ಭಾಗ 08 : ಉಪನಿಷ್ಕ್ರಮಣ (ನಿರ್ಗಮನ) – ಅನ್ನಪ್ರಾಶನ – ಕರ್ಣ ವೇಧನ – ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ

October 20, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿರ್ಗಮನ (ಉಪನಿಷ್ಕ್ರಮಣ):

ಉಪನಿಷ್ಕ್ರಮಣ ನಿರ್ಗಮನ ಹೇಳಿರೆ ಸಮೀಪ ಕರಕ್ಕೊಂಡು ಹೋಪದು ಹೇಳಿ. (ಉಪ – ಸಮೀಪ, ನಿಷ್ಕ್ರಮಣ – ನಿರ್ಗಮನ, ಹೇಳಿರೆ ಹೋಪದು).  ಅರ್ಥಾತ್, ಮಗು ಜನಿಸಿ, ಅಷ್ಟನ್ನಾರ ಮಗುವಿನ ಮನೆಂದ ಹೆರ ಕರಕ್ಕೊಂಡು ಹೋಪಲೆ ಇಲ್ಲೆ ಹೇಳಿ ಶಾಸ್ತ್ರ. ಇದೊಂದು ಸಂಪ್ರದಾಯವೂ.

ಶಿಶುವಿನ ಶರೀರದ ಬೆಳವಣಿಗೆಗೆ ತಾಯಿಯ ಗರ್ಭಾಶಯಲ್ಲಿ ದೊರೆಯುವ ಉಷ್ಣತೆ, ಬೆಳಕು, ಆಹಾರ, ಗಾಳಿ, ಸೂಕ್ತವೂ ಹಿತಕರವೂ ಆಗಿರ್ತು. ಜನಿಸಿದ ಕೂಡಲೇ ಬಾಹ್ಯ ಪ್ರಪಂಚದ ಗಾಳಿ, ಬೆಳಕು, ಉಷ್ಣ ಈ ವಾತಾವರಣ ಒಂದರಿಯಂಗೇ ಬದಲಪ್ಪಗ ತಡಕ್ಕೊಂಬದು ಕಠಿಣ. ಅದಕ್ಕಾಗಿಯೇ ಜನಿಸಿದ ಮಗುವಿನ ಮೃದು ವಸ್ತ್ರಲ್ಲಿ ಸುತ್ತಿ ತೀಕ್ಷ್ಣ ಬೆಳಕು ಬಾರದ್ದಲ್ಲಿ ಅತಿ ಶೀತ ಮತ್ತು ಅತಿ ಉಷ್ಣ ಇಲ್ಲದ್ದ ಕೋಣೆಲಿಯೇ ಮನುಗುಸುವ ಕ್ರಮ. ಅಲ್ಲಿ ಆ ವಾತಾವರಣಕ್ಕೆ ತುಸು ಒಗ್ಗಿ ಹೋದ ಬಳಿಕ ಬಾಹ್ಯ ಪ್ರಪಂಚಕ್ಕೆ ಮಗುವಿನ ಆಯುಷ್ಯ ಆರೋಗ್ಯ ಸಂಪತ್ತು ವೃದ್ಧಿಸಲೆ ಕರಕ್ಕೊಂಡು ಹೋಪ ಈ ಒಂದು ಸಂಸ್ಕಾರ ‘ಉಪನಿಷ್ಕ್ರಮಣ’ ಹೇಳಿ . ಮಗುವಿನ ಮೊತ್ತಮೊದಲು ಹೊಸ್ತಿಲು ದಾಂಟಿಸಿ ಹೆರ ಕರಕ್ಕೊಂಡು ಬಂದು ಬಾಹ್ಯ ಪ್ರಪಂಚವ ಪರಿಚಯಿಸುವದು- ‘ನಿಷ್ಕ್ರಮಣ’.

ಮಗುವಿನ ಜನ್ಮಂದ ನಾಲ್ಕನೇ ತಿಂಗಳ ಜನ್ಮದಿನ, ಜನ್ಮ ನಕ್ಷತ್ರದಂದು ಈ ವಿಧಿಯ ಮಾಡೆಕ್ಕಪ್ಪದು. ನಾಲ್ಕನೇ ತಿಂಗಳ ಶುಭ ಸಮಯಲ್ಲಿ ಮಗುವಿಂಗೆ ಅಗ್ನಿ, ಹಸು, ಸೂರ್ಯ ಚಂದ್ರ ಇತ್ಯಾದಿ ದರ್ಶನ ಮಾಡುಸುವದು. (ಚತುರ್ಥೇ ಮಾಸೇ ಕರ್ತವ್ಯಂ ಶಿಶೋಃ ನಿಷ್ಕ್ರಮಣಂ ಗೃಹಾತ್).

ಮಮ ಕುಮಾರಕಸ್ಯ ಬೀಜಗರ್ಭ ಸಮುದ್ಭವೈನೋ ನಿಬರ್ಹಣ ಪುರಃಸ್ಸರಂ ಪ್ರಜಾಸಂಸ್ಕಾರಾತಿಶಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಉಪನಿಷ್ಕ್ರಮಣ ಕರ್ಮ ಕರಿಷ್ಯೇ ‘ಎನ್ನ ಮಗುವಿನ ಆಯುಷ್ಯ ಮತ್ತು ಶ್ರೀ (ಆಯುಶ್ರೀ) ಹೇಳಿರೆ ಲಕ್ಷ್ಮೀ ಇವುಗಳ ವೃದ್ಧಿಗಾಗಿ ಮತ್ತು ಬೀಜ ಗರ್ಭಂದ ಆಗಿಪ್ಪ ದೋಷಂಗಳ ನಿವಾರಣಗೆ ಶ್ರೀ ಪರಮೇಶ್ವರನ ಪ್ರೀತ್ಯರ್ಥವಾಗಿ ಆನು ನಿರ್ಗಮನ ವಿಧಿಯ  ಮಾಡುತ್ತೆ” ಹೇಳಿ ಸಂಕಲ್ಪ .  ‘ಚಂದ್ರಾರ್ಕಯೋರ್ದಿಗೀಶಾನಾಂ ದಿಶಾಂ ಚ ಗಗನಸ್ಯ ಚ , ನಿಕ್ಷೇಪಾರ್ಥಮಿಮಂದದ್ಮಿತೇಮುಂ ರಕ್ಷಂತು ಸರ್ವದಾ | ಅಪ್ರಮತ್ತಾಂ ಪ್ರಮತ್ತಂವಾ ದಿವಾರಾತ್ರಮಥಾಪಿವಾ | ರಕ್ಷಂತು ಸರ್ವೇ ದೇವಾಃಶಕ್ರ  ಪುರೋಗಮಾಃ || ‘ಚಂದ್ರ, ಸೂರ್ಯ, ನಕ್ಷತ್ರಾದಿ ದೇವತೆಗಳೇ, ಅಷ್ಟ ದಿಕ್ಪಾಲಕರೆ, ಅಷ್ಟ ದಿಕ್ಕುಗಳೇ, ಆಕಾಶವೇ, ನಿಂಗಳೆಲ್ಲೋರ ಕೈಲಿ ಈ ಮಗುವಿನ ಕೊಡುತ್ತಾ ಇದ್ದೆ. ಹಗಲು ರಾತ್ರಿ ಎಚ್ಚರ ನಿದ್ರೆ ಎಲ್ಲಾ ಅವಸ್ಥೆಲಿಯೂ ನಿಂಗೊ ಈ ಮಗುವಿನ ರಕ್ಷಿಸೆಕು, ಇಂದ್ರಾದಿ ದೇವತಗೋ ಈ ಮಗುವಿನ ಕಾಪಾಡೆಕು’ ಹೇಳಿ ಪ್ರಾರ್ಥನೆ.  ಸಾಂಕೇತಿಕವಾಗಿ ಶಂಖ ಜಾಗಟೆ ಸಹಿತ ಒಂದರಿ ಎದ್ದು ಹೋಗಿ ದೇವರ ಕೋಣೇಲಿ ಮಗುವಿನ ದೇವರೆದುರು ಮನುಗಿಸಿ ಅಬ್ಬೆ ಅಪ್ಪ ನಮಸ್ಕಾರ ಮಾಡಿ ಬಪ್ಪದು ನಮ್ಮಲ್ಲಿ ಪ್ರಚಲಿತ. ಮತ್ತೆ ಕರಕ್ಕೊಂಡು ಬಪ್ಪದು. ಇದು ನಿರ್ಗಮನ ಶಾಸ್ತ್ರ. ಬೆಳವ ಶಿಶುವಿಂಗೆ ಬಾಹ್ಯ ಭವ್ಯ ಪ್ರಪಂಚವ ತೋರುಸುವ ಈ ವಿಧಿ, ರವಿ ಕಿರಣ ಸ್ಪರ್ಶಂದ ಮಗುವಿನ ದೇಹ ಚೈತನ್ಯಂಗಳ ವಿಕಸನಕ್ಕೆ ಬೇಕಾದ ವೈಜ್ಞಾನಿಕ ಅರ್ಥವೂ ಇದ್ದು.

