ನಾವು ಆಹಾರ ಭುಂಜಿಸುವ ಮದಲು ಎಂತಕೆ ಪರಮಾತ್ಮಂಗೆ ಸಮರ್ಪಿಸುತ್ತು?

May 19, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಡೀ ಈ ಪ್ರಪಂಚ ಆ ಭಗವಂತನದ್ದು. ನಮ್ಮಲ್ಲಿ ಇಪ್ಪದೂ ಆತ್ಮ ಆ ಭಗವಂತನ ಒಂದು ಅಂಶ. ಪ್ರಕೃತಿಯೂ ಆ ಪರಮಾತ್ಮನ ಸೃಷ್ಟಿ. ಹಾಂಗಾಗಿ ಈ ಜೀವನಲ್ಲಿ ನಾವು ಕೊಟ್ಟ ಭಿಕ್ಷೆಯ ಆವ್ತು ಸ್ವೀಕರುಸುವದು. ಭಾರತೀಯ ಸಂಪ್ರದಾಯಲ್ಲಿ ನಾವು ಸೇವಿಸುವ ಆಹಾರವ ಪರಮಾತ್ಮಂಗೆ ಸಮರ್ಪಿಸುತ್ತು.
ಮತ್ತೆ ಅದೇ ಪ್ರಸಾದ (ಪರಮಾತ್ಮನ ಅನುಗ್ರಹಂದ ಒದಗಿದ ಭಾಗ್ಯ)  ಹೇಳಿ ಸ್ವೀಕರುಸುತ್ತು. ಪಾಶ್ಚಿಮಾತ್ಯ ಸಂಪ್ರದಾಯಲ್ಲೂ ಪರಮಾತ್ಮಂಗೆ ಮದಾಲು ವಂದನಾಪೂರ್ವಕ ಪ್ರಾರ್ಥನೆ ಮಾಡಿ ಮತ್ತೆಯೇ ಆಹಾರ ಸೇವಿಸುವ ಕ್ರಮಡ.
ದೇವಸ್ಥಾನ, ಮನೆಗಳಲ್ಲಿ ನಾವು ಮಾಡಿದ ಭಕ್ಷ್ಯ ವಾ ವಿಶೇಷ ಅಡುಗೆಯ ದೇವರಿಂಗೆ ನೈವೇದ್ಯ ಮಾಡಿ ಆಮೇಲೆ ( ಪಾಕ ಮಾಡಿದ್ದು ಕಮ್ಮಿ ಆದಲ್ಲಿ ಇತರ ಆಹಾರದ ಜೊತೆ ಮಿಶ್ರಣ ಮಾಡಿ) ಪ್ರಸಾದ ಹೇಳಿ ಹಂಚುತ್ತು .

ಭಗವಂತ ಸರ್ವ ಶಕ್ತ , ಸರ್ವಜ್ಞ, ಸರ್ವಾಂತರ್ಯಾಮಿ. ಮಾನವ ವ್ಯಷ್ಟಿ ಭಗವಂತ ಸಮಷ್ಟಿ. ನಾವು ಏನಾರು ಕಾರ್ಯ ಮಾಡುತ್ತರೆ ಅದು ಪರಮಾತ್ಮನ ಅನುಗ್ರಹಂದ, ಅವ ಕೊಟ್ಟ ಶಕ್ತಿ, ಸ್ಫೂರ್ತಿಯಿಂದ ಕಾರ್ಯ ಸಾಧನೆ ಸಾಧ್ಯ. ಜೀವನಲ್ಲಿ ನಾವು ಏನೇ ಫಲ ಪಡೆದಿದ್ದರೂ ಅದು ಅವ ಕೊಟ್ಟದು. ಭಗವಂತ ಸರ್ವಸ್ವ ಹೇಳಿ ಆದಮೇಲೆ ಅದು ಅವನದ್ದು ನಾವು ಅವಂಗೆ ಮದಾಲು ಅರ್ಪಿಸಿ ಬಳಿಕ ಅವನಿಂದ ಸ್ವೀಕರುಸುವದು. ಹೀಂಗೆ ಮಾಡಿಯಪ್ಪಗ ಪರಮಾತ್ಮನ ದಿವ್ಯ ಸ್ಪರ್ಶದ ಅನುಭವ. ಪ್ರಸಾದ ಸ್ವೀಕರಿಸಿ ಧನ್ಯತೆಯ ಮುಗುಳ್ನಗೆ ನವಗೆ ಸಂತೃಪ್ತಿ.

