ಪುಸ್ತಕ ಪರಿಚಯ : How to talk with God

September 3, 2013 ರ 2:03 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ,

ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ.

ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು.

1937003

ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic Energy)  ಮತ್ತೆ  ನಮ್ಮೊಳವೇ ಇಪ್ಪ ಒಂದು ದೂರವಾಣಿ  ವ್ಯವಸ್ಥೆಯ (intuitive telephonic system) ತುಂಬ ವೈಜ್ಞಾನಿಕವಾಗಿ ಹೇಳುತ್ತವು. ಅವು ದೇವರು ಮತ್ತು ಮನುಷ್ಯನ ವ್ಯಕ್ತಿತ್ವ ಮತ್ತು ಸಂಬಂಧದೊಟ್ಟಿಂಗೆ, ನಾವು ಏಕೆ  ದೇವರ  ಅಚ್ಚಿನ  ಹಾಂಗೇ ಇಪ್ಪದು ಹೇಳುದಕ್ಕೂ ಕಾರಣ ಕೊಡ್ತವು. ನಮ್ಮ ದೇವರ ಸಂಬಂಧ ಹೇಂಗಿರೆಕು ಹೇಳುದನ್ನೂ ತುಂಬ  ಸರಳವಾಗಿ – ಮಕ್ಕೊಗೂ ಅರ್ಥ ಅಪ್ಪಹಾಂಗೆ ವಿವರಿಸಿದ್ದವು.

ಇದರ ಬರದವ್ವು ಆಧ್ಯಾತ್ಮಿಕ ಗುರುಗಳ ಸಾಲಿಲ್ಲಿ ಪ್ರಮುಖರಲ್ಲೊಬ್ಬರಾದ, ಶ್ರೀ ಶ್ರೀ ಪರಮಹಂಸ ಯೋಗಾನಂದರು. ಅವರ ಜೀವನ ಕಥೆಯಾದ ‘ಯೋಗಿಯ ಆತ್ಮಕಥೆ ಪೌರಾತ್ಯ ಮತ್ತೆ ಪಾಶ್ಚಿಮಾತ್ಯ ದೇಶಲ್ಲೆಲ್ಲ  ತುಂಬ  ಜನರಿಂದ  ಮೆಚ್ಚುಗೆಗೆ ಪಾತ್ರ ಆಯಿದು.

ಅದರಲ್ಲಿ ಆಧ್ಯಾತ್ಮಿಕ ವಿಚಾರಂಗಳ  ವೈಜ್ಞಾನಿಕವಾಗಿ ನಿರೂಪಿಸಿದ್ದೂ, ಬೈಬಲ್  ಮತ್ತು  ಭಗವದ್ಗೀತೆಲಿ  ಹೇಳಿದ  ವಿಷಯಂಗಳ ತುಲನೆ ಮಾಡಿ ಅವೆರಡೂ ಒಂದೇ ಹೇಳಿ ತೋರುಸಿದ್ಡೂ ತುಂಬ ಜನ ಅದರ ಓದುಲೆ ಕಾರಣ ಆತು. ಅವು ಅಂದು ಹೇಳಿದ ವಿಷಯಂಗಳ ‘ಯೋಗದಾ ಸತ್ಸಂಗ ಸೊಸೈಟಿ’ ಈಗಳೂ ಮುದುವರೆಸಿಯೊಂಡು ಬತ್ತಾ ಇದ್ದು.

ಆ ದಿವ್ಯತೆಯೊಟ್ಟಿಂಗೆ ಅವರ ಸ್ವಂತದ ಅನುಭವವ ಬರವ ಲೇಖಕರು, ದೇವರು ಜಗತ್ತಿನ ಎಲ್ಲದರ ಅಪ್ಪನೂ ಅಪ್ಪು,  ಅಬ್ಬೆಯೂ ಅಪ್ಪು ಹೇಳಿ ಹೇಳ್ತವು. ದೇವರು ನಮ್ಮಿಂದ ಬಯಸುದು ಎಂತರ? ನಾವು  ಪ್ರಾರ್ಥನೆ  ಮಾಡೆಕಾದ್ದು  ಹೇಂಗೆ ಹೇಳಿಪ್ಪದರ ವಿವರುಸುತ್ತವು. ದೇವರ ಸ್ವರ ನಾವು ಕೇಳೆಕಾದ್ದು ಹೇಂಗೆ? ಕೇಳಿ ಉತ್ತರ ಕೊಡುದು ಹೇಂಗೆ? ಹೇಳಿ ಹೇಳುವ ಈ  ಪುಸ್ತಕ  ಅವರ  ಆತ್ಮಕಥೆಯನ್ನೇ ಸಣ್ಣಕೆ ಬರದ ಹಾಂಗಿದ್ದು. ಒಂದು  ಸಣ್ಣನೂರು  ಪುಟದ  ಹದಿನೈದಿಪ್ಪತ್ತು  ರುಪಾಯಿಯ  ಈ  ಪುಸ್ತಕ ನಿಜವಾಗಿಯೂ ಸಂಗ್ರಹಯೋಗ್ಯ.

ತುಂಬ ದೊಡ್ಡ ವಿಚಾರವ ತುಂಬ ಸುಲಭಲ್ಲಿ ಹೇಳುವ ಕೆಲವೇ ಕೆಲವು ಪುಸ್ತಂಗಳಲ್ಲಿ ಇದೂ ಒಂದು.  ಎನ್ನ  ದೋಸ್ತಿ  ಬೆಂಗ್ಳೂರಿಲ್ಲಿಪ್ಪವ° ಬಂದಿಪ್ಪಗ ಈ ಪುಸ್ತಕ ತಂದಿತ್ತಿದ್ದ°.
ಓದಿ ಖುಶೀ ಆತು, ಹಾಂಗೆ ಬೈಲಿಂಗೆ ಹೇಳಿಕ್ಕುವೊ° ಕಂಡತ್ತು.

ಒಪ್ಪ.

ನಿಂಗಳ,

ಮಂಗ್ಳೂರ ಮಾಣಿ.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಒಳ್ಳೆ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಂಗ

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಧನ್ಯವಾದ ಅತ್ತೆ ಃ)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಅಕ್ಷರ°ವಸಂತರಾಜ್ ಹಳೆಮನೆವೆಂಕಟ್ ಕೋಟೂರುಮಾಷ್ಟ್ರುಮಾವ°ದೇವಸ್ಯ ಮಾಣಿಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ಜಯಶ್ರೀ ನೀರಮೂಲೆವೇಣೂರಣ್ಣಗೋಪಾಲಣ್ಣಪುತ್ತೂರಿನ ಪುಟ್ಟಕ್ಕವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಪೆರ್ಲದಣ್ಣಜಯಗೌರಿ ಅಕ್ಕ°ಸುಭಗಶರ್ಮಪ್ಪಚ್ಚಿನೆಗೆಗಾರ°ಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