ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಬೊಳುಂಬು ಮಾವ°ಮಂಗ್ಳೂರ ಮಾಣಿಕಳಾಯಿ ಗೀತತ್ತೆಗಣೇಶ ಮಾವ°ಸುಭಗದೊಡ್ಡಮಾವ°ಅಕ್ಷರ°ಕಾವಿನಮೂಲೆ ಮಾಣಿವಸಂತರಾಜ್ ಹಳೆಮನೆಪೆರ್ಲದಣ್ಣಪುಟ್ಟಬಾವ°ಶುದ್ದಿಕ್ಕಾರ°ಅಜ್ಜಕಾನ ಭಾವಚೂರಿಬೈಲು ದೀಪಕ್ಕಶ್ಯಾಮಣ್ಣಚುಬ್ಬಣ್ಣಶೇಡಿಗುಮ್ಮೆ ಪುಳ್ಳಿವಿದ್ವಾನಣ್ಣಅಡ್ಕತ್ತಿಮಾರುಮಾವ°ದೊಡ್ಡಭಾವಬಂಡಾಡಿ ಅಜ್ಜಿಪವನಜಮಾವತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣಪುತ್ತೂರುಬಾವಮುಳಿಯ ಭಾವಡೈಮಂಡು ಭಾವಶರ್ಮಪ್ಪಚ್ಚಿವೇಣೂರಣ್ಣಪೆಂಗಣ್ಣ°ಚೆನ್ನೈ ಭಾವ°ಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ನೀರ್ಕಜೆ ಮಹೇಶಸಂಪಾದಕ° (editor)ಯೇನಂಕೂಡ್ಳು ಅಣ್ಣಶ್ರೀಅಕ್ಕ°ಬಲ್ನಾಡುಮಾಣಿದೇವಸ್ಯ ಮಾಣಿಸರ್ಪಮಲೆ ಮಾವ°ಅಕ್ಷರದಣ್ಣನೆಗೆಗಾರ°ಗೋಪಾಲಣ್ಣದೀಪಿಕಾಎರುಂಬು ಅಪ್ಪಚ್ಚಿವೇಣಿಯಕ್ಕ°ಹಳೆಮನೆ ಅಣ್ಣಡಾಮಹೇಶಣ್ಣಬಟ್ಟಮಾವ°ಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿಶಾಂತತ್ತೆಒಪ್ಪಕ್ಕಕೊಳಚ್ಚಿಪ್ಪು ಬಾವಅನು ಉಡುಪುಮೂಲೆಕೇಜಿಮಾವ°


ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2

February 22, 2012 ರ 10:00 amಗೆ ನಮ್ಮ ದೀಪಿಕಾ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಲಿ ದೀಪಿ ಅಕ್ಕ° ಮಂಕುತಿಮ್ಮನ ಕಗ್ಗದ ಎರಡನೆ ಕಂತು ಕೊಡ್ತಾ ಇದ್ದವು.
ಎಲ್ಲೋರೂ ಕೇಳಿ ಕೂಸಿನ ಪ್ರೋತ್ಸಾಹಿಸಿ.

ಸುರುವಿಂಗೆ ಕಲ್ತು ಹಾಡಿದ ಕಗ್ಗಂಗಳ ಎಲ್ಲೋರೂ ಇಷ್ಟ ಪಟ್ಟು ಇನ್ನಷ್ಟು ಬೈಲಿಲಿ ಬರೆಕ್ಕು ಹೇಳುವ ಆಶಯ ವ್ಯಕ್ತ ಪಡಿಸಿದ್ದಿ.
ಎಲ್ಲೋರ ಪ್ರೋತ್ಸಾಹ ಕಂಡು ತುಂಬಾ ಖುಷಿ ಆತು. ಕಗ್ಗವ ಎನ್ನಂದಾದಷ್ಟರ ಮಟ್ಟಿಂಗೆ ಬೈಲಿಲಿ ತಪ್ಪ ಪ್ರಯತ್ನ ಮಾಡ್ತೆ. ಜೀವನ ತತ್ತ್ವವ ನವಗೆ ಸರಳವಾಗಿ ಗುಂಡಜ್ಜ° ತೋರುಸಿ ಕೊಟ್ಟಿದವು.
ರತ್ನತುಲ್ಯವಾದ ಸಾವಿರದ ಕಗ್ಗಂಗಳಲ್ಲಿ ಆಯ್ದ ಐದು ಕಗ್ಗಂಗ:

