Oppanna.com

ಆನು ಓದಿದ ಪುಸ್ತಕ – 01

ಬರದೋರು :   ತೆಕ್ಕುಂಜ ಕುಮಾರ ಮಾವ°    on   06/04/2011    9 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಪುಸ್ತಕ ಓದುವ ಹವ್ಯಾಸ ಹೆಚ್ಚಿನವಕ್ಕೆ ಇರ್ತು.
ಆನು ಇತ್ಲಾಗಿ ಓದಿದ ಒಂದು ಪುಸ್ತಕ ತುಂಬ ಕುತೂಹಲಕಾರಿಯಾಗಿ ಕಂಡತ್ತು.
ಈ ಪುಸ್ತಕದ ಸಾರಾ೦ಶವ ಬೈಲಿಲಿ ಏಕೆ ಹಂಚುಲಾಗ ಹೇಳಿ ಕಂಡತ್ತು. ಇದು ಶುರುವಾಣ ಕಂತು.

ಜನವರಿ 30, ಗಾಂಧೀಜಿಯ ಪುಣ್ಯ ತಿಥಿ .
1948 ರಲ್ಲಿ, ಆಗಿ ಹೋದ ಈ ಹತ್ಯೆಯ ವಿಷಯ ಬಪ್ಪಗ ಗೋಡ್ಸೆ ಹೆಸರು ಮಾಂತ್ರ ನಮ್ಮ ಮನಸ್ಸಿಂಗೆ ಬಪ್ಪದು.
ಆದರೆ ಈ ಹತ್ಯೆಯ ಹಿಂದೆ ಎಷ್ಟು ಜೆನ ಇತ್ತಿದ್ದಿದವು, ಎಷ್ಟು ಪ್ರಸಂಗಂಗೊ ಆಗಿ ಹೋಯಿದು ಹೇಳ್ತದು ಇತ್ತೀಜೆಗೆ ಒಂದು ಪುಸ್ತಕ ಓದಿದ ಮೇಲೆ ಗೊಂತಾತು.
ಆನು ಹೇಳ್ತಾ ಇಪ್ಪದು ಮನೋಹರ್ ಮಲ್ಗಾವ್ಕರ್ ಬರದ “The Men Who Killed Gandhi” ಪುಸ್ತಕದ ಬಗ್ಗೆ. 1978 ರಲ್ಲಿ ಇದು ಮದಲು ಪ್ರಕಟ ಆಗಿತ್ತು.
ಗಾಂಧೀಜಿಯ ಹತ್ಯೆ ಸುತ್ತು ಇಪ್ಪ ಘಟನಾವಳಿಗಳ ಕ್ರೋಡೀಕರಿಸಿ ಬರೆದ ಒಂದು ಸಂಶೋಧನಾತ್ಮಕ ಕೃತಿ. 2008 ರಲ್ಲಿ ಹಲವಾರು ಹೊಸ ದಾಖಲೆಗಳ ,ಅಪರೂಪದ ಪಟಂಗಳ ಸೇರಿಸಿ ಮತ್ತೆ ಪುನಃ ಮುದ್ರಣ ಆಯಿದು.
ಅವುಗಳ ಪೈಕಿ ಗೋಡ್ಸೆ ಉಪಯೋಗಿಸಿದ ಪ್ಲೇನು ಟಿಕೇಟಿನ ಪ್ರತಿ, ಡೆಲ್ಲಿಲಿ ಹೋಟೇಲು ಮರೀನ ಹೋಟೆಲು ಮತ್ತೆ ರೈಲ್ವೆ ವೈಟಿಂಗ್ ರೂಮಿಲಿ ಉಳ್ಕೊಂಡದಕ್ಕೆ ರಶೀದಿ, ಕೆಂಪುಕೋಟೆಲಿ ನಡೆದ ವಿಚಾರಣೆಯ ಸಮಯಲ್ಲಿ ತೆಗೆದ ಫೊಟೊ, ಕೆಲವು ದಾಖಲೆಗ ಓದುಗರ ಮನಸೂರೆ ಮಾಡ್ತು.