ಅನ್ನಪ್ರಾಶನ :

ತಾಯಿಯ ಗರ್ಭಲಿಪ್ಪಗ ಮಲಮೂತ್ರಾದಿ ಭಕ್ಷಣ೦ದ ಉಂಟಾಗಿಪ್ಪ ದೋಷ ನಿವೃತ್ತಿಯಪ್ಪಲೆ ‘ಅನ್ನಪ್ರಾಶನ’ ಹೇಳ್ವ ಸಂಸ್ಕಾರ. ಮಾಣಿಯಂಗಗೊಕ್ಕೆ ಆರನೇ ಅಥವಾ ಎಂಟನೇ (ಸಮಸಂಖ್ಯೆ ಪುರುಷವಾಚಕ, ಬೆಸ ಸಂಖ್ಯೆ ಸ್ತ್ರೀ ವಾಚಕ ಹೇಳಿ ಮದಲೇ ನಾವು ಓದಿದ್ದು) ತಿಂಗಳಿಲ್ಲಿಯೂ ಕೂಸುಗೊಕ್ಕೆ ಐದು ವಾ ಏಳನೇ ತಿಂಗಳ್ಳಿಯೂ ಮಾಡೆಕ್ಕಪ್ಪದು.

ಮಗು ಬೆಳೆತ್ತ ಇಪ್ಪಾಂಗೆ ಅಬ್ಬೆಯ ಹಾಲು ಅಥವಾ ದ್ರವ ರೂಪದ ಆಹಾರ ಮಾತ್ರ ಸಾಕಾವ್ತಿಲ್ಲೆ. ಮಗುವಿನ ದೇಹದ ಬೆಳವಣಿಗೆಗೆ ಘನೀಭೂತ ಆಹಾರವೂ, ಬೌದ್ಧಿಕ ಬೆಳವಣಿಗೆಗೆ ಸಾತ್ವಿಕ ಆಹಾರವೂ ಅಗತ್ಯ. ಭೌತಿಕವಾದ ಸರ್ವತೋಮುಖ ಅಭಿವೃದ್ಧಿಗೆ ಸತ್ವಯುಕ್ತ ಆಹಾರ ಅಗತ್ಯ. ಅನ್ನಂ ಬ್ರಹ್ಮೇತಿ ವ್ಯಜಾನಾತ್, ಅನ್ನಾಧ್ಯೇವ ಹಿ ಖಲು ಇಮಾನಿ ಭೂತಾನಿ ಜಾಯಂತೆ| ಅನ್ನೇನ ಜಾತಾನಿ ಜೀವಂತಿ| (ತೈತಿ.ಉಪ.- ಬ್ರುಗುವಲ್ಲಿ). ಇಂತಹ ಸತ್ವಯುಕ ಮತ್ತು ಸಾತ್ವಿಕ ಆಹಾರದ ಪ್ರಥಮ ಸೇವನೆಯೇ ಅನ್ನಪ್ರಾಶನ ವೈದಿಕ ಸಂಸ್ಕಾರ.

