ಪುಸ್ತಕ ಪರಿಚಯ – 9 “ಚಿಕವೀರರಾಜೇಂದ್ರ”

“ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ, ಸಿಂಧು ಕಾವೇರಿ” – ಹೀಂಗೆ ಪವಿತ್ರ ಏಳು ನದೀ ಪ್ರದೇಶಂಗಳ ಅಖಂಡ ಭರತ ವರ್ಷಲ್ಲಿ ಬೇರೆ ಬೇರೆ ಪ್ರದೇಶಂಗಳಲ್ಲಿ ಬೇರೆ ಬೇರೆ ರಾಜಮನೆತನದವು ಆಳ್ವಿಕೆ ಮಾಡಿಗೊಂಡು ಇತ್ತಿದ್ದವು. ಅಖಂಡತೆಯೊಟ್ಟಿಂಗೆ ವಿವಿಧತೆ ಎದ್ದು ಕಾಂಬ ಹಾಂಗೆ, ಒಂದೊಂದು ಪ್ರದೇಶಲ್ಲಿ ಒಂದೊಂದು ರಾಜ್ಯ, ಆ ಪ್ರದೇಶದೊಳವೇ ಒಂದೊಂದು ಪಾಳೆಯ – ಮತ್ತದರ ರಾಜಮನೆತನ . ಪ್ರತಿಯೊಂದು ರಾಜಮನೆತನದವರದ್ದೂ ಒಂದೊಂದು ಇತಿಹಾಸ – ಒಂದು ರಾಷ್ಟ್ರದ ಇತಿಹಾಸವೇ ಇದ್ದ ಹಾಂಗೆ . ಶೌರ್ಯ, ಧರ್ಮನಿಷ್ಟೆ, ತೇಜಸ್ಸು, ಶ್ರದ್ದೆಯ ಒಟ್ಟಿಂಗೆ ಕ್ರೌರ್ಯ,ಅವಿವೇಕ ಸ್ವಾರ್ಥ,ಲೋಭ ಇತ್ಯಾದಿ –  ಯಾವ  ಭಾಗದ ಇತಿಹಾಸವ ನೋಡಿರೂ ಕಾಂಬಲೆ ಸಿಕ್ಕುಗು. ಇಂಥದೇ ಒಂದು ಅಮೋಘ ಇತಿಹಾಸ ನವಗೆ ಕೊಡಗಿಲಿಯೂ  ಕಾಂಬಲೆ ಸಿಕ್ಕುತ್ತು. ಕೊಡಗು ಕಾವೇರಿಯ ಉಗಮ ಸ್ಥಾನ. ಒಂದು ಹೊಡೆಲಿ ಮೈಸೂರು, ಒಂದು ಹೊಡೆಂದ ಮಲೆಯಾಳ, ಇನ್ನೊಂದು ಹೊಡೆಲಿ ಮಂಗಳೂರು, ಈ ಮೂರೂ ಹೊಡೆಯಾಣ ಆಡಳಿತಗಾರಂಗಳಿಂದ ಕೊಡಗಿನ ಅರಸಂಗೊ ತಮ್ಮ ಸ್ವಾತಂತ್ರ್ಯವ ಒಳುಶೆಕ್ಕಾರೆ ಯೇವತ್ತೂ ಕಾದಿಗೊಂಡು ಇರೆಕ್ಕಾಗಿತ್ತು. ಕೊಡವರಲ್ಲದ್ದೆ ಇಲ್ಲಿ ಹಲವು ರಾಜಮೆನೆತನದವು ಆಡಳ್ತೆ ನಡಶಿಗೊಂಡು ಬಯಿಂದವು. ಕದಂಬ, ಗಂಗ, ಚೋಳ, ಹೊಯ್ಸಳರು ಇಲ್ಲಿ ಒಂದು ಕಾಲಕ್ಕೆ ಪ್ರಭುತ್ವವ ಸ್ಥಾಪಿಸಿತ್ತಿದ್ದವು. ಅಕೇರಿಗೆ ಇಕ್ಕೇರಿ ವಂಶದ ಉದ್ದಿನಿ ಇಲ್ಲಿಗೆ ಬಂದು ಹಿಂದಾಣ ರಾಜವಂಶವ ನಿರ್ಮೂಲ ಮಾಡಿ ತಾನೆ ಅರಸೊತ್ತಿಗೆಯ ಸ್ಥಾಪನೆ ಮಾಡುತ್ತು. ಈ ವಂಶದವು ಮುಂದೆ ಸುಮಾರು ಇನ್ನೂರು ವರ್ಷದ ವರೆಗೆ ಕೊಡಗಿನ  ಆಳಿಗೊಂಡು ಬತ್ತವು. ಇವರ ಪೈಕಿ ದೊಡ್ಡವೀರರಾಜ, ಲಿಂಗರಾಜ ತಮ್ಮ ಆಡಳ್ತೆಂದಾಗಿ ಹೆಸರು ಮಾಡಿದವು. ಲಿಂಗರಾಜನ ಮಗ ಚಿಕ್ಕವೀರರಾಜ ಈ ವಂಶದ ಅಕೇರಿಯಾಣ ಅರಸು. ಬ್ರಿಟಿಷರ ‘ಕುಂಪಣಿ ‘ ಸರಕಾರ 1834ರಲ್ಲಿ ಚಿಕ್ಕವೀರರಾಜನ ಮೋಸಲ್ಲಿ ಪದಜ್ಯುತ ಮಾಡಿ  ಕೊಡಗಿನ ತಮ್ಮ ವಶಕ್ಕೆ ಮಾಡಿಗೊಳ್ತವು. ಈ ಕತೆಯ ಆಧರಿಸಿ, ಕನ್ನಡದ ಆಸ್ತಿ – ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರದ ಕಾದಂಬರಿ  “ಚಿಕವೀರರಾಜೇಂದ್ರ”. ಈ ರಾಜನ ಅಕೇರಿಯಾಣ  ವರ್ಷದ ಆಳ್ವಿಕೆಯ ಕತೆ ಈ ಕಾದಂಬರಿಯ ವಸ್ತು.