ಪುಸ್ತಕದ ಮುಖಪುಟ

ಗಾಂಧಿಯ ಹತ್ಯೆ ಮಾಡಿದವರ ಪೈಕಿ ನಾಥೂರಾಮ್ ಗೋಡ್ಸೆ ಮತ್ತೆ ನಾರಾಯಣ್ ಅಪ್ಟೆ ಗಲ್ಲು ಶಿಕ್ಷೆಗೆ ಒಳಪಟ್ಟವು, ಮೂರು ಜನ – ವಿಷ್ಣು ಕರ್ಕರೆ,ಗೋಪಾಲ್ ಗೋಡಸೆ, ಮದನಲಾಲ್ ಪಹಾವ ಇವಕ್ಕೆ ಜೀವಾವಧಿ ಶಿಕ್ಷೆ ಆತು.
ದಿಗಂಬರ್ ಬಡ್ಗೆ ಹೇಳ್ತವ೦ಗೆ ಮಾಫಿ ಸಿಕ್ಕಿತ್ತಿದ್ದು. 1964 ರಲ್ಲಿ ಇವು ಜೈಲಿಂದ ಹೆರ ಬಂದ ಮೇಲೆ ಲೇಖಕ ಎಲ್ಲೊರನ್ನು ಕಂಡು ಮಾತಾಡಿಸಿ ಹತ್ಯೆಲಿ ಅವರವರ ಪಾತ್ರಂಗಳ ಬಗ್ಗೆ ವಿಷಯ ಸಂಗ್ರಹಿಸಿದ°.
ಅಲ್ಲದ್ದೆ ಶಂಕರ್ ಕ್ರಿಸ್ತಿಯ(ಬಡ್ಗೆಯ ಸಹಾಯಕ), ದಿಗಂಬರ್ ಪರ್ಚುರೆ(ಗೋಡ್ಸೆಗೆ ಪಿಸ್ತೂಲು ಒದಸಿದ ವ್ಯಕ್ತಿ) ಇತ್ಯಾದಿ ಸಂಬಂದ ಪಟ್ಟ ಜನಂಗಳ ಕಂಡದೂ ಅಲ್ಲದ್ದೆ ಎಲ್ಲ ದಾಖಲೆ,ಪುರಾವೆಗಳ ಕೂಲಾಂಕುಷವಾಗಿ ಪರಿಶೋಧಿಸಿ ಒಂದು ಕುತೂಹಲಕಾರಿ ಗ್ರಂಥದ ರೂಪ ಕೊಟ್ಟಿದ°.( ಥ್ರಿಲ್ಲೆರ್..!) .