“ಎನ್ನ ಮಗುವಿಂಗೆ ತಾಯಿಯ ಗರ್ಭದಲ್ಲಿನ ಮಲಪ್ರಾಶನಂದ ಉಂಟಾಗಿಪ್ಪ ದೋಷಗಳ ನಾಶ, ಶುದ್ಧ ಅನ್ನದಿಗಳ ಪ್ರಾಪ್ತಿ, ಬ್ರಹ್ಮವರ್ಚಸ್ಸು, ತೇಜೋಭಿವೃದ್ಧಿ, ಇಂದ್ರಿಯಂಗಳ ಮತ್ತು ಆಯುಷ್ಯ ವೃದ್ಧಿ , ಬೀಜಗರ್ಭಂದ ಆಗಿಪ್ಪ ಪಾಪ ನಿವಾರಣೆ ಮೂಲಕ ಶ್ರೀ ಪರಮೇಶ್ವರನ ಪ್ರೀತ್ಯರ್ಥವಾಗಿ ಅನ್ನಪ್ರಾಶನ ಸಂಸ್ಕಾರ ಮಾಡುತ್ತೆ” ಹೇಳಿ ಸಂಕಲ್ಪ.  ಗಣಪತಿ ಪೂಜೆ , ಪುಣ್ಯಾಹ ಇದರ ಅಂಗವೇ. (ಕುಮಾರಂ ಮಾತುರುತ್ಸಂಗ ಉಪವೇಶ್ಯ ಸುವರ್ಣಾದಿಪಾತ್ರೇ ಸಮಸ್ತ ಭಕ್ಷ್ಯ ಭೋಜ್ಯಾದಿ ಸಮೇತಂ ಶಾಲ್ಯನ್ನಂ ನಿಧಾಯ ದಧಿ ಮಧು ಘೃತ ಜಲೈಃ ಸಮುದಾಯುತ್ಯ ಹಿರಣ್ಯೇನ ಕುಮಾರಂ ಪ್ರಾಶಯತಿ) ತಾಯಿಯ ಮಡಿಲಿಲ್ಲಿ ಶುಭ್ರ ವಸ್ತ್ರಲ್ಲಿ ಮಗುವಿನ ಪೂರ್ವ ದಿಕ್ಕಿಂಗೆ ಕೂರುಸಿ ಮಗುವಿಂಗೆ ಮೊದಲನೇ ಅನ್ನ ಪ್ರಾಶನ ಮಾಡುವದು. ಹಾಲು, ಜೇನು, ಮೊಸರು, ತುಪ್ಪ ಸೇರ್ಸಿಪ್ಪ ಅನ್ನವ ಚಿನ್ನ / ತಾಮ್ರದ ಪಾತ್ರೇಲಿ ಅನ್ನವನ್ನಿರಿಸಿ ‘ಹೇ, ಅನ್ನಾಧಿಪತಿ ಈಶ್ವರನೇ, ನಮಗೆ ಆರೋಗ್ಯಕರ ಹಾಗೂ ಪುಷ್ಟಿದಾಯಾಕ ಆಹಾರವನ್ನು ಕೊಡು’ ಹೇಳಿ ಪ್ರಾರ್ಥಿಸಿ  ಚಿನ್ನಲ್ಲಿ ಮಗುವಿಂಗೆ ಅನ್ನದ ಮೊದಲ ತುತ್ತು ಬಾಯಿಗೆ ಉಣುಸುವುದು. ಬಳಿಕ ಊಟ ಮಾಡಿಸಿ ನೆಲಕ್ಕಲಿ ಕೂರುಸುವದು. ಮಗುವಿನ ಕೈ ಬಾಯಿ ಮೈ ಉದ್ದಿ, ಉಪಜೀವಿಕೆ ಸಕ್ರಿಯಗೊಳುಸಲೆ  ಮಗುವಿನ ಎದುರು ಪುಸ್ತಕ ವಸ್ತ್ರ ಇತ್ಯಾದಿ ಮಡುಗೆಕು. ಮಗು ಪ್ರಥಮವಾಗಿ ಯಾವುದರ ಮುಟ್ಟುತ್ತೋ ಅದು ಮಗುವಿನ ಮುಂದಾಣ ಜೀವನದ ಗುರಿ ಹೇಳಿ ಸೂಚಕ.

ಕರ್ಣ ವೇಧನ :

ಕರ್ಣ ವೇಧನ ಹೇಳಿರೆ ಕೆಮಿ ಚುಚ್ಚುದು. ಮಾಣಿ, ಕೂಸು ಇಬ್ರಿಂಗೂ ಈ ಸಂಸ್ಕಾರ ಇದ್ದು. ಮಗುವಿನ ಆಯುಷ್ಯ ಆರೋಗ್ಯ ತೇಜ ವೃದ್ಧಿಗೆ  ಕರ್ಣ ವೇಧನ ಒಂದು ಸಂಸ್ಕಾರ.

ಮಾನವ ಶರೀರಲ್ಲಿ ನರಮಂಡಲ ವ್ಯಾಪಿಸಿದ್ದು, ಅವುಗಳ ಮೂಲಕ ಮೆದುಳು ಸೂಕ್ತ ನಿಯಂತ್ರಣ ಹೊಂದಿ ಶಾರೀರಿಕ ಚಟುವಟಿಕೆ ನಡೆಸುತ್ತು. ನಮ್ಮ ಶರೀರಲ್ಲಿ ೧೮೦ ಸೂಕ್ಷ್ಮ ಮರ್ಮಸ್ಥಾನ  ಇದ್ದಡ. ಇದರಲ್ಲಿ ಕಿವಿ ಒಂದು. ಕಿವಿಯ ಮೂಲಕ ಹಾದು ಹೋಪ ನರಮಂಡಲ ಛೇದಿಸುವದರಿಂದ ಸಣ್ಣ ಮಕ್ಕಳಲ್ಲಿ ಬಪ್ಪ ಕೆಲವೊಂದು ಖಾಯಿಲೆಗಳ ನಿಯಂತ್ರಿಸುಲೆ ಆವ್ತು ಹೇಳಿ ಮದಲಿಂದಲೇ ನಂಬಿಕೆ. ವೈದಿಕ ಕ್ರಮ ಪೂರೈಸಿ ನುರಿತ ಅಕ್ಕಸಾಲಿ ವಾ ವೈದ್ಯರತ್ರೆ ಕೆಮಿ ಕುತ್ತುಸುವದು ರೂಢಿ. ಮನುಷ್ಯನ ಕಿಬ್ಬೊಟ್ಟೆಯ ಸಣ್ಣ ಕರುಳು, ಅಂಡಾಶಯ ಪ್ರವೇಶಿಸದ ಹಾಂಗೆ ಒಂದು ತೆಳು ಪೊರೆ ಇದ್ದಡ. ಇದು ಹರುದರೆ ಹರ್ನಿಯಾ ವ್ಯಾಧಿಗೆ ತುತ್ತಾವ್ತವಡ. ಈ ತೆಳು ಪೊರೆಯ ಮೇಲೆ ನಿಯಂತ್ರಣಹೊಂದಿದ ನರತಂತು  ಕೆಮಿಯ ಮೂಲಕ ಹಾದು ಹೋಗಿ ಮೆದುಳಿನ ಸಂಪರ್ಕ ಪಡೆತ್ತಡ. ಈ ಸಂಪರ್ಕವ ಕೆಮಿಲಿ ಛೇದಿಸಿರೆ ತೊಡೆಲಿಪ್ಪ ತೆಳು ಪೊರೆ ಬಲಗೊಳ್ಳುಲೆ ಸಹಾಯಕ ಹೇಳಿ ಒಂದು ಅಭಿಪ್ರಾಯವೂ ಇದ್ದಡ. ಕೆಮಿ ಚುಚ್ಚುವುದರಿಂದ  ಕರ್ಣಾಭರಣ ಧರಿಸಿಗೊಂಬಲೂ ಸಹಾಯ ಆವ್ತು, ಸೌಂದರ್ಯವೂ ವೃದ್ಧಿ ಆವ್ತು. “… ಆಯುಶ್ಶ್ರೀಬಲತೇಜೋಭಿವೃದ್ಧಿದ್ವಾರಾ  ಶ್ರೀಪರಮೇಶ್ವರಪ್ರೀತ್ಯರ್ಥಂ ಕರ್ಣವೇಧನಕರ್ಮ ಕರಿಷ್ಯೇ” ಹೇಳಿ ಸಂಕಲ್ಪ.