ಪುಸ್ತಕದ ಮೋರೆಪುಟ

ಈ ಕಾದಂಬರಿ ಬರಯಕ್ಕಾರೆ ಮದಲು ಮಾಸ್ತಿ ಬಿದನೂರಿನ ರಾಣಿ ವೀರಮ್ಮಾಜಿಯ ಪತನದ ಕತೆಯ ಆಧರಿಸಿ “ಚೆನ್ನಬಸವನಾಯಕ” ಹೆಸರಿನ  ಐತಿಹಾಸಿಕ ಕಾದಂಬರಿ ಬರದಿತ್ತಿದ್ದವು. ಇದರಲ್ಲಿ ವೀರಶೈವ ಜೆನಾಂಗದವಕ್ಕೆ ಅಪಚಾರ ಆಯಿದು ಹೇಳಿ ಶುರು ಆದ ವಿವಾದದ ಸಣ್ಣ ಕಿಚ್ಚು ದೊಡ್ಡದಾಗಿ ಬೆಳೆದು ಲೋಕಸಭೆಲಿಯೂ ಚರ್ಚೆಗೆ ಬಂದಿತ್ತಡ. ನಂತರ ಬರದ “ಚಿಕವೀರರಾಜೆಂದ್ರ” ಕಾದಂಬರಿಯ ಬಗ್ಗೆಯೂ ಕೆಲವು ದಿಕ್ಕೆ ವೀರಶೈವರಿಂದಲೂ, ಕ್ರೈಸ್ತರಿಂದಲೂ ಸಣ್ಣ, ಸಣ್ಣ ಒಡಕ್ಕು ಮಾತು ಹೆರಟರೂ ಮತ್ತೆ ಅದು ಹಾಂಗೆ ತಣ್ಣಂಗಾಯಿದು  ಹೇಳ್ತ ಮಾತಿನ ಕಾದಂಬರಿಯ ಅವಲೋಕನೆ ಮಾಡಿಗೊಂಡು ಡಾ. ಚಿದಾನಂದ ಮೂರ್ತಿ ಪ್ರಸ್ತಾಪ ಮಾಡಿದ್ದವು. ಈ ಕಾದಂಬರಿಯ ಅವಲೋಕನ ಮಾಡಿಗೊಂಡು ಡಾ. ಚಿದಾನಂದ ಮೂರ್ತಿ ಹೇಳುವ ಮಾತು ಗಮನಾರ್ಹ -“ಯಾವ ಐತಿಹಾಸಿಕ ಕಾದಂಬರಿಯೂ ಇತಿಹಾಸವನ್ನು ಅದು ಇರುವಂತೆ ಕಟ್ಟಿಕೊಡುವುದಿಲ್ಲ. ಹಾಗೆ ನೋಡುವುದೇ ಆದರೆ, ಅಪ್ಪಟ ಇತಿಹಾಸವೆಂದು ಕರೆಯಬಹುದಾದ ಕ್ರತಿಯೂ ವಾಸ್ತವವಾಗಿ ನೆಡೆದಿರುವುದರ ಸ್ಪಷ್ಟ ದಾಖಲೆಯಾಗಿರುತ್ತದೆ ಎಂದು ಹೇಳಲಾರೆವು. ಕಾದಂಬರಿಯ ಗುರಿ ಇತಿಹಾಸವನ್ನು ಕೊಡುವುದಲ್ಲ, ಇತಿಹಾಸದ ಅನುಭವವನ್ನು ನೀಡುವುದು.” ವಿಷಯವ ಸರಿಯಾಗಿ ತಿಳ್ಕೊಳ್ಳದ್ದೆ, ಚರಿತ್ರೆಯ ತಿಳ್ಕೊಂಬ ಗೋಜಿಗೆ ಹೋಗದ್ದೆ, ಸ್ವಾರ್ಥದ ಜೆನೊಂಗೊ ಜನಪ್ರಿಯತೆಗೆ ಬೇಕಾಗಿ ಕೆಲವು ವಿವಾದವ ಹುಟ್ಟು ಹಾಕುತ್ತವು, ಬಹುಶಃ ಮಾಸ್ತಿಯವರ ಕಾದಂಬರಿ ವಿಷಯಲ್ಲಿಯೂ ಇದೇ ಆದ್ದದು ಆಗಿರೆಕ್ಕು.