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ।
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ।
ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಭೂಮಿಲಿ ಚಿಗುರಿಗೊಂಡಿಪ್ಪ ಹುಲ್ಲಿಂಗೆ ಹಸುರು ಬಣ್ಣ ಎಲ್ಲಿಂದ ಬಂತು? ಹುಲ್ಲಿನ ಬೇರಿಂದಲಾ? ಅದು ಹೊಂದಿಗೊಂಡಿಪ್ಪ ಮಣ್ಣಿಂದಲಾ? ಬೆಳಕು ಕೊಡುವ ಸೂರ್ಯಂದಲಾ, ತಂಪು ಕೊಡುವ ಚಂದ್ರಂದಲಾ? ನೀರಿಂದಲಾ? ಹಸುರಿನ ನೋಡಿ ತಣಿವ ನಿನ್ನ ಕಣ್ಣಿನ ಪುಣ್ಯಂದ ಆಗಿಕ್ಕೋ ಈ ಯಾವ ಒಂದು ಗುಣಂದ ಬಂದಿಕ್ಕು ಹಸುರು ಬಣ್ಣ? ಪ್ರಕೃತಿಲಿ ಹಸುರು ಗುಣ ಬಪ್ಪಲೆ ಕಾರಣ ಹಲವಿದ್ದು! ಒಂದೇ ಅಲ್ಲ!!

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ – ಮಂಕುತಿಮ್ಮ ॥
ಹಿಮಾಲಯ ಪರ್ವತ ಹೆರ ಹಿಮಶೀತಂದ ಕೂಡಿದ್ದರೂ ಕೂಡಾ ಅದರೊಳ ಚೈತನ್ಯ ಹೇಳ್ತ ಅಗ್ನಿಕಣಂಗ ಇದ್ದು. ಈ ಅಗ್ನಿ ಭೂಮಿಯ ಒಳವೇ ನಿಶ್ಚಲವಾಗಿಯೇ ಇದ್ದುಗೊಂಡು ಭೂಮಿಗೆ ಹಿತ ಕೊಡ್ತು. ಆ ಸಾತ್ತ್ವಿಕ ಗುಣ ಅತ್ಯಂತ ಗಂಭೀರವಾದ್ದದು. ಇದು ನವಗೆ ಒಂದು ವೇದನಿಧಿಯಾಗಿದ್ದು. ನಮ್ಮೊಳ ಇಪ್ಪ ಜ್ಞಾನನಿಧಿ ಕೂಡಾ ಈ ಅಗ್ನಿಯ ಹಾಂಗೆ ಶಾಂತವಾಗಿರೆಕ್ಕು, ಸಂದರ್ಭಕ್ಕೆ ಹಿಗ್ಗದ್ದೆ – ಕುಗ್ಗದ್ದೆ ಸಾತ್ತ್ವಿಕವಾಗಿ ಸಮಾನವಾಗಿರೆಕ್ಕು. ಅಂಬಗ ನಮ್ಮ ಜೀವನವೂ ಹಿಮಾಲಯದ ಮಹಿಮೆಯ ಹಾಂಗೆ ಉನ್ನತವೂ, ಗರಿಮೆಯೂ ಹೊಂದುಗು.

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥
ಆರು ಋತುಗಳ ಚಕ್ರ ತಿರುಗುತ್ತಾ ಇರ್ತು. ಕಾಲಯಮನ ಮನಸ್ಸೂ ಕೂಡಾ ಕರಗುಗು. ಸತ್ತು ಮಣ್ಣಾದವಂದ ಹೊಸತ್ತು ಹುಲ್ಲು ಚಿಗುರಿ ಬಂದು ಅಬ್ಬೆಭೂಮಿ ಗರ್ಭ ಧರಿಸುತ್ತು. ಸತ್ತ ಜೀವ ಪುನಾ ಜೀವ ತಾಳ್ತು. ಪ್ರಕೃತಿಲಿ ಇದೇ ಕೃಷಿ ನಿರಂತರವಾಗಿ ಸಹಜವಾಗಿಯೇ ಆವುತ್ತಾ ಇರುತ್ತಲ್ಲದಾ?