ಮಗುವಿನ ಪೂರ್ವಾಭಿಮುಖ ಕುಳ್ಳಿರಿಸಿ ಚಿನ್ನ / ಬೆಳ್ಳಿ / ಉಕ್ಕಿನ ಸೂಜಿಂದ ಮಾಣಿಗೆ ಬಲ (ಬಲದ ಭಾಗ ಶಕ್ತಿವರ್ಧಕ ಮಾಣಿಯಂಗಗೊಕ್ಕೆ) ಕೆಮಿಲಿ ಮದಾಲು ಕೂಸಿಂಗೆ ಎಡದ ಕೆಮಿ ಮದಾಲು (ಕೂಸುಗೊಕ್ಕೆ ಎಡ ಶಕ್ತಿ ಆಕರ್ಷಕ) ಮತ್ತೆ ಇನ್ನೊಂದು  ಕೆಮಿ ಚುಚ್ಚುವದು. ಅವಶ್ಯಕತೆಗನುಗುಣ ದೊಡ್ಡ ರಂಧ್ರ ಅಪ್ಪಾಂಗೆ ತೂತು ಮಾಡಿರಾತು.

ಕರ್ಣ ವೇಧನ ಸಂಸ್ಕಾರಕ್ಕೆ ಏಕಾದಶಿ, ಅಷ್ಟಮಿ ತಿಥಿಗಳ ಬಿಟ್ಟು ಉಳಿದ ತಿಥಿಗಳಲ್ಲಿ ಮತ್ತು ಪುಷ್ಯ, ಮೃಗಶಿರಾ, ಶ್ರವಣ, ಚಿತ್ರಾ, ರೇವತಿ ನಕ್ಷತ್ರ ಬಪ್ಪ ದಿನ ನೋಡಿ ಮಾಡುವುದು ಪ್ರಶಸ್ತ ಹೇಳಿ ಜ್ಯೋತಿಶಾಸ್ತ್ರ.

ಶಿಶುವಿಂಗೆ ಒಂದು ವರ್ಷ ಅಪ್ಪಗ ಪ್ರಥಮ ಜನ್ಮ ನಕ್ಷತ್ರಂದ ಪ್ರತಿವರ್ಷವೂ ವರ್ಧಂತಿ – ಜನ್ಮೋತ್ಸವ ಆಚರಣೆ ಸರ್ವತ್ರ ರೂಢಿ. ಈ ಸಂದರ್ಭಲ್ಲಿ ಆಯುಷ್ಯಾಭಿವೃದ್ಧಿಗೆ ಆಯುಷ್ಯಸೂಕ್ತ ಪಠಣ, ಆಯುಷ್ಯ ಹೋಮ, ಆಯುಷ್ಕಾಮೇಷ್ಠಿ ಮುಂತಾದ ಧಾರ್ಮಿಕ ಅನುಷ್ಠಾನ ಮಾಡುವದು ಸಂಪ್ರದಾಯ. ಮಗುವಿಲ್ಲಿ ತಿಂಗಳಿಂದ ತಿಂಗಳಿಂಗೆ , ವರ್ಷಂದ ವರ್ಷಕ್ಕೆ ಅಪ್ಪ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಬದಲಾವಣೆಯ ಸಮಾಜಕ್ಕೆ ತೋರಿಸಿ ತನ್ಮೂಲಕ ಆ ಮಗುವಿನ ಅಸ್ತಿತ್ವವ ಸಾದರಪಡುಸುವದು ಈ ಸಂಸ್ಕಾರದ ಉದ್ದೇಶ.

ಅಕ್ಷರಾಭ್ಯಾಸ :

ಇದು ಪ್ರತ್ಯೇಕ ಒಂದು ಸಂಸ್ಕಾರ ಹೇಳಿ ಅಲ್ಲದ್ರೂ ಇದೊಂದು ನಮ್ಮ ಸನಾತನ ಭಾರತೀಯ ಸಂಪ್ರದಾಯ. ಜನಿಸಿದ ಮಗು ಸರಿಯಾಗಿ ಮಾತಾಡ್ಳೆ ಸಮರ್ಥ ಆದಮೇಲೆ ತನ್ನ ಅನಿಸಿಕೆ ಬರಹದ ಮೂಲಕ ತಿಳಿಯಪಡುಸಲೆ ಯಾ ಬೇರೆಯವರ ಅಭಿಪ್ರಾಯ ಬರಹದ ಮೂಲಕ ತಿಳಿಯೆಕ್ಕಾರೆ ಅಕ್ಷರ ಜ್ಞಾನ ಅಗತ್ಯ. ತನ್ನ ಅಪ್ಪ ಅಬ್ಬೆ ಮಾತಾಡುವ ಚಿರ ಪರಿಚಯ ಮಾತೃಭಾಷೆಯ ಮೂಲಕ ಅಕ್ಷರಾಭ್ಯಾಸ ಪ್ರಾರಂಭವಾವ್ತು.

‘ಎನ್ನ ಮಗುವಿಂಗೆ ಒಳ್ಳೆಯ ಬುದ್ಧಿ/ಜ್ಞಾನದೊಂದಿಂಗೆ ಸಕಲ ವಿದ್ಯಾಪಾರಂಗತತ್ವ ಸಿದ್ಧಿಸುವುದಕ್ಕೆ ಶ್ರೀ ಪರಮೇಶ್ವರ ಪ್ರೀತ್ಯರ್ಥವಾಗಿ ಅಕ್ಷರ ಸ್ವೀಕಾರ ಕರ್ಮವ ಮಾಡುತ್ತೆ’ ಹೇಳಿ ಸಂಕಲ್ಪಿಸಿಗೊಂಡು ಕುಲದೇವರ, ಇಷ್ಟ ದೇವರ ಪ್ರಾರ್ಥಿಸಿಗೊಂಡು, ಗುರು, ಗಣಪತಿ, ವಿಷ್ಣು, ಲಕ್ಷ್ಮೀ, ಸರಸ್ವತಿಯ ಪೂಜಿಸಿ, ಚಿನ್ನ/ ಬೆಳ್ಳಿ/ ತಾಮ್ರ ತಟ್ಟೆಲಿ ಅಕ್ಕಿ ಹರಡಿ ಅದರ ಮೇಗೆ ಚಿನ್ನ/ ಬೆಳ್ಳಿ/ ತಾಮ್ರ/ ಅರಶಿನ ಕಡ್ಡಿಲಿ ಓಂಕಾರದ ಆದಿಯಾಗಿ ವರ್ಣಮಾಲೆಯ ಅಕ್ಷರ ಮಗುವಿನ ಕೈ ಹಿಡುದು ಬರಶಿ, ತಿದ್ದಿ ಅಕ್ಷರ ಅಭ್ಯಾಸ ಮಾಡುಸುವದು.   ಓಂಕಾರದ ಜೊತೆಲಿ ಸ್ವಸ್ತಿಕ ಚಿಹ್ನೆ ಬರಶುವ ಕ್ರಮವೂ ಕೆಲವು ದಿಕ್ಕೆ ರೂಢಿ. ಸ್ವಸ್ತಿ ಹೇಳಿರೆ ಶುಭ , ಒಳ್ಳೆದು , ಕ್ಷೇಮ ಎಂಬ ಸೂಚ್ಯ. ಮಾಣಿಗೆ ಈ ಸಂಸ್ಕಾರ ಆಗದ್ದೆ ಮುಂದೆ ಉಪನಯಕ್ಕೆ ಅರ್ಹತೆ ಬತ್ತಿಲ್ಲೆ. ಉತ್ತರಾಯಣಲ್ಲಿ ಶುಕ್ಲ ಪಕ್ಷದ ಶುಭದಿನವೊಂದರಲ್ಲಿ ಅಕ್ಷರಾಭ್ಯಾಸ ಸಂಸ್ಕಾರ ನಡಸುವದು ಹೇಳಿ ಜ್ಯೋತಿಶಾಸ್ತ್ರ.

