ಭಾಗ 07 : ನಾಮ ಕರಣ : ಹದಿನಾರು ಸಂಸ್ಕಾರಂಗೊ

October 13, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಯುಷ್ಯ ವೃದ್ದಿಯಾಗಿ ವ್ಯವಹಾರ ಸರಿಯಾಗಿ ನಡೆಕು ಹೇಳ್ವ ಉದ್ದೇಶ ನಾಮಕರಣ. ನಿತ್ಯ ವ್ಯವಹಾರಲ್ಲಿ ಸುಲಭಕ್ಕೆ ಗುರ್ತ ಹಿಡಿವಲೂ ನಾಮ ಕರಣ ಅಗತ್ಯ. ಜನ್ಮದ ಹನ್ನೆರಡನೇ ವಾ ಹದಿಮೂರನೇ ದಿನ ಮಾಡೆಕ್ಕಪ್ಪ ಈ ವಿಧಿಯ ಮುಂದೆ ಬಾರ್ಸ (ಅನ್ನಪ್ರಾಶನ)ದ ಒಟ್ಟಿಂಗೆ ಮಾಡಿಯೊಂಡು ಬತ್ತು ನಮ್ಮಲ್ಲಿ. ಮಗುವಿನ ತೊಟ್ಟಿಲಿಂಗೆ (ಪಾಲಾಖಾರೋಹಣ) ಹಾಕುವದೂ ಅದೇ ದಿನನಲ್ಲಿ ಮಾಡುವದು (12 ವಾ  13ನೇ ದಿನ).

ಈ ದಿನ ‘ಬೀಜ ಮತ್ತು ಗರ್ಭಗಳಿಂದ ಈ ಎನ್ನ ಬಾಲಕನ ಮೇಲಾದ ಪಾಪಂಗೋ ಪರಿಮಾರ್ಜನೆಗೊಂಡು, ಆಯುಷ್ಯ ವೃದ್ಧಿಯಾಗಿ, ಇತರ ವ್ಯವಹಾರಂಗಳೂ ಸಿದ್ದಿಯಾಗಲಿ ಹಾಂಗೂ ಶ್ರೀ ಪರಮೇಶ್ವರ ಪ್ರೀತಿಗಾಗಿ ನಿತ್ಯ ವ್ಯವಹಾರಲ್ಲಿ ಗುರುತಿಸುವದಕ್ಕಾಗಿ ಈ ನಾಮಕರಣವ ಮಾಡುತ್ತೆ’ ಹೇಳಿ ಸಂಕಲ್ಪ, ಮತ್ತು ಇದರ ಅಂಗವಾಗಿ ಗಣಪತಿ ಪೂಜನ, ಪುಣ್ಯಾಹ ವಾಚನ, ನಾಂದಿ ಶ್ರಾದ್ಧ ಕ್ರಮ.

ಅಜ್ಜನ ಹೆಸರನ್ನೇ ಅಥವಾ ಅಜ್ಜನ ಹೆಸರು ನೆನಪಿಸುವ ಇನ್ನೊಂದು ಹೆಸರು ಇರಿಸುವ ಕ್ರಮ ಮದಲಿಂಗೆ ಇತ್ತಾದರೂ ಈಗಾಣ ಫ್ಯಾಶನ್ ಕಾಲಲ್ಲಿ ದೂರ ಆವ್ತಾ ಇದ್ದು ಬಹುತೇಕ. ಬಾಲಕಂಗೆ ಹೆಸರು ಇರಿಸುವಾಗ ಹೆಸರಿನ ಪ್ರಥಮ ಅಕ್ಷರವು ಘೋಷ (ಮೃದುವರ್ಣ), ಅರ್ಥಾತ್, ಕಕಾರಾದಿ  ಪಂಚವರ್ಗಂಗಳ ಪ್ರಾರಂಭದ ಎರಡೆರಡು ವರ್ಣಂಗಳ ಬಿಟ್ಟು ಮಿಕ್ಕ ಗ ಘ ಞ ಜ ಝ ಙ ಡ ಢ ಣ ಡ ದ ಧ ನ ಬ ಭ ಮ ಮತ್ತು ಯ ರ ಲ ವ ಈ ಹತ್ತೊಂಬತ್ತು ವರ್ಣಲ್ಲಿ ಇರೆಕು ಹೇಳಿ ಲೆಕ್ಕ. ಕಕಾರಾದಿ ಎರಡೆರಡು ವರ್ಣ ಹೇಳಿರೆ — ಕ ಖ ಚ ಛ ಟ ಠ ತ ಥ ಮತ್ತು ಪ ಫ — ಈ ವರ್ಣಂಗೊ ಪೃಥ್ವಿ ಮತ್ತು ಆಪತತ್ವ ಪ್ರಧಾನವಾಗಿದ್ದು ತಮೋಗುಣ ಪ್ರಧಾನವಾದ್ದು, ಹೆಸರಿನ ಪ್ರಥಮ ಅಕ್ಷರ ಅಪ್ಪಲಾಗಡ. (ಅಧ್ಯಾತ್ಮ ಶಾಸ್ತ್ರ).

