ಶ್ರೀಮದ್ಭಗವದ್ಗೀತಾ – ‘ಗೀತಾಮಾಹಾತ್ಯ್ಮಮ್’

ಭಗವದ್ಗೀತೆ ಹೇಳಿರೆ ಕುರುಕ್ಷೇತ್ರ ರಣರಂಗಲ್ಲಿ ಇಬ್ರ ನಡುವೆ ಆದ ಸಂಭಾಷಣೆ ಹೇಳಿ ಗ್ರೇಶುವವು ಇದ್ದವು. ಅದು ಅಷ್ಟೇ ಅಪ್ಪು ಹೇಳಿ ಆಗಿದ್ದರೆ ಭಗವದ್ಗೀತೆ ಪವಿತ್ರವಾದ ಧರ್ಮಗ್ರಂಥ ಹೇದು ಹೇಂಗಪ್ಪಲೆಡಿಗು!. ಕೃಷ್ಣ° ಅರ್ಜುನಂಗೆ ಯುದ್ಧ ಮಾಡು ಹೇಳಿ ಪ್ರಚೋದಿಸಿದ°, ಇದು ಅನೀತಿ ಹೇಳಿ ಗ್ರೇಶುವವೂ ಇದ್ದವು, ಆದರೆ ವಾಸ್ತವ ಸ್ಥಿತಿ – ಭಗವದ್ಗೀತೆ ನೀತಿಯ ಪರಮೋಪದೇಶ. ಹಾಂಗಾಗಿ ಭಗವಂತ° ಹೇಳಿದ ಮಾತುಗಳನ್ನೇ ಅವಲೋಕಿಸಿರೆ – “ಮನ್ಮನಾ ಭವ ಮದ್ಭಕ್ತಃ .. ” (ಭ.ಗೀ. 9.34 & ಭ.ಗೀ 18.65) – ಮನುಷ್ಯ° ಭಗವಂತನ ಭಕ್ತರಾಯೇಕು. ಅದು ಬರೇ ಭಕ್ತನಾದರೆ ಸಾಲ. ನಿಜಭಕ್ತ – ಸಂಪೂರ್ಣವಾಗಿ ಭಗವಂತನ ನಂಬಿ, ಸಂಪೂರ್ಣ ಕೃಷ್ಣಪ್ರಜ್ಞೆಯುಳ್ಳವನಾಗಿ, ಫಲದ ಹಂಗು ಬಿಟ್ಟು, ವ್ಯಾಮೋಹರಹಿತನಾಗಿ, ನಿಷ್ಕಲ್ಮಶ ಮನಸ್ಸಿಂದ, ನಿರ್ಲಿಪ್ತ ಧೋರಣೆಯುಳ್ಳವನಾಗಿ ಭಗವಂತನ ಭಕ್ತಿಯೋಗಮಾರ್ಗವ ಅನುಸರುಸೆಕು. ಎಲ್ಲ ಧರ್ಮದ ತಿರುಳು ಭಗವಂತಂಗೆ ಶರಣಾಗತನಪ್ಪದು – “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ…”(ಭ.ಗೀ.18.66) – ‘ಎಲ್ಲ ಧರ್ಮವ ಬಿಟ್ಟು ಭಗವಂತನ ಭಕ್ತನಾಗು. ಅದರಿಂದ ನೀನು ನಿನ್ನ ಸರ್ವಪಾಪಂಗಳಿಂದ ಮುಕ್ತನಾಗಿ ಮೋಕ್ಷಕ್ಕೆ ಅರ್ಹನಪ್ಪ ಜವಾಬ್ದಾರಿಯ ಭಗವಂತನಾದ ಆನು ವಹಿಸಿಗೊಂಡಿದೆ’ ಹೇಳಿ ಭಗವಂತ° ಹೇಳಿದ್ದ°. ಭಗವಂತನ ನಿಷ್ಠಾವಂತ ಭಕ್ತನಪ್ಪದರ ಮೂಲಕ ಮೋಕ್ಷದ ದಾರಿಲಿ ಮುನ್ನೆಡೆ ಸಾಧಿಸಿ ಅಧ್ಯಾತ್ಮಗುರಿ ಆ ಭಗವಂತನ ಪರಮೋನ್ನತ ಶಾಂತಿಧಾಮವ ಸೇರ್ಲಕ್ಕು.

ಭಗವದ್ಗೀತೆಲಿ ಐದು ಮುಖ್ಯ ವಿಷಯಂಗಳ ಚರ್ಚೆ ಆಯ್ದು. – ದೇವೋತ್ತಮ ಪರಮ ಪುರುಷ°, ಐಹಿಕ ಪ್ರಕೃತಿ, ಜೀವಿಗೊ, ಅನಂತಕಾಲ ಮತ್ತೆ ಎಲ್ಲ ಬಗೆಯ ಕರ್ಮಂಗೊ. ಎಲ್ಲವೂ ದೇವೋತ್ತಮ ಪುರುಷನಾದ ಆ ಭಗವಂತನ ಅವಲಂಬಿಸಿದ್ದು. ಪರಿಪೂರ್ಣಸತ್ಯದ ಪರಿಕಲ್ಪನೆಗೊ – ನಿರಾಕಾರ ಬ್ರಹ್ಮನ್, ಅಂತರ್ಯಾಮಿ ಪರಮಾತ್ಮ° ಮತ್ತೆ ಬೇರೆ ಯಾವುದೇ ಆಧ್ಯಾತ್ಮಿಕ ಪರಿಕಲ್ಪನೆ ದೇವೋತ್ತಮ ಪರಮ ಪುರುಷನ ಅರಿವಿನ ವರ್ಗಲ್ಲಿಪ್ಪದು. ಮೇಲ್ನೋಟಕ್ಕೆ ದೇವೋತ್ತಮ ಪರಮ ಪುರುಷ°, ಜೀವಿ, ಐಹಿಕ ನಿಸರ್ಗ ಮತ್ತೆ ಕಾಲ ಬೇರೆ ಬೇರೆ ಹೇದು ಕಂಡರೂ ಯಾವುದೂ ಪರಮೋನ್ನತನಿಂದ ಬೇರೆ ಅಲ್ಲ. ಆದರೆ ಪರಮೋನ್ನತ° – ಆ ಭಗವಂತ° ಮಾತ್ರ ಏವತ್ತೂ ಎಲ್ಲವುದರಿಂದಲೂ ಬೇರೆ. ಹಾಂಗಾಗಿ ಅಂವ ಸರ್ವಗುಣ ಪರಿಪೂರ್ಣನಾಗಿ, ಸರ್ವಸಮರ್ಥನಾಗಿ, ಪರಮಶ್ರೇಷ್ಠನಾಗಿ ಇದ್ದ°. ತನ್ನ ಸಹಜ ಸ್ವರೂಪಲ್ಲಿ ಜೀವಿಯೂ ಪರಿಶುದ್ಧ ಆತ್ಮ°. ಅಂವ ಪರಮಾತ್ಮನ ಒಂದು ಅಣುಕಣ. ಭಗವಂತನ ಸೂರ್ಯಂಗೆ ಹೋಲಿಸಿರೆ, ಜೀವಿಗೊ ಸೂರ್ಯಪ್ರಭೆಗೆ ಹೋಲುಸಲಕ್ಕು.