ಚೌಲ ಕರ್ಮ (ಚೂಡಾಕರ್ಮ / ಜುಟ್ಟು ಮಡುಗುವದು) :

ಇದು ಮಾಣಿಯಂಗೊಕ್ಕೆ ಮಾತ್ರ. ಆಯುಷ್ಯ ಬಲ ತೇಜೋಭಿವೃದ್ಧಿಗೆ ಚೌಲ ಸಂಸ್ಕಾರ. ಶಿಖೆ (ಜುಟ್ಟು) ಯಿಂದಾಗಿ ವಿಶ್ವದಲ್ಲಿನ ಸತ್ವ ಲಹರಿಗೊ ಬ್ರಹ್ಮರಂಧ್ರದ ಮೂಲಕ ಶರೀರದೊಳ ಬಪ್ಪಲೆ ಸಹಾಯ ಆವ್ತು. ಶಿಖೆಯು ಟಿ.ವಿ.ಎಂಟೆನಾದ ಹಾಂಗೆ ಕಾರ್ಯ ಮಾಡುತ್ತು ಹೇಳಿ ವೈಜ್ಞಾನಿಕ ಆಧಾರವೂ. ಒಂದು ಅಥವಾ ಮೂರು ವಾ ಐದು ವರ್ಷ ಪೂರ್ತಿಯಾದ ಮತ್ತೆ ಶುಭ ದಿನ ನೋಡಿಗೊಂಡು ಮಾಡ್ತದಿದು. ತಪ್ಪಿದರೆ ಮತ್ತೆ ಉಪ್ನಾನದೊಟ್ಟಿ೦ಗೆ ಪ್ರಾಯಶ್ಚಿತ್ತ ವಿಧಿ ಪೂರ್ವಕ. (ಜಾತಕರ್ಮಾದಿ ಸಂಸ್ಕಾರಾಃ ಸಕಾಲೇ ನ ಭವಂತಿಚೇತ್ ಚೌಲ ಕರ್ಮೇ ಪ್ರಕುರ್ವೀತ್ ಪ್ರಾಯಶ್ಚಿತ್ತಾದನಂತರಂ). “ಬೀಜ ಮತ್ತು ಗರ್ಭಗಳಿಂದ ಉತ್ಪನ್ನವಾದ ಈ ಬಾಲಕನ ದೋಷ ನಾಶವಾಗಿ ಆತನಲ್ಲಿ ಆಯುಷ್ಯ ಬಲ ರೇತಸ್ಸು ವೃದ್ಧಿಯಾಗಿ ಅವ ಸಾಧನೆಗೆ ಅರ್ಹನಾಗಲಿ, ಶ್ರೀ ಪರಮೇಶ್ವರನ ಪ್ರೀತ್ಯರ್ಥ ಈ ಚೌಲ ಸಂಸ್ಕಾರ ಮಾಡುತ್ತೆ” ಹೇಳಿ ಸಂಕಲ್ಪ. ವೈದಿಕ ವಿಧಿ ಪುರೋಹಿತರಿದ್ದು ನಡಶುತ್ತವು. ಕ್ಷೌರಿಕನ ಮನಗೆ ಬರಿಸಿ ಬಾಲಕನ ಮುಂದಲೆ ಮಾತ್ರ ಅರ್ಧ ಚಂದ್ರಾಕೃತಿಲಿ ಕ್ರಾಪ್ ಮಾಡುಸುವದು ಮದಲಿಂಗೆ ಇತ್ತು. ಈಗ ಸಾಂಕೇತಿಕಲ್ಲಿ ಕೂದಲ್ಲೇ ವೈದಿಕರು ಮುಂದುವರ್ಸುತ್ತವು. ಮಧ್ಯೇ ಮುಖ್ಯ ಏಕಾ ಶಿಖಾ, ಅನ್ಯಶ್ಚ ಪಾರ್ಶ್ವಭಾಗೇಶು, ಯಥಾಕುಲಾಚಾರಂ ಪ್ರವರ ಸಂಖ್ಯಾ ಶಿಖಾಃ ಚೂಡಾ ಸಮಯೇ ಕಾರ್ಯಾಃ |  ಒಂದು ಶಿಖೆ, ಮೂರು ಶಿಖೆ, ಪಂಚ ಶಿಖೆ – ಏಕ ಪ್ರವರ, ತ್ರಿಪ್ರವರ, ಪಂಚಪ್ರವರ,  ಹೀಂಗೆ ಅವರವರ ಗೋತ್ರ ಪ್ರವರಕ್ಕನುಗುಣವಾಗಿ ಶಿಖೆ ಮಡುಗುವದು ಕ್ರಮ. ಸುರುವಿಂಗೆ ಮಧ್ಯಲ್ಲಿ ಪ್ರಧಾನ ಶಿಖೆ ಮಡುಗಿ ಪಕ್ಕಲ್ಲಿ ಉಪಶಿಖೆ ಮಡುಗುತ್ತದು ಕ್ರಮ. ಉಪನಯನದ ನಂತರ ಪ್ರಧಾನ ಶಿಖೆ ಮಾತ್ರ ಮಾಡಿಕ್ಕೊಂಡು ಉಳುದ್ದರ ವಪನ ಮಾಡುವದು.  ಒಂದು ಶಿಖಾ ಪ್ರಮಾಣ 2008 ಕೂದಲು ಇರೆಕ್ಕು ಹೇಳಿ ಲೆಕ್ಕ.

ಅದಾ…ಬೋಸ ಭಾವ ನೋಡಿ – ಅವರ ಜುಟ್ಟು ಮುಟ್ಟಿ ಲೆಕ್ಕ ಹಾಕಲೆ ಸುರುಮಾಡಿದವಾಯ್ಕು!

