ಪುಟ್ಟಕ್ಕ ಕತೆ ಹೇಳ್ತಡ..!

January 24, 2010 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೌಷ್ಷ ಪುಟ್ಟಕ್ಕನ ಬಗ್ಗೆ ಹೆಚ್ಚಿನ ವಿವರ ಬೇಕಾಗ.
ನಮ್ಮದೇ ಬೈಲಿಲಿ, ಪ್ರೀತಿಲಿ ಇಪ್ಪಂತಾ ಪುಟ್ಟ ಅಕ್ಕ, ಈ ಪುಟ್ಟಕ್ಕ.
ಒಳ್ಳೆತ ಅನುಭವ ಇದ್ದು. ಮಡಿಕೇರಿಂದ ಹಿಡುದು ಕೊಡೆಯಾಲದ ಒರೆಗೆ – ಇಡೀ ಅನುಭವ ಇದ್ದು.
ಲೋಕಾರೂಢಿ ಕತೆ ಹೇಳುದು ಹೇಳಿರೆ ಈ ಅಕ್ಕಂಗೆ ಬಾರೀ ಇಷ್ಟ. ಪುಸ್ತಕವುದೇ ಬರಗು, ಪೇಪರುದೇ ಓದುಗು.
ಹಾಂಗೆಯೇ, ಆರುದೇ ನೋಡ್ತವಿಲ್ಲೇ ಹೇಳಿ ಆದರೆ ಡೇನ್ಸುದೇ ಮಾಡುಗು..!
ರಜ್ಜ ಪರಂಚುಗು, ರಜ್ಜ ಬೈಗು, ರಜ್ಜ ಗಲಾಟೆ ಮಾಡುಗು – ಎಂತದೇ ಇದ್ದರುದೇ ಪುಟ್ಟಕ್ಕಂಗೆ ಪ್ರೀತಿ ಇರ್ತು.
ಜಗಳವುದೇ ಮಾಡುಗು, ಪ್ರೀತಿಯುದೇ ಮಾಡುಗು. ಗಳಿಗೆಗೊಂದು ಭಾವನೆ – ಹೇಳಿ ಆಚಕರೆಮಾಣಿ ಪರಂಚುಗು..

ಮಕ್ಕಳತ್ರೆ ಅಂತೂ ತುಂಬ ಕುಶೀಲಿ ಮಾತಾಡುಗು.
ಕತೆ ಹೇಳಿದಹಾಂಗೆ ಪಾಟಮಾಡುದೋ, ಪಾಟ ಮಾಡಿದ ಹಾಂಗೆ ಕತೆ ಹೇಳಿದ್ದೋ – ಕನುಪ್ಯೂಸು ಬಪ್ಪಷ್ಟು ಚೆಂದಕೆ!
ಕನ್ನಡಲ್ಲಿ ಮಾತಾಡುದು ಜಾಸ್ತಿ ಆದ ಕಾರಣ ಮಾತಾಡುವಗ ಎಡೇಡೆಲಿ ಕನ್ನಡ ಶಬ್ದಂಗೊ ಬಕ್ಕು – ಆದರೆಂತಾತು, ಕೇಳುಲೆ ಚೆಂದವೇ..
ಎಲ್ಲೊರತ್ರುದೇ ನೆಗೆನೆಗೆ ಮಾಡಿ ಮಾತಾಡ್ತ ಪುಟ್ಟಕ್ಕಂಗೊ ಒಂದು ವೀಕುನೆಸ್ಸು.
ಎಂತರ? ನಮ್ಮ ಆಚಕರೆಮಾಣಿ ಹಲ್ಲುಕಿರುದರೆ ಬೆಶಿ ಏರುಗು, ಒಳ್ಳೆತ ಪರಂಚುಗು.
ಪುಟ್ಟಕ್ಕ ಪರಂಚಿದಷ್ಟೂ ಅವ° ನೆಗೆ ಮಾಡುಗು..
ಅವ ನೆಗೆ ಮಾಡಿದಷ್ಟೂ ಪುಟ್ಟಕ್ಕಂಗೆ ಬೆಶಿ ಏರುಗು 😉 – ಅವಿಬ್ರು ಎದುರೆದುರು ಸಿಕ್ಕಿರೆ ಒಪ್ಪಕ್ಕ ಹತ್ತಿ ತಂದು ಮಡಿಕ್ಕೊಂಗು!!
ಪರಸ್ಪರ ನೆಗೆದೇ, ಪರಂಚಾಣದೇ ಏರಿಗೊಂಡೇ ಹೋಪದಿದಾ! ಇಳಿವದು ಮಾಷ್ಟ್ರುಮಾವ ಕೋಲುತೆಕ್ಕೊಂಡು ಬಂದ ಮತ್ತೆಯೇ!!