ಕುರುಕ್ಷೇತ್ರಲ್ಲಿ ನಡದ ಘಟನೆಗಳ ಧೃತರಾಷ್ಟ್ರಂಗೆ ವಿವರಿಸಿ ಹೇಳಿಗೊಂಡಿಪ್ಪ ಸಂಜಯ°, “ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ । ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ” ॥ (ಭ.ಗೀ.೧೮.೭೮) –  ‘ಎಲ್ಲಿ ಯೋಗೇಶ್ವರನಾದ ಶ್ರೀಕೃಷ್ಣ (ಭಗವಂತ°) ಇರುತ್ತನೋ, ಎಲ್ಲಿ ಧನುರ್ಧಾರಿಯಾದ ಪಾರ್ಥ° ಇರುತ್ತನೋ, ಅಲ್ಲಿ ಸಿರಿ(ಸಂಪತ್ತು), ವಿಜಯ, ಅಸಾಧಾರಣ ಶಕ್ತಿ, ನ್ಯಾಯನೀತಿ ಇದ್ದು ಹೇಳ್ವದು ಎನ್ನ ಅಭಿಪ್ರಾಯ’ ಹೇದು ಸಂಜಯ° ಧೃತರಾಷ್ಟ್ರಂಗೆ  ಹೇಳಿದಲ್ಯಂಗೆ ಭಗವದ್ಗೀತೆಯ ಹದಿನೆಂಟನೇ ಅಧ್ಯಾಯ ಮುಗುದತ್ತು ಹೇಳಿ ಕಳದವಾರದ ಶುದ್ದಿಲಿ ಓದಿದ್ದದು.

ಭಗವದ್ಗೀತಾ ಪಾರಾಯಣಾಂತ್ಯಲ್ಲಿ ಗೀತಾ ಮಹತ್ವವ ಪಠಿಸಿ, ಗುರುಸ್ತೋತ್ರ, ಶಾಂತಿಮಂತ್ರ, ಮಂಗಲದೊಟ್ಟಿಂಗೆ ಪಾರಾಯಣಕಾರ್ಯವ ಗೀತಾಚಾರ್ಯ° ಶ್ರೀಕೃಷ್ಣಪರಮಾತ್ಮಂಗೆ ಸಮರ್ಪಿಸುತ್ತದು ಕ್ರಮ. ವರಾಹಪುರಾಣಲ್ಲಿ ವಿಷ್ಣು ಭೂದೇವಿಗೆ ಇದನ್ನೇ ಹೇಳಿದ್ದ° –  “ಗೀತಾಯಾಃ ಪಠನಂ ಕೃತ್ವಾ ಮಾಹತ್ಮ್ಯಂ ನೈವ ಯಃ ಪಠೇತ್ । ವೃಥಾ ಪಾರೋ ಭವೇತ್ತಸ್ಯ ಶ್ರಮಏವ ಹ್ಯುದಾಹುತಃ” ॥ – (ಗೀತಾ ಪಾರಾಯಣ ಮಾಡಿಕ್ಕಿ ಅದರ ಮಹಾತ್ಮೆಯ ಪಠಿಸದ್ದರೆ ಅವನ ಶ್ರಮವೆಲ್ಲ ವ್ಯರ್ಥ). ಆದರೆ ಅದೇ ಸಮಯಲ್ಲಿ ಇನ್ನೊಂದು ಮುಖ್ಯ ವಿಷಯವೂ ನಮ್ಮ ಪ್ರಜ್ಞೆಲಿ ಜಾಗೃತವಾಗಿರೆಕು. ಯಾವುದೇ ಪಾರಾಯಣ ಮಾಡೆಕು, ಫಲಶ್ರುತಿ ಓದೆಕು  ಹೇದು ಹೇಳಿದ್ದೇನೋ ಸರಿ, ಹಾಂಗೇಳಿ ಆ ಫಲ ಸಿಕ್ಕಲಿ, ಸಿಕ್ಕುತ್ತು ಹೇಳಿ ಮನಸ್ಸಿಲ್ಲಿ ಮಡಿಕ್ಕೊಂಡು, ಹಂಬಲಿಸಿ ಪಾರಾಯಣ ಮಾಡು ಹೇಳಿ ಹೇಳಿದ್ದನಿಲ್ಲೆ. ಒಂದಷ್ಟು ಓದಿಕ್ಕಿ ಈಗ ಎಷ್ಟು ಪುಣ್ಯ / ಫಲ ಸಿಕ್ಕಿತ್ತು ಹೇದು ಅಳತೆ ಮಾಡಿ ನೋಡ್ವ ಕ್ರಮವೂ ಇಲ್ಲೆ. ಅಬ್ಬೆ ಮಗಂಗೆ ಚಾಕಲೇಟು ಕೊಡ್ತೆ, ಬೆಲ್ಲ ಕೊಡ್ತೆ, ಸಕ್ಕರೆ ಕೊಡ್ತೆ ಹೇಳಿ ಮಗುವಿನ ಮಂಕಡುಸುವದು ಆ ಮಗುವಿನ ಪ್ರಚೋದಿಸಲೇ ಹೊರತು ಲಂಚ ಕೊಟ್ಟು ಕಾರ್ಯ ಮಾಡುಸುವದು ಅಲ್ಲ. ಹಾಂಗೇ ಈ ಫಲ ಇದ್ದು ಹೇಳಿ ಹೇಳುವದೂ ಕೂಡ ನಮ್ಮ ಮನಸ್ಸಿನ ಪ್ರಚೋದಿಸಲೆ ಇಪ್ಪದು. ಅದರಲ್ಲೇ ಮನಸ್ಸು ಮಡಿಕ್ಕೊಂಡು, ಮತ್ತೆ ಅದು ಸಿಕ್ಕಿದ್ದಿಲ್ಲೆನ್ನೇದು ಕೊರಗಲೆ ಆಗ.  ಅದನ್ನೇ ಭಗವಂತ° ಗೀತೆಲಿ ಹೇಳಿದ್ದದು – “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ” ಹೇದು . ಇಲ್ಲಿ ಧರ್ಮ ಹೇಳುವದು ಭೌತಿಕ ಧರ್ಮ ಅಲ್ಲ. ಕರ್ಮ ಫಲದ ನಂಟು ಕೂಡ ಅಪ್ಪು.  ಕರ್ಮಫಲದ ಆಶೆಯ ಮನಸ್ಸಿಲ್ಲಿ ಮಡಿಕ್ಕೊಳ್ಳದ್ದೆ ಭಗವಂತನೇ ಸರ್ವಸ್ವ, ಭಗವದ್ಪ್ರೀತಿಯೇ ಎನ್ನ ಲಕ್ಷ್ನ್ಯ ಹೇಳ್ವ ಮನಸ್ಥಿತಿಲಿ ಕರ್ಮನಿರತನಾದರೆ ಅದರಿಂದ ಭಗವಂತ ಸಂಪ್ರೀತನಾಗಿ ನವಗೆ ಯಥಾಯೋಗ್ಯವ ಭಗವಂತ° ಕರುಣಿಸುತ್ತ°. ಮತ್ತೆ ಕರ್ಮ ಒಂದರಿ ಮಾಡಿ ನಿಲ್ಲುಸವದು ಅಲ್ಲ. ಅದು ನಿರಂತರ ಸಾಗುತ್ತಾ ಇಪ್ಪ ಪ್ರಕ್ರಿಯೆ. ‘ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್’ – (ಭ.ಗೀ. 3.5)  – ಬ್ರಹ್ಮಾನುಭವಕ್ಕೆ ಬಂದರೂ ಕರ್ಮವ ಬಿಡ್ವ ಹಾಂಗಿಲ್ಲೆ. ಜೀವನದ ಪ್ರತಿಕ್ಷಣವೂ, ಜೀವಲ್ಲಿ ಅಂತಿಮ ಉಸಿರಿಪ್ಪನ್ನಾರವೂ ಜೀವನ ಕರ್ಮಾನುಷ್ಠಾನಲ್ಲಿ ಇರೆಕ್ಕಪ್ಪದು. ಕರ್ಮ ಹೇಳಿರೆ ನಾವು ಮಾಡುವ ಯಾವುದೇ ಕರ್ಮ, ಆದರೆ ಅದು ಸತ್ಕರ್ಮ ಆಗಿರೆಕು. ಭಗವಂತನೇ ಸರ್ವಸ್ವ, ಭಗವಂತನ ಪ್ರೀತಿಗಾಗಿ ಮಾತ್ರ ಇದು ಭಗವಂತ° ಎನ್ನಂದ ಮಾಡುಸುವದು, ಇದರಲ್ಲಿ ಆನೊಂದು ಸಾಧನ ಮಾತ್ರ, ಕರ್ಮ ಭಗವಂತಂಗೆ ಅರ್ಪಣೆ ಹೇಳ್ವ ಮನೋಭಾವಲ್ಲಿ ಮಾಡುವ ಯಾವುದೇ ಕಾರ್ಯ ಸತ್ಕರ್ಮ ಅನುಸುತ್ತು.