ಬಾಲಕನ ಆರೋಗ್ಯ-ಆಯುಷ್ಯ ವರ್ಧನೆಗೆ ಚೂಡಾಕರ್ಮ/ ಕೇಶಖಂಡನ ಅತ್ಯಂತ ಪ್ರಮುಖಡ. ‘ಪೌಷ್ಟಿಕಂವ್ಯಷ್ಯಮಾಯುಷ್ಯಂ ಶುಚಿರೂಪಂ ವಿರಾಜನಂ| ಕೇಶಶಮಶ್ರು ನಖಾದಿನಾಂ ಕರ್ತನಂ ಸಪ್ರಸಾಧನಂ’ (ಚರಕ) || ‘ಪಾಪೋಪಶಮನಂ ಕೇಶರೋಮಾಪಾಮಾರ್ಜನಂ| ಹರ್ಷ ಲಾಘವ ಸೌಭಾಗ್ಯಕರಂ ಉತ್ಸಾಹವರ್ಧನಂ| ಮಸ್ತಕಾಭ್ಯಂತರೋಪರಿಷ್ಠಾತ್ ಸಿರಾಸಂಧಿ ಸನ್ನಿಪಾತೋ ರೋಮಾವರ್ತೋ ಅಧಿಪತೀ’ (ಶುಶ್ರುತ). ಪ್ರಾಣಕ್ಕೂ ಶಿಖೆಗೂ ಸಂಬಂಧ ಇದ್ದಡ. ಪ್ರಾಣ ರಕ್ಷಣಗೆ ತಲೇಲಿ ಶಿಖೆ ಮಡುಗುವದು. ತಲೆಯ ಒಳ ನೆತ್ತಿಯ ಹತ್ರ ರಕ್ತವಾಹಿನಿಯು ಸೇರುವ ಸಂಧಿಸ್ಥಾನ ಇದ್ದಡ. ತಲೆಬುರುಡೆ ಒಳವೂ ಹೆರವೂ ‘ಅಧಿಪತೀ’ ಹೇಳ್ವ ಕೂದಲಿನ ಸುಳಿ ಇದ್ದಡ. ಇದು ನರಂಗಳ ಸನ್ನಿಪಾತಂದ ಉಂಟಪ್ಪದ್ದಡ. ನರಗಳ ಸೇರುವಿಕೆ ಅದಕ್ಕೆ ಪೆಟ್ಟುಬಿದ್ದರೆ ತಕ್ಷಣ ಸಾವು ನಿಶ್ಚಿತಡ. (ಹೆಲ್ಮೆಟ ಧರುಸೆಕ್ಕು ಹೇಳ್ವ ತತ್ವ ಇದಕ್ಕೆಯೋ ಸುರುವಾದ್ದು?!) ಇದರ ರಕ್ಷಣೆಗಾಗಿ ಶಿಖಾಧಾರಣೆ ಅತ್ಯಂತ ಅಗತ್ಯ. ಶಿಖಾಧಾರಣೆ ಮಾಡುವದರಿಂದ ಪ್ರಾಣರಕ್ಷಣೆ , ಸೌಂದರ್ಯವರ್ಧನೆ, ಆಯುಷ್ಯವೃದ್ಧಿ, ಶುಚಿತ್ವ ನರಗಳ ಪ್ರಬಲೀಕರಣ, ಸ್ಮರಣ ಕವಾಟದ ರಕ್ಷಣೆ, ಉತ್ತಮ ಸಂತತಿ, ಪ್ರಜನನ ಸಾಮರ್ಥ್ಯ ಇತ್ಯಾದಿ ಇತರ ಪ್ರಯೋಜನಂಗೊ. ‘ನಿವರ್ತಯಾಮಿ ಆಯುಶೇ ಅನ್ನಾಧ್ಯಾಯ ಪ್ರಜನನಾಯ ರಾಯಸ್ಪೋಶಾಯ ಸುಪ್ರಜಸ್ತ್ವಾಯ ಸುವೀರ್ಯಾಯ (ಯಜುರ್ವೇದ).

ಎಲ್ಲಾ ಸಂಸ್ಕಾರಂಗೊಕ್ಕೂ ಅಪ್ಪನೇ ಕರ್ತಾ. ನಿವರ್ತಯಾಮಿ ಹೇಳಿ ಉತ್ತಮಪುರುಷ ಪ್ರಯೋಗ ಕಾಣುತ್ತು. ಆಯುಷೇ ವಪಾಮಿ – ನಿನ್ನ ಆಯುಸ್ಸಿನ ವೃದ್ಧಿಗಾಗಿ ಕೇಶಂಗಳ ಕತ್ತರುಸುತ್ತೆ ಹೇಳಿ ಸಂಕಲ್ಪ ಇಪ್ಪದರಿಂದ ಅಗ್ನಿ ಪ್ರಜಾಪತಿ ದೇವತಗೊಕ್ಕೆ ಆಹುತಿ ನೀಡಿ ದರ್ಭೆಯನ್ನೂ ಸೇರ್ಸಿಗೊಂಡು ದರ್ಭೆ ಕೊಡಿಸಹಿತ ಬಲಕೆಮಿಯ ಮೇಲ್ಭಾಗದ ಕೂದಲ ಮತ್ತೆ ಎಡ ಹೀಂಗೇ ಮದಾಲು ಅಪ್ಪನೇ ಈ ಸಂಸ್ಕಾರ ಕಾರ್ಯವ ಮಾಡಿಕ್ಕಿ ಮತ್ತೆ ಚಂದ ಮಾಡಿ ಕತ್ತರುಸಲೆ ಕ್ಷೌರಿಕನ ಹತ್ರೆ ಕಳುಸುವದು.

ಹೋ.. ಇನ್ನು ಮಾಣಿಗೆ ಉಪನಯನ ಮಾಡೆಕ್ಕಪ್ಪೋ. ಇದಾ ದಿನ ನೋಡಿ ಮಡುಗಿಕ್ಕಿ. ವಿವರ ಮತ್ತೆ ಹೇಳುತ್ತೆ ಆತೋ ಏ.

|| ಹರೇ ರಾಮ ||

( ಮುಂದುವರಿತ್ತು. )

ಕಳುದ ವಾರ : ಭಾಗ 07 : ನಾಮಕರಣ – http://oppanna.com/lekhana/samskara-lekhana/bhaga-07-namakarana

ಭಾಗ 08 : ಉಪನಿಷ್ಕ್ರಮಣ (ನಿರ್ಗಮನ) - ಅನ್ನಪ್ರಾಶನ - ಕರ್ಣ ವೇಧನ - ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಧನ್ಯವಾದ ಭಾವಾ:):)
  ಮಾಣಿಗೂ ಕೆಮಿ ಕುತ್ತುಸಿದ್ದು.. ಟಿಕ್ಕಿ ಇದ್ದು ಇನ್ನುದೇ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬೇಕು ಬೇಕು ಅದು. ಇರ್ಲಿ ಅಕೇರಿ ವರೇಂಗೂ ಅದು. ಈತನೂ ಟಿಕ್ಕಿಯಿಪ್ಪಂತವನು ಹೇಳಿ ಗುರ್ತ ಹಿಡಿವಲೂ ಆವ್ತಿದಾ!

