Oppanna.com

ಪುಸ್ತಕ ಪರಿಚಯ – ೬ ,”ನದಿ ಎರಡರ ನಡುವೆ”

ಬರದೋರು :   ತೆಕ್ಕುಂಜ ಕುಮಾರ ಮಾವ°    on   04/06/2011    7 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಕಲ್ಯಾಣಪ್ಪನ ದಂಗೆ ವಿಚಾರವಾಗಿ ಹಲವರಿಂಗೆ ಮಾಹಿತಿ ಇತ್ತಿದ್ದು ಹೇಳುದು ಕಳುದ ಸರ್ತಿ ಬರದ ಕಲ್ಯಾಣಪ್ಪನ ಕಾಟುಕಾಯಿ ಲೇಖನಕ್ಕೆ ಬಂದ ಒಪ್ಪಂಗಳಂದ ಗೊಂತಾತು. ನಿರಂಜನ ಅಥವಾ ಶಗ್ರಿತ್ತಾಯ ಪುಸ್ತಕ ಬರವ ಕಾಲಲ್ಲಿ ಲಭ್ಯವಾಗಿತ್ತಿದ್ದ ಪುರಾವೆ ನೋಡಿದರೆ ಸುಳ್ಯದ ದಂಗೆಯ ‘ದರೋಡೆ’ ಪ್ರಕರಣ ಹೇಳಿ ತಿಳಕೊಂಡರೆ ಅದು ತಪ್ಪಲ್ಲ. ನಮ್ಮ ನಾಡಿಂಗೆ ಸ್ವಾತಂತ್ಯ್ರ ಬಂದ ಮೇಲೆ ಇತಿಹಾಸದ ಪುರಾವೆಗಳ ಅವಲೋಕನೆ ಮಾಡುಲೆ ಹಲವರಿಂಗೆ ಅವಕಾಶ ಬಯಿಂದು. ‘ಸುಳ್ಯ ದಂಗೆ’ ಯ ಬಗ್ಗೆ ದೇವಿಪ್ರಸಾದ ಸಂಪಾಜೆ , ಡಾ.ಪ್ರಭಾಕರ ಶಿಶಿಲರು ಸಾಕಷ್ಟು ಸಂಶೋಧನೆ ಮಾಡಿದ್ದವು. ದೇವಿಪ್ರಸಾದರು ಈ ಸಂಬಂಧವಾಗಿ “ಅಮರ ಸುಳ್ಯದ ಸ್ವಾತಂತ್ರ್ಯ ಸಮರ ” ಹೇಳುವ ಐತಿಹಾಸಿಕ ಪುಸ್ತಕ ಬರದ್ದವು. ಪ್ರಭಾಕರ ಶಿಶಿಲರು ಇನ್ನೂ ಮುಂದುವರಿದು  ‘ಸುಳ್ಯದಂಗೆ’ಗೂ  ದೇಶದ  ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧ ಕಾಣ್ತವು. ಈ ವಿಷಯವಾಗಿ ಕೆಲವು ಪುಸ್ತಕಂಗಳ ಬರದ್ದವು. ಸುಳ್ಯ ದಂಗೆಗೆ ಪ್ರೇರಣೆ ಅದ ಕಾರಣವ ನೋಡುವಾಗ, ಕೊಡಗಿನ ಚರಿತ್ರೆ, ರಾಜಕೀಯ ಬೆಳವಣಿಗೆ ಕೂಡ ಮುಖ್ಯವಾಗಿ ಕಾಣುತ್ತು. ಕೊಡಗು ಸಾಮ್ರಾಜ್ಯ ಅವಸಾನ ಆದ ಮೇಲೆ ಮುಂದುವರಿದ ಬೆಳವಣಿಗೆಯೇ ಸುಳ್ಯದ ದಂಗೆ ಹೇಳ್ತದು ಈ ಇಬ್ರು ಮಹಾನುಭಾವಂಗೋ ಮಾಡಿದ ಸಂಶೋಧನೆಂದ ನವಗೆ ಮನವರಿಕೆ ಆವುತ್ತು.