ಜೀವನ ಸಾರವ, ಭಗವದ್ ಸತ್ಯವ ತಿಳುಶುವ ಈ ಭಗವದ್ಗೀತಾ ಪಾರಾಯಣದ ಮಹತ್ವ ಎಂತರ ಹೇಳಿ ನೋಡ್ವೋ –

ಅಥ ಗೀತಾ ಮಾಹಾತ್ಮ್ಯಮ್’ –

 ಓಂ ಗೀತಾಶಾಸ್ತ್ರಮಿದಂ ಪುಣ್ಯಂ ಯಃ ಪಠೇತ್ಪ್ರಯತಃ ಪುಮಾನ್ ।BHAGAVADGEETHA
ವಿಷ್ಣೋಃ ಪದಮವಾಪ್ನೋತಿ ಭಯಶೋಕಾದಿವರ್ಜಿತಃ ॥೦೧॥

(ಆರು ಗೀತೆಯ ಪಠಿಸುತ್ತವೋ, ಅನುಷ್ಠಾನಕ್ಕೆ ತತ್ತವೋ ಅವ್ವು ಬದುಕಿನ ಎಲ್ಲಾ ರೀತಿಯ ಭಯ ಶೋಕ ಕಷ್ಟಂಗಳಿಂದ ಪಾರಾಗಿ ಅಭಯವಾದ ವಿಷ್ಣುಪದವ ಪಡಕ್ಕೊಳ್ಳುತ್ತವು).

ಗೀತಾಧ್ಯಯನಶೀಲಸ್ಯ ಪ್ರಾಣಾಯಾಮ ಪರಸ್ಯ ಚ ।
ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮಕೃತಾನಿ ಚ ॥೦೨॥

(ಗೀತಾಧ್ಯಯನ ಭಕ್ತರಿಂಗೆ ಜನ್ಮಜನ್ಮಾಂತರ ಪಾಪಂಗೊ ನಾಶವಾವ್ತು).

ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ ।
ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ ॥೦೩॥

(ನಿತ್ಯ ಜಲಸ್ನಾನಂದ ಶರೀರ ಮಲಿನ ತೊಳದು ಹೋವ್ತಾಂಗೆ, ನಿತ್ಯ ಗೀತಾಪಾರಾಯಣ ಸ್ನಾನಂದ ಸಂಸಾರ (ಐಹಿಕ) ಮಾಲಿನ್ಯ ನಾಶವಾವ್ತು).

ಗೀತಾ ಸು-ಗೀತಾ ಕರ್ತವ್ಯಾ ಕಿಮನ್ನೈಃ ಶಾಸ್ತ್ರವಿಸ್ತರೈಃ ।
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ ॥೦೪॥

(ಸಾಕ್ಷಾತ್ ಭಗವಂತನ ಬಾಯಿಂದ ಬೋಧಿಸಿದ ಈ ಗೀತೆಯ ಆಶ್ರಯಿಸಿದರೆ ಸಾಕು, ಮಿಕ್ಕ ಶಾಸ್ತ್ರ ಯಾವುದೂ ಇದಕ್ಕೆ ಮಿಗಿಲಾಗಿಲ್ಲೆ).

ಭಾರತಾಮೃತಸರ್ವಸ್ವಂ ವಿಷ್ಣೋರ್ವಕ್ತ್ರಾದ್ವಿನಿಃಸೃತಮ್ ।
ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮಂ ನ ವಿದ್ಯತೇ ॥೦೫॥

(ಭಗವಂತನ ಬಾಯಿಂದ ಹೇಳಲ್ಪಟ್ಟ ಭಾರತಾಮೃತಸಾರ ಸರ್ವಸ್ವ ಈ ಗೀತಾಗಂಗೆಯ ಪಾನಮಾಡಿದವಕ್ಕೆ ಪುನರ್ಜನ್ಮದ ಭಯ ಇಲ್ಲೆ).

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ॥೦೬॥

(ಭಗವದ್ಗೀತೆಯು ಎಲ್ಲಾ ಉಪನಿಷತ್ತುಗಳ ಸಾರ. ಉಪನಿಷತ್ತುಗಳೆಂಬ ಗೋವುಗಳಿಂದ, ಅರ್ಜುನನ ಕರುವನ್ನಾಗಿ ಮಾಡಿ, ಗೋಪಾಲನಂದನ° (ಶ್ರೀಕೃಷ್ಣ) ಹಿಂಡಿದ ಈ ಗೀತಾಮೃತವ ಪಂಡಿತಕ್ಕೊ (ಭಕ್ತರು) ಸೇವಿಸುತ್ತವು).

ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್, ಏಕೋ ದೇವೋ ದೇವಕೀಪುತ್ರ ಏವ ।
ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ॥೦೭॥

(ಇಂದ್ರಾಣ ಜಗತ್ತಿಲ್ಲಿ ಪ್ರತಿಯೊಬ್ಬನೂ ಒಂದು ಧರ್ಮಶಾಸ್ತ್ರ, ಒಬ್ಬ ದೇವರು , ಒಂದು ಕಾರ್ಯ ಬೇಕು ಹೇಳಿ ಹಂಬಲುಸುತ್ತವು. ಆದ್ದರಿಂದ ಇಡೀ ಜಗತ್ತಿಂಗೆ ಒಂದೇ ಒಂದು ಧರ್ಮಗ್ರಂಥ (ಶಾಸ್ತ್ರ) – ಗೀತಾಶಾಸ್ತ್ರವೇ ಶಾಸ್ತ್ರ, ಶ್ರೀಕೃಷ್ಣನೇ ದೇವರು, ಭಗವನ್ನಾಮವೇ ಮಂತ್ರ, ಅವನ ಸೇವೆಯೇ ಸತ್ಕರ್ಮ. ಎಲ್ಲವೂ ಒಂದೇ ಒಂದು – ಆ ಪರಮ ಪುರುಷನ ಸೇವೆ).

 

ಶ್ಲೋಕಂಗಳ ಕೇಳ್ಳೆ –
GEETHA MAHATHMYAM

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

~~

ಇನ್ನು ವರಾಹಪುರಾಣಲ್ಲಿ ವಿಷ್ಣು ಭೂದೇವಿಗೆ ಹೇಳಿದ ಗೀತಾಮಹಾತ್ಮ್ಯದ್ದರನ್ನೂ ಇಲ್ಲಿ ಸೂಕ್ಷ್ಮಲ್ಲಿ ನೋಡುವೊ° –

ಧರೋ ವಾಚ (ಧರಾ ಉವಾಚ)-

ಭಗವಾನ್ ಪರಮೇಶಾನ ಭಕ್ತಿರವ್ಯಭಿಚಾರಿಣೀ ।
ಪ್ರಾರಬ್ಧಂ ಭುಜ್ಯಮಾನಸ್ಯ ಕಥಂ ಭವತಿ ಹೇ ಪ್ರಭೋ ॥೦೧॥

(ಭೂದೇವಿ ಹೇಳಿತ್ತು – ಹೇ ಭಗವಂತ°!, ಪ್ರಾರಬ್ಧವ ಅನುಭವುಸುವವಂಗೆ ನಿಷ್ಠೆ ಇಪ್ಪ ಭಕ್ತಿ ಹೇಂಗೆ ಉಂಟಾವ್ತು?)

ಶ್ರೀವಿಷ್ಣುರುವಾಚ (ಶ್ರೀವಿಷ್ಣುಃ ಉವಾಚ)-

ಪ್ರಾರಬ್ಧಂ ಭುಜ್ಯಮಾನೋಹಿ ಗೀತಾಭ್ಯಾಸರತಸ್ಸದಾ ।
ಸಮುಕ್ತಃ ಸ ಸುಖೀ ಲೋಕೇ ಕರ್ಮಣಾ ನೋಪಲಿಪ್ಯತೇ ॥೦೨॥

ವಿಷ್ಣು ಹೇಳಿದ° – ಗೀತೆಯ ತಪ್ಪದ್ದೆ ಅಭ್ಯಾಸಮಾಡಿಗೊಂಡು ಬಂಧನಕ್ಕೆ ಬೀಳದ್ದೆ ಮುಕ್ತಿ ಸಂಪಾದುಸಲಕ್ಕು.)

ಮಹಾಪಾಪಾದಿ ಪಾಪಾನಿ ಗೀತಾಧ್ಯಾನಂ ಕರೋತಿಚೇತ್ ।
ಕ್ವಚಿತ್ ಸ್ಪರ್ಶಂ ನ ಕುರ್ವಂತಿ ನಲಿನೀದಲಮಂಬುವತ್ ॥೦೩॥

(ನೀರಿಲ್ಲಿಪ್ಪ ತಾವರೆ ಹಾಂಗೆ ಗೀತಾಧ್ಯಾನ ತತ್ಪರಂಗೆ ಪಾಪಂಗೊ ಅಂಟುತ್ತಿಲ್ಲೆ.)

ಗೀತಾಯಾಃ ಪುಸ್ತಕಂ ಯತ್ರ ಯತ್ರ ಪಾಠಃ ಪ್ರವರ್ತತೇ ।
ತತ್ರ ಸರ್ವಾಣಿ ತೀರ್ಥಾನಿ ಪ್ರಯಾಗಾದೀನಿ ತತ್ರವೈ ॥೦೪॥

(ಗೀತಾಗ್ರಂಥ ಇಪ್ಪ ಜಾಗೆಲಿ, ಗೀತಾಪ್ರವಚನ ನಡವ ಜಾಗೆಲಿ ಸರ್ವತೀರ್ಥಂಗಳೂ ನೆಲೆಸಿರುತ್ತು.)

ಸರ್ವೇ ದೇವಾಶ್ಚ ಋಷಯೋ ಯೋಗಿನಃ ಪನ್ನಗಾಶ್ಚಯೇ ।
ಗೋಪಾಲಾ ಗೋಪಿಕಾ ವಾಪಿ ನಾರದೋದ್ಭವ ಪಾರ್ಷದೈಃ ॥೦೫॥

(ಗೀತಾ ಪ್ರವಚನ ಸಮಯಲ್ಲಿ ದೇವತೆಗೊ, ಋಷಿಗೊ, ಯೋಗಿಗೊ, ಗೋಪ-ಗೋಪಿಕೆಗೊ, ನಾರದ°, ಉದ್ಭವಾದಿಗೊ ವಾಸಿಸುತ್ತವು.)

ಸಹಾಯೋಜಾಯತೇ ಶೀಘ್ರಂ ಯತ್ರ ಗೀತಾ ಪ್ರವರ್ತತೇ ।
ಯತ್ರ ಗೀತಾ ವಿಚಾರಶ್ಚ ಪಠನಂ ಪಾಠನಂಶೃತಂ ।
ತತ್ರಾಹಂ ನಿಶ್ಚಿತಂ ಪೃಥ್ವಿ ನಿವಸಾಮಿ ಸದೈವಹಿ ॥೦೬॥

(ಗೀತಾಪಠನ, ಪಾಠನ, ಶ್ರವಣಂಗೊ ನಡವ ಜಾಗೆಲಿ ಆನು ತಪ್ಪದ್ದೆ ಇರುತ್ತೆ.)