ಅಂತ್ಯದ ಅಕ್ಷರವು ದೀರ್ಘವಾದದ್ದು ಅಥವಾ ವಿಸರ್ಗಯುಕ್ತ (ಒತ್ತಕ್ಷರ) ಇಪ್ಪದ್ದು ಆಯೆಕ್ಕು. ಹ್ರಸ್ವ ಅಕ್ಷರಂಗೊ ಶಕ್ತಿ ಪ್ರಧಾನವಾಗಿಪ್ಪದು, ಅಂತ್ಯದ ಅಕ್ಷರವು ದೀರ್ಘ ಅಕ್ಷರಂಗೊ ಮತ್ತು ಒತ್ತಕ್ಷರಂಗೊ  (ವಿಸರ್ಗ) ಇಪ್ಪ ಹೆಸರುಗೋ ಶಿವ ಪ್ರಧಾನವಾದದ್ದು. ಶಿವತತ್ವದೊಂದಿಂಗೆ ಏಕರೂಪ ಆಗುವಂತದ್ದೆ ಅಧ್ಯಾತ್ಮ ಉದ್ದೇಶವಾದ್ದರಿಂದ ಈ ನಿಯಮಡ.

ಬಾಲಕನ ಹೆಸರು ಎರಡು ವಾ ನಾಕು ಹೀಂಗೆ ಅಕ್ಷರ ಇಪ್ಪದ್ದಾಗಿರೆಕ್ಕು. ಬಾಲಕಿಯ ಹೆಸರುಗೋ ಮೂರು ಐದು ಏಳು ಹೀಂಗೆ ಬೆಸ ಸಂಖ್ಯೆಲಿ ಇಪ್ಪದ್ದಾಯೇಕ್ಕಡ. ಬೆಸ ಸಂಖ್ಯೆಗೋ ಶಕ್ತಿ ಪ್ರಧಾನ. ಸಮ ಸಂಖ್ಯೆ ಶಿವ ಪ್ರಧಾನ ತತ್ವಡ.

ಸ್ತ್ರೀಯರ ಹೆಸರಿನ ಮೊದಲನೇ ಅಕ್ಷರ ಒತ್ತಕ್ಷರ ಇಪ್ಪಲಾಗಡ. ಮೊದಲ ಅಕ್ಷರ ಒತ್ತಕ್ಷರ ಆಗಿದ್ದಲ್ಲಿ ಅದು ಶಕ್ತಿಗೆ ವಿರುದ್ಧ ಆವ್ತಡ.

ಮಾಣಿ ಕೀರ್ತಿವಂತ ಅಯೆಕ್ಕಪ್ಪ ಇಚ್ಛೆ ಇದ್ದರೆ ಎರಡಕ್ಷರ ಹೆಸರುಗೋ ಅತೀ ಉತ್ತಮಡ.

ಬ್ರಹ್ಮವರ್ಚಸ್ಸು, ಅಧ್ಯಯನ, ಆಚಾರ ಇವುಗಳ ಸಮೃದ್ಧಿಗೆ ನಾಕು ಅಕ್ಷರ ಇಪ್ಪ ಹೆಸರು ಉತ್ತಮಡ. ನಾಲ್ಕು ಅಕ್ಷರ ಧರ್ಮ ಅರ್ಥ ಕಾಮ ಮೋಕ್ಷ ಈ ಪುರುಷಾರ್ಥ ಪ್ರತೀಕಡ.

ಬ್ರಾಹ್ಮಣನ ಹೆಸರು ಮಂಗಳ ಸೂಚಕ, ಕ್ಷತ್ರಿಯನ ಹೆಸರು ಬಲ ಸೂಚಕ, ವೈಶ್ಯನ ಹೆಸರು ಧನಸೂಚಕ ಮತ್ತು ಶೂದ್ರನ ಹೆಸರು ಜಿಗುಪ್ಸೆ ವ್ಯಕ್ತ ಪಡಿಸುವಂತದ್ದಾಗಿರೆಕ್ಕು ಹೇಳಿ ಮನುಸ್ಮೃತಿಲಿ ಇದ್ದಡ.