ಸ್ವಾತಂತ್ರ್ಯಾನಂತರದ ಘಟನಾವಳಿಗ -ದೇಶದ ವಿಭಜನೆ, ನಂತರದ ದಂಗೆ, ಗಾಂಧೀಜಿಯ ಉಪವಾಸ – ಹೇಂಗೆ ಗಾಂಧಿ ಹತ್ಯೆಗೆ ಕಾರಣ ಆತು ಹೇಳುದರ ಲೇಖಕ ಬರದ್ದ°.ದೇಶ ವಿಭಜನೆಯ ನಂತರ ಭಾರತ ಪಾಕಿಸ್ತಾನಕ್ಕೆ ೫೫ ಕೋಟಿ ರೂಪಾಯಿ ಕೊಡೆಕ್ಕು ಹೇಳಿ ಗಾಂಧೀಜಿ ಉಪವಾಸ ಮಾಡ್ಲೆ ಹೆರಟ ಶುದ್ದಿ ಕೇಳಿ ಗೋಡ್ಸೆಯೂ, ಆಪ್ಟೆಯೂ ಗಾಂಧಿಯ ಹತ್ಯೆ ಮಾಡಿಕ್ಕುಹೇಳಿ ನಿರ್ಧಾರಕ್ಕೆ ಬತ್ತವು. ಜನವರಿ ೨೦ ಕ್ಕೆ ಇಬ್ರೂ ಸೇರಿ ಮದನಲಾಲ್ ಮತ್ತೆ ಬಡ್ಗೆ ಇವರ ಸಕಾಯ ತೆಕ್ಕೊಂಡು ಹತ್ಯೆಗೆ ಶುರುವಾಣ ಪ್ರ್ಯಯತ್ನ ಮಾಡಿತ್ತಿದ್ದವು.
ಬಡ್ಗೆ ಆ ದಿನಾಣ ಪ್ರಾರ್ಥನಾ ಸಭೆಲಿ ಗುಂಡು ಹಾರ್ಸಿ ಗಾಂಧಿಯ ಕೊಲ್ಲೆಕ್ಕು, ಅದೇ ಸಮಯಲ್ಲಿ ಜನಂಗಳ ಚದುರುಸುಲೆ ಬೇಕಾಗಿ ಮದನಲಾಲ್ ಸಭೆಲಿ ಬಾಂಬು ಹೊಟ್ಟುಸುದು, ಹೇಳಿಗೊಂಡು ಯೋಜನೆ ಮಾಡ್ತವು..
ಆದರೆ ಬಡ್ಗೆಗೆ ಒತ್ತೆ ಕಣ್ಣಿನ ಮನುಷ್ಯ ಕಂಡ ಕಾರಣ ಅಪಶಕುನ ಹೇಳಿಗೊಂಡು ಹೆದರಿ ಕೈ ಕೊಡ್ತ°.
ಮದನಲಾಲ್ ಬಾಂಬು ಹೊಟ್ಟಿಸಿ ಸಿಕ್ಕಿಬೀಳ್ತ°. ಒಟ್ಟಿಂಗೆ ಇದ್ದವು- ಗೋಡ್ಸೆ,ಆಪ್ಟೆ,ಕರಕರೆ,ಗೋಪಾಲ್ ತಪ್ಪಿಸಿಗೊಳ್ತವು. ಇವರ ಪೋಲೀಸುಗ ಕೂಡ್ಲೆ ವಶಕ್ಕೆ ತೆಕ್ಕೊಂಡಿದ್ದಿದ್ದರೆ ಜನವರಿ ೩೦ರಂದು ಆದ ಗಾಂಧಿಯ ಹತ್ಯೆಯ ತಡವಲೆ ಆವುತ್ತಿತ್ತು ಹೇಳುದರ ಲೇಖಕ ಒತ್ತಿ ಹೇಳಿದ್ದ°.
ಅಲ್ಲದ್ದೆ ಪಾತಕಿಗೊ ಎಲ್ಲಾ ಹಂತಂಗಳಲ್ಲಿ ಒಂದಲ್ಲಾ ಒಂದು ಪುರಾವೆಯ ಬಿಟ್ಟಿದವು ಹೇಳ್ತದು ಗೊಂತಾವುತ್ತು. ನಂತ್ರ ಕೆಂಪುಕೋಟೆಲಿ ನಡದ ವಿಚಾರಣೆ, ಆಮೇಲೆ ಗೋಡ್ಸೆ ಅಪೀಲು ಕೋರ್ಟಿಲಿ ಮಾಡಿದ ಸುದೀರ್ಘ ಹೇಳಿಕೆ ಎಲ್ಲ ಕುತೂಹಲಕಾರಿಯಾಗಿ ಇದ್ದು.
ಈ ಹೇಳಿಕೆಲಿ ಗೋಡ್ಸೆ ಗಾಂಧೀಜಿಯ ವಿಷಯಲ್ಲಿ ಅತಿರೇಕದ ಕ್ರಮ ತೆಕ್ಕೊಳೆಕ್ಕಾಗಿ ಬಂದ ಕಾರಣವ ವಿವರುಸುತ್ತ°.
ಅದರ ಪರಿಣಾಮದ ಪೂರ್ತಿ ಕಲ್ಪನೆ ಅವ೦ಗೆ ಇತ್ತು ಹೇಳ್ತದು ಗೊಂತಾವುತ್ತು. ಜನಂಗೊ ಅವನ ಬಗ್ಗೆ ತಮ್ಮ ದೃಷ್ಟಿಕೋನ ಬದಲ್ಸುಗು, ಮತ್ತೆ ಅವನ ಬಗ್ಗೆ ಮಡಗಿದ್ದ ಅಂತಃಕರಣ ಎಲ್ಲಾ ಪೂರ್ಣ ನಾಶ ಅಕ್ಕು ಹೇಳ್ತ ಕಲ್ಪನೆಯೂ ಅವ೦ಗೆ ಇತ್ತಿದ್ದು ಹೇಳಿ ಗೊಂತಾವುತ್ತು.
ಅಕೇರಿಲಿ ಅವ° ಹೇಳಿದ ಮಾತು ಗಮನ ಸೆಳೆತ್ತು – ” ಎಲ್ಲ ಹೊಡೆಂದಲೂ ಎನ್ನ ಕೃತ್ಯದ ಖಂಡನೆ ಬಂದರುದೇ ಎನ್ನ ಕೃತ್ಯದ ನೈತಿಕತೆ ಬಗ್ಗೆ ಎನಗಿಪ್ಪ ವಿಶ್ವಾಸ ಅಲ್ಲಾಡದ್ದೆ ನಿಶ್ಚಲವಾಗಿದ್ದು. ಪ್ರಾಮಾಣಿಕರಾಗಿಪ್ಪ ಒಬ್ಬ ಇತಿಹಾಸಕಾರ° ಮುಂದೆ ಒಂದುದಿನ ಎನ್ನ ಕೃತ್ಯವ ತೂಗಿ ನೋಡಿ ಯೋಗ್ಯ ಬೆಲೆ ಕೊಡುಗು ಹೇಳ್ತದರಲ್ಲಿ ಎನಗೆ ಸಂಶಯ ಇಲ್ಲೆ” ಗೋಡ್ಸೆಯ ಈ ಹೇಳಿಕೆ ಎಷ್ಟು ಪರಿಣಾಮಕಾರಿ ಇತ್ತಿದ್ದು ಹೇಳ್ತದಕ್ಕೆ, ಒಬ್ಬ° ಜಸ್ಟಿಸ್ (ಜಿ.ಡಿ. ಕೋಸ್ಲ) ಹೇಳಿದ್ದು ಕುತೂಹಲ ಮೂಡ್ಸುತ್ತು. “ಆ ದಿನಾಣ ಪ್ರೇಕ್ಷಕರಿಂಗೆ ( ಕೋರ್ಟಿಲಿ ಇತ್ತಿದ್ದ) ನ್ಯಾಯದರ್ಶಿಗಳಾಗಿ ತೀರ್ಮಾನ ತೆಕ್ಕೊಂಬ ಜವಾಬ್ದಾರಿ ಕೊಟ್ಟಿದ್ದರೆ ಅವು ಗೋಡ್ಸೆ ನಿರಪರಾಧಿ ಹೇಳುವ ನಿರ್ಧಾರಕ್ಕೆ ಬತ್ತಿತ್ತವು”