ಅಡಿ ಜಾರಿ ಬೀಳುವುದು, ತಡವಿಕೊ೦ಡೇಳುವುದು |
ಕಡುಬ ನು೦ಗುವುದು, ಕಹಿ ಮದ್ದ ಕುಡಿಯುವುದು ||
ದುಡುಕಿ ಮತಿ ತಪ್ಪುವುದು, ತಪ್ಪನೊಪ್ಪನ್ನುವುದು |
ಬದುಕೆ೦ಬುದಿದು ತಾನೆ -ಮ೦ಕುತಿಮ್ಮ ||
ಅಜೆ ತಪ್ಪಿ ಬೀಳುದು, ಬಿದ್ದಲ್ಲಿಂದ ಪರಡಿ ಏಳುದು ಹಾಂಗೆಯೇ ಮಿತಿಮೀರಿ ಕಡುಂಬು (ಕಡುಬು, ಕೊಟ್ಟಿಗೆ) ತಿಂದು ಆರೋಗ್ಯ ಹಾಳಪ್ಪಗ ಕೈಕ್ಕೆ ಮದ್ದು ತಿಂಬದು, ಬುದ್ಧಿಗೆಟ್ಟು ದುಡುಕಿ ಮಾತಾಡಿ, ತಪ್ಪು ತಿದ್ದಿಗೊಂಬದು. ನಮ್ಮ ಬದುಕ್ಕು ಹೇಳಿದರೆ ಹೀಂಗೇ ಅಲ್ಲದಾ?

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವ೦ತೆ ||
ಬಾಳನೀ ಜಗದ ಮ೦ತುವು ಕಡೆಯಲೇಳುವುದು |
ಆಳದಿ೦ದಾತ್ಮಮತಿ – ಮ೦ಕುತಿಮ್ಮ ||
ಹಾಲಿನ ಕಾಸಿ, ಹೆಪ್ಪು ಹಾಕಿ ಮೊಸರು ಮಾಡಿ ಕಡದಪ್ಪಗ ಮೊದಲು ಕಾಣದ್ದೇ ಇಪ್ಪ ಬೆಣ್ಣೆ ತೇಲಿ ಬಪ್ಪ ಹಾಂಗೆ, ನಮ್ಮ ಬದುಕ್ಕಿನ ಜಗತ್ತು ಹೇಳುವ ಮಂತು ಕಡದಪ್ಪಗ ನಮ್ಮ ಅಂತರಾಳಂದ ಆತ್ಮಮತಿ ಹೇಳುವ ಬೆಣ್ಣೆ ಹಗುರವಾಗಿ ತೇಲಿ ಬತ್ತು!!

ಧ್ವನಿ:

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ದೀಪಿಕಾ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +1 (from 1 vote)

    ಲಾಯಕ ಆಯ್ದು ಅಕ್ಕೊ.
    ಮಂಕುತಿಮ್ಮನ ಕಗ್ಗ ನಮ್ಮ ಬದುಕ್ಕಿನ ಜಗತ್ತಿನ ಒಳ್ಳೆ ತತ್ವ ಮತ್ತು ಸಾರವ ಸಾರುತ್ತು ಮತ್ತು ನಿಂಗಳ ಸುಶ್ರಾವ್ಯ ಧ್ವನಿ ಸಹಿತ ಶುದ್ದಿ ವಿವರಣೆ ಓದುವಾಗ ಹೃದಯಸ್ಪರ್ಶಿ ಆವ್ತು ಎಂಬುದಾಗಿಯೂ., ಧಾರವಾಹೀಯಾಗಿ ಇನ್ನೂ ಬರುತ್ತಾ ಇರಲಿ ಹೇದು ಹೇಳಿತ್ತು -’ಚೆನ್ನೈವಾಣಿ’

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ನಿ೦ಗೊಳ ಪ್ರೋತ್ಸಾಹಕರ ಒಪ್ಪಕ್ಕೆ ಧನ್ಯವಾದ ಮಾವ..

    [ಉತ್ತರುಸಿ]

  2. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: +1 (from 1 vote)

    ದೀಪಿಅಕ್ಕ.! ಅದ್ಬುತ.. ಬಾರಿಲಾಯಕೆ ರಾಗಲ್ಲಿ ಹಾಡು ಹೇಳಿ, ಕಗ್ಗವ ಅರ್ಥ ಸಮೇತ ಬದ್ದು ಕ೦ಡು ಬಾರಿ ಕೊಶಿಯಾತು.
    ಧನ್ಯವಾದಂಗೊ- ದೀಪಿಅಕ್ಕ೦ಗು,
    ಲಾಯಕೆ ಅರ್ಥ ಬರದು ಕೊಟ್ಟ ಶ್ರೀಅಕ್ಕ೦ಗು. :)

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ಧನ್ಯವಾದ..
    ಅಪ್ಪು ಅರ್ಥ ಬರದು ಕೊಟ್ಟ ಶ್ರೀಅಕ್ಕ೦ಗೆ ಎನ್ನ ಪರವಾಗಿಯೂ ಧನ್ಯವಾದ :-)

    [ಉತ್ತರುಸಿ]

  3. ಹರೀಶ್ ಕೇವಳ
    VA:F [1.9.3_1094]
    Rating: 0 (from 0 votes)

    ಚೆ೦ದ ಬೈ೦ದು . ಧನ್ಯವಾದಂಗೊ

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ಧನ್ಯವಾದ.