ಬ್ರಾಹ್ಮಣರ ಹೆಸರಿನ ನಂತರ `ಶರ್ಮಾ’ ಹೇಳಿಯೂ, ಕ್ಷತ್ರಿಯರ ಹೆಸರಿನ ಹೆಸರಿನ ನಂತರ `ವರ್ಮಾ’ ಹೇಳಿಯೂ, ವೈಶ್ಯರ ಹೆಸರಿನ ಹೆಸರಿನ ಕೊನೆಲಿ `ಗುಪ್ತ’ ಹೇಳಿಯೂ, ಶೂದ್ರರ ಹೆಸರಿನ ಅಂತ್ಯಲ್ಲಿ `ದಾಸ’ ಹೇಳಿಯೂ ಸೇರಿಸಿ ಹೆಸರು ಬರವ ಪದ್ಧತಿ. ಈ ಮೂಲಕ ಹೆಸರಿಂದಲೇ ವ್ಯಕ್ತಿ ಯಾವ ವರ್ಣದವ ಹೇಳಿ ತಿಳಿವಲೆ  ಸಾಧ್ಯ

ಯಾವ ನಕ್ಷತ್ರದಂದು ಶಿಶುವಿನ ಜನನ ಆಯ್ದೋ ಅದನ್ನಾಧರಿಸಿ ನಕ್ಷತ್ರ ನಾಮವು, ಯಾವ ಮಾಸಲ್ಲಿ ಹುಟ್ಟಿದ್ದೋ ಅದರ ಆಧರಿಸಿ ಮಾಸ ನಾಮವೂ, ಕುಲದೇವತೆಂದ ಇರಿಸಿದ ಹೆಸರು ಕುಲದೇವತಾ ನಾಮವೂ ಮತ್ತು ವ್ಯವಹಾರಿಕ ನಾಮ ಹೇಳಿ ಹೀಂಗೆ ಹೆಸರಿಲ್ಲಿ ನಾಕು ಬಗೆ. ನಾಮಕರಣ ವೈದಿಕ ಕ್ರಿಯೆಲಿ ಈ ನಾಕು ಹೆಸರು ಮಡುಗುವದು ನಡವಳಿಕೆಲಿ ಈಗಳೂ ಇದ್ದು.

ನಕ್ಷತ್ರ ನಾಮ : ಅಶ್ವಿನಿಯಾದಿ ಇಪ್ಪತ್ತೇಳು ನಕ್ಷತ್ರಗಳ ಅಧಿಷ್ಠಾನ ದೇವತೆಗೊ ಇದ್ದವು ಹೇಳಿ ನಂಬಿಕೆ. ಆ ದೇವತೆಗಳನ್ನನುಸರಿಸಿ ಪುತ್ರಂಗೆ ನಕ್ಷತ್ರ ನಾಮ ಇರುಸೆಕ್ಕು ಹೇಳಿ ಶಂಖಲಿಖಿತರ ವಿಚಾರಧಾರೆ. ಉದಾಹರಣಗೆ ಅಶ್ವಿನಿ ನಕ್ಷತ್ರಲ್ಲಿ ಹುಟ್ಟಿದವಂಗೆ ಅಶ್ವಿನಿ ಕುಮಾರ. ಪ್ರತಿಯೊಂದು ನಕ್ಷತ್ರದ ನಾಲ್ಕು ಚರಣಗಳ ಪೈಕಿ ಒಂದೊಂದಕ್ಕೂ ಒಂದೊಂದು ಅಕ್ಷರ . ಉದಾಹರಣಗೆ ಅಶ್ವಿನಿ – ಚೂ ಚೀ ಚೋ ಲಾ , ಭರಣಿ – ಲೀ ಲೂ ಲೇ ಲೋ ಇತ್ಯಾದಿ . ಪುತ್ರ ಹುಟ್ಟಿದ ನಕ್ಷತ್ರ ಚರಣದ ಅಕ್ಷರಕ್ಕನುಸರಿಸಿ ಉದಾಹರಣಗೆ ಆ ಪುತ್ರನ ನಕ್ಷತ್ರ ನಾಮ ಅಶ್ವಿನಿ ಪ್ರಥಮ ಚರಣ  – ಚೂಡೇಶ್ವರ, ಭರಣಿ ಪ್ರಥಮ ಚರಣ ಲೀಲೇಶ್ವರ. ಭೌಧಾಯಾನರ ಅಭಿಮತಲ್ಲಿ ನಕ್ಷತ್ರ ನಾಮ ಗುಪ್ತವಾಗಿ ಇರೆಕು. ಅಬ್ಬೆ ಅಪ್ಪಂಗೆ ಮಾತ್ರ ತಿಳುದಿರೆಕು. ಜಾರಣ ಮಾರಣಾದಿ ಅಭಿಚಾರಕರ್ಮ ಮಾಡುವವರ ಕೈಗೆ ಈ ಹೆಸರು ಸಿಕ್ಕಲಾಗ ಹೇಳಿ ಉದ್ದೇಶ.

ಮಾಸನಾಮ : ಮಾಸ ನಾಮವ ಆಯಾ ಮಾಸದ ಅಧಿಷ್ಠಾನ ದೇವರ ಹೆಸರಿಂದ ನಿರ್ಧರಿಸುವದು. ಗಾರ್ಗ್ಯರ ಅಭಿಪ್ರಾಯದಂತೆ ಮಾರ್ಗಶಿರ ಮಾಸ ಪ್ರಥಮ ಹೇಳಿ ಪರಿಗಣಿಸಿ ಹನ್ನೆರಡು ಮಾಸಗಳ ಹನ್ನೆರಡು ದೇವರು – “ಕೃಷ್ಣೋನಂತೋsಚ್ಯುತಶ್ಚಕ್ರೀ ವೈಕುಂಠೋsಯಂ ಜನಾರ್ಧನಃ | ಉಪೇಂದ್ರೋ ಯಜ್ನಪುರುಷೋ ವಾಸುದೇವಸ್ತಥಾ ಹರಿಃ | ಯೋಗೀಶಃ ಪುಂಡರೀಕಾಕ್ಷೋ ಮಾಸನಾಮಾನ್ಯನುಕ್ರಮಾತ್” || ೧. ಕೃಷ್ಣ ೨ ಅನಂತ ೩ ಅಚ್ಯುತ ೪ ಚಕ್ರೀ ೫ ವೈಕುಂಠ ೬ ಜನಾರ್ಧನ ೭ ಉಪೇಂದ್ರ ೮ ಯಜ್ಞಪುರುಷ ೯ ವಾಸುದೇವ ೧೦ ಹರಿ ೧೧ ಯೋಗೀಶ ೧೨ ಪುಂಡರೀಕಾಕ್ಷ (ಎಲ್ಲ ಮಹಾವಿಷ್ಣು ಹೆಸರುಗೋ). ಹಾಂಗೇ ಕೂಸುಗೊಕ್ಕೆ – ಲಕ್ಷ್ಮೀ, ಶ್ರೀ, ಕಮಲಾ, ಭದ್ರಾ, ಸೀತಾ, ಸತ್ಯಾ, ರುಕ್ಮಿಣೀ, ಮಾಧವೀ, ಚೈತ್ರಿಕಾ, ಭೂಮಿ, ತುಳಸೀ, ಜಾಹ್ನವೀ. ಭಾರತಲ್ಲಿ ವೈಷ್ಣವ ಸಂಪ್ರದಾಯ ಸ್ಥಾಪನೆ ಆದ ನಂತರ ಈ ಸಂಪ್ರದಾಯ ಬಂದದ್ದಾಗಿರೇಕು ಹೇಳಿ ಒಂದು ತರ್ಕ.

ಕುಲದೇವತಾನಾಮ : ಈ ಹೆಸರಿನ ಕುಲದೇವರ / ದೇವಿಯ ಹೆಸರಿನ ಮುಂದೆ ದಾಸ ಶರಣ ಇತ್ಯಾದಿ ಉಪ ಪದ ಸೇರಿಸಿ ಹೆಸರಿಸುವ ಕ್ರಮ. ಕುಲದೇವತೆ / ಇಷ್ಟದೇವತೆ ಸ್ತ್ರೀಲಿಂಗವಾಗಿದ್ದರೆ ಆ ಸ್ತ್ರೀಲಿಂಗ  ನಾಮವನ್ನೇ ಪುತ್ರಂಗೂ ಮಡುಗುವ ಕ್ರಮ ಹಲವೆಡೆ ಇದ್ದು. ಆ ಸಂದರ್ಭಲ್ಲಿ ಸ್ತ್ರೀ ವಾಚಕ ನಾಮದ ಮುಂದೆ ಯಾವುದಾರು ಪುರುಷವಾಚಕ ಪದ ಸೇರಿಸಿ ಪುರುಷ ವಾಚಕ ಹೆಸರು ಬತ್ತಾಂಗೆ ಹೆಸರು ಮಡುಗುವದು. ಶಿವಾನಿಯ ಶಿವಾಜಿ, ಬನಶಂಕರಿ – ಬನಶಂಕರ, ಭವಾನಿ – ಭವಾನಿರಾವ್.

ಲೌಕಿಕ ನಾಮ : ಇದು ಸಾಮಾಜಿಕ ನಿತ್ಯ ವ್ಯವಹಾರಕ್ಕಾಗಿ ಲೌಕಕ ನಾಮ ಹೇಳಿ ಮಡುಗುವದು. ನಮ್ಮ ಅನುಕೂಲಕ್ಕೆ ಕುಲದ ಸಂಸ್ಕೃತಿ ಪ್ರತಿಷ್ಠೆ ಎತ್ತಿ ತೋರುಸುವಂತ ಹೆಸರು ಆಯೆಕ್ಕು. ಮಂಗಳಕಾರಕ, ಉಚ್ಚಾರಕ್ಕೂ, ಕೇಳಲೂ, ಅಪ್ಯಾಯಮಾನ,  ನೆಂಪು ಮಾಡಿಕ್ಕೊಂಬಲೂ ಸುಲಭ ಸಾಧ್ಯ ಹೀಂಗಿಪ್ಪ ರೀತಿಯ ಹೆಸರು ಆಯೆಕ್ಕು.

ಇನ್ನು ಜನ್ಮ ಸಮಯಲ್ಲಿ ಚಂದ್ರನು ಯಾವ ರಾಶಿಲಿ ಇರ್ತನೋ ಆ ರಾಶಿಯ ಮೊದಲನೇಯ ಅಕ್ಷರ ಹೆಸರಿನ ಮೊದಲ ಅಕ್ಷರ. ಉದಾ : ಜನ್ಮ ಸಮಯಲ್ಲಿ ಚಂದ್ರ ವೃಷಭ ರಾಶಿಲಿದ್ದರೆ ಮಡುಗುವ ಹೆಸರು ಮೊದಲ ಅಕ್ಷರ ಬ ವ ಉ – ಬ್ರಿಜೇಶ, ವಸಂತ, ಉಮೇಶ  ಇತ್ಯಾದಿ.

ಇತರ ಹೆಸರು ಮಡುಗುವ ಪದ್ಧತಿ : ಕುತ್ಸಿತ ನಾಮ : ಒಬ್ಬ ದಂಪತಿಯ ಪೂರ್ವ ಮಕ್ಕೊ ಬದುಕಿ ಉಳಿಯದ್ದಲ್ಲಿ (ಕ್ಷೀಣ ಆಯುಷ್ಯ), ಮತ್ತೆ ಹುಟ್ಟಿದ ಮಕ್ಕೊಗೆ ತುಚ್ಚತಾದರ್ಶಕ ಹೆಸರು ಮಡುಗುವ ಕ್ರಮ ಇದ್ದಡ (ಇದು ಸ್ಥಳೀಯ ನಂಬಿಕೆ ಅಷ್ಟೇ). ಇದರಿಂದ ಆಯುಷ್ಯ ವೃದ್ಧಿ ಆವ್ತು ಹೇಳಿ ನಂಬಿಕೆ. ಉದಾ ಗುಂಡಪ್ಪ , ಹುಚ್ಚಪ್ಪ ಇತ್ಯಾದಿ. ಬುಡಕಟ್ಟು ಜನಾಂಗದವು ಅವಿಪ್ಪ ಜಾಗೆಯ, ಅವರ ಪೂರ್ವಜರ ಹೆಸರ ಆಧರಿಸಿ ಮರ ಗಿಡದ / ಗುಡ್ಡದ / ಪರಿಸರದ ಇತ್ಯಾದಿ ಮೂಲವಾಗಿರಿಸಿ ಹೆಸರಿಸುವ ಕ್ರಮ ಇದ್ದಡ. ಉದಾ: ಸೋಮ, ಬುಧ, ಶುಕ್ರಯ್ಯ ಇತ್ಯಾದಿ.

ಜ್ಯೋತಿಷ್ಯ ಶಾಸ್ತ್ರಲ್ಲಿ ಹೆಸರು ಮಡುಗುತ್ತದರ ಬಗ್ಗೆ ಅತಿ ಆಳವಾದ ಚಿಂತನೆ ಇದ್ದು. ಸಾಧಾರಣಕ್ಕೆ ನವಗೆ ಅದು ಅರ್ಥ ಆಗ. ಅವರತ್ರೆ ಕೂದು ಚರ್ಚಿಸಿ ತಿಳ್ಕೊಂಬಲೆ ಸುಮಾರು ಇದ್ದು.

ಯಜಮಾನ ಮಗುವಿಂಗೆ ಹೆಸರು ಮಡುಗುವಾಗ ಪುರೋಹಿತರತ್ರೆ “ಹೇ ಪುರೋಹಿತರೇ, ಆನು ಮಗುವಿಂಗೆ ‘…’ ಈ ಹೆಸರು ಮಡುಗುತ್ತೆ” ಹೇಳಿ ಮೂರು ಸರ್ತಿ ಕೇಳಿಗೊಂಬಲೆ ಇದ್ದು. ಅದಕ್ಕೆ ಪುರೋಹಿತರು “ಆತು, ಇಂತ ಹೆಸರು ಮಡುಗು” ಹೇಳಿ ಅನುಮೋದಿಸುವದು ಮೂರು ಸರ್ತಿ. ತಾಮ್ರದ ತಟ್ಟೆಲಿ ಅಕ್ಕಿಯ ಹರಡಿ ಅದರ ಮೇಲೆ ಚಿನ್ನದ ಕಡ್ಡಿಲಿ (ಪ್ರಚಲಿತಲ್ಲಿ ಅರಶಿನ ಕಡ್ಡಿಲ್ಲಿ) ‘ಇಂತಹ ಕುಲದೇವತೆಯ ಭಕ್ತನು’ ಹೇಳಿ ಬರವದು. ಬಳಿಕ ನಕ್ಷತ್ರ ನಾಮ (ಗೌಪ್ಯವಾಗಿರಿಸೆಕ್ಕು)  ತದನಂತರ ಮಾಸ ನಾಮ, ವ್ಯವಹಾರ (ಲೌಕಿಕ) ನಾಮ  (ಮೇಗೆ ವಿವರಿಸಿದ್ದು) ಬರವದು. ಹೀಂಗೆ ಒಬ್ಬಂಗೆ ನಾಕು ಹೆಸರು. ಈ ಬರದ್ದರ ಮಗುವಿನ ಬಲದ ಕೆಮಿಲಿಯೂ ಎಡದ ಕೆಮಿಲಿಯೂ ಅಪ್ಪ ಸಣ್ಣಕ್ಕೆ ಉಚ್ಚರಿಸುವದು. ಇದು ಮಗುವಿಂಗೆ ಗ್ರಹಣ ಶಕ್ತಿಗೆ ಹೋಗಿ ಪ್ರಚೋದಿತ ಆವ್ತು.

ಮಾಣಿಗಳ ನಾಮಕರಣದ ಹಾಂಗೇ ಕೂಸುಗಳ ನಾಮಕರಣವೂ. ಆದರೆ ಮಂತ್ರ ಸಹಿತ ಇಲ್ಲೆ. ವೈದಿಕ ಕೆಲವು ಮಂತ್ರೋಚ್ಚಾರಣೆ ಕೂಸುಗಳ ಸ್ತ್ರೀ ಬೀಜ , ಜನನೇಂದ್ರಿಯಂಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತು (ಆಧ್ಯಾತ್ಮ ಶಾಸ್ತ್ರ). ಮಂತ್ರದ ಉಚ್ಚಾರಕ್ಕೆ ಬೇಕಪ್ಪ ಶಕ್ತಿ ಸ್ತ್ರೀ ಶರೀರಲ್ಲಿ ಇರ್ತಿಲ್ಲೆ ಹೇಳ್ವ ಕಾರಣಂದಲಾಗಿಯೇ, ಕೂಸುಗೋ (ಸ್ತ್ರೀಯರು) ಗಾಯತ್ರೀ ಮಂತ್ರ,  ಓಂಕಾರ ಹೇಳಲೆ ಆಗ ಹೇಳ್ವದು ರೂಢಿಲಿ ಬಂದದು.

ಈ ರೀತಿ ನಾಮಕರಣ ಸಂಸ್ಕಾರ.

ಇದಾ ಮಗುವಿನ ಲಾಯಕ್ಕ ನೋಡಿಕ್ಕೊಂಡಿರೇಕ್ಕು. ಒಂದು ಕಣ್ಣು ಇಲ್ಲಿಯೇ ಬೇಕು. ಹೆರ ಎಲ್ಲಾ ಕರಕೊಂಡು ಹೋಪಲೆ ಇಲ್ಲೆ ಈಗ.

ಅದು ಬಾಕಿ ಆನು ಮತ್ತೆ ಬಪ್ಪ ವಾರ ಹೇಳ್ವೆ ಆತೋ. ಏ.

|| ಹರೇ ರಾಮ ||

( ಮುಂದುವರಿತ್ತು. )

ಕಳುದ ವಾರ ಓದಿದ್ದು : ಭಾಗ 06 : ಜಾತಕರ್ಮ :  http://oppanna.com/lekhana/samskara-lekhana/%e0%b2%ad%e0%b2%be%e0%b2%97-06-%e0%b2%9c%e0%b2%be%e0%b2%a4%e0%b2%95%e0%b2%b0%e0%b3%8d%e0%b2%ae-%e0%b2%b9%e0%b2%a6%e0%b2%bf%e0%b2%a8%e0%b2%be%e0%b2%b0%e0%b3%81-%e0%b2%b8%e0%b2%82%e0%b2%b8%e0%b3%8d

ಭಾಗ 07 : ನಾಮ ಕರಣ : ಹದಿನಾರು ಸಂಸ್ಕಾರಂಗೊ , 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. Shama Prasad
  Shama Prasad

