ಭಾಗ 09 : ಉಪನಯನ : ಹದಿನಾರು ಸಂಸ್ಕಾರಂಗೊ

October 27, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದುವರೆಗೆ ಷೋಡಶ ಸಂಸ್ಕಾರಂಗಳಲ್ಲಿ ನಾವು ಓದಿದ್ದು ಮಗುವಿನ ಭ್ರೂಣ ಅವಸ್ಥೆಂದ, ಮತ್ತೆ ಮುಂದೆ ಜನಿಸಿ, ಬಳಿಕ ದೇಹೆಂದ್ರಿಯಂಗಳ ವಿಕಸನಕ್ಕೆ / ಬೆಳವಣಿಗೆಗೆ ಮಾಡುವಂತ ಸಂಸ್ಕಾರಂಗಳ. ಇಲ್ಲಿಂದ ಮುಂದಾಣ 5 ಸಂಸ್ಕಾರಂಗೊ ಮಗುವಿನ ಬಾಲ್ಯಾವಸ್ಥೆ ದಾಂಟಿ ಪ್ರಬುದ್ಧ ಅಪ್ಪನ್ನಾರ ಇಪ್ಪ ಬುದ್ಧಿ ವಿಕಸನ ಮತ್ತು ಅಧ್ಯಯನ ಸಂಬಂದೀ ವಿಷಯಂಗಳ — ಹೇಳಿರೆ., ಉಪನಯನ, ಮಹಾನಾಮ್ನೀ, ಮಹಾವ್ರತ, ಉಪನಿಷತ್ ವ್ರತ ಮತ್ತು ಗೋದಾನ ವ್ರತಗಳ ನೋಡುವೋ°.

ಉಪನಯನ ಎಂಬ ಪದಕ್ಕೆ ‘ಉಪ-ಸಮೀಪೇ-ನಯನಮ್’, ಹೇಳಿರೆ, ಗುರುವಿನ ಸಮೀಪಕ್ಕೆ ವಿದ್ಯಾಭ್ಯಾಸಕ್ಕೆ ಕರಕ್ಕೊಂಡು ಬಪ್ಪದು ಎಂದರ್ಥ. (ಈಗಾಣ ಶಾಲಗೆ ಸೇರುಸುವದು, ಅಡ್ಮಿಷನಿನ ಹಾಂಗೆ ಹೇಳಿ ಮಡಿಕ್ಕೊಂಬಲಕ್ಕು–ಆದರೆ ಇದರಲ್ಲಿ ಆಧ್ಯಾತ್ಮಿಕ ತತ್ತ್ವ ಇದ್ದು.). ಈ ಸಂಸ್ಕಾರಲ್ಲಿ ಅಧ್ಯಯನ, ವ್ರತ-ದೀಕ್ಷಾ ಚಿಹ್ನೆ ವಸ್ತ್ರ-ದಂಡ-ಅಜಿನ, ಮೇಖಲಾ, ಮೌಂಜೀ (ಮುಂಜಾ ಹುಲ್ಲಿನ ದಾರ) ಬಂಧನ, ಶಿಖಾ, ಯಜ್ಞೋಪವೀತ ಧಾರಣ, ಗುರುಸನ್ನಿಧಿ ಪ್ರಾಪ್ತಿ, ಗಾಯತ್ರೀ ಮಂತ್ರ ಉಪದೇಶ, ಸೂರ್ಯಾವೇಕ್ಷಣ, ಪ್ರಜಾಪತಿಗೆ ಸಮರ್ಪಣ ಮುಂತಾದ ವೈದಿಕ ಕಲಾಪಂಗೊ ಇದ್ದು.     ಮತ್ತೊಂದರ್ಥ — ಉಪ ಹೇಳಿರೆ ಸಮೀಪ , ನಯನ ಹೇಳಿರೆ ಕಣ್ಣು. ಈ ಜಗತ್ತಿನ ವಿಚಾರವಾಗಿ ನಾವು ತಿಳಿವ ಪ್ರತಿಯೊಂದು ವಿಚಾರ, ಜ್ಞಾನ ಎನಿಸುತ್ತು. ಕಣ್ಣಿನ ಮೂಲಕ ನೋಡಿ ತಿಳಿವದೂ ಒಂದು ಮುಖ್ಯ ಜ್ಞಾನ. ಈ ಕ್ರಮಲ್ಲಿ ಅರ್ಥೈಸಿದರೆ ಉಪನಯನ ಹೇಳಿರೆ ಜ್ಞಾನದ ಒಳಗಣ್ಣು ತೆರವದು ಹೇಳಿ ಅರ್ಥ.

“ಜನ್ಮನಾ ಜಾಯತೇ  ಜಂತು:
ಕರ್ಮಣಾ ಜಾಯತೇ ದ್ವಿಜಃ |
ವೇದಾಧ್ಯಯನತೋ ವಿಪ್ರಃ
ಬ್ರಹ್ಮವಿತ್ ಬ್ರಾಹ್ಮಣಃ ಸ್ಮೃತಃ”||

ಪ್ರತಿಯೊಬ್ಬ ವ್ಯಕ್ತಿಯೂ ಜನ್ಮ ಸಹಜವಾಗಿ ಪಶು ಬುದ್ಧಿಯುಳ್ಳವನಾಗಿದ್ದು, ಅಜ್ಞಾನದ ಅಂಶ ಅಡಕವಾಗಿಪ್ಪದರಿಂದ ಜಂತು/ ಶೂದ್ರ ಗುಣ ಆಗಿಪ್ಪವನಾಗಿರ್ತ.   ಆಯಾ ವಯಸ್ಸಿಂಗೆ ಯೋಗ್ಯ ಸಂಸ್ಕಾರವ ಮಾಡಿ ಜ್ಞಾನವ ಉಣಿಸಿಯಪ್ಪಗ ದ್ವಿಜ (ದ್ವಿಜ – ಎರಡನೇ ಜನ್ಮ ಹೇಳಿ ಅರ್ಥ) ಆವ್ತ. ಬ್ರಹ್ಮಚರ್ಯ ನಿಷ್ಠೆಲಿ ವೇದಾಧ್ಯಯನ ಮಾಡಿ  ಬ್ರಹ್ಮಜ್ಞಾನವ ಪಡೆದು ಬ್ರಾಹ್ಮಣ ಎಂಬ ಅನ್ವರ್ಥ ಸಾಧುಸಲೆ ಆವುತ್ತು.ಉಪನಯನ ಸಂಸ್ಕಾರ ಬ್ರಾಹ್ಮಣಂಗೆ ಎಂಟನೇ ವಯಸ್ಸಿನೊಳ, ಕ್ಷತ್ರಿಯಂಗೆ ಹನ್ನೊಂದು, ವೈಶ್ಯಂಗೆ ಹನ್ನೆರಡು ವಯಸ್ಸಿನೊಳ ಮಾಡುಸೆಕ್ಕು ಹೇಳಿ ಶಾಸ್ತ್ರ ವಚನ .

ಗರ್ಭಾಷ್ಟಮೇsಬ್ದೇ ಕುರ್ವೀತ ಬ್ರಾಹ್ಮಣಸ್ಯೋಪನಯನಮ್ | ಗರ್ಭಾದೇಕಾದಶೇ ರಾಜ್ಞಃ ಗರ್ಭಾತ್ತು ದ್ವಾದಶೇ ವಿಶಃ ||

ಆಷೋಡಶಾದ್ ಬ್ರಾಹ್ಮಣಸ್ಯ ಸಾವಿತ್ರೀ ನಾತಿವರ್ತತೇ | ಆದ್ವಾವಿಶಾತ್ ಕ್ಷತ್ರಬಂಧೋರಾಚತುರ್ವಿಂಶತೇರ್ವಿಶಃ ||

 

ಬ್ರಹ್ಮವರ್ಚಸಕಾಮಸ್ಯ ಕಾರ್ಯಂ ವಿಪ್ರಸ್ಯ ಪಂಚಮೇ | ರಾಜ್ಞೋ ಬಲಾರ್ಥಿನಃ ಷಷ್ಠೇ ವೈಶ್ಯಸ್ಯೇಹಾರ್ಥಿನೋsಷ್ಟಮೇ ||

ಬ್ರಾಹ್ಮಣಂಗೆ ಈಶ್ವರ ಪ್ರಾಪ್ತಿಗೆ, ಕ್ಷತ್ರಿಯಂಗೆ ಬಲ ಪ್ರಾಪ್ತಿಗೆ, ವೈಶ್ಯಂಗೆ ಧನ ಪ್ರಾಪ್ತಿಗೆ.

ಉಪನಯನ ಸಂಸ್ಕಾರ ವೇದಾಧಿಕಾರಿಗಳಾದ ಗುರು, ಶುಕ್ರ, ಮಂಗಳ, ಬುಧ ಇವರುಗಳ ಅನುಕೂಲ ಸ್ಥಿತಿ ಇಪ್ಪಗ ಮಾಡುಸುವದು. ಗುರುಬಲವಂತೂ ಬಹು ಪ್ರಾಮುಖ್ಯ. ಮಾಸಂಗಳ ಪೈಕಿ – ಚೈತ್ರ, ವೈಶಾಖ, ಜ್ಯೇಷ್ಠಾ, ಮಾಘ, ಫಾಲ್ಗುಣ, ಮಾಸಂಗಳೂ, ಶುಕ್ಲ ಪಕ್ಷವೂ, ಭಾನು, ಸೋಮ, ಬುಧ, ಗುರು, ಶುಕ್ರ ವಾರಂಗಳೂ, ಚತುರ್ಥಿ, ಸಪ್ತಮಿ, ನವಮಿ, ತ್ರಯೋದಶಿ, ಚತುರ್ದಶಿ, ತಿಥಿಗಳೂ, ಭರಣಿ, ಕೃತ್ತಿಕಾ, ಜ್ಯೇಷ್ಠಾ, ವಿಶಾಖಾ, ಮಘಾ ನಕ್ಷತ್ರಂಗಳೂ ಪ್ರಶಸ್ತ. ಜಗತ್ತಿನ ಸೃಸ್ಟಿ ಸ್ಥಿತಿ ಲಯಂಗಳಿಗೆ ಸಂಬಂಧಿಸಿದ ಸಮಸ್ತ ಮಾಹಿತಿಗಳ ತಿಳಿಸಿ ಕೊಡುವ ಮೂಲ ಜೀವಾತ್ಮನ ಉನ್ನತಿಗೆ ಮಾರ್ಗದರ್ಶನ ಮಾಡುವ ವೇದೋಪನಿಷತ್ತು ಅಧ್ಯಯನ ಮಾಡಿ ತಿಳುದುಕೊಂಬಲೆ ಉಪನಯನ ಸಂಸ್ಕಾರ ಮುಖ್ಯ ಅರ್ಹತೆ. ಉಪನಯನ ಶಬ್ದಲ್ಲಿ ‘ಉಪ’ ಮತ್ತು ‘ನಯನ’ ಈ ಎರಡು ಶಬ್ದಂಗೊ. ಉಪ ಹೇಳಿರೆ ಹತ್ತಿರ , ನಯನ ಹೇಳಿರೆ ಕರೆದೊಯ್ಯುವುದು. ಅರ್ಥಾತ್ ವೇದಾಧ್ಯಯನಕ್ಕೆ ಗುರುಗಳ ಬಳಿ ಕರೆದೊಯ್ದು ಜ್ಞಾನ ಬೆಳಕು ನೀಡಿ ಅಂತಃ ಚಕ್ಷುವಿಂದ ಪ್ರಪಂಚವ ಕಾಂಬದು. ಉಪನಯನ ಸಂಸ್ಕಾರವ ಪ್ರಾಚೀನ ಕಾಲಲ್ಲಿ, ಹೇಳಿರೆ., ಕ್ರಿ.ಶ. 7ನೇ ಶತಮಾನದವರೇಂಗೂ ಸ್ತ್ರೀ ಪುರುಷರಿಬ್ಬರಿಂಗೂ ಮಾಡಿಗೊಂಡಿತ್ತಿದ್ದವಡ. ಮುಂದೆ ಬಾಲ್ಯ ವಿವಾಹ ಪದ್ದತಿ ಬಳಕೆಗೆ ಬಂದಪ್ಪಗ ವಿವಾಹ ಸಂಸ್ಕಾರವೇ ಸಾಕು ಹೇಳಿ ಭಾವನೆಂದ ಸ್ತ್ರೀಯರಿಂಗೆ ಉಪನಯನ ಕ್ರಮ ನಿಂದತ್ತಡ. ಕಾಲಕ್ರಮಲ್ಲಿ ಸ್ತ್ರೀಯರ ಕೌಟುಂಬಿಕ ಹೊಣೆಗಾರಿಕೆ, ಶೌಚ, ಶ್ರಮವ ಗಮನಿಸಿ ವಿವಾಹ ಸಂಸ್ಕಾರವನ್ನೇ ಕೂಸುಗೊಕ್ಕೆ ಉಪನಯನ ಸಂಸ್ಕಾರದ ಸ್ಥಾನಲ್ಲಿ ಆಚರಿಸುವ ಕ್ರಮ ರೂಢಿಗೆ ಬಂತು.  ಅಪ್ಪ ದೊಡ್ಡಪ್ಪ ಸಹೋದರರು ಹಿರಿಯರು ಕನ್ಯೆಗೆ ವಿದ್ಯಾ ದಾನ ಮನೆಲಿಯೇ ಮಾಡಿಗೊಂಡಿತ್ತವು. ಅನ್ಯ ಪುರುಷರಿಂಗೆ ರಕ್ಷಣಾ ದೃಷ್ಟಿಂದ ನಿಷೇಧ.   ಉಪನಯನ ಸಂಸ್ಕಾರಲ್ಲಿ ಯಜ್ಞೋಪವೀತ ಧರುಸುವಾಗ “ಯಜ್ಞೋಪವೀತಂ ಪರಮಂ ಪವಿತ್ರಂ…....” ಹೇಳಿದರೆ,  ಮಾಂಗಲ್ಯ ಧಾರಣೆ ಮಾಡುವಾಗ “ಮಾಂಗಲ್ಯಮ್ ತಂತುನಾನೇನ...” ಹೇಳಿ ಘೋಷಣೆ ನಾವು ಗಮನುಸಲಕ್ಕು.

ಕರ್ಮಣಾ ಜಾಯತೇ ದ್ವಿಜಃ – ದ್ವಿ ಹೇಳಿರೆ ಎರಡನೇ , ಜ ಹೇಳಿರೆ ಜನ್ಮಿಸುವದು. ಅಂಬಗ, ಉಪನಯನ ಮೂಲಕ ಎರಡನೇ ಜನ್ಮ ತಾಳಿದಾಂಗೆ. ಮೌಂಜಿ ಮೇಖಲ ಧಾರಣ ಬ್ರಹ್ಮಚಾರಿಯ ಗುರುತು. ದ್ವಿಜ ಆದಪ್ಪಗ ಅವ ಗಾಯತ್ರೀ ಮಂತ್ರಕ್ಕೆ ಅರ್ಹ ಆವ್ತನಷ್ಟೆ. ಉಪನಯನಕ್ಕೆ ‘ಮುಂಜೀ ಎಂಬ ಇನ್ನೊಂದು ಹೆಸರಿಂದಲೂ ಕೆಲವು ಕಡೆ ಹೇಳುತ್ತವು. ‘ಮುಂಜಾ’ ಎಂಬ ಹುಲ್ಲಿನಿಂದ ತಯಾರಿಸಿದ ‘ಮೌಂಜಿ’ಯ ವಟುವಿನ ಸೊಂಟಕ್ಕೆ ಮೇಧಾಶಕ್ತಿ, ಸ್ಮರಣ ಶಕ್ತಿಯ ಅಭಿವೃದ್ಧಿಗಾಗಿ ಸಂಸ್ಕಾರ ಪೂರ್ವಕ ಕಟ್ಟುವದರಿಂದ ‘ಮೌಂಜಿ ಬಂಧ’ (ಮುಂಜೀ) ಹೇಳಿ ಹೆಸರಾತು. ಮೌಂಜಿ ಧಾರಣೆಯಿಂದ ವಟುವಿಂಗೆ, ಮಾನವ ಶರೀರದ ಸಹಜ ಕ್ರಿಯೆ ರೇತಸ್ಸು ಕರಗುವದದರ ನಿಯಂತ್ರಿಸಿ, ಶರೀರಂದ ಹೊರಹೋಗದ್ದ ಹಾಂಗೆ ನಿಯಂತ್ರಿಸಿ ದೇಹದೊಳವೇ ‘ಓಜಸ್ಸು’ ಹೇಳುವ ಧಾತು, ಶರೀರಲ್ಲಿ ಅಭಿವೃದ್ಧಿ ಅಪ್ಪಲೇ ಸಹಾಯ ಆವ್ತು.

ಉಪನಯನದ ಹಿಂದಾಣ ದಿನ ನಾಂದಿ ಇತ್ಯಾದಿ. ರಾತ್ರಿ ಉದಕಶಾಂತಿ. ಪ್ರತಿಸರ ಬಂಧ. {(ಸರ್ವಾsಮಂಗಳ [ಸರ್ವ ಅಮಂಗಳ] ನಿರಸನಾರ್ಥಂ (ನಿವಾರಣೆಗೆ)}, ಉಪನಯನ ದಿನ ಮಂಗಳ ಸ್ನಾನ, ಕುಲದೇವತಾ ಪ್ರಾರ್ಥನೆ,  ಗುರು, ಗಣಪತಿ ಪೂಜನ, ಪುಣ್ಯಾಹ ವಾಚನ, ನಾಂದಿ, ಚೌಲ ಹೋಮ, ಮಾತೃ ಸಹಭೋಜನ, ದ್ವಿತೀಯ ವಪನ, ಪುನಃ ಸ್ನಾನ, ಗೋಪೀ ಧಾರಣ, ಕೌಪೀನ,  ವಸ್ತ್ರ ಧಾರಣ, ಯಜ್ಞೋಪವೀತ ಧಾರಣ, ಹೋಮ, ಬ್ರಹ್ಮೋಪದೇಶ, ಅಗ್ನಿಕಾರ್ಯ, ಮೌಂಜಿ ಬಂಧನ, ಅಜಿನ ಧಾರಣ, ದಂಡ ಧಾರಣ,  ಮಾತೃ ಭಿಕ್ಷೆ, ಆರತಿ ಇತ್ಯಾದಿ ಮುಖ್ಯ ಕಾರ್ಯಕಲಾಪಂಗೊ ಉಪನಯನ ಸಂಸ್ಕಾರಲ್ಲಿ ಇಪ್ಪದು.

ಸ್ವಸ್ತಿವಾಚನ, ದೇಶಕಾಲ ಸಂಕೀರ್ತನೆಯ ನಂತರ, ಅಪ್ಪ°,  “ಕಾಮಚಾರ-ಕಾಮವಾದ-ಕಾಮಭಕ್ಷಣ-ದೋಷಪರಿಹಾರದ್ವಾರಾ  ಶ್ರೀ ಪರಮೇಶ್ವರಪ್ರೀತ್ಯರ್ಥಂ…..” “ಎನ್ನ ಪುತ್ರನ ಜನ್ಮದಾರಭ್ಯ ಇಂದಿನವರೇಗಿನ ಬಾಲ್ಯ ಸಹಜವಾಗಿ, ಅಜ್ಞಾನಂದ ಅಪ್ಪ ಅಬ್ಬೆ ಅಲಕ್ಷಿಸಿಪ್ಪ  ದೋಷಂಗೊ, ಅಬ್ಬೆಯ ಹಾಲು ಕುಡಿವಾಗ ಆಗಿಪ್ಪ ದೋಷಂಗೊ, ಹೆಂಗಸರೊಂದಿಂಗೆ ಕೂದುಂಡ ದೋಷಂಗೊ, ಬೇರೇ ಬೇರೇ ಮಕ್ಕಳೊಟ್ಟಿಂಗೆ ಸೇರಿ ಕ್ರೀಡಾ ಸಲ್ಲಾಪ ಸಮಯಲ್ಲಿ ಆಗಿಪ್ಪ ದೋಷಂಗೊ, ಕಾಲಾತೀತವಾಗಿ   ಸಂಭವಿಸಿಪ್ಪ ದೋಷಂಗೊ, ಮಲ ಮೂತ್ರ ವಿಸರ್ಜನಾ ಸಂದರ್ಭ ಸ್ವಚ್ಚಗೊಳುಸದ್ದೆ ಆಗಿಪ್ಪ ದೋಷಂಗೊ, ಕಾಮ ಸಂಬಧೀ ಏನೇ ದೋಷಂಗೊ, ಮನಸ್ಸಿಂಗೆ ತೋರಿದ ಹಾಂಗೆ ಮಾಡಿದ  ತಿರುಗಾಟ, ಮಾತು, ತಿನ್ನುವಿಕೆ ಇತ್ಯಾದಿ ಏನೇ ಪಾಪಂಗೊ ಸಂಭವಿಸಿದ್ದರೂ ಅವೆಲ್ಲವೂ ಪರಿಹರಿಸುವ ಮೂಲಕ ಉಪನಯನ ಸಂಸ್ಕಾರ ಹೊಂದುವ ಅರ್ಹತೆಯ ಪಡೆಯುವುದಕ್ಕೆ ಬೇಕಾಗಿ ಮತ್ತು ಮಗಂಗೆ ಉಪನಯನ ಸಂಸ್ಕಾರ ಮಾಡುಸುವ ಅಧಿಕಾರ ಎನಗೆ ದೊರಕಲಿ” ಎಂಬ ಉದ್ದೇಶಂದ ‘ಕೃಚ್ಛ್ರ’ ಆಚರಿಸುತ್ತೆ ಹೇಳಿ ಸಂಕಲ್ಪಿಸಿ ಕೃಚ್ಛ್ರಾಚ್ಚರಣೆ [ಕರ್ಮ ಲೋಪ ಪ್ರಾಯಶ್ಚಿತ್ತ ವಿಧಿ, ಬೇರೆ ಬೇರೆ ಕರ್ಮ ಲೋಪಕ್ಕೆ ಬೇರೆ ಬೇರೆ ಕೃಚ್ಛ್ರವಿಧಿ (ಮುಂದೆ ಪ್ರತ್ಯೇಕ ಬೇರೆಯೇ ಒಂದಿಕ್ಕೆ ಕೃಚ್ಛ ಬಗ್ಗೆ ವಿವರ ಮಾಡಿಗೊಂಬೊ)] ಮಾಡಿ ಉಪನಯನ ಸಂಸ್ಕಾರ ಪ್ರಾರಂಭ ಮಾಡುವದು.‘ಕುಮಾರಕಸ್ಯ ವೇದಾಧ್ಯಯನ ಅಧಿಕಾರ ಸಿದ್ಧ್ಯರ್ಥಂ ಉಪನಯನಾಖ್ಯಂ ಕರ್ಮ ಕರಿಷ್ಯೇ’ ಹೇಳಿ ಮಾಣಿಗೆ ಶ್ರೌತ ಸ್ಮಾರ್ತ ಕರ್ಮಾನುಷ್ಠಾನ, ವೇದಾಧ್ಯಯನ ಅಧಿಕಾರ ಸಿದ್ಧಿಗಾಗಿ (೧೨೦೦೦ ಗಾಯತ್ರೀ ಮಂತ್ರ ಜಪಿತ) ಯಜ್ಞೋಪವೀತ ಹಾಕಲಾವುತ್ತು. ‘ಯಜ್ಞೋಪವೀತ’ = ಯಜ್ಞ + ಉಪವೀತ. `ವೀತ’ ಹೇಳಿರೆ ನೇಯ್ದದ್ದು ಅರ್ಥಾತ್ ವಸ್ತ್ರ. ಉಪವೀತ ಹೇಳಿರೆ ಉಪವಸ್ತ್ರ. ಮಗು ಜನ್ಮಕ್ಕೆ ಬಪ್ಪಗ ವಸ್ತ್ರ ಇರ್ತಿಲ್ಲೆ. ಮುಂದೆ ಏಕವಸ್ತ್ರ ಧಾರಣೆ. ಹೇಳಿರೆ ಮಗುವಿನ ಒಂದು ವಸ್ತ್ರಂದ ಮುಚ್ಚುತ್ತವು ಮಿತ ಶಾಖಾದಿ ಪ್ರಯೋಜನಕ್ಕೆ. ಮುಂಜಿ(ಉಪನಯನ)ವರೇಂಗೂ ಮಾನ ಮುಚ್ಚಲೆ ಏಕವಸ್ತ್ರ ಧಾರಣೆ ಸಾಕಾವ್ತು.   ಉಪನಯನ (ಮುಂಜಿ)ಯ ನಂತರ ಉಪವಸ್ತ್ರ ಧರಿಸುವ ಕ್ರಮ ಬತ್ತು. ಮುಂಜಿಯಾದ ನಂತರ ಕೌಪೀನ ಒಂದು ವಸ್ತ್ರವಾದರೆ  ಜನಿವಾರ ಎರಡನೇ ವಸ್ತ್ರ ಹೇಳಿ  ಆವ್ತು ಸಾಂಕೇತಿಕವಾಗಿ.

“ಯಜ್ಞೋಪವೀತಂ ನವತಂತ್ವಾ ನಿರ್ಮಿತಂ” –  ಬ್ರಾಹ್ಮಣರ ಜನಿವಾರವ ಹತ್ತಿಯ ನೂಲಿನ ಒಂಬತ್ತು ಎಳೆಂದ ತಯಾರುಸುವದು. ಒಂದೊಂದು ಎಳೆಲಿ ಅನುಕ್ರಮವಾಗಿ ಒಬ್ಬೊಬ್ಬ° ಯಜ್ಞೋಪವೀತ ಅಭಿಮಾನಿ ದೇವತೆಗಳ (ನವತಂತು ದೇವತಗಳ) ಸ್ಥಾಪನೆ.
ಓಂಕಾರಾಗ್ನಿನಾಗಶ್ಚಸೋಮಪಿತೃಪ್ರಜಾಪತೀ । ವಾಯುಃ ಸೂರ್ಯೋ ವಿಶ್ವೇದೇವಾ ಇತ್ಯೇತೇ ನವತಂತುದೇವತಾಃ ॥

೧.ಓಂಕಾರ, ೨.ಅಗ್ನಿ, ೩.ನಾಗ, ೪.ಸೋಮ, ೫.ಪಿತೃಗೊ, ೬.ಪ್ರಜಾಪತಿ, ೭.ವಾಯು, ೮.ಸೂರ್ಯ, ೯.ವಿಶ್ವದೇವ ದೇವರ ಸ್ಥಾಪನೆ ಮಾಡ್ತವು.

ಒಂದೊಂದರಲ್ಲಿ ಮೂರರಂತೆ ಈ ಒಂಬತ್ತು ನೂಲುಗಳಿಂದ ಮೂರು ಸೂತ್ರ (ಎಳೆ) ವಾಗಿ ನೇಯುತ್ತದು (ಪೀಂಟುತ್ತದು). ಈ ಮೂರು – ಋಗ್ ಯಜು ಸಾಮ ಹೇಳಿ ಮೂರು ವೇದದ ಸ್ಥಾಪನೆ. ಈ ಮೂರು ನೂಲುಗಳ ಸೇರಿಸಿ ಒಂದು ಗಂಟು ಹಾಕುವದು. ಇದರ ಬ್ರಹ್ಮಗಂಟು (ಬ್ರಹ್ಮ ಗ್ರಂಥಿ) ಹೇಳಿ ಹೇಳ್ವದು. ಇದರ ಮೇಲೆ ಅಥರ್ವ ವೇದವ ಸ್ಥಾಪನೆ. ಈ ಮೂರು ಎಳೆ ಗಾರ್ಹಪತ್ಯಗ್ನಿ, ದಕ್ಷಿಣಾಗ್ನಿ, ಆವಹನೀಯಾಗ್ನಿ ಎಂಬ ತ್ರೇತಾಗ್ನಿ ಮತ್ತು ಜ್ಞಾನ ಭಕ್ತಿ ಕರ್ಮ ಇವುಗಳ ಪ್ರತೀಕ. ಯಜ್ಞೋಪವೀತ (ಜನಿವಾರ) 15 ತಿಥಿ + 7 ವಾರ + 27 ನಕ್ಷತ್ರ +  25 ತತ್ವ + 4 ವೇದ + 3 ಗುಣ + 3 ಕಾಲ + 12 ಮಾಸ ನೆನಪಿಸುವ ಹೀಂಗೆ 96 ಅಂಗುಲ ಉದ್ದ ಮತ್ತೆ ಸಾಸಮೆ ಕಾಳಷ್ಟು ದಪ್ಪ ಉಳ್ಳದ್ದಾಯೇಕು ಹೇಳಿ ಶಾಸ್ತ್ರ.

“ತಿಥಿರ್ವಾರಂ ಚ ನಕ್ಷತ್ರಂ ತತ್ತ್ವವೇದಗುಣಾನ್ವಿತಂ | ಕಾಲತ್ರಯಂ ಚ ಮಾಸಾಶ್ಚ ಬ್ರಹ್ಮಸೂತ್ರಂ ಹಿ ಷಣ್ಣವ “||

ಬ್ರಹ್ಮಚಾರಿ ಮತ್ತು ಯತಿಗೊಕ್ಕೆ ಒಂದು ಜನಿವಾರ, ಗೃಹಸ್ಥ° ಎರಡು ಜನಿವಾರ ಹಾಕುವದು. ಯಜ್ಞೋಪವೀತವ ಎಡಭುಜದ ಮೇಲೆ ಮತ್ತು ಬಲಗೈ ಕೆಳ ನೇತಾಡುವ ಹಾಂಗೆ ಹಾಕಿಕ್ಕೊಂಬದು. ಜನಿವಾರ ಬಲಗೈ ಕೆಳಂದ ಸೇರಿಸಿ ಎಡ ಹೆಗಲಿಲಿ ಧರಿಸಿಕೊಂಬದಕ್ಕೆ ಸವ್ಯ / ಉಪವೀತ ಹೇಳಿಯೂ, ಎಡಕೈ ಕೆಳಂದ ಸೇರ್ಸಿ ಬಲ ಹೆಗಲಿಲ್ಲಿ ಹಾಕಿರೆ ಅಪಸವ್ಯ / ಪ್ರಾಚೀನಾವೀತಾ ಹೇಳಿಯೂ, ಎರಡೂ ಹೆಗಲ ಮೇಲೆ ಸಮಾನ ರೀತಿಲಿ ಇಳಿಬಿಟ್ಟು ಮಾಲೆಯಾಂಗೆ ಹಾಕಿರೆ ನಿವೀತ ಹೇಳಿಯೂ ಹೆಸರು. ‘ಉಪವೀತಂ ದೇವಾನಾಂ, ನಿವೀತಂ ಮನುಷ್ಯಾಣಾಂ, ಪ್ರಾಚೀನಾವಿತಮ್ ಪಿತೃಣಾಮ್’.  ಒಬ್ಬ ಇನ್ನೊಬ್ಬನ ಜನಿವಾರ ಹಾಕಿಕೊಂಬದೋ, ಒಂದರಿ ಹಾಕಿದ ಜನಿವಾರ ತೆಗದು ಕವಾಟಿಲ್ಲಿಯೋ, ಸೂಟ್ಕೇಸ್ ಲ್ಲಿಯೋ ಮಡುಗಿ ಮತ್ತೆ ಬೇಕಪ್ಪಗ ಸುರುಕ್ಕೊಂಬದೋ ಮಾತೇ ಇಲ್ಲೆ. ಶೌಚ ಸುಲಭಕ್ಕಾಗಿ ಜನಿವಾರವ ದೇವತಾ ಕಾರ್ಯ (ಕ್ರಿಯಾ ಸಮಯಲ್ಲಿ)  ಈಗ ಹೇಳಿದಾಂಗೆ ಎಡ ಭುಜಲ್ಲಿ (ಸವ್ಯ) ಬಲಕೈ ಕೆಳ ಬತ್ತಾಂಗೆ ಧರಿಸಿಗೊಂಬದು. ಪಿತೃ ಕಾರ್ಯಕ್ಕೆ ಉಪಸವ್ಯ/ ಪ್ರಾಚೀನಾವೀತ,  ಉಳಿದ ಸಮಯಲ್ಲಿ (ಮನುಷ್ಯ ಕಾರ್ಯಲ್ಲಿ) ಮಾಲಾಕಾರವಾಗಿ ಧರಿಸಿಗೊಂಬಲೂ ಅಕ್ಕು (ಮನುಸ್ಮೃತಿ). ಶರೀರದ ನಾಭಿ ಪ್ರದೇಶಕ್ಕಿಂತ ಮೇಗೆ  ಪವಿತ್ರವೆಂದೂ ಕೆಳಭಾವ ಅಪವಿತ್ರ ಹೇಳಿಯೂ ಪರಿಗಣಿಸುವದರಿಂದ ಶೌಚ ವಿಸರ್ಜನೆ ಸಮಯಲ್ಲಿ ಜನಿವಾರವ ಬಲಕೆಮಿಲಿ ಸಿಕ್ಕಿಸಿಯೊಂಬದು. (ಕೆಲವರಿಂಗೆ ಜೆನಿವಾರ ಉದ್ದ ಇಲ್ಲೆ ಹೇಳಿ ಆವ್ತಪ್ಪೋ. ಅದು ಬೇಡ ಇನ್ನು. ಹೊಕ್ಕುಳಿಂದ ಮೇಗೆಯೇ ಜನಿವಾರ ಇರೆಕ್ಕಪ್ಪದು). ಬಲಕೆಮಿಲಿ ಆದಿತ್ಯ, ವಸು, ರುದ್ರ, ವಾಯು, ಅಗ್ನಿ, ಧರ್ಮ, ವೇದ, ಆಪ. ಸೋಮ, ಸೂರ್ಯ, ಅನಿಲ ಇತ್ಯಾದಿ ದೇವತೆಗಳ ಆವಾಸ ಇಪ್ಪದರರಿಂದ ಜೆನಿವಾರ ಬಲಕೆಮಿಲಿ ಧರಿಸಿಗೊಂಬದು. ಅದಕ್ಕೆ ಅಶುಚಿತ್ವ ತಟ್ಟುತ್ತಿಲ್ಲೆ. ಬಲಕೆಮಿಯ ಸ್ಪರ್ಶ ಮಾಡುವುದರಿಂದ ಆಚಮನ ಫಲ ಇದ್ದಡ.

ಗಾಯತ್ರೀ ಮಹಾ ಮಂತ್ರೋಪದೇಶಕ್ಕಾಗಿ ಮುಹೂರ್ತ ಉತ್ತಮವಾಗಿರಲಿ ಹೇಳಿ ಫಲ ತಾಂಬೂಲ, ಯಜ್ಞೋಪವೀತ, ದಕ್ಷಿಣೆ, ದಾನ ಮಾಡಿ ವೇದ ವಿದ್ವಾಂಸರ ಆಶೀರ್ವಾದ ಪಡೆದು ಹೊಸಬಟ್ಟೆಯ ಮುಸುಕಿ ಹಾಕಿ (ಪಟ್ಟೆಯ ಬ್ರಹ್ಮ ವಸ್ತ್ರ)  ಮುಸುಕಿನೊಳ ಗಾಯತ್ರೀ ಮಂತ್ರೋಪದೇಶ ಮಾಣಿಗೆ ಮಾತ್ರ ಗೌಪ್ಯವಾಗಿ ಕೇಳುತ್ತಾಂಗೆ ಎಂಬ ಸಂಕೇತ. (ಬತ್ತದ ಮೇಗೆ ಅಕ್ಕಿ ರಾಶಿಲಿ ಕೂಬದು ಸಂಪ್ರದಾಯ ಅಷ್ಟೇ.) ಮಾಣಿಗೆ ಅಪ್ಪನೇ ಯಜ್ಞೋಪವೀತ ಧಾರಣೆ ಮತ್ತು ಗಾಯತ್ರೀ ಉಪದೇಶ ಮಾಡುತ್ತದು. ಆದ್ದರಿಂದ ತಂದೆಯೇ ಮೊದಲ ಗುರು. ಆಚಮನ ಮತ್ತು ಪ್ರಾಣಾಯಾಮ ಮಂತ್ರ ಮತ್ತು ಕ್ರಮ ಮತ್ತು ಗೋತ್ರ ಪ್ರವರ ಸಹಿತ ಅಭಿವಾದನೆ ಮಾಡುವ ಕ್ರಮ ಅಲ್ಲಿ ಹೇಳಿಕೊಡುವದು. ಮತ್ತೆ ವಟುವಿನ (ಮಾಣಿಯ)  ಶ್ರದ್ಧಾ ಮೇಧಾ (ಬುದ್ಧಿ / ಜ್ಞಾನ) ಪ್ರಜ್ಞಾ ಜಾಗೃತ ಗೊಳಿಸಿ ಬ್ರಹ್ಮತೇಜೋಭಿವೃದ್ಧಿಗಾಗಿ ವೈದಿಕರಿಂದ ವಟುವಿನ ತಲೆ ಮೇಲೆ ಬ್ರಹ್ಮ ಕೂರ್ಚೆ ಮಡುಗಿ  ದರ್ಭೆಲಿ ಮುಟ್ಟಿ ಶ್ರದ್ಧಾ ಸೂಕ್ತ, ಬ್ರಹ್ಮ ಸೂಕ್ತ, ಮೇಧಾಸೂಕ್ತ ಮಂತ್ರ ಹೇಳುವದು. ಈ ಮೂಲಕ ಬ್ರಾಹ್ಮಣರಿಂದ ವಟುವಿಂಗೆ ಶ್ರದ್ಧಾ ಮೇಧಾ ಪ್ರಜ್ಞಾ  ಬಲ/ಶಕ್ತಿ  ತುಂಬುಸುವದು. ಇವಿಷ್ಟು ಕ್ರಿಯೆ ನಡದ ಮೇಲೆ ವಟುವಿನ ಮುಸುಕು ತೆಗೆತ್ತವು. ಸೂಕ್ಷ್ಮವಾಗಿ ನಿಂಗೊ ಗಮನಿಸಿರೆ ದ್ವಿಜನಾಗಿ ಪ್ರಪಂಚವ ಕಾಂಬ ಈಗ  ಮಾಣಿಯ (ವಟುವಿನ) ಅವನ ಶರೀರಲ್ಲಿ ಅಲೌಕಿಕ ವಿದ್ಯುತ್ ಅಲೆಗಳ ಕಂಪನ ಉಂಟಾಗಿ ಅದರ ತರಂಗ ಅವನ ಆವರಿಸಿ ಅವನ ಮೋರೆಲಿ ವರ್ಚಸ್ಸು, ಕಾಂತಿ, ತೇಜಸ್ಸು ಹೊಸ ಹೊಳಪು ಆಗಿಪ್ಪದು ಗಮನುಸಲಕ್ಕು. ಬಳಿಕ ಸೂರ್ಯಾವಲೋಕನ ಮಾಡುಸುವದು. ದ್ವಿಜತ್ವ ಪಡೆದ ವಟುವಿನ ದ್ವಿಜತ್ವ ಉತ್ತಮವಾಗಿರಲಿ, (‘ಶ್ರದ್ಧಾಮೇಧಾಪ್ರಜ್ಞಾಭಿವೃದ್ಧ್ಯರ್ಥಂ ಫಲತಾಂಬೂಲಗೋಪೀಚಂದನ ಯಜ್ಞೋಪವೀತ ದಾನಾನಿ ಕರಿಷ್ಯೇ’ ಹೇಳಿ ಸಂಕಲ್ಪಿಸಿ) ಹೇಳಿ ಫಲ ತಾಂಬೂಲ ಯಜ್ಞೋಪವೀತ ಗೋಪೀಚಂದನ ದಕ್ಷಿಣೆ ದಾನ ಇತರ ವಟುಗಳಿಂಗೆ ನೀಡುವದು ಕ್ರಮ.ಮುಂದೆ ಉಪನಯನ ಹೋಮ, ಕಲ್ಲಿನ ಮೆಟ್ಟುವದು (ಮನ ದೃಢತೆಯ ಸಂಕೇತ), ಮಂತ್ರ ಪೂರ್ವಕ ವಸ್ತ್ರೋತ್ತರೀಯ ಧಾರಣ, ಮೌಂಜಿ, ಅಜಿನ, ದಂಡ, ಸಾವಿತ್ರೀ ವ್ರತ ಹೋಮ, ಗಾಯತ್ರೀ ಉಪದೇಶ, ಆಚಾರ ಬೋಧನೆ, ಭಿಕ್ಷೆ, ಶ್ರದ್ಧಾ ಮೇಧಾ ಪೂಜೆ ಎಂಬಲ್ಲಿಗೆ ಒಂದು ಹಂತ. ಮತ್ತೆ ಮೂರು ದಿನ ಸಾಯಂ ಪ್ರಾತಃ ಅಗ್ನಿಕಾರ್ಯ. ಬ್ರಹ್ಮಚಾರಿಗೆ ಅಗ್ನಿ ಉಪಾಸನೆ ಬಹಳ ಮುಖ್ಯ. ಇದರಲ್ಲಿ ಸಮಿಧಾಧಾನ ಮತ್ತು ಉಪಸ್ಥಾನ ಪ್ರಧಾನವಾದ್ದು. ಬ್ರಹ್ಮಚಾರಿಯು ಪ್ರಜಾಪತಿ ದೇವತೆಯ ಸ್ಮರಿಸಿ ಅಗ್ನಿಗೆ ಸಮಿಧೆಯ ಆಹುತಿ ಕೊಡುವದು. ಆಹುತಿ ಕೊಟ್ಟಿಕ್ಕಿ ಸಮಿಧೆ ಅಗ್ನಿಲಿ ಪ್ರಜ್ವಲಿಸಿಗೊಂಡಿಪ್ಪಗ ಅಗ್ನಿಯ ತೇಜಸ್ಸಿನ ಅಂಗೈಲಿ ಸ್ವೀಕರಿಸಿ ತನ್ನ ಮುಖ ಸ್ಪರ್ಶ ಮಾಡಿಗೊಳ್ಳೆಕ್ಕು. ಇದರಿಂದ ಅಗ್ನಿಯ ತೇಜಸ್ಸು ವಟುವಿನ ಮುಖ ಮಂಡಲಲ್ಲಿ ಪ್ರಕಟ ಆವ್ತು. ನಂತರ, ‘ಮಯಿ ಮೇಧಾಂ ಮಯಿ ಪ್ರಜಾಂ …’  ಎಂಬ ಮಂತ್ರಂದ ಅಗ್ನಿ, ಇಂದ್ರ, ಸೂರ್ಯ ದೇವತೆಗಳ ಉಪಸ್ಥಾನ ಮಾಡೆಕ್ಕು. ಅಗ್ನಿ ಇಂದ್ರ ಸವಿತೃ ದೇವತೆಗೊ ಎನಗೆ ಮೇಧಾ, ಪ್ರಜ್ಞಾ, ತೇಜಸ್ಸು, ಇಂದ್ರಿಯ, ಭ್ರಾಜಸ್ಸುಗಳ ಉಂಟುಮಾಡಲಿ ಹೇಳಿ ಪ್ರಾರ್ಥನೆ.  ಹೀಂಗೇ ಮೂರು ದಿನ ವ್ರತಲ್ಲಿದ್ದು ನಾಲ್ಕನೆಯ ದಿನ ದಂಟೂರ್ತ (ಸಾವಿತ್ರೀ ವ್ರತ ವಿಸರ್ಜನ) ಹೋಮ, ಸಂಕ್ರವಸು ಪೂಜೆ ಮಾಡಿ, ಮೌಂಜಿ (ಮೇಖಲೆ), ಅಜಿನ, ದಂಡ, ಪ್ರತಿಸರ ವಿಸರ್ಜನೆ ಮಾಡಿ ಹೊಸತ್ತಿನ ಧಾರಣೆ ಮಾಡುವದು ಇತ್ಯಾದಿ ಉಪನಯನ ಸಂಸ್ಕಾರಲ್ಲಿ ಇಪ್ಪ ಕ್ರಮಂಗೊ.ಉಪನಯನ ಹೋಮ ವಿಧಿಲಿ ಆಚಾರ್ಯರು (ಪುರೋಹಿತರು) ವಟುವಿಂಗೆ ಬ್ರಹ್ಮಚಾರಿ ಮಾಡೆಕ್ಕಪ್ಪ ಇತರ ನಿತ್ಯ ಕರ್ಮಂಗಳ, ಅನುಷ್ಠಾನಂಗಳ ಉಪದೇಶ ಮಾಡುತ್ತವು. ಆದ್ದರಿಂದಲೇ ಇದಕ್ಕೆ ‘ಬ್ರಹ್ಮೋಪದೇಶ’ ಹೇಳಿ ಹೆಸರು ಕೂಡ. ಗೋಪೀ ಚಂದನ ಧಾರಣೆ (“ಗೋಪೀಚಂದನ ಪಾಪಘ್ನ ವಿಷ್ಣುದೇಹಸಮುದ್ಭವ, ಚಕ್ರಾಂಕಿತ ನಮಸ್ತೇಸ್ತು ಧಾರಣಾನ್ಮುಕ್ತಿದೋ ಭವ”), ಸಾವಿತ್ರೀ ವ್ರತ ಹೋಮ, ನೂತನ ವಸ್ತ್ರ ಧಾರಣೆ, ಉಪವಸ್ತ್ರ ಧಾರಣೆ, ವಟುವಿನ ಸೊಂಟಕ್ಕೆ ಮೇಖಲೆ (ಸೊಂಟಪಟ್ಟಿ)ಯ ಮುಂಜಿ (ಮುಂಜಾ ಹುಲ್ಲಿನ ದಾರ, ಪ್ರಾಯೋಗಿಕವಾಗಿ ನಮ್ಮಲ್ಲಿ ದರ್ಭೆಯ ದಾರ) ಸುತ್ತಿ ನಾಭಿಯ ಹತ್ರೆ ಮೂರು ಗಂಟು ಹಾಕುವದು (ವಟು ಮೂರು ವೇದಂಗಳಿಂದ ಆವರಿಸಲ್ಪಟ್ಟಿದ ಎಂಬ ದ್ಯೋತಕ). ಮತ್ತೆ ಮಂತ್ರ ಹೇಳಿ ಮಾಣಿಗೆ ಅಜಿನ (ಚರ್ಮ, ಕೃಷ್ಣಾಜಿನ – ಕೃಷ್ಣ ಮೃಗದ ಚರ್ಮ) ಕೊಡೆಕ್ಕು. ಸಾಂಕೇತಿಕವಾಗ ನಮ್ಮಲ್ಲಿ ಸಣ್ಣ ಕೃಷ್ಣಾಜಿನ ತುಂಡು ನೂಲಿಲ್ಲಿ ಸುರುದು ಜನಿವಾರಡ ಒಟ್ಟಿಂಗೆ ಧರಿಸಿಗೊಂಬದು. ಇದು ಅವನ ಮುಂದಾಣ ಜೀವನಲ್ಲಿ ಆ ಅಜಿನದ ಮೇಲೆ ಕೂದು ಸಾಧನೆ ಮಾಡುವುದರ ಪ್ರತೀಕ.  ಮತ್ತೆ ಮಂತ್ರವ ಹೇಳಿ ವಟುವಿನ ಕೈಲಿ ದಂಡವ ಕೊಡುವದು. “ಉದ್ದಟನಾಗಿಪ್ಪ ಎನ್ನ ದಮನ ಮಾಡಿ ಸನ್ಮಾರ್ಗಲ್ಲಿ ನಡೆಸಲು ಈ ದಂಡವ ಸ್ವೀಕರುಸುತ್ತೆ, ಯಾವುದರಿಂದ ಎನಗೆ ಭಯ ಉಂಟಾವ್ತೋ ಅದರಿಂದ ಎನ್ನ ಈ ದಂಡ ರಕ್ಷಿಸಲಿ” ಹೇಳಿ, ಮಾಣಿ, ಕೈಲಿ ಹಿಡಿವದು. ಬ್ರಾಹ್ಮಣ ಕುಮಾರನ ಕೈಲಿ ದಂಡ ಮುತ್ತುಗ (ಪಾಲಾಶ) ವೃಕ್ಷದ ಕೊಂಬೆಂದ ಮಾಡಿದ್ದಾಯೆಕ್ಕು ಮತ್ತು ಅದು, ನೆಲೆಂದ ವಟುವಿನ ತಲೆವರೇಂಗೆ ಎತ್ತರ(ಉದ್ದ)ದ್ದು ಆಗಿರೆಕ್ಕು. ವಾತಾವರಣಲ್ಲಿಪ್ಪ ಕೆಟ್ಟ ಶಕ್ತಿಗಳ ಒಳ್ಳೆ ಶಕ್ತಿಯಾಗಿ ರೂಪಾಂತರಗೊಳುಸುವ ಶಕ್ತಿ ಮುತ್ತುಗ ವೃಕ್ಷಕ್ಕೆ ಇದ್ದಡ. ಈ ರೀತಿ ವಿದ್ಯಾ ಗುರುವಿನ ಸೇವೆ ಮಾಡುವ ವಟುವು ಉಪನಯನ ಸಂಸ್ಕಾರ ಪಡೆತ್ತ.

ಬಳಿಕ ಆಚರ್ಯನಿಂದ ಬ್ರಹ್ಮಚಾರಿಗೆ ಆಚಾರ ಬೋಧನೆ ಮತ್ತು ವಟುವ್ರತ ಸೂಚನೆ – “ಶೌಚ, ನಡೆ, ನಿದ್ರೆ, ಭೋಜನ ಇತ್ಯಾದಿ ಕೃತಿ ಮಾಡಿದ ಬಳಿಕ ಆಚಮನ ಮಾಡೆಕ್ಕು, ಸಂಧ್ಯಾವಂದನೆ, ಅಗ್ನಿಕಾರ್ಯ ಇತ್ಯಾದಿ ನಿತ್ಯಕರ್ಮ ತಪ್ಪದೆ ಮಾಡುತ್ತಾ ಇರೆಕ್ಕು”,

“ಛತ್ರಮ್ ವಪನಮಾಲ್ಯಾನಿ ಸ್ತ್ರೀಗೋಷ್ಠೀಂ ನಖಕೃಂತನಂ |
ನೃತ್ಯ-ಗೀತ-ಕಥಾಲಾಪಾನ್ ಮೈಥುನಂ ಗಂಧಲೇಪನಂ |
ವೃಕ್ಷಾರೋಹಣಹರ್ಮ್ಯಾದಿ ಪರ್ವತಾರೋಹಣಂ ತಥಾ |
ಮಧು-ಮಾಷ-ಜಲಕ್ರೀಡಾ  ಅಧಸ್ತಾತ್ ಗ್ರಹಣಂ ತಥಾ |
ಅನೃತಂ ಚ ದಿವಾನಿದ್ರಾಮ್ ಬ್ರಹ್ಮಚಾರೀ ವಿವರ್ಜಯೇತ್” ……”||

‘ಅಲಂಕಾರ ಕೊಡೆ, ದಂತ ಧಾವನ, ಸರಸ, ಉಗುರು ಕೆರವದು, ನೃತ್ಯ ಗೀತಾದಿ ಮನೋರಂಜನೆ, ಹರಟೆ, ಸರಸ – ಸಲ್ಲಾಪ, ಗಂಧಾದಿ ಪರಿಮಳ ದ್ರವ್ಯ, ಹೂಗು, ಮರ ಏರುವದು, ಇಟ್ಟೇಣಿ, ಚಾರಣ – ಪರ್ವತಾರೋಹಣ, ಮಧು (ಜೇನು), ಉದ್ದು, ಜಲಕ್ರೀಡೆ, ತಲೆಕೆಳಗಾಗಿ ನೇತಾಡಿ ಸೊಕ್ಕುತ್ತದು ಎಲ್ಲಾ ವರ್ಜ್ಯ. ಆಚಾರ್ಯನ ಅಧೀನಲ್ಲಿದ್ದು ವೇದಂಗಳ ಕಲಿತ್ತಾ ಇರು, ಬೆಳಗ್ಗೆ ಸಂಜೆ ಭಿಕ್ಷೆ ಬೇಡು, ಹನ್ನೆರಡು ವರ್ಷ ಅಥವಾ ವೇದಾಧ್ಯಯನ (ಕನಿಷ್ಠ ಹನ್ನೆರಡು ವರ್ಷ ವೇದಾಧ್ಯಯನ  ಪದವೀಧರ ಡಿಗ್ರಿ ಪಡವಲೆ) ಮುಗಿವನ್ನಾರ ಬ್ರಹ್ಮಚರ್ಯವ ಪಾಲುಸು, ಸತ್ಯವನ್ನೇ ನುಡಿ, ಧರ್ಮವನ್ನೇ ಪಾಲುಸು’, ಎಂಬಿತ್ಯಾದಿ ಬ್ರಹ್ಮಚರ್ಯ ಉಪದೇಶ. ಮಾಣಿ ಅದಕ್ಕೆ ‘ಬಾಢಮ್’’ ‘ಖಂಡಿತಾ ನಿಂಗೊ ಹೇಳಿದ್ದರ ಮೀರುತ್ತಿಲ್ಲೆ. ಹಾಂಗೇ ಪಾಲುಸುತ್ತೆ’ ಹೇಳಿ ಮಾತು ಕೊಡುವದು.

ಭವತಿ ಭಿಕ್ಷಾಂ ದೇಹಿ’ ಎಂಬ ಯಾಚನಾ ಮಂತ್ರದ ಮೂಲಕ ತನ್ನ ಅನ್ನವ ತಾನೇ ಸಂಪಾದಿಸುವದರೊಂದಿಗೆ ಊಟದ ಮೊದಲು ಮತ್ತು ನಂತರ ಮಾಡೆಕ್ಕಪ್ಪ ಪರಿಷಿಂಚನೆ ಉತ್ತರಾಪೋಷನ ಕ್ರಿಯೆಗಳ ಮಂತ್ರ ಹೇಳಿಕ್ಕೊಡುವದು. ಪ್ರತಿಯೊಬ್ಬ ದ್ವಿಜನ (ಬ್ರಾಹ್ಮಣನ) ನಿತ್ಯ ಜೀವನ ಕ್ರಮಲ್ಲಿ ಅಗ್ನಿಕಾರ್ಯ ಮತ್ತು ದೇವಯಜ್ನ, ಪಿತೃಯಜ್ನ, ಭೂತಯಜ್ನ, ಮನುಷ್ಯಯಜ್ನ ಮತ್ತು ಬ್ರಹ್ಮಯಜ್ನ ಎಂಬ ಐದು ಮಹಾಯಜ್ನಂಗಳ ಪ್ರತಿದಿನವೂ ಆಚರಿಸಲೇಬೇಕೆಂಬ ನಿಯಮ. ಆದರೇ ಇದು ನಿತ್ಯಲ್ಲಿ  ಪ್ರಾಯೋಗಿಕವಾಗಿ ಸುಲಭ ಸಂಗತಿ ಅಲ್ಲ. ಈ ಕಾರಣಕ್ಕಾಗಿಯೇ ಈ ಪಂಚಮಹಾಯಜ್ನದ ಸಂಕೇತವಾಗಿ ಬ್ರಾಹ್ಮಣರು ಪ್ರತಿನಿತ್ಯ ಊಟದ ಮದಲು ಪರಿಷಿಂಚನೆ, ಚಿತ್ರಮಡುಗುವದು ಹೇಳ್ವ ವಿಧಿಯ ಋಷಿಗೋ ಆಚರಣಗೆ ತಂದದು. ವಟುವಿಲ್ಲಿ ಮೇಧಾ ಜನನಕ್ಕಾಗಿ ಮೇಧಾಸೂಕ್ತ ಪಠನ. ವಟುವಿಂಗೆ ದ್ವಿಜ (ಎರಡನೇ) ಜನ್ಮ ನೀಡಿದ ಆಚಾರ್ಯಂಗೆ ಯಥಾಶಕ್ತಿ, ಯಥೋಚಿತ ಧನ ಧಾನ್ಯ ವಸ್ತ್ರಾದಿ ಸಹಿತ ದಕ್ಷಿಣೆ ಕೊಟ್ಟು ಸತ್ಕರಿಸೆಕ್ಕದ್ದು ಧರ್ಮ.

ಮತ್ತೆ, ಉಪನಯನ ವ್ರತ ವಿಸರ್ಜನೆ (‘ಸಾವಿತ್ರೀ ವ್ರತ ವಿಸರ್ಜನಾ ಹೋಮ, ಕಂಕಣ ವಿಸರ್ಜನೆ, ನೂತನ ವಸ್ತ್ರಾಜಿನ ದಂಡ ಧಾರಣೆ’ –  ದಂಟೂರ್ತ ನಾಲ್ಕನೇ ದಿನಲ್ಲಿ). ಶ್ರಾವಣ ಶುಕ್ಲಪಕ್ಷ ಪೌರ್ಣಮಿಯಂದು ಉಪಾಕರ್ಮ (ನೂತನ ಯಜ್ನೋಪವೀತಾದಿ ಧಾರಣೆ) ಮಾಡಿಕ್ಕಿ ವೇದಾಧ್ಯಯನಕ್ಕೆ ಗುರುಮಠಕ್ಕೆ ಕಳುಸುವದು.

ನಾವು ಇಷ್ಟೀಗ ನೋಡಿದ್ದು ಉಪನಯನ ಸಂಸ್ಕಾರ ಒಟ್ಟು, ಸ್ಥೂಲವಾದ ಮೇಲ್ಮೈ ವಿಚಾರ. ವೈದಿಕ ಕ್ರಿಯಾವಿಧಿಯ ಹಂತ ಹಂತದ ವಿವರಣೆ ಅಲ್ಲ.

ಹೇಂಗೇ.. ಉಪನಯನ ಮಾಡಿ ಆತಿಲ್ಯೋ. ನಿತ್ಯ ತ್ರಿಕಾಲ ಸಂಧ್ಯಾವಂದನೆ, ಅಗ್ನಿಕಾರ್ಯಾದಿ, ಆಚಾರ್ಯರು ಆದೇಶಿಸಿದ್ದರ ಮಾಣಿ ಕೈಲಿ ತಪ್ಪದ್ದೆ ಮಾಡ್ಸೆಕ್ಕು ಆತೋ. ಇನ್ನು ಎಂತರ? ಮಾಣಿಯ ಇನ್ನು ವೇದಪಾಠಕ್ಕೆ ಕಳುಸೆಡದೋ. ಎಲ್ಲಿಗೆ ಕಳ್ಸುವೋ? ಯೋಚನೆ ಮಾಡಿ ಮಡುಗಿ. ಅದಾ ಹಂತಿ ಹಾಕಿದವದಾ ಅಲ್ಲಿ.  ಮತ್ತೆ ಬಂದಿಕ್ಕಿ ಹೇಳ್ತೆ ಆತೋ. ಏ°.

|| ಹರೇ ರಾಮ ||

(ಮುಂದುವರಿತ್ತು)

ಕಳುದ ವಾರ : ಭಾಗ 08 : ಉಪನಿಷ್ಕ್ರಮಣ (ನಿರ್ಗಮನ) – ಅನ್ನಪ್ರಾಶನ – ಕರ್ಣ ವೇಧನ – ಚೌಲ ಕರ್ಮ http://oppanna.com/lekhana/samskara-lekhana/baga-08-upanishkramana-nirgamana

ಭಾಗ 09 : ಉಪನಯನ : ಹದಿನಾರು ಸಂಸ್ಕಾರಂಗೊ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. Rajagopala

  ಓ ಹೋಯ್ ಚೈನ್ನೈ ಭಾವ, ಜಿಂಕೆ ಕೊಂಬಿಂಗೆ, ಗೋಡೆಲ್ಲಿಪ್ಪ ಆಣಿಗೆ, ಕಿಟಿಕಿಯ ಬಾಗಿಲಿಂಗೆ ಇತ್ಯಾದಿ ಜಾಗೆ ಕೂಡಾ ಇದ್ದನ್ನೆ!!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಪ್ಪು. ಎಣ್ಣೆ ಕಿಟ್ಟಿ ಮೀಯ್ವಾಗ .., ಇಲ್ಲದ್ರೆ ಜನಿವಾರ ಕಪ್ಪಾಗಿ ಹಾಳಕ್ಕಪ್ಪೋ..!!

  ಬೇಡಪ್ಪಾ ಬೇಡ. ನಮ್ಮಂದ ಎಡಿಗಾಷ್ಟು ನಾವು ನಮ್ಮದರ ಉಳಿಸಿಗೊಂಬ ಪ್ರಯತ್ನ ಮಾಡುವೋ°. ತಮಾಷೆಲಿ ಪಾಲ್ಗೊಂಡದಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಗುರುರಾಜ ಕಡಬ
  ಗುರುರಾಜ

  ಅಗ್ನಿಕಾರ್ಯದ ಮಂತ್ರ ಮತ್ತೆ ವಿಧಾನ ಇದ್ದರೆ ಉಪಯೋಗ ಆವುತ್ತಿತ್ತು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಚೆನ್ನಬೆಟ್ಟಣ್ಣಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುಅಡ್ಕತ್ತಿಮಾರುಮಾವ°ಅಕ್ಷರ°ದೀಪಿಕಾಒಪ್ಪಕ್ಕಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿಶ್ರೀಅಕ್ಕ°ದೊಡ್ಮನೆ ಭಾವಚೆನ್ನೈ ಬಾವ°ಸರ್ಪಮಲೆ ಮಾವ°ಮಂಗ್ಳೂರ ಮಾಣಿವಾಣಿ ಚಿಕ್ಕಮ್ಮಮುಳಿಯ ಭಾವಡೈಮಂಡು ಭಾವಗೋಪಾಲಣ್ಣದೊಡ್ಡಭಾವವೇಣಿಯಕ್ಕ°ಶರ್ಮಪ್ಪಚ್ಚಿಕಜೆವಸಂತ°ಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