ಆಹಾರ ಭುಂಜಿಸುವ ಮುನ್ನ ಮದಾಲು ಆಹಾರವ ಶುದ್ಧೀಕರಿಸುವ ಸೂಚಕವಾಗಿ ಅದರ ಸುತ್ತಲೂ (ಮೇಗಂದ) ನೀರು ಚಿಮುಕುಸುವುದು.  ಮತ್ತೆ ಒಂದು ಸಕ್ಕಣ ನೀರು ಬಲದ ಕೈಲಿ ತೆಕ್ಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ದಕ್ಷಿಣ ಭಾಗಂದ ಪ್ರಾರಂಭ ಮಾಡಿ ವೃತ್ತಾಕಾರಲ್ಲಿ ಪುನಃ ದಕ್ಷಿಣಕ್ಕೆ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಸತ್ಯಂ ತ್ವರ್ತೇ ನ  ಪರಿಷಿಂಚಾಮಿ || (ಹಗಲಿಂಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ಇರುಳಿಂಗೆ)

ಇನ್ನು ವಸಿಷ್ಠ ಗೋತ್ರದವು  ಬಿಟ್ಟು ಉಳುದವು ಚಿತ್ರಮಡುಗುವದು. ಚಿತ್ರ ಮಡುಗುತ್ಸು ಹೇಳಿರೆ – ಬ್ರಾಹ್ಮಣನಾಗಿ ಪಂಚಯಜ್ಞಂಗಳ ನಿತ್ಯ ತಪ್ಪದ್ದೇ ಮಾಡೆಕು. ವಸಿಷ್ಠದವು ನಿತ್ಯ ಹೋತ್ರಿಗೊ, ನಿತ್ಯ ಯಜ್ಞಲ್ಲಿ ಹವಿಸ್ಸು ಸಮರ್ಪಿಸುತ್ತವು, ಆದಕಾರಣ, ಅವು ನಿತ್ಯ ಯಜ್ಞ ಮಾಡುತ್ತವು ಹೇಳಿ ಲೆಕ್ಕ. ಉಳುದವು ನಿತ್ಯ ಯಜ್ಞ ಮಾಡದ್ದ ಕಾರಣ ಅದರ ಸಾಂಕೇತಿಕವಾಗಿ ಭೋಜನ ಸಮಯಲ್ಲಿ ಪರಿಷಿಂಚನೆ ಮಾಡೆಕು ಹೇಳಿ ಋಷಿಗೊ ಮದಲಿಂದಲೇ ರೂಪಿಸಿದ್ದು, ಪಾಲಿಸಿಗೊಂಡು ಬಂದದು.

ಗೃಹಸ್ಥನಾದವ° ಪಂಚಋಣಕ್ಕೆ ಬಾಧ್ಯಸ್ಥನಾಗಿರುತ್ತ°ದೇವ ಋಣ, ಪಿತೃ ಋಣ, ಋಷಿ ಋಣ, ಮನುಷ್ಯ ಋಣ, ಭೂತ ಋಣ. ಅದಕ್ಕೆ ನಿತ್ಯ ಪಂಚಯಜ್ಞವ ಮಾಡಿಗೊಂಡು ಬರೇಕು ಹೇಳಿ ಶಾಸ್ತ್ರ (ದೇವಯಜ್ಞ, ಪಿತೃಯಜ್ಞ, ಬ್ರಹ್ಮಯಜ್ಞ, ಮನುಷ್ಯಯಜ್ಞ, ಭೂತಯಜ್ಞ. ಅಬ್ಬೆ ಅಪ್ಪ° ಇಪ್ಪವ ಪಿತೃಯಜ್ಞಕ್ಕೆ ಬಾಧ್ಯಸ್ಥನಾವ್ತನಿಲ್ಲೆ.) ಆದರೆ ಪ್ರಾಯೋಗಿಕ ನಿತ್ಯ ಜೀವನಲ್ಲಿ ಅದು ನಡಕ್ಕೊಂಡು ಬತ್ತಾ ಇಲ್ಲೇ.  ನಮ್ಮ ಐದು ಋಣವ ಒಪ್ಪಿಕೊಂಬ ಸಂಕೇತವಾಗಿ ಮಡುಗುತ್ತು ಚಿತ್ರ ಮಡುಗುವ ಉದ್ದೇಶವೂ ಅಪ್ಪು ಹೇಳಿ ತಿಳುದವರ ಅಭಿಪ್ರಾಯ..