ನಮ್ಮ ಪ್ರಾದೇಶಿಕ ಚರಿತ್ರೆಯ ತಿಳ್ಕೊಂಬದು ಎಲ್ಲೋರಿಂಗು ಖುಷಿ ಅಪ್ಪ ಸಂಗತಿ. ಇನ್ನು ಪ್ರಾದೇಶಿಕ ಚರಿತ್ರೆಯ ಸಂಶೋಧಿಸಿ ಬರವದು ವಿಶೇಷ ಕಾರ್ಯವೇ ಸರಿ. ಮಾಸ್ತಿ, ತರಾಸು, ನಿರಂಜನ ಮುಂತಾದವು ಇಂಥಾ ವಿಶೀಷ ಕಾರ್ಯ ಮಾಡಿದವರ ಪೈಕಿ ಮುಖ್ಯವಾಗಿ ಕಾಣ್ತವು. ಸುಳ್ಯದವೇ ಆಗಿಗೊಂಡು ಶಿಶಿಲರುದೆ ಇಂಥದ್ದೇ ವಿಶೇಷ ಕಾರ್ಯ ಮಾಡುವ ಪ್ರಯತ್ನ ಮಾಡಿದ್ದವು, ಅದರಲ್ಲಿ ಯಶಸ್ಸು ಕಂಡಿದವುದೇ.ಕೊಡಗು ಸಾಮ್ರಾಜ್ಯದ ಹುಟ್ಟಿಂದ ಶುರವಾಗಿ  ಅದರ ಅಕೆರಿಯಾಣ ಅರಸು ಚಿಕ್ಕವಿರರಾಜನ ವಿಷಯವಾಗಿಯೂ, ಮತ್ತೆ ನಡದ ಅಮರಸುಳ್ಯದ ಸಮರವ ವಿಷದವಾಗಿ ಸಂಶೋಧಿಸಿ ಬರದ ಐತಿಹಾಸಿಕ ಕಾದಂಬರಿ  “ನದಿ ಎರಡರ ನಡುವೆ”

ಇದರಲ್ಲಿ ಬಪ್ಪ ಎರಡು ನದಿ – ಕಾವೇರಿ , ನೇತ್ರಾವತಿ. ಈ ಎರಡು ನದಿ ನಡುವಣ ಪ್ರದೇಶಕ್ಕೆ ಸಂಬಧಿಸಿದ ಕತೆ ಇದರಲ್ಲಿ ಬಯಿಂದು. ಶಿಶಿಲರೆ ಹೇಳಿದ ಹಾಂಗೆ, – ಇಲ್ಲಿನ ಕಥೆ ಕಾವೇರಿ – ನೇತ್ರಾವತಿಯರ ನಡುವೆ ನಡೆಯುತ್ತದೆ. ‘ನದಿ’ ಜೀವನವಾದರೆ ‘ಎರಡು’ – ಹುಟ್ಟು ಮತ್ತು ಸಾವು ಈಸಿ ಜಯಿಸಲೆತ್ನಿಸಿದವರ ಕತೆಯೇ ಇತಿಹಾಸ. ಇದರಲ್ಲಿ ಎರಡು ‘ಭಾಗ’ ಇದ್ದು. ಶುರುವಾಣ ‘ನಾಡನೊಂದನು ಕಟ್ಟುವುದಕೆ’ ಭಾಗಲ್ಲಿ ಕೊಡಗು ಸಾಮ್ರಾಜ್ಯದ ಹುಟ್ಟಿಂದ ಹಿಡುದು ಅವಸಾನವರೆಗಾಣ ಕತೆ ಇದ್ದು. ‘ನಾಡನೊಂದನು ಉಳಿಸುವುದಕೆ’  ಹೇಳ್ತ ಎರಡನೆ ಭಾಗಲ್ಲಿ ಕೊಡವರು ಸುಳ್ಯ ಸೀಮೆಯವರೊಟ್ಟಿಂಗೆ ಬ್ರಿಟಿಷರ ವಿರುದ್ದ ಹೋರಾಡಿ ನಾಡಿನ ಸ್ವಾತಂತ್ರ್ಯವ ಒಳುಸಿಗೊಂಬ ವಿಫಲ ಪ್ರಯತ್ನದ ಕತೆ ಇದ್ದು. ಹೀಂಗೆ ‘ಹುಟ್ಟು – ಸಾವು’ ಎರಡರ ನಡುಗಾಣ ಪ್ರವಾಹದ ಕತೆಯೇ ” ನದಿ ಎರಡರ ನಡುವೆ” ಕಾದಂಬರಿಯ ವಸ್ತು.