ಈ ಪುಟ್ಟಕ್ಕ ಬೈಲಿನವಕ್ಕೆ ಕತೆ ಹೇಳ್ತಡ.
ಬನ್ನಿ, ಎಲ್ಲೊರುದೇ ಕೇಳುವೊ°!
ಅದರ ಕತೆಗೂ ಒಪ್ಪ ಕೊಡುವ°, ಆಗದೋ?
ಏ°?
~
ಒಪ್ಪಣ್ಣ

ಪುಟ್ಟಕ್ಕನ ಕತೆಗೊ ಸದ್ಯಲ್ಲೇ, ಇದೇ ಅಂಕಣಲ್ಲಿ..!!
~
ಗುರಿಕ್ಕಾರ°

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಪುತ್ತೂರು ವೆಂಕಟಣ್ಣ

  ಎಂತದಡ ಪುಟ್ಟಕ್ಕನ ಕಥೆ?
  ಪುಟ್ಟಕ್ಕಂಗೆ ಪ್ರಾಯ ತುಂಬಾ ಅಕ್ಕನ್ನೆ ಈಗ..
  ಅದರ ಹಲ್ಲು ಎಲ್ಲಾ ಹೋಯಿದು ಹೇಳಿ ಹೇಳುದು ಕೇಳಿದೆ..
  ಅದು ಈಗ ಪಚ ಪಚ ಹೇಳಿ ಹೇಳುದರ ಹೇಂಗಪ್ಪಾ ಕೇಳುದು??
  ಇದಾ,
  ಒಪ್ಪಣ್ಣ ಆನು ಮೊದಾಲೇ ಹೇಳ್ತೆ.ನೀನು ಸರಿಯಾಗಿ ಕೇಳಿಯೋಂಡು,ಎಂಗೋಗೆಲ್ಲಾ ಹೇಳುದು ಒಳ್ಳೆದು.ಅದನ್ನೇ ಮಾತ್ತಾಡ್ಲೆ ಬಿಟ್ರೆ ಆಗ ಗೊಂತಾತ?ಮತ್ತೆ ಅದು ಹೇಳುದು ಏನಾರ ಅರ್ಥ ಅನರ್ಥ ಆದರೆ ,ಊರಿನವರ ಬೈಗಳು ನಿನಗೆ ಗೊಂತಾಥ?
  ಮಾಣಿಗೆ ಈ ಅಧಿಕ ಪ್ರಸಂಗ ಬೇಕಾತ ಹೇಳಿ ಎಲ್ಲೋರು ಕೇಳುಗು.
  ಹಾಂಗಾಗಿ ರೆಜ ಪುರುಸೊತ್ತು ಬೇಕಾರೆ ತೆಕ್ಕೊ.ಸರಿಯಾಗಿ ಕೇಳಿಯೊಂಡು ಹೇಳಿದರೆ ಎಲ್ಲೋರು ಕಣ್ಣು ಬಾಯಿ ಬಿಟ್ಟು ಕೇಳುಗು.
  ಮಾಣಿಗೆ ಒಪ್ಪವೂ ಸಿಕ್ಕುಗು.ಆತಾ.
  ಆನು ಹೇಳಿದ್ದು ನೆಂಪು ಮಡಿಕ್ಕೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಶಾಂತತ್ತೆಅಡ್ಕತ್ತಿಮಾರುಮಾವ°ಒಪ್ಪಕ್ಕಅನು ಉಡುಪುಮೂಲೆದೀಪಿಕಾದೊಡ್ಡಮಾವ°ವೇಣಿಯಕ್ಕ°ಮಂಗ್ಳೂರ ಮಾಣಿಚುಬ್ಬಣ್ಣಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಕೊಳಚ್ಚಿಪ್ಪು ಬಾವಶರ್ಮಪ್ಪಚ್ಚಿವೆಂಕಟ್ ಕೋಟೂರುಡಾಗುಟ್ರಕ್ಕ°ಮುಳಿಯ ಭಾವಬೊಳುಂಬು ಮಾವ°ಎರುಂಬು ಅಪ್ಪಚ್ಚಿಡೈಮಂಡು ಭಾವಸುಭಗದೊಡ್ಡಭಾವಶ್ರೀಅಕ್ಕ°ಕೇಜಿಮಾವ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