಿನಾಗಾರ.

ಶಕಾರ ಈ ನಾಟಕದ ಖಳನಾಯಕ° , ಒಬ್ಬ  ಅಸಂಸ್ಕೃತನಾದ  ಬರೇ  ದಡ್ಡ  ಮನುಷ್ಯ . ಇವನ  ಸಂಭಾಷಣೆಲಿ  ಉದ್ದಕ್ಕೂ  ‘ಸಕಾರ’ದ ಬದಲು  ‘ಶಕಾರ’  ಉಪಯೋಗುಸುತ್ತದು  ಬನ್ನಂಜೆ  ಮಾಡಿದ  ಇನ್ನೊದು  ಬದಲಾವಣೆ , ಉದಾಹರಣೆಗೆ  ವಸಂತಸೇನೆಯ ‘ ವಸಂತಶೇನೆ ‘ ಹೇಳ್ತದು. ಒಂದು  ಸಂಭಾಷಣೆಯ  ತುಂಡು  ಹಿಂಗಿದ್ದು:

ಶಿಪ್ಪೆ ಶುಲಿದ ಮುಲ್ಲಂಗಿಯಂತೆ ಬೆಳ್ಳಗೆಯ ಮತ್ತು

ಪೊರೆಯೊಳಗೆ ಮುಳಿಗಿರುವ ಕತ್ತಿಯನು ಹೆಗಲಲ್ಲಿ ಹೊತ್ತು

ಹೆಣ್ಣು ನಾಯಿಗಳು ಗಂಡು ನಾಯಿಗಳು ಶುತ್ತ ಬೊಗಳುತಿರಲು

ನಾನು ಓಡುವೆನು ಮನೆಯ ಕಡೆಗೆ ಗಡಬಡಿಸಿ ನರಿಯ ಹಾಗೆ.

ಮೂಲ ಕಥೆಗೆ  ಯಾವುದೇ  ಚ್ಯುತಿ  ಬಾರದ್ದ  ಹಾಂಗೆ  ಕವಿ  ಶೂದ್ರಕನ  ಮಹಾನ್  ಕೃತಿಯ  ಯಥಾವತ್ತಾಗಿ  ಕನ್ನಡಕ್ಕೆ  ಅನುವಾದ  ಮಾಡುಲೆ  ಬನ್ನಂಜೆ  ಹಾಂಗಿಪ್ಪ ಸಮರ್ಥರೆ ಅಯೆಕ್ಕಷ್ಟೆ. ಇದರ ‘ನೀನಾಸಂ ’ ತಂಡದವು ಹಲವು  ಸರ್ತಿ  ರಂಗಲ್ಲಿ ಪ್ರಯೋಗ ಮಾಡಿದ್ದವಡ. ಅತ್ಯುತ್ತಮ  ಅನುವಾದಿತ  ಕೃತಿ  ಹೇಳಿ  ಕೆಂದ್ರ  ಸಾಹಿತ್ಯ  ಅಕಾಡೆಮಿ  ಪ್ರಶಸ್ತಿಯು  ಇದಕ್ಕೆ  ಸಿಕ್ಕಿದ್ದು.  ಗಂಜ್ಹೀಫಾ ರಘುಪತಿಯವರ ಮುಖಚಿತ್ರ ಪುಸ್ತಕಕ್ಕೆ ಮತ್ತಷ್ಟು ಮೆರುಗು ತಯಿ೦ದು.

ಪುಸ್ತಕ 04 – ಆವೆಯ ಮಣ್ಣಿನ ಆಟದ ಬಂಡಿ ., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  ಈ ಕನ್ನಡ ನಾಟಕವ ಇದೇ ಹೆಸರಿಲಿ ಎರಡು ಮೂರು ವರ್ಷದ ಮೊದಲು ಉಡುಪಿಯ ಎಮ್ ಜಿ ಎಮ್ ಕಾಲೇಜಿಲಿ ಆನು ನೋಡಿತ್ತಿದ್ದೆ. ಆಡಿತೋರಿಸಿದ ತಂಡ ಯಾವದು ಹೇಳಿ ಎನಗೆ ನನಪ್ಪಿಲ್ಲೆ. ನಾಟಕ ಬಾರೀ ಲಾಯ್ಕಿತ್ತು.
  (‘ಶಕಾರ’ ಉಪಯೋಗುಸುತ್ತದು ಬನ್ನಂಜೆ ಮಾಡಿದ ಇನ್ನೊದು ಬದಲಾವಣೆ)
  ಶಕಾರಂಗೆ ಆ ಹೆಸರು ಇಪ್ಪದೇ ಶಕಾರ ಉಪಯೋಗುಸುವ ಕಾರಣ. ಬನ್ನಂಜೆ ಮಾಡಿದ ಬದಲಾವಣೆ ಅಲ್ಲದೋ ಹೇಳಿ.
  ಆನು ಎಂಟ್ನೇ ಕ್ಲಾಸಿಲಿ ಇಪ್ಪಗ ಎಂಗಳ ಕನ್ನಡ ಮಾಷ್ಟ್ರು ಅನಂತ ಕೃಷ್ಣ ಹೆಬ್ಬಾರ ಇದರ ವಿವರಿಸಿದ್ದು ಎನಗೆ ಸರೀ ನೆಂಪಿದ್ದು. ಅವು ಇದಕ್ಕೆ ಒಂದು ಉದಾಹರಣೆ ಕೊಟ್ಟೊಂಡು ಇತ್ತಿದ್ದವು.
  ’ಬಿಶಿ ಬಿಶಿ ಮಶಾಲೆದೋಶೆ ತಿಂದು ಗಶೆ ಗಶೆ ಪಾಯಶ ಕುಡಿದೆ’