ನಮ್ಮ ದೇಶ ಕಂಡ ಒಂದು ಅತೀಮುಖ್ಯ ಐತಿಹಾಸಿಕ ಘಟನೆಯ ಸುತ್ತ ಪ್ರಚಲಿತಲ್ಲಿ ಇಪ್ಪ ಮಾಹಿತಿಯ ಹೊರತಾಗಿ ನವಗೆ ಗೊಂತಿಲ್ಲದ್ದೆ ಇಪ್ಪ ವಿಚಾರಂಗಳ ಈ ಪುಸ್ತಕವ ಓದಿ ತಿಳ್ಕೊಂಬಲಕ್ಕು.

ಸೂ:
ಈ ಪುಸ್ತಕದ ಸಂಕೊಲೆ ಇಲ್ಲಿದ್ದು.

9 thoughts on “ಆನು ಓದಿದ ಪುಸ್ತಕ – 01

  1. ಬೈಲಿಲಿ ಪುಸ್ತಕ ಪರಿಚಯವೂ ಸುರು ಆದ್ದು ಒಳ್ಳೆದಾತು.
    ಬರದ್ದೂ ಒಪ್ಪಾಯಿದು. ಇನ್ನಷ್ಟು ಪುಸ್ತಕಂಗಳ ನಿರೀಕ್ಷೆಲಿರ್ತೆಯೊ.

  2. ತೆಕ್ಕುಂಜೆ ಕುಮಾರಣ್ಣಾ..
    ತುಕ್ಕು ಹಿಡುದು ಹೋಗದ್ದ ಹಾಂಗೆ ಬೈಲಿನೋರ ಎಲ್ಲೋರಿಂಗೂ ಒಳ್ಳೊಳ್ಳೆ ಮಾಹಿತಿಯ ಕೊಡ್ತಾ ಇದ್ದಿ.
    ಆ ಪ್ರಯತ್ನಂಗಳಲ್ಲಿ ಇದೊಂದು ತುಂಬಾ ಚೆಂದದ್ದು.