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಂದೇ ದಿನಲ್ಲಿ ಸುಮಾರು ಸಂಸ್ಕಾರಂಗಳ ಮಾಡಿ ಮುಗುಶಿದಿರನ್ನೆ.
  ಒಳ್ಳೆ ವಿವರ ಇಪ್ಪ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ
  [‘ಚಂದ್ರ, ಸೂರ್ಯ, ನಕ್ಷತ್ರಾದಿ ದೇವತೆಗಳೇ, ಅಷ್ಟ ದಿಕ್ಪಾಲಕರೆ, ಅಷ್ಟ ದಿಕ್ಕುಗಳೇ, ಆಕಾಶವೇ, ನಿಂಗಳೆಲ್ಲೋರ ಕೈಲಿ ಈ ಮಗುವಿನ ಕೊಡುತ್ತಾ ಇದ್ದೆ. ಹಗಲು ರಾತ್ರಿ ಎಚ್ಚರ ನಿದ್ರೆ ಎಲ್ಲಾ ಅವಸ್ಥೆಲಿಯೂ ನಿಂಗೊ ಈ ಮಗುವಿನ ರಕ್ಷಿಸೆಕು, ಇಂದ್ರಾದಿ ದೇವತಗೋ ಈ ಮಗುವಿನ ಕಾಪಾಡೆಕು’ ಹೇಳಿ ಪ್ರಾರ್ಥನೆ]-ನಮ್ಮ ಅಕೇರಿವರೆಗೆ ಎಲ್ಲಾ ಸಮಯಂಗಳಲ್ಲಿ ಕಾಪಾಡುವದು ಇದೇ ದೇವತೆಗಳೇ ಅಲ್ಲದಾ.- ತುಂಬಾ ಒಳ್ಳೆ ವಿಚಾರ ಮತ್ತೆ ಕಲ್ಪನೆ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದ ಶರ್ಮಪ್ಪಚಿ. ನಿಂಗೊ ಅಂದು ಹೇಳಿದಾಂಗೆ ಎಲ್ಲಾ ಒಂದೇ ದಿನಲ್ಲಿ ನಡದ್ದು !!!

  [Reply]

  VA:F [1.9.22_1171]
  Rating: 0 (from 0 votes)
 3. ರಾಜಗೋಪಾಲ

  ಚೆನ್ನೈ ಭಾವಂಗೆ ಎಂತ ಎಲ್ಲಿಯಾರೂ ಜೆಂಬ್ರಕ್ಕೆಮಣ್ಣ ಹೊಪಲೆ ಇದ್ದಾ? ತೂಷ್ಣಿಲ್ಲಿ ಬಹಳ ಮುಖ್ಯ ಸಂಸ್ಕಾರಂಗಳ ಮುಗುಶಿದಿರನ್ನೆ! ನಿಷ್ಕ್ರಮಣ ಸಂಸ್ಕಾರದೊಳ ಚಂದ್ರದರ್ಶನ, ಸೂರ್ಯದರ್ಶನ, ದೇವತಾಗಾರ ದರ್ಶನ ಹೇಳಿ ಮೂರು ಉಪ ಸಂಸ್ಕಾರ, ಮತ್ತೆ ೪ನೇ ತಿಂಗಳಿಲ್ಲಿ ‘ಉಪವೆಶನ’ ಸಂಸ್ಕಾರ, ೬ನೇ ತಿಂಗಳಿಲ್ಲಿ ‘ಫಲಪ್ರಾಶನ’ ಸಂಸ್ಕಾರ, ಮತ್ತೆ ಅನ್ನಪ್ರಾಶನ ೮ ಅಥವಾ ೧೦ನೇ ತಿಂಗಳಿಲ್ಲಿ, (ಹಲ್ಲು ಬಂದ ಮತ್ತೆ); ಕರ್ಣವೇಧನ ೬,೭,೮ನೇ ತಿಂಗಳು, ಅದರ್ಂದ ೨ ಫಲ – ರಕ್ಷಾನಿಮಿತ್ತಂ ಭೂಷಣನಿಮಿತ್ತಂ ಚ’ ಹೇದು; ಇದು ಆಯುರ್ವೇದಲ್ಲಿ ಹೆಳಿದ ವಿಚಾರಂಗೊ. ಇದು ಎಲ್ಲವೂ ವೈಜ್ನಾನಿಕವಾಗಿ ಸರಿಯೇ!
  ಚೂಡಾಕರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಎಂಗಳ ಹತ್ರೆ ಇಲ್ಲೆ, ಅಕ್ಷರಾಭ್ಯಾಸಕ್ಕೆ ‘ವೇದಾರಂಭ ಸಂಸ್ಕಾರ’ ಹೇಳುತ್ತವು (ಸರಿಯೊ?) ೫ನೇ ಅಥವಾ ೭ನೇ ವರ್ಷಲ್ಲಿ ಮಾಡೆಕ್ಕು ಹೇಳಿ ವಾಗ್ಭಟ ಹೇಳಿದ್ದ (ಸರಕಾರದ ಶಾಲೆಗೆ ಸೇರುಸುವ ಪ್ರಾಯ). ಚಾಣಕ್ಯನ ಒಂದು ಶ್ಲೋಕ ಕೇಳಿ –
  ಲಾಲಯೇತ್ ಪಂಚವರ್ಷಾಣಿ ತಾಡಯೇತ್ ದಶವತ್ಸರಿ
  ಪ್ರಾಪ್ತೇ ತು ಶೊಡಷೇ ವರ್ಷೇ ಪುತ್ರಮ್ ಮಿತ್ರವದಾಚರೇತ್
  ಚೆನ್ನೈ ಭಾವ, ಇನ್ನೂ ರಜಾ ಹೆಚ್ಚಿನ ವಿವರಣೆ ಕೊಡ್ಲೆ ಎಡಿಗೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೇಳ್ತವನತ್ರೆ ಆಳ ಅಧ್ಯಯನ, ಧಾರಾಳ ವಿಷಯ ಸಂಗ್ರಹ ಇದ್ದರೆ, ಹೇಳಿದ್ದರ ಕೇಳಿ ಚಿಂತಿಸಿ ಮಥಿಸಿ ಕೇಳ್ತವ ಇದ್ದರೆ ಧಾರಾಳ ಇನ್ನೂ ಎಷ್ಟೋ ಹೇಳ್ಳಕ್ಕು. ಸಂಸ್ಕಾರ ಪ್ರತಿ ವಿಷಯವೂ ಪುಟಗಟ್ಟಲೆ ಬರೆತ್ತಷ್ಟು ಇದ್ದು ಅಪ್ಪೋ. ಅಷ್ಟಕ್ಕೆಲ್ಲ ಹೇಳ್ತಷ್ಟು ನಮ್ಮತ್ರ ಎಂತದೂ ಇಲ್ಲೆ ಭಾವ. ಒಂದೆರಡು ಪುಸ್ತಕಲ್ಲಿ ಓದಿ ತಿಳುದ್ದರ, ಗೊಂತಿಪ್ಪ ರೀತಿಲಿ ಚಿಕ್ಕವಾಗಿ ಚೊಕ್ಕವಾಗಿ ಮೇಲ್ಮೈ ಪರಿಚಯ ಮಾಡುವ ಪ್ರಯತ್ನಕ್ಕೆ ಇಳುದದ್ದು ಅಷ್ಟೇ. ಪ್ರಥಮ ಕಂತಿನ ಪೀಠಿಕೆಲಿ ಹೇಳಿದಾಂಗೆ ಸಂಸ್ಕಾರ ವಿಷಯ ಕಿರು ಪರಿಚಯ ಮಾಡುವ ಪ್ರಯತ್ನ ಇದು. ಹೆಚ್ಚಿನ ವಿವರ ಅನುಭವಸ್ಥರತ್ರೆ ಕೂದು ಚರ್ಚಿಸಿ ತಿಳ್ಕೊಳ್ಳೆಕ್ಕಷ್ಟೇ. ನಮ್ಮ ಬೈಲಿಲಿ ಹಿರಿಯರು, ವಿಷಯದ ಬಗ್ಗೆ ಹೆಚ್ಚು ತಿಳ್ಕೊಂಡವು ಧಾರಾಳ ಇದ್ದವು. ಅವರತ್ರೆಯೂ ಇಲ್ಲಿ ಬರದು ತಿಳಿಸಿ ಹೇಳಿ ಕೇಳಿಗೊಂಬದು.
  ಆಸಕ್ತಿಂದ ಓದಿ, ಉಪವೇಶನ, ಫಲಪ್ರಾಶನ …. ಇಲ್ಲಿ ಉಲ್ಲೇಖಿಸಿದ್ದಕ್ಕೆ ತುಂಬಾ ಧನ್ಯವಾದಂಗೋ. ಅಕ್ಷರಾಭ್ಯಾಸಕ್ಕೆ ‘ವೇದಾರಂಭ’ ಹೇಳ್ತವೋ ಎನಗೊಂತಿಲ್ಲೆ. ವೇದಾರಂಭಕ್ಕೆ ಉಪನಯನ ಆಗೇಡದೋ ಅಂಬಗ?
  ‘ಬಂದುಗೊಂಡಿರಿ – ಬರೆತ್ತಾ ಇರಿ ‘ . ನವಗೆ ಗೊಂತಿಪ್ಪಷ್ಟರ ಅತ್ತಿತ್ತೆ ಹಂಚಿ ತಿಳ್ಕೊಂಬೋ. ಒಪ್ಪಕ್ಕೆ ಧನ್ಯವಾದ ಸಹಿತ ಪ್ರತಿ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಉತ್ತಮ ಮಾಹಿತಿ ಇಪ್ಪಂತಹ ಲೇಖನ. ವೈಜ್ನಾನಿಕ ವಿವರಣೆಗಳು ಲಾಯಕಿತ್ತು. ಶಿಖಾ ಧಾರಣೆಯ ಹೆಲ್ಮೆಟ್ ಮಡಗುತ್ತ ಕಾರಣವ ಕೊಟ್ಟು ಉದಾಹರುಸಿ ಈಗಾಣ ಕಾಲದವಕ್ಕೆ ಅರ್ಥ ಆವ್ತ ಹಾಂಗೆ ವಿವರುಸಿದ್ದ° ಭಾವಯ್ಯ. ದೊಡ್ಡ ಭಾವ ತಲೆಂದ ಹೆಲ್ಮೆಟ್ಟು ತೆಗೆಯದ್ದೆ ಇಪ್ಪದಕ್ಕು ಅದೇ ಕಾರಣ ಆಯ್ಕೊ ?!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಾವನ ಪ್ರೀತಿಯ ಒಪ್ಪಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಧನ್ಯವಾದ ಭಾವಯ್ಯ.