  [Reply]

  VA:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಇದು ಚಂದನ ಚೇನೆಲಿಲ್ಲಿ ನಾಟಕವಾಗಿ ಬೈಂದೋ ಹೇಳಿ ಅನುಮಾನ..
  ನೋಡಿದ ಹಾಂಗಾವುತ್ತು..

  ಧನ್ಯವಾದ..

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಕುಮಾರ ಮಾವ,ಬೈಲಿನ ಬ೦ಧುಗಳ ಓದುವ ಹವ್ಯಾಸ ಬೆಳವಲೆ ನಿ೦ಗಳ ಪುಸ್ತಕ ಪರಿಚಯ ಸರಣಿ ಸಹಕಾರಿ ಆವುತ್ತಾ ಇದ್ದು.ಅಭಿನ೦ದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಬನ್ನಂಜೆಯವರ ಅನುವಾದಿತ ನಾಟಕಕ್ಕೆ, ತೆಕ್ಕುಂಜೆಯವು ಬರದ ವಿಮರ್ಶೆ ಲಾಯಕಾಯಿದು. ಪುಸ್ತಕಂಗಳ ಬಗ್ಗೆ ನಿಂಗಳ ಆಸಕ್ತಿ, ಅದರ ಬೈಲಿಂಗೆ ಪರಿಚಯಿಸುತ್ತ ಕೆಲಸ ಅಭಿನಂದನೀಯ.

  [Reply]

  VA:F [1.9.22_1171]
  Rating: +1 (from 1 vote)
 6. ಸುಭಗ
  ಸುಭಗ

  ತೆಕ್ಕುಂಜ ಕುಮಾರಣ್ಣ ಒಳ್ಳೊಳ್ಳೆ ಪುಸ್ತಕಂಗಳ ಪರಿಚಯಿಸುತ್ತಾ ಇದ್ದವು. ಅಭಿನಂದನೆಗೊ.

  ಈ ಕಥೆಯ ಆಧರಿಸಿ ‘ವಸಂತಸೇನಾ’ ಹೇಳ್ತ ಹೆಸರಿಲ್ಲಿ ಹಿಂದಿ, ತೆಲುಗಿಲ್ಲಿ ಸಿನೆಮ ಬಯಿಂದು. 1984ರಲ್ಲಿ ‘ಉತ್ಸವ್’ ಹೇಳ್ತ ಹಿಂದಿ ಸಿನೆಮ ಸಾಕಷ್ಟು ಹೆಸರು ಮಾಡಿದ್ದು. ಇದರಲ್ಲಿ ಚೋರ ‘ಶರ್ವಿಲಕ’ನ ಪಾತ್ರವ ಕನ್ನಡಿಗ ಶಂಕರ್ ನಾಗ್ ಮಾಡಿದ್ದು.

  [Reply]

  VN:F [1.9.22_1171]
  Rating: 0 (from 0 votes)
 7. ಡಾಮಹೇಶಣ್ಣ
  ಮಹೇಶ

  “ದುಃಶಾಸನ ಸೀತೆಯ ವಸ್ತ್ರಾಪಹಾರ ಮಾಡುವಗ ರಾಮ ರಕ್ಷಿಸಲೆ ಬತ್ತ” ಹೀ೦ಗಿಪ್ಪ ಡೈಲಾಗುಗಳ ಹೇಳುವದು ಶಕಾರ.

  `ಶರ್ವಿಲಕ’ ಹೇಳುವ ಕಳ್ಳ ಇಪ್ಪದು ಇದೇ ಕಥೆಲ್ಲಿ ಅಲ್ಲದ ಕುಮಾರಣ್ಣ?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ನಇಂಗೊ ಸರಿ ಹೇಲಿದ್ದಿ..ಮಹೇಶಣ್ಣ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಬಂಡಾಡಿ ಅಜ್ಜಿಮಾಲಕ್ಕ°ಪೆಂಗಣ್ಣ°ವಸಂತರಾಜ್ ಹಳೆಮನೆದೇವಸ್ಯ ಮಾಣಿಪ್ರಕಾಶಪ್ಪಚ್ಚಿvreddhiದೀಪಿಕಾಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ಚೆನ್ನೈ ಬಾವ°ಚೆನ್ನಬೆಟ್ಟಣ್ಣನೆಗೆಗಾರ°ವಿಜಯತ್ತೆಬಟ್ಟಮಾವ°ಕೇಜಿಮಾವ°ಯೇನಂಕೂಡ್ಳು ಅಣ್ಣಅಕ್ಷರ°ಶ್ರೀಅಕ್ಕ°ಮುಳಿಯ ಭಾವಶಾ...ರೀನೀರ್ಕಜೆ ಮಹೇಶಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