 1. ದೇವ ಋಣ : ದೈವೀಕ ಶಕ್ತಿಯ ಕರುಣಾಪೂರ್ವಕ ಅನುಗ್ರಹ ಮತ್ತು ಅದರ ರಕ್ಷಣೆಯ ನೆರಳಲ್ಲೇ ನಾವಿಪ್ಪದು ಹೇಳಿ ನೆಂಪುಮಾಡಿಗೊಂಬ ಔದಾರ್ಯ.
 2. ಪಿತೃ ಋಣ: ನಮಗೆ ಉತ್ತಮವಾದ ಮನೆತನ ಹಾಗೂ ಶ್ರೇಷ್ಠ ಸಂಸ್ಕೃತಿಯ ನಮ್ಮಲ್ಲಿ ಬೆಳೆಸಿದ್ದಕ್ಕೆ ನಮ್ಮ ಪೂರ್ವಜರಿಂಗೆ ನಾವು ಅರ್ಪಿಸುವ ಕೃತಜ್ಞತೆ.
 3. ಋಷಿ ಋಣ: ಶಾಸ್ತ್ರವಿಹಿತ ಧಾರ್ಮಿಕ ಮನೋಭಾವವ ನವಗೆ ತಿಳಿಹೇಳಿ ನಮ್ಮ ಬೌದ್ಧಿಕ ಪರಿಪಕ್ವತೆ ಭೋಧಿಸಿದ ಋಷಿವರೇಣ್ಯರಿಂಗೆ ನಾವು ಸಲ್ಲುಸುವ ಗೌರವ.
 4. ಮನುಷ್ಯ ಋಣ: ನಾವು ಸಂಘ – ಜೀವಿಗೊ. ನಮ್ಮ ಏಳಿಗೆ ಅನೇಕಾನೇಕ ಜನರ ನಾನಾ ಸಹಾಯಂದ ಸಾಧ್ಯ. ಇಂತಹ ಸಮಾಜಂದ ಉಪಕಾರ ಸ್ವೀಕರಿಸಿ ಬೆಳೆದ ನಾವು ಪ್ರತ್ಯುಪಕಾರವಾಗಿ ಸಾಮಾಜಿಕ ಕ್ಷೇತ್ರದ ಔನ್ನತ್ಯಕ್ಕಾಗಿ ಶ್ರಮಿಸುಕು ಹೇಳ್ವ ಯೋಚನೆ.
 5. ಭೂತ ಋಣ: ಇತರ ಪ್ರಾಣಿ ವಾ ಪಕ್ಷಿ ಅಥವಾ ಜೀವಿಗಳೂ ಕೂಡ ನವಗೆ ನಿಸ್ವಾರ್ಥ ರೀತಿಲಿ ಸೇವೆ ಮಾಡಿಗೊಂಡದರ ಅನುಭವಿಸಿ ಆವ್ತು ನಾವು ಇರ್ತದು. ಅವಕ್ಕೂ ನಮ್ಮ ಪ್ರಾಮಾಣಿಕ ಕೃತಜ್ಞತೆ.

ಎಲೆಯ ಬಲಬದಿಲಿ ಒದ್ದೆಬೆರಳಿಂದ ಒಂದು ಸಣ್ಣ ಗೆರೆ ಎಳದು ಎಲೆಲಿ ಬಡುಸಿದ ಅನ್ನಂದ ನಾಕು  ಅವುಳು ತೆಗದು ಎಳದ ಗೆರೆಯ ಮೇಲೆ ಚಿತ್ರಾಯ ಸ್ವಾಹಾ, ಚಿತ್ರಗುಪ್ತಾಯ ಸ್ವಾಹಾ, ಯಮಾಯ ಸ್ವಾಹಾ, ಯಮಧರ್ಮರಾಜಾಯ ಸ್ವಾಹಾ, ಹೇಳಿ ನಾಲ್ಕು ಅಶನ ಮಡುಗಿ ಸರ್ವಭೂತೇಭ್ಯೋ ನಮಃ, ತೃಪ್ತಿರಸ್ತು ಹೇಳಿ ಅದರ ಮೇಗಂದ ನೀರು ಬಿಡುವದು. ಇದಾದ ನಂತರ ಅಮೃತಮಸ್ತು, ಅಮೃತೋಪಸ್ತರಣಮಸಿ ಸ್ವಾಹಾ ಹೇಳಿ ಅಂಗೈಲಿ ನೀರೆರದು ಕುಡಿವದು.