ನಾಡನೊಂದನು ಕಟ್ಟುವುದಕೆ

೧೮೩೪ ರಲ್ಲಿ ಬ್ರಿಟಿಷರು ಚಿಕ್ಕವೀರ ರಾಜನ ಪದಚ್ಯುತ ಮಾಡಿ ಕಾಶಿಲಿ ಆಶ್ರಯ ಕೊಡ್ತವು. ಅಲ್ಲಿ ೧೭ ವರ್ಷ ಕಳುದ ಮೇಲೆ ಲಂಡನ್ನಿಂಗೆ ಹೋವುತ್ತು. ಮಗಳೊಟ್ಟಿಂಗೆ ಕೊನೆಗಾಲದ ವರೆಗೆ ಅಲ್ಲಿಯೇ ವಾಸವಾಗಿರ್ತು. ಈ ಸಮಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ಅಧಿಕಾರಿ ಕೊಡಗಿನ ಇತಿಹಾಸದ ಬಗ್ಗೆ ಬರವಲೆ ಬೇಕಾಗಿ ಚಿಕ್ಕವೀರ ರಾಜನ ಹತ್ತರೆ ಪೂರ್ಣ ಚರಿತ್ರೆಯ ತಿಳುಸೆಕ್ಕು  ಹೇಳಿ  ಪ್ರಸ್ತಾಪ  ಮಾಡುತ್ತು. ಈ ಅಧಿಕಾರಿಗೆ ಕೊಡಗಿನ ಚರಿತ್ರೆಯ ವಿವರುಸುವ ಹಾಂಗೆ ಈ ಭಾಗದ ಕತೆ ಬರದ್ದವು. ಹದಿನಾರನೇ ಶತಮಾನಲ್ಲಿ ಕೊಡಗಿನ ಹಾಲೇರಿ ವಂಶಸ್ತರು ಇಕ್ಕೇರಿ ಸಾಮ್ರಾಜ್ಯ ಸ್ಥಾಪನೆ ಮಾಡಿ ನೇತ್ರಾವತಿ ವರೆಗೆ ವಿಸ್ತಾರ ಆಗಿ, ಚಿಕ್ಕವೀರ ರಾಜನ ಕೊನೆಗಾಲದ ವರೆಗಾಣ ಕತೆ ಇದರಲ್ಲಿದ್ದು.

ನಾಡನೊಂದನು ಉಳಿಸುವುದಕೆ

ಬ್ರಿಟಿಷರ ಸುಂಕ ಮತ್ತೆ ಕಂದಾಯ ವ್ಯವಸ್ತೆಯ ವಿರುದ್ದ ನಡಸಿದ ಹೋರಾಟ “ಸುಳ್ಯ ದಂಗೆ’ . ಹುಲಿಕಡಿದ ನಂಜಯ್ಯ, ಕೆದಂಬಾಡಿ ರಾಮಯ್ಯರ ನೇತ್ರತ್ವಲ್ಲಿ ನಡದ ಈ ದಂಗೆಗೆ ಮೂಲ ಕಾರಣ ಕೊಡಗಿನ ‘ಬೂದಿಸನ್ಯಾಸಿ’ , ಅರಸು ಕುಟುಂಬಕ್ಕೆ ಸೇರಿದ ಕ್ರಾಂತಿಕಾರಿ  ಸ್ವಾಮಿ ಅಪರಂಪಾರ. ಇವನ ಬಂಧನ ಆದ ಮೇಲೆ ಕೊಡಗಿನ ಸೈನ್ಯದ ದಳಪತಿ ಆಗಿಪ್ಪ ಕಲ್ಯಾಣಸ್ವಾಮಿ ದಂಗೆ ಶುರು ಮಾಡುವ ಯತ್ನಲ್ಲಿ ಬ್ರಿಟಿಷರ ಸೆರೆ ಸಿಕ್ಕುತ್ತು. ಇದರ ಅನುಯಾಯಿ ಪುಟ್ಟಸ್ವಾಮಿಯ ಕಲ್ಯಾಣಸ್ವಾಮಿ ಹೇಳಿ ಪ್ರಚಾರ ಮಾಡಿ, ಕೆದಂಬಾಡಿ ರಾಮೇ ಗೌಡನ ದಂಡನಾಯಕತ್ವಲ್ಲಿ ಒಂದೂವರೆ ಸಾವಿರ ರೈತ ಜೆನ ಬೆಳ್ಳಾರೆ ಕೋಟೆಯ ವಶ ಮಾಡ್ತವು. ೧೮೩೭ರ ಎಪ್ರಿಲ್ ೫ರಂದು ಮಂಗಳೂರಿನ ಬಾವುಟಗುಡ್ಡೆಲಿ ಸ್ವಾತಂತ್ರ್ಯ ಧ್ವಜ ಹಾರುಸುತ್ತವು. ಬ್ರಿಟಿಷರ ಫಿರಂಗಿ ಸೈನ್ಯವ ಎದುರುಸುಲೆ ಎಡಿಯದ್ದೆ ಸೋಲುತ್ತವು. ಪುಟ್ಟಸ್ವಾಮಿ ಸಹಿತ ಮೂವರ ಗಲ್ಲಿಗೇರುಸುತ್ತವು. ಹಲವರಿಂಗೆ ಜೀವಾವಧಿ ಶಿಕ್ಷೆ ಕೊಡ್ತವು. ದಂಗೆ ಅಡಗುಸುಲೆ ಸಹಾಯ ಮಾಡಿದವಕ್ಕೆ ಸಮ್ಮಾನ, ಬಳುವಳಿ ಕೊಡುತ್ತವು.

೨೦೦೯ ರಲ್ಲಿ ಕೋಲಾರದ ಮಾಸ್ತಿ ಟ್ರಸ್ಟಿನವು ಹಮ್ಮಿಗೊಂಡ ‘ಮಾಸ್ತಿ ಕಾದಂಬರಿ ಪುರಸ್ಕಾರ’ ಸ್ಪರ್ಧೆಗೆ  ಬೇಕಾಗಿ ಬರದ ಈ ಐತಿಹಾಸಿಕ  ಕಾದಂಬರಿಗೆ, ಸ್ಪರ್ಧೆಲಿ ಮೊದಲ ಪ್ರಶಸ್ತಿ ಪಡದ ಹೆಗ್ಗಳಿಕೆ ಇದ್ದು.

7 thoughts on “ಪುಸ್ತಕ ಪರಿಚಯ – ೬ ,”ನದಿ ಎರಡರ ನಡುವೆ”

  1. ಬಚಾವದೆ ಮಾರಾಯರೆ.. “ಪಂಡಿತ ಪುತ್ರ” ಹೆಸರಿನ ಚೆಂದಕ್ಕೆ ಹೇಳಿ, ಬೈಲಿಲಿ ಎನ್ನ ಮರ್ಯಾದೆ ಒಳುತ್ತು..
    ಇದು ಎನ್ನ ಕೂಟದ ಒಬ್ಬ ಸೂಚಿಸಿದ ಹೆಸರು(ಗೂಮೆಮೂಲೆ ಅಣ್ಣನ ಭಾವ,ಪ್ರಸಾದ), ಅದರ ಇಲ್ಲಿ ಸಾಂದರ್ಭಿಕವಾಕಗಿ ಉಪಯೊಗಿಸಿದೆ.

  2. ಹ್ಹ ಹ್ಹ ಹ್ಹಾ.. ‘ಬಾಬಣ್ಣ’ ದಂಗೆ! ಕುಮಾರಣ್ಣನ ‘ಪನ್’ ಸೂಪರ್ ಆಯಿದು! (ಎಷ್ಟಾದರೂ ತೆಕ್ಕುಂಜ ಪನ್’ಡಿತರ ಮಗ ಅಲ್ಲದೋ?) 🙂

    ಕುಮಾರಣ್ಣ, ಈ ಕಾದಂಬರಿಯ ಮಡಿಕೇರಿ ಆಕಾಶವಾಣಿಲಿ ಸುಬ್ರಾಯ ಸಂಪಾಜೆ ಧಾರಾವಾಹಿಯಾಗಿ ಓದುತ್ತಾ ಇದ್ದವು. ತುಂಬ ಆಕರ್ಷಕವಾಗಿ ಇದ್ದು.
    ನಿಂಗೊ ‘ಕಾಟುಕಾಯಿ’ ಪುಸ್ತಕವ ಪರಿಚಯ ಮಾಡ್ಸಿಪ್ಪಗ ಅದಕ್ಕೆ ಪೂರಕ ಮಾಹಿತಿ ಸಿಕ್ಕುತ್ತೋ ಹೇಳಿ ‘ನೆಟ್’ ಲ್ಲಿ ಹುಡುಕಿದೆ. ದಕ್ಷಿಣ ಕನ್ನಡದ ಸಮಗ್ರ ಇತಿಹಾಸ ವಿವರ್ಸುವ ಪುಸ್ತಕವ ಶ್ರೀ ಎನ್. ಶ್ಯಾಮ್ ಭಟ್ (ಇವರ ಬಗ್ಗೆ ಬೈಲಿಲ್ಲಿ ಆರಿಂಗಾರು ಹೆಚ್ಚಿನ ವಿವರ ಗೊಂತಿಕ್ಕೊ?) ಹೇಳುವವು ಬರದ್ದದು ಸಿಕ್ಕಿತ್ತು.http://books.google.co.in/books?id=Z0nZzbFDSAoC&pg=PA175&lpg=PA175&dq=swami+aparampara&source=bl&ots=BIwBfm4qbk&sig=_QCIMt6jkUttkERTlqCgWKsbfYw&hl=en&ei=v2PyTdadEs-xrAeukYD6Bw&sa=X&oi=book_result&ct=result&resnum=1&ved=0CBsQ6AEwAA#v=onepage&q=swami%20aparampara&f=false

    ಆಸಕ್ತಿ ಇಪ್ಪವು ನೋಡ್ಲಕ್ಕು

  3. ಅಪ್ಪು..’ಬಾಬಣ್ಣ’ ದಂಗೆ( ಬಾಬ + ಅಣ್ಣಾ ) ಶುರು ಆಯಿದನ್ನೆ.. ಎಲ್ಲಿವರೆಗೆ ಹೋರಾಟ ಮಾಡೆಕ್ಕಾಗಿ ಬತ್ತು ಹೇಳಿ ಕಾದು ನೋಡೆಕ್ಕಷ್ಟೆ. ಎಲ್ಲೋರು ಕೈ ಜೋಡ್ಸೆಕ್ಕು..ಅವರವರ ಅಳಿಲ ಸೇವೆ..!

  4. ಧನ್ಯವಾದ ಕುಮಾರಮಾವ.
    ನಮ್ಮ ಇ೦ದ್ರಾಣ ಸ್ವತ೦ತ್ರ ಬದುಕಿ೦ಗೆ ಎಷ್ಟು ಜೆನರ ತ್ಯಾಗ,ಬಲಿದಾನ ಕಾರಣ ಆತು ಹೇಳಿ ತಿಳಿವಗ ಮನಸ್ಸು ತು೦ಬಿ ಬತ್ತು.ಇನ್ನು ದೇಶದ್ರೋಹಿಗಳ ಓಡುಸುವ ಹೋರಾಟ ಶುರು ಆಯೆಕ್ಕಕ್ಕೊ?

  5. ಶಿಶಿಲ ಪ್ರಭಾಕರ ಅವರ, ಮಾಸ್ತಿ ಕಾದಂಬರಿ ಪುರಸ್ಕೃತ , “ನದಿ ಎರಡರ ನಡುವೆ” ಐತಿಹಾಸಿಕ ಕಾದಂಬರಿಯ ಪರಿಚಯ ಮಾಡಿ ಕೊಟ್ಟ ಕುಮಾರಂಗೆ ಧನ್ಯವಾದಂಗೊ. ಸ್ವಾತಂತ್ರ್ಯಕ್ಕೆ ಬೇಕಾಗಿ ಜೀವವನ್ನೇ ಬಲಿ ಕೊಟ್ಟ ಪುಟ್ಟಸ್ವಾಮಿಯಂತವರ ನೆನಸುವಗ ಮೈ ರೋಮಾಂಚನ ಆವ್ತು. ಬ್ರಿಟಿಶರಿಂದ ಸ್ವಾತಂತ್ರ್ಯ ಸಿಕ್ಕಿತ್ತು. ಈಗಾಣ ರಾಜಕೀಯದ ರಾಜರಿಂದ ಏವಗ ಇನ್ನು ಪ್ರಜೆಗವಕ್ಕೆ ಸ್ವಾತಂತ್ರ್ಯ ಸಿಕ್ಕುಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×