ಬರದೋರು :   ಶೇಡಿಗುಮ್ಮೆ ಪುಳ್ಳಿ    on   31/01/2012    9 ಒಪ್ಪಂಗೊ

ಸೂರ್ಯನು ಮುಳುಗುವ ಸಮಯಾ
ಕೇಳುವೋ° ನಾವು ರಾಮ ಕಥೆಯಾ
ಇದು ರಾಮ ಕಥೆಯ ಕಾಲಾ
ಮೂರು ನಾಕು ಘಂಟೆ ಕಾಲಾ

ಬೈಸಾರಿ ಹೊತ್ತಿಂಗೆ ನವಗೇ
ಕಥೆ ಕೇಳ್ವ ಒಂದು ಯೋಗಾ
ಇದು ರಾಮ ಕಥೆಯ ಕಾಲಾ
ಇಲ್ಲಿ ರಾಮ ಕಥೆಯ ಕೇಳುವೊ

ರಾಘವೇಶ್ವರ ಶ್ರೀಗಳು ನವಗೆ
ಇಲ್ಲಿ ಬಂದು ಹೇಳ್ತವು ಕಥೆಯಾ

ನಡುವೆ ಚಿತ್ರ ನಾಟ್ಯ ನೋಡಿ
ಪದ್ಯ ಕೇಳಿ ಖುಶಿಯ ಪಡುವೋ
ಇದು ರಾಮ ಕಥೆಯ ಕಾಲಾ
ಬೈಸಾರಿ ಹೊತ್ತಿಂಗೆ ನವಗೇ
ಕಥೆ ಕೇಳ್ವ ಒಂದು ಯೋಗಾ

ಮನಸು ಎಲ್ಲಿಯೋ ಇದ್ದರೆ ಆಗ
ಶ್ರದ್ಧೆಲಿ ಅದರ ಕೇಳೆಕ್ಕು ನಾವು
ಕಷ್ಟ ಎಲ್ಲಾ ಮರತ್ತು ನಾವು
ಜೀವನಲ್ಲಿ ಸುಖವ ಪಡುವೊ
ಇದು ರಾಮ ಕಥೆಯ ಕಾಲಾ
ಮೂರು ನಾಕು ಘಂಟೆ ಕಾಲಾ

ರಾಮ ಧ್ಯಾನವ ದಿನ ದಿನ ಮಾಡಿ
ಅಬ್ಬೆ ಗೋವಿನ ಪೂಜೆಯ ಮಾಡಿ
ರಾಮ ಕಥೆಯ ನವಗೆ ಹೇಳ್ವಾ
ಗುರುಗೊ ನವಗೆಲ್ಲಾ ಅಭಯಾ
ಇದು ರಾಮ ಕಥೆಯ ಕಾಲಾ
ಮೂರು ನಾಕು ಘಂಟೆ ಕಾಲಾ

ಐದು ದಿನದಾ ಕಥೆಯ ಮೂಲ
ಮೂಲರಾಮಾಯಣದಾ ಸಾರ
ಮಹಿಮಾನ್ವಿತನಾ ಕಥೆಯ
ಎಲ್ಲೋರು ಸೇರಿ ಕೇಳುವೊ ಇಲ್ಲಿ
ಶ್ರೀ ರಾಮ ಚರಿತೆಯಾ
ನಾಕೈದು ದಿನದ ಕಾಲ

ಇದು ರಾಮ ಕಥೆಯ ಕಾಲಾ
ಮೂರು ನಾಕು ಘಂಟೆ ಕಾಲಾ ॥

 

 

9 thoughts on “ರಾಮ ಕಥೆ

  1. ಹಳೆಯ ಮಧುರ ಗೀತೆಯ ಒಟ್ಟಿಂಗೆ ರಾಮಕಥೆಯ ನೆಂಪು ಮಾಡಿದ ಶೇಡಿಗುಮ್ಮೆ ಪುಳ್ಳಿಗೆ ಅಭಿನಂದನೆಗೊ. ಪದ್ಯ ಲಾಯಕಾತದ.

  2. ತಾ.೨೮.೧.೨೦೧೨ ರಿಂದ ತಾ.೦೧.೦೨.೨೦೧೨ ರ ವರೇಗೆ ೫ ದಿನ ಭಾರೀ ಚೆಂದಕೆ ರಾಮ ಕಥೆ ಮಂಗಳೂರಿನ ಶ್ರೀ ಭಾರತೀ ಕಾಲೇಜು ವಠಾರಲ್ಲಿ ನಡೆಸಿ ಕೊಟ್ಟವದ ಶ್ರೀ ಸಂಸ್ಥಾನ. ಮೂಲ ವಾಲ್ಮೀಕಿ ರಾಮಾಯಣ ಕ್ಕೂ ಮೂಲವಾದ ಗಜೇಂದ್ರ ಮೋಕ್ಷದ ಕಥೆ. ಜಯ ವಿಜಯರ ಮೂಲದ ವಿಚಾರ. ನಾವು ಯಕ್ಷಗಾನ ಲ್ಲಿ ನೋಡುವ ಗಜೇಂದ್ರ ಮೋಕ್ಷ ಬೇರೆ , ಭಾಗವತ ದ ಕಥೆ ಅದು.

    ಅಂತೂ ರಾಮ ಕಥೆಗಾಗಿಯೇ ನಡೆಸಿದ ಕರ್ನಾಟಕದ ಪ್ರಥಮ ರಾಮ ಕಥೆ ಮಂಗಳೂರಿಂದು ಹೇಳುವ ದಾಖಲೆ ಇದಾತು.ಇನ್ನು ಮುಂದಂಗೆ ನಡವಲಿಪ್ಪ ರಾಮ ಕಥೆ ಗಳಿಂಗೆ ಇದು ಬೀಜಾಂಕುರ ಹೇಳಿ ಶ್ರೀ ಸಂಸ್ತಾನ ಹರಸಿದವು.

    ಊರ ಪರಊರ ,ಮಂಗಳೂರ ಹೋಬಳಿಯ ಬಹುತೇಕ ಜನಂಗೊಕ್ಕೆ ಪ್ರಥಮ ರಾಮಕಥೆ ಇದಾತು.ಎಲ್ಲೋರು ಆನಂದ ತುಂದಿಲರಾಗಿ ಕೊಣುದು ಕುಪ್ಪಳಿಸಿದವು. ನಮ್ಮ ಸಂಸ್ಥಾನವ ಪ್ರಪ್ರಥಮವಾಗಿ ಕಂಡ ಹಲವು ಜನ ನಿಜವಾದ ಶ್ರೀ ರಾಮ ನನ್ನೇ ಕಂಡೆವು ಹೇಳಿ ಅಡ್ಡಬಿದ್ದವು.

    ಅಂತೂ ಒಟ್ಟು ಅನುಭವ ಬರದು ಪೂರೈಸುಲೆ ಎನ್ನಂದೆಡಿಯ. ನವಂಬ್ರ / ದಶಂಬ್ರ ಲಿ ಮತ್ತೆ ಇಕ್ಕು. ಖಂದಿತ ಬನ್ನಿ ಅತೊ.

    ನಮಸ್ಕಾರ

    1. ಒಪ್ಪ ಕೊಟ್ಟದ್ದಕ್ಕೆ ಪಕಳಕುಂಜ ಮಾವಂಗೆ ಧನ್ಯವಾದಂಗೊ
      (ಅಂತೂ ಒಟ್ಟು ಅನುಭವ ಬರದು ಪೂರೈಸುಲೆ ಎನ್ನಂದೆಡಿಯ.) – ನಮ್ಮಂದಳೂ ಎಡಿಯ ಮಾವಾ ಬಯಲಿಲಿ “ಪೆಂಗಣ್ಣ” ಅವಂಗೆ ಅರಡಿಗಾದ ಹಾಂಗೆ ರಾಮಕಥೆಯ ಕಾರ್ಯಕ್ರಮದ ವಿವರಣೆ ಕೊಟ್ಟಿದ, ಕೊಡೆಯಾಲದ ರಾಮಕಥೆಯ ಐದೂದಿನ ಕೇಳಿದವರಲ್ಲಿ ಆನೂ ಒಬ್ಬ,
      (ನವಂಬ್ರ / ದಶಂಬ್ರ ಲಿ ಮತ್ತೆ ಇಕ್ಕು ಖಂದಿತ ಬನ್ನಿ ಅತೊ) – ಕಂಡಿತಾ ಬತ್ತೆ ಒಪ್ಪಂಗೊ….

  3. ಆನು ಗ್ರೇಶಿದೆ,
    ಇದೆಂತ ಶೇಭಾವನ ಶುದ್ದಿ ಇಲ್ಲೆ? ಹೇಳಿ..
    ಬಂತದಾ ಚೆಂದದ ಪದ್ಯ… 🙂

    1. ಅಣ್ಣೋ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ ,
      ಆನು ಗ್ರೇಶಿದೆ,ಇದೆಂತ ಶೇಭಾವನ ಶುದ್ದಿ ಇಲ್ಲೆ? ಹೇಳಿ.. – ನಾವು ಯಾವಾಗಳೂ ಬಯಲಿಲೇ ಇರ್ತು ಆತೋ ನಿಂಗಳೇ ಬಾರದ್ರೆ ನಮ್ಮ ಕಾಣ್ತು ಹೇಂಗೆ….?

      1. ನಾವು ಎಲ್ಲಿದ್ದರೂ ಬೈಲಿಲ್ಲಿ ಎಂತಾವುತ್ತು ಹೇಳಿದರ ಮೇಲೆ ಒಂದು ಕಣ್ಣು ಮಡಿಕ್ಕೊಂಡೇ ಇಕ್ಕು..
        ರಾಮಕಥೆಯ ಖುಶಿಲಿ ಬೈಲಿಂಗೆ ಬಪ್ಪದು ರಜ್ಜ ಹೊತ್ತಾತು ಅಷ್ಟೇ.. 😉

  4. ಪುಳ್ಳಿ ಭಾವ, ಲಾಯಕ ಆಯ್ದು ಭಾವ. ಹೇಂಗಾವ್ತು ಅಭಾವ ಪ್ರಭಾವ ಸುಧಾರಿಕೆ ರಾಮಕಥೆಲಿ ? ಪೆಂಗಣ್ಣನ ಕಾಂಬಲೆ ಸಿಕ್ಕಿತ್ತೊ ನಿಂಗೊಗಾದರೂ ಅಲ್ಲಿ ?? ಮೆಚ್ಚಿದೆ ಮೆಚ್ಚಿದೆ ನಿಂಗಳ ಉತ್ಸಾಹಕ್ಕೆ ಹೇಳಿತ್ತು – ‘ಚೆನ್ನೈವಾಣಿ’.

    1. ಭಾವಂದ್ರದ್ದು ಭಯಂಕರ ಸುದರಿಕೆ ಅವ್ತಾ ಇದ್ದು…
      ಅಭಾವ ಜಿಗ್ಗ ಆಯಿದವೀಗ…

    2. ಮೆಚ್ಚಿದೆ ಮೆಚ್ಚಿದೆ ನಿಂಗಳ ಉತ್ಸಾಹಕ್ಕೆ ಹೇಳಿತ್ತು – ‘ಚೆನ್ನೈವಾಣಿ’.- ಭಾವಾ ಧನ್ಯವಾದಂಗೊ..
      ಪೆಂಗಣ್ಣನ ಕಾಂಬಲೆ ಸಿಕ್ಕಿತ್ತೊ ನಿಂಗೊಗಾದರೂ ಅಲ್ಲಿ ?? – ಇದೇ ಭಾವಾ ಸಂಗತಿ ನವಗೆ ಎಷ್ಟು ಹುಡುಕ್ಕಿರೂ ಕಾಂಬಲೆಸಿಕ್ಕುತ್ತ ಇಲ್ಲೆ ಶುದ್ದಿ ಮಾತ್ರಾ ಹಾಕುತ್ತ ಸಂಗತಿ ಎಂತಾಳಿಯೇ ಅರ್ಥ ಆವುತ್ತಿಲ್ಲೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×