ಗೀತಾಶ್ರಯೇ ಹಂ ತಿಷ್ಠಾಮಿ ಗೀತಾ ಮೇ ಚೋತ್ತಮಂ ಗೃಹಂ ।
ಗೀತಾಜ್ಞಾನ ಮುಪಾಶ್ರಿತ್ಯ ತ್ರೀನ್ ಲೋಕಾನ್ ಪಾಲಯಾಮ್ಯಹಂ ॥೦೭॥

(ಗೀತಾಶ್ರಯ° ಆನು. ಅದರ ಪ್ರಭಾವಂದ ಮೂರ್ಲೋಕವ ಪಾಲುಸುತ್ತೆ.)

ಗೀತಾಮೇ ಪರಮಾ ವಿದ್ಯಾ ಬ್ರಹ್ಮರೂಪಾನ ಸಂಶಯಃ ।
ಅರ್ಥಮಾತ್ರಾಕ್ಷರಾ ನಿತ್ಯಾ ಸ್ವಾನಿರ್ವಾಚ್ಯ ಪದಾತ್ಮಿಕಾ ॥೦೮॥

(ಗೀತೆ – ಬ್ರಹ್ಮ. ಗೀತೆ – ಪ್ರಣವ ಹಾಂಗೂ ಶಾಶ್ವತವಾದ ಶ್ರೇಷ್ಠ ವಿದ್ಯೆ.)

ಚಿದಾನಂದೇನ ಕೃಷ್ಣೇನ ಪ್ರೋಕ್ತಾ ಸ್ವಮುಖೋರ್ಜುನಂ ।
ವೇದತ್ರಯೀ ಪರಾನಂದಾ ತತ್ತ್ವಾರ್ಥಜ್ಞಾನಸಂಯುತಾ ॥೦೯॥

(ಗೀತೆ ಮೂರು ವೇದದ ಸಾರವಾಗಿದ್ದು, ಪರಮಾನಂದದಾಯಕವಾಗಿದ್ದು, ತತ್ವಾರ್ಥಜ್ಞಾನಂದ ಕೂಡಿಪ್ಪಂತದ್ದು, ಚಿದಾನಂದನಾದ ಕೃಷ್ಣ° ಅರ್ಜುನಂಗೆ ಸ್ವತಃ ಬೋಧಿಸಿದ್ದು)

ಯೋಷ್ಟಾದಶ ಜಪೇ ನಿತ್ಯಂ ನರೋ ನಿಶ್ಚಲ ಮಾನಸಃ ।
ಜ್ಞಾನ ಸಿದ್ಧಿಂ ಸಲಭತೇ ತತೋ ಯಾತಿ ಪರಂ ಪದಂ ॥೧೦॥

(ಏಕಾಗ್ರಚಿತ್ತನಾಗಿ ಪೂರ್ಣಗೀತಾ (ಹದಿನೆಂಟು ಅಧ್ಯಾಯ ಪೂರ್ತಿ) ಪಠಣ ಮಾಡಿದಂವ° ಜ್ಞಾನಸಿದ್ಧಿಯಾಗಿ ಪರಮೋನ್ನವದ ಹೊಂದುತ್ತ°.)

ಪಾಠೇ ಸಮರ್ಥಃ ಸಂಪೂರ್ಣೇ ತತೋರ್ಧಂ ಪಾಠಮಾಚರೇತ್ ।
ತದಾ ಗೋದಾನಜಂ ಪುಣ್ಯಂ ಲಭತೇ ನಾತ್ರ ಸಂಶಯಃ ॥೧೧॥

(ಅರ್ಧ ಪಾರಾಯಣ ಮಾಡುವವಂಗೆ ಗೋದಾನ ಮಾಡಿದ ಪುಣ್ಯ ಲಭಿಸುತ್ತು.)

ತ್ರಿಭಾಗಂ ಪಠಮಾನಸ್ತು ಗಂಗಾಸ್ನಾನಫಲಂ ಲಭೇತ್ ।
ಷಡಂಶಂ ಜಪಮಾನಸ್ತು ಸೋಮಯಾಗ ಫಲಂ ಭವೇತ್ ॥೧೨॥

(ಆರು ಅಧ್ಯಾಯಂಗಳ (೧೮ರಲ್ಲಿ ಮೂರರ ಒಂದು ಭಾಗ) ಪಾರಾಯಣ ಮಾಡಿದವಂಗೆ ಗಂಗಾಸ್ನಾನದ ಪುಣ್ಯವೂ, ಆರನೇ ಒಂದು ಭಾಗವ ( ಮೂರು ಅಧ್ಯಾಯವ ) ಪಾರಾಯಣ ಮಾಡುವದರಿಂದ ಸೋಮಯಾಗದ ಪುಣ್ಯಫಲ ಸಿಕ್ಕುತ್ತು.)

ಏಕಾಧ್ಯಾಯಂ ತುಯೋ ನಿತ್ಯಂ ಪಠತೇ ಭಕ್ತಿ ಸಂಯುತಃ ।
ರುದ್ರಲೋಕಮವಾಪ್ನೋತಿ ಗಣೋ ಭೂತ್ವಾವಸೇಚ್ಚಿರಂ ॥೧೩॥

(ಭಕ್ತಿಪುರಸ್ಸರವಾಗಿ ಒಂದೇ ಅಧ್ಯಾಯವವ ನಿತ್ಯ ಪಠಣ ಮಾಡುವದರಿಂದ ರುದ್ರಲೋಕವಾಸ ಲಭಿಸುತ್ತು.)

ಅಧ್ಯಾಯಂ ಶ್ಲೋಕಪಾದಂ ವಾ ನಿತ್ಯಂ ಯಃ ಪಠತೇ ನರಃ ।
ಸಯಾತಿ ನರತಾಂ ಯಾವತ್ ಮನ್ವಂತರಂ ವಸುಂಧರೇ ॥೧೪॥

(ಶೋಕಂಗಳ ಒಂದು ಅಧ್ಯಾಯ ಅಥವಾ ಒಂದು ಚರಣವ ನಿತ್ಯವೂ ಪಠಣ ಮಾಡುವದರಿಂದ ಮನ್ವಂತರ ಕಾಲದ ಮನುಷ್ಯ ಜನ್ಮ ಹೊಂದುತ್ತ°.)

ಗೀತಾಯಾಃ ಶ್ಲೋಕದಶಕಂ ಸಪ್ತಪಂಚ ಚತುಷ್ಟಯಂ ।
ದ್ವೌತ್ರೀನೇಕಂ ತದರ್ಧಂವಾ ಶ್ಲೋಕಾನಾಂ ಯಃ ಪಠೇನ್ನರಃ ॥೧೫॥

ಚಂದ್ರಲೋಕಮವಾಪ್ನೋತಿ ವರ್ಷಾಣಾಮಯುತಂ ಧ್ರುವಂ ।
ಗೀತಾಪಾಠ ಸಮಾಯುಕ್ತೋ ಮೃತ್ಯೋಮಾನುಷತಾಂ ವ್ರಜೇತ್ ॥೧೬॥

(ಹತ್ತು-ಏಳು-ಐದು-ನಾಲ್ಕು, ಮೂರು-ಒಂದು ಅಲ್ಲದ್ರೆ ಅರ್ಧವನ್ನಾರು ಪಠಿಸಿಗೊಂಡು ಮರಣ ಹೊಂದಿದಂವ° ದೇವತ್ವವ ಪಡೆತ್ತ°)

ಗೀತಾಭ್ಯಾಸಂ ಪುನಃ ಕೃತ್ವಾ ಲಭತೇ ಮುಕ್ತಿಮುತ್ತಮಾಂ ।
ಗೀತೇತ್ಯುಚ್ಛಾರ ಸಂಯುಕ್ತೋ ಮ್ರಿಯಮಾಣೋಗತಿಂ ಲಭೇತ್ ॥೧೭॥

ಗೀತಾಭ್ಯಾಸಿಗೆ ಮುಕ್ತಿ ಸಿದ್ಧಿ. ಗೀತೆಯ ಪಠಿಸಿಗೊಂಡು ಸತ್ತವಂಗೆ ಸದ್ಗತಿ.)

ಗೀತಾರ್ಥ ಶ್ರವಣಾಸಕ್ತೋ ಮಾಹಾಪಾಪಯುತೋಪ್ತಿವಾ ।
ವೈಕುಂಠಂ ಸಮವಾಪ್ನೋತಿ ವಿಷ್ಣುನಾ ಸಹ ಮೋದತೇ ॥೧೮॥

(ಗೀತಾ ಪಠನಕಾರ° ಪಾಪಿಯಾಗಿದ್ದರೂ ಕೂಡ ವೈಕುಂಠಲ್ಲಿ ಮಹಾವಿಷ್ಣುವಿನ ಒಟ್ಟಿಂಗೆ ಸುಖಪಡವಲೆ ಎಡಿಗು.)

ಗೀತಾರ್ಥಂ ಧ್ಯಾಯತೇ ನಿತ್ಯಂ ಕೃತ್ವಾ ಕರ್ಮಾಣಿ ಭೂರಿಶಃ ।
ಜೀವನ್ಮುಕ್ತಸ್ಸವಿಜ್ಞೇಯೋ ದೇಹಾಂತೇ ಪರಮಂ ಪದಂ ॥೧೯॥

(ಗೀತೆಯ ಅರ್ಥವ ಅನುಸಂಧಾನ ಮಾಡುವಂವ° ಜೀವನ್ಮುಕ್ತನಾವುತ್ತ°)

ಗೀತಾಮಾಶ್ರಿತ್ಯ ಬಹವೋ ಭೂಭುಜೋ ಜನಕಾದಯಃ ।
ನಿರ್ಧೂತ ಕಲ್ಮಷಾ ಲೋಕೇ ಗೀತಾಮಾತಾಃ ಪರಂಪದಂ ॥೨೦॥

(ಜನಕ° ಮುಂತಾದ ರಾಜರ್ಷಿಗೊ ಗೀತಾಶ್ರಯಂದ ಪಾಪರಹಿತರಾಗಿ ಪರಮೋನ್ನತ ಪದವಿಯ ಪಡದವು.)

ಗೀತಾಯಾಃ ಪಠನಂ ಕೃತ್ವಾ ಮಾಹತ್ಮ್ಯಂ ನೈವ ಯಃ ಪಠೇತ್ ।
ವೃಥಾ ಪಾರೋ ಭವೇತ್ತಸ್ಯ ಶ್ರಮಏವ ಹ್ಯುದಾಹುತಃ ॥೨೧॥

(ಗೀತಾ ಪಾರಾಯಣ ಮಾಡಿಕ್ಕಿ ಅದರ ಮಹಾತ್ಮೆಯ ಪಠಿಸದ್ದರೆ ಅವನ ಶ್ರಮವೆಲ್ಲ ವ್ಯರ್ಥ.)

ಏತಾನ್ಮಾಹಾತ್ಮ್ಯ ಸಂಯುಕ್ತಂ ಗೀತಾಭ್ಯಾಸಂ ಕರೋತಿಯಃ ।
ಸತತ್ಫಲಂ ಮವಾಪ್ನೋತಿ ದುರ್ಲಭಾಂ ಗತಿಮಾಪ್ನುಯಾತ್ ॥೨೨॥

(ಈ ಮಹಾತ್ಮೆಯೊಟ್ಟಿಂಗೆ ಗೀತೆಯ ಪಾರಾಯಣ ಮಾಡುವಂವ ಮೇಗೆ ಹೇಳಿ ಫಲಂಗಳ ಪಡೆತ್ತ°.)

ಸೂತ ಉವಾಚ-

ಮಹಾತ್ಮ್ಯಮೇತದ್ಗೀತಾಯಾಃ ಮಯಾ ಪ್ರೋಕ್ತಂ ಸನಾತನಂ ।
ಗೀತಾಂಚೇತ ಪಠೇದ್ಯಸ್ತು ಯದುಕ್ತಂ ತತ್ಪಲಂ ಲಭೇತ್ ॥೨೩॥

(ಸೂತ ಪುರಾಣಿಕ° ಹೇಳಿದ° – ಸನಾತನವಾದ ಈ ಗೀತಾ ಮಹಾತ್ಮೆಯ ಗೀತಾಪಾರಾಯಣದ ನಂತ್ರ ಪಠಿಸುವಂವ° ಯಥೋಕ್ತಫಲವ ಪಡೆತ್ತ°.)

[ಹೀಂಗೆ ಶ್ರೀ ವರಾಹಪುರಾಣಲ್ಲಿಪ್ಪ ಭೂಮಿದೇವಿಗೆ ವಿಷ್ಣುವಿಂದ ಹೇಳಲ್ಪಟ್ಟ ಗೀತಾ ಮಾಹಾತ್ಮ್ಯವು ಮುಗುದತ್ತು.]

~~~

ಶ್ರೀ ಗುರುಸ್ತೋತ್ರಂ

 

ಓಂ ಓಂ ಓಂ

ಓಂ ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥೦೧॥

(ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿ ಸ್ವರೂಪನೂ ಸಾಕ್ಷಾತ್ ಪರಬ್ರಹ್ಮನೂ ಆದ ಶ್ರೀಗುರುವಿಂಗೆ ನಮಸ್ಕಾರ.)

ಓಂ ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥೦೨॥

(ಸರ್ವವ್ಯಾಪಕನೂ ಸರ್ವ ತತ್ವಬೋಧಕನೂ ಆದ ಶ್ರೀಗುರುವಿಂಗೆ ನಮಸ್ಕಾರ.)

ಓಂ ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಯಮ್ ।
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಮ್
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ॥೦೩॥

(ಸಚ್ಚಿದಾನಂದ ಸ್ವರೂಪನೂ, ತತ್ತ್ವಮಸಿವಾಕ್ಯಾರ್ಥಭೂತನೂ, ಬುದ್ಧಿಸಾಕ್ಷಿಯೂ, ಗುಣಾತೀತನೂ ಆದ ಶ್ರೀಗುರುವಿಂಗೆ ನಮಸ್ಕಾರ.)

~~~

ಶಾಂತಿಮಂತ್ರಃ –

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇಣ ಮಾರ್ಗೇಣ ಮಹೀಂ ಮಹೀಶಾಃ ।
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ॥

(ದೇಶಲ್ಲಿ ರಾಜರುಗೊ ನ್ಯಾಯನೀತಿಂದ ರಾಜ್ಯಭಾರಮಾಡುತ್ತಿರಲಿ,  ಎಲ್ಲ ಪ್ರಜಗೊ ಕ್ಷೇಮಂದ ಇರಲಿ, ದೇಶದ ಸಂಪತ್ತುಗಳಾದ ಗೋವುಗೊಕ್ಕೂ, ಬ್ರಾಹ್ಮಣರಿಂಗೂ ಶುಭವಾಗಿರಲಿ, ಸಮಸ್ತ ಲೋಕವಾಸಿಗೊ ಸುಖಿಗಳಾಗಲಿ.)

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ ।
ದೇಶೋsಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ॥

(ಕಾಲಕಾಲಕ್ಕೆ ಮಳೆಸುರುದು ಭೂಮಿ ಸಸ್ಯಶ್ಯಾಮಲೆಯಾಗಿ ಶೋಭಿಸಲಿ. ಈ ದೇಶದೆಲ್ಲಿಯೂ ಕ್ಷೋಭೆ ಇಲ್ಲದ್ದೆ ಜನಂಗೊ ಸಜ್ಜನರಾಗಿ ನಿರ್ಭೀತಿಂದ ಇಪ್ಪಂತಾಗಲಿ.)

ಅಪುತ್ರಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ ।
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಂ ॥

(ಮಕ್ಕೊ ಇಲ್ಲದ್ದವಕ್ಕೆ ಮಕ್ಕಳಾಗಲಿ, ಮಕ್ಕೊಗೆ ಮತ್ತೆ ಮಕ್ಕೊ ಉಂಟಾಗಲಿ. ನಿರ್ಧನರು ಧನವಂತರಾಗಿ ನೂರು ವರ್ಷ ಬಾಳುವಂತಾಗಲಿ.)

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಭಾಗ್ಭವೇತ್ ॥

(ಸಮಸ್ತ ಜನಂಗೊ ಸುಖಿಗಳಾಗಿ, ಸಮಸ್ತರೂ ಅನಾಯಾಸರಾಗಿ, ಯಾವುದೇ ದುಃಖಭಾಜನರಾಗದ್ದೆ ಎಲ್ಲೋರು  ಕ್ಷೇಮವಾಗಿರಲಿ.)

ಗಾವೋಮೇ ಪುರತಃ ಸಂತು ಗಾವೋಮೇ ಸಂತು ಪೃಷ್ಠತಃ ।
ಗಾವೋಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಂ ॥

(ಎನ್ನ ಮುಂದೆ ಹಿಂದೆ ಮತ್ತೆ ಹೃದಯಲ್ಲಿಯೂ ಗೋಮಾತೆ ನೆಲೆಸಿ ಗೋವುಗಳ ಮಧ್ಯಲ್ಲೇ ಎನ್ನ ಉಸಿರು ವಾಸವಾಗಲಿ.)

ಓಂ ಅಸತೋ ಮಾ ಸದ್ಗಮಯ । ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ । ಓಂ ಶಾಂತಿಃ ಶಾಂತಿಃ ಶಾಂತಿಃ ॥೦೪॥

(ಹೇ ಪರಮಾತ್ಮ, ಅಸತ್ಯಂದ ಸತ್ಯಕ್ಕೆ , ಅಂಧಕಾರಂದ ಪ್ರಕಾಶಕ್ಕೆ, ಮೃತ್ಯುವಿಂದ ಅಮೃತತ್ವಕ್ಕೆ ಎನ್ನ ಕರಕ್ಕೊಂಡು ಹೋಗು. ಎಲ್ಲ ದಿಕ್ಕೆ ಶಾಂತಿಯಾಗಲಿ.)

ಓಂ ಸಹ ನಾವವತು  ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥ ಓಂ ಶಾಂತಿಃ ಶಾಂತಿಃ ಶಾಂತಿಃ ॥೦೫॥

(ನಮ್ಮಿಬ್ಬರನ್ನೂ ತೇಜೋವೀರ್ಯಸಹಾನುಭೂತಿಗಳಿಂದ ಅಭಿವೃದ್ಧಿಯಪ್ಪಂತೆ ಮಾಡು. ಎಲ್ಲ ದಿಕ್ಕೆ ಶಾಂತಿಯಾಗಲಿ.)

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥ ಓಂ ಶಾಂತಿಃ ಶಾಂತಿಃ ಶಾಂತಿಃ ॥೦೬॥

(ಅದೂ, ಇದೂ, ಸೃಷ್ಟಿಯೂ, ಅವಶಿಷ್ಟವೂ ಪೂರ್ಣ ಪರಬ್ರಹ್ಮವೇ ಆಗಿದ್ದು. ಎಲ್ಲ ದಿಕ್ಕೆ ಶಾಂತಿಯಾಗಲಿ.)

 

ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ।
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣೇತಿ ಸಮರ್ಪಯಾಮಿ ॥ ಓಂ ತತ್ಸತ್॥  ಓಂ ನಮೋ ನಾರಾಯಣಾಯ ॥೦೭॥

(ಪ್ರಕೃತಿರೀತ್ಯಾ ಕಾಯಾವಾಚಾಮನಸಾ ಮಾಡಿದ ಈ ಇಡೀ ಕರ್ಮವ ಪರಬ್ರಹ್ಮನಾದ ನಿನಗೆ ನಾರಾಯಣ ಹೇದು ಅರ್ಪಿಸುತ್ತೆ. ಅದುವೇ ಸತ್ಯ. ನಾರಾಯಣ!, ನಿನಗೆ ನಮಸ್ಕಾರ.)

ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂತು ಯದ್ಭವೇತ್ ।
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಸ್ತುತೇ ॥

॥ಹರಿಃ ಓಂ ॥

(ಇಲ್ಲಿ ಹೇಳಿದ ವಿಷಯಂಗಳಲ್ಲಿ ಯಾವುದೇ ಪದಲೋಪವೋ ಅಕ್ಷರಲೋಪವೋ ಮಾತ್ರಾಲೋಪವೋ ಆಗಿದ್ದಲ್ಲಿ ಅದೆಲ್ಲವನ್ನೂ ಕ್ಷಮಿಸೆಕು ಹೇದು ದೇವದೋತ್ತಮ ನಾರಾಯಣನಾದ ನಿನಗೆ ನಮಸ್ಕರಿಸುತ್ತೆ.)

॥ ಶ್ರೀಕೃಷ್ಣಾರ್ಪಣಮಸ್ತು ॥ ಓಂ ತತ್ಸತ್ ॥

॥ ಹರೇ ರಾಮ ॥

~~~~

 

 

ಚೆನ್ನೈ ಬಾವ°

   

You may also like...

5 Responses

 1. ತೆಕ್ಕುಂಜ ಕುಮಾರ ಮಾವ° says:

  ಪರಮ ಪಾವನವದ ಶ್ರೀ ಮದ್ಭಗವದ್ಗೀತೆಯ ಸಾರವ ನಮ್ಮ ಅಬ್ಬೆ ಭಾಷೆಲಿ ಶಬ್ದಾರ್ಥ -ಅನುವಾದ ಸಹಿತವಾಗಿ ನಿರಂತರವಾಗಿ ಪ್ರವಚನ ಮಾಡಿದ ಚೆನ್ನೈ ಭಾವನ ಸಾಹಸಕ್ಕೆ ನಮೊನ್ನಮಃ. ಆನು ಪ್ರತೀ ವಾರವೂ ಓದಿದ್ದಿಲೆ, ಎಡಿಗಾಯ್ದಿಲೆ. ಆದರೆ ಚೆನ್ನೈಭಾವ ಒಂದು ವಾರವೂ ಬಿಡದ್ದೆ ಬರದ್ದವು. ಇದು “ಓದಿ ಆತು” ಹೇಳಿ ಮುಗುಶುವ ವಿಷಯ ಅಲ್ಲ. ಹಾಂಗಾಗಿ ಇದರ ಸಂಪಾದಿಸಿ ಪುಸ್ತಕ ರೂಪಲ್ಲಿ ಪ್ರಕಟ ಆಗಲಿ ಹೇಳಿ ಆಶಿಸುತ್ತೆ. ನಮ್ಮ ಬಂಧುಗೊಕ್ಕೆ ಸಂಗ್ರಹ ಯೋಗ್ಯ ಗ್ರಂಥವಾಗಲಿ.

 2. ಪ್ರಕಟ ಯೋಗ್ಯ ಬರಹ. ಚೆನ್ನೈ ಭಾವನ ಶ್ರದ್ಧೆಗೆ ನಮೋನ್ನಮಃ

 3. ರಘುಮುಳಿಯ says:

  ಚೆನ್ನೈಭಾವನ ನಿರ೦ತರ ಪ್ರಯತ್ನಕ್ಕೆ ಕೈಮುಗಿತ್ತಾ ಇದ್ದೆ.
  ಕರ್ಮಯೋಗಕ್ಕೆ ನಮ್ಮ ಹತ್ತರೆ ಉದಾಹರಣೆ ಭಾವನ ಈ ಪ್ರಯತ್ನ.ನಮ್ಮ ಭಾಷೆಯ ಸಾಹಿತ್ಯಭ೦ಡಾರಕ್ಕೆ ಪುಸ್ತಕರೂಪಲ್ಲಿ ಸೇರ್ಪಡೆ ಆಗಲಿ,ಆ ಪ್ರಯತ್ನ ನಾವು ಮಾಡುವ.ಅಭಿನ೦ದನೆಗೊ.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಚೆನ್ನೈ ಭಾವಂಗೆ ಅವರ ಸಾಹಸಕ್ಕೆ ಅವರ ಹಿಂದೆ ಇಪ್ಪ ಶ್ರೀಕೃಷ್ಣದೇವರಿಂಗೆ ನಮೋ ನಮಃ .
  ಈ ಗ್ರಂಥವ ಪುಸ್ತಕರೂಪಲ್ಲಿ ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನ ಹೆರತರೆಕ್ಕು ಹೇಳಿ ಕೇಳಿಕೊಳ್ತೆ.

 5. ಭಾಗ್ಯಲಕ್ಶ್ಮಿ says:

  ಸುರುವಾಣ ಕೆಲವು ಅಧ್ಯಾಯ೦ಗೊ, ನೆಡು ನೆಡುಕೆ ಕೆಲವು ಓದಿದ್ದೆ. ಅನುಪತ್ಯ೦ಗೊ ಕಳುದ ಮತ್ತೆ ಏಕಾಗ್ರತೆ೦ದ ಕಡೆಯಾಣ ಅಧ್ಯಾಯ ಓದೆಕ್ಕು ಹೇಳಿ ಗ್ರೇಶಿತ್ತಿದ್ದೆ.ಓದುಲೇಳಿ ಬಪ್ಪಗ ಗೊ೦ತಾತು ಎನ್ನ ” ಸ೦ಕಲ್ಪಲ್ಲೇ ಪುಣ್ಯ ಕಾಲ ಕಳುದತ್ತು” ಹೇಳಿ.
  ಟಿ.ಕೆ ಮಾವ ಹೇಳಿದಾ೦ಗೆ ಗುರುವಾರ ತಪ್ಪದ್ದೆ ಭಗವದ್ ಗೀಥೆಯ ಹಾಯ್ಕೊ೦ಡಿದ್ದ , ಶುಕ್ರವಾರ ತಪ್ಪದ್ದೆ ಶುದ್ದಿ ಹೇಳುವ ಒಪ್ಪಣ್ನ ನ ಅ೦ಕಣ೦ಗಳ ಸಮಯ ಪಾಲನೆ ನಿಜಕ್ಕೂ ಮೆಚ್ಹೆಕ್ಕಾದ್ದೆ.ಅದರೆಡಕ್ಕಿಲಿ ಬಹುಮಾನ ಬ೦ದ ಸಾಹಿತ್ಯ೦ಗಳ ಹಾಯ್ಕೊ೦ಡಿತ್ತ ಸ೦ಪಾದಕರ ಶ್ರಮ.
  ಬರವ ಅಧ್ಯಾಯ೦ಗಳ ಸ೦ಖೆ ಏರಿಗೊ೦ಡು ಹೋದ ಹಾ೦ಗೆ ಚೆನ್ನೈ ಭಾವ ಬರವಣಿಗೆಯ ಮೇಲೂ ,ವಿಷಯದ ಮೇಲೂ ಹಿಡಿತ ಸಾಧಿಸಿದಾ೦ಗೆ ಎನಗನಿಸಿಗೊ೦ಡಿತ್ತು.ಆನಿದರ ಬರದಪ್ಪಗ ಶತಾವಧಾನಿಗೊ ಹೇಳಿದ ಒ೦ದು ಮಾತು ನೆನಪ್ಪವುತ್ತು. ”ಗಜಕಡ್ಡಿ ಪರ್ವತದಸ್ಟು ಎತ್ತರ ಇಲ್ಲೆ. ಆದರೆ ಅದರಲ್ಲಿ ಪರ್ವತದ ಎತ್ತರವ ಅಳವಲೆ ಆವುತ್ತು” ಹೇಳಿ. ಹಾ೦ಗೆ, ಎನಗೆ ಪರ್ವತದಸ್ಟು(ಚೆನ್ನೈ ಭಾವ) ಜ್ನಾನ ಇದ್ದು ಹೇಳಿದ್ದಲ್ಲ.ಓದಿದ ಆಧಾರಲ್ಲಿ ; ಎನ್ನ ದೃಸ್ಟಿಕೋನ೦ದ ಹೇಳಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *