ಭಾಗ 04 : ಪುಂಸವನ : ಹದಿನಾರು ಸಂಸ್ಕಾರಂಗೊ

September 22, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಓದಿದ್ದು ನೆಂಪಿದ್ದನ್ನೇ . ಇಲ್ಲದ್ರೆ ಮುಂದಾಣದ್ದು ಅರ್ಥ ಆಗ.

ಪುಂಸವನ :

ಪುಂಸ್ಯ + ಅವನಃ = ಪುಂಸವನ.

ಪುಂಸ್ಯ ಹೇಳಿರೆ ಪುರುಷಾರ್ಥ. ಅವನಿಯ ಹೇಳಿರೆ ಪೃಥ್ವಿಯ ಮೇಲೆ ಅವತರಿಸುವ ಅವಸ್ಥೆ.
ಗರ್ಭಧಾರಣೆ ಆದ ನಂತರ ಪುತ್ರ ಪ್ರಾಪ್ತಿಗಾಗಿ ಈ ಸಂಸ್ಕಾರ ಮಾಡುತ್ತದು.ಗರ್ಭಸ್ಯ ಪುಂರೂಪತ್ವ ಜ್ಞಾನೋದಯ ಸಿದ್ಧ್ಯರ್ಥಂ ಹೇಳಿ ಸಂಕಲ್ಪ. ವಂಶೋಭಿವೃದ್ಧಿಗೆ ಬೇಕಾಗಿ ಪುತ್ರ ಸಂತಾನ ಅಭಿಲಾಷೆಂದ ಮಾಡುತ್ತದಾವ್ತು ಈ ಸಂಸ್ಕಾರ.
ಗರ್ಭಧಾರಣೆ ಆಯ್ದು ಹೇಳಿ ಖಚಿತ ಆದ ನಂತರ ಎರಡನೇ ತಿಂಗಳಿಲ್ಲಿ ಈ ಸಂಸ್ಕಾರ ಮಾಡೆಕ್ಕಪ್ಪದು.
ಅಬ್ಬೆಯ ಹೊಟ್ಟೆಲಿ ಗರ್ಭದ ಸ್ಪಂದನ ಪ್ರಾರಂಭ ಅಪ್ಪದರ ಮದಲು ಅರ್ಥಾತ್ `ಲಿಂಗ ವ್ಯಕ್ತ ಅಪ್ಪಂದರ ಮದಲೇ’ ಈ ಸಂಸ್ಕಾರವ ಮಾಡೆಕ್ಕು.
ತಡವಾದರೆ ಅದರ ಪರಿಣಾಮ ಪ್ರಭಾವ ಅಸಾಧ್ಯ.
ಈ ವಿಧಿಯ ಶುಕ್ಲ ಪಕ್ಷದ  ಪುನರ್ವಸು, ಪುಷ್ಯ, ಹಸ್ತ , ಮೂಲ ನಕ್ಷತ್ರಲ್ಲಿ ಮಾಡೆಕ್ಕಪ್ಪದು ಹೇಳಿ ಶಾಸ್ತ್ರ.

ವೈದಿಕ ಪುಂಸವನ ಹೋಮ ಮಾಡಿಕ್ಕಿ, ನವ ಗರ್ಭಿಣಿ, ಬೊಗಸೆ ಕೈ ಮಡಿಲಿಲಿ ಹಿಡ್ಕೊಂಡು, ಬಲದ ಕೈಲಿ ದನದ ಹಾಲಿನ ಮೊಸರು (ಹುಳಿಯಿಲ್ಲದ್ದ ಮೊಸರು ವಾಂತಿ ನಿಯಂತ್ರಕ) ಹಿಡ್ಕೊಳೆಕ್ಕು.
ಅಪ್ಪ, ಅಬ್ಬೆಯ ಗುಣ ಸಮಾನ ಆಗಿ ಮೂಡಿ ಬರೆಕು ಹೇಳಿ ಸಂಕೇತ. ತಾಯಿಯ ಗುಣವೂ ಮಗುವಿಲ್ಲಿ ಇರೆಕು ಹೇಳ್ವ ಉದ್ದೇಶಲ್ಲಿ ಆವ್ತು ದನದ ಹಾಲಿನ ಮೊಸರು ಸಂಕೇತ.
ಅದರಲ್ಲಿ (ಪು)ಲಿಂಗ ದಂತೆ ಪೂರ್ವಾಭಿಮುಖವಾಗಿ ಒಂದು ಜವೆಗೋಧಿಯ ಮಡುಗೆಕ್ಕು. ಅದರ ಎರಡು ಬದಿಲಿ ಮೊಟ್ಟೆಯಂತೆ (ಅಂಡಕೋಶದಂತೆ) ಆಕಾರ ಇಪ್ಪ ಎರಡು ಉದ್ದಿನ ಕಾಳು ಮಡುಗೆಕ್ಕು (ಗೋಧಿ, ಉದ್ದು ಶರೀರಕ್ಕೆ ಪೌಷ್ಟಿಕ ಎಂಬ ಸಂಕೇತ).
ಅದರ ಮೂರು ಸರ್ತಿ ‘ಪುಂಸವನ ಪಿತೇ’ ಹೇಳಿಗೊಂಡು ಆ ಸ್ತ್ರೀಯು ಸೇವಿಸೆಕ್ಕು.
ಕೈಲಿ ಮಡುಗಿದ ಸಮಾನ ಆಕೃತಿ ಬಂಧಂಗಳಿಂದ ಸಮಾನ ಲಹರಿ ಉಂಟಾವ್ತು ಹೇಳಿ ನಂಬಿಕೆ.
(ಪು)ಲಿಂಗ ಮತ್ತು ಅಂಡಕೋಶ ಆಕೃತಿ ಗ್ರಹಿಸಿದ್ದರಿಂದ ಸಮಾನ ಆಕಾರದ ಪುರುಷತತ್ವಂಗೊ ಗರ್ಭದೆಡೆ ಆಕರ್ಷಿತ ಅಪ್ಪ ಕ್ಷಮತೆ ಹೊಂದುತ್ತು.

ಈ ವಿಧಿಲಿ ಆಲದ ಮರದ ಬೇರಿನ ರಸವ ಸ್ತ್ರೀಯ ಮೂಗಿನ ಎಡ ಹೊಳ್ಳಿನೊಳ ಹಿಂಡುವದು, ನೀರು ತುಂಬಿರ್ಪ ಮಣ್ಣಿನ ಬಟ್ಟಲ ಸ್ತ್ರೀಯ ಕಿಬ್ಬೊಟ್ಟೆ ಮೇಲೆ ಮಡುಗಿ ‘ಸುಪರ್ಣೋಸಿ….’ಮುಂತಾದ ಮಂತ್ರಂಗಳ ಪಠಿಸುವ ವಿಧಿಯೂ ಗರ್ಭದ ಲಿಂಗವು ಪುಲ್ಲಿಂಗ ಅಪ್ಪಲೆ ಪೂರಕ ಆವ್ತು.
ಬ್ರಾಹ್ಮೀ, ಸೋಮಲತಾ, ಆಲದ ಮರ ಇತ್ಯಾದಿ ವನಸ್ಪತಿಗೊ ಪಿತ್ತಹಾರಕ, ಯೋನಿದೋಷನಿವಾರಕ, ಓಜಸ್ಸು ವರ್ಧಕ ಮತ್ತು ವೀರ್ಯ ಸಂರಕ್ಷಕ.
ಇವೆಲ್ಲವುಗಳ ಸಂಕಲಿಕ ಪರಿಣಾಮವೇ ಶುಕ್ರಶೋಣಿತಲ್ಲಿಪ್ಪ ಪುಲ್ಲಿಂಗಕಾರಕ ಘಟಕಗಳ ವೃದ್ಧಿಗೆ ಕಾರಣ ಹೇಳಿ ಎಲ್ಲೋ ಒಂದಿಕ್ಕೆ ಓದಿದ ನೆಂಪು.  ಇದೂ ಆಪಸ್ತಂಭ ಕ್ರಮ. ಬೋಧಾಯನ ಕ್ರಮಲ್ಲಿ ಈ ವಿಧಾನ  ಇಲ್ಲೆ.

ಇನ್ನು ಸೀಮಂತ. ಬಪ್ಪ ವಾರ.
ಬಂದಿಕ್ಕಿ ಆತೋ ಏ.

|| ಹರೇ ರಾಮ ||

(ಮುಂದುವರಿತ್ತು)

ಸೂ:
ಹಿಂದಾಣ ವಾರದ ಶುದ್ದಿ : ಭಾಗ 03 : ಗರ್ಭಾಧಾನ

ಭಾಗ 04 : ಪುಂಸವನ : ಹದಿನಾರು ಸಂಸ್ಕಾರಂಗೊ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. MANJUNATHGS

  Sir I m having 3 girl childs

  Please give your contact no. to discuss about pumsavana

  Regards
  MANJUNATHA G S

  TEL: 33915184, 7760999167

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಸಂಪಾದಕ°ವೆಂಕಟ್ ಕೋಟೂರುಪೆಂಗಣ್ಣ°ಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಬೋಸ ಬಾವಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿವಿಜಯತ್ತೆದೀಪಿಕಾವಿದ್ವಾನಣ್ಣದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣದೊಡ್ಡಮಾವ°ಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಶ್ಯಾಮಣ್ಣಪಟಿಕಲ್ಲಪ್ಪಚ್ಚಿಚೆನ್ನೈ ಬಾವ°ಬಂಡಾಡಿ ಅಜ್ಜಿಡಾಗುಟ್ರಕ್ಕ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