    [ಉತ್ತರುಸಿ]

  4. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಬೈಲಿನ ಜ್ಹಾನ ದೀಪವ ಬೆಳಗುತ್ತಾ ಇಪ್ಪ ದೀಪಿಗೆ ಹಾಂಗೂ ಕಾರಣರಾದ ಎಲ್ಲೋರಿಂಗೂ ಅನಂತ ಧನ್ಯವಾದ…

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ಓದಿ,ಕೇಳಿ ಪ್ರೊತ್ಸಾಹಿಸಿದ ನಿ೦ಗೊಗೂ ಧನ್ಯವಾದ.

    [ಉತ್ತರುಸಿ]

  5. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಬೈಲಿಂಗೆ ಇನ್ನೊಂದು “ಭಗವದ್ಗೀತೆ” ಬತ್ತಾ ಇಪ್ಪದು ಕೊಶಿ ಆತು.

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ನಿ೦ಗೊಗೆ ಕೊಶಿ ಆದ್ದರ ನೋಡಿ ಎನಗೂ ಕೊಶಿ ಆತುಃ-)

    [ಉತ್ತರುಸಿ]

  6. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: +1 (from 1 vote)

    ವಾಹ್ ಅದ್ಭುತ ದೀಪಿ ಅಕ್ಕ! ಐದ್ನೇ ಕಗ್ಗ ಅಂತೂ ಸೂಪರ್‍! ತುಂಬಾ ತುಂಬಾ ಧನ್ಯವಾದಂಗೊ.

    [ಉತ್ತರುಸಿ]

    ದೀಪಿಕಾ ಉತ್ತರ ಕೊಟ್ಟದು:
    ದೀಪಿಕಾ

    VN:F [1.9.3_1094]
    Rating: 0 (from 0 votes)

    ಧನ್ಯವಾದ..ಎನಗೂ ಐದ್ನೇ ಕಗ್ಗ ಇಷ್ಟ :-)

    [ಉತ್ತರುಸಿ]

  7. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಒಳ್ಳೆ ಭಾವಂದ ಸುಶ್ರಾವ್ಯವಾಗಿ ಹಾಡಿದ್ದು ಕೇಳಲೆ ಕೊಶೀ ಆವ್ತು.
    ತತ್ವ ಪದಂಗೊ ಹೀಂಗೆ ಬತ್ತಾ ಇರಳಿ.

    [ಉತ್ತರುಸಿ]

  8. ದೀಪಿಕಾ
    ದೀಪಿಕಾ
    VN:F [1.9.3_1094]
    Rating: 0 (from 0 votes)

    ಕೇಳಿ ಪ್ರೊತ್ಸಾಹದ ಒಪ್ಪ ಕೊಟ್ಟ ನಿ೦ಗೊಗೆ ಧನ್ಯವಾದ ಮಾವ.

    [ಉತ್ತರುಸಿ]

  9. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ದೀಪಿಕಾನ ಸ್ವರಲ್ಲಿ ಮಂಕುತಿಮ್ಮನ ಪದಂಗೊ ಚೆಂದಕೆ ಬಯಿಂದು. ಉತ್ತಮ ರಾಗ ಸಂಯೋಜನೆ, ಅರ್ಥವನ್ನೂ ನೋಡ್ತಾ ಕೇಳಲೆ ಲಾಯಕಿದ್ದು. ಪ್ರತಿವಾರವುದೆ ಬೈಲಿಂಗೆ ಹೀಂಗಿಪ್ಪದು ಬತ್ತಾ ಇರಳಿ.

    [ಉತ್ತರುಸಿ]

  10. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಇನ್ನೂ ಇನ್ನೂ ಬತ್ತಾ ಇರಳಿ ದೀಪಿಕಾ..
    ಖುಶಿ ಆತು :)

    [ಉತ್ತರುಸಿ]

  11. ಡೈಮಂಡು ಭಾವ
    ಡೈಮಂಡು ಭಾವ
    VA:F [1.9.3_1094]
    Rating: 0 (from 0 votes)

    ಲಾಯ್ಕಾ ಆಯಿದು ದೀಪಿಕಾ…ಒಳ್ಳೆ ಪ್ರಯತ್ನ
    ಅಭಿನಂದನೆಗೋ…

    [ಉತ್ತರುಸಿ]

  12. ಅರವಿಂದ್
    VA:F [1.9.3_1094]
    Rating: 0 (from 0 votes)

    ಲಾಯ್ಕುಂಟು ದೀಪಿಕಾ :-)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME