ರಷ್ಯಾದವಕ್ಕೂ ಸರ್ಪದೋಷ….?

July 23, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗ್ರೊನ್ ಸ್ಕ್ಯಾ ಹೇಳುವ ಮಾಸ್ಕೋದ ಒಂದು ಡಾಕುಟ್ರಕ್ಕ ಮಕ್ಕೋ ಅಯಿದಿಲ್ಲೆ ಹೇಳಿ ಸುಬ್ರಹ್ಮಣ್ಯಕ್ಕೆ ಬಂದು ಸರ್ಪಸಂಸ್ಕಾರ ಮಾಡಿದ್ದು.

ಭಾರತದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಪ್ಪ ಈ ಹೆಮ್ಮಕ್ಕೋ ದಿನಾ ಯೋಗಾಸನವುದೇ ಮಾಡುತ್ತಡ.
ಸರ್ಪದೇವ ಮಂತ್ರ, ಮಹಾಮೃತ್ಯುಂಜಯ ಮಂತ್ರ, ಸಂತಾನ ಗೋಪಾಲ ಮಂತ್ರ ದಿನಾ ಹೇಳುತ್ತವಡ. ಇದರ ಅರ್ಥವುದೇ ಗೊಂತಿದ್ದಡ.

ಇವಕ್ಕೆ  ದೈಹಿಕವಾಗಿ ಯಾವುದೇ ತೊಂದರೆ ಇಲ್ಲದ್ದರುದೇ ಮಕ್ಕ ಆಗದ್ದ ಕಾರಣ ಸರ್ಪ ದೋಷಂದ ಹೀಂಗೆ ಆವುತ್ತು ಹೇಳಿ ಆರೋ ಭಾರತದವು ಹೇಳಿತ್ತಿದವಡ.
ಹಾಂಗೆ ಜಾತಕ ಮಾಡಿ ವಾರಣಾಸಿಯ ಒಬ್ಬ ಜೋಯ್ಸನೊಟ್ಟಿಂಗೆ ಕೇಳಿಯಪ್ಪಗ ಸರ್ಪದೋ‍ಷಂದಲೇ ಹೇಳಿ ನಿಗಂಟಾತು.
ಇದಕ್ಕೆ ಪರಿಹಾರ ಕಾಳಹಸ್ತಿ ಅಥವಾ ಸುಬ್ರಮಣ್ಯಲ್ಲಿ ಸರ್ಪ ಸಂಸ್ಕಾರ ಆಯೆಕ್ಕಷ್ಟೆ ಹೇಳಿದವಡ. ಹಾಂಗೆ ಇಂಟರ್ನೆಟ್ಟಿಲಿಯೇ ಎಲ್ಲಾ ನಿಗಂಟು ಮಾಡಿಕೊಂಡು ಸುಬ್ರಮಣ್ಯಕ್ಕೆ ಬಂದು ಪೂಜೆ ಮಾಡಿಸಿ ಸೀದಾ ರಷ್ಯಕ್ಕೆ ಹಾರೊದು ಹೇಳಿತ್ತು. ಇಂಗ್ಲೀಷು ಕೂಡ ಅರ್ಥ ಆಗದ್ದ ಈ ಗ್ರೊನ್ ಸ್ಕ್ಯಾನ ಅಲ್ಲಿ ಎಲ್ಲೋರುದೇ ಹೆದರಿಸಿತ್ತಿದವಡ. ನಿನಗೆ ಬೆಂಗ್ಳೂರಿಲಿಯೇ ರಷ್ಯನ್ ಮಾತಾಡುವವು ಸಿಕ್ಕವು, ಇನ್ನು ಸುಬ್ರಮಣ್ಯಲ್ಲಿ ನಿನ್ನ ಕಥೆ ಎಂತ ಹೇಳಿ. ಆದರೆ ಸುಬ್ರಮಣ್ಯಲ್ಲಿಯೇ ಇಪ್ಪ ನಮ್ಮವನೇ ಆದ ಒಂಟೆಗುಂಡಿಯ ರಾಘವೇಂದ್ರ ಹೇಳುವ ಮಾಣಿಗೆ ಅದರ ಭಾ‍ಷೆ ಗೊಂತಿದ್ದ ಕಾರಣ ಅದಕ್ಕೆ ಏವದೇ ತೊಂದರೆ ಆಯಿದಿಲ್ಲೆ.

ನಿಂಗಳ ದೇಶಲ್ಲಿ ಏವ ತೊಂದರೆಯುದೇ ಆಯಿದಿಲ್ಲೆ, ಆದರೆ ಎಂಗಳ ರಷ್ಯಾಲ್ಲಿ ಬುಕ್ ಮಾಡಿದ ಬೆಂಗಳೂರು-ಸುಬ್ರಮಣ್ಯ-ಬೆಂಗಳೂರು ಟಾಕ್ಸಿಯುದೇ, ರೂಮು ಬಾಡಿಗೆಯುದೇ ಸುಮಾರು ಮೂವತ್ತು ಸಾವಿರ ರೂಪಾಯಿ ಆತು, ಇದನ್ನೂ ನಿಂಗಳತ್ತರೆ ಮಾಡುತ್ತಿದ್ದರೆ ಇದರ ಅರ್ದವುದೇ ಆವುತಿತ್ತಿಲ್ಲೆ ಹೇಳಿತ್ತು.
ನಮ್ಮಲ್ಲಿ ಇಪ್ಪ ಕಮ್ಮಿನಿಷ್ಟೆಯ ಧಾರ್ಮಿಕ ನಾಯಕರುಗಳೇ ಸಂಪ್ರದಾಯಂಗಳ ನಿಷೇಧಿಸೆಕ್ಕು/ಬದಲುಸೆಕ್ಕು  ಹೇಳುವಾಗ ಇದರ ಒಳಿಶುಲೆ  ಹೆರದೇಶದವೇ ಬರೆಕಷ್ಟೆಯಾ ಹೇಂಗೆ?

ಕೆಲವು ಚಿತ್ರಂಗೊ:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘು ಮುಳಿಯ

  ದೇಶ ಭಾಷೆಗಳ ಮೀರಿ ನಿ೦ದ ವಿಶೇಷ.ಧನ್ಯವಾದ ವೆ೦ಕಟೇಶಣ್ಣ.

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ವೆಂಕಟೇಶಣ್ಣನ ಲೇಖನ ಓದಿ ಖುಷಿ ಆತು… ಹರೇ ರಾಮ…

  “ನಮ್ಮಲ್ಲಿ ಇಪ್ಪ ಕಮ್ಮಿನಿಷ್ಟೆಯ ಧಾರ್ಮಿಕ ನಾಯಕರುಗಳೇ ಸಂಪ್ರದಾಯಂಗಳ ನಿಷೇಧಿಸೆಕ್ಕು/ಬದಲುಸೆಕ್ಕು ಹೇಳುವಾಗ ಇದರ ಒಳಿಶುಲೆ ಹೆರದೇಶದವೇ ಬರೆಕಷ್ಟೆಯಾ ಹೇಂಗೆ?”

  ನಮ್ಮಲ್ಲಿ ಇಂತಹ ಹಲವು ಭಕ್ತಿ ಕಥೆಗೋ ಇದ್ದು. ಆದರೆ ಇದರ ಸಮಾಜಲ್ಲಿ ಹೇಳಿದರೆ ಎಲ್ಲಿ ಮೂಢ ನಂಬಿಕೆ ಹೇಳಿ ಸಮಾಜ ಅಪಹಾಸ್ಯ ಮಾಡುಗೋ ಹೇಳುವ ಭಾವಂದ ಇದರ ತಮ್ಮ ತಮ್ಮಲ್ಲೇ ಗೌಪ್ಯವಾಗಿ ಮಡಿಕ್ಕೊಂಡಿದವು. ಸಾಧ್ಯವಿದ್ದಷ್ಟು ಈ ಭಕ್ತಿ ಕಥೆಗಳ ಹೊರ ತಪ್ಪ ಕೆಲಸವ ನಾವು ಮಾಡೆಕ್ಕು. ಖಂಡಿತವಾಗಿಯೂ ಅದೆಲ್ಲ ಮೂಢ ನಂಬಿಕೆ ಅಲ್ಲ… ಅದರ ಹಿಂದೆ ಅತ್ಯಂತ ಸಂಕೀರ್ಣವಾದ ಜ್ಹಾನ ಇದ್ದು. ಆಧುನಿಕ ವಿಜ್ಹಾನ ಆ ಜ್ಹಾನದ ೦.೦೦೫% ಕೂಡ ಕಂಡುಗೊಮ್ಬಲೇ ಸಾಧ್ಯ ಆಯಿದಿಲ್ಲೇ. ಆ ಜ್ಹಾನವ ಪಡದಪ್ಪಗ ಆಧುನಿಕ ವಿಜ್ಹಾನ ಹೇಳುದು “ವಿಜ್ಹಾನದ ಅತ್ಯಂತ ಸಣ್ಣ ಶಾಖೆ” ಹೇಳುದು ಅರ್ಥ ಆವುತ್ತು. ಹಾಂಗಾಗಿ ಸಮಾಜ ಬಂಧುಗೋ ದೇವರ ಭಕ್ತಿಂದಲಾಗಿ ಜೀವನಲ್ಲಿ ಎಂತಾದರೂ miracle ಅನುಭವಿಸಿದ್ದರೆ ದಯವಿಟ್ಟು ಹಂಚಿಗೊಳ್ಳಿ. ಇದರಿಂದ ನೋವಿಲ್ಲಿ ಇಪ್ಪ ಇತರರಿಂಗೆ, ಸಮಾಜಕ್ಕೆ,ದೇಶಕ್ಕೆ ಹಲವು ಲಾಭ ಇದ್ದು. ಯಾವುದೇ ಖರ್ಚು ಇಲ್ಲದ್ದೆ ಮಾಡುಲೆ ಸಾಧ್ಯ ಇಪ್ಪ ದೇಶ ಸೇವೆ ಇದು.

  [Reply]

  VA:F [1.9.22_1171]
  Rating: 0 (from 0 votes)
 4. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಭಾವನೆಗೆ ಭಕ್ತಿಗೆ ದೇಶ-ಕಾಲದ ಭೇದಭಾವ ಇಲ್ಲೆ ಹೇಳಿ ಆತು!! ಧನ್ಯವಾದ!

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಪ್ರಕಾಶ ಕುಕ್ಕಿಲ
  ಶ್ರೀಪ್ರಕಾಶ ಕುಕ್ಕಿಲ

  ಹರೇ ರಾಮ!
  ಸರ್ಪ ದೋಷದ ಬಗ್ಗೆ ಒಂದು ಅನುಭವ.ಇ೦ಡಿಯನ್ ಏರ್ ಫೋರ್ಸಿಲಿ ಆನಿದ್ದ ಜಾಗ್ವಾರ್ ಸ್ಕ್ವಾಡ್ರನ್ ನ ಹೆಸರು “ಕೋಬ್ರಾಸ್”. ಎಲ್ಲಾ ೨೨ ವಿಮಾನ೦ಗಳಲ್ಲಿಯೂ ಚೆ೦ದಕ್ಕೆ ಹೆಡೆಯೆತ್ತಿದ ಸರ್ಪನ ಚಿತ್ರದೊಟ್ಟಿ೦ಗೆ ಕೋಬ್ರಾಸ್ ಹೇಳಿ ಬರಕ್ಕೊ೦ಡಿರ್ತು.ಎ೦ಗಳ ಎಲ್ಲಾ ಗೋಡೆಗಳಲ್ಲಿಯೂ ಸರ್ಪನ ಚಿತ್ರ೦ಗೋ. ಗಾರ್ಡನ್ ಲಿಯೂ ಸರ್ಪನ ಹೆಡೆಯೆತ್ತಿದ ಮೂರ್ತಿಗೊ.
  ಸುಮಾರು ೧೯೯೧ನೇ ಇಸವಿಲಿ ಎ೦ಗಳ ಸ್ಕ್ವಾಡ್ರನ್ ಲಿ ತು೦ಬಾ ಸಮಸ್ಯೆಗೊ-ಏರ್ ಕ್ರಾಶ್, ಬರ್ಡ್ ಹಿಟ್, ಒವರ್ ರನ್ ಇತ್ಯಾದಿ.ಎಲ್ಲಾ ದೊಡ್ಡ ದೊಡ್ಡ ವಿಜ್ಹಾನಿಗೊಕ್ಕೂ ಎ೦ತ ಕಾರಣ ಹೇಳಿಯೇ ಗೊ೦ತಾಗ. ಅಕೇರಿಗೆ ಎನ್ನೊಟ್ತಿ೦ಗಿದ್ದ ಬಿಹಾರಿ ಬ್ರಾಹ್ಮಣ ಮಿಶ್ರ ಹೇಳುವವನ ಸಲಹೆಯ ಮೇರೆಗೆ ಜೋಯ್ಸನ ಕರಕ್ಕೊ೦ಡು ಬ೦ದು ಪ್ರಶ್ನೆ ಮಡ್ ಗ್ ಸಿ ಅಪ್ಪಗ ಸರ್ಪದೋಷ ಇದ್ದು, ಹೋಮ ಪೂಜೆ ಮಾಡಿ ನಿವೃತ್ತಿ ಮಾಡಿ ಎಲ್ಲೋರಿ೦ಗೂ ಪ್ರಸಾದ ಕೊಡೆಕ್ಕು ಹೇಳಿ ಕ೦ಡತ್ತು.
  ದೊಡ್ಡ ದೊಡ್ಡ ಆಫೀಸರುಗೊಕ್ಕೆ ಇದೆಲ್ಲ ಸರಿ ಕಾಣದ್ರೂ ಮಾಡ್ಸಿದವು.
  ಆದರೆ ಅದರ೦ದ ನ೦ತ್ರ ೧೯೯೪ ನೇ ಇಸ್ವಿ ವರೇಗೆ ಆನು ಅಲ್ಲಿಯೇ ಇತ್ತಿದ್ದೆ ಒ೦ದು ಸಣ್ಣ ಇನ್ಸಿಡೆ೦ಟ್ ಕೂಡಾ ಆಯಿದಿಲ್ಲೆ.ಇ೦ದುದೇ “ಕೋಬ್ರಾಸ್” ಸ್ಕ್ವಾಡ್ರನ್ ಅಲ್ಲಿಯೇ ಸೌಖ್ಯಲ್ಲಿ ಇದ್ದು.

  ಶ್ರೀಪ್ರಕಾಶ ಕುಕ್ಕಿಲ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಪುಟ್ಟಬಾವ°ಶಾ...ರೀಯೇನಂಕೂಡ್ಳು ಅಣ್ಣಕೊಳಚ್ಚಿಪ್ಪು ಬಾವವಿದ್ವಾನಣ್ಣವೆಂಕಟ್ ಕೋಟೂರುಸುವರ್ಣಿನೀ ಕೊಣಲೆಬಟ್ಟಮಾವ°ರಾಜಣ್ಣಮಾಷ್ಟ್ರುಮಾವ°ನೆಗೆಗಾರ°ಅಕ್ಷರ°ಮುಳಿಯ ಭಾವಚೆನ್ನೈ ಬಾವ°ಸರ್ಪಮಲೆ ಮಾವ°ಅಕ್ಷರದಣ್ಣಪುತ್ತೂರುಬಾವವೇಣೂರಣ್ಣಸಂಪಾದಕ°ಬೋಸ ಬಾವಎರುಂಬು ಅಪ್ಪಚ್ಚಿಅನುಶ್ರೀ ಬಂಡಾಡಿಬೊಳುಂಬು ಮಾವ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