ಇದಾದಿಕ್ಕಿ ಜೀವನಾಧಾರವಾಗಿಪ್ಪ ಪ್ರಾಣಶಕ್ತಿ – ಪರಮಾತ್ಮ. ಅವಂಗೂ ಶಾರೀರಿಕ ಮಟ್ಟಲ್ಲಿ ನಡವ ಪಂಚಪ್ರಾಣ ಕ್ರಿಯಗೂ ಆಹುತಿರೂಪವಾಗಿ ಒಂದೊಂದು ಔಳು ಅಶನ ತೆಕ್ಕೊಂಬದು –

 • ಪ್ರಾಣಾಯಸ್ವಾಹಾ – ಶ್ವಾಸೋಚ್ಚಾಸ – ದಕ್ಷಿಣ ದಿಕ್ಕಿಂದ ಅಶನವ ಮಧ್ಯ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
 • ಅಪಾನಾಯಸ್ವಾಹ – ಮಲ ವಿಸರ್ಜನೆ – ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ..
 • ವ್ಯಾನಾಯಸ್ವಾಹ – ರಕ್ತ ಪರಿಚಲನೆ – ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ..
 • ಉದಾನಾಯಸ್ವಾಹ – ಪರಾವರ್ತನ (ಮೇಲಾಣ ಕ್ರಿಯೆಗಳ ಪುನರಾವರ್ತನೆ) – ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
 • ಸಮಾನಾಯಸ್ವಾಹ – ಪಾಚಕ (ಪಚನ) – ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು, ಮತ್ತೆ
 • ಬ್ರಹ್ಮಣೇ ಸ್ವಾಹ  – ಸರ್ವಶಕ್ತ  – ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು

ಹೀಂಗೆ ಆಹಾರ ಸಮರ್ಪಿಸಿದ ಮತ್ತೆ ‘ಪ್ರಸಾದ’ ಹೇಳಿ ಭುಂಜಿಸುವದು.
(ಶುಭ ಜೆಂಬಾರಂಗಳಲ್ಲಿ ಹಸ್ತೋದಕ ಕೊಟ್ಟಿಕ್ಕಿ ಹೇಳುತ್ತದು ಕ್ರಮ – ‘ಶ್ರೀ ಕೃಷ್ಣಾರ್ಪಣ ಮಸ್ತು’– ‘ದೇವತಾ ಪ್ರಸಾದಕ್ಕನುಜ್ಞಾ’ – ‘ಅಮೃತೋಪಹಾರೋ ಅಸ್ತು’.)
ಆ ಸಂದರ್ಭಲ್ಲಿ ಭಗವದ್ಗೀತೆಯ ಶ್ಲೋಕವ ನಾವು ಹೇಳುತ್ತು.

ಅಹಂ ವೈಶ್ವಾನರೋ ಭೂತ್ವ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ |
ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ||

ಊಟ ಆದಮೇಲೆ ಆಪೋಶನ. ಬಲ ಕೈ ಅಂಗೈಗೆ ಒಂದು ಸಕ್ಕಣ ನೀರು ಹಾಕಿಯೊಂಡು “ಅಮೃತಾಪಿಧಾನಮಸಿ ಸ್ವಾಹಾ”  ಹೇಳ್ವ ಮಂತ್ರ ಹೇಳಿಕ್ಕಿ ಕುಡಿವದು.

ಭೋಜನವ ಪ್ರಸಾದ ಹೇಳಿ ಸ್ವೀಕರುಸಿ ಉಂಡರೆ ಮೈ-ಮನ ಶುದ್ದಿಲಿ ಇರ್ತು. ದೇವತಾನುಗ್ರಹ ಒಲಿತ್ತು. ಜೀವನ ಬೆಳಗುತ್ತು.

| ಹರೇ ರಾಮ |

(ಸಂಗ್ರಹ)

ನಾವು ಆಹಾರ ಭುಂಜಿಸುವ ಮದಲು ಎಂತಕೆ ಪರಮಾತ್ಮಂಗೆ ಸಮರ್ಪಿಸುತ್ತು?, 5.0 out of 10 based on 4 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಚೆನ್ನೈಭಾವ,
  ಒ೦ದರಿ ಬದುಕ್ಕುಲೆ ಅವಕಾಶಕೊಟ್ಟ ದೇವರಿ೦ಗೆ ಪ್ರತಿ ಭೋಜನದ ಮದಲು ಅರ್ಪಣೆ ಮಾಡಿ ಉ೦ಬದು ಅರ್ಥಪೂರ್ಣ.ಪ್ರತಿ ಆಚಾರದ ಹಿ೦ದೆ ಇಪ್ಪ ಅರ್ಥವ ಚೊಕ್ಕಕೆ ವಿವರಿಸುತ್ತಾ ಇದ್ದಿ.ಒಳ್ಳೆ ಕೆಲಸ ಭಾವ.

  [Reply]

  VA:F [1.9.22_1171]
  Rating: 0 (from 0 votes)
 2. ಚುಬ್ಬಣ್ಣ
  ಚುಬ್ಬಣ್ಣ

  ಎನಗೆ ಇದು ಪೂರ್ತಿ ವಿಚಾರ ಗೊತಿತ್ತಿಲ್ಲೆ.. ಸ್ಪಷ್ಟಮಾಡಿ ಕೊಟ್ಟದಕ್ಕೆ ಧನ್ಯವಾದ.. :)

  [Reply]

  VN:F [1.9.22_1171]
  Rating: 0 (from 0 votes)
 3. ಮುರಾರಿ ಶರ್ಮ
  murarisharma

  ಚೆನ್ನೈಭಾವ,

  Chendakke baraddi olleya vishayava..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದ ಭಾವಯ್ಯ. ಬೈಲಿಂಗೆ ಸ್ವಾಗತ. ಅಂಬಗಂಬಗ ಬಂದುಗೊಂಡಿರಿ. ಬಂದಪ್ಪಿಗ ಹೀಂಗೆ ಹಾಜರು ಹಾಕಲೆ ಮರದಿಕ್ಕೆಡಿ. ನಿಂಗಳ ಶುದ್ದಿ ಎದುರು ನೋಡುತ್ತ್ಯೋ.

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಂಚ ಋಣಂಗಳ ಮತ್ತೆ ಪಂಚ ಪ್ರಾಣದ ಬಗ್ಗೆ ವಿವರ ಕೊಟ್ಟದು ಲಾಯಿಕ ಆಯಿದು. ಊಟದ ಕ್ರಮಲ್ಲಿ ಕೂಡಾ, ನಮ್ಮ ಸಂಸ್ಕೃತಿಲಿ ಎಷ್ಟು ಅಂಶಂಗಳ ತಿಳಿಶಿ ಕೊಟ್ಟಿದವು.
  “ಚಿತ್ರಾಯ ಸ್ವಾಹಾ……. ಚಿತ್ರಾದಿಗ್ಭ್ಯೋ ನಮಃ ತೃಪ್ತಿರಸ್ತು ” ಹೇಳಿ ಬಾಳೆಯ ಬಲ ಬದಿಲಿ ಅಶನವ ಮಡುಗುತ್ತ ಕ್ರಮ ಇದ್ದಲ್ಲದಾ? ಇದನ್ನೇ ಪಂಚ ಋಣ ಸಂಕೇತ ಹೇಳಿದ್ದದಾ?
  ವಸಿಷ್ಠ ಗೋತ್ರದವು ಇದರ ಮಡುಗುತ್ತ ಕ್ರಮ ಇಲ್ಲೆ. ಕಾರಣ ತಿಳುಶಿರೆ ಆವ್ತಿತ್ತು

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಾತ್ಕಾಲಿಕ ಲಭ್ಯ ಮಾಹಿತಿ ಪ್ರಕಾರ ಹಾಂಗೂ ಇಲ್ಲೇ ನಮ್ಮ ಬೈಲಿಲಿ ಗಣೇಶ ಮಾವನ ಶುದ್ದಿ ಪ್ರಕಾರ

  http://oppanna.com/mantra/bhojana-sveekara

  ವಸಿಷ್ಠದವು ಚಿತ್ರ ಮಡುಗಲೆ ಇಲ್ಲೆ. ಅವು ರಾಜರ್ಷಿ. ಅವು ಅಗ್ನಿಹೋತ್ರಿಗೊ. ಅವು ನಿತ್ಯ ಅಗ್ನಿಯ ಆರಾಧನೆ ಮಾಡುವಾಗ ಹವಿಸ್ಸು ಸಮರ್ಪಣೆ ಮಾಡುವದರಿಂದ ಇದು ಅಗತ್ಯ ಇಲ್ಲೇ ಹೇಳಿ ಶಾಸ್ತ್ರ ವಚನ.

  ಜಿಜ್ನಾಸಗೆ ಅನುಮಾಡಿಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದ.
  ಈ ಬಗ್ಗೆ ಇನ್ನೂ ಮಾಹಿತಿ ಹುಡುಕುತ್ತಾ ಇದ್ದೆ. ನಿಂಗೊಗಾರಿಂಗಾರು ಸಿಕ್ಕಿದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳೆಕು ಹೇಳಿ ಕೇಳಿಕೆ.

  [Reply]

  VA:F [1.9.22_1171]
  Rating: 0 (from 0 votes)
 5. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ತುಂಬಾ ಚೆಂದಕ್ಕೆ ವಿವರಿಸಿದ್ದೀರಿ ಭಾವ.ಧನ್ಯವದಂಗೋ……

  [Reply]

  VA:F [1.9.22_1171]
  Rating: 0 (from 0 votes)
 6. drmahabala
  anile dagtru

  ಎಲ್ಲರಿ೦ಗು ಅರ್ಥ ಅಪ್ಪಾ೦ಗೆ ವಿವರಿಸಿದ್ದಿ.ಧನ್ಯವಾದ೦ಗ ಚೆನ್ನೈ ಭಾವ೦ಗೆ.
  ಆದರೆ ಈಗಾಣ ಕಾಲಲ್ಲಿ ಇದು ಕಮ್ಮಿ ಆವುತ್ತ ಇದ್ದು ಹೇಳುತ್ತದು ಬೇಜಾರಿನ ವಿಷಯ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಉತ್ತಮ ಮಾಹಿತಿ ಕೊಟ್ಟ ಲೇಖನ. ಚೆನ್ನೈ ಭಾವಂಗೆ ಮತ್ತೊಂದರಿ ಧನ್ಯವಾದ. ಭೋಜನವ ಪ್ರಸಾದ ಹೇಳಿ ಉಂಡರೆ ಮೈ ಮನ ಶುದ್ದಿಲಿ ಇರುತ್ತು. ನಿಜ ಭಾವಯ್ಯ. ಬಫೆಲಿ ಉಂಬಗ ಪ್ರಸಾದ ಭೋಜನ ಹೇಳಿ ಮನಸ್ಸಿಲ್ಲಿಯೇ ಗ್ರೇಶೆಕಷ್ಟೆ. ಅಲ್ಲದೊ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಡೈಮಂಡು ಭಾವಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ವಾಣಿ ಚಿಕ್ಕಮ್ಮಅಜ್ಜಕಾನ ಭಾವವಿದ್ವಾನಣ್ಣಗಣೇಶ ಮಾವ°ಸುಭಗಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಕಾವಿನಮೂಲೆ ಮಾಣಿಮಂಗ್ಳೂರ ಮಾಣಿಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°vreddhiಪುತ್ತೂರಿನ ಪುಟ್ಟಕ್ಕಎರುಂಬು ಅಪ್ಪಚ್ಚಿಸಂಪಾದಕ°ಮಾಲಕ್ಕ°ಪೆಂಗಣ್ಣ°ಡಾಮಹೇಶಣ್ಣಪುಟ್ಟಬಾವ°ಚುಬ್ಬಣ್ಣದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