  ತುಂಬ ಮಾಹಿತಿಗೊ ಗೊಂತತು.
  ಇನ್ನು ಉಪ್ನಾನಕ್ಕೆ ಮುಹೂರ್ತ ನೊಡ್ಲೆ ಮೀನ ಮೇಷ ಎಂತಕೆ ..? ಎಂಟು ವರ್ಷ ಪ್ರಾಯ ಅಪ್ಪದ್ದೆ ಕಾವಲಿಲ್ಲೆ, ಎಂತ..?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ನೀವು ರೆಡಿಯಾ? – ನಾವು ರೆಡಿ!’. ಧನ್ಯಾವಾದ.

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಒಪ್ಪ ಮಾಹಿತಿ ಚೆನ್ನೈ ಭಾವ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯಾವಾದ ವಿದ್ಯಕ್ಕಾ. ಬಂದುಗೊಂಡಿರಿ

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  ಗೋಪಾಲಕೃಷ್ಣ ಭಟ್ಟ ಎಸ್.ಕೆ.

  ಉಪನಯನಕ್ಕೆ ಉತ್ತರಾಯಣ ಬರೆಕ್ಕು ಹೇಳಿ ಕಾಯೆಡಿ-ಬೇಗ ಬರಲಿ.
  ತುಂಬಾ ಉಪಯುಕ್ತ ಮಾಹಿತಿ ಇಪ್ಪ ಲೇಖನ ಸರಣಿ ಇದು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಒಪ್ಪಣ್ಣ ಮೊನ್ನೆ ಜೋಯಿಸಪ್ಪಚ್ಚಿಯತ್ರೆ ಹೋಗಿಪ್ಪಗ ಮುಹೂರ್ತ ಕೇಳಿಕ್ಕಿ ಬೈಂದವಡಾ! ಬಪ್ಪ ಗುರುವಾರಕ್ಕೆ ಹೇಳಿ ಹೇಳಿದ್ದವು ಗುರಿಕ್ಕಾರ್ರು, ಗೋಪಾಲಣ್ಣ. ಪ್ರೀತಿಯ ಒಪ್ಪಕ್ಕೆ ಅಭಿಮಾನದ ಧನ್ಯವಾದ ಇತ್ಲಾಗಿಂದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಚುಬ್ಬಣ್ಣದೀಪಿಕಾಡಾಗುಟ್ರಕ್ಕ°ಗಣೇಶ ಮಾವ°ಶಾ...ರೀದೊಡ್ಡಭಾವಬೋಸ ಬಾವಸುವರ್ಣಿನೀ ಕೊಣಲೆಕಾವಿನಮೂಲೆ ಮಾಣಿಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಮಾಲಕ್ಕ°ಅಕ್ಷರದಣ್ಣಶರ್ಮಪ್ಪಚ್ಚಿಸಂಪಾದಕ°ಗೋಪಾಲಣ್ಣಯೇನಂಕೂಡ್ಳು ಅಣ್ಣರಾಜಣ್ಣಶ್ರೀಅಕ್ಕ°ಪಟಿಕಲ್ಲಪ್ಪಚ್ಚಿಪುತ್ತೂರುಬಾವನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