    ಹೊಸ ಅಂಕಣವನ್ನೇ ಸುರುಮಾಡಿದಿ, ಪುಸ್ತಕ ಪರಿಚಯ!!

    ಒಳ್ಳೆ ಪುಸ್ತಕದ ಪರಿಚಯದ ಒಟ್ಟಿಂಗೆ ಆರಂಭ ಆತು. ಮುಂದುವರಿಯಲಿ.
    ಕೊಳಚ್ಚಿಪ್ಪು ಬಾವನ ಹತ್ರೆ ಇದ್ದೋ ಏನೋ, ಈ ಪುಸ್ತಕ. ಉಮ್ಮ, ನಾಳ್ತು ಸಿಕ್ಕಿಪ್ಪಗ ಕೇಳ್ತೆ.

    1. ಅಕ್ಕು.
      ಕೊಳಚ್ಚಿಪ್ಪು ಬಾವ “Victoria Gouramma – the lost Princess of Coorg” ಪುಸ್ತಕದ ಬಗ್ಗೆ ಬರದ್ದರ ಬೈಲಿಲಿ ನೊಡಿದ್ದೆ. ಪುಸ್ತಕ ಎಲ್ಲಿ ಸಿಕ್ಕುಗು ಹೇಳಿ ಹುಡುಕುತ್ತೆ.

  3. ಪರಿಚಯ ಮಾಡಿದ್ದಕ್ಕೆ ಧನ್ಯವಾದ.

  4. ರಾಜಕೀಯ ಪಕ್ಷ೦ಗೊ ದೇಶದ ಇತಿಹಾಸವ ತಮಗೆ ಬೇಕಾದ ಹಾ೦ಗೆ ತಿರುಗಿಸಿದರೂ ಇ೦ತಹಾ ಪುಸ್ತಕ೦ಗೊ ನಿಜರೂಪವ ತೋರುಸುತ್ತು.ಕುಮಾರಣ್ಣನ ಮನೆಲಿ ಈ ಪುಸ್ತಕವ ಮೇಗ೦ದ ಮೇಗೆ ಓದಿಯಪ್ಪಗ ಎನಗೆ ಹೀ೦ಗೆಲ್ಲಾ ಇದ್ದೋ ಹೇಳಿ ಕ೦ಡತ್ತು.ಗಾ೦ಧೀಜಿ ಸತ್ತ ಮರದಿನದ ಪತ್ರಿಕೆಗಳ ಪ್ರತಿ೦ದ ಹಿಡುದು ದೇಶ ವಿಭಜನೆಯ ಕೆಲವು ದೃಶ್ಯ೦ಗಳ ವರೆಗೆ ಯಾವುದೇ ಪೂರ್ವಾಗ್ರಹ ಇಲ್ಲದ್ದೆ ಶೋಧನೆ ಮಾಡಿ ಬರದ ಪುಸ್ತಕ ಇದು.ಆಸಕ್ತಿದಾಯಕವಾಗಿ ಬರದ್ದ.
    ಆರು ಸರಿ ಆರು ತಪ್ಪು ಹೇಳುವ ಅಭಿಪ್ರಾಯವ ಲೇಖಕ ಎಲ್ಲಿಯೂ ಬರೆಯದ್ದೆ ಆ ವಿಮರ್ಶೆಯ ಓದುಗರಿ೦ಗೆ ಬಿಟ್ಟದು ವಿಶೇಷ.
    ಒ೦ದು ಒಳ್ಳೆ ಪುಸ್ತಕದ ಪರಿಚಯ ಆತು ಕುಮಾರಣ್ಣ.ಇನ್ನೂ ಹೀ೦ಗೆಯೇ ಬರಳಿ.ಬೈಲಿನ ಓದುಗರಿ೦ಗೆ ಹೊಸ ವಿಷಯ೦ಗೊ ಸಿಕ್ಕಲಿ.

  5. ಕುಮಾರಣ್ಣ ಒಪ್ಪ ಮಾಡಿದಿ. ಹೀಂಗಿಪ್ಪದು ಹಂಚುತ್ತಾ ಇರಿ ನಿಂಗಳ ಕ್ರೈಂ ಸ್ಟೋರಿ ಸಂಗ್ರಹಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×