  ಈ ಎಲ್ಲ ವಿಶಯಂಗಳ ವಿವರವಾಗಿ ತಿಳಿಸಿದ್ದಕ್ಕಾಗಿ ತುಂಬ ಧನ್ಯವಾದಂಗೊ ಭಾವಯ್ಯ. ಮೊದಲ ಒಪ್ಪ ನಮ್ಮದಿರಲಿ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶುದ್ದಿಯ ಓದಿ ಪ್ರೋತ್ಸಾಹದ ಮೊದಲ ಒಪ್ಪಕ್ಕೆ ಶಾಮಣ್ಣಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ತುಂಬ ಉಪಯುಕ್ತ ವಿಷಯ ಇದ್ದು. ಶಕ್ತಿ ಪ್ರಧಾನ, ಶಿವ ಪ್ರಧಾನ ಇಪ್ಪಅಕ್ಷರಂಅಗಳ ವಿಷಯ ಇದುವರೆಗೆ ಗೊಂತಿತ್ತಿಲೆ. ತಿಳಿಸಿದ್ದಕ್ಕೆ ಧನ್ಯವಾದ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಾವಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹೆಸರಿಲ್ಲಿ ಎಂತ ಇದ್ದು? ಹೇಳಿ ತಮಾಶೆ ಮಾಡ್ಲೆ ಇಲ್ಲೆ ಇನ್ನು.
  ಒಬ್ಬನ ಹೆಸರಿಲ್ಲಿ ಇಷ್ಟೆಲ್ಲಾ ಅಂಶಂಗೊ ಇದ್ದು (ಕ್ರಮ ಪ್ರಕಾರ ಹೆಸರು ಹಾಕಿರೆ)
  ಒಳ್ಳೆ ಮಾಹಿತಿ ಇಪ್ಪ ಲೇಖನ. ಧನ್ಯವಾದಂಗೊ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಚ್ಚಿಯ ಅಭಿಮಾನದ ಒಪ್ಪಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಮಂಗ್ಳೂರ ಮಾಣಿ

  :)
  ತುಂಬಾ ವಿಶಯ ತಿಳುಕ್ಕೊಂಬಲಾತು ಭಾವಾ.. ಧನ್ಯವಾದ…

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದ ಶುದ್ದಿಯ ಓದಿ ಒಪ್ಪ ಕೊಟ್ಟದಕ್ಕೆ. ಬಂದುಗೊಂಡಿರಿ. ಸಲಹೆ ಸೂಚನೆ, ಪೂರಕ ಶುದ್ದಿಗೊಕ್ಕೆ ಸದಾ ಸ್ವಾಗತ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  :)

  [Reply]

  VA:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  ಶ್ಯಾಮಣ್ಣ

  ಒಂದು ಒಕ್ಕಲಿನ ಕೆಲಸದ್ದಕ್ಕೆ ಒಂದು ಆಣು ಮಗ ಹುಟ್ಟಿತ್ತಡ. ಅದು ದನಿಗಳ ಹತ್ತರೆ ಹೋಗಿ ‘ಒಂಜಿ ಪುದರು ಪನ್ಲೆ ದನಿಕ್ಕುಳೆ’ ಹೇಳಿ ಕೇಳಿತ್ತಡ.
  ಅದಕ್ಕೆ ದಣಿಗ ಹೀಂಗೆ ಹೇಳಿದವಡ–
  ಸೋಮವಾರ ಹುಟ್ಟಿದ್ದರೆ ‘ ಚೋಮ’
  ಮಂಗಳವಾರ ಹುಟ್ಟಿದ್ದರೆ ‘ಅಂಗರ’
  ಬುದವಾರ ಹುಟ್ಟಿದ್ದರೆ ‘ಬೂದ’
  ಗುರುವಾರ ಹುಟ್ಟಿದ್ದರೆ ‘ ಗುರುವ”
  ಶುಕ್ರವಾರ ಹುಟ್ಟಿದ್ದರೆ ‘ತುಕ್ರ’
  ಶನಿವಾರ ಹುಟ್ಟಿದ್ದರೆ ‘ ಚನಿಯ’
  ಆದಿತ್ಯವಾರ ಹುಟ್ಟಿದ್ದರೆ ‘ಐತ್ತ’
  ಹೇಳಿ ಹೆಸರು ಮಡುಗು ಹೇಳಿದವಡ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೆಸರಲ್ಲೇನಿದೆ ಮಹಾ ಅಲ್ದೋ ಶ್ಯಾಮಣ್ಣ. ಅಂದರೂ ಹೆಸರಿಲ್ಲೇ ಇಪ್ಪದು ಸ್ವಾರಸ್ಯ ಅಲ್ದೋ. ಚೋಮಂದ ಐತನ ವರೇಂಗೆ ಇದ್ದ ನಿಂಗಳ ಒಪ್ಪ ನೋಡಿ ಖುಶೀ ಆತಿದಾ. ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಹೆಸರು ಮಡಗುತ್ತ ವಿಷಯಲ್ಲಿ ತುಂಬಾ ವಿಷಯಂಗಳ ತಿಳುಸಿ ಕೊಟ್ಟಿದ° ಚೆನ್ನೈ ಭಾವ. ಒಳ್ಳೆ ವಿಚಾರಂಗೊ ಇದ್ದ ಲೇಖನ. ಎನಗೆ

  ಈ ಸಮೆಲಿ ಒಂದು ಹಳೆ ವಿಚಾರ ನೆಂಪು ಆವ್ತು. ಒಂದು ಹತ್ತಿಪ್ಪತ್ತು ವರ್ಷ ಹಿಂದಾಣ ವಿಷಯ.

  ಎಂಗಳ ಬ್ಯಾಂಕಿಲ್ಲಿ ಸಾಲ ಹಿಂದೆ ಕಟ್ಟದ್ದ ಸಾಲಗಾರರ ಪಟ್ಟಿ ನೋಡ್ತಾ ಇದ್ದಿದ್ದೆ. ಏವದೋ ದಕ್ಷಿಣ ಕನ್ನಡದ ಬ್ರಾಂಚಿನದ್ದೇ. ತುಂಬಾ ಒಂದೇ ಹೆಸರುಗೊ ಇತ್ತು ಪಟ್ಟಿಲಿ. PANIYARA BALLI. ಸುಮಾರು ಜೆನಕ್ಕೆ ಇದೇ ಹೆಸರು !! ಆಶ್ಚರ್ಯ ಆತು. ಅದಕ್ಕೆ ಅರ್ಥ ಎಂತರ ಹೇಳ್ತದೂ ಗೊಂತಿಲ್ಲೆ. ಮತ್ತೆ, ಆನು ಮನಸ್ಸಿಲ್ಲೇ ಹೀಂಗೆ ಗ್ರೇಶಿದೆ. ಲೋನ್ ತೆಗವಗ, ನಿನ್ನ ಗೆಂಡನ ಹೆಸರು ಎಂತ ಹೇಳಿ ಕೇಳಿದ್ದಕ್ಕೆ, ಆ ಅನಕ್ಷರಸ್ಥ ಹೆಣ್ಣುಗೊ ತುಳುವಿಲ್ಲಿ ಪಣಿಯರೆ ಬಲ್ಲಿ (ಹೇಳ್ಲಾಗ!!) ಹೇಳಿ ಹೇಳಿದವಾಯ್ಕು. ಈ ಹಿಂದಿಯ ಆಫೀಸರು, ಅದರ ಸ್ಟೈಲ್ ಆಗಿ ಇಂಗ್ಳಿಷಿಲ್ಲಿ ಬರದತ್ತಾಯ್ಕು. ಎಂತ ಹೇಳ್ತಿ ? ಆಗಿಪ್ಪಲೂ ಸಾಕು ಅಲ್ಲದೊ ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬೊಳುಂಬು ಮಾವಂಗೆ ಧನ್ಯವಾದ. ‘ಪಣಿಯರ ಬಳ್ಳಿ’ ಬಹು ಸ್ವಾರಸ್ಯವಾಗಿತ್ತು.

  [Reply]

  VN:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ‘ಪಣಿಯರ ಬಳ್ಳಿ’ ಹೇಳ್ತ ಮನುಷ್ಯಂಗೆ ಎಷ್ಟು ಜೆನ ಹೆಂಡತಿಯಕ್ಕ ಇತ್ತಿದ್ದವೋ ಹೇಳಿ ಆ ಹಿಂದಿ ಆಫೀಸರಂಗೆ ಕಂಡಿಕ್ಕು… ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  :) ha ha ha:):):)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವದೊಡ್ಮನೆ ಭಾವದೀಪಿಕಾಪವನಜಮಾವಸಂಪಾದಕ°ಬಟ್ಟಮಾವ°ಅಕ್ಷರ°ಪೆರ್ಲದಣ್ಣಅಕ್ಷರದಣ್ಣತೆಕ್ಕುಂಜ ಕುಮಾರ ಮಾವ°ಉಡುಪುಮೂಲೆ ಅಪ್ಪಚ್ಚಿಶಾಂತತ್ತೆಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಕಜೆವಸಂತ°ಶರ್ಮಪ್ಪಚ್ಚಿವಸಂತರಾಜ್ ಹಳೆಮನೆಮಾಲಕ್ಕ°ಜಯಶ್ರೀ ನೀರಮೂಲೆಪೆಂಗಣ್ಣ°ಚೆನ್ನೈ ಬಾವ°vreddhiರಾಜಣ್ಣಯೇನಂಕೂಡ್ಳು ಅಣ್ಣವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