ಮಾಸ್ತಿ ‘ಚಿಕವೀರರಾಜೇಂದ್ರ’ವ ಬರಯೆಕ್ಕಾರೆ ಕೊಡಗಿಲಿ ಇದ್ದುಗೊಂಡು ಅಲ್ಯಾಣ ಪ್ರದೇಶ, ಜನಜೀವನವ ಹತ್ತರಂದ ಅಭ್ಯಾಸ ಮಾಡಿದ್ದಲ್ಲದ್ದೆ ಹಲವು ದಾಖಲೆಗಳನ್ನೂ ಶೋಧಿಸಿದ್ದವು. ಕ್ಯಾಪ್ಟನ್ ರೈಸ್ ಬರದ ಗಜೆಟ್ಟಿಯರ್, ‘Mysore and Coorg’ ಗ್ರಂಥ ಮತ್ತೆ ಶ್ರೀ ನಡಿಕೇರಿಯಂಡ ಚಿಣ್ಣಪ್ಪರ ” ಪಟ್ಟೋಲೆ ಪಳಮೆ”  ಈ ಕ್ರತಿಯ ಆಧಾರ ಗ್ರಂಥಂಗೊ ಹೇಳಿ ಮಾಸ್ತಿ  ಮುನ್ನುಡಿಲಿ ಬರದ್ದವು. ಇದಲ್ಲದ್ದೆ ಬೇರೆ ಬೇರೆ ಹಸ್ತಲಿಖಿತ ಗ್ರಂಥ, ಕೊಡಗಿನ ‘ಮಹನೀಯರುಗೊ’  ಕೊಟ್ಟ ಪುಸ್ತಕಂಗೊ, ಇವೆಲ್ಲದರ ಉಲ್ಲೇಖವನ್ನೂ ಮಾಸ್ತಿ ಮುನ್ನುಡಿಲಿ ಕೊಟ್ಟಿದವು. ಅಪಾರ ಜೀವನಾನುಭವದ, ಭಾರತೀಯ ಪರಂಪರೆಯ ಪೂರ್ಣ ಪರಿಚಯ ಇತ್ತಿದ್ದ ಪ್ರಬುಧ್ದ ಮನಸ್ಸಿನ ಮಾಸ್ತಿ ಬರದ ಈ ಕ್ರತಿ ಐತಿಹಾಸಿಕ ಕಾದಂಬರಿಗೊಕ್ಕೆ ಒಂದು ಮಾದರಿ.

1799 -1800ರ ಕಾಲಲ್ಲಿ, ಶ್ರೀರಂಗಪಟ್ಟಣದ ಪತನ ಆದ ಮೇಲೆ ಬ್ರಿಟಿಷರಿಂಗೆ ಕೊಡಗಿನ ಮೇಲೆ ಸಹಜವಾಗಿಯೇ ಕಣ್ಣು ಬಿದ್ದತ್ತು. ದೊಡ್ಡವೀರರಾಜ, ಮತ್ತೆ ಅವನ ನಂತ್ರದ ಲಿಂಗರಾಜನ ಕಾಲಲ್ಲಿ ಇದು ಸಾಧ್ಯ ಆಯಿದಿಲ್ಲೆ. ಚಿಕ್ಕವೀರರಾಜನ ಕಾಲಲ್ಲಿ ಅವನ ಮಿತಿಮೀರಿದ ಲಂಪಟತನ, ಅಧಿಕಾರದ ವ್ಯಾಮೋಹ, ಕ್ರೌರ್ಯಂದಲಾಗಿ ಬ್ರಿಟಿಷರಿಂಗೆ ಕೊಡಗಿನ ಮೇಲೆ ಅತಿಕ್ರಮಣ ಮಾಡಿ ಅಧಿಕಾರ ಗಳುಸುಲೆ ಸುಲಭ ಆತು. ಮಂತ್ರಿ ‘ಕುಂಟ ಬಸವ’ನ ಒಟ್ಟಿಂಗೆ ಸೇರಿಗೊಂಡು ಮಾಡಿದ ಅಕ್ರತ್ಯಂಗಳೆ ಆದರೂ, ಅಕೇರಿಗೆಎಲ್ಲದಕ್ಕೂ ಬಸವನೇ ಹೊಣೆಗಾರ ಆಯೆಕ್ಕಾಗಿ ಬತ್ತು. ಇವು ಎದುರುಸುವ ಪರಿಣಾಮ – ಮಂತ್ರಿ ಕುಂಟ ಬಸವನ ಆತ್ಮಹತ್ಯೆ, ರಾಜಂಗೆ ಪರಿವಾರದವರೊಟ್ಟಿಂಗೆ ರಾಜ್ಯತ್ಯಾಗ, ನವಗೆ ಅನುಕಂಪವನ್ನೇ ಮೂಡುಸುತ್ತು. ಕೊಡಗಿಲಿ ಬ್ರಿಟಿಶರು ಆಡಳ್ತೆ ತೆಕ್ಕೊಂಡು, ರಾಜ ಕುಟುಂಬದವರ ಕಾಶಿಗೆ ಕಳುಸುತ್ತವು.

ಈ ಕಾದಂಬರಿಲಿ ಕೊಡಗಿನ ರಾಜ್ಯವ ಆಳಿದ ರಾಜರುಗೊ ಅಲ್ಲದ್ದೆ,  ಮಂತ್ರಿ ಲಕ್ಸ್ಮಿನಾರಾಯಣ, ಬೋಪ, ಪೊನ್ನಪ್ಪ, ಕುಂಟ ಬಸವ ರಾಜನ ಬಂಧುಗೊ ಚೆನ್ನಬಸವ, ಅವನ ಪತ್ನಿ ದೇವಮ್ಮಾಜಿ,ಸ್ವಾಮಿ ಅಪರಂಪಾರ ಮತ್ತೆ ಕೆಲವು ಬ್ರಿಟಿಷ್ ಅಧಿಕಾರಿಗೊ – ಲೋಗಿನ್, ಕ್ಯಾಂಪ್ ಬೆಲ್, ಕ್ಯಾಸಮೇಜರ್, ಕ್ರೈಸ್ತ ಪಾದ್ರಿ ಮೊಗ್ಲಿಂಗ್ ಮುಂತಾದ ಚಾರಿತ್ರಿಕ ವ್ಯಕ್ತಿಗಳ ಪ್ರಸ್ತಾಪ ಬತ್ತು. ಕುಂಟ ಬಸವನ ಅಬ್ಬೆ ಭಗವತಿ, ದೀಕ್ಷಿತ, ಪಾಣೆ ಸೂರ್ಯನಾರಾಯಣ , ಚೋಮ ಇತ್ಯಾದಿ ಕಾಲ್ಪನಿಕ ಪಾತ್ರವೂ ಇದರಲ್ಲಿದ್ದು. ಇತಿಹಾಸದ ಪ್ರಕಾರ ಚಿಕವೀರರಾಜಂಗೆ ಮಗಳು ಹುಟ್ಟಿದ್ದು ಕಾಶಿಲಿ ಇಪ್ಪಗ, ಆದರೆ ರಾಜನ ಮ್ರುದು ಸ್ವಭಾವದ ಪರಿಚಯ ತೋರ್ಸುಲೆ ಬೇಕಾಗಿ ಒಬ್ಬ ಮಗಳು ರಾಜ ಕೋಡಗಿಲಿ ಇಪ್ಪಗಳೇ ತೋರ್ಸಿದ್ದು ಮಾಸ್ತಿಯ ಕಲ್ಪನೆಯ ಕೂಸು. ಚಿಕ್ಕವೀರರಾಜ, ಮಂತ್ರಿ ಬಸವನೊಟ್ಟಿಂಗೆ ಸೇರಿಗೊಂಡು ನಡಸಿದ ಕ್ರೌರ್ಯದ ಚಿತ್ರಣ ಅವನ ಕ್ರೂರ ಸ್ವಭಾವವ ತೋರ್ಸುತ್ತು. ಎದುರಂಗೆ ಚೆಂದಕ್ಕೆಮಾತಾಡಿಗೊಂದು, ಬೆನ್ನಹಿಂದೆ ಬ್ರಿಟಿಷರು ನಡಸುವ ಕುಟಿಲ ಬುಧ್ದಿಯ ಸೂಕ್ಶ್ಮ ಚಿತ್ರಣವೂ ಇದರಲ್ಲಿ ಬತ್ತು. ರಾಜನ ಕಾಮುಕತೆ, ಕ್ರೌರ್ಯದ ಪರಿಚಯ ಆವುತ್ತ ಇಪ್ಪ ಹಾಂಗೆ, ಅವನ ಆಡಳಿತವ ಕೊನೆಗಾಣಿಸಿ, ಬ್ರಿಟಿಷರು ಕೊಡಗಿನ ನುಂಗಿದ ರೀತಿ ನವಗೆ ರಾಜನ ಬಗ್ಗೆ ಸಹಾನುಭೂತಿ, ಅನುಕಂಪವನ್ನೇ ಮೂಡುಸುತ್ತು. ಬ್ರಿಟಿಷರು ಇಡೀ ದೇಶವ ಯಾವ ರೀತಿ ನುಂಗಿದವು, ಎಷ್ಟು ಅಸಹಾಯಕತೆಯ ಪರಿಸ್ಥಿತಿ ಇತ್ತಿದ್ದು ಹೇಳುದು ಕೊಡಗಿನ  ಕತೆಂದ  ಊಹಿಸುಲಕ್ಕು.

ಐತಿಹಾಸಿಕ ಕಾದಂಬರಿ ಓದುವಾಗ ಇತಿಹಾಸದ ಘಟನೆ ಮಾಂತ್ರ ಅಲ್ಲ – ದಶಕದ ಮದಲಾಣದೇ ಆಗಲಿ ಅಥವಾ ಶತಮಾನದ ಹಿಂದಾಣ ಕತೆಯೇ ಆಗಲಿ, ಆ ಕಾಲದ ಅನುಭವ ನವಗೆ ಸಿಕ್ಕೆಕ್ಕು, ಆ ಕಾಲಲ್ಲಿ ನಾವು ಓಡಾಡಿಗೊಂಡು ಬಂದ ಚಿತ್ರಣ ನಮ್ಮ ಮನಸ್ಸಿಲಿ ಮೂಡಿ ಬರೆಕ್ಕು, ನಾವು ನೋಡದ್ದ  ಜೆನರ ಜೀವನ ಚಿತ್ರಣ ಹತ್ತರಂದ ಕಂಡ ಹಾಂಗಿಪ್ಪ ಅನುಭವ ನವಗಾಯೆಕ್ಕು. ಇಂಥದ್ದೊಂದು ಅನುಭವ ಈ ಕಾದಂಬರಿ ಓದಿಯಪ್ಪಗ ನವಗೆ ಆವುತ್ತು.!  ಹಾಂಗಾಗಿ ಇದೊಂದು ಅಮೋಘ ಐತಿಹಾಸಿಕ ಕಾದಂಬರಿ, ಅನರ್ಘ್ಯ ಕ್ರತಿ. ಇದೇ ಕಾದಂಬರಿಯ ಉದ್ಧರಿಸಿ ಮಾಸ್ತಿಗೆ 1983 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು. !

ಕನ್ನಡದ ಆಸ್ತಿಗೆ ಜ್ಞಾನಪೀಠ ಪ್ರಶಸ್ತಿ

ತೆಕ್ಕುಂಜ ಕುಮಾರ ಮಾವ°

   

You may also like...

12 Responses

  1. mamta says:

    kannadada astiya kritiratnavannu parichayisida nimage dhanyavadagalu.idu kodava bhasheyalli bhashantaragollutide.vivaragalige thook bolak patrike nodi.

  2. ತೆಕ್ಕುಂಜ ಕುಮಾರ says:

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *